ಅಗ್ನಿಮಂಥ

ಸಣ್ಣ ಪೊದೆಸಸ್ಯ

ಅಗ್ನಿಮಂಥ ಒಂದು ಮಧ್ಯಮ ಗಾತ್ರದ ಪೊದೆಸಸ್ಯ. ಇದನ್ನು ಸಂಸ್ಕ್ರತದಲ್ಲಿ ಅಗ್ನಿಮಂಥ ಎಂದು ಕರೆಯುತ್ತಾರೆ. (Premna Serratifolia )ಪ್ರೇಮ್ನಾ ಸೆರಾಟಿಫೋಲಿಯಾ ಎಂಬುವುದು ಇದರ ವೈಜ್ಞಾನಿಕ ಹೆಸರು ಇದು ಮೇ ಮತ್ತು ನವೆಂಬರ್ ತಿಂಗಳ ನಡುವೆ ಹೂ ಮತ್ತು ಹಣ್ಣುಗಳನ್ನು ಉತ್ಪಾದಿಸುತ್ತದೆ. ಹೂಬಿಡುವ ಋತುವಿನಲ್ಲಿ ಇದು ಅಸಂಖ್ಯ ಚಿಟ್ಟೆಗಳು ಮತ್ತು ಜೇನ್ನೊಣಗಳನ್ನು ಆಕರ್ಷಿಸುತ್ತದೆ.[]

ಅಗ್ನಿಮಂಥ

ಬೆಳೆಯುವ ಪ್ರದೇಶ

ಬದಲಾಯಿಸಿ

ಇದು ಬಹುತೇಕವಾಗಿ ತೇವಾಂಶವುಳ್ಳ ಮಣ್ಣಿನಲ್ಲಿ ಬೆಳೆಯುತ್ತದೆ. ಕಡಲತೀರಗಳು ಮತ್ತು ಮ್ಯಾಂಗ್ರೋವ್ ಕಾಡುಗಳಲ್ಲಿಯೂ ಇವುಗಳ ಬೆಳವಣಿಗೆಯನ್ನು ಕಾಣಬಹುದು. ಅಗ್ನಿಮಂಥ ಮರವು ಫಿಲಿಪೈನ್ಸ್ನಲ್ಲಿ ವಿಶೇಷವಾಗಿ ಸೆಬು ದ್ವೀಪದ ಜಲವಾಸಿ ಅರಣ್ಯಗಳಲ್ಲಿ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ "ಕುಲಾವಿನ್" ಎಂದು ಕರೆಯುತ್ತಾರೆ.[]

 
ಅಗ್ನಿಮಂಥ ಸಸ್ಯದ ಹೂವು

ವಿವರಣೆ

ಬದಲಾಯಿಸಿ

ಅಗ್ನಿಮಂಥ ಮರಗಳು ೭ಮೀ ಎತ್ತರ ಬೆಳೆಯುತ್ತವೆ. ಎಲೆಗಳು ಸರಳವಾಗಿ ಅಭಿಮುಖವಾಗಿರುತ್ತವೆ. ಎಲೆಗಳು ೪-೧೪ಮೀ ತೆಳುವಾಗಿ ಮೃದುತ್ವದಿಂದ ಕೂಡಿರುತ್ತವೆ. ಬುಡ ಚೂಪಾಗಿರುತ್ತದೆ. ಹೂಗಳು ದ್ವಿಲಿಂಗಿ ಬಣ್ಣ ಹೊಂದಿರುತ್ತವೆ. ಸಾಮಾನ್ಯವಾಗಿ ಹಸಿರು-ಬಿಳುಪು ಬಣ್ಣ ಹೊಂದಿರುತ್ತವೆ. ಹೂವುಗಳಿಗೆ ಸಣ್ಣ ತೊಟ್ಟುಗಳಿರುತ್ತವೆ.[]

ಔಷಧೀಯ ಉಪಯೋಗಗಳು

ಬದಲಾಯಿಸಿ

ಸಸ್ಯವನ್ನು ಭಾರತೀಯ ಸಾಂಪ್ರದಾಯಿಕ ಔಷಧದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. 'ಅಗ್ನಿಮಂಥ' ದಶಮೂಲ ಸಸ್ಯಗಳ ಒಂದು ಪ್ರಮುಖ ಘಟಕಾಂಶವಾಗಿದೆ. ಅಗ್ನಿಮಂಥವನ್ನು ಎಲ್ಲಾ ವಿಧದ ಅಸ್ವಸ್ಥತೆಗಳ (ನರ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಸಿಸ್ಟಮ್ಗೆ ಸಂಬಂಧಿಸಿದ ರೋಗಗಳು), ಉರಿಯೂತದ ಕಾಯಿಲೆಗಳು, ನರಶೂಲೆ, ಸಂಧಿವಾತ, ರಕ್ತಹೀನತೆ, ಮಲಬದ್ಧತೆ ಹಾಗೂ ಸಾಮಾನ್ಯ ಶೀತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ, ಅಗ್ನಿಮಂಥದ ಬೇರುಗಳು ಮತ್ತು ಮೂಲ ತೊಗಟೆಯನ್ನು ಅಗ್ನಿಮಾಂದ್ಯ,ಅಜೀರ್ಣ ಹಾಗೂ ವಾತವಿಕಾರಗಳಲ್ಲಿ ಬಳಸುತ್ತಾರೆ mantha-uses-side-effects-dose-research/</ref>[]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2020-08-14. Retrieved 2018-08-23.
  2. http://www.planetayurveda.com/library/agnimantha-clerodendrum-phlomidis
  3. https://www.ncbi.nlm.nih.gov/pmc/articles/PMC3733204/
  4. https://www.athayurdhamah.com/about-ayurveda/agnimantha