ಐ.ಎನ್.ಎಸ್ ಅರಿಹಂತ್

(ಅರಿಹಂತ್ ಇಂದ ಪುನರ್ನಿರ್ದೇಶಿತ)

ಐ.ಎನ್.ಎಸ್. ಅರಿಹಂತ್ (ಐ.ಎನ್.ಎಸ್.- ಇಂಡಿಯನ್ ನೇವಲ್ ಶಿಪ್/ಇಂಡಿಯನ್ ನೇವಲ್ ಸಬ್-ಮೆರೈನ್ - ಭಾರತೀಯ ನೌಕಾ ಹಡಗು/ಭಾರತೀಯ ನೌಕಾ ಜಲಾಂತರ್ಗಾಮಿ ಹಡಗು) ಭಾರತಅಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಗಳ ಅರಿಹಂತ್ ವರ್ಗದ ಪ್ರಮುಖ ನೌಕೆಯಾಗಿದೆ. ೬,೦೦೦ ಟನ್ನುಗಳಷ್ಟು ತೂಗುವ ಈ ನೌಕೆಯನ್ನು ಅಡ್ವಾನ್ಸ್ಡ್ ಟೆಕ್ನಾಲಜಿ ವೆಸಲ್ (ಸುಧಾರಿತ ತಂತ್ರಜ್ಞಾನ ನೌಕೆ) ಎಂಬ ಯೋಜನೆಯ ಸಮನ್ವಯ ಸುಮಾರು ೨.೯ ಬಿಲಿಯನ್ ಯು.ಎಸ್. ಡಾಲರ್'ಗಳ ವೆಚ್ಚದಲ್ಲಿ ವಿಶಾಖಪಟ್ಟಣದ ನೌಕಾ ನಿರ್ಮಾಣ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಯಿತು.

ಐ.ಎನ್.ಎಸ್ ಅರಿಹಂತ್ ಭಾರತದ ೬,೦೦೦ ಟನ್ 'ಉನ್ನತ ತಂತ್ರಜ್ಞಾನ ನೌಕೆ'ಯು ೨೦೧೨ ರ ಒಳಗೆ ಸೇವೆಯಲ್ಲಿ ತೊಡಗುವ ನಿರೀಕ್ಷೆಯಿದೆ.
ಅರಿಹಂತ್
ವೃತ್ತಿಜೀವನ (ಭಾರತ) Indian Navy Ensign
ವರ್ಗ ಮತ್ತು ನಮೂನೆ: ಅರಿಹಂತ್ ವರ್ಗದ ಜಲಾಂತರ್ಗಾಮಿ ನೌಕೆ
ಹೆಸರು: ಐ.ಎನ್.ಎಸ್ ಅರಿಹಂತ್
ನಿರ್ಮಾತೃ: ನೌಕಾ ನಿರ್ಮಾಣ ಕೇಂದ್ರ, ವಿಶಾಖಪಟ್ಟಣ,  India
ನಿರ್ಮಾಣಾರಂಭ: ೧೯೯೮
ಬಿಡುಗಡೆ: ೨೬ ಜುಲೈ ೨೦೦೯
ನಾಮಧೇಯ: ಐ.ಎನ್.ಎಸ್ ಅರಿಹಂತ್
ಸ್ಥಿತಿ: ಪರೀಕ್ಷಣೆ ಹಾಗೂ ಪ್ರಯೋಗ
ಸಾಮಾನ್ಯ ವಿವರಗಳು
ನಮೂನೆ: ಎಸ್.ಎಸ್.ಬಿ.ಎನ್
ಉದ್ದ: 112 m
ಬೀಮ್: 11 m
ಕರಡು: 9 m (29.5 ft) (ಅಂದಾಜು)
ನೋದನ: 80MW
ವೇಗ: 30 ನಾಟ್'ಗಳು (56 ಕಿ.ಮೀ. ಪ್ರತಿಘಂಟೆ)(ಮುಳುಗಿರುವಾಗ)
ಪರೀಕ್ಷಣಾ ಆಳ: 300 m (984 ft) (ಅಂದಾಜು)
ಪೂರಕ: 100 ಮಂದಿ ಕಾರ್ಯ ಸಿಬ್ಬಂದಿಗಳು
ಸಿಬ್ಬಂದಿ: 95
ಪರಿಷ್ಕರಣ ವ್ಯವಸ್ಥೆ: ಬಿ.ಇ.ಎಲ್ ಯು.ಎಸ್.ಹೆಚ್.ಯು.ಎಸ್

ಕಾರ್ಗಿಲ್ ಯುದ್ಧವಿಜಯ ದಿವಸದ ಶುಭ ಸಂಧರ್ಭದಲ್ಲಿ ಜುಲೈ ೨೬, ೨೦೦೯ ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಘ್ ಮತ್ತು ಅವರ ಪತ್ನಿ ಗುರ್ಶರನ್ ಕೌರ್ ಅವರು ಅರಿಹಂತ್ ನೌಕೆಯನ್ನು ಬಿಡುಗಡೆಗೊಳಿಸಿದರು.[೧] ೨೦೧೧ರಲ್ಲಿ ಭಾರತೀಯ ನೌಕಾ ಸೇನೆಯನ್ನು ಸೇರುವ ಮೊದಲು ಇದು ವ್ಯಾಪಕವಾದ ಬಂದರು ಹಾಗೂ ಸಾಗರ ಪರೀಕ್ಷಣೆ/ಪ್ರಯೋಗಗಳಿಗೆ ಒಳಗಾಗಲಿದೆ.

ಇತಿಹಾಸಸಂಪಾದಿಸಿ

ಅರಿಹಂತ್ (ಸಂಸ್ಕೃತದಲ್ಲಿ ವೈರಿಗಳ ಹಂತಕ - ಅರಿ, "ವೈರಿ", ಹಂತ್, "ಹಂತಕ" ದಿಂದ) ಭಾರತ ನಿರ್ಮಿತ ಪ್ರಥಮ ಅಣು ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯಾಗಿದೆ. ಇದನ್ನು ಸಾಗರಿಕ ಎನ್ನುವ 'ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸುವಂತಹ ಕ್ಷಿಪಣಿ'ಗಳನ್ನು ಕೊಂಡೊಯ್ಯಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಇದನ್ನು ಕ್ಷಿಪಣಿ ಉಡ್ಡಯನ ಜಲಾಂತರ್ಗಾಮಿ ನೌಕೆ ಎಂದೂ ಪರಿಗಣಿಸಲಾಗುತ್ತದೆ.

ನೋಡಿಸಂಪಾದಿಸಿ

ಅರಿಹಂತ್ - ಪ್ರಥಮವರ್ಗದ ಜಲಾಂತರ್ಗಾಮಿ

ಉಲ್ಲೇಖಗಳುಸಂಪಾದಿಸಿ

  1. PM's Kargil Day gift to nation: Nuclear submarine 'INS Arihant' Archived 2009-07-28 at the Wayback Machine.. In MSN News. July 26, 2009.