ಅಜಿತ್ ಕುಮಾರ್ ಡೋವಲ್ ಭಾರತದ ಬೇಹುಗಾರಿಕಾ ಅಧಿಕಾರಿಯಾಗಿದ್ದಾರೆ. ಪ್ರಸಕ್ತ ಇವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ. ಮೇ ೩೦ ,೨೦೧೪ ರಂದು ಇವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಧಿಕಾರ ವಹಿಸಿಕೊಂಡರು.[೧][೨] ಈ ಮುಂಚೆ ಅಜಿತ್ ಡೋವಲ್ ಭಾರತದ ಆಂತರಿಕ ಬೇಹುಗಾರಿಕಾ ಸಂಸ್ಥೆಯಾದ ಗುಪ್ತದಳದ (ಐ.ಬಿ) ಇಂಟೆಲಿಜೆನ್ಸ ಬ್ಯೂರೊ ನಿರ್ದೇಶಕರಾಗಿದ್ದರು.[೩] ಅದಕ್ಕೂ ಮುಂಚೆ ಇಂಟೆಲಿಜೆನ್ಸ ಬ್ಯೂರೊದಲ್ಲಿ ಹಲವು ದಶಕಗಳ ಕಾಲ ಬೇಹುಗಾರಿಕಾ ಅಧಿಕಾರಿಯಾಗಿ ಕಾರ್ಯ ನಿರ್ವವಹಿಸಿದ್ದಾರೆ.

ಅಜಿತ್ ಕುಮಾರ್ ಡೋವಲ್
अजित कुमार डोभाल

ಕೀರ್ತಿ ಚಕ್ರ
೨೦೧೪ರಲ್ಲಿ ಡೋವಲ್

ಭಾರತದ ೫ ನೇ ರಾಷ್ಟ್ರೀಯ ಭದ್ರತಾ ಸಲಹೆಗಾರ
ಹಾಲಿ
ಅಧಿಕಾರ ಸ್ವೀಕಾರ 
೩೦ ಮೇ ೨೦೧೪
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಶಿವ್‌ಶಂಕರ್ ಮೆನನ್

ಕೇಂದ್ರ ಗುಪ್ತಚರ ಇಲಾಖೆ ನಿರ್ದೇಶಕ
ಅಧಿಕಾರ ಅವಧಿ
ಜುಲೈ ೨೦೦೪ – ಜನವರಿ ೨೦೦೫
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಕೆ. ಪಿ ಸಿಂಗ್
ಉತ್ತರಾಧಿಕಾರಿ ಇ.ಎಸ್.‌ಎಲ್ ನರಸಿಂಹನ್
ವೈಯಕ್ತಿಕ ಮಾಹಿತಿ
ಜನನ (೧೯೪೫-೦೧-೨೦)೨೦ ಜನವರಿ ೧೯೪೫
ಘಿಡಿ ಬಾನೆಲ್ಸ್ಯೂನ್, ಪೌರಿ ಘರ್ವಾಲ್ ಜಿಲ್ಲೆ, ಉತ್ತರಾಖಂಡ್, ಭಾರತ
ವಾಸಸ್ಥಾನ ನವ ದೆಹಲಿ, ಭಾರತ
ಅಭ್ಯಸಿಸಿದ ವಿದ್ಯಾಪೀಠ ರಾಷ್ಟ್ರೀಯ ಸೇನಾ ಶಾಲೆ, ಅಜಮೇರ್
ಆಗ್ರಾ ವಿಶ್ವವಿದ್ಯಾಲಯ
ರಾಷ್ಟ್ರೀಯ ರಕ್ಷಣಾ ಕಾಲೇಜು
ಜಾಲತಾಣ ಡೋವಲ್ ರ ಬ್ಲಾಗ್
ಮಿಲಿಟರಿ ಸೇವೆ
ಪ್ರಶಸ್ತಿಗಳು ಕೀರ್ತಿ ಚಕ್ರ

ಬಾಲ್ಯ ಹಾಗೂ ಶಿಕ್ಷಣ ಬದಲಾಯಿಸಿ

ಅಜಿತ್ ಕುಮಾರ್ ಡೋವಲ್ ಜನವರಿ ೨೦, ೧೯೪೫ ರಂದು ಉತ್ತರಖಂಡ ರಾಜ್ಯದ ಪೌರಿ ಘರ್ವಾಲ್ ಜಿಲ್ಲೆಯ ಘಿರಿ ಬನೆಲ್ಸನ್ ಎಂಬ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಒಬ್ಬ ಮಿಲಿಟರಿ ಅಧಿಕಾರಿಯಾಗಿದ್ದರು. ಡೋವಲ್ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಅಜ್ಮೀರ್‌ನ ಜಾರ್ಜ್ ರಾಯಲ್ ಮಿಲಿಟರಿ ಸ್ಕೂಲ್ (ಈಗಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್) ನಲ್ಲಿ ಪೂರೈಸಿದರು. ೧೯೬೭ರಲ್ಲಿ ಆಗ್ರಾ ವಿಶ್ವವಿದ್ಯಾನಿಲಯದಿಂದ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು ಹಾಗೂ ಅದೇ ವರ್ಷ ಭಾರತೀಯ ಪೋಲೀಸ್ ಸೇವೆ (ಐ.ಪಿ.ಸ್)ಯಲ್ಲಿ ಕೇರಳ ಕೇಡರ್ ಅಧಿಕಾರಿಯಾಗಿ ಆಯ್ಕೆಗೊಂಡರು.

ಪೋಲೀಸ್ ಹಾಗು ಬೇಹುಗಾರಿಕಾ ವೃತ್ತಿ, ಕಾರ್ಯಚರಣೆಗಳು ಹಾಗು ಸಾಧನೆ ಬದಲಾಯಿಸಿ

ಈಶಾನ್ಯ ಭಾರತ, ಕಾಶ್ಮೀರ, ಪಂಜಾಬ್ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಡೊವಲ್, ಹಲವು ಕ್ಲಿಷ್ಟ ಸಮಸ್ಯೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪಂಜಾಬ್, ಮಿಜೋರಂ, ಜಮ್ಮು-ಕಾಶ್ಮೀರಗಳಲ್ಲಿ ನಡೆದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಡೋವಲ್ ಪ್ರಮುಖ ಪಾತ್ರವಹಿಸಿದ್ದಾರೆ. ೧೯೮೪ ರಲ್ಲಿ (ಮಿಝೋ ನ್ಯಾಷನಲ್ ಫ್ರಂಟ್(M.N.F)) ಮಿಜೋರಂನಲ್ಲಿ ಭಾರತದ ವಿರುಧ್ದ ದಂಗೆಕೋರರ ದಂಡನ್ನು ಎತ್ತಿ ಕಟ್ಟಿತ್ತು.[೪] ಎಮ್.ಎನ್.ಎಫ್ ಒಂದು ರಾಷ್ಟ್ರ ವಿರೋಧಿ ಗುಂಪು. ಅದರ ಪ್ರಮುಖ ಪು ಲಾಲ್ ಡೆಂಗಾ ಎಂಬ ಒಬ್ಬ ದಂಗೆಕೋರ. ೧೯೮೫ ರ ಹೊತ್ತಿಗೆ ಪು ಲಾಲ್ ಡೆಂಗಾನ ಏಳು ಕಮಾಂಡರ್‌ಗಳ ಪೈಕಿ ಆರು ಕಮಾಂಡರ್‌ಗಳನ್ನು ತಮ್ಮ ಚಾಣಕ್ಷಮತಿಯಿಂದ ತಮ್ಮ ಪರವಾಗಿಸಿಕೊಂಡು ಬಿಟ್ಟರು. ೧೯೮೬ ರ ಹೊತ್ತಿಗೆ ಎಮ್.ಎ.ಎಫ್ ನ ಶಕ್ತಿ ಕುಂದುತ್ತಾ ಬಂತು. ಅದೇ ಹೊತ್ತಿಗೆ ಎಮ್.ಎ.ಎಫ್ ನ ನಾಯಕ ಪು ಲಾಲ್ ಡೆಂಗಾನನ್ನು ಭಾರತದೊಂದಿಗೆ ಶಾಂತಿ ಒಪ್ಪಂದಕ್ಕೆ ಬರಲೇ ಬೇಕಾದ ಅನಿವಾರ್ಯ ಸ್ಥತಿಗೆ ತಂದರು. ೧೯೮೬ ಜನವರಿ ೩೦ ರಂದು ಭಾರತ ಸರಕಾರದೊಡನೆ ಎಮ್.ಎ.ಎಫ್ ಶಾಂತಿ ಸಂಧಾನ ಮಾಡಿಕೊಂಡಿತು. ಮಿಜೋರಂನಲ್ಲಿ ಶಾಂತಿ ನೆಲೆಸಿತು. ಈ ಕಾರ್ಯಾಚರಣೆಯ ಬೆನ್ನೆಲುಬಾಗಿದ್ದವರು ಅಜಿತ್ ಡೋವಲ್ !!! ೧೯೮೯ರ ಹೊತ್ತಿಗೆ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಅಟ್ಟಹಾಸ , ಕೂಗು ಮುಗಿಲು ಮುಟ್ಟಿತ್ತು. ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್‌ನ ದಂಗೆ ಕೋರರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹಿಂಸೆಗಿಳಿದಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ಐ.ಸ್.ಐ ನ ಯೋಜನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಮಾಡಬೇಕೆಂಬ ಈ ಎರಡು ದುರುದ್ದೇಶ ಭಾರತಕ್ಕೆ ಮಾರಕವಾಗಿ ಪರಿಣಮಿಸಿತು. ಈ ಉಗ್ರರುಗಳು ಕ್ರೌರ್ಯಕ್ಕಿಳಿದರೂ. ಕಣಿವೆ ರಾಜ್ಯದಲ್ಲಿ ರಕ್ತದೋಕುಳಿಯೇ ಹರಿಯತೊಡಗಿತು. ಈ ಮತಾಂಧರ ಭಯಕ್ಕೆ , ಆಮಿಷಗಳಿಗೆ ಕಣಿವೆಯ ಯುವಕರ ಗುಂಪು ಪ್ರತ್ಯೇಕವಾದಿಗಳೊಂದಿಗೆ ಗುರುತಿಸಿಕೊಳ್ಳ ತೊಡಗಿದರು. ಈ ಗುಂಪಿನಲ್ಲಿ ಕಾಶ್ಮೀರದ ಖ್ಯಾತ ಗಜಲ್ , ಸೊಫಿ ಗಾಯಕ ಕುಕಾ ಪಾರೆ ಕೂಡ ಒಬ್ಬ. ಕುಕಾ ಪಾರೆ ಪ್ರತ್ಯೇಕವಾದಿಗಳ ಜೊತೆಗೆ ಗುರುತಿಸಿಕೊಂಡಿದ್ದ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಲೇಬೇಕೆಂಬ ಜಿದ್ದಿನಿಂದ.[೫]

 
ಎಂ.ನ್.ಎಫ್

ಹಿಜ್ಬುಲ್ ಮುಜಾಹಿದ್ದಿನ್ ಅನ್ನು ಬೆಳೆಸಿತು. ಯುವಕರು ಜೆ.ಕೆ.ಎಲ್.ಎಫ್ ಸೇರುತ್ತಿದ್ದಂತೆ ಹಿಜ್ಬುಲ್ ವ್ಯಗ್ರಗೊಂಡು ಇನ್ನಷ್ಟು ಕ್ರೌರ್ಯವಾಯಿತು. ಆ ಸಮಯದಲ್ಲಿ ಡೋವಲ್ ಗುಪ್ತದಳದ ಮುಖ್ಯಸ್ಥ. ಅನೇಕ ಯುವಕರ ಗುಂಪನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಡೋವಲ್ ಯಶಸ್ವಿಯಾದರು. ಹಿಜ್ಬುಲ್ ಹಾಗು ಜೆ.ಕೆ.ಎಲ್.ಎಫ್ ಕಾಶ್ಮೀರದಲ್ಲಿನ ಕ್ರೌರ್ಯಕ್ಕೆ, ರಕ್ತದೋಕುಳಿಗೆ ಕಾರಣವೆಂದು ಆ ಯುವಕರಿಗೆ ಮನದಟ್ಟು ಮಾಡಿದರು. ಕುಕಾ ಪಾರೆಯನ್ನು ತನ್ನತ್ತ ಸೆಳೆದುಕೊಂಡ ಡೋವಲ್ ಅವನನ್ನೇ ಸೇನೆಗೆ ಗೂಢಾಚಾರಿಕೆ ಮಾಡುವಂತೆ ಮಾಡಿಬಿಟ್ಟರು. ಕುಕಾಪಾರೆ ಹಾಗೂ ಅನೇಕ ಯುವಕರು ಭಾರತದ ಪರವಾಗಿ ನಿಂತು ಸೇನೆಗೆ ಗುಪ್ತ ಮಾಹಿತಿಯನ್ನು ಒದಗಿಸಿ ಉಗ್ರರ ಶಕ್ತಿ ಗುಂದಿಸಿದರು. ಇದು ಅಜಿತ್ ಡೋವಲ್ ಚಾಕಚಕ್ಯತೆ. ಇದಕ್ಕೂ ಮುನ್ನ ಡೋವಲ್ ಆರು ವರ್ಷಗಳ ಕಾಲ ಪಾಕಿಸ್ತಾನದಲ್ಲಿದ್ದುಕೊಂಡು,[೬] ಭಾರತ ವಿರೋಧಿ ಉಗ್ರರ ಜೊತೆಗಿದ್ದು ಸೇನೆಗೆ ಪ್ರಮುಖ ಗುಪ್ತಾ ಮಾಹಿತಿಗಳನ್ನು ಒದಗಿಸಿದ್ದರು. ಅದರಲ್ಲಿ ಪ್ರಮುಖವಾಗಿ ಅಲ್ಲಿಯ ಕಹುತಾ ಪರಮಾಣು ಘಟಕದ ಮಾಹಿತಿಯನ್ನು ಭಾರತಕ್ಕೆ ಒದಗಿಸಿದ್ದು. ೧೯೮೮ ರ ಹೊತ್ತು ಸ್ವರ್ಣ ಮಂದಿರದಲ್ಲಿ ಅಳಿದುಳಿದ ಖಲೀಸ್ಥಾನ್ ಪ್ರತ್ಯೇಕವಾದಿಗಳು ಇದ್ದರು. ಅದೇ ಸಮಯದಲ್ಲಿ ಸ್ವರ್ಣ ಮಂದಿರದ ಬಳಿ ಒಬ್ಬ ರಿಕ್ಷಾ ಎಳೆಯುವವನು ಕಾಣಿಸಿಕೊಂಡ. ಖಲೀಸ್ಥಾನ ಪ್ರತ್ಯೇಕವಾದಿಗಳು ಅವನನ್ನು ವಿಚಾರಿಸಿದಾಗ ತಾನು ಐ.ಸ್.ಐ ಕಾರ್ಯಕರ್ತ ಹಾಗೂ ಐ.ಸ್.ಐ ನನ್ನನ್ನು ನಿಮ್ಮ ಸಹಾಯಕ್ಕೆ ಕಳಿಸಿದೆ ಎಂದು ಅವರಲ್ಲಿ ಹೇಳಿಕೊಂಡ. ಭಾರತ ಸರಕಾರ ಆಪರೇಷನ್ ಬ್ಲಾಕ್ ಥಂಡರ್ [೭] ಮಾಡಲು ಎರಡು ದಿನದ ಮುಂಚೆ ಈತ ಹರ್ ಮಂದಿರ್ ಸಾಹಿಬ್ ಬಳಿಗೆ ಹೋಗಿ ಪ್ರತ್ಯೇಕವಾದಿಗಳ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಸೇನೆಗೆ ರವಾನಿಸಿದನು. ನಂತರ ಆಪರೇಷನ್ ಬ್ಲಾಕ್ ಥಂಡರ್ ಯಶಸ್ವಿಯಾಯಿತು. ಅಳಿದುಳಿದ ಪ್ರತ್ಯೇಕವಾದಿಗಳನ್ನು ಕೊಲ್ಲಲಾಯಿತು. ಇದರ ಹಿಂದಿದ್ದ ತಲೆ ರಿಕ್ಷಾ ಎಳೆಯುವವನದ್ದು. ಆತ ಅಜಿತ್ ಡೋವಲ್. ೧೯೮೪ ರಲ್ಲಿ ನೆಡೆದ ಆಪರೇಷನ್ ಬ್ಲೂ ಸ್ಟಾರ್[೮] ಕಾರ್ಯಚರಣೆಯ ವೇಳೆಯೂ ಡೋವಲ್ ಸ್ವರ್ಣ ಮಂದಿರದೊಳಗೆ ಪ್ರತ್ಯೇಕವಾದಿಗಳೊಂದಿಗೆ ಪ್ರತ್ಯೇಕವಾದಿಯಂತೆ ಇದ್ದು ಸೇನೆಗೆ ಮಾಹಿತಿ ರವಾನಿಸಿದ್ದರು. ಪ್ರತ್ಯೇಕವಾದಿಗಳೊಂದಿಗೆ ಉಗ್ರರೊಂದಿಗೆ ಅವರದೇ ಸೋಗಿನಲ್ಲಿ ಹೋಗಿ ಅವರಿಗೇ ಮಣ್ಣು ಮುಕ್ಕಿಸುವುದು ಡೋವಲ್ ಚಾಣಾಕ್ಷತೆ. ೧೯೭೫ ರಲ್ಲಿ ಸಿಕ್ಕಿಂ ಭೂ ಭಾಗವನ್ನು ಭಾರತದ ಭಾಗವನ್ನಾಗಿ ಸೇರಿಸಿಕೊಳ್ಳುವಲ್ಲಿ ಡೋವಲ್ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಈ ವಿಚಾರವಾಗಿ ಜನಮತ ಸಂಗ್ರಹಣೆಯಲ್ಲಿ ಜನರು ಭಾರತದ ಪರ ನಿಲ್ಲಲು ಅವರದ್ದೇ ಮುಖ್ಯ ಪಾತ್ರ. ಖಲೀಸ್ಥಾನ್ ದಂಗೆಕೋರರ ಶಮನದ ನಂತರ ೧೯೯೨ರಲ್ಲಿ ಪಂಜಾಬ್ ನಲ್ಲಿ ನೆಡೆದ ಚುಣಾವಣೆಯನ್ನು ಶಾಂತಿಯುತವಾಗಿ ಅಯೋಜಿಸಿದ ಹೆಗ್ಗಳಿಕೆ ಡೋವಲ್ ರದ್ದು. ೧೯೯೧ ರಲ್ಲಿ ರೊಮೇನಿಯಾದ ರಾಯಭಾರಿ ಲಿವಿಯು ರಾಡುರನ್ನು ಖಲೀಸ್ಥಾ ಲಿಬಿರೇಷನ್ ಫ್ರಂಟ್‌ನ ಉಗ್ರಗಾಮಿಗಳು ತಮ್ಮ ಇಬ್ಬರು ಉಗ್ರಗಾಮಿಗಳನ್ನು ಬಿಡುವಂತೆ ಸರಕಾರಕ್ಕೆ ತಾಕೀತು ಮಾಡಿ ಅಪಹರಿಸಿದ್ದರು. ಅವರನ್ನು ಪಾರು ಮಾಡುವ ತಂತ್ರ ರೂಪಿಸಿದ್ದು ಅಜಿತ್ ಡೋವಲ್. ೧೯೯೬ ರಲ್ಲಿ ಕಂದಹಾರ್ ವಿಮಾನ ಅಪಹರಣ ಘಟನೆಯಲ್ಲಿ ಮುಖ್ಯ ಸಂಧಾನಕಾರರಾಗಿದ್ದವರು ಅಜಿತ್ ಡೋವಲ್. ವಿಶೇಷವೆಂಬಂತೆ , ಆಶ್ಚರ್ಯಕರವಾಗಿ ೧೯೭೧ ರಿಂದ ೧೯೯೬ ರವರೆಗೆ ಭಾರತದ ಸುಮಾರು ೧೬ ವಿಮಾನಗಳನ್ನು ಉಗ್ರರು ಹಾಗು ಇತರರು ಅಪಹರಿಸಿದ್ದರು. ಆ ಎಲ್ಲಾ ೧೬ ವಿಮಾನಗಳನ್ನು ಸುರಕ್ಷಿತವಾಗಿ ವಾಪಸ್ಸು ತರಲು ಮಾಡಿದ ಸಂಧಾನಗಳೆಲ್ಲಾ ಡೋವಲ್ ಪಾತ್ರವಹಿಸಿದ್ದರು. ಇದು ಅವರ ಶ್ರೀಮಂತ ಅನುಭವಕ್ಕೆ ಸಾಕ್ಷಿ.(ಪ್ರಮುಖವಾಗಿ ೧೯೭೧, ೧೯೮೧,೧೯೮೨,೧೯೮೪, ಜುಲೈ, ೧೯೮೪ ಆಗಸ್ಟ್,೧೯೯೪ ಹಾಗು ೧೯೯೯ ರಲ್ಲಿ ನಡೆದ ಪ್ರಮುಖ ವಿಮಾನ ಆಪಹರಣಗಳು). ೧೯೯೬ ರಲ್ಲಿ ಯು.ಕೆ (ಯು.ಕೆ) ಯ ಭಾರತೀಯ ದೂತವಾಸ ಕಛೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಗುಪ್ತಾಚರ ದಳದ (ಐ.ಬಿ)ಯ ಮುಖ್ಯಸ್ಥರಾಗಿ ೨೦೦೫ ರಲ್ಲಿ ನಿವೃತ್ತರಾದರು. ೨೦೧೪ರಲ್ಲಿ ಇರಾಕ್‌ನಲ್ಲಿ ಇಸಿಸ್ ದಂಗೆಯ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ೪೬ ಭಾರತೀಯ ನರ್ಸ್‌ಗಳು ಸಿಕ್ಕಿ ಹಾಕಿಕೊಂಡದ್ದರು. ಅವರೆಲ್ಲರನ್ನು ಸುರಕ್ಷಿತರಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ಡೋವಲ್ ರದ್ದು. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅವರು ಮಾಡಿದ ಪ್ರಥಮ ಆಪರೇಷನ್ ಅದಾಗಿತ್ತು.

ನಿವೃತ್ತಿಯ ನಂತರ ಬದಲಾಯಿಸಿ

ಜನವರಿ ೩೧, ೨೦೦೫ ರಲ್ಲಿ ಗುಪ್ತಾದಳದ ಮುಖ್ಯಸ್ಥರಾಗಿ ನಿವೃತರಾದ ಬಳಿಕ ಡೋವಲ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳತೊಡಗಿದರು. ವಿವೇಕಾನಂದ ಅಂತರ್ರಾಷ್ತ್ರಿಯ ಫೌಂಡೇಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಆಂತರಿಕ ಮತ್ತು ಬಾಹ್ಯ ಸುರಕ್ಷತೆ, ರಕ್ಷಣೆ, ಅಣ್ವಸ್ತ್ರ, ಭಯೋತ್ಪಾದನೆ, ನೆರೆರಾಷ್ಟ್ರಗಳೊಡನೆ ಸಂಬಂಧ ಹೀಗೆ ಹಲವು ವಿಷಯಗಳ ಬಗ್ಗೆ ಸಂಶೋಧನೆ ಮತ್ತು ಬೋಧನೆಯ ಕೆಲಸವನ್ನು ಮಾಡುತ್ತಿದ್ದಾರೆ. ಭದ್ರತೆ, ರಾಷ್ಟ್ರೀಯತೆ, ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ವಿದ್ಯಾಮಾನಗಳಲ್ಲಿ ಇವರು ಪಾಂಡಿತ್ಯ ಹೊಂದಿದ್ದಾರೆ. ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಸಮ್ಮೇಳನ, ವೇದಿಕೆಗಳಲ್ಲಿ ಹತ್ತಾರು ಬಾರಿ ಗಂಭೀರ ವಿಷಯಗಳನ್ನೆತ್ತಿ ಭಾಷಣ ಮಾಡಿದ್ದಾರೆ. ವಿಶ್ವದ ಅನೇಕ ಪ್ರಸಿದ್ದ ವಿ.ವಿ.ಗಳಲ್ಲಿ ಹಾಗು ಮುಂತಾದ ಅಧ್ಯಯನ ಕೇಂದ್ರಗಳಲ್ಲಿ ಭದ್ರತೆ , ಸುರಕ್ಷತೆರ ಬಗ್ಗೆ ಉಪನ್ಯಾಸ ನೀಡಿದ್ದಾರೆ. ೨೦೧೪ ಮೇ ೩೦ನೇ ತಾರೀಖು ಇವರು ಭಾರತದ ೫ನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಧಿಕಾರ ಸ್ವೀಕರಿಸಿದರು ಭದ್ರತಾ ಸಲಹೆಗಾರರಾಗಿ ಆಯ್ಕೆಗೊಂಡ ಎರಡನೇ ಪೋಲೀಸ್ ಅಧಿಕಾರಿ ಇವರು. ಇತ್ತೀಚಿನ ಸುದ್ದಿಯ ಪ್ರಕಾರ ಇವರು ಭೂಗತ ಪತಾಕಿ ದಾವೂದ್ ಇಬ್ರಾಹಿಂನನ್ನು ಬೆನ್ನು ಹತ್ತಿದ್ದಾಗಿ ಮಾಹಿತಿ ಇದೆ. ಹಲವರ ಪ್ರಕಾರ ಅವನನ್ನು ಬಹುಶಃ ಹಿಡಿದಿಧ್ದರು. ಆದರೆ ಕೊನೆಗಳಿಗೆಯಲ್ಲಿ ಆತ ತಪ್ಪಿಸಿಕೊಂಡು ಬಿಟ್ಟ ಎನ್ನಲಾಗಿದೆ. ಹಾಗಾಗಿ ಅನೇಕ ಭೂಗತ ಪಾತಾಕಿಗಳ ಸದ್ದಡಿಗಿ ಹೋಗಿದೆ ಎನ್ನಲಾಗಿದೆ.

ಪ್ರಶಸ್ತಿ - ಬಿರುದು ಸನ್ಮಾನಗಳು ಬದಲಾಯಿಸಿ

 
ಡೋವಲ್ ಪೋಲಿಸ್ ಪುರಸ್ಕಾರ

ಡೋವಲ್ ಒಬ್ಬ ಪ್ರಭಾವಿ. ಇಂದಿರ ಗಾಂಧಿ, ಪಿ.ವಿ.ನರಸಿಂಹ ರಾವ್, ವಾಜಪೇಯಿ ಸರಕಾರಗಳಲ್ಲಿ ಪ್ರಧಾನಿಗಳಿಗೆ ಆತ್ಮೀಯರಾಗಿದ್ದರು. ಈಗ ಮೋದಿಯ ಬಲಗೈ ಬಂಟ ಇವರೇ. ಡೋವಲ್ ಪೋಲಿಸ್ ಮೆಡಲ್ ಗೆದ್ದಿರುವ ಅತಿ ಕಿರಿಯ. ಹದಿನೇಳಕ್ಕೂ ಹೆಚ್ಚು ವರ್ಷಗಳ ಕಠಿಣ, ಖಡಕ್ ಸೇವೆಗೆ ಕೊಡುವ ಈ ಪ್ರಶಸ್ತಿಯನ್ನು ಇವರು ಕೇವಲ ಆರೇ ವರ್ಷಕ್ಕೆ ಗಳಿಸಿದರು.[೯] ಇದು ಅವರ ತಾಕತ್ತು. ನೂರಾರು ಹಿರಿಯ ಅಧಿಕಾರಿಗಳು ಹತ್ತಾರು ವರ್ಷಗಳ ಕಾಲ ಮಾಡಲಾಗದನ್ನು ಡೋವಲ್ ಕೆಲವೇ ತಿಂಗಳಿನಲ್ಲಿ ಮಾಡಿ ಮುಗಿಸಿದ ಉದಾಹರಣೆಯೂ ಇದೆ. ಇವರಿಗೆ ರಾಷ್ಟ್ರಪತಿ ಪದಕವೂ ಸಂದಿದೆ. ೧೯೮೮ ರಲ್ಲಿ ಇವರಿಗೆ ಭಾರತ ಸರಕಾರ ಕೀರ್ತಿ ಚಕ್ರ ಕೊಟ್ಟು ಗೌರವಿಸಿತು. ಕೀರ್ತಿ ಚಕ್ರ ಪಡೆದ ಮೊದಲ ಹಾಗೂ ಏಕೈಕ ಪೋಲಿಸ್ ಅಧಿಕಾರಿ ಇವರು.[೪]

ಇವುಗಳನ್ನು ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. http://www.dailymail.co.uk/indiahome/indianews/article-2639927/Hero-spy-Ajit-Doval-named-Modis-security-advisor.html
  2. https://thediplomat.com/2014/06/modi-picks-internal-security-specialist-as-national-security-adviser/
  3. http://www.ndtv.com/india-news/former-intelligence-bureau-chief-ajit-doval-appointed-as-national-security-advisor-564725
  4. ೪.೦ ೪.೧ http://in.rediff.com/news/2006/apr/21inter.htm
  5. "ಆರ್ಕೈವ್ ನಕಲು". Archived from the original on 2014-05-31. Retrieved 2015-04-24.
  6. https://www.youtube.com/watch?v=2IjWF-8lTu8
  7. https://www.nytimes.com/1988/05/11/world/gandhi-under-pressure-to-oust-sikhs-from-temple.html
  8. http://www.rediff.com/news/2004/jun/03spec.htm
  9. "ಆರ್ಕೈವ್ ನಕಲು". Archived from the original on 2008-10-07. Retrieved 2015-04-24.