ಮುಖ್ಯ ಮೆನು ತೆರೆ
Geologic provinces of the World (USGS)

ಅಗ್ನಿಶಿಲೆಗಳು ಭೂಮಿಯ ಹೊರಚಿಪ್ಪಿನ ಮಂದ ಸುಮಾರು 8-10 ಮೈ. ಗಳೆಂದು ನಿರ್ಧರಿಸಲಾಗಿದೆ. ಈ ಚಿಪ್ಪು ಗಡಸಾಗಿದ್ದು ನಾನಾ ಬಗೆಯ ಶಿಲೆಗಳಿಂದ ಕೂಡಿದೆ. ಉತ್ಪತ್ತಿ ವಿಧಾನದ ವರ್ಗೀಕರಣದಂತೆ ಇವನ್ನು 1. ಅಗ್ನಿಶಿಲೆಗಳು, 2. ಜಲಜಶಿಲೆಗಳು, 3. ರೂಪಾಂತರ ಶಿಲೆಗಳು, ಎಂದು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಬಹುಭಾಗ ಅಂದರೆ 95%ರಷ್ಟು ಅಗ್ನಿಶಿಲೆಗಳು. ಭೂಮಿಯ ಆಳದಲ್ಲಿ ಹುದುಗಿರುವ ಮ್ಯಾಗ್ಮ ಅಥವಾ ಮಾತೃಶಿಲಾದ್ರವದ ಆರುವಿಕೆಯಿಂದ ನೇರವಾಗಿ ಮೈದೋರಿದ ಶಿಲೆಗಳಿವು. ಇಂಗ್ಲಿಷ್‍ನಲ್ಲಿ ಇದನ್ನು ಇಗ್ನಿಯಸ್ ರಾಕ್ಸ್ (Igneous rock). ಮಾತೃದ್ರವ ಅಥವಾ ಮೂಲದ್ರವ ಉಂಟಾಗಲು ಹೆಚ್ಚಿನ ಶಾಖ ಅಗತ್ಯ. ಇದಕ್ಕೆ ಅಗ್ನಿಯೇ ಮೂಲಭೂತವಾದುದರಿಂದ ಇವನ್ನು ಅಗ್ನಿಶಿಲೆಗಳೆಂದು ಕರೆಯುತ್ತಾರೆ.

ಉತ್ಪತ್ತಿಸಂಪಾದಿಸಿ

ಶಿಲಾದ್ರವದಲ್ಲಿ ನಾನಾ ಬಗೆಯ ಸಿಲಿಕೇಟುಗಳು ಆವಿ ಮತ್ತು ಇತರ ಆಮ್ಲಗಳು ಅಲ್ಪ ಪ್ರಮಾಣದಲ್ಲಿ ಹುದುಗಿರುತ್ತವೆ. ಶಿಲಾದ್ರವ ಕ್ರಮೇಣ ಆರಿ ಹೆಪ್ಪುಗಟ್ಟುವಾಗ ಅನುಕ್ರಮವಾಗಿ ಸಿಲಿಕೇಟ್ ಖನಿಜಗಳು ರೂಪುಗೊಳ್ಳುತ್ತವೆ. ಈ ಕಾರ್ಯದಲ್ಲಿ ಆವಿ ಮತ್ತು ಆಮ್ಲಗಳು ಬಹು ಸಹಕಾರಿ. ಶಿಲಾದ್ರವ ಹೆಚ್ಚಿನ ಆಳದಲ್ಲಿ ಹುದುಗಿದ್ದರೂ ಭೂಮಿಯ ಮೇಲ್ಪದರಗಳಲ್ಲಿ ಆಗಾಗ ಉಂಟಾಗುವ ಒತ್ತಡದ ವ್ಯತ್ಯಾಸಗಳಿಂದ ಮೇಲಕ್ಕೆ ದಾರಿ ಮಾಡಿಕೊಂಡು ಬರುತ್ತದೆ. ಮೇಲೆ ಬಂದಂತೆಲ್ಲ ಅದರ ಉಷ್ಣತೆ ಕುಗ್ಗುತ್ತ ಹೋಗುತ್ತದೆ. ತಣ್ಣಗಿರುವ ಭೂಭಾಗದಲ್ಲಿ ಉಂಟಾದ, ಸೀಳು ಅಥವಾ ಬಿರುಕುಗಳಲ್ಲಿ ಶಿಲಾದ್ರವ ಪ್ರವಹಿಸುವಾಗ ಉಷ್ಣತೆ ಕಡಿಮೆಯಾಗಿ ದ್ರವ ಶಿಲೆಯಾಗಿ ಮಾರ್ಪಡುತ್ತದೆ.

ಅಗ್ನಿ ಶಿಲೆಯ ಉಗಮಸಂಪಾದಿಸಿ

 
ಅಗ್ನಿಶಿಲೆ ಉಗಮವಾಗುವ ರೀತಿ

ಹಲವು ಬಾರಿ ಅಂದರೆ ಒತ್ತಡ ಅತಿಯಾಗಿರುವ ಸನ್ನಿವೇಶದಲ್ಲಿ ಸೀಳುಗಳ ಮುಖಾಂತರ ಹೊರಹೊಮ್ಮಿ ಸುತ್ತಮುತ್ತಲ ನೆಲದಮೇಲೆ ಪ್ರವಾಹರೂಪದಲ್ಲಿ ಹರಿದು ಹೆಪ್ಪುಗಟ್ಟುತ್ತದೆ[೧]. ಇದೇ ಲಾವಾಪ್ರವಾಹ. ಈ ಪ್ರವಾಹ ಹಲವು ವೇಳೆ ಬಹು ವಿಸ್ತಾರವಾಗಿ ಹರಡಿ ಕ್ರಮೇಣ ಹೆಚ್ಚು ಭೂಪ್ರದೇಶವನ್ನು ಆವರಿಸಬಹುದು. ಅಲ್ಲದೆ ಈ ತೆರನಾದ ಚಟುವಟಿಕೆ ಸ್ವಲ್ಪಕಾಲ ಮುಂದುವರಿದಲ್ಲಿ ಲಾವಾಪ್ರಸ್ತರಗಳು ಒಂದರ ಮೇಲೊಂದು ವರಸೆ ವರಸೆಯಾಗಿ ಅಡಕವಾಗುತ್ತ ಹೋಗಬಹುದು. ಭಾರತದ ದಕ್ಷಿಣ ಪ್ರಸ್ಥಭೂಮಿಯಲ್ಲಿನ ಡೆಕ್ಕನ್ ಬೆಸಾಲ್ಟ್ ಎಂಬ ಅಗ್ನಿಶಿಲೆ ಇದಕ್ಕೆ ಅತ್ಯಂತ ಉತ್ತಮವಾದ ಉದಾಹರಣೆ. ಈ ಶಿಲೆಗಳು ಸುಮಾರು 2,00,000 ಚ.ಮೈ.ಗಳಷ್ಟು ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಹರಡಿದೆ. ಪುಣೆ, ಮುಂಬಯಿ, ಬೆಳಗಾವಿಗಳ ಸುತ್ತಮುತ್ತಲ ಪ್ರದೇಶದಲ್ಲಿ ಇಂಥ ಕರಿಕಲ್ಲಿನ ಬೆಟ್ಟ ಗುಡ್ಡಗಳನ್ನು ನೋಡಬಹುದು. ಕೆಲವು ವೇಳೆ ಈ ಬಗೆಯ ಶಿಲೆಗಳಲ್ಲಿ ಹುದುಗಿದ್ದ ಅನಿಲಗಳು ಹೊರಹೊಮ್ಮುವಾಗ ನಾನಾ ಗಾತ್ರದ, ನಾನಾ ಆಕಾರದ ರಂಧ್ರಗಳುಂಟಾಗುತ್ತವೆ. ಹಲವು ಸಂದರ್ಭಗಳಲ್ಲಿ ಮಾತೃಶಿಲಾದ್ರವದ ರಾಸಾಯನಿಕ ಸಂಯೋಜನೆಗೆ ಅನುಗುಣವಾಗಿ ಶಿಲೆಯ ಹೊರಮೈ ನುಣುಪಾಗಿದ್ದು ಹಗ್ಗದೋಪಾದಿಯಲ್ಲಿ ಕಂಡುಬರುತ್ತದೆ. ಅಥವಾ ಶಿಲೆಯ ಹೊರಮೈ ಛಿದ್ರಗೊಂಡು ಒರಟಾಗಿ ತೋರಬಹುದು. ಲಾವಾ ಪ್ರವಾಹಕ್ಕೆ ನೀರಿನ ಅಥವಾ ಶೈತ್ಯದ ಸಂಪರ್ಕ ಉಂಟಾದಾಗ ದಿಂಬಿನಾಕಾರವನ್ನು ಪಡೆಯುವುದುಂಟು. ಇಂದಿಗೂ ಈ ಶಿಲೆಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

 
ಲಾವಾರಸ ಉಕ್ಕುತ್ತಿರುವುದು
 
ಚೆನ್ನೈಯಲ್ಲಿ ಸಿಕ್ಕಿದ ಗ್ರಾನೈಟ್. ಇದುವೇ ಅಗ್ನಿಶಿಲೆ

ಉಲ್ಲೇಖಗಳುಸಂಪಾದಿಸಿ