ಅನ್ನೈ ವೆಲಂಕಣಿ (ಚಲನಚಿತ್ರ)

ಅಣ್ಣೈ ವೇಲಂಕಣ್ಣಿ (ಅನುವಾದಃ ಮದರ್ ವೇಲಂಕಣ್ಣಿ) ಕೆ. ತಂಗಪ್ಪನ್ ನಿರ್ದೇಶನದ ೧೯೭೧ರಲ್ಲಿ ತೆರೆಕಂಡ ತಮಿಳು ಭಾಷೆಯ ಚಲನಚಿತ್ರ. ಈ ಚಿತ್ರದಲ್ಲಿ ಜೆಮಿನಿ ಗಣೇಶನ್, ಜಯಲಲಿತಾ, ಪದ್ಮಿನಿ ಮತ್ತು ಕೆ. ಆರ್. ವಿಜಯ ನಟಿಸಿದ್ದಾರೆ. ಕಮಲ್ ಹಾಸನ್ ಜೀಸಸ್ ಕ್ರೈಸ್ಟ್ ಪಾತ್ರದಲ್ಲಿ ಸಂಕ್ಷಿಪ್ತವಾಗಿ ಕಾಣಿಸಿಕೊಳ್ಳುತ್ತಾರೆ. ಇದು ಕ್ಯಾಥೋಲಿಕ್ ನಂಬಿಕೆಗಳಿಗೆ ಸಂಬಂಧಿಸಿದ ಮೂರು ಕಥೆಗಳನ್ನು ಒಳಗೊಂಡಿದೆ. ಚಲನಚಿತ್ರದ ಕತೆಯಲ್ಲಿ ಬರುವ ವೇಲಂಕಣ್ಣಿಯು ಭಾರತದ ನಿಜವಾದ ಹಳ್ಳಿಯಾಗಿದ್ದು ವರ್ಜಿನ್ ಮೇರಿ ಮತ್ತು ಜೀಸಸ್ಗೆ ಮೀಸಲಾಗಿರುವ ದೊಡ್ಡ ಚರ್ಚ್ ಅನ್ನು ಹೊಂದಿದೆ.

ಅನ್ನೈ ವೇಲಕ್ಕಣ್ಣಿ
Theatrical release poster
Directed byಕೆ.ತಂಗಪ್ಪನ್
Written byಶ್ಯಾಮ್ ದೆ ಥಾಮ್ಸನ್
Produced byಕೆ.ತಂಗಪ್ಪನ್
Starring
Cinematographyಜಿ.ಕೆ.ರಾಮು
Edited byಎನ್.ಎಂ.ಶಂಕರ್
Music byಜಿ.ದೇವರಾಜನ್
Production
company
Giri Movies
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೫".
  • 15 ಆಗಸ್ಟ್ 1971 (1971-08-15)
Running time
148 minutes
Countryಭಾರತ
Languageತಮಿಳು

ಕಥಾವಸ್ತು

ಬದಲಾಯಿಸಿ

ಮೇರಿ (ಜಯಲಲಿತಾ) ನಾಗಪಟ್ಟಣಂ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದು ವೆಲಂಕನ್ನಿಯ ತಾಯಿ ಮೇರಿಯ ಭಕ್ತೆ.

ಮೇರಿ ಆಸ್ಪತ್ರೆಯ ಸಭೆಯಿಂದ ದೂರವಿದ್ದಾಗ ಮೇರಿ ತಾಯಿ ನರ್ಸ್ನ ವೇಷದಲ್ಲಿ ಮೇರಿಯ ಕರ್ತವ್ಯಗಳಿಗೆ ಹಾಜರಾಗುತ್ತಾಳೆ.

ಪಾತ್ರವರ್ಗ

ಬದಲಾಯಿಸಿ

ಚೆಲ್ಲಾಯಿ ಪಾತ್ರದಲ್ಲಿ ಶ್ರೀವಿದ್ಯಾ
ರಂಗಯ್ಯನ ಪಾತ್ರದಲ್ಲಿ ಶಿವಕುಮಾರ್
ನರ್ಸ್ ಮೇರಿಯ ಪಾತ್ರದಲ್ಲಿ ಜಯಲಲಿತಾ
ಸುಸಾಯಿ ನಾಥನ್ ಪಾತ್ರದಲ್ಲಿ ಜೆಮಿನಿ ಗಣೇಶನ್
ಸ್ವರ್ಣಂ ಪಾತ್ರದಲ್ಲಿ ಪದ್ಮಿನಿ
ಸ್ವರ್ಣಂನ ಮಗ ರಾಸನ ಪಾತ್ರದಲ್ಲಿ ಮಾಸ್ಟರ್ ಶೇಖರ್
ಮೇರಿಯ ಆಸ್ಪತ್ರೆಯ ಮುಖ್ಯ ಡಾಕ್ಟರ್ ಸುಂದರ್ ರಾಜನ್ ಪಾತ್ರದಲ್ಲಿ ಮೇಜರ್ ಸುಂದರರಾಜನ್
ಕಾಂಶಿಯ ಪಾತ್ರದಲ್ಲಿ ಕೆ.ಆರ್.ವಿಜಯ
ಭೂಮಾಲೀಕನ ಪಾತ್ರದಲ್ಲಿ ಆರ್.ಮುತ್ತುರಾಮನ್
ಭೂಮಾಲೀಕನ ಪತ್ನಿ ಕನ್ನಮ್ಮನ ಪಾತ್ರದಲ್ಲಿ ದೇವಿಕಾ
ಕ್ಯಾಂಡಲ್ ಮಾರುವ ಮಹಿಳೆಯಾಗಿ ಸಚು
ಆಟಿಕೆ ಮಾರುವ ಮಹಿಳೆಯಾಗಿ ಮನೋರಮಾ
ಫಾದರ್ ಫ್ರಾನ್ಸಿನ್ ಪಾತ್ರದಲ್ಲಿ ಎಸ್.ವಿ.ಸುಬ್ಬಯ್ಯ
ಕನ್ನಯ್ಯನ ಪಾತ್ರದಲ್ಲಿ ನಾಗೇಶ್
ತೆಂಗಾಯಿ ಶ್ರೀನಿವಾಸನ್
ಡಾಕ್ಟರ್ ಆಂಟನಿಯ ಪಾತ್ರದಲ್ಲಿ ಶ್ರೀಕಾಂತ್

ಅತಿಥಿ ಪಾತ್ರಗಳು

ಬದಲಾಯಿಸಿ

ಜೀಸಸ್ ನ ಪಾತ್ರದಲ್ಲಿ ಕಮಲ್ ಹಾಸನ್
ರೋಗಿಯ ಪಾತ್ರದಲ್ಲಿ ಬೇಬಿ ಸುಮತಿ
ಚೆಲ್ಲಾಯಿಯ ತಂದೆ ಕರುಪಯ್ಯನ ಪಾತ್ರದಲ್ಲಿ ಎಸ್.ರಾಮದಾಸ್
ಕಾಮಾಕ್ಷಿಯ ನೆರೆಮನೆಯ ಮಹಿಳೆ ವೇಲಯೀಯಾಗಿ ಜಾನಕಿ
ತಂಗಯ್ಯನ ಪಾತ್ರದಲ್ಲಿ ಐ.ಎಸ್.ಆರ್
ಮಾಯಂದಿಯ ಪಾತ್ರದಲ್ಲಿ ಜೆಮಿನಿ ಬಾಬು
ಗ್ರಾಮದವನ ಪಾತ್ರದಲ್ಲಿ ಶಿವ ಸೂರಿಯನ್
ಮತ್ತೊಬ್ಬ ಗ್ರಾಮದವನ ಪಾತ್ರದಲ್ಲಿ ಎ.ವೀರಪ್ಪನ್
ಇನ್ನೊಬ್ಬ ಗ್ರಾಮದವನಾಗಿ ಕರಿಕೋಲ್ ರಾಜು
ಅನ್ನಂ ಪಾತ್ರದಲ್ಲಿ ಜಿ.ಶಕುಂತಲ
ಸುಂದರಂ ಪಾತ್ರದಲ್ಲಿ ಎಸ್.ರಾಮ ರಾವ್
ಸುಂದರಂ ಹೆಂಡತಿ ಪಾತ್ರದಲ್ಲಿ ವಿ.ಆರ್.ತಿಲಗಂ
ಪುಷ್ಪಮಾಲ - ಅತಿಥಿ ಪಾತ್ರ
ಅಯ್ಯಕನ್ನುವಿನ ಪಾತ್ರದಲ್ಲಿ ಮಾಸ್ಟರ್ ಪ್ರಭಾಕರ್
ಊರಿನ ಪಂಚಾಯತ್ ಅಧ್ಯಕ್ಷ ಅರುಣಾಚಲಂ ಪಾತ್ರದಲ್ಲಿ ಸುರುಳಿ ರಾಜನ್
ಸುಸಾಯಿನಾಥನ್ನಿನ ಅಮ್ಮನಾಗಿ ಲಕ್ಷ್ಮಿಪ್ರಭಾ

ಉತ್ಪಾದನೆ

ಬದಲಾಯಿಸಿ

ಗಿರಿ ಮೂವೀಸ್ ಕಂಪನಿಯ ಅಡಿಯಲ್ಲಿ ಕೆ. ತಂಗಪ್ಪನ್ ಅವರು ಅಣ್ಣಿ ವೇಲಂಕಣ್ಣಿಯನ್ನು ನಿರ್ಮಿಸಿ ನಿರ್ದೇಶಿಸಿದರು. ಚಿತ್ರದ ಸಂಭಾಷಣೆಗಳನ್ನು ಶ್ಯಾಮ್ ಡಿ ಥಾಮ್ಸನ್ ಬರೆದಿದ್ದಾರೆ.[]ಕಮಲ್ ಹಾಸನ್ ಈ ಚಿತ್ರದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು ಮತ್ತು ಚಿತ್ರದಲ್ಲಿ ಜೀಸಸ್ ಕ್ರೈಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರು.[1][] ಈ ಚಿತ್ರದಲ್ಲಿ ಶ್ರೀವಿದ್ಯಾ ಮತ್ತು ಶಿವಕುಮಾರ ಮೊದಲ ಬಾರಿಗೆ ಜೋಡಿಯಾಗಿದ್ದಾರೆ.[]

ಬಿಡುಗಡೆ ಮತ್ತು ಸ್ವಾಗತ

ಬದಲಾಯಿಸಿ

ಅಣ್ಣೈ ವೇಲಂಕಣ್ಣಿ ೧೯೭೧ರ ಆಗಸ್ಟ್ ೧೫ರಂದು ಬಿಡುಗಡೆಯಾಯಿತು.[] ಈ ಚಲನಚಿತ್ರವನ್ನು ತೆಲುಗು ಭಾಷೆಯಲ್ಲಿ ಮೇರಿ ಮಾತಾ ಎಂದು ಡಬ್ ಮಾಡಲಾಯಿತು ಮತ್ತು ೨೫ ಡಿಸೆಂಬರ್ ೧೯೭೧ ರಂದು ಬಿಡುಗಡೆಯಾಯಿತು.[] ಈ ಚಿತ್ರವನ್ನು ನಂತರ ಮಲಯಾಳಂ ಭಾಷೆಗೆ 'ವೆಲಂಕಣ್ಣಿ ಮಾತವು' ಎಂದು ಡಬ್ ಮಾಡಲಾಯಿತು, ಇದು ೧೯೭೭ರ ಮೇ ೨೭ರಂದು ಬಿಡುಗಡೆಯಾಯಿತು.[]

ಬಾಕ್ಸ್ ಆಫೀಸ್

ಬದಲಾಯಿಸಿ

ಬಿ. ವಿಜಯಕುಮಾರ್ ಅವರು ಲೇಖನದಲ್ಲಿ ತಮಿಳು ಮತ್ತು ಮಲಯಾಳಂ ಡಬ್ ಮಾಡಲಾದ ಆವೃತ್ತಿಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದವು ಎಂದು ಹೇಳಿದ್ದಾರೆ. ಎರಡೂ ಆವೃತ್ತಿಗಳು ಕೇರಳ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾದವು.[]

ಸೌಂಡ್ಟ್ರ್ಯಾಕ್

ಬದಲಾಯಿಸಿ

ಜಿ. ದೇವರಾಜನ್ ಸಂಗೀತ ಸಂಯೋಜನೆ ಮಾಡಿದ್ದು, ಸಾಹಿತ್ಯವನ್ನು ಕನ್ನದಾಸನ್, ವಾಲಿ ಮತ್ತು ಅಯ್ಯಾಸಾಮಿ ಬರೆದಿದ್ದಾರೆ.[]

ಹಾಡು. ಗಾಯಕರು ಉದ್ದ.
"ದೇವಮೈಂದನ್ ಪೊಗಿಂದ್ರನ್" ಟಿ. ಎಂ. ಸುಂದರರಾಜನ್ 03:23
"ಕಡಲ್ ಅಲೈ ತಲಟ್ಟಮ್" ಪಿ. ಮಾಧುರಿ 04:01
"ಕರುಣಾಯ್ ಕಡಲೆ" ಪಿ. ಸುಶೀಲಾ 03:40
"ಕರುಣಾಯಿ ಮಜ್ಹೈಯೆ" ಪಿ. ಸುಶೀಲಾ 03:39
"ನೀಲಕ್ಕಾಡಲಿನ್ ಒರತ್ತಿಲ್" ಟಿ. ಎಂ. ಸುಂದರರಾಜನ್, ಪಿ. ಮಾಧುರಿ 03:22
"ಪೆರಾ ಒರಾನಿ" ಟಿ. ಎಂ. ಸುಂದರರಾಜನ್, ಪಿ. ಮಾಧುರಿ 06:39
"ತಾಂಡನಾ ಥಾನಾ" ಕೆ. ಜೆ. ಯೇಸುದಾಸ್, ಪಿ. ಮಾಧುರಿ 06:01
"ವಾನಮೆನ್ನಮ್ ವೀಧಿಯೆಲ್" ಕೆ. ಜೆ. ಯೇಸುದಾಸ್, ಪಿ. ಮಾಧುರಿ 03:12

ಪ್ರಶಂಸೆಗಳು

ಬದಲಾಯಿಸಿ

ಅಣ್ಣೈ ವೇಲಂಕಣ್ಣಿ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ಚೆನ್ನೈ ಫಿಲ್ಮ್ ಫ್ಯಾನ್ಸ್ ಅಸೋಸಿಯೇಷನ್ ಪ್ರಶಸ್ತಿಯನ್ನು ಮತ್ತು ಶೇಖರ್ ಅತ್ಯುತ್ತಮ ಬಾಲ ತಾರೆಯ ಪ್ರಶಸ್ತಿಯನ್ನು ಗೆದ್ದರು.[]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ B. Vijayakumar (December 20, 2015). "Old is Gold - Velankanni Mathavu 1977". The Hindu. Archived from the original on 22 September 2018. Retrieved 2016-09-14. ಉಲ್ಲೇಖ ದೋಷ: Invalid <ref> tag; name "thehindu" defined multiple times with different content
  2. "ஜெமினிகணேசன் உதவியால் எனக்கு வாய்ப்பு கிடைத்தது - கமலஹாசன் வெளியிட்ட தகவல்". Maalai Malar (in ತಮಿಳು). 29 January 2021. Archived from the original on 29 May 2021. Retrieved 6 May 2021.
  3. Rangarajan, Malathi (27 October 2006). "Subtle portraits, eloquent eyes". The Hindu. Archived from the original on 18 April 2015. Retrieved 20 December 2014.
  4. "ஜெயலலிதா நடித்த திரைப்படங்களின் பட்டியல்". Dinamani (in ತಮಿಳು). 6 December 2016. Archived from the original on 22 September 2018. Retrieved 22 September 2018.
  5. "Mary Matha". Andhra Patrika (in ತೆಲುಗು). 25 December 1971. p. 6.
  6. "Annai Velankanni (1971)". Raaga.com. Archived from the original on 16 August 2014. Retrieved 2014-06-25.
  7. "அன்றிலிருந்து இன்றுவரை சினிமா" (PDF). Vlambaram (in ತಮಿಳು). 15 January 2000. p. 7. Archived (PDF) from the original on 23 May 2023. Retrieved 23 May 2023.