ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ
ಅಕ್ಕಮಹಾದೇವಿ (ಹಳೆಯ ಪದನಾಮ: ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ) ಮಹಿಳಾ ವಿಶ್ವವಿದ್ಯಾಲಯವು 2003ರಲ್ಲಿ ವಿಜಯಪುರ ನಗರದಲ್ಲಿ ಸ್ಥಾಪಿತವಾಗಿದೆ. ಇದು ಮಹಿಳೆಯರಿಗೆ ಮಾತ್ರ ಶಿಕ್ಷಣ ನೀಡುವುದರೊಂದಿಗೆ ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾಗಿದೆ. ಉತ್ತರ ಕರ್ನಾಟಕ ಭಾಗದ ಮಹಿಳೆಯರಿಗೆ ಒಳ್ಳೆಯ ಶಿಕ್ಷಣ ಒದಗಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳಿವೆ. ಅಥಣಿ ರಸ್ತೆಯಲ್ಲಿ 100 ಎಕರೆ ಕ್ಯಾಂಪಸ್ ಹೊಂದಿದೆ. ಮಹಿಳೆಯರನ್ನು ಶಿಕ್ಷಣದಿಂದ ಸಶಕ್ತರನ್ನಾಗಿಸುವ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಧ್ಯೇಯದೊಂದಿಗೆ ಇದರಲ್ಲಿ ಪ್ರಸ್ತುತ ೧೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿವಿಧ ಭಾಗಗಳ ಮಹಿಳಾ ವಿದ್ಯಾರ್ಥಿನಿಯರು ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ | |
---|---|
ಸ್ಥಾಪನೆ | 2003 |
ಪ್ರಕಾರ | ಸಾರ್ವಜನಿಕ |
ಆವರಣ | ತೊರವಿ, ವಿಜಯಪುರ |
ಕೇವಲ ಮಹಿಳೆಯರಿಗಾಗಿಯೇ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ೨೦೦೩ರಲ್ಲಿ ವಿಜಯಪುರದಲ್ಲಿ (ಹಿಂದಿನ ಬಿಜಾಪುರ) ಆರಂಭಿಸಲಾಯಿತು. ಈ ವಿಶ್ವವಿದ್ಯಾನಿಲಯವನ್ನು ಮೊದಲು ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ (ಯುಜಿಸಿ) ಕಾಯ್ದೆಯ ೨(ಎಫ್) ಮತ್ತು ೧೨(ಬಿ) ಅಡಿಯಲ್ಲಿ ಮಾನ್ಯತೆ ದೊರೆತಿದೆ.
ಪುನರ ನಾಮಕರಣ
ಬದಲಾಯಿಸಿವಿಜಯಪುರ ನಗರದಲ್ಲಿ 2003ರಲ್ಲಿ ಸ್ಥಾಪನೆಯಾದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಜೂನ್ 11, 2017ರಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವೆಂದು ಪುನರ ನಾಮಕರಣ ಮಾಡಲಾಗಿದೆ. ಇದು ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯವಾಗಿದ್ದು, ಮಹಿಳೆಯರ ಶಿಕ್ಷಣಕ್ಕಾಗಿಯೇ ಪ್ರತ್ಯೇಕವಾಗಿ ಮೀಸಲಾಗಿದೆ. ಇದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ 2 (ಎಫ್) ಹಾಗೂ 12 (ಬಿ) ಅಧಿನಿಯಮಗಳಡಿಯಲ್ಲಿ ಮಾನ್ಯತೆ ಪಡೆÀದುಕೊಂಡಿದೆ. ಈಗಾಗಲೇ ಮಂಡ್ಯ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳನ್ನು ಆರಂಭಿಸಲಾಗಿದ್ದು 2017-18ನೆಯ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗಿದೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನ್ಯಾಕ್ನಿಂದ ‘ಬಿ’ ಗ್ರೇಡ್ ಮಾನ್ಯತೆ ದೊರೆತಿದ್ದು ಈ ವರ್ಷ ಕೆಎಸ್ಯುಆರ್ಎಫ್ನಿಂದ ತ್ರೀಸ್ಟಾರ್ ದೊರೆತಿದೆ. ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಒಟ್ಟು 148 ಮಹಾವಿದ್ಯಾಲಯಗಳಿದ್ದು ಈ ಮಹಾವಿದ್ಯಾನಿಲಯಗಳಲ್ಲಿ ಕಲಾ, ವ್ಯವಹಾರಿಕ ಆಡಳಿತ, ಗಣಕ ಯಂತ್ರಗಳ ಅನ್ವಯಿಕ, ವಾಣಿಜ್ಯ, ಶಿಕ್ಷಣ, ವಿನ್ಯಾಸ ತಂತ್ರಜ್ಞಾನ, ಗೃಹ ವಿಜ್ಞಾನ, ದೈಹಿಕ ಶಿಕ್ಷಣ, ವಿಜ್ಞಾನ ಮತ್ತು ಸಮಾಜ ಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮುಂತಾದ ಪದವಿ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಮಹಿಳಾ ವಿಶ್ವವಿದ್ಯಾಲಯವು ಕಲಾ, ವಾಣಿಜ್ಯ ಮತ್ತು ನಿರ್ವಹಣೆ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಿಕ್ಷಣ ನಿಕಾಯಗಳಡಿಯಲ್ಲಿ 32 ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ನಡೆಸುತ್ತಿದೆ.
ದೃಷ್ಟಿಕೋನ, ಘೋಷಣೆ ಮತ್ತು ಧೇಯೋದ್ದೇಶಗಳು
ಬದಲಾಯಿಸಿ- ದೃಷ್ಟಿಕೋನ
ಶಿಕ್ಷಣದ ಮೂಲಕ ಮಹಿಳಾ ಸಬಲೀಕರಣ
- ಘೋಷಣೆ
- ಗುಣಾತ್ಮಕ ಶಿಕ್ಷಣ ನೀಡುವುದು ಹಾಗೂ ವೃತ್ತಿಪರ ಮತ್ತು ವೃತ್ತಿಮೂಲ ಕೌಶಲ್ಯಗಳನ್ನು ಬೆಳಸುವುದರೊಂದಿಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೇ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಅವರಲ್ಲಿ ಬೆಳೆಸುವುದು.
- ವ್ಯಕ್ತಿತ್ವ ವಿಕಾಸ ಹಾಗೂ ಮುಂದಾಳತ್ವದ ಗುಣಗಳನ್ನು ಪ್ರೋತ್ಸಾಹಿಸುವ ಮೂಲಕ ಸಮಾಜದ ಬಗ್ಗೆ ಸಮತೋಲಿತ ದೃಷ್ಟಿಕೋನವನ್ನು ಬೆಳೆಸುವುದು.
- ಮಹಿಳೆಯರು ತಮ್ಮ ಜ್ಞಾನವನ್ನು ಸಮೃದ್ಧಿಗೊಳಿಸಿಕೊಳ್ಳುವದರಲ್ಲಿ ಮತ್ತು ಜ್ಞಾನಶಕ್ತಿಯ ಲಾಭದ ಫಲಾನುಭವಿಯಾಗುವದರಲ್ಲಿ ಸಹಾಯ ಮಾಡುವದು.
- ಧ್ಯೇಯಗಳು
- ಸಾಂಸ್ಕøತಿಕ ಪರಂಪರೆಯ ಶ್ರೀಮಂತಿಕೆಯನ್ನು, ಆತ್ಮಗೌರವವನ್ನು ವೃತ್ತಿ ಕೌಶಲ್ಯಗಳ ಮೌಲ್ಯಗಳನ್ನು ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಹಾಗೂ ಸಾಂಸ್ಕøತಿಕ ಹಂತಗಳಲ್ಲಿ ಬೆಳೆಸುವದರ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಅವರು ವೈಯಕ್ತಿಕ ಹಾಗೂ ವೃತ್ತಿದಾಯಕ ಸಂತೃಪ್ತಿ ಜೀವನವನ್ನು ನಡೆಸಲು ಸಹಕಾರಿಯಾಗುವ ಮೌಲಿಕ ಶಿಕ್ಷಣದ ಸುರಕ್ಷತೆ ನೀಡುವುದು.
- ಮಹಿಳೆಯು ತನಗೆ, ತನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಮಹತ್ವವೆನಿಸಿದ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ಸಮಾನ ಪಾತ್ರ ವಹಿಸುವಂತೆ ಸಜ್ಜುಗೊಳಿಸುವುದು.
- ವಿಜ್ಞಾನ, ಸಾಮಾಜ ವಿಜ್ಞಾನ, ಕಲೆ ಮತ್ತು ಮಾನವ ಶಾಸ್ತ್ರಗಳ ಕುರಿತು ಅದರಲ್ಲೂ ವಿಶೇಷವಾಗಿ ಪ್ರಾದೇಶಿಕ ಮಹತ್ವವನ್ನು ಪಡೆದಿರುವ ವಿಷಯಗಳ ಬಗ್ಗೆ ಪ್ರಗತಿಪರ ಸಂಶೋಧನೆ ನಡೆಸಲು ಪ್ರೋತ್ಸಾಹ ನೀಡುವುದು.
- ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣ ಮತ್ತು ತರಬೇತಿ ಅಲ್ಲದೆ ವಿಸ್ತರಣಾ ಕಾರ್ಯಕ್ರಮಗಳ ಮೂಲಕ ಮಹಿಳೆಯರಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆಯನ್ನು ತರಲು ಸಹಾಯ ಮಾಡುವುದು, ಜೊತೆಗೆ ಸಮೂಹ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸಲು ಅನುಕೂಲ ಮಾಡಿಕೊಡುವುದು.
- ಉದ್ದೇಶಗಳು
- ಲಿಂಗ ತಾರತಮ್ಯ ನಿವಾರಿಸುವದು.
- ಗ್ರಾಮೀಣ ಮತ್ತು ಹಿಂದುಳಿದ ಮಹಿಳೆಯರನ್ನು ಮುಖ್ಯವಾಹಿನಿಗೆ ಸೇರುವಂತೆ ಸಹಾಯ ಮಾಡುವುದು.
- ಸಮಾಜದ ಎಲ್ಲ ಸ್ತರಗಳಲ್ಲಿ ಮಹಿಳೆಯರು ಪರಿಣಾಮಕಾರಿ ಮತ್ತು ರಚನಾತ್ಮಕ ಪಾತ್ರ ನಿರ್ವಹಿಸುವಂತೆ ಸಮರ್ಥರಾಗಲು ಪ್ರೇರಣೆ ನೀಡುವುದು.
ವಿಭಾಗಗಳು
ಬದಲಾಯಿಸಿ- ಕಲಾ ವಿಭಾಗ
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮತ್ತು ಪ್ರದರ್ಶನ ಕಲೆಗಳು.
- ಸಮಾಜ ವಿಜ್ಞಾನ ವಿಭಾಗ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಾಮಾಜಿಕ ಕಾರ್ಯ, ಮಹಿಳಾ ಅಧ್ಯಯನ, ಇತಿಹಾಸ, ರಾಜ್ಯಶಾಸ್ತ್ರ.
- ವಿಜ್ಞಾನ ವಿಭಾಗ
ಜೈವಿಕಮಾಹಿತಿವಿಜ್ಞಾನ, ಜೈವಿಕ ತಂತ್ರಜ್ಞಾನ, ಔಷಧೀಯ ರಸಾಯನಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಆಹಾರ ಸಂಸ್ಕರಣೆ ಮತ್ತು ಪುಷ್ಟಿವಿಜ್ಞಾನ.
- ವಾಣಿಜ್ಯ ಮತ್ತು ವ್ಯವಹಾರಾಡಳಿತ ಅಧ್ಯಯನ ವಿಭಾಗ
ವಾಣಿಜ್ಯ ಮತ್ತು ವ್ಯವಹಾರಾಡಳಿತ
- ಶಿಕ್ಷಣ ವಿಭಾಗ
ಶಿಕ್ಷಣ ಮತ್ತು ದೈಹಿಕ ಶಿಕ್ಷಣ
- ಪಿ.ಎಚ್.ಡಿ.
ಈ ವಿಷಯಗಳಲ್ಲಿ ಪಿಎಚ್.ಡಿ. ಪದವಿಗಾಗಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ, ಇಂಗ್ಲಿಷ್, ಮಹಿಳಾ ಅಧ್ಯಯನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಜೈವಿಕ ಮಾಹಿತಿವಿಜ್ಞಾನ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಔಷಧೀಯ ರಸಾಯನಶಾಸ್ತ್ರ, ವ್ಯವಹಾರಾಡಳಿತ (ಎಂಬಿಎ), ಎಂ.ಕಾಮ್, ಶಿಕ್ಷಣ ಮತ್ತು ದೈಹಿಕ ಶಿಕ್ಷಣ.
- ಎಂ.ಫಿಲ್
ಈ ವಿಷಯಗಳಲ್ಲಿ ಎಂ.ಫಿಲ್. ಪದವಿಗಾಗಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ, ಇಂಗ್ಲಿಷ್, ಮಹಿಳಾ ಅಧ್ಯಯನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಔಷಧೀಯ ರಸಾಯನಶಾಸ್ತ್ರ, ವ್ಯವಹಾರಾಡಳಿತ ಅಧ್ಯಯನ (ಎಂ.ಬಿ.ಎ.), ಎಂ.ಕಾಮ್, ಶಿಕ್ಷಣ ಮತ್ತು ದೈಹಿಕ ಶಿಕ್ಷಣ.
ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿರುವ ರೀತಿಯಲ್ಲಿ ಪರಿಸರಪ್ರೇಮಿ ವಾಸ್ತುಶಿಲ್ಪ ಮತ್ತು ಭೂದೃಶ್ಯಗಳನ್ನ ವಿನ್ಯಾಸಗೊಳಿಸಲಾಗಿದೆ. ವಿಶ್ವವಿದ್ಯಾನಿಲಯವು ಸೆಮಿಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಆಂತರಿಕ ಮತ್ತು ಸತತ ಮೌಲ್ಯಮಾಪನ ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿವೇತನ ನೀಡುವ ಉದ್ದೇಶ ಹೊಂದಿದೆ. ಎಂ.ಫಿಲ್-ಪಿಎಚ್.ಡಿ. ಅಧ್ಯಯನ ನಡೆಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹಲವು ಕೋರ್ಸುಗಳ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಅತ್ಯಲ್ಪ ಪ್ರಮಾಣದ ಶುಲ್ಕ ನಿಗದಿ ಪಡಿಸಲಾಗಿದೆ.
ವಿಶ್ವವಿದ್ಯಾನಿಲಯವು ಅತ್ಯಂತ ವೇಗವಾದ ಮತ್ತು ಸತತ ಅಂರ್ಜಾಲ ವ್ಯವಸ್ಥೆ ಒದಗಿಸುವುದಕ್ಕೆ 1 ಜಿಬಿಪಿಎಸ್ ಲೀಸ್ ಲೈನ್ ಅಳವಡಿಸಿದೆ. ಸಂಶೋಧನೆಗೆ ಪೂರಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸುಸಜ್ಜಿತ ಮತ್ತು ಅತ್ಯಾಧುನಿಕ ಪ್ರಯೋಗಾಲಯಗಳ ವ್ಯವಸ್ಥೆ, ಗಣಕಯಂತ್ರ ಮತ್ತು ಗ್ರಂಥಾಲಯಗಳಂತಹ ಸೌಲಭ್ಯ ಕಲ್ಪಿಸಲಾಗಿದೆ. ವಿಶ್ವವಿದ್ಯಾನಿಲಯದ ಆವರಣವು ‘ಹಸಿರು ಆವರಣ’ ಪರಿಕಲ್ಪನೆಗೆ ಅನುಗುಣವಾಗಿರುವಂತೆ ಎಲ್ಲ ಕಟ್ಟಡಗಳನ್ನು ಪರಿಸರಸ್ನೇಹಿಗಳಾಗಿ ನಿರ್ಮಿಸಲಾಗಿದೆ. ಮುಕ್ತ ಶೈಕ್ಷಣಿಕ ವಾತಾವರಣದಲ್ಲಿ ಕಲಿಯುವ, ಅಧ್ಯಯನ ನಡೆಸುವ ಅನನ್ಯ ಅವಕಾಶವನ್ನು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಕಲ್ಪಿಸಿದೆ. ಬೋಧಕ ಸಿಬ್ಬಂದಿಗೆ ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ನನಸಾಗಿಸಲು ಅವಕಾಶ ಕಲ್ಪಿಸಲಾಗಿದೆ. ಬೋಧಕ ಸಿಬ್ಬಂದಿಯನ್ನು ಆರಂಭದಿಂದಲೂ ಸಂಸ್ಥೆಯ ನಿರ್ಮಾಣದಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ.[೧]
ಪ್ರಾದೇಶಿಕ ಕೇಂದ್ರಗಳು
ಬದಲಾಯಿಸಿ- ಮಂಡ್ಯ
ವಿಶ್ವವಿದ್ಯಾನಿಲಯವು ೨೦೧೪ನೇ ವರ್ಷದಲ್ಲಿ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಿತು. ಕೇಂದ್ರವು ಮಂಡ್ಯ ಜಿಲ್ಲಾ ಕೇಂದ್ರದಿಂದ ೧೦ ಕಿ.ಮೀ. ದೂರದಲ್ಲಿ ಮಂಡ್ಯ-ನಾಗಮಂಗಲ ರಸ್ತೆಯಲ್ಲಿದೆ. ಮಹಿಳೆಯರಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸಬಲೀಕರಣ ಮಾಡುವ ಉದ್ದೇಶದೊಂದಿಗೆ ಈ ಪ್ರದೇಶದ ಗ್ರಾಮೀಣ ಮಹಿಳೆಯರ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಕೇಂದ್ರವು ಹೊಂದಿದೆ.
- ವಿಳಾಸ
ವಿಶ್ವವಿದ್ಯಾನಿಲಯದ ಆವರಣ, ಬಿ. ಹೊಸೂರು ಕಾಲೋನಿ, ಕೆರಗೋಡು ಹೋಬಳಿ, ಬಿ.ಹೊಸೂರು ಅಂಚೆ, ತಾಲ್ಲೂಕು,ಜಿಲ್ಲೆ: ಮಂಡ್ಯ.
- ಕೇಂದ್ರದಲ್ಲಿರುವ ಕೋರ್ಸ್ಗಳು
ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಬಲಗೊಳಿಸುವ, ಸಂವರ್ಧನೆ ಮಾಡುವ ಪ್ರಮುಖ ಗುರಿಯೊಂದಿಗೆ ಆರಂಭವಾಗಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ದಕ್ಷಿಣ ಕರ್ನಾಟಕದಲ್ಲಿ ಆರಂಭಿಸಲಾದ ಪ್ರಾದೇಶಿಕ ಕೇಂದ್ರದಲ್ಲಿ ಸದ್ಯ ಈ ಕೆಳಕಂಡ ಐದು ವಿವಿಧ ಕೋರ್ಸುಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡಲಾಗುತ್ತಿದೆ. ಅವು ಇಂತಿವೆ-
೧) ಎಂ.ಎ. (ಕನ್ನಡ)
೨) ಎಂ.ಎ. (ಇಂಗ್ಲಿಷ್)
೩) ಎಂ.ಎಸ್ಸಿ (ಗಣಿತ)
೪) ಎಂ.ಎ. (ಮಹಿಳಾ ಅಧ್ಯಯನ)
೫)ಎಂ. ಕಾಮ್
- ಎಲ್ಲ ವಿಭಾಗಗಳಲ್ಲಿಯೂ ಯುವ, ಪ್ರತಿಭಾವಂತ ಮತ್ತು ಸಮರ್ಪಿಸಿಕೊಂಡ ಪರಿಣಿತ ಶಿಕ್ಷಕರಿದ್ದಾರೆ. ಅವರು ಪ್ರಾದೇಶಿಕ ನಿದೇರ್ಶಕರ ಮಾರ್ಗದರ್ಶನದಲ್ಲಿ ಕೇಂದ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
- ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರಾದೇಶಿಕ ಕೇಂದ್ರಕ್ಕೆ ರಾಜ್ಯ ಸಾರಿಗೆ ಸಂಸ್ಥೆಯು ಉತ್ತಮ ಸೌಲಭ್ಯ ಒದಗಿಸಿದೆ.
- ಕೇಂದ್ರವು ಶೈಶವಾವಸ್ಥೆಯಲ್ಲಿದ್ದರೂ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳ ಮತ್ತು ಕುಲಸಚಿವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಭರವಸೆ ಮೂಡಿಸುವ ರೀತಿಯಲ್ಲಿ ಆರಂಭವಾಗಿ, ಅತ್ಯುತ್ತಮ ರೀತಿಯಲ್ಲಿ ಬೆಳೆಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯ ತೋರುತ್ತಿದೆ.
- ಮುನ್ನೋಟ
- ಶಿಕ್ಷಣದ ಮೂಲಕ ಸಮಾಜವನ್ನು ಸಬಲೀಕರಣಗೊಳಿಸುವ ಗುರಿ ಹೊಂದಲಾಗಿದೆ:
- ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ವೃತ್ತಿಪರ ಹಾಗೂ ಔದ್ಯೋಗಿಕ ಕೌಶಲ್ಯ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಅಗತ್ಯಕ್ಕೆ ಅನುಗುಣವಾಗಿರುವ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸುವುದು.
- ಸಮಾಜದೆಡೆಗೆ ಸಮತೂಕದ ದೂರದೃಷ್ಟಿ ಅಳವಡಿಸಿಕೊಳ್ಳುವದರೊಂದಿಗೆ ವ್ಯಕ್ತಿತ್ವ ನಿರ್ಮಾಣ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುವುದು.
- ಮಹಿಳೆಯರ ಜ್ಞಾನವನ್ನು ಉತ್ಕೃಷ್ಟಗೊಳಿಸಲು ಮತ್ತು ಜ್ಞಾನಶಕ್ತಿಯ ಲಾಭ ಪಡೆಯಲು ಸಹಾಯ ಮಾಡುವುದು.
- ಧ್ಯೇಯೋದ್ದೇಶಗಳು
- ವ್ಯಕ್ತಿಗತವಾಗಿ ಮತ್ತು ವೃತ್ತಿಪರವಾಗಿ ನೇತೃತ್ವ ವಹಿಸಲು ಅನುವಾಗುವಂತೆ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡ ಸಮಗ್ರ ಶಿಕ್ಷಣ ಅಳವಡಿಸಿಕೊಳ್ಳುವುದು, ಪ್ರಾಮಾಣಿಕತೆಯ ಪ್ರಮುಖ ಮೌಲ್ಯ, ವೃತ್ತಿಪರ ಕೌಶಲ್ಯ, ಸಾಮಾಜಿಕ- ಆರ್ಥಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳ ಬಗ್ಗೆ ಎಲ್ಲ ಹಂತಗಳಲ್ಲಿ ಅರಿವು ಮೂಡಿಸುವುದು.
- ಸ್ವಂತ, ಕುಟುಂಬದ ಮತ್ತು ಸಮಾಜದ ಪ್ರಮುಖ ನಿರ್ಣಯ ಕೈಗೊಳ್ಳುವಲ್ಲಿ ಸಮಾನ ಹೊಣೆಗಾರಿಕೆ ವಹಿಸಿಕೊಳ್ಳಲು ಅಗತ್ಯವಿರುವ ಗುಣಗಳನ್ನು ಮಹಿಳೆಯರಲ್ಲಿ ಬೆಳೆಸುವುದು.
- ವಿಜ್ಞಾನ, ಸಮಾಜ ವಿಜ್ಞಾನ, ಕಲೆ ಮತ್ತು ಮಾನವಿಕಗಳಲ್ಲಿ ಪ್ರಾದೇಶಿಕ ಮಹತ್ವದ ವಿಷಯ ವಿಷಯಗಳ ಅತ್ಯಾಧುನಿಕ ಸಂಶೋಧನೆಯನ್ನು ಪ್ರೋತ್ಸಾಹಿಸುವುದು.
- ಮಹಿಳೆಯರ ಆರ್ಥಿಕ-ಸಾಮಾಜಿಕ ಸುಧಾರಣೆಗಾಗಿ ನೆರವು ನೀಡುವುದಕ್ಕಾಗಿ ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಮತ್ತು ತರಬೇತಿ, ವಿಸ್ತರಣಾ ಚಟುವಟಿಕೆ, ಪ್ರಸಾರಾಂಗದ ಮೂಲಕ ಸಾಮುದಾಯಿಕ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಯೋಜನೆಗಳನ್ನು ಬಲಪಡಿಸಲು ಅನುಕೂಲ ಕಲ್ಪಿಸುವುದು.
- ಗುರಿ
- ಲಿಂಗ ತಾರತಮ್ಯದ ಅಂತರವನ್ನು ಕಡಿಮೆ ಮಾಡುವುದು
- ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ಸಮುದಾಯ ಮತ್ತು ಮಹಿಳೆಯರು ಮುಖ್ಯವಾಹಿನಿಗೆ ಸೇರಿಕೊಳ್ಳಲು ಅನುವಾಗುವಂತೆ ಮಾಡುವುದಕ್ಕಾಗಿ ಸಮುದಾಯಗಳನ್ನು ಪ್ರೇರೇಪಿಸುವುದು. ಸಮಾಜದ ಎಲ್ಲ ಹಂತಗಳಲ್ಲಿಯೂ ಮಹಿಳೆಯರು ರಚನಾತ್ಮಕ ಮತ್ತು ಪರಿಣಾಮಕಾರಿ ಪಾತ್ರ ನಿರ್ವಹಿಸುವ
- ಸಿಂಧನೂರು
ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ (ಯುಜಿಸಿ) ಕಾಯ್ದೆಯ ೨(ಎಫ್) ಮತ್ತು ೧೨(ಬಿ) ಅಡಿಯಲ್ಲಿ ಮಾನ್ಯತೆ ದೊರೆತಿದೆ. ವಿಶ್ವವಿದ್ಯಾನಿಲಯವು ೨೦೧೪ನೇ ವರ್ಷದಲ್ಲಿ ಸಿಂಧನೂರಿನಲ್ಲಿ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಿತು.
ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಬಲಗೊಳಿಸುವ, ಸಂವರ್ಧನೆ ಮಾಡುವ ಪ್ರಾಥಮಿಕ ಗುರಿಯೊಂದಿಗೆ ಆರಂಭವಾಗಿರುವ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರಾದೇಶಿಕ ಕೇಂದ್ರವನ್ನು ಆರಂಭಿಸಿದೆ. ಪ್ರಾದೇಶಿಕ ಕೇಂದ್ರದಲ್ಲಿ ಸದ್ಯ ಈ ಕೆಳಕಂಡ ನಾಲ್ಕು ವಿವಿಧ ಕೋರ್ಸುಗಳಲ್ಲಿ ಸ್ನಾತಕೋತ್ತರ ಶಿಕ್ಷಣ ನೀಡಲಾಗುತ್ತಿದೆ. ಅವು ಇಂತಿವೆ-
೧) ಕಂಪ್ಯೂಟರ್ ವಿಜ್ಞಾನ
೨) ಗಣಿತ
೩) ಇಂಗ್ಲಿಷ್
೪) ಎಂ.ಕಾಮ್
- ವಿಳಾಸ
ಸಿಂಧನೂರು ಸ್ನಾತಕೋತ್ತರ ಕೇಂದ್ರ ಜಿಲ್ಲಾ ರಾಯಚೂರು, ಕರ್ನಾಟಕ.
ಎಲ್ಲ ವಿಭಾಗಗಳಲ್ಲಿಯೂ ಯುವ, ಪ್ರತಿಭಾವಂತ ಮತ್ತು ಸಮರ್ಪಿಸಿಕೊಂಡ ಪರಿಣಿತ ಶಿಕ್ಷಕರಿದ್ದಾರೆ. ಅವರು ಪ್ರಾದೇಶಿಕ ನಿದೇರ್ಶಕರ ಮಾರ್ಗದರ್ಶನದಲ್ಲಿ ಕೇಂದ್ರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ.
ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರಾದೇಶಿಕ ಕೇಂದ್ರಕ್ಕೆ ರಾಜ್ಯ ಸಾರಿಗೆ ಸಂಸ್ಥೆಯು ಉತ್ತಮ ಸೌಲಭ್ಯ ಒದಗಿಸಿದೆ.
ಕೇಂದ್ರವು ಶೈಶವಾವಸ್ಥೆಯಲ್ಲಿದ್ದರೂ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳ ಮತ್ತು ಕುಲಸಚಿವರ ದೂರದೃಷ್ಟಿ ಮತ್ತು ನಾಯಕತ್ವದಿಂದಾಗಿ ಭರವಸೆ ಮೂಡಿಸುವ ರೀತಿಯಲ್ಲಿ ಆರಂಭವಾಗಿ, ಅತ್ಯುತ್ತಮ ರೀತಿಯಲ್ಲಿ ಬೆಳೆಯುವ ಮತ್ತು ಅಭಿವೃದ್ಧಿ ಹೊಂದುವ ಸಾಮರ್ಥ್ಯ ತೋರುತ್ತಿದೆ.
- ಉಡುಗಣಿ
ಹನ್ನೆರಡನೆಯ ಶತಮಾನದ ಆಧ್ಯಾತ್ಮಿಕ ವ್ಯಕ್ತಿತ್ವದ ಕವಯಿತ್ರಿ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಚನಕಾರ್ತಿ ಅಕ್ಕಮಹಾದೇವಿಯ ಜನ್ಮಸ್ಥಳ ಉಡುತಡಿ. ಅಕ್ಕಮಹಾದೇವಿಯು ಕರ್ನಾಟಕದ ಸ್ತ್ರೀವಾದಿ ತತ್ವಗಳಿಗೆ ಮಾದರಿಯಾಗಿದ್ದಾಳೆ. ಶಿಕ್ಷಣ, ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಸಂಶೋಧನಾ ಕೋರ್ಸ್ಗಳ ಮೂಲಕ ಮಹಿಳೆಯರ ಸಬಲೀಕರಣ.
- ವಿಳಾಸ
ಅಕ್ಕಮಹಾದೇವಿ ಸಂಶೋಧನಾ, ಕೌಶಲ್ಯ ಅಭಿವೃದ್ಧಿ ಮತ್ತು ವಿಸ್ತರಣಾ ಕೇಂದ್ರ- ಉಡುತಡಿ, ಉಡುಗಣಿ ಗ್ರಾಮ, ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಸಂಪರ್ಕ
ಬದಲಾಯಿಸಿಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ (ಹಿಂದಿನ ಪದನಾಮ : ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ) ಜ್ಞಾನಶಕ್ತಿ ಆವರಣ, ತೊರವಿ, ವಿಜಯಪುರ, ಕರ್ನಾಟಕ - 586108
ಉಲ್ಲೇಖಗಳು
ಬದಲಾಯಿಸಿ