ಅಂತರಜಾಲ ಹುಡುಕಾಟ ಯಂತ್ರ

(ಅಂತರ್ಜಾಲ ಹುಡುಕಾಟ ಯಂತ್ರ ಇಂದ ಪುನರ್ನಿರ್ದೇಶಿತ)

ಅಂತರಜಾಲ ಹುಡುಕಾಟ ಯಂತ್ರ ಎಂದರೆ World Wide Webನಲ್ಲಿ ಮಾಹಿತಿ ಹುಡುಕುವುದಕ್ಕಾಗಿ ವಿನ್ಯಾಸಗೊಳಿಸಲಾದ ಒಂದು ಸಾಧನ. ಹುಡುಕಾಟದ ಫಲಿತಾಂಶಗಳನ್ನು ಸಾಮಾನ್ಯವಾಗಿ ಒಂದು ಪಟ್ಟಿಯ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಮತ್ತು ಇವನ್ನು ’ಹಿಟ್ಸ್’ ಎಂದು ಕರೆಯಲಾಗುತ್ತದೆ. ಈ ಮಾಹಿತಿಯು ಅನೇಕ ಜಾಲ ಪುಟಗಳು, ಚಿತ್ರಗಳು, ಮಾಹಿತಿ ಹಾಗೂ ಇತರೆ ಕಡತಗಳನ್ನು ಹೊಂದಿರಬಹುದು. ಕೆಲವು ಹುಡುಕಾಟ ಯಂತ್ರಗಳು ಬೇರೆ ದತ್ತಸಂಚಯಗಳು ಅಥವಾ ಮುಕ್ತ ಮಾಹಿತಿ ಸೂಚಿಗಳಿಂದ ದತ್ತಾಂಶಗಳ ಗಣಿಗಾರಿಕೆ ಮಾಡಿ ಹೊರತೆಗೆಯುತ್ತವೆ. ಜಾಲ ಮಾಹಿತಿಸೂಚಿಗಳನ್ನು ಸಂಬಂಧಿಸಿದ ಸಂಪಾದಕರು ನಿರ್ವಹಿಸಿದರೆ, ಹುಡುಕಾಟ ಯಂತ್ರಗಳು ಗಣನಪದ್ಧತಿಯ ಮೂಲಕ ಅಥವಾ ಗಣನಪದ್ಧತಿ ಮತ್ತು ಮಾನವ ಹೂಡುವಳಿಯ ಮಿಶ್ರಣದ ಮುಖಾಂತರ ಕಾರ್ಯನಿರ್ವಹಿಸುತ್ತವೆ.

ಇತಿಹಾಸ

ಬದಲಾಯಿಸಿ

ಜಾಲ ಹುಡುಕಾಟ ಯಂತ್ರಗಳಿಗೂ ಮೊದಲು ಎಲ್ಲಾ ಜಾಲ ಮಧ್ಯವರ್ತಿಗಳ ಸವಿವರ ಪಟ್ಟಿಯೊಂದಿತ್ತು. ಟಿಮ್ ಬರ್ನರ್ಸ್-ಲೀ ಸಂಪಾದಿಸುತ್ತಿದ್ದ ಈ ಪಟ್ಟಿಯನ್ನು ಸಿಇಆರೆನ್(CERN) ಜಾಲಮಧ್ಯವರ್ತಿಯ ಮೂಲಕ ಪ್ರಸಾರ ಮಾಡಲಾಗುತ್ತಿತ್ತು.ಈ ರೀತಿಯ 1992ರ ಪಟ್ಟಿಯೊಂದರ ಐತಿಹಾಸಿಕವೆನ್ನಬಹುದಾದ ಛಾಯಾಚಿತ್ರವೊಂದು ಮಾತ್ರ ಲಭ್ಯವಿದೆ.[] ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ಜಾಲಮಧ್ಯವರ್ತಿಗಳು ಅಂತರಜಾಲ ಪ್ರವೇಶ ಮಾಡಲಾರಂಭಿಸಿದಾಗ ಸಂಪೂರ್ಣ ಪಟ್ಟಿಯಲ್ಲಿ ಎಲ್ಲವನ್ನೂ ಒಳಗೊಳ್ಳುವುದು ಕಷ್ಟಕರವಾಯಿತು.ಎನ್.ಸಿ.ಎಸ್.ಎ(NCSA)ಯ ಜಾಲತಾಣದಲ್ಲಿ ಹೊಸ ಜಾಲ ಮಧ್ಯವರ್ತಿಗಳನ್ನು "ಹೊಸತೇನಿದೆ!!" ಅನ್ನುವ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗುತ್ತಿತ್ತು. ಸಂಪೂರ್ಣ ಪಟ್ಟಿ ಮುಂದೆಂದೂ ತಯಾರಾಗಲಿಲ್ಲ. (ಜಾಲ-ಪೂರ್ವ)ಅಂತರಜಾಲದಲ್ಲಿ ಮಾಹಿತಿ ಹುಡುಕಲು Archie ಎಂಬ ಸಾಧನವನ್ನು ಪ್ರಪ್ರಥಮವಾಗಿ ಬಳಸಲಾಯಿತು. ಈ ಹೆಸರು ’ಆರ್ಕೈವ್’(archive, ಪತ್ರಾಗಾರ) ಪದದಿಂದ ’v’ ಅಕ್ಷರವನ್ನು ತೆಗೆದರೆ ಉಳಿದುಕೊಳ್ಳುವ ಅಕ್ಷರಗಳಿಂದ ಮೂಡಿಬಂತು. ಈ ಪದವನ್ನು 1990ರಲ್ಲಿ ಮೊಂಟ್ರಿಯಾಲ್ ನ ಮಕ್ ಗಿಲ್ ವಿಶ್ವವಿದ್ಯಾನಿಲಯದ ಅಲನ್ ಎಂಟೇಜ್ ಎಂಬ ವಿದ್ಯಾರ್ಥಿ ರೂಪಿಸಿ ಬಳಕೆಗೆ ತಂದ. ಈ ಕ್ರಮವಿಧಿಯು ಬಹಿರಂಗ ಅಜ್ಞಾತ FTP (File Transfer Protocol) ಗಳ ಕಡತಗಳ ಪಟ್ಟಿಯ ನಕಲು ತೆಗೆಯುವುದರ ಮೂಲಕ ಹುಡುಕಲು ಯೋಗ್ಯವಾದ ಕಡತಗಳ ದತ್ತಸಂಚಯವೊಂದನ್ನು ತಯಾರು ಮಾಡುತ್ತಿತ್ತು. ಆದರೆ ಈ ತಾಣಗಳ ಪರಿವಿಡಿಯ ಅನುಕ್ರಮಣಿಕೆಯನ್ನು Archie ನೀಡುತ್ತಿರಲಿಲ್ಲ. Gopher (1991 ರಲ್ಲಿ ಮಿನೆಸೋಟಾ ವಿಶ್ವವಿದ್ಯಾನಿಲಯದ ಮಾರ್ಕ್ ಮಕ್ ಕಾಹಿಲ್ ರಚಿಸಿದ್ದು) ತಲೆಯೆತ್ತುತ್ತಿದ್ದ ಹಾಗೇ Veronica ಮತ್ತು Jughead ಎಂಬ ಎರಡು ಹೊಸ ಹುಡುಕಾಟ ಯಂತ್ರಗಳ ಹುಟ್ಟಿಗೆ ಕಾರಣವಾಯಿತು. Archie ಯಂತೆಯೆ ಇವು ಕೂಡ Gopher ಪರಿವಿಡಿ ಸೂಚಿಕ್ರಮದಲ್ಲಿ ಅಡಕವಾಗಿರುವ ಕಡತಗಳು ಮತ್ತು ಶೀರ್ಷಿಕೆಗಳನ್ನು ಹುಡುಕುತ್ತಿದ್ದವು. Veronica (V ery E asy R odent-O riented N et-wide I ndex to C omputerized A rchives)ದಲ್ಲಿ ಪ್ರಧಾನಪದವೊಂದನ್ನು ಹುಡುಕುವುದರ ಮೂಲಕ ಸಂಪೂರ್ಣ Gopher ಪಟ್ಟಿಯ ಅತಿ ಹೆಚ್ಚು Gopher ಶೀರ್ಷಿಕೆಗಳನ್ನು ಪಡೆಯಬಹುದಾಗಿತ್ತು. Jughead (J onzy's U niversal G opher H ierarchy E xcavation A nd D isplay) ಎಂಬುದು ನಿಯಮಿತ Gopher ಜಾಲಮಧ್ಯವರ್ತಿಗಳಿಂದ ಪಟ್ಟಿರೂಪದ ಮಾಹಿತಿ ಪಡೆಯುವ ಸಾಧನವಾಗಿತ್ತು. ’Archie’ ಅನ್ನುವ ಹುಡುಕಾಟ ಯಂತ್ರದ ಹೆಸರು ಅದೇ ಶೀರ್ಷಿಕೆಯ ’Archie ಕಾಮಿಕ್ ಪುಸ್ತಕ ಸರಣಿ’ ಯನ್ನು ಆಧರಿಸಿದ್ದಲ್ಲವಾಗಿತ್ತಾದರು ಆರ್ಚೀಯ ಮುಂದುವರಿದ ಭಾಗಗಳಾದ ’Veronica’ ಮತ್ತು ”Jughead’ ತಮ್ಮ ಹಿನ್ನೆಲೆಯನ್ನು ಸೂಚಿಸುವ ಸಲುವಾಗಿ ಅದೇ ಸರಣಿಯ ಇನ್ನೆರಡು ಪ್ರಮುಖ ಪಾತ್ರಗಳ ಹೆಸರು ಪಡೆದುಕೊಂಡವು. 1993ರ ಜೂನಿನಲ್ಲಿ MITಯ ಮ್ಯಾಥ್ಯೂ ಗ್ರೇ ಎಂಬಾತ Perl ಆಧಾರಿತ World Wide Web Wanderer ಆದ ಪ್ರಪ್ರಥಮ ಜಾಲ ಯಾಂತ್ರಿಕ ರಚನೆಯ ಮೂಲಕ ’Wandex’ ಎಂಬ ಅನುಕ್ರಮಣಾ ಸೂಚಿಯನ್ನ ಹುಟ್ಟುಹಾಕಿದ. 1995ರ ಕೊನೆಯವರೆಗೂ ಕೆಲಸ ಮಾಡಿದ ಈ ಸಂಚಾರಿಯ ಮುಖ್ಯ ಉದ್ದೇಶ ಅಂತರಜಾಲದ ಉದ್ದಗಲವನ್ನು ಅಳೆಯುವುದಾಗಿತ್ತು. ಜಾಲದ ಮೊದಲ ಹುಡುಕಾಟ ಯಂತ್ರವಾದ Aliweb 1993ರ ನವೆಂಬರ್ ನಲ್ಲಿ ಕಾಣಿಸಿಕೊಂಡಿತು. ಜಾಲಯಾಂತ್ರಿಕ ರಚನೆಯನ್ನು ಬಳಸದ Aliweb ಆಯಾ ತಾಣದ ನಿರ್ವಾಹಕರ ಮೂಲಕ ಒಂದು ಸಂಯೋಜಿತ ಕ್ರಮದಲ್ಲಿರುವ ಸೂಚಿಕಡತಗಳ ಮಾಹಿತಿಯನ್ನು ಪಡೆದುಕೊಳ್ಳುತ್ತ ಇತ್ತು. JumpStation (ಬಿಡುಗಡೆ: 1993 ಡಿಸೆಂಬರ್[] ಜಾಲಪುಟಗಳನ್ನು ಹುಡುಕಲು ಹಾಗೂ ತನ್ನ ಅನುಕ್ರಮಣಿಕೆಯನ್ನು ರಚಿಸಲು ಜಾಲಯಾಂತ್ರಿಕ ರಚನೆಯನ್ನು ಬಳಸಿಕೊಂಡಿದ್ದೇ ಅಲ್ಲದೆ, ತನ್ನ ಪ್ರಶ್ನೋತ್ತರ ಕ್ರಮವಿಧಿಗಾಗಿ ಜಾಲ ಪತ್ರನಮೂನೆಯೊಂದನ್ನು ಕೂಡ ಬಳಸಿಕೊಂಡಿತು. ಹೀಗಾಗಿ ಇದು ಒಂದು ಅಂತರಜಾಲ ಹುಡುಕಾಟ ಯಂತ್ರದ ಮೂರೂ ಅವಶ್ಯಕ ಅಂಶಗಳನ್ನು (ಸಂಚಾರ, ಸೂಚಿಕೆ ಮತ್ತು ಹುಡುಕಾಟ) ಮೇಳೈಸಿದ World Wide Webನ ಪ್ರಥಮ ಸಂಪನ್ಮೂಲ-ಸಂಶೋಧಕ ಸಾಧನವಾಗಿ ರೂಪುಗೊಂಡಿತು. ಅದರ ವೇದಿಕೆಯ ಸಂಪನ್ಮೂಲಗಳ ಮಿತಿಯ ಕಾರಣದಿಂದಾಗಿ ಅದರ ಅನುಕ್ರಮಣಿಕೆ ಹಾಗೂ ಹುಡುಕಾಟವು ಜಾಲಸಂಚಾರಿಗೆ ಎದುರಾಗುತ್ತಿದ್ದ ಜಾಲಪುಟಗಳ ಶೀರ್ಷಿಕೆ ಮತ್ತು ಶಿರೋನಾಮೆಗಳಿಗಷ್ಟೆ ಸೀಮಿತವಾಗಿತ್ತು.1994ರಲ್ಲಿ ಹೊರಬಂದ ’WebCrawler’ ’ಸಂಪೂರ್ಣ ಮೂಲಪಾಠ’ವನ್ನು ಹುಡುಕಿಕೊಡುವ ಸಂಚಾರೀ ಮೂಲದ ಪ್ರಥಮ ಹುಡುಕಾಟ ಯಂತ್ರವೆನಿಸಿಕೊಂಡಿತು. ತನ್ನ ಪೂರ್ವಜರಂತಿಲ್ಲದ ಇದು ಬಳಕೆದಾರರು ಯಾವುದೇ ಜಾಲಪುಟದ ಯಾವುದೇ ಪದವನ್ನು ಹುಡುಕಲು ಅನುವುಮಾಡಿಕೊಟ್ಟಿದ್ದು ನಂತರದ ಎಲ್ಲಾ ಪ್ರಮುಖ ಹುಡುಕಾಟ ಯಂತ್ರಗಳಿಗೆ ಮಾದರಿಯಾಯಿತು. ಇದು ಮೊದಲ ಬಾರಿಗೆ ಜನಜನಿತವಾಯಿತು ಕೂಡ. ಇದಲ್ಲದೆ 1994ರಲ್ಲಿ ಹೊರಬಂದ Lycos (ಕಾರ್ನೆಜೀ ಮೆಲಾನ್ ವಿಶ್ವವಿದ್ಯಾನಿಲಯ) ಕೂಡಾ ಒಂದು ಪ್ರಮುಖ ವಾಣಿಜ್ಯ ಯೋಜನೆಯಾಗಿ ಅಭಿವೃದ್ಧಿ ಹೊಂದಿತು. ನಂತರ ಬೇಗದಲ್ಲೇ ಹಲವಾರು ಹುಡುಕಾಟ ಯಂತ್ರಗಳು ಹುಟ್ಟಿಕೊಂಡವಲ್ಲದೆ ಜನಪ್ರಿಯವಾಗಲು ಹವಣಿಸಿದವು. Magellan, Excite, Infoseek, Inktomi,Northern Light ಮತ್ತು AltaVista ಇವುಗಳಲ್ಲಿ ಹೆಸರಿಸಬಹುದಾದವು. ಜನಪ್ರಿಯವಾಗಿದ್ದ Yahoo! ಮೂಲಕ ಜನರು ತಮ್ಮ ಆಸಕ್ತಿಯ ಮಾಹಿತಿಯನ್ನೊಳಗೊಂಡ ಜಾಲಪುಟಗಳನ್ನು ಪಡೆಯಬಹುದಾಗಿತ್ತು. ಆದರೆ ಅದರ ಹುಡುಕಾಟ ಕಾರ್ಯನಿರ್ವಹಣೆಯು ಮೂಲಪಾಠದ ಪ್ರತಿಕೃತಿಗಳನ್ನು ಹೊಂದಿದ ಜಾಲಪುಟಗಳ ಬದಲಾಗಿ ಅದರದೇ ಜಾಲ ಸೂಚಿಕೆಯನ್ನು ಆಧರಿಸಿ ನಡೆಯುತ್ತಿತ್ತು. ಮಾಹಿತಿ ಅರಸುವವರು ಒಂದು ಪ್ರಧಾನಪದವನ್ನು ಬಳಸಿ ಹುಡುಕುವುದರ ಬದಲು ವಿಷಯಸೂಚಿಯನ್ನು ಬಳಸಿ ಶೋಧಿಸಲೂ ಅವಕಾಶವಿತ್ತು.

1996ರಲ್ಲಿ Netscape ತನ್ನ ವೈಶಿಷ್ಟ್ಯತೆಯನ್ನು ತೋರುವ ಹುಡುಕಾಟ ಯಂತ್ರವೊಂದರೊಡನೆ ಅನನ್ಯವಾದ ಒಪ್ಪಂದ ಮಾಡಲು ಶೋಧ ಮಾಡತೊಡಗಿತು. ಇದು ಎಷ್ಟೊಂದು ಆಸಕ್ತಿ ಹುಟ್ಟಿಸಿತೆಂದರೆ ಒಂದರ ಬದಲಾಗಿ ಐದು ಹುಡುಕಾಟ ಯಂತ್ರಗಳು Netscapeನೊಡನೆ ಸರದಿಯಲ್ಲಿ ವರುಷಕ್ಕೆ 5 ಮಿಲಿಯ ಡಾಲರುಗಳಂತೆ ವರುಷಕ್ಕೊಬ್ಬೊಬ್ಬರಾಗಿ Netscape ಹುಡುಕಾಟ ಯಂತ್ರದ ಮುಖಗಳಾಗುವಂತೆ ಒಪ್ಪಂದ ಕುದುರಿಸಲಾಯಿತು. Yahoo!, Magellan, Lycos, Infoseek ಮತ್ತು Excite ಆ ಐದು ಯಂತ್ರಗಳು.

ಅಂತರಜಾಲದ ಮೇಲೆ ಹಣಹೂಡಲು ತೊಂಭತ್ತರ ದಶಕದ ಕೊನೆಯಲ್ಲಿ ನೂಕುನುಗ್ಗಲು ಆರಂಭವಾದಾಗ ಹುಡುಕಾಟ ಯಂತ್ರಗಳನ್ನು ಆಕರ್ಷಕ ಮಿನುಗುತಾರೆಗಳೆಂದು ಪರಿಭಾವಿಸಲಾಗುತ್ತಿತ್ತು. ಹಲವಾರು ಸಂಸ್ಥೆಗಳು ಇದೇ ವೇಳೆಯಲ್ಲಿ ಪ್ರಾಸ್ತಾವಿಕ ಸಾರ್ವಜನಿಕ ಅರ್ಪಣೆಯ ಸಮಯದಲ್ಲಿ ದಾಖಲೆ ಮೊತ್ತದ ಲಾಭಗಳಿಸುವುದರೊಡನೆ ಮಾರುಕಟ್ಟೆಗೆ ರೋಚಕವಾದ ರೀತಿಯಲ್ಲಿ ಪ್ರವೇಶ ಮಾಡಿದವು. ಈಗ ಸುಮಾರು ಸಾರ್ವಜನಿಕ ಹುಡುಕಾಟ ಯಂತ್ರಗಳು ಚಾಲ್ತಿಯಲ್ಲಿಲ್ಲ ಹಾಗೂ ಚಾಲ್ತಿಯಲ್ಲಿದ್ದರೂ ಕೂಡ Northern Light ನಂತೆ ಉದ್ಯಮ-ನಿರ್ದಿಷ್ಟ ಆವೃತ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಲಿವೆ. ಬರೆ ಊಹೆಗಳನ್ನೆ ಆಧರಿಸಿದ ಏರಿಕೆಯ ಮಾರುಕಟ್ಟೆಯನ್ನು ಹೊಂದಿದ್ದ ಹಲವಾರು ಹುಡುಕಾಟ ಯಂತ್ರ ಸಂಸ್ಥೆಗಳನ್ನೊಳಗೊಂಡಿದ್ದ ಡಾಟ್ ಕಾಂ ಗುಳ್ಳೆಯು 1999ರಲ್ಲಿ ತನ್ನ ಉಚ್ಛ್ರಾಯಸ್ಥಿತಿಯನ್ನು ತಲುಪಿ 2001ರಲ್ಲಿ ಕೊನೆಗೊಂಡಿತು. ಸುಮಾರು 2000ದ ಸುತ್ತಮುತ್ತ Google ಹುಡುಕಾಟ ಯಂತ್ರ ಪ್ರಮುಖ ಸ್ಥಾನಕ್ಕೇರಿ ನಿಂತಿತು. ಈ ಸಂಸ್ಥೆಯು Page Rank ಎಂಬ ಸಂಶೋಧನೆಯ ಮೂಲಕ ಹಲವಾರು ಶೋಧನೆಗಳಿಗೆ ಉತ್ತಮ ಫಲಿತಾಂಶ ದೊರಕುವಂತೆ ಮಾಡಿದ ಹೆಗ್ಗಳಿಕೆ ಪಡೆಯಿತು. ಈ ಪುನರ್ಗಣನ ಪದ್ಢತಿಯು ಉತ್ತಮ ಮತ್ತು ಅವಶ್ಯಕ ಜಾಲಪುಟಗಳ ಮತ್ತು ಜಾಲತಾಣಗಳ ಹೆಚ್ಚು ಕೊಂಡಿಗಳನ್ನು ಹೊಂದಿದ ಪುಟಗಳನ್ನು ಅವುಗಳ ಸಂಖ್ಯೆ ಮತ್ತು Page Rankನ ಆಧಾರದ ಮೇಲೆ ಶ್ರೇಣೀಕರಿಸುತ್ತದೆ. Google ತನ್ನ ಹುಡುಕಾಟ ಯಂತ್ರದಲ್ಲಿ ಅತ್ಯಲ್ಪವಾದ ನಿರ್ಬಂಧ ಮತ್ತು ಕಡಿಮೆ ಆದೇಶಗಳಿರುವಂತೆ ಏರ್ಪಾಡು ಮಾಡಿತು. ಇದಕ್ಕೆ ವ್ಯತಿರಿಕ್ತವಾಗಿ ಅದರ ಹಲವಾರು ಸ್ಪರ್ಧಿಗಳು ಜಾಲದ್ವಾರಗಳಲ್ಲಿಯೇ ಹುಡುಕಾಟ ಯಂತ್ರವನ್ನು ಅಳವಡಿಸಿದವು. 2000ದ ಹೊತ್ತಿಗೆ Yahoo Inktomiಯ ಹುಡುಕಾಟ ಯಂತ್ರವನ್ನು ಬಳಸಿಕೊಂಡು ಶೋಧನಾ ಸೇವೆಗಳನ್ನು ಸಲ್ಲಿಸತೊಡಗಿತ್ತು. Yahoo! 2002ರಲ್ಲಿ Inktomiಯನ್ನು ಮತ್ತು 2003ರಲ್ಲಿ (AlltheWeb ಮತ್ತು AltaVistaಗಳ ಒಡೆತನವಿದ್ದ) Overture ಅನ್ನು ತನ್ನ ಸ್ವಾಮ್ಯಕ್ಕೊಳಪಡಿಸಿಕೊಂಡಿತು. Google ಹುಡುಕಾಟ ಯಂತ್ರವನ್ನು 2004ರವರೆಗೆ ಬಳಸಿಕೊಂಡ ನಂತರ Yahoo! ತನಗೆ ಪ್ರಾಪ್ತವಾಗಿದ್ದ ಹಲವಾರು ತಂತ್ರಜ್ಞಾನಗಳನ್ನು ಬಳಸಿಕೊಂಡು ತನ್ನದೇ ಹುಡುಕಾಟ ಯಂತ್ರವನ್ನು ಆರಂಭಿಸಿತು. Microsoft 1998ರ ಚಳಿಗಾಲದಲ್ಲಿ Inktomiಯ ಶೋಧನಾ ಫಲಿತಾಂಶಗಳನ್ನು ಬಳಸಿಕೊಂಡು ಮೊದಲ ಬಾರಿಗೆ MSN Search ಅನ್ನು ಆರಂಭಿಸಿತು. 1999ರ ಆರಂಭದ ದಿನಗಳಲ್ಲಿ Looksmart ನ ಪಟ್ಟಿ ಮತ್ತು Inktomiಯ ಫಲಿತಾಂಶಗಳನ್ನು ಕೂಡಿಸಿ ಬಳಸುತ್ತಿದ್ದ ಈ ತಾಣವು ಕೆಲಕಾಲದವರೆಗೆ AltaVistaದ ಫಲಿತಾಂಶಗಳನ್ನು ಕೂಡ ಬಳಸಿಕೊಂಡಿತು. 2004ರಲ್ಲಿ Microsoft ತನ್ನ ಜಾಲಸಂಚಾರಿಯಾದ MSNbot ನಿಂದ ಬಲಗೊಂಡ ಶೋಧನಾ ತಂತ್ರಜ್ಞಾನದೆಡೆ ಸ್ತಿತ್ಯಂತರಗೊಳ್ಳತೊಡಗಿತು.

Microsoft ನ ನೂತನ ಹುಡುಕಾಟ ಯಂತ್ರವಾದ Bing ಅನ್ನು 2009ರ ಜೂನ್ 1ರಂದು ಹೊರತರಲಾಯಿತು.2009ರ ಜುಲೈ 29ರಂದು Microsoft ನ Bing ತಂತ್ರಜ್ಞಾನವು Yahoo!Search ಅನ್ನು ಬಲಪಡಿಸುವಂತೆ Yahoo! ಮತ್ತು Microsoft ನಡುವೆ ಒಪ್ಪಂದ ಕುದುರಿಸಲಾಯಿತು. Hitboxನ[] ಪ್ರಕಾರ Google ನ ವಿಶ್ವವಿಖ್ಯಾತಿಯು ಡಿಸೆಂಬರ್ 2008ರಲ್ಲಿ ಶೇಕಡಾ 82.7ರ ಎತ್ತ್ಸರ ತಲುಪಿತು. ಜುಲೈ 2009ರ ಶ್ರೇಯಾಂಕ ಪಟ್ಟಿಯಲ್ಲಿ Google(78.4%)ಗೆ ದೊರಕುತ್ತಿದ್ದ ಸಂಚಾರವು ಪ್ರತಿಸ್ಪರ್ಧಿಗಳಾದ Baidu(8.87%) ಮತ್ತು Bing(3.17%)ಗಳಿಂದಾಗಿ ಕಡಿಮೆಯಾಗಿರುವುದು ಕಂಡುಬಂದಿತು. Yahoo!Search (7.16%)ಮತ್ತು AOL(0.6%) ನ ಮಾರುಕಟ್ಟೆಯ ಶೇರುಗಳಲ್ಲಿ ಕೂಡಾ ಕುಸಿತ ಕಾಣಿಸಿತು.

Nielsen NetRatings ಪ್ರಕಾರ ಮೇ 2009ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ Google ಶೇಕಡಾ 63.2ರಷ್ಟು ಮಾರುಕಟ್ಟೆ ಶೇರುಗಳನ್ನು ಹೊಂದಿತ್ತು.[13] 2009ರ ಜುಲೈಯ ಹೊತ್ತಿಗೆ Baidu ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಜಾಲ ಹುಡುಕಾಟ ಮಾರುಕಟ್ಟೆಯಲ್ಲಿ ಶೇಕಡಾ 61.6% ಶೇರುಗಳನ್ನು ಹೊಂದಿತ್ತು.[14]

ಯಂತ್ರಗಳ ಕಾರ್ಯನಿರ್ವಹಣಾ ವಿಧಾನ

ಬದಲಾಯಿಸಿ

ಒಂದು ಹುಡುಕಾಟ ಯಂತ್ರವು ಈ ಕೆಳಗಿನ ಕ್ರಮದಲ್ಲಿ ಕಾರ್ಯನಿರ್ವಹಿಸುತ್ತದೆ.

  1. ಜಾಲ ಸಂಚಾರ
  2. ಅನುಕ್ರಮಣಿಕೆ
  3. ಹುಡುಕಾಟ

ಜಾಲ ಹುಡುಕಾಟ ಯಂತ್ರಗಳು World Wide Webನಲ್ಲಿ ದೊರಕುವ ಹಲವಾರು ಜಾಲಪುಟಗಳ ಮಾಹಿತಿಯನ್ನು ಕೂಡಿಟ್ಟುಕೊಳ್ಳುವುದರ ಮೂಲಕ ಕಾರ್ಯನಿರ್ವಹಿಸುತ್ತವೆ. ತನ್ನ ಗಮನಕ್ಕೆ ಬಂದ ಎಲ್ಲ ಕೊಂಡಿಗಳನ್ನೂ ಹಿಂಬಾಲಿಸುವ ಜಾಲಶೋಧನಾ ಸ್ವಯಂಚಾಲಿತ ಜಾಲಸಂಚಾರಿಯು (ಕೆಲವೊಮ್ಮೆ ಇದನ್ನು spider ಎಂದೂ ಕರೆಯಲಾಗುತ್ತದೆ) ಈ ಜಾಲಪುಟಗಳನ್ನು ಮರಳಿ ಪಡೆಯುತ್ತದೆ. robots.txtಯನ್ನು ಬಳಸಿಕೊಂಡು ಕೆಲ ಬದಲಾವಣೆಗಳನ್ನು ಮಾಡಬಹುದು. ಪ್ರತಿಯೊಂದು ಪುಟದ ವಿಷಯವನ್ನೂ ಹೇಗೆ ವಿಷಯಸೂಚಿಗೆ ಅಳವಡಿಸಬೇಕೆನ್ನುವುದಕ್ಕಾಗಿ ವಿಶ್ಲೇಷಿಸಲಾಗುತ್ತದೆ (ಉದಾಹರಣೆಗೆ, ಮುಖ್ಯಪದಗಳನ್ನು ಶೀರ್ಷಿಕೆಗಳು,ಶಿರೋನಾಮೆಗಳು ಅಥವಾ ಮೆಟಾ ಟ್ಯಾಗ್‌ಗಳೆಂಬ ವಿಶೇಷ ಕ್ಷೇತ್ರಗಳಿಂದ ಆಯ್ದುಕೊಳ್ಳಲಾಗುವುದು). ಜಾಲಪುಟಗಳ ದತ್ತಾಂಶಗಳನ್ನು ಭವಿಷ್ಯದ ಪ್ರಶ್ನೆಗಳ ಬಳಕೆಗಾಗಿ ವಿಷಯಸೂಚಿ ದತ್ತಸಂಚಯವೊಂದರಲ್ಲಿ ಸಂಗ್ರಹಿಲಾಗುವುದು. Google ನಂತಹ ಹಲವು ಹುಡುಕಾಟ ಯಂತ್ರಗಳು ಮೂಲ ಪುಟದ ಪೂರ್ಣ ಅಥವಾ ಸ್ವಲ್ಪ ಭಾಗ (ಇದನ್ನು cache ಅಥವಾ ಸಂಗ್ರಹ ಎಂದು ಕರೆಯಲಾಗುವುದು)ಹಾಗೂ ಜಾಲಪುಟಗಳ ಬಗ್ಗೆ ಮಾಹಿತಿ ಹೊಂದಿದ್ದರೆ, AltaVistaದಂತಹ ಕೆಲ ಯಂತ್ರಗಳು ತಾವು ಕಂಡುಹಿಡಿದ ಪ್ರತಿಯೊಂದು ಜಾಲಪುಟದ ಪ್ರತಿಯೊಂದು ಪದವನ್ನೂ ಕೂಡಿಡುತ್ತವೆ. ಈ cache ಯು ಅನುಕ್ರಮಣಿಕೆಯ ಹುಡುಕಾಟದ ಮೂಲಪಾಠವನ್ನು ಯಾವಾಗಲೂ ಹೊಂದಿರುವುದರಿಂದ ಆ ಪುಟವು ನವೀಕರಣಗೊಂಡು ಹುಡುಕಾಟದ ಮೂಲಪದಗಳು ಅದರಲ್ಲಿ ಇಲ್ಲದಿದ್ದಾಗಲೂ ಇದು ಉಪಯೋಗಕ್ಕೆ ಬರುತ್ತದೆ. ಈ ಸೌಮ್ಯರೀತಿಯ linkrotನ ತೊಂದರೆಯನ್ನು Google ನಿರ್ವಹಿಸುವುದರಿಂದ ಅದರ ಉಪಯುಕ್ತತೆ ಹೆಚ್ಚುತ್ತದೆ ಮತ್ತು ಮರಳಿ ತೆರೆದ ಪುಟಗಳಲ್ಲಿ ಹುಡುಕಾಟದ ವಿಷಯಗಳು ದೊರಕುವ ಸಂಭಾವ್ಯತೆಗಳು ಹೆಚ್ಚಿರುವದರಿಂದ ಬಳಕೆದಾರರ ಸಂತೃಪ್ತಿಯೂ ಹೆಚ್ಚುತ್ತದೆ. ಬಳಕೆದಾರ ತನಗೆ ಬೇಕಾದ ಹುಡುಕಾಟದ ವಿಷಯಗಳು ಮರಳಿಪಡೆದ ಪುಟಗಳಲ್ಲಿರುತ್ತವೆ ಎಂದು ಮುಂದಾಗಿಯೇ ನಿರೀಕ್ಷಿಸುವುದರಿಂದ ಕನಿಷ್ಟ ಅಚ್ಚರಿಯ ನಿಯಮವನ್ನು ಪೂರಯಿಸಿದಂತಾಗುತ್ತದೆ. ಹೀಗೆ ವಿಸ್ತರಿಸಿದ ಹುಡುಕಾಟದ ಪ್ರಾಮುಖ್ಯತೆಯು ಇನ್ನೆಲ್ಲೂ ದೊರಕದ ದತ್ತಾಂಶದ ಶೇಖರಣೆಗಳಾದ ಈ cacheಗಳನ್ನು ಇದಕ್ಕಿಂತಲೂ ಹೆಚ್ಚು ಉಪಯುಕ್ತವನ್ನಾಗಿ ಮಾಡುತ್ತವೆ. ಗ್ರಾಹಕನೊಬ್ಬ (ಎಂದಿನಂತೆ ಪ್ರಧಾನಪದಗಳನ್ನು ಬಳಸಿ) ಹುಡುಕಾಟ ಯಂತ್ರಕ್ಕೆ ಪ್ರಶ್ನೆಹಾಕಿದಾಗ ಯಂತ್ರವು ವಿಧ್ಯುಕ್ತವಾಗಿ ಅನುಕ್ರಮಣಿಕೆಯನ್ನು ಪರೀಕ್ಷಿಸಿ ಹೆಚ್ಚು ಸರಿಹೊಂದುವ ಜಾಲಪುಟಗಳನ್ನು ಅವುಗಳ ಶೀರ್ಷಿಕೆ ಹಾಗೂ ಕೆಲಸಾರಿ ಮೂಲಪಾಠದ ಕೆಲ ಭಾಗಗಳನ್ನೊಳಗೊಂಡ ಪುಟ್ಟ ಸಾರಾಂಶದೊಡನೆ ಪಟ್ಟಿಯ ರೂಪದಲ್ಲಿ ಪ್ರಕಟಿಸುತ್ತದೆ. ಹೆಚ್ಚಿನ ಹುಡುಕಾಟ ಯಂತ್ರಗಳು ಹುಡುಕಾಟದ ಸವಾಲುಗಳನ್ನು ಹೆಚ್ಚು ಸ್ಪಷ್ಟವಾಗಿಸಲು boolean ಕಾರ್ಯನಿರ್ವಾಹಕಗಳಾದ AND, OR ಮತ್ತು NOT ಗಳನ್ನು ಬಳಸುತ್ತವೆ.ಕೆಲವು ಹುಡುಕಾಟ ಯಂತ್ರಗಳು ಸುಧಾರಿತ proximity searchಅನ್ನು ದೊರಕಿಸಿಕೊಡುವುದರ ಮೂಲಕ ಪ್ರಧಾನಪದಗಳ ನಡುವಣ ದೂರವನ್ನು ನಿಶ್ಚಯಿಸಲು ಕೂಡ ಬಳಕೆದಾರರಿಗೆ ಅವಕಾಶ ನೀಡುತ್ತವೆ. ಒಂದು ಹುಡುಕಾಟ ಯಂತ್ರದ ಉಪಯುಕ್ತತೆಯು ಅದು ಮರಳಿ ನೀಡುವ ಫಲಿತಾಂಶ ಗುಚ್ಛ ವನ್ನು ಅವಲಂಬಿಸಿರುತ್ತದೆ. ಒಂದು ಮೂಲಪದ ಅಥವಾ ನುಡಿಗಟ್ಟನ್ನೊಳಗೊಂಡ ಮಿಲಿಯಗಟ್ಟಲೆ ಜಾಲಪುಟಗಳಿರಬಹುದಾದರೂ ಅವುಗಳಲ್ಲಿ ಕೆಲವು ಪುಟಗಳು ಮಾತ್ರ ಇತರೆ ಪುಟಗಳಿಂತ ಹೆಚ್ಚು ಪ್ರಮುಖವೂ, ಜನಪ್ರಿಯವೂ ಅಥವಾ ಅಧಿಕೃತವೂ ಆಗಿರಬಹುದು.ಹೆಚ್ಚಿನ ಹುಡುಕಾಟ ಯಂತ್ರಗಳು 'ಉತ್ತಮ' ಫಲಿತಾಂಶಗಳನ್ನು ಮೊತ್ತಮೊದಲು ನೀಡುವ ಸಲುವಾಗಿ ಆ ಫಲಿತಾಂಶಗಳನ್ನು ಶ್ರೇಣೀಕೃತಗೊಳಿಸುವ ಕ್ರಮವಿಧಾನಗಳನ್ನು ಅನುಸರಿಸುತ್ತವೆ. ಅತ್ಯುತ್ತಮ ಪುಟಗಳು ಯಾವುವು ಮತ್ತ್ತು ಯಾವ ಕ್ರಮದಲ್ಲಿ ಫಲಿತಾಂಶಗಳನ್ನು ಪ್ರಕಟಿಸಬೇಕೆನ್ನುವ ವಿಧಾನಗಳಲ್ಲಿ ಒಂದು ಯಂತ್ರದಿಂದ ಇನ್ನೊಂದು ಯಂತ್ರಕ್ಕೆ ಇರುವ ವ್ಯತ್ಯಾಸಗಳು ಎದ್ದುಕಾಣುತ್ತವೆ. ಅಂತರಜಾಲದ ಬಳಕೆ ಮತ್ತು ಹೊಸ ತಂತ್ರಜ್ಞಾನಗಳು ಕಾಲಾನುಕ್ರಮದಲ್ಲಿ ವಿಕಸಿತವಾಗುತ್ತ ಹೋದಂತೆ ಈ ವಿಧಾನಗಳೂ ಕೂಡ ಬದಲಾಗುತ್ತಿವೆ.

ಹೆಚ್ಚಿನ ಹುಡುಕಾಟ ಯಂತ್ರಗಳು ಜಾಹೀರಾತು ಆದಾಯದಿಂದ ಬೆಂಬಲಿಸಲ್ಪಟ್ಟ ವ್ಯಾವಹಾರಿಕ ಯೋಜನೆಗಳಾದ ಕಾರಣ ಕೆಲವು ಯಂತ್ರಗಳು ಜಾಹೀರಾತುದಾರರು ಹಣಪಾವತಿಸಿ ತಮ್ಮ ಪಟ್ಟಿಗಳ ಸ್ಥಾನವು ಮೊದಲಿನಲ್ಲಿರುವಂತೆ ತಮ್ಮ ಹುಡುಕಾಟ ಫಲಿತಾಂಶಗಳಲ್ಲಿ ಅನುಕೂಲ ಮಾಡಿಕೊಡುತ್ತವೆ. ತಮ್ಮ ಹುಡುಕಾಟ ಯಂತ್ರದ ಫಲಿತಾಂಶಗಳಿಗಾಗಿ ಹಣಪಾವತಿಯನ್ನು ಸ್ವೀಕರಿಸದ ಹುಡುಕಾಟ ಯಂತ್ರಗಳು ತಮ್ಮ ನಿಯಮಿತ ಫಲಿತಾಂಶಗಳ ಪಕ್ಕದಲ್ಲಿ ಹುಡುಕಾಟಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಕಟಿಸಿ ಹಣ ಸಂಪಾದಿಸುತ್ತವೆ. ಪ್ರತಿಬಾರಿ ಯಾರಾದರೂ ಇಂತಹ ಜಾಹೀರಾತುಗಳ ಮೇಲೆ ಕ್ಲಿಕ್ಕಿಸಿದಾಗಲೆಲ್ಲ ಹುಡುಕಾಟ ಯಂತ್ರಕ್ಕೆ ಹಣಪಾವತಿಯಾಗುತ್ತದೆ.

ವಿವರಗಳಿಗಾಗಿ ನೋಡಿ

ಬದಲಾಯಿಸಿ
  • ಸಹಕಾರೀ ಹುಡುಕಾಟ ಯಂತ್ರ
  • ಅನುಕ್ರಮಣಿಕೆ (ಹುಡುಕಾಟ ಯಂತ್ರ)
  • ಹುಡುಕಾಟ ಯಂತ್ರಗಳ ಪಟ್ಟಿ
  • ಪ್ರಾದೇಶಿಕ ಹುಡುಕಾಟ (ಅಂತರಜಾಲ)
  • ಮೆಟಾ ಹುಡುಕಾಟ ಯಂತ್ರ
  • ಮುಕ್ತ ಹುಡುಕಾಟ
  • ಹುಡುಕಾಟ ಯಂತ್ರದ ಮಾರುಕಟ್ಟೆ ತಂತ್ರ
  • ಹುಡುಕಾಟ ಯಂತ್ರವನ್ನು ಉತ್ತಮಗೊಳಿಸುವುದು
  • ಹುಡುಕಾಟ ಸಂಬಂಧೀ ವಾಸ್ತುಶಾಸ್ತ್ರ
  • ಆಯ್ಕೆ ಆಧರಿಸಿದ ಹುಡುಕಾಟ
  • ಶಬ್ದಾರ್ಥ ಸೂಚಕ ಜಾಲ
  • ಸಾಮಾಜಿಕ ಹುಡುಕಾಟ
  • ಕಾಗುಣಿತ ಪರೀಕ್ಷಕ
  • ಜಾಲ ಅನುಕ್ರಮಣಿಕೆ
  • ಜಾಲ ಹುಡುಕಾಟ ಸವಾಲುಗಳು
  • ಜಾಲತಾಣ ಶಬ್ದಲಕ್ಷಣ ಮಾದರಿ

ಆಕರಗಳು

ಬದಲಾಯಿಸಿ
  • GBMW: Slashdot-BMW(05-ಫೆಬ್ರವರಿ-2006) ರೀತಿಯ 30ದಿನಗಳ ಶಿಕ್ಷೆಯ ವರದಿ, ಉದಾ. ಕಾರ್ ಉತ್ಪಾದಕ ಬಿಎಮ್ ಡಬ್ಲ್ಯೂ Google ನಿಂದ ಪಟ್ಟಿಯಿಂದ ಜರ್ಮನ್ ಜಾಲತಾಣ bmw.de ಅನ್ನು ಹೊರಹಾಕಿಸಿತು.
  • ಐಎನ್ ಎಸ್ ಐ ಜೆಡ್ (INSIZ): MSN /Google/Yahoo ನಲ್ಲಿ ಸೂಚಿತವಾಗಿರುವ ಜಾಲಪುಟಗಳ ಗರಿಷ್ಠ ಗಾತ್ರ.

! ("100-ಕೆಬಿ ಮಿತಿ"): ಗರಿಷ್ಠ ಪುಟ-ಗಾತ್ರ (28ಏಪ್ರಿಲ್ 2006).


ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • ಮೊದಲ ಹುಡುಕಾಟ ಯಂತ್ರಗಳ ವಿಸ್ತೃತ ಇತಿಹಾಸಕ್ಕಾಗಿ (ಕ್ರಿಸ್ ಶೆರ್ಮನ್ ನ ಸೆಪ್ಟೆಂಬರ್ 2003ರ Search Engine Watchನಲ್ಲಿರುವ) Search Engine Birthdays Archived 2008-10-02 ವೇಬ್ಯಾಕ್ ಮೆಷಿನ್ ನಲ್ಲಿ. ಅನ್ನು ನೋಡಿ.
  • Steve Lawrence; C. Lee Giles (1999). "Accessibility of information on the web". Nature. 400: 107. doi:10.1038/21987. {{cite journal}}: Cite has empty unknown parameters: |quotes= and |month= (help)CS1 maint: multiple names: authors list (link)
  • Bing ಲ್ಯೂ(2007), Web Data Mining: Exploring Hyperlinks, Contents and Usage Data. Springer, ISBN 3-540-37881-2
  • Levene, Mark (2005). An Introduction to Search Engines and Web Navigation. Pearson.
  • Hock, Randolph (2007). The Extreme Searcher's Handbook. ISBN 978-0-910965-76-7
  • Javed Mostafa (2005). "Seeking Better Web Searches". Scientific American Magazine. {{cite journal}}: Cite has empty unknown parameter: |quotes= (help); Unknown parameter |month= ignored (help)
  • Ross, Nancy (2000). "End user searching on the Internet: An analysis of term pair topics submitted to the Excite search engine". Journal of the American Society for Information Science. 51 (10): 949–958. doi:10.1002/1097-4571(2000)51:10<949::AID-ASI70>3.0.CO;2-5. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)
  • Xie, M. (1998). "Quality dimensions of Internet search engines". Journal of Information Science. 24 (5): 365–372. doi:10.1177/016555159802400509. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)

ಹೊರಗಿನ ಕೊಂಡಿಗಳು

ಬದಲಾಯಿಸಿ