ಅನಾರಣ್ಯ
ಅನಾರಣ್ಯ (ಸಂಸ್ಕೃತ:ಅನಾರನ್ಯ) ಇವನು ಸೂರ್ಯವಂಶದ (ಸೌರ ರಾಜವಂಶ) ರಾಜನೆಂದು ಹಿಂದೂ ಸಾಹಿತ್ಯದಲ್ಲಿ ಹೇಳಲಾಗಿದೆ. ಇವನ ಕುರಿತು ರಾಮಯಣದಲ್ಲಿ ವಿವರಿಸಲಾಗಿದೆ.[೧]
ಅನಾರಣ್ಯ | |
---|---|
ಮಕ್ಕಳು | ಪ್ರಿಶದಶ್ವ |
ಗ್ರಂಥಗಳು | ರಾಮಾಯಣ |
ತಂದೆತಾಯಿಯರು |
|
ದಂತಕಥೆ
ಬದಲಾಯಿಸಿಅನಾರಣ್ಯನು ಇಕ್ಷ್ವಾಕು ವಂಶಸ್ಥ ಮತ್ತು ಅಯೋಧ್ಯೆಯ ರಾಜನಾಗಿದ್ದಾನೆ. ರಾಮಾಯಣದ ಪ್ರಕಾರ, ರಾಕ್ಷಸ ರಾಜ ರಾವಣ ಶಿವನಿಂದ ಪಾಶುಪತಾಶಾಸ್ತ್ರವನ್ನು ಪಡೆದ ನಂತರ, ಅವನು ಮಾನವರ ವಿರುದ್ಧ ಯುದ್ಧ ಘೋಷಿಸಿದನು ಮತ್ತು ಅನಾರಣ್ಯನೊಂದಿಗೆ ಯುದ್ಧ ಮಾಡಲು ನಿರ್ಧರಿಸಿದನು. ಅವರ ಪಡೆಗಳ ನಡುವೆ ಭೀಕರ ಯುದ್ಧ ನಡೆಯಿತು. ರಾಕ್ಷಸರು ನಡೆಸಿದ ವಾಮಾಚಾರದಿಂದಾಗಿ, ಅನಾರಣ್ಯನು ತನ್ನ ಸೈನ್ಯದೊಂದಿಗೆ ಸೋಲನ್ನು ಅನುಭವಿಸಿದನು. ರಾವಣನ ಗದೆಯಿಂದ ಹೊಡೆದು ಅವನ ರಥದಿಂದ ಹೊರಹಾಕಲ್ಪಟ್ಟನು. ರಾವಣನು ಅನಾರಣ್ಯ ಮತ್ತು ಅವನ ರಾಜವಂಶವನ್ನು ಅಪಹಾಸ್ಯ ಮಾಡಿದನು. ಅದೇ ರಾಜವಂಶದ ವಂಶಸ್ಥರಲ್ಲಿ ಒಬ್ಬನು ರಾವಣನನ್ನು ಅಂತ್ಯಗೊಳಿಸುತ್ತಾನೆ ಎಂಬ ಶಾಪವನ್ನು ಅನಾರಣ್ಯನು ನೀಡಿದನು. ರಾಮನು ರಾವಣನನ್ನು ಸೋಲಿಸಿದಾಗ ಈ ಶಾಪವು ನಿಜವಾಗುತ್ತದೆ. [೨][೩]
ಉಲ್ಲೇಖಗಳು
ಬದಲಾಯಿಸಿ- ↑ Books, Kausiki (2021-12-21). Valmiki Ramayana: Uttara Kanda: English translation only without Slokas (in ಇಂಗ್ಲಿಷ್). Kausiki Books. p. 72.
- ↑ Dharma, Krishna (2020-08-18). Ramayana: India's Immortal Tale of Adventure, Love, and Wisdom (in ಇಂಗ್ಲಿಷ್). Simon and Schuster. pp. 8–10. ISBN 978-1-68383-919-4.
- ↑ Madan Gopal (1990). India through the ages. Public Resource. Publications Division, Ministry of Information & Broadcasting, Government of India. p. 67.
ಟಿಪ್ಪಣಿ
ಬದಲಾಯಿಸಿ- Books, Kausiki (2021-12-21). Valmiki Ramayana: Uttara Kanda: English translation only without Slokas (in ಇಂಗ್ಲಿಷ್). Kausiki Books. p. 72
- Dharma, Krishna (2020-08-18). Ramayana: India's Immortal Tale of Adventure, Love, and Wisdom (in ಇಂಗ್ಲಿಷ್). Simon and Schuster. pp. 8–10. ISBN 978-1-68383-919-4.
- Madan Gopal (1990). India through the ages. Public Resource. Publications Division, Ministry of Information & Broadcasting, Government of India. p. 67.