ಅಮೃತಪುರಿ
ಅಮೃತಪುರಿ ಮೂಲತಃ ಪರಯಕಡವು, ವಿಶ್ವಪ್ರಸಿದ್ಧ ಆಧ್ಯಾತ್ಮಿಕ ಗುರು, ಅಪ್ಪುಗೆಯ ಸಂತ ಮಾತಾ ಅಮೃತಾನಂದಮಯಿ ದೇವಿಯ ಮುಖ್ಯ ಆಶ್ರಮವಾಗಿದೆ . ಅವರನ್ನು ಅಮ್ಮಾ ಎಂದೂ ಕರೆಯುತ್ತಾರೆ. ಈ ಸ್ಥಳವು ಮಾತಾ ಅಮೃತಾನಂದಮಯಿ ಮಠದ ಅಂತರರಾಷ್ಟ್ರೀಯ ಪ್ರಧಾನ ಕಛೇರಿಯಾಗಿದೆ . ಇದು ಕೇರಳ ರಾಜ್ಯದಲ್ಲಿದೆ, ಅದು ಕರುಣಗಪ್ಪಳ್ಳಿಯಿಂದ 8 ಕಿ.ಮೀ. ಕೊಲ್ಲಂನಿಂದ 29 ಕಿ.ಮೀ, ತಿರುವನಂತಪುರಂ ಉತ್ತರಕ್ಕೆ 110 ಕಿಮೀ, ಮತ್ತು ಕೊಚ್ಚಿಯಿಂದ ದಕ್ಷಿಣಕ್ಕೆ 120 ಕಿ.ಮೀ. ದೂರದಲ್ಲಿದೆ. ಅಮೃತಪುರಿ ಎಂಬುದು ಆಶ್ರಮದ ಸ್ಥಳವನ್ನು ಈಗ ತಿಳಿದಿರುವ ಹೆಸರು.
ಅಮೃತಪುರಿ [೧] 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಇದು ಅಮೃತ ವಿಶ್ವ ವಿದ್ಯಾಪೀಠಮ್ (ಅಮೃತ ವಿಶ್ವವಿದ್ಯಾಲಯ)ನ ಐದು ಕ್ಯಾಂಪಸ್‌ಗಳಲ್ಲಿ ಒಂದಾಗಿದೆ ಹಾಗೂ ಅದರ ಪ್ರಧಾನ ಕಛೇರಿಯಾಗಿದೆ. [೨]
"ಎಂಬ್ರೆಸಿಂಗ್ ದಿ ವರ್ಲ್ಡ್" ಎನ್ನುವುದು ಮಾತಾ ಅಮೃತಾನಂದಮಯಿ ಮಠದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾಗತಿಕ ದಾನಸಂಸ್ಥೆ ಆಗಿದೆ. [೩]
ಸಾರಿಗೆ
ಬದಲಾಯಿಸಿಹತ್ತಿರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ - ಕರುಣಗಪ್ಪಳ್ಳಿ
ಹತ್ತಿರದ ರೈಲು ನಿಲ್ದಾಣಗಳು - 1. ಕರುಣಗಪ್ಪಳ್ಳಿ (9 ಕಿಮೀ), 2. ಕಾಯಂಕುಲಂ (15 ಕಿಮೀ)
9°05′23″N 76°29′09″E / 9.089736°N 76.485908°E
ಹತ್ತಿರದ ಪುರಸಭೆಗಳು-
1. ಕರುಣಗಪ್ಪಳ್ಳಿ (9 ಕಿಮೀ) 2. ಕಾಯಂಕುಲಂ (14) ಕಿಮೀ)