ಅರುಣ್ ಎಂ. ಕುಮಾರ್ ರವರು (ಜನನ ೨೫ ನವೆಂಬರ್ ೧೯೫೨) ಸೆಲೆಸ್ಟಾ ಕ್ಯಾಪಿಟಲ್‌ನಲ್ಲಿ ವ್ಯವಸ್ಥಾಪಕ ಪಾಲುದಾರರಾಗಿದ್ದಾರೆ. ಅವರು ವಾಧ್ವಾನಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಪಾಲಿಸಿಯ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‌ನ ಸದಸ್ಯರಾಗಿದ್ದಾರೆ. ಕುಮಾರ್ ಅವರು ಇಂಡಿಯಾಸ್ಪೋರಾದ ಮಂಡಳಿಯಲ್ಲಿದ್ದಾರೆ. ಈ ಮಂಡಳಿಯು ಅನೇಕ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ನಿಪುಣ ಮತ್ತು ಪ್ರಭಾವಿ ಜನರನ್ನು ತಮ್ಮ ವಾಸಸ್ಥಳ ಮತ್ತು ಭಾರತದೊಂದಿಗೆ ಅವರ ಸಂಬಂಧಗಳನ್ನು ಹೆಚ್ಚಿಸಲು ಉತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಕುಮಾರ್ ರವರು ಯು.ಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್‌ನೊಂದಿಗೆ ಸುದೀರ್ಘ ಸಂಬಂಧವನ್ನು ಹೊಂದಿದ್ದಾರೆ ಮತ್ತು ಅದರ ನಿರ್ದೇಶಕ ಮಂಡಳಿಯ ಸಲಹೆಗಾರರಾಗಿದ್ದಾರೆ.

ಅರುಣ್ ಎಂ.ಕುಮಾರ್
ಅರುಣ್ ಎಂ.ಕುಮಾರ್

ಕೆ.ಪಿ.ಎಂ.ಜಿ ಇಂಡಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಅಧಿಕಾರ ಅವಧಿ
ಫೆಬ್ರವರಿ., ೨೦೧೭ – ಫೆಬ್ರವರಿ., ೨೦೨೨
ಪೂರ್ವಾಧಿಕಾರಿ ರಿಚರ್ಡ್ ರೇಖಿ
ಉತ್ತರಾಧಿಕಾರಿ ಯೆಜ್ದಿ ನಾಗಪೋರೆವಾಲಾ
ವೈಯಕ್ತಿಕ ಮಾಹಿತಿ
ಜನನ ೧೯೫೨ (ವಯಸ್ಸು 71–72)
ಮಾವೇಲಿಕ್ಕರ, ಕೇರಳ
ಸಂಗಾತಿ(ಗಳು) ಪೂರ್ಣಿಮಾ ಕುಮಾರ್
ವಾಸಸ್ಥಾನ ಮುಂಬೈ, ಭಾರತ, ಸ್ಯಾನ್ ಫ್ರಾನ್ಸಿಸ್ಕೋ
ಅಭ್ಯಸಿಸಿದ ವಿದ್ಯಾಪೀಠ ಲಾರೆನ್ಸ್ ಸ್ಕೂಲ್, ಲವ್ಡೇಲ್

ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಮಾಸ್ಟರ್ ಆಫ್ ಸೈನ್ಸ್ ಇನ್ ಮ್ಯಾನೇಜ್‌ಮೆಂಟ್‌)

ಉದ್ಯೋಗ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್, ವೆಂಚರ್ ಕ್ಯಾಪಿಟಲ್, ಡಿಪ್ಲೊಮಸಿ
ಜಾಲತಾಣ https://www.arunmkumar.com

ಕುಮಾರ್ ಅವರು ಫೆಬ್ರವರಿ ೬, ೨೦೨೨[][] ರಂದು ಐದು ವರ್ಷಗಳ ಅವಧಿಗೆ ಭಾರತದಲ್ಲಿನ ಕೆಪಿಎಂಜಿ ಯ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ರಿಚರ್ಡ್ ರೆಖಿನ ಉತ್ತರಾಧಿಕಾರಿಯಾಗಿದ್ದರು.[] ಭಾರತದಲ್ಲಿ ಕೆಪಿಎಂಜಿ ಅನ್ನು ಮುನ್ನಡೆಸುವ ಮೊದಲು ಕುಮಾರ್ ಅವರು ಮಾಜಿ ಯು.ಎಸ್ ಅದ್ಯಕ್ಷ ಬರಾಕ್ ಒಬಾಮಾ[] ಅವರ ಆಡಳಿತದಲ್ಲಿ ಜಾಗತಿಕ ಮಾರುಕಟ್ಟೆಗಳ ವಾಣಿಜ್ಯ ಕಾರ್ಯದರ್ಶಿಯಾಗಿದ್ದರು ಹಾಗೂ ಯು.ಎಸ್ ಮತ್ತು ವಿದೇಶಿ ವಾಣಿಜ್ಯ ಸೇವೆಯ (ಯು.ಎಸ್.ಎಫ್.ಸಿ.ಎಸ್) ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.


ವೃತ್ತಿಜೀವನ

ಬದಲಾಯಿಸಿ

ಅರುಣ್ ಎಂ. ಕುಮಾರ್ ಅವರ ನಾಯಕತ್ವದಲ್ಲಿ ಭಾರತದಲ್ಲಿನ ಕೆಪಿಎಂಜಿಯು ಐದು ವರ್ಷಗಳ ಅವಧಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದೆ. ಇಂದು ಭಾರತದಲ್ಲಿನ ಕೆಪಿಎಂಜಿಯು ೩೨,೦೦೦ ಉದ್ಯೋಗಿಗಳನ್ನು ಹೊಂದಿದ್ದು ಪ್ರಪಂಚದಾದ್ಯಂತ ಎರಡನೇ ಅತೀ ದೊಡ್ಡ ಕಾರ್ಯಪಡೆಯನ್ನು ಹೊಂದಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ.[] ಕುಮಾರ್ ಅವರು ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಾಕ್ಷಾತ್ಕಾರಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸಿದ್ದಾರೆ. ಅದರಲ್ಲಿ ಒತ್ತುವ ಆಸ್ತಿಗಳು ಮತ್ತು ಸೈಬರ್ ಸುರಕ್ಷೆಗಳು ಅತ್ಯಂತ ಪ್ರಮುಖವಾಗಿವೆ. ಆಫ್ರಿಕಾದಿಂದ ಪೂರ್ವ ಏಷ್ಯಾದವರೆಗಿನ ಸಮೀಪದ ಪ್ರದೇಶಗಳಲ್ಲಿ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ಭಾರತದಲ್ಲಿನ ಪ್ರತಿಭೆ ಮತ್ತು ಕೌಶಲ್ಯ ಲಭ್ಯತೆಯ ಮೇಲೆ ಸಂಸ್ಥೆಯು ಹತೋಟಿ ಸಾಧಿಸುತ್ತದೆ ಎಂದು ಕುಮಾರ್ ಅವರು ಖಚಿತಪಡಿಸಿಕೊಂಡರು.[]


ಅರುಣ್ ಎಂ. ಕುಮಾರ್ ಅವರನ್ನು ಯು.ಎಸ್ ಅದ್ಯಕ್ಷ ಬರಾಕ್ ಒಬಾಮಾ ಅವರು ಅಕ್ಟೋಬರ್ ೪, ೨೦೧೩ ರಂದು ನಾಮನಿರ್ದೇಶನ ಮಾಡಿದರು. ಮಾರ್ಚ್ ೧೩, ೨೦೧೪ ರಂದು ಯು.ಎಸ್ ಸೆನೆಟ್‌ನಿಂದ ದೃಢಪಡಿಸಿದರು.[] ಕುಮಾರವರು ಯು.ಎಸ್ ನಲ್ಲಿ ಉನ್ನತ ವಾಣಿಜ್ಯ ರಾಜತಾಂತ್ರಿಕರಾಗಿ ಆಯ್ಕೆಯಾಗಿದ್ದರು. ಯು.ಎಸ್. ಸರ್ಕಾರದ ೧೦೦ ವಾಣಿಜ್ಯ ನಗರಗಳ ಮತ್ತು ೭೮ ವಿಶ್ವ ಮಾರುಕಟ್ಟೆಗಳಲ್ಲಿ ೧೬೦೦ ವೃತ್ತಿಪರರ ತಂಡಕ್ಕೆ ಜವಾಬ್ದಾರಿಯುತ ವಹಿವಾಟು ಮತ್ತು ಬಂಡವಾಳ ಪ್ರಚಾರದ ಪ್ರಯತ್ನಗಳ ನೇತೃತ್ವ ವಹಿಸಿದರು.[] ಯು.ಎಸ್ ರಫ್ತುದಾರರಿಗೆ ಉತ್ತಮ ಮಾರುಕಟ್ಟೆಯ ಪ್ರವೇಶಕ್ಕಾಗಿ ಅವರು ಅಂತಾರಾಷ್ಟ್ರೀಯ ವಾಣಿಜ್ಯ ಆಡಳಿತದ ಪ್ರಮುಖ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅವರ ಅಧಿಕಾರಾವಧಿಯಲ್ಲಿ ವಿಶ್ವದಾದ್ಯಂತ ಮೂವತ್ತು ದೇಶಗಳಿಗೆ ಪ್ರಯಾಣ ಮಾಡಿದರು ಹಾಗು ಹಿರಿಯ ಸರ್ಕಾರ ಮತ್ತು ವ್ಯವಹಾರ ಮುಖಂಡರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡರು.

ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ವಾಣಿಜ್ಯ ಸಂಬಂಧಗಳನ್ನು ಬಲಪಡಿಸುವಲ್ಲಿ ಕುಮಾರವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಅಮೆರಿಕಾ-ಭಾರತ 'ಕಾರ್ಯತಂತ್ರ ಮತ್ತು ವಾಣಿಜ್ಯ ಸಂಭಾಷಣೆ' (ಎಸ್ & ಸಿಡಿ), ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್ಕರ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಭಾರತ ಮತ್ತು ಅಮೆರಿಕದ ವಾಣಿಜ್ಯ ವ್ಯವಹಾರದ ಸಂಬಂಧಕ್ಕೆ ಎಸ್ & ಸಿಡಿ ಪ್ರಮುಖ ಕಾರಣವಾಗಿದೆ.[] ಯು.ಎಸ್ ವಾಣಿಜ್ಯ ಇಲಾಖೆಯ 'ಕಮರ್ಷಿಯಲ್ ಡಿಪ್ಲೊಮಸಿ ಇನ್ಸ್ಟಿಟ್ಯೂಟ್ನ' (ಸಿ.ಡಿ.ಐ) ಪ್ರಾರಂಭವನ್ನು ಕುಮಾರವರು ಉಪಕ್ರಮಿಸಿದರು.[೧೦] ಅವರು ರಾಷ್ಟ್ರದ ವಾಣಿಜ್ಯ ಹಿತಾಸಕ್ತಿಗಳನ್ನು ಮುಂದುವರಿಸುವಲ್ಲಿ ತೊಡಗಿರುವ ಯು.ಎಸ್. ಸರ್ಕಾರಿ ಅಧಿಕಾರಿಗಳಿಗೆ ವೃತ್ತಿಪರ ಅಭಿವೃದ್ಧಿ ಮತ್ತು ಬೌದ್ಧಿಕ ನಾಯಕತ್ವವನ್ನು ಉತ್ತೇಜಿಸುವ ಗುರಿಯೊಂದಿಗೆ ಇದನ್ನು ಪ್ರಾರಂಭಿಸಿದರು. ಯು.ಎಸ್. ರಫ್ತುಗಳನ್ನು ಹೆಚ್ಚಿಸಲು ಭಾರತ, ಫಿಲಿಪೈನ್ಸ್, ಸಬ್ ಸಹಾರನ್, ಆಫ್ರಿಕಾ ಮತ್ತು ಮೆಕ್ಸಿಕೊದಲ್ಲಿ ಪೈಲಟ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಗರೀಕರಣ, ಸಾರಿಗೆ ಮತ್ತು ವಿದ್ಯುತ್ ಕೇಂದ್ರೀಕರಿಸಲು ಒಂದು ಯೋಜನೆಯನ್ನು ಕುಮಾರವರು ಪ್ರಾರಂಬಿಸಿದರು. ಅವರು ವಾಣಿಜ್ಯ ಸೇವೆಗಾಗಿ ವಲಯದ ವಿಶೇಷತೆಯ ಮೇಲೆ ಹಾಗು ಸೇವಾ ವಿತರಣೆಯ ಮೇಲೆ ತಮ್ಮ ಗಮನವನ್ನು ಹೆಚ್ಚಾಗಿ ಹರಿಸಿದರು. ಆಯ್ದ ರಾಷ್ಟ್ರಗಳು ಡಿಜಿಟಲ್ ಆರ್ಥಿಕ ನೀತಿಯ ವಿಷಯಗಳ ಮೇಲೆ ತಮ್ಮ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಲು ಅವರ ಸಂಸ್ಥೆಯು 'ಡಿಜಿಟಲ್ ಅಟ್ಯಾಚೆ' ಕಾರ್ಯಕ್ರಮವನ್ನು ಸ್ಥಾಪಿಸಿತು.

ಕುಮಾರವರು ೧೯೭೩ ರಲ್ಲಿ ಟಿ.ಎ.ಎಸ್ (ಟಾಟಾ ಅಡ್ಮಿನಿಸ್ಟೇಟಿವ್ ಸರ್ವಿಸ್) ಗೆ ಆಯ್ಕೆಯಾದರು. ಟಾಟಾ ಗ್ರೂಪ್ ಚೇರ್ಮನ್ ಎಮೆರಿಟಸ್ ರತನ್ ಟಾಟಾರವರ ಜೊತೆಯಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. ಕುಮಾರವರು 'ಪ್ಲಾನಿಂಗ್ & ಲಾಜಿಕ್' ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕರು ಹಾಗು ೧೯೯೩ ರಿಂದ ೧೯೯೫ ರವರಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.[೧೧]

ಆರಂಭಿಕ ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಕುಮಾರ್ ಅವರು ಕೇರಳದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಅವರು ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಅವರು ಕೇರಳದ ಮಾವೇಲಿಕ್ಕಾರನಲ್ಲಿ ಜನಿಸಿದರು. ಅವರು ಲವ್‌ಡೇಲ್‌ನ ಲಾರೆನ್ಸ್ ಶಾಲೆಯಲ್ಲಿ ತಮ್ಮ ಪ್ರೌಢಶಾಲೆಯನ್ನು ಪೂರ್ಣಗೊಳಿಸಿದರು. ನಂತರ ಅವರು ತಿರುವನಂತಪುರದ ಯೂನಿವರ್ಸಿಟಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಭಾ ವಿದ್ವಾಂಸರಾಗಿ ಅಧ್ಯಯನ ಮಾಡಿದರು. ೧೯೭೨ ರಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.[೧೨] ಕುಮಾರ್ ಅವರು ೧೯೭೮ ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ಗೆ ಯು.ಎಸ್ ಗೆ ತೆರಳಿದರು. ೧೯೮೦ ರಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ (ಸ್ಲೋನ್ ಎಂಬಿಎ ಎಂದು ಕರೆಯುತ್ತಾರೆ) ಗಪದವಿಯನ್ನು ಪಡೆದರು.[೧೩]

ಪುಸ್ತಕಗಳು

ಬದಲಾಯಿಸಿ

೨೦೨೦ ರಲ್ಲಿ ಕುಮಾರ್ ಅವರು "ಮಂತ್ರಂ ಬೀಚ್" ಎಂಬ ಕವನ ಪುಸ್ತಕವನ್ನು ಬರೆದಿದ್ದಾರೆ.[೧೪] ಅವರ ಮೊದಲ ಕವಿತೆ "ಪ್ಲೈನ್ ​​ಟ್ರುಥ್ಸ್" ಮತ್ತು ಒಂದು ದಶಕದ ನಂತರ ಪ್ರಕಟವಾದ ಪುಸ್ತಕಗಳು ಅಸಾಮಾನ್ಯವಾದ ಅವಲೋಕನಗಳನ್ನು ಪರಿಶೋಧಿಸುತ್ತದೆ.[೧೫] ಕುಮಾರ್ ಅವರು "ಕೇರಳಾಸ್ ಎಕಾನಮಿ: ಕ್ರೌಚಿಂಗ್ ಟೈಗರ್, ಸೇಕ್ರೆಡ್ ಕೌಸ್" ಎಂಬ ಪುಸ್ತಕದ ಸಹ ಸಂಪಾದಕರಾಗಿದ್ದಾರೆ. ಈ ಪುಸ್ತಕವು ೨೦೦೫ ಮತ್ತು ೨೦೦೭ ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಜೊತೆಗೆ ಕೇರಳದ ಜಾಗತಿಕ ಆರ್ಥಿಕತೆಯಲ್ಲಿ ಅವರು ತಿರುವನಂತಪುರಮ್ ನಲ್ಲಿ ಕರೆದ ಎರಡು ಸಮ್ಮೇಳನಗಳಲ್ಲಿ ಒಂದನ್ನು ಆಧರಿಸಿದೆ.[೧೬] ಕುಮಾರ್ ಅವರು ಸಾರ್ವಜನಿಕ ಸೇವೆ, ಅಮೇರಿಕನ್ ವ್ಯವಹಾರಗಳು, ವ್ಯಾಪಾರ, ವಾಣಿಜ್ಯ ಮತ್ತು ಜಾಗತಿಕ ಮಾರುಕಟ್ಟೆಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಬರಹಗಳನ್ನು ಬರೆದಿದ್ದಾರೆ.[೧೭]

ವೈಯಕ್ತಿಕ ಜೀವನ

ಬದಲಾಯಿಸಿ

ಕುಮಾರ್ ಅವರು ದಿವಂಗತ ಬಿ. ಮಾಧವನ್ ಮತ್ತು ಕಮಲಾ ನಾಯರ್ ಅವರ ಹಿರಿಯ ಪುತ್ರರಾಗಿದ್ದಾರೆ. ಅವರು ಸರೋಜಿನಿ ಮೆನನ್ ಮತ್ತು ದಿವಂಗತ ಪ್ರಸಿದ್ಧ ಇತಿಹಾಸಕಾರರಾದ ಎ. ಶ್ರೀಧರ ಮೆನನ್ ಅವರ ಪುತ್ರಿ ಪೂರ್ಣಿಮಾ ಕುಮಾರ್ ಅವರನ್ನು ವಿವಾಹವಾಗಿದ್ದಾರೆ.[೧೮] ಕುಮಾರ್ ಮತ್ತು ಪೂರ್ಣಿಮಾ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಶ್ವಿನ್ ಅವರು ಮೆಲಿಸಾ ಶಾ ಅವರನ್ನು ವಿವಾಹವಾಗಿದ್ದಾರೆ. ಮತ್ತು ವಿಕ್ರಮ್ ಅವರು ಮೋನಿಶಾ ಬಾತ್ರಾ ಅವರನ್ನು ವಿವಾಹವಾಗಿದ್ದಾರೆ.[೧೯]

ಉಲ್ಲೇಖಗಳು

ಬದಲಾಯಿಸಿ
  1. "KPMG in India appoints Arun Kumar as Chairman and CEO". Mint. Retrieved 12 April 2017.
  2. "Yezdi Nagporewalla appointed KPMG India CEO; to take charge from Feb 2022". Business Standard India. Press Trust of India. 2021-10-29. Retrieved 2022-02-10.
  3. "Arun Kumar succeeds Richard Rekhy as KPMG India chairman". Business Standard. Retrieved 13 April 2017.
  4. "Five things to know about new KPMG India chief Arun M Kumar". Business Today. Retrieved 18 April 2017.
  5. Economic, Times (25 January 2022). "ET HR WORLD". pp. ET HR WORLD. Retrieved 23 February 2022.
  6. Economic, Times (25 January 2022). "The Economic Times --India". The Economic Times. pp. Online. Retrieved 23 February 2022.
  7. "President Obama Announces More Key Administration Posts". White House News Release. 4 October 2013. Retrieved 13 April 2017.
  8. "Arun M. Kumar". 2016.trade.gov. Archived from the original on 2017-05-20. Retrieved 2017-05-01.
  9. "U.S. Secretary of Commerce Penny Pritzker Discusses Importance of U.S.-India Commercial Relationship". Department of Commerce (in ಇಂಗ್ಲಿಷ್). 2014-07-30. Archived from the original on 2017-05-01. Retrieved 2017-05-01.
  10. ""U.S.-India ties will survive the regime change." – Fortune India" (in ಇಂಗ್ಲಿಷ್). Archived from the original on 2017-04-11. Retrieved 2017-05-02.
  11. Mathew, Dennis Marcus. "U.S. President nominates Keralite to key trade post". The Hindu (in ಇಂಗ್ಲಿಷ್). Retrieved 2017-05-02.
  12. Hridayakumari, B. "Teacher's pride". The Hindu (in ಇಂಗ್ಲಿಷ್). Retrieved 2017-05-02.
  13. "Obama nominated Arun Kumar as Assistant Secretary, Department of Commerce, US". DC School of Management & Technology. 5 October 2013. Archived from the original on 12 ಏಪ್ರಿಲ್ 2017. Retrieved 17 April 2017.
  14. "Mantram Beach review: Finding solace in the ordinary". The New Indian Express. Retrieved 2022-02-10.
  15. "Want my book to reach to people who don't read poems: Arun Kumar on 'Mantram Beach'". Hindustan Times (in ಇಂಗ್ಲಿಷ್). 2020-12-11. Retrieved 2022-02-10.
  16. "Foreign remittances don't translate to industrial investments for Kerala". The Hindu Business Line (in ಇಂಗ್ಲಿಷ್). 2007-04-06. Retrieved 2017-05-02.
  17. "Arun M. Kumar | The Huffington Post". www.huffingtonpost.com (in ಅಮೆರಿಕನ್ ಇಂಗ್ಲಿಷ್). Retrieved 2017-05-02.
  18. Richard Springer. "Obama Nominates Arun Kumar to Key Int'l Trade Post". India West (in ಇಂಗ್ಲಿಷ್). Archived from the original on 2017-04-19. Retrieved 2017-05-02.
  19. "US Senate confirms Indian-American to key trade job | Free Press Journal". www.freepressjournal.in (in ಬ್ರಿಟಿಷ್ ಇಂಗ್ಲಿಷ್). Retrieved 2017-05-02.