ಕೋಶೀಯ ಸೆರೆಮನೆ (ಸೆಲ್ಯುಲರ್ ಜೈಲ್)
ಈ ಕೋಶೀಯ ಸೆರೆಮನೆ ಯನ್ನು ಕಾಲಾ ಪಾನಿ (ಹಿಂದಿ):काला पानी क़ैद ख़ाना,ಅಕ್ಷರಶಃ 'ಕಪ್ಪು ನೀರು'ಸಮುದ್ರದ ಆಳದ ನೀರಿನಲ್ಲಿ ಮತ್ತು ದೂರದಲ್ಲಿರುವ ಅಜ್ಞಾತವಾಸ),ಇದನ್ನು ವಸಾಹತುಶಾಹಿ ಸೆರೆಮನೆ ಎನ್ನಲಾಗುತ್ತದೆ.ಇದು ಭಾರತದ ಅಂಡ್ ಮಾನ್ ನಿಕೊಬಾರ್ ದ್ವೀಪಗಳಲ್ಲಿ ಸ್ಥಾಪಿತವಾಗಿದೆ. ಈ ಸೆರೆಮನೆಯನ್ನು ಬ್ರಿಟಿಶ್ ರು ರಾಜಕೀಯ ಕೈದಿಗಳನ್ನು ಗಡಿಪಾರಾದವರನ್ನು ವಿಶೇಷವಾಗಿ ಇಂತಹ ದೂರದ ದೀಪಸ್ತೋಮದ ಜೈಲುಗಳಲ್ಲಿಡುತ್ತಿದ್ದರು. ಹಲವು ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರರು ಅದರಲ್ಲಿ ಬಾತುಕೇಶ್ವರ್ ದತ್ತ ಮತ್ತು ವೀರ್ ಸಾವರ್ಕರ್ ಮುಂತಾದವರನ್ನುಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರೆಂಬ ಕಾರಣದಿಂದ ಗಡಿಪಾರು ಮಾಡಿ ಇಲ್ಲಿ ಕೈದು ಮಾಡಲಾಗಿತ್ತು. ಇಂದು ಈ ಸಂಕೀರ್ಣವು ರಾಷ್ಟ್ರೀಯ ಸ್ಮಾರಕ ಕಟ್ಟಡವಾಗಿದೆ.[೨]
Cellular Jail | |
---|---|
ಸಾಮಾನ್ಯ ಮಾಹಿತಿ | |
ಮಾದರಿ | Prison for political prisoners (Indian freedom fighters) |
ವಾಸ್ತುಶಾಸ್ತ್ರ ಶೈಲಿ | Cellular, Pronged |
ನಗರ | Port Blair, Andaman |
ದೇಶ | India |
ನಿರ್ದೇಶಾಂಕ | 11°40′30″N 92°44′53″E / 11.675°N 92.748°E |
ನಿರ್ಮಾಣ ಪ್ರಾರಂಭವಾದ ದಿನಾಂಕ | 1896 |
ಪೂರ್ಣಗೊಂಡಿದೆ | 1906 |
ಬೆಲೆ | Rs. 517,352[೧] |
ಕಕ್ಷಿಗಾರ | British Raj |
ಇತಿಹಾಸ
ಬದಲಾಯಿಸಿಭಾರತದಲ್ಲಿನ ವಸಾಹತುಶಾಹಿ ಆಡಳಿತದ ಕರಾಳ ಕುರುಹುವಾಗಿ ಈ ಕೋಶೀಯ ಸೆರೆಮನೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.[೩] ಈ ಸೆರೆಮನೆ ಸಂಕೀರ್ಣವನ್ನು 1896 ಮತ್ತು 1906 ರ ಮಧ್ಯ ನಿರ್ಮಿಸಲಾಗಿದೆ.ಬ್ರಿಟಿಶ್ ರು ಅಂಡ್ ಮಾನ್ ದ್ವೀಪಗಳ ಜಾಗೆಯನ್ನು ಸ್ವಾತಂತ್ರ್ಯದ ಮೊದಲ ಯುದ್ದದ ನಂತರ ಸೆರೆಮನೆಯಾಗಿ ಉಪಯೋಗಿಸಲಾರಂಭಿಸಿದರು.
ಈ ಬಂಡುಕೋರ ಸಂಗ್ರಾಮ ಮುಗಿದ ತಕ್ಷಣವೇ ಬ್ರಿಟಿಶ್ ರು ಇದನ್ನು ಹತ್ತಿಕ್ಕಿದರು,ಬ್ರಿಟಿಶ್ ರು ಸಾವಿರಾರು ಜನರನ್ನು ಸಾವಿನ ಬಾಯಿಗೆ ನೂಕಿದರು,ಕೆಲವರನ್ನು ಸಿಕ್ಕ ಸಿಕ್ಕಲ್ಲಿ ಮರಗಳಿಗೆ ನೇಣಿಗೆ ಹಾಕಿದರು ಅಥವಾ ಅವುಗಳಿಗೆ ಕಟ್ಟಿ ಹಾಕಿದರು.ಅವರನ್ನು ತೋಪುಗಳ ಬಾಯಿಗೆ ಕಟ್ಟಿ ಅವರನ್ನು ಉಡಾಯಿಸಿದರು. ಹಲವರು ಅಂಡ್ ಮಾನ್ ದ್ವೀಪದಲ್ಲಿರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರು ತಮ್ಮ ಕುಟುಂಬದಿಂದ ದೂರಾಗಿ ದೇಶದಿಂದಲೂ ದೂರಾಗಿರುತ್ತಿದ್ದರು. ಸುಮಾರು 200 ದಂಗೆಕೋರರನ್ನು ಜೈಲರ್ ಡೇವಿಡ್ ಬ್ಯಾರಿ ಮತ್ತು ಜೇಮ್ಸ್ ಪ್ಯಾಟಿಸನ್ ವಾಕರ್ ಇವರ ವಶಕ್ಕೆ ನೀಡಿ ಇವರನ್ನೆಲ್ಲಾ ದ್ವೀಪಗಳಿಗೆ ಸಾಗಿಸಲಾಗಿತ್ತು. ಓರ್ವ ಮಿಲಿಟರಿ ವೈದ್ಯ ಆಗ್ರಾ ಸೆರೆಮನೆಯಲ್ಲಿ ವಾರ್ಡನ್ ಆಗಿದ್ದ. ಇನ್ನೂ ಸುಮಾರು 733 ಜನರು ಕರಾಚಿಯಿಂದ ಏಪ್ರಿಲ್, 1868 ರಲ್ಲಿ ಬಂದು ಇಲ್ಲಿಗೆ ತಲುಪಿದರು.[೪] ಭಾರತ ಮತ್ತು ಬರ್ಮಾಗಳಿಂದ ಇನ್ನೂ ಹೆಚ್ಚಿನ ಸೆರೆಯಾಳುಗಳು ಇಲ್ಲಿಗೆ ಬಂದಾಗ ಅಲ್ಲಿನವರ ರಹವಾಸಿ ಸೆಟಲ್ ಮೆಂಟ್ ಗಳ ಸಂಖ್ಯೆ ಹೆಚ್ಚಾಯಿತು.[೫] ಯಾರೇ ಮೊಘಲ್ ರಾಜ ಕುಟುಂಬಕ್ಕೆ ಸೇರಿದವರಾಗಿದ್ದರೆ,ಅಥವಾ ಬಹಾದ್ದೂರ್ ಶಾ ಜಾಫರ್ ಗೆ ಈ ಸಂಗ್ರಾಮದ ವೇಳೆಯಲ್ಲಿ ಮನವಿ ಸಲ್ಲಿಸಿದ್ದರೆ ಅಂತವರನ್ನು ದ್ವೀಪಗಳಿಗೆ ಸಾಗಿಸುವ ಸೂಚನೆ ಇತ್ತು.
ಇಂತಹ ದೂರದ ದ್ವೀಪ ಪ್ರದೇಶವು ದಂಗೆಕೋರರಿಗೆ ಶಿಕ್ಷಿಸಲು ಸೂಕ್ತ ಜಾಗೆ ಎಂದು ಪರಿಗಣಿಸಲಾಗಿತ್ತು. ಅವರನ್ನು ಪ್ರಮುಖ ಕೇಂದ್ರಸ್ಥಾನದಿಂದ ದೂರವಿಡುವುದಲ್ಲದೇ ಅವರನ್ನು ಸರಪಳಿಯಿಂದ ಬಂಧಿಸಿ ಕಟ್ಟಡ ರಚನೆ,ಸೆರೆಮನೆಗಳ ನಿರ್ಮಾಣ ಮತ್ತು ಬಂದರು ಸ್ಥಳದ ಕಾವಲಿಗೆ ಬಳಸಲಾಗುತ್ತಿತ್ತು. ಈ ಕಾರ್ಯಾಚರಣೆ ಅವಧಿಯಲ್ಲಿ ಹಲವರು ಮೃತಪಟ್ಟರು. ದ್ವೀಪವನ್ನು ಬ್ರಿಟಿಶ್ ರ ವಸಾಹತಾಗಿ ಮಾಡುವಲ್ಲಿ ಅವರನ್ನು ದುಡಿಸಿಕೊಳ್ಳಲಾಗುತ್ತಿತ್ತು.
ನಂತರ 19 ನೆಯ ಶತಮಾನದಲ್ಲಿ ಸ್ವಾತಂತ್ರ್ಯ ಚಳವಳಿಯು ತನ್ನ ಕಾವು ಪಡೆಯಲಾರಂಭಿಸಿತು. ಇದರಿಂದಾಗಿ ಅಂಡ್ ಮಾನ್ ಗೆ ಕಳಿಸಿದ ಕೈದಿಗಳ ಸಂಖ್ಯೆ ಹೆಚ್ಚುತ್ತಾ ನಡೆದು ಉನ್ನತ ಮಟ್ಟದ-ಸುರಕ್ಷತೆಗಾಗಿ ದೊಡ್ಡ ಸೆರೆಮನೆಯ ಪರಿಕಲ್ಪನೆ ಮೂಡಿ ಬಂತು.
ವಿನ್ಯಾಸ ರಚನೆ
ಬದಲಾಯಿಸಿಹೀಗೆ ಸೆರೆಮನೆಯನ್ನು 1896 ರಲ್ಲಿ ಕಟ್ಟಲು ಆರಂಭಿಸಲಾಯಿತು,ಅದು 1906 ರಲ್ಲಿ ಪೂರ್ಣವಾಯಿತು. ಇದರ ಮೂಲ ಕಟ್ಟಡವು ಕಡುಗೆಂಪಿನ-ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು,ಸದ್ಯ ಇದನ್ನು ಮಯನ್ಮಾರ್ ಎನ್ನಲಾಗುತ್ತದೆ.
ಈ ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿವೆ.ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ.ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಮೊನೆಗಳಂತೆ ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು,ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಅನುಕೂಲವಾಗುತ್ತಿತ್ತು.
ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಕೋಶದಂತಹ ಗೂಡುಗಳಿದ್ದವೇ ವಿನಹ ಮಲಗುವ ಅಥವಾ ವಿಶ್ರಾಂತಿಯ ಪಡಶಾಲೆಗಳಿರಲಿಲ್ಲ. ಪ್ರತಿ ಕೋಶದಲ್ಲೂ 4.5 ಮೀಟರ್ x 2.7 ಮೀಟರ್ಸ್ ಅಥವಾ 15x8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ-ಬೆಳಕಿಗೊಂದು ಕಿಂಡಿಯಿತ್ತು.[೬] ಈ "ಸೆಲ್ಯುಲರ್ ಜೈಲ್"ಅನ್ನುವ ಶಬ್ದವು ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ-ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಕೋಶದ ಮಾದರಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.[೭]
ಸಹನಿವಾಸಿಗಳು
ಬದಲಾಯಿಸಿಏಕಾಂಗಿತನದ ಬಂಧನದಿಂದ ಬಂಡುಕೋರರು ಮತ್ತು ರಾಜಕೀಯ ನಾಯಕರ ನಡುವೆ ಸಂಪರ್ಕ ಬೆಳೆಯಬಾರದೆಂದು ಈ ವ್ಯವಸ್ಥೆ ಮಾಡಲಾಗಿತ್ತು. ಅಂಡ್ ಮಾನ್ ದ್ವೀಪವು ಬ್ರಿಟಿಶ್ ಸರ್ಕಾರದ ಉದ್ದೇಶ ಸಾರ್ಥಕಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿತ್ತು.
ಸೆಲ್ಯುಲರ್ ಜೈಲಿನಲ್ಲಿ ಸೆರೆಯಾದವರು ಬಹುತೇಕ ಸ್ವಾತಂತ್ರ್ಯ ಕಾರ್ಯಕರ್ತರಾಗಿದ್ದರು. ಸೆಲ್ಯುಲರ್ ಜೈಲಿನಲ್ಲಿದ್ದ ಹೆಸರಾಂತ ಹೋರಾಟಗಾರರೆಂದರೆ ಡಾ. ದಿವಾನ್ ಸಿಂಗ್ ಕಾಲೆಪಾನಿ,ಮೌಲಾನಾ ಫಜ್ಲ್-ಇ-ಹಕ್ ಖೈರಾಬಾದಿ,ಯೋಗೇಂದ್ರ ಶುಕ್ಲಾ, ಬಾತುಕೇಶ್ವರ್ ದತ್ತ್,ಮೌಲಾನಾ ಅಹ್ಮದುಲ್ಲಾ, ಮೊವ್ಲಿ ಅಬ್ದುಲ್ ರಹೀಮ್ ಸಾದಿಕ್ ಪುರಿ,ಬಾಬುರಾವ್ ಸಾವರ್ಕರ್,ವಿನಾಯಕ ದಾಮೋದರ ಸಾವರ್ಕರ್, ಭಾಯಿ ಪರ್ಮಾನಂದ,ವಿ.ಒ.ಚಿದಂಬರಮ್ ಪಿಳ್ಳೈ,ಸುಬ್ರಮಣ್ಯಂ ಶಿವ,ಸೋಹನ್ ಸಿಂಗ್,ವಾಮನ್ ರಾವ್ ಜೋಶಿ ಮತ್ತು ನಂದ್ ಗೋಪಾಲ್.[೮] ಹಲವಾರು ಕ್ರಾಂತಿಕಾರರನ್ನು ಅಲಿಪೂರ್ ಪ್ರಕರಣದಲ್ಲಿ (1908) ಗಲ್ಲಿಗೇರಿಸಲಾಯಿತು ಅದರಲ್ಲಿ ಹುತಾತ್ಮರಾದ ಬರಿಂದ್ರ ಕುಮಾರ್ ಘೋಷ್, ಉಪೇಂದ್ರ್ ನಾಥ್ ಬ್ಯಾನರ್ಜಿ, ಬಿರೇಂದ್ರ್ ಚಂದ್ರ್ ಸೇನ್. ಜತಿಶ್ ಚಂದ್ರ್ ಪಾಲ್, ಇವರೊಂದಿಗಿನ ಸೆರೆಮನೆಯ ಸಹನಿವಾಸಿಗಳಾಗಿದ್ದವರೆಂದರೆ ಬಘಾ ಜತಿನ್,ಅವರನ್ನು ಸಾಕಷ್ಟು ಹಿಂಸೆಗೀಡು ಮಾಡಿ ಬೆಂಗಾಲ್ ನಲ್ಲಿದ್ದ ಬೆರಾಹಂಪುರ್ ಜೈಲಿಗೆ ವರ್ಗಾಯಿಸಲಾಯಿತು.ಆದರೆ 1924 ರಲ್ಲಿನ ಅವರ ಮರಣ ಹಲವು ಸಂಶಯಗಳಿಗೆ ಎಡೆ ಮಾಡಿತ್ತು.
ಮಾರ್ಚ್ 1868 ರಲ್ಲಿ ಸುಮಾರು 238 ಕೈದಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಏಪ್ರಿಲ್ ಹೊತ್ತಿಗೆ ಅವರೆಲ್ಲರನ್ನೂ ಸೆರೆಹಿಡಿಯಲಾಯಿತು. ಓರ್ವ ಆತ್ಮಹತ್ಯೆ ಮಾಡಿಕೊಂಡರೆ ಉಳಿದವರಲ್ಲಿನ 87 ಜನರನ್ನು ಗಲ್ಲಿಗೇರಿಸುವಂತೆ ಸುಪ್ರಿಡೆಂಟೆಂಟ್ ವಾಕರ್ ಆಜ್ಞೆ ಮಾಡಿದ್ದರು.[೯]
ಆಗ 1930 ರ ಆರಂಭಿಕ ವರ್ಷದಲ್ಲಿ ಕೈದಿಗಳು ತಮ್ಮ ಅಮಾನವೀಯ ಸ್ಥಿತಿಯನ್ನು ಪ್ರತಿಭಟಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಮಹಾತ್ಮಾ ಗಾಂಧಿ ಮತ್ತು ರಬೀಂದ್ರ್ ನಾಥ್ ಟ್ಯಾಗೋರ್ ಅವರು ಮಧ್ಯಸ್ಥಿಕೆ ವಹಿಸಿದರು. ಸರ್ಕಾರವು ರಾಜಕೀಯ ಕೈದಿಗಳನ್ನು ಸೆಲ್ಯುಲರ್ ಜೈಲಿನಲ್ಲಿನಿಂದ 1937-38 ರಲ್ಲಿ ತಾಯ್ನಾಡಿಗೆ ಕಳಿಸಲು ನಿರ್ಧರಿಸಿತು.
ಜಪಾನಿಯರ ಸ್ವಾಧೀನತೆ
ಬದಲಾಯಿಸಿಆಗ ಜಪಾನ್ ಸಾಮ್ರಾಜ್ಯವು 1942 ರಲ್ಲಿ ಅಂಡ್ ಮಾನ್ ದ್ವೀಪದ ಮೇಲೆ ದಾಳಿ ಮಾಡಿ ಬ್ರಿಟಿಶ್ ರನ್ನು ಹೊರಗೋಡಿಸಿತು. ಆಗ ಇದೇ ಸೆಲ್ಯುಲರ್ ಜೈಲು ಬ್ರಿಟಿಶ್ ಕೈದಿಗಳಿಗೆ ನೆಲೆವಾಸವಾಯಿತು. ಇದೇ ಸಂದರ್ಭದಲ್ಲಿ, ಸುಭಾಷ್ ಚಂದ್ರ ಬೋಸ್ ಅವರು ಕೂಡಾ ದ್ವೀಪಕ್ಕೆ ಭೇಟಿ ನೀಡಿದರು.
ಜಪಾನಿಯರ ಕಾಲದಲ್ಲಿ ಏಳು ರೆಕ್ಕೆ ಗೋಪುರಗಳಲ್ಲಿ ಎರಡನ್ನು ನಾಶಗೊಳಿಸಲಾಯಿತು.
ಮತ್ತೆ 1945,ರಲ್ಲಿ ಬ್ರಿಟಿಶ್ ರು ವಿಶ್ವ ಯುದ್ದ II ರ ನಂತರ ಈ ದ್ವೀಪದ ನಿಯಂತ್ರಣ ಪಡೆದರು
ಸ್ವಾತಂತ್ರ್ಯದ ನಂತರ
ಬದಲಾಯಿಸಿಭಾರತ ಸ್ವಾತಂತ್ರ್ಯ ಪಡೆದ ನಂತರ ಜೈಲಿನ ಮತ್ತೆರಡು ಗೋಪುರ ರೆಕ್ಕೆಗಳನ್ನು ನಾಶಪಡಿಸಲಾಯಿತು. ಹೇಗೆಯಾದರೂ ಕೃತ್ಯವನ್ನು ಹಲವು ಹಿಂದಿನ ಕೈದಿಗಳು ಮತ್ತು ರಾಜಕೀಯ ನಾಯಕರು ಇದನ್ನು ಪ್ರತಿಭಟಿಸಿದರು.ತಮ್ಮನ್ನು ಆ ಜಾಗೆಯಲ್ಲಿ ಇಟ್ಟಿದ್ದ ದಾಖಲೆ-ಉದಾಹರಣೆಗಳನ್ನು ಇಲ್ಲವಾಗಿಸಲು ಸಂಚು ಮಾಡಲಾಗುತ್ತದೆ ಎಂದು ಅವರು ವಾದಿಸಿದರು. ಇನ್ನುಳಿದ ಮೂರು ರೆಕ್ಕೆಗಳನ್ನು ಮತ್ತು ಕೇಂದ್ರ ಗೋಪುರವನ್ನು ರಾಷ್ಟ್ರೀಯ ಸ್ಮಾರಕವಾಗಿ 1969 ರಲ್ಲಿ ಪರಿವರ್ತಿಸಲಾಯಿತು.
ಅಲ್ಲಿ ಗೋಬಿಂದ್ ವಲ್ಲಭ್ ಪಂತ್ ಆಸ್ಪತ್ರೆಯನ್ನು ಸೆಲ್ಯುಲರ್ ಜೈಲು ಆವರಣದಲ್ಲಿ 1963ರಲ್ಲಿ ಆರಂಭಿಸಲಾಯಿತು. ಸದ್ಯ ಇದೀಗ 500-ಹಾಸಿಗೆಗಳುಳ್ಳ ಆಸ್ಪತ್ರೆಯಾಗಿದ್ದು ಸುಮಾರು 40 ವೈದ್ಯರು ಸ್ಥಳೀಯ ಜನರ ಆರೋಗ್ಯ ರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ.[೧೦]
ಜೈಲು ನಿರ್ಮಾಣದ ಶತಮಾನೋತ್ಸವವನ್ನು ಮಾರ್ಚ್ 10,2006 ರಲ್ಲಿ ಆಚರಿಸಲಾಯಿತು. ಆಗಿನ ಹಲವು ಕೈದಿಗಳನ್ನು ಈ ಸಂದರ್ಭದಲ್ಲಿಭಾರತ ಸರ್ಕಾರ ಸನ್ಮಾಸಿತು.[೧೧]
ಇವನ್ನೂ ನೋಡಿ
ಬದಲಾಯಿಸಿ- ಚಾರ್ಲ್ಸ್ ಟೆಗಾರ್ಟ್, ಬ್ರಿಟಿಶ್ ಪೊಲೀಸ್ ಕಮೀಶನರ್
- ಕಮ್ಯುನಿಸ್ಟ್ ರ ಒಟ್ಟಾಗುವಿಕೆ
- ಕಾಲಾ ಪಾನಿ, ಆಗ 1996 ರಲ್ಲಿ ಭಾರತೀಯ ಚಲನಚಿತ್ರವೊಂದು ಇಲ್ಲಿ ಸೆಟ್ಟೇರಿತ್ತು.
ಉಲ್ಲೇಖಗಳು
ಬದಲಾಯಿಸಿ- ↑ "A memorial to the freedom fighters". Hinduonnet.com. India: ದಿ ಹಿಂದೂ. August 15, 2004. Archived from the original on ಅಕ್ಟೋಬರ್ 23, 2007. Retrieved September 2, 2006.
- ↑ ಹಿಸ್ಟರಿ ಆಫ್ ಅಂಡ್ ಮಾನ್ ಸೆಲ್ಯುಲರ್ ಜೈಲ್: ರಿಕ್ಯಾಪ್ಚರ್ ಆಫ್ ಅಂಡ್ ಮಾನ್ ಐಲ್ಯಾಂಡ್ಸ್ ಟು ಕೀಪ್ ಪಾಲಿಟಿಕಲ್ ಪ್ರಿಜನರ್ಸ್ Archived 2007-01-13 ವೇಬ್ಯಾಕ್ ಮೆಷಿನ್ ನಲ್ಲಿ.. AndamanCellularJail.org. ಅಗಸ್ಟ್ 6 2008ರಂದು ಮರು ಪರಿಷ್ಕರಿಸಲಾಗಿದೆ.
- ↑ ಮಒನುಮೆಂಟ್ಸ್ ಆಫ್ ಇಂಡಿಯಾ: ಸೆಲ್ಯುಲರ್ ಜೈಲ್. iloveindia.com; ಐ ಲೌ ಇಂಡಿಯಾ ವೆಬ್ ಸೈಟ್.
- ↑ ಹಿಸ್ಟರಿ ಆಫ್ ಅಂಡ್ ಮಾನ್ ಸೆಲ್ಯುಲರ್ ಜೈಲ್: ಎ ಶಾರ್ಟ್ ಸ್ಟೊರಿ ಆಫ್ ಅಂಡ್ ಮಾನ್ ಐಲ್ಯಾಂಡ್ಸ್ Archived 2007-01-13 ವೇಬ್ಯಾಕ್ ಮೆಷಿನ್ ನಲ್ಲಿ.. AndamanCellularJail.org.
- ↑ "Hundred years of the Andamans Cellular Jail". Andaman and Nicobar Administration website. Archived from the original on August 30, 2007. Retrieved September 2, 2006.
{{cite web}}
:|archive-date=
/|archive-url=
timestamp mismatch; ಸೆಪ್ಟೆಂಬರ್ 30, 2007 suggested (help) ಮೂಲ: ದಿ ಹಿಂದು, ಡಿಸೆಂಬರ್ 21, 2005. - ↑ "Cellular Jail - Darkness At Noon". MapsofIndia.com. Archived from the original on ನವೆಂಬರ್ 1, 2006. Retrieved September 2, 2006.
- ↑ "India Image: Cellular Jail". Andaman and Nicobar Administration website. Archived from the original on May 24, 2006. Retrieved September 2, 2006.
- ↑ ಫ್ರೀಡಮ್ ಫೈಟರ್ಸ್ ಡಿಪೊರ್ಟೆಡ್ ಟು ಅಂಡ್ ಮಾನ್ಸ್ Archived 2010-09-06 ವೇಬ್ಯಾಕ್ ಮೆಷಿನ್ ನಲ್ಲಿ.. AndamanCellularJail.org.
- ↑ ಹಿಸ್ಟ್ರಿ ಆಫ್ ಅಂಡ್ ಮಾನ್ ಸೆಲ್ಯುಲರ್ ಜೈಲ್: ಅಟ್ರೊಸಿಟೀಸ್ ಕಮಿಟೆಡ್ ಆನ್ ಅರ್ಲಿ ಫ್ರೀಡಮ್ ಫೈಟರ್ಸ್ Archived 2007-01-13 ವೇಬ್ಯಾಕ್ ಮೆಷಿನ್ ನಲ್ಲಿ.. AndamanCellularJail.org.
- ↑ "Dedication of INSAT- 3C/ Inauguration of Andaman & Nicobar Islands Tele-medicine Project (G B Pant Hospital)" (Press release). Indian Space Research Organization. Archived from the original on February 29, 2004. Retrieved September 3, 2006.
- ↑ "Cellular Jail completes 100 years". Andaman & Nicobar Administration website. Archived from the original on ಮೇ 28, 2006. Retrieved September 2, 2006.