ಅಂಬಿಕಾ ಚಕ್ರವರ್ತಿ

ಬೆಂಗಾಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯ ಕಾರ್ಯಕರ್ತ ಮತ್ತು ಕ್ರಾಂತಿಕಾರಿ. ನಂತರ, ಅವರು ಭಾರತದ ಕಮ್ಯುನಿಸ್ಟ್ ಪ

ಅಂಬಿಕಾ ಚಕ್ರವರ್ತಿ (ಜನವರಿ ೧೮೯೨ - ೬ ಮಾರ್ಚ್ ೧೯೬೨) ಭಾರತೀಯ ಸ್ವಾತಂತ್ರ್ಯ ಚಳವಳಿಯ ಹೋರಾಟಗಾರ ಮತ್ತು ಕ್ರಾಂತಿಕಾರಿ. [] ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕರಾಗಿದ್ದರು ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಯ ಸದಸ್ಯರಾಗಿದ್ದರು. []

ಅಂಬಿಕಾ ಚಕ್ರವರ್ತಿ
ಜನನ(೧೮೯೨-೦೧-೦೦) ಜನವರಿ ೧೮೯೨
ಚಟ್ಟೋಗ್ರಾಮ್, ಬಂಗಾಳ, ಬ್ರಿಟಿಷ್ ಭಾರತ (ಈಗ ಚಿತ್ತಗಾಂಗ್ ವಿಭಾಗ, ಬಾಂಗ್ಲಾದೇಶ)
ಮರಣ6 March 1962(1962-03-06) (aged 70)
ರಾಷ್ಟ್ರೀಯತೆಭಾರತೀಯರು
Organizationಜುಗಾಂತರ್
ರಾಜಕೀಯ ಪಕ್ಷಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ

ಕ್ರಾಂತಿಕಾರಿ ಚಟುವಟಿಕೆಗಳು

ಬದಲಾಯಿಸಿ

ಅಂಬಿಕಾ ಚಕ್ರವರ್ತಿ ಅವರ ತಂದೆಯ ಹೆಸರು ನಂದ ಕುಮಾರ್ ಚಕ್ರವರ್ತಿ. ಅವರು ಚಿತ್ತಗಾಂಗ್ನಲ್ಲಿ ಜುಗಾಂತರ್ ಪಕ್ಷದ ಸದಸ್ಯರಾಗಿದ್ದರು. ಅವರು ಸೂರ್ಯ ಸೇನ್ ನೇತೃತ್ವದಲ್ಲಿ ಚಿತ್ತಗಾಂಗ್ ಶಸ್ತ್ರಾಸ್ತ್ರಗಳ ದಾಳಿಯಲ್ಲಿ ಭಾಗವಹಿಸಿದರು. [] ೧೮ ಏಪ್ರಿಲ್ ೧೯೩೦ ರಂದು, ಅವರು ಕ್ರಾಂತಿಕಾರಿಗಳ ಗುಂಪನ್ನು ಮುನ್ನಡೆಸಿದರು. ಅವರು ಚಿತ್ತಗಾಂಗ್‌ನಲ್ಲಿ ಸಂಪೂರ್ಣ ಸಂವಹನ ವ್ಯವಸ್ಥೆಯನ್ನು ನಾಶಪಡಿಸಿದರು. [] ೨೨ ಏಪ್ರಿಲ್ ೧೯೩೦ ರಂದು, ಜಲಾಲಾಬಾದ್‌ನಲ್ಲಿ ಬ್ರಿಟಿಷ್ ಸೈನ್ಯದೊಂದಿಗಿನ ಗುಂಡಿನ ಚಕಮಕಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಆದರೂ ಅವರು ಅಲ್ಲಿಂದ ತಪ್ಪಿಸಿಕೊಂಡರು. ಕೆಲವು ತಿಂಗಳುಗಳ ನಂತರ, ಆವರನ್ನು ಅವರ ಅಡಗುತಾಣದಿಂದ ಪೊಲೀಸರು ಬಂಧಿಸಿ, ಮರಣದಂಡನೆ ವಿಧಿಸಿದರು. ಆದಾಗ್ಯೂ, ಶಿಕ್ಷೆಯನ್ನು ಜೀವಾವಧಿ ಎಂದು ಬದಲಾಯಿಸಿ, ಪೋರ್ಟ್ ಬ್ಲೇರ್‌ನಲ್ಲಿರುವ ಸೆಲ್ಯುಲಾರ್ ಜೈಲಿಗೆ ಕಳುಹಿಸಲಾಯಿತು. []

ನಂತರದ ಚಟುವಟಿಕೆಗಳು

ಬದಲಾಯಿಸಿ

ಚಕ್ರವರ್ತಿ, ೧೯೪೬ ರಲ್ಲಿ ಸೆಲ್ಯುಲಾರ್ ಜೈಲಿನಿಂದ ಬಿಡುಗಡೆಯಾದ ನಂತರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು. ಅದೇ ವರ್ಷದಲ್ಲಿ ಅವರು ಬಂಗಾಳ ಪ್ರಾಂತೀಯ ವಿಧಾನಸಭೆಗೆ ಆಯ್ಕೆಯಾದರು. ೧೯೫೨ ರಲ್ಲಿ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಟಾಲಿಗಂಜ್ (ದಕ್ಷಿಣ) ಕ್ಷೇತ್ರದಿಂದ ಪಶ್ಚಿಮ ಬಂಗಾಳದ ವಿಧಾನಸಭೆಗೆ ಆಯ್ಕೆಯಾದರು. ಅವರು ೧೯೬೨ರಲ್ಲಿ ಕಲ್ಕತ್ತಾದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು []

ಸಹ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. GUPTA, SARMISTHA DUTTA (2013). "Death and Desire in Times of Revolution". Economic and Political Weekly. 48 (37): 59–68. ISSN 0012-9976. JSTOR 23528276. Archived from the original on 31 May 2023. Retrieved 14 July 2023.
  2. Assembly, West Bengal (India) Legislature Legislative (1955). Assembly Proceedings: official report (in Bengali). West Bengal Government Press. Archived from the original on 14 July 2023. Retrieved 14 July 2023.
  3. India: An Encyclopaedic Survey (in ಇಂಗ್ಲಿಷ್). S. Chand. 1984. Archived from the original on 14 July 2023. Retrieved 14 July 2023.
  4. The Contemporary (in ಇಂಗ್ಲಿಷ್). R.N. Guha Thakurta. 1970. Archived from the original on 14 July 2023. Retrieved 14 July 2023.
  5. ೫.೦ ೫.೧ Sengupta, Subodh Chandra (ed.) (1988) Sansad Bangali Charitabhidhan (in Bengali), Kolkata: Sahitya Sansad, p.33