ಸಾಗರಿಕ ಕ್ಷಿಪಣಿ
ಸಾಗರಿಕ ಭಾರತೀಯ ನೌಕಾದಳದ ಜಲಾಂತರ್ಗಾಮಿ ಹಡಗುಗಳಿಂದ ಉಡಾವಣೆ ಮಾಡಬಲ್ಲ ಒಂದು ಕ್ಷಿಪಣಿ. ಇದು ಗರಿಷ್ಠ ೭೫೦ ಕಿ.ಮಿ. ದೂರದವರೆಗೆ ಸಂಚರಿಸಬಲ್ಲದು.
ಸಾಗರಿಕ ಕ್ಷಿಪಣಿ | |
---|---|
ನಮೂನೆ | ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸುವಂತಹ ಕಿರುವ್ಯಾಪ್ತಿ ಕ್ಷಿಪಣಿಗಳು |
ಮೂಲ ಸ್ಥಳ | ಭಾರತ |
ಕಾರ್ಯನಿರ್ವಹಣಾ ಇತಿಹಾಸ | |
ಸೇವೆಯಲ್ಲಿ | 2010 |
ನಿರ್ಮಾಣ ಇತಿಹಾಸ | |
ನಿರ್ಮಾರ್ತೃ | DRDO |
ವಿವರಗಳು | |
ಎಂಜಿನ್ | Two stage, solid fueled rocket motors |
ಕಾರ್ಯವ್ಯಾಪ್ತಿ | 700 km @ 1,000 kg and 2,200 km @ 150 kg (Thermo-nuclear warhead)[೧] [೨] |
ಉಡ್ಡಯನ ನೌಕೆ | ಅರಿಹಂತ್ ವರ್ಗದ ಜಲಾಂತರ್ಗಾಮಿ ನೌಕೆಗಳು |
ಮೊಟ್ಟ ಮೊದಲಬಾರಿಗೆ ಭಾರತ ಜಲಾಂತರ್ಗಾಮಿ ಚಾಲಿತ "ಸಾಗರಿಕಾ" ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿ ತನ್ನ ಶಸ್ತ್ರಾಸ್ತ್ರ ಬತ್ತಳಿಕೆಗೆ ಸೇರಿಸಿಕೊಂಡಿತು. ಇದರಿಂದಾಗಿ ಪರಮಾಣು ಸಿಡಿತಲೆಗಳನ್ನು ಎಲ್ಲ ನೆಲೆಗಳಿಂದ - ಅಂದರೆ ಭೂಮಿ, ಆಗಸ, ಮತ್ತು ಸಮುದ್ರದೊಳಗಿಂದ - ಉಡಾಯಿಸಿ ನಿಗಧಿತ ಗುರಿಗೆ ತಲುಪಿಸಿ ಸ್ಫೋಟಿಸಬಲ್ಲ ಸಾಮಥ್ರ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಕೂಡ ಸೇರಿದೆ. ಇದರಿಂದಾಗಿ ಯಾವುದಾದರೊಂದು ರಾಷ್ಟ್ರ ಭಾರತದ ಭೂಮಿ ಮತ್ತು ಆಗಸದಲ್ಲಿನ ಪರಮಾಣು ಕ್ಷಿಪಣಿ ನೆಲೆಗಳನ್ನು ನಾಶಗೊಳಿಸಿದಲ್ಲಿ ಭಾರತ ನಿರಾತಂಕವಿಲ್ಲದೇ ಸಾಗರದೊಳಗಿನ ಜಲಾಂತರ್ಗಾಮಿ ನೌಕಾನೆಲೆಯಿಂದ ಕ್ಷಿಪಣಿಗಳನ್ನು ಹಾರಿಬಿಟ್ಟು ಧಾಳಿ ನಡೆಸಬಹುದು. ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆ ಹೊಂದಿಲ್ಲದ ಕಾರಣ, ಸಾಗರಿಕಾ ಕ್ಷಿಪಣಿಯನ್ನು ಸಾಗರದಾಳದ ತಾತ್ಕಾಲಿಕ ನೆಲೆಯಿಂದ ಇದನ್ನು ಉಡಾಯಿಸಲಾಯಿತು. ಭಾರತದ ಈ ಪರೀಕ್ಷೆಯಿಂದಾಗಿ ಏಷ್ಯಾ ಖಂಡದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಇನ್ನೂ ಹೆಚ್ಚುತ್ತದೆಂದು ಪಾಕಿಸ್ತಾನ ಆತಂಕ ವ್ಯಕ್ತಪಡಿಸಿದೆ.
ಸಾಗರದಾಳದಿಂದ ಭೂಮಿಯ ಮೇಲ್ಮೈನಲ್ಲಿರುವ ಗುರಿ ತಲುಪಬಲ್ಲ ಸಾಗರಿಕಾ ಕ್ಷಿಪಣಿ ಅಭಿವೃದ್ಧಿಗಾಗಿ ಕಳೆದ ಹತ್ತು ವರ್ಷಗಳಿಂದ ಭಾರತದ ವಿಜ್ಞಾನಿಗಳು ಪ್ರಯತ್ನ ನಡೆಸಿದ್ದರು. ಅದೀಗಷ್ಟೆ ಯಶಗಳಿಸಿದೆ. ಸಾಗರದ ನೂರಾರು ಅಡಿಗಳ ಆಳದಲ್ಲಿ ಸಬ್-ಮೆರೀನ್ ಅಥವಾ ಜಲಾಂತರ್ಗಾಮಿ ಯುದ್ದನೌಕಾ ನೆಲೆಯಿಂದ ಕ್ಷಿಪಣಿಗಳನ್ನು ಭೂಮಿಯ ಮೇಲಿನ ನಿಗಧಿತ ಗುರಿಯಿಟ್ಟು ಹೊಡೆಯುವುದು ಒಂದು ಸಂಕ್ಲಿಷ್ಟ ಪ್ರಕ್ರಿಯೆಯೇ ಸರಿ. ಮೊದಲ ಹಂತದಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿರುವ ಎತ್ತರದ ಟ್ಯೂಬಿನಿಂದ ಶಕ್ತಿಯುತವಾದ ಅನಿಲ ಜನರೇಟರ್ ಸಹಾಯದಿಂದ ಕ್ಷಿಪಣಿಯನ್ನು ಚಿಮ್ಮಿಸಲಾಗುತ್ತದೆ. ಈ ಕ್ಷಿಪಣಿಯು ಸಾಗರದಾಳದಿಂದ ಚಿಮ್ಮಿ ಸಾಗರದ ಮೇಲ್ಮೈ ತಲುಪಿದಾಕ್ಷಣ ಕ್ಷಿಪಣಿಯಲ್ಲಿರುವ ರಾಕೆಟ್ಟನ್ನು ಸ್ವಯಂಚಾಲಿತವಾಗಿ ಉಢಾಯಿಸಲಾಗುತ್ತದೆ ಮತ್ತು ಈ ಕ್ಷಿಪಣಿಯು ಉಢಾವಣೆಯ ನಂತರ ಗುರಿ ಮುಟ್ಟಲು ಯಾವ ಪಥದಲ್ಲಿ ಸಾಗಬೇಕೆಂಬುದನ್ನು ಜಲಾಂತಗರ್ಾಮಿ ನೌಕೆಯ ಸಲಹಾ ವ್ಯವಸ್ಥೆಯು ನಿರ್ದೇಶಿಸುತ್ತದೆ. ಸದ್ಯಕ್ಕೆ ಸಾಗರಿಕಾ ಕ್ಷಿಪಣಿಯು 300ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದೆ.
ಜಲಾಂತರ್ಗಾಮಿ ನೌಕೆಗಳು: ಸಾಗರದಾಳದಲ್ಲಿ ಶತ್ರುವಿನ ಕಣ್ತಪ್ಪಿಸಿ ಚಲಿಸುವ ಈ ಜಲಾಂತಗರ್ಾಮಿ ನೌಕೆಗಳು ಯುದ್ದ ಸಮಯದಲ್ಲಿ ಒಂದು ಪ್ರಬಲ ಶಕ್ತಿಗಳಾಗಿವೆ. ಜಲಾಂತಗರ್ಾಮಿ ನೌಕೆಗಳಲ್ಲಿ ಹಲವಾರು ವಿಧಗಳಿದ್ದು ಕೆಲವೇ ನಿಮಿಷ ಸಾಗರದಲ್ಲಿ ಹುದುಗುವ ನೌಕೆಗಳಿಂದ ಆರಂಭಿಸಿ ಸುಮಾರು 6 ತಿಂಗಳ ಕಾಲ ಸಾಗರದಲ್ಲೇ ಕಳೆಯುವ ನೌಕೆಗಳೂ ಇವೆ. ಇಂಥಹ ಜಲಾಂತರ್ಗಾಮಿ ನೌಕೆಗಳನ್ನು ಯುದ್ದ ಸಮಯದಲ್ಲಿ ಶತ್ರು ನೌಕೆಗಳ ಮೇಲೆ ಆಕ್ರಮಣ ಮಾಡಲು, ಯುದ್ದ ವಿಮಾನಗಳನ್ನು ಹೊತ್ತೊಯ್ಯಲು, ಸಾಗರತಳವನ್ನು ಅಧ್ಯಯನ ಮಾಡಲು, ಸಾಗರದ ವೈಜ್ಞಾನಿಕ ಸಂಶೋಧನೆ, ಇತ್ಯಾದಿಗಾಗಿ ಬಳಸಲಾಗುತ್ತದೆ. ಜಲಾಂತಗರ್ಾಮಿ ನೌಕೆಗಳನ್ನು ತಡೆಯಲು "ಜಲಾಂತರ್ಗಾಮಿ ನೌಕಾ-ವಿರೋಧಿ ಬಲೆ"ಗಳನ್ನು ಸಹ ಹಡಗುದಾಣಗಳ ಬಳಿ ಉಪಯೋಗಿಸಲಾಗುತ್ತದೆ. ಇವು ಜಲಾಂತರ್ಗಾಮಿ ನೌಕೆಗಳ ಪ್ರವೇಶವನ್ನು ತಡೆಯುತ್ತವೆ.
ಭಾರತದ ಸಬ್-ಮೆರೀನ್ ಕಥೆ: ಭಾರತವು ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆಯೊಂದನ್ನು ನಿರ್ಮಿಸಲು 1970ರ ದಶಕದಿಂದಲೂ ಪ್ರಯತ್ನ ನಡೆಸುತ್ತಿದ್ದರೂ ಅದಿನ್ನೂ ಕೈಗೂಡಿಲ್ಲ. ಜಲಾಂತರ್ಗಾಮಿ ನೌಕೆಯೊಳಗೆ ಕೂರಿಸಬಹುದಾದ ಪುಟ್ಟ ಪರಮಾಣು ಸ್ಥಾವರಗಳನ್ನು ಭಾರತ ಇನ್ನೂ ನಿರ್ಮಿಸಲು ಸಾಧ್ಯವಾಗದಿರುವುದೇ ಇಲ್ಲಿರುವ ಪ್ರಮುಖ ಸಮಸ್ಯೆ. ಇದಕ್ಕಾಗಿ ರಷ್ಯಾ ಕೂಡ ಕೆಲಮಟ್ಟಿಗೆ ಭಾರತಕ್ಕೆ ನೆರವು ನೀಡಿದ್ದರೂ ಇದುವರೆಗೆ ರೂ. 2500 ಕೋಟಿಯಷ್ಟು ಹಣ ವ್ಯಯವಾಗಿದೆ.BUT INDIA LAUNCH THE K-A15 AND WE OWN THE OUR NUCLEAR SUBMARIEN