ಅಮ್ಜದ್ ಅಲಿ ಖಾನ್

ಅಮ್ಜದ್ ಅಲಿ ಖಾನ್ ಪ್ರಸಿದ್ಧ ಸರೋದ್ ವಾದಕರು.೧೯೪೬ ರಲ್ಲಿ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು.ಸರೋದ್ ವಾದನದಲ್ಲಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡ ಇವರು ದೇಶ ವಿದೇಶಗಳಲ್ಲಿ ಕಛೇರಿ ನಡೆಸಿ ಪ್ರಸಿದ್ಧರಾಗಿದ್ದಾರೆ. ಇವರು 'ಪ್ರಸಿದ್ಧ ಸೇನಿಯಾ-ಬಂಗಾಶ್ ಘರಾಣೆ'ಯ ಏಳನೇಯ ತಲೆಮಾರಿನ 'ಸರೋದ್ ವಾದಕ'ರು. ಇವರು ತಮ್ಮ ತಂದೆ ಮತ್ತು ಪ್ರಸಿದ್ಧ ಸರೋದ್ ವಾದಕರಾಗಿದ್ದ ಉಸ್ತಾದ್ ಹಫೀಜ್ ಅಲಿ ಖಾನ್ ಅವರಿಂದ 'ಸರೋದ್ ವಾದನದ ಶಿಕ್ಷಣ'ವನ್ನು ಪಡೆದರು.

ಸಾಂಸಾರಿಕ ಜೀವನ

ಬದಲಾಯಿಸಿ

ಇವರು 'ಸುಬ್ಬುಲಕ್ಷ್ಮಿ'ಯವರನ್ನು ಮದುವೆಯಾಗಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಹೆಸರು 'ಅಮಾನ್ ಅಲಿ' ಮತ್ತು 'ಅಯಾನ್ ಅಲಿ', ಇವರಿಬ್ಬರೂ ಕೂಡ 'ಸರೋದ್ ವಾದಕರು'. 'ಅಮ್ಜದ್ ಅಲಿ'ಯವರು ತಮ್ಮ 'ಹೆಂಡತಿಯ ಹೆಸರಿನಲ್ಲಿ ಒಂದು ರಾಗ'ವನ್ನೂ ಸೃಷ್ಟಿಸಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ

ಬಾಹ್ಯಸಂಪರ್ಕಗಳು

ಬದಲಾಯಿಸಿ