ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ರಾಜಧಾನಿ. ಇದು ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹೆಬ್ಬಾಗಿಲಿನಂತಿದೆ. ಇಲ್ಲಿ ಹಲವಾರು ವಸ್ತು ಸಂಗ್ರಹಾಲಗಳು, ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡುತ್ತಿದ್ದ ಬ್ರಿಟಿಷರ ಕಾಲದ ಸೆರೆಮನೆ ಇದೆ. ಇದು ಭಾರತೀಯ ನೌಕಾ ದಳದ ಪ್ರಮುಖ ನೆಲೆಯಾಗಿದ್ದು, ವಾಯುದಳದ ನೆಲೆ ಕೂಡಾ ಇದೆ.

ಪೋರ್ಟ್ ಬ್ಲೇರ್
ನಗರ
Centre of Port Blair in December 2004, a couple of days before the 2004 Indian Ocean earthquake.
Centre of Port Blair in December 2004, a couple of days before the 2004 Indian Ocean earthquake.
ದೇಶ India
ಕೇಂದ್ರಾಡಳಿತ ಪ್ರದೇಶಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ಜಿಲ್ಲೆದಕ್ಷಿಣ ಅಂಡಮಾನ್
Population
 (2011)
 • Total೧,೦೦,೬೦೮
ಸಮಯದ ವಲಯ
ಸಮಯ ವಲಯಯುಟಿಸಿ+5.30 (IST)

ಪೋರ್ಟ್ ಬ್ಲೇರ್ - ಭಾರತ ಗಣರಾಜ್ಯದ ಒಕ್ಕೂಟ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಕೇಂದ್ರ ಮತ್ತು ರೇವು ಪಟ್ಟಣ. ದಕ್ಷಿಣ ಅಂಡಮಾನ್ ದ್ವೀಪದ ಆಗ್ನೇಯ ತೀರದಲ್ಲಿ ಉ.ಅ. 11039' ಮತ್ತು ಪೂ.ರೇ. 92045' ಮೇಲೆ ಇದೆ.

ಪೋರ್ಟ್ ಬ್ಲೇರ್ ಏಷ್ಯದ ಅತ್ಯುತ್ತಮ ರೇವುಗಳಲ್ಲೊಂದು. ಇದು ಕೋಲ್ಕತ್ತಾದ ಆಗ್ನೇಯಕ್ಕೆ 1,296. ಕಿ.ಮೀ. ಮತ್ತು ಚೆನ್ನೈನ ನೈಋತ್ಯಕ್ಕೆ 1,344 ಕಿ.ಮೀ. ದೂರದಲ್ಲಿದೆ.

2004ರಲ್ಲಿ ಇದು ಸುನಾಮಿ ಸಮುದ್ರದಲೆಗಳ ಹೊಡೆತಕ್ಕೆ ಸಿಕ್ಕಿ ಅಪಾರ ನಷ್ಟಕ್ಕೆ ಗುರಿಯಾಗಿದ್ದು ಸರ್ಕಾರ ಇದನ್ನು ಮರುನಿರ್ಮಾಣ ಮಾಡಿದೆ.

ಬ್ರಿಟಿಷ್ ಸೈನ್ಯದ ಅರ್ಚಿಬಾಲ್ಡ್ ಬ್ಲೇರ್ ಇದನ್ನು 1789 ರಲ್ಲಿ ವಶಪಡಿಸಿಕೊಂಡ. ಆಗ ಇದಕ್ಕೆ ಪೋರ್ಟ್ ಕಾರ್ನ್‍ವಾಲೀಸ್ ಎಂದು ಹೆಸರಿಡಲಾಗಿತ್ತು. 1796-1856 ರಲ್ಲಿ ಇದನ್ನು ತೊರೆಯಲಾಗಿತ್ತು. ಭಾರತದಲ್ಲಿ ಗಡಿಪಾರು ಶಿಕ್ಷೆಗೆ ಒಳಗಾದವರನ್ನು ಇಡಲು ಇದನ್ನು 1858 ರಲ್ಲಿ ಬ್ರಿಟಿಷ್ ಸರ್ಕಾರ ಬಳಸಿಕೊಳ್ಳತೊಡಗಿತು. ಆಗ ಇದಕ್ಕೆ ಪೋರ್ಟ್ ಬ್ಲೇರ್ ಎಂದು ನಾಮಕರಣ ಮಾಡಲಾಯಿತು. ಇದು ಕೈದಿಗಳ ನೆಲೆಯಾಗಿದ್ದುದನ್ನು 1940 ರಲ್ಲಿ ಕೊನೆಗೊಳಿಸಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೆಲವು ವರ್ಷಗಳ ಕಾಲ (1842-45) ಇದು ಜಪಾನೀಯರ ವಶದಲ್ಲಿತ್ತು. 1947 ರಲ್ಲಿ ಭಾರತ ಗಣರಾಜ್ಯಕ್ಕೆ ಸೇರಿದ ಮೇಲೆ ಇದು ಶೀಘ್ರವಾಗಿ ಬೆಳೆಯತೊಡಗಿತು. ಮೀನುಗಾರಿಕೆ, ಸಣ್ಣ ಉದ್ಯಮಗಳು, ವ್ಯಾಪಾರ ಇವು ಇಲ್ಲಿಯ ಮುಖ್ಯ ಆರ್ಥಿಕ ಚಟುವಟಿಕೆಗಳು. ಇಲ್ಲಿ ಪ್ರೌಢಶಾಲೆ, ಆಸ್ಪತ್ರೆ ಮುಂತಾದುವು ಇವೆ.

ಸ್ಮಾರ್ಟ್ ಸಿಟಿ

ಬದಲಾಯಿಸಿ

ಇದನ್ನು ಇತ್ತೀಚಿಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ದಿ ಪಡಿಸಲು ಯೋಜನೆ ರೂಪಿಸಲಾಗಿದೆ.[]

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Khanna, Pretika (2016-05-24). "13 cities included in Phase 1 of Smart Cities Mission". http://www.livemint.com/. {{cite news}}: External link in |newspaper= (help)


ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: