ಅಗೇಟ್ ಬೆಣಚುಕಲ್ಲು (ಕ್ವಾರ್ಟ್ಸ್) ಸಮುದಾಯಕ್ಕೆ ಸೇರಿದ ಖನಿಜ. ರಾಸಾಯನಿಕ ಸಂಯೋಜನೆ ಸಿಲಿಕಾನ್‍ಡೈಆಕ್ಸೈಡ್ (SiO2). ಇದೊಂದು ಪ್ರಶಸ್ತ ಶಿಲೆ. ಇದನ್ನು ಪ್ರಥಮ ಬಾರಿಗೆ ಗ್ರೀಸ್ ದೇಶದ ಸಿಸಿಲಿಯಲ್ಲಿರುವ, ಅಕೇಡ್ಸ್ ಎಂಬ ನದಿ ತೀರದಲ್ಲಿ ಗುರುತಿಸಿದುದರಿಂದ ಇದಕ್ಕೆ ಅಗೇಟ್ ಎಂದು ಹೆಸರು ಬಂದಿದೆ. ಬಹಳ ಸೂಕ್ಷ್ಮಕಣಗಳಿಂದಾದ ಅದರಲ್ಲೂ ಹೆಚ್ಚಾಗಿ ಚಾಲ್ಸಿಡನಿ ಮತ್ತು ಓಸಾರ್ ಎಂಬ ಸಿಕತ ಪ್ರಭೇದಕಣಗಳಿಂದ ಕೂಡಿರುವ ಸಮೂಹ ಖನಿಜ. ಸಾಮಾನ್ಯವಾಗಿ ಈ ಖನಿಜದಲ್ಲಿ ಫಾಲ್ಸಿಡನಿ ಮತ್ತು ಓಪಾಲ್ ಎಂಬ ಇನ್ನೆರಡು ಸಿಕತಪ್ರಭೇದಗಳೂ ಸೂಕ್ಷ್ಮಕಣಮಯವಾದ ಬೆಣಚುಕಲ್ಲೂ ಸೇರಿರುತ್ತವೆ. ಇದರ ವಿಶೇಷವೆಂದರೆ ವಿವಿಧ ಛಾಯೆಗಳನ್ನೊಳಗೊಂಡ ಇದರಲ್ಲಿ ಅತೀ ಕಲಾತ್ಮಕವಾಗಿ ನೈಸರ್ಗಿಕವಾಗಿ ಮೂಡಿಬಂದಿರುವ ಎಳೆ ಅಥವಾ ಪಟ್ಟೆ ರಚನೆ ಎದ್ದು ಕಾಣುವುದು. ಇಂತಹ ಪಟ್ಟೆ ರಚನೆಯು ಬೇರಾವ ಪ್ರಶಸ್ತ ಖನಿಜಗಳಲ್ಲಿಯೂ ಕಾಣಬರುವುದಿಲ್ಲ. ಆದ್ದರಿಂದ ಇದನ್ನು ಎಳೆ ಅಥವಾ ಪಟ್ಟೆ ಸುಂದರ ಎಂದೂ ಕೂಡ ಬಣ್ಣಿಸಿರುವುದುಂಟು. ಈ ಪಟ್ಟೆಗಳು ಸಮಾನಾಂತರವಾಗಿಯೊ ಏಕಕೇಂದ್ರೀಯವಾಗಿಯೊ ಇರುತ್ತವೆ.

ಅಗೇಟ್
Banded agate (agate-like onyx); the specimen is 2.5 cm (1 inch) wide
General
ವರ್ಗಸ್ಫಟಿಕ
ರಾಸಾಯನಿಕ ಸೂತ್ರSiO2 silicon dioxide
Identification
ಬಣ್ಣWhite to grey, light blue, orange to red, black. banded
ಸ್ಫಟಿಕ ಗುಣಲಕ್ಷಣCryptocrystalline silica
ಸ್ಫಟಿಕ ಪದ್ಧತಿRhombohedral Microcrystalline
ಸೀಳುNone
ಬಿರಿತConchoidal with very sharp edges.
ಮೋಸ್ ಮಾಪಕ ಗಡಸುತನ6.5–7
ಹೊಳಪುWaxy
ಪುಡಿಗೆರೆಬಿಳಿ
ಪಾರದರ್ಶಕತೆTranslucent
ವಿಶಿಷ್ಟ ಗುರುತ್ವ2.58–2.64
ವಕ್ರೀಕರಣ ಸೂಚಿ1.530–1.540
ದ್ವಿವಕ್ರೀಭವನup to +0.004 (B-G)
ಬಹುವರ್ಣಕತೆAbsent

ಈ ರೀತಿಯ ವಿವಿಧ ವರ್ಣವೈಚಿತ್ರ್ಯ, ಪಟ್ಟೆಗಳ ರಚನೆ ಮತ್ತು ಕಾಠಿಣ್ಯ ಈ ಖನಿಜಕ್ಕೆ ಒಂದು ವೈಶಿಷ್ಟ್ಯವನ್ನು ತಂದುಕೊಟ್ಟಿವೆ. ಈ ರೀತಿ ರಚನೆಯಾಗುವಾಗ ಆಗುವ ರಾಸಾಯನಿಕ ವ್ಯತ್ಯಯವೇ ವಿವಿಧ ಬಣ್ಣಗಳಿಂದ ಕೂಡಿದ ಪಟ್ಟೆ ಅಥವಾ ಎಳೆ ರಚನೆಗಳಿಗೆ ಕಾರಣ. ಇದಕ್ಕೆ ಚೆನ್ನಾಗಿ ಮೆರುಗು ಕೊಡಬಹುದು. ಈ ಖನಿಜದಲ್ಲಿ ಸೀಳುಗಳಿಲ್ಲ (ಕ್ಲಿವೇಜ್). ಇದರ ಕಾಠಿಣ್ಯ ೭. ಸಾಪೇಕ್ಷಸಾಂದ್ರತೆ ೨.೬೫-೨.೬೬.

ಅಗೇಟ್ ಸಾಮಾನ್ಯವಾಗಿ ಅಗ್ನಿ ಶಿಲೆಗಳು. ಭೂಮಿಯ ಮೇಲ್ಪದರದಲ್ಲಿ ರೂಪುಗೊಳ್ಳುವಾಗ ಅವುಗಳಲ್ಲಿ ಉಂಟಾದ ರಂಧ್ರಗಳಲ್ಲಿ ಹೆಚ್ಚು ಸಿಲಿಕಾಂಶವುಳ್ಳ ದ್ರವ ರೂಪಕ ವಸ್ತು ಪಟ್ಟೆಯೋವಾದಿಯಲ್ಲಿ ರಂಧ್ರದ ಕೇಂದ್ರಬಿಂದುವಿನೆಡೆಗೆ ಘನೀಕರಣಗೊಳ್ಳುವಿಕೆಯಿಂದ ರಚನೆಯಾಗುತ್ತದೆ. ಅಗೇಟ್ ವಿವಿಧ ಗಾತ್ರಗಳಲ್ಲಿಯೂ ದೊರಕುತ್ತದೆ. ಅತೀ ದೊಡ್ಡ ಗಾತ್ರದ ಅಗೇಟ್ ಡಸ್ಸೆಲ್ಡಾರ್ಫ್ ನಗರದ ವಸ್ತುಪ್ರದರ್ಶನದಲ್ಲಿ 35 ಟನ್ ಭಾರದ ಜಿಯೋಡ್ ಎಂಬ ಹೆಸರಿನಲ್ಲಿ ಇಡಲಾಗಿತ್ತು.

ಅಗೇಟ್ ಉಳಿದ ಎಲ್ಲಾ ರೀತಿಯಲ್ಲೂ ಮತ್ತು ಲಕ್ಷಣಗಳಲ್ಲೂ ಬೆಣಚನ್ನು ಹೋಲುತ್ತದೆ. ಪ್ರಪಂಚದ ಎಲ್ಲಾ ಭಾಗಗಳಲ್ಲೂ ದೊರೆಯುತ್ತದೆ; ವಿಶೇಷವಾಗಿ ಅಮೆರಿಕದ ಪಶ್ಚಿಮ ರಾಜ್ಯಗಳು ಇದರ ಮೂಲ ಎಂದು ಗುರುತಿಸಿರುತ್ತೆ. ಭಾರತದಲ್ಲಿ ಡೆಕ್ಕನ್ ಬಸಾಲ್ಟ್ ಶಿಲಾ ಸಮೂಹದಲ್ಲಿ ಹೇರಳವಾಗಿ ದೊರಯುತ್ತದೆ.

ಉಪಯೋಗಗಳು

ಬದಲಾಯಿಸಿ

ಅಗೇಟ್‍ನಲ್ಲಿರುವ ಕಾಠಿಣ್ಯತೆ ಹಾಗೂ ನಿರೋಧಕತೆ ಗುಣಗಳಿಗಾಗಿಯೇ ಇದನ್ನು ಕುಟ್ಟಾಣಿಯಾಗಿ ಅರೆಯುವಿಕೆ ಮತ್ತು ರಾಸಾಯನಿಕ ಸಂಯೋಜನೆಗಾಗಿ ಪ್ರಯೋಗಾಲಯಗಳಲ್ಲಿ ಉಪಯೋಗದಲ್ಲಿದೆ. ಇದಲ್ಲದೆ, ಕೈಗಾರಿಕೆಗಳಲ್ಲಿ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿಯೂ ಅಗೇಟ್ ಅನ್ನು ಮೂಲ ವಸ್ತುವಾಗಿ ಬಳಸುತ್ತಾರೆ.

ಬಗೆಗಳು

ಬದಲಾಯಿಸಿ

ಅಗೇಟ್‍ನ ವಿವಿಧ ಬಗೆಗಳನ್ನು, ಅದರ ಆಕಾರ, ಬಣ್ಣ ಹಾಗೂ ಲಕ್ಷಣಗಳ ಆಧಾರದ ಮೇಲೆ ಗುರುತಿಸಲಾಗುವುದು. ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಮುಂದೆ ತಿಳಿಸಿದೆ. ಸೈಕ್ಲೋಪ್ಸ್ ಅಥವಾ ಮೆಕ್ಸಿಕನ್ ಅಗೇಟ್ = ಒಂಟಿ ಕಣ್ಣಿನ ಆಕಾರವುಳ್ಳದ್ದಾಗಿದೆ; ಮಾಸ್ ಅಥವಾ ಡೆಂಡ್ರಿಟಿಕ್ ಅಗೇಟ್ = ಪರ್ನ್ ರೂಪವುಳ್ಳದ್ದಾಗಿರುತ್ತದೆ. ಇದರ ವರ್ಣವಿನ್ಯಾಸಕ್ಕೆ ಸಾಮಾನ್ಯವಾಗಿ ಮ್ಯಾಂಗನೀಸ್ ಆಕ್ಸೈಡ್ ಪಾಚಿಯಂತೆ ಕಣ್ಣಿಗೆ ಕಾಣುವ ರೀತಿಯಲ್ಲಿ ಸೇರಿರುವುದೇ ಕಾರಣ. ಅನುಕೂಲ ಸನ್ನಿವೇಶದಲ್ಲಿ ಪ್ರಾಚೀನ ಕಾಲದ ಮರಗಳ ವಸ್ತುಗಳ ಸ್ಥಾನದಲ್ಲಿ ಇದು ನಿಕ್ಷೇಪಿತವಾಗಿದೆ.  ಈ ರಚನೆಯವನ್ನು ಸಿಲಿಸಿಫೈಡ್ ವುಡ್ ಅಥವಾ ಅಗೇಟೈಸ್ಡ್ ವುಡ್ ಎಂದು ಕರೆಯಲಾಗುತ್ತದೆ. ಈ ಖನಿಜವನ್ನು ಒಡವೆಗಳಲ್ಲಿ ಮಣಿಗಳ ರೂಪದಲ್ಲಿ ಉಪಯೋಗಿಸುವುದುಂಟು; ಟುರ್ರಿಟೆಲ್ಲಾ ಅಗೇಟ್ = ಟುರ್ರಿಟೆಲ್ಲಿ ಎಂಬ ಜೀವಾವಶೇಷದ ಆಕಾರದಲ್ಲಿರುತ್ತದೆ; ಪೆಟ್ರೋಸ್ಕಿ ಅಗೇಟ್= ಹವಳ ಅಗೇಟ್ ಆಗಿ ಪರಿವರ್ತಿತಗೊಂಡಿದೆ; ರೈನ್ ಬೋ ಅಗೇಟ್ = ಬೆಳಕಿನ ಕಿರಣವನ್ನು ಇಂತಹ ಅಗೇಟ್ ಮೂಲಕ ಪ್ರಸರಿಸಿದಾಗ ಕಾಮನಬಿಲ್ಲಿನ ಆಕಾರದಲ್ಲಿ ಬಣ್ಣಗಳು ಮೂಡುತ್ತವೆ. ಆದುದರಿಂದ, ಇದನ್ನು ರೈನ್ ಬೋ ಅಗೇಟ್ ಎಂಬುದಾಗಿ ಗುರುತಿಸಲಾಗಿದೆ.

ಉಲ್ಲೇಖನ

ಬದಲಾಯಿಸಿ

[] [] []

  1. https://www.crystalvaults.com/crystal-encyclopedia/agate
  2. https://www.energymuse.com/agate-meaning
  3. https://www.mindat.org/min-51.html

ಹೊರಗಿನ ಕೊಂಡಿಗಳು

ಬದಲಾಯಿಸಿ
  • "Agates", School of Natural Resources, University of Nebraska-Lincoln (retrieved 27 December 2014).
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಗೇಟ್&oldid=1151451" ಇಂದ ಪಡೆಯಲ್ಪಟ್ಟಿದೆ