೨೦೨೪ ರ ರಿಯಾಸಿ ಧಾಳಿ
2024 ರಿಯಾಸಿ ಅಟ್ಯಾಕ್ | |
---|---|
Part of ಕಾಶ್ಮೀರದ ಬಿಕ್ಕಟ್ಟು | |
Location | ರಿಯಾಸಿ, ಜಮ್ಮು_ಮತ್ತು_ಕಾಶ್ಮೀರ, ಭಾರತ |
Date | 9 ಜೂನ್ 2024 |
Target | ಹಿಂದೂ |
Attack type | ಶೂಟಿಂಗ್ |
Weapons | ರೈಫಲ್ಸ್ |
Deaths | 9 |
Non-fatal injuries | 33 |
2024 ರ ರಿಯಾಸಿ ದಾಳಿಯು ಇದು ಹಿಂದೂ ಯಾತ್ರಿಕರ ಮೇಲೆ [೧] ಭಯೋತ್ಪಾದಕರ ದಾಳಿಯಾಗಿದ್ದು, 9 ಜೂನ್ 2024 ರಂದು ಸಂಭವಿಸಿದೆ, ಭಯೋತ್ಪಾದಕರು ಹಿಂದೂ ಯಾತ್ರಿಕರು ಶಿವ ಖೋರಿ ಗುಹೆಯಿಂದ ಕತ್ರಾ, ರಿಯಾಸಿಗೆ ಬಸ್ಸಿನಲ್ಲಿ ಸಾಗಿತಿದ್ದಾಗ ಹೊಂಚು ಹಾಕಿ, ಸಂಚು ಮಾಡಿ ದಾಳಿ ಮಾಡೆದರು. ದಾಳಿಯಲ್ಲಿ ಬಸ್ಸು ಅಪಘಾತಕ್ಕೆ ಕಾರಣವಾಯಿತು. ದಾಳಿಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಮತ್ತು ಹೆಚ್ಚುವರಿ 33 ಮಂದಿ ಗಾಯಗೊಂಡಿದ್ದಾರೆ. [೨]
ದಾಳಿ
ಬದಲಾಯಿಸಿ9 ಜೂನ್ 2024 ರಂದು ಸರಿಸುಮಾರು ಬೆ 6:15 ಕ್ಕೆ, ತೆರ್ಯಾತ್ ಗ್ರಾಮದಲ್ಲಿ ಹಿಂದೂ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ 53 ಆಸನಗಳ ಪ್ರಯಾಣಿಕ ಬಸ್ಸಿನ ಮೇಲೆ ಬಂದೂಕುಗಳಿಂದ ಶಸ್ತ್ರಸಜ್ಜಿತವಾದ ಉಗ್ರಗಾಮಿಗಳು 25 ರಿಂದ 30 ಗುಂಡುಗಳನ್ನು ಮನಬಂದಂತೆ ಹಾರಿಸಿದರು. ಚಾಲಕ ಗುಂಡೇಟಿನಿಂದ ಗಯಗೊಂಡಾಗ ಬಸ್ಸು ನಿಯಂತ್ರಣ ಕಳೆದುಕೊಂಡು ಕಮರಿಗೆ ಜಾರಿತು. [೩] ಒಂದು ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 33 ಜನರು ಗಾಯಗೊಂಡಿದ್ದಾರೆ. [೪] [೫] ಹಲವಾರು ಯಾತ್ರಿಗಳಿಗೆ ಗುಂಡೇಟಿನ ಗಾಯಗಳಾಗಿದ್ದು, ಸ್ಥಳದಲ್ಲಿ ಖಾಲಿ ಕ್ಯಾರ್ಟ್ರಿಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ. [೬] [೭] ಯಾವುದೇ ಗುಂಪು ದಾಳಿಯ ಜವಾಬ್ದಾರಿಯನ್ನು ವಹಿಸಿಕೂಂಡಿಲ್ಲ. ಆದಾಗ್ಯೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಅಭಿಯಾನಗಳನ್ನು ನಡೆಸುವ ಇಸ್ಲಾಮಿಕ್ ಉಗ್ರಗಾಮಿಗಳು ಹಿಂದೂಗಳ ವಿರುದ್ಧ ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ. [೪] [೨]
ದಾಳಿಯ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಮಯದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಮಿಲಿಟರಿ ಹೆಲಿಕಾಪ್ಟರ್ ಅನ್ನು ಸಹಾಯಕ್ಕೆ ರವಾನಿಸಲಾಯಿತು. [೮] [೯] ಬದುಕುಳಿದವರಿಗೆ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ದಾಳಿಕೋರರಿಗಾಗಿ ಶೋಧ ಆರಂಭಿಸಿದ್ದಾರೆ. [೧೦]
ಸಹ ನೋಡಿ
ಬದಲಾಯಿಸಿ- 2017 ಅಮರನಾಥ ಯಾತ್ರೆ ದಾಳಿ
- 2023 ರಜೌರಿ ದಾಳಿಗಳು
- ಭಾರತದಲ್ಲಿ ಭಯೋತ್ಪಾದಕ ಘಟನೆಗಳ ಪಟ್ಟಿ
ಉಲ್ಲೇಖಗಳು
ಬದಲಾಯಿಸಿ- ↑ Khajuria, Ravi Krishnan. "9 killed, 41 injured as terrorists ambush bus carrying pilgrims in J&K's Reasi".
{{cite news}}
: CS1 maint: url-status (link) - ↑ ೨.೦ ೨.೧ "At least nine killed after attack on bus in Indian-administered Kashmir". Al Jazeera (in ಇಂಗ್ಲಿಷ್). Retrieved 2024-06-10.
- ↑ "9 killed, 33 injured as terrorists open fire at bus carrying pilgrims in J&K's Reasi". Hindustan Times. 9 June 2024. Retrieved 9 June 2024.
- ↑ ೪.೦ ೪.೧ "At least 9 dead after suspected militants in Kashmir fire at Hindu pilgrims, sending bus into gorge". ABC News (in ಇಂಗ್ಲಿಷ್). Retrieved 2024-06-10.
- ↑ "Reasi terror attack: 9 pilgrims killed, leaders condole loss, PM Modi takes stock of situation". Hindustan Times. 10 June 2024. Retrieved 10 June 2024.
- ↑ "9 Hindu pilgrims dead after militant attack in India's Kashmir, police say". South China Morning Post (in ಇಂಗ್ಲಿಷ್). 2024-06-10. Retrieved 2024-06-10.
- ↑ Ashiq, Peerzada (2024-06-09). "Reasi bus accident: Nine pilgrims killed as their bus comes under fire in Jammu". The Hindu (in Indian English). ISSN 0971-751X. Retrieved 2024-06-10.
- ↑ "Terrorists open fire on bus carrying pilgrims in Jammu-Kashmir; 10 dead, 33 injured". WION (in ಅಮೆರಿಕನ್ ಇಂಗ್ಲಿಷ್). 2024-06-09. Retrieved 2024-06-10.
- ↑ "10 killed, over 30 injured after terrorists open fire at bus carrying pilgrims in J&K". The Times of India. ISSN 0971-8257. Retrieved 2024-06-10.
- ↑ "Nine Hindu pilgrims dead in India's Jammu after militant attack, police say". Reuters. 9 June 2024. Retrieved 9 June 2024.