೨೦೧೬ ರ ಬೇಸಿಗೆ ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತ


India
ಭಾರತ
ಪ್ಯಾರಾಲಿಂಪಿಕ್ಸ್‍ 2016
ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳುಬಳೆಗಳು:೧.ಏಷ್ಯಾ, ೨.ಯೂರೋಪ್, ೩.ಆಫ್ರಕಾ, ೪.ಆಸ್ಟ್ರೇಲಿಯಾ, ೫.ಉತ್ತರ ಮತ್ತು ದಕ್ಷಿಣ ಅಮೇರಿಕಾಗಳು. *ಲ್ಯಾಟಿನ್ ಭಾಷೆಯ, "ಸಿಟಿಯಸ್, ಆಲ್ಟಿಯಸ್, ಫೋರ್ಟಿಯಸ್"; ಅಂದರೆ "ಕ್ಷಿಪ್ರವಾಗಿ,ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ

೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫೫

ಸಂಕ್ಷಿಪ್ತ ವಿವರ
  • ಹೆಸರು = ೨೦೧೬ ರ ಬೇಸಿಗೆ ಪ್ಯಾರಾಲಿಂಪಿಕ್ಸ್‍,
  • ಭಾಗವಹಿಸುವವರು=19
  • ಕ್ರೀಡೆ= = 5
  • ಮನುಕುಲಕ್ಕೆ ಸ್ಫೂರ್ತಿ
  • ಭಾಗವಹಿಸುವ ಕ್ರೀಡಾಪಟುಗಳು=16 ಪುರುಷರು,3 ಮಹಿಳೆಯರು
  • ಧ್ವಜ = ದೇವೇಂದ್ರ Jhajharia (ಆರಂಭಿಕ)
  • 2016
  • 2012
  • ೨೦೦೮
  • 'ಪದಕಗಳ ಪಟ್ಟಿ
  • (19-9-2016 ಕ್ಕೆ)
  • ಚಿನ್ನ = 2
  • ಬೆಳ್ಳಿ =1
  • ಕಂಚು = 1
  • ಶ್ರೇಣಿ =1
.
  • ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ ಆಡಳಿತದಲ್ಲಿ ವಿಕಲಾಂಗ ಆಟಗಾರರಿಗಾಗಿ ನಡೆಯುವ ಪ್ರಮುಖ ಅಂತರರಾಷ್ಟ್ರೀಯ ಬಹುದೊಡ್ಡ ಕ್ರೀಡಾ ಕಾರ್ಯಕ್ರಮವಾಗಿದೆ. ಹದಿನೈದನೇ 2016 ಬೇಸಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳು 2016 ಸೆಪ್ಟೆಂಬರ್ 7 ರಿಂದ 18,ರ ವರೆಗೆ ರಿಯೊ ಡಿ ಜನೈರೊ, ಬ್ರೆಜಿಲ್ ನಲ್ಲಿ ನಡೆಯುತ್ತದೆ.
  • ಮೊದಲ ಬಾರಿಗೆ ಲ್ಯಾಟಿನ್ ಅಮೇರಿಕ ಮತ್ತು ದಕ್ಷಿಣ ಅಮೇರಿಕಾದ ನಗರದಲ್ಲಿ ಈ ಆಟಗಳು ನಡೆಯುತ್ತಿವೆ. ದಕ್ಷಿಣ ಗೋಲಾರ್ಧದ ದೇಶದ ನಗರದಲ್ಲಿ ಎರಡನೇ ಬಾರಿ ಆಯೋಜಿಸಲಾಗುತ್ತಿದೆ.
  • 7 ಸೆಪ್ಟೆಂಬರ್ 18 2016 ರ, ರಿಯೊ ಡಿ ಜನೈರೊ, ಬ್ರೆಜಿಲ್ 2016 ಬೇಸಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಭಾಗವಹಿಸಲು ನಿರ್ಧರಿಸಿದೆ.
  • ಭಾರತೀಯ ಕ್ರೀಡಾಪಟುಗಳು (1976 & 1980 ರ ಆವೃತ್ತಿ ಹೊರತುಪಡಿಸಿ) 1968 ರಿಂದ ಬೇಸಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟಗಳ ಪ್ರತಿ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ.
  • ಆಗಸ್ಟ್ 8 ರಂದು ಭಾರತದ 2016 ಪ್ಯಾರಾಲಿಂಪಿಕ್ ಸಮಿತಿ ಭಾರತದ ಅತ್ಯಂತ ದೊಡ್ಡ 19 ಕ್ರೀಡಾಪಟುಗಳ ಪಟ್ಟಿಯನ್ನು (16 ಪುರುಷರು, 3 ಮಹಿಳೆಯರು) ಪ್ರಕಟಿಸಿದೆ. ರಿಯೊ 2016 ರ 5 ಕ್ರೀಡೆಗಳಲ್ಲಿ ಭಾರತ ಭಾಗವಹಿಸುವುದಾಗಿ ಘೋಷಿಸಿದೆ.
  • ಭಾರತ ಸರ್ಕಾರ ಚಿನ್ನ ಗೆಲ್ಲುವವವರಿಗೆ 75 ಲಕ್ಷ, ಬೆಳ್ಳಿಗೆಲ್ಲುವವವರಿಗೆ 50 ಲಕ್ಷ ಮತ್ತು ಕಂಚು ಗೆಲ್ಲುವವವರಿ 30 ಲಕ್ಷ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ - ನೀಡುತ್ತದೆ.[]

ಉದ್ಘಾಟನೆ

ಬದಲಾಯಿಸಿ

2016 ಬೇಸಿಗೆ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 7 ಸೆಪ್ಟೆಂಬರ್ 2016 ರ ಸಂಜೆ ಮರಕಾನಾ ಕ್ರೀಡಾಂಗಣದಲ್ಲಿ ನಡೆಯಿತು.

  • ಭಾಗವಹಿಸುವ ರಾಷ್ಟ್ರಗಳು
  • ಒಟ್ಟು, 159 ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಗಳು ಭಾಗವಹಿಸುತ್ತವೆ. ಒಟ್ಟು 4,342 ಕ್ರೀಡಾಪಟುಗಳು 528 ಸ್ಪರ್ಧೆಗಳಲ್ಲಿ 2016ರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ.[]

ಕೈತಪ್ಪಿದ ಪದಕ ೪ ನೇ ಸ್ಥಾನ

ಬದಲಾಯಿಸಿ
  • ಪುರುಷರ ಟಿ 42 ಹೈ ಜಂಪ್ ಫೈನಲ್ ನಲ್ಲಿ ಮರಿಯಪ್ಪನ್ ತಂಗವೇಲು 1.89 ಮೀಟರ್ ದೂರ ಜಿಗಿದು ಚಿನ್ನ ಗೆದ್ದಿದ್ದಾರೆ. ಇನ್ನು ಇದೇ ಗೇಮ್ ನಲ್ಲಿ ವರುಣ್ ಭಾಟಿ ಅವರು 1.86 ಮೀಟರ್ ದೂರ ಜಿಗಿದು ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ
  • ಪ್ಯಾರಾಲಿಂಪಿಕ್ಸ್ ನ ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಫರ್ಮಾನ್ ಬಾಷಾ ಅವರಿಗೆ ಪದಕ ಕೈತಪ್ಪಿದೆ. ಬೆಂಗಳೂರಿನ ಪವರ್ ಲಿಫ್ಟರ್ ಫರ್ಮಾನ್ ಬಾಷಾ ಅವರು ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 42 ವರ್ಷದ ಬಾಷಾ ಅವರು ಮೊದಲ ಸುತ್ತಿನಲ್ಲಿ ಒಟ್ಟು 140 ಕೆ.ಜಿ. ಭಾರ ಎತ್ತಿ ಯಶಸ್ವಿಯಾದರು. ಆದರೆ 150 ಹಾಗೂ 155 ಕೆ.ಜಿ ಭಾರ ಎತ್ತುವುದರಲ್ಲಿ ವಿಫಲರಾದರು. ಕಾಂಗ್ ವಾಲ್‌ ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು []
  • 12 Sep, 2016:ಭಾರತದ ದೀಪಾ ಮಲಿಕ್ ಸೋಮವಾರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ನೂತನ ಇತಿಹಾಸ ಬರೆದರು. ಅವರು ಮಹಿಳೆಯರ ಶಾಟ್‌ಪಟ್‌ನಲ್ಲಿ ಬೆಳ್ಳಿ ಪದಕ ಗೆದ್ದರು.ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ 45 ವರ್ಷದ ದೀಪಾ ಪಾತ್ರರಾದರು. ಅದರೊಂದಿಗೆ 17 ವರ್ಷಗಳಿಂದ ಅನುಭವಿಸಿದ ಯಾತನೆಯನ್ನೂ ಮರೆತರು. ಎಫ್‌–53 ವಿಭಾಗದಲ್ಲಿ (ಗಾಲಿಕುರ್ಚಿ) ಅವರು 4.61 ಮೀಟರ್ಸ್ ದೂರ ಶಾಟ್‌ಪಟ್ ಎಸೆದು ಎರಡನೇ ಸ್ಥಾನ ಪಡೆದರು. 17 ವರ್ಷಗಳ ಹಿಂದೆ ಹರಿಯಾಣದ ದೀಪಾ ಮಲಿಕ್ ಅವರು ಬೆನ್ನುಹುರಿಯ ಗಡ್ಡೆಯ ಸಮಸ್ಯೆಯಿಂದ ಬಳಲಿದ್ದರು. ಗಡ್ಡೆ ಯ ನ್ನು ತೆಗೆಯಲು 31 ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರ ದೇಹದಲ್ಲಿ ಒಟ್ಟು 183 ಹೊಲಿಗೆಗಳನ್ನು ಹಾಕಲಾಗಿತ್ತು. ಆದರೂ ಸೊಂಟದಿಂದ ಪಾದದವರೆಗಿನ ಚೈತನ್ಯವನ್ನು ಕಳೆದು ಕೊಂಡಿದ್ದರು. ಬಹರೇನ್‌ನ ಫಾತೀಮಾ ನೆದಾಮ್ (ದೂರ: 4.76 ಮೀ) ಮತ್ತು ಗ್ರೀಸ್‌ ದೇಶದ ದಿಮಿತ್ರಾ ಕೊರೊಕಿಡಾ (4.28ಮೀ) ಅವರು ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕ ಗೆದ್ದರು.[]

ದೇವೇಂದ್ರ ಜಝಾರಿಯಾಗೆ ಚಿನ್ನ

ಬದಲಾಯಿಸಿ
  • ದಿ.13-9-2016ಪುರುಷರ ಜಾವೆಲಿನ್ ಥ್ರೋನಲ್ಲಿ ರಾಜಸ್ಥಾನ ಮೂಲದ ದೇವೇಂದ್ರ ಜಝಾರಿಯಾ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ. ಪುರುಷರ ಎಫ್ 46 ವಿಭಾಗದಲ್ಲಿ 63.97 ಮೀಟರ್ ಜಾವೆಲಿನ್ ಎಸೆದು ದಾಖಲೆಯೊಂದಿಗೆ ದೇವೇಂದ್ರ ಅವರು ಚಿನ್ನದ ಪದಕ ಪಡೆದಿದ್ದಾರೆ. 2004 ರ ಅಥೆನ್ಸ್ ಗೇಮ್ಸ್ ನಲ್ಲಿ ಇವರು 62.15 ಮೀ. ಜಾವೆಲಿನ್ ಎಸೆದು ದಾಖಲೆ ಮಾಡಿದ್ದರು. ತಮ್ಮ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಪ್ಯಾರಾಲಿಂಪಿಕ್ಸ್‌ನಲ್ಲಿ ಮುರಿದು ದೇವೇಂದ್ರ ಚಿನ್ನಕ್ಕೆ ಕೊರಳೊಡಿದ್ದಾರೆ.[]

ಸ್ಪರ್ಧೆ

ಬದಲಾಯಿಸಿ
ಕ್ರೀಡೆ ಪುರುಷರು ಮಹಿಳೆಯರು ಒಟ್ಟು ಕ್ರಿಯೆಗಳು
ಬಿಲ್ಲುವಿದ್ಯೆ 0 1 1 1
ಅಥ್ಲೆಟಿಕ್ಸ್ 13 2 15 11
ಪವರ್ಲಿಫ್ಟಿಂಗ್ 1 0 1 4
ಈಜು 1 0 1 3
ಶೂಟಿಂಗ್ 1 0 1 4
ಒಟ್ಟು 16 3 19 20

ಪದಕ ಗಳಿಕೆ

ಬದಲಾಯಿಸಿ
ಪದಕ ಹೆಸರು ಸ್ಪೋರ್ಟ್ ಈವೆಂಟ್ ದಿನಾಂಕ
1  ಬಂಗಾರ ಮರಿಯಪ್ಪನ್ ತಂಗವೇಲು ಅಥ್ಲೆಟಿಕ್ಸ್ ಪುರುಷರ ಹೈ ಜಂಪ್ -T42 09-09-16
1  ಬಂಗಾರ ದೇವೇಂದ್ರ ಜಝಾರಿಯಾ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಥ್ರೋ 13-9-2016
2  ಬೆಳ್ಳಿ ದೀಪಾ ಮಲಿಕ್ ಅಥ್ಲೆಟಿಕ್ಸ್ ಶಾಟ್‌ಪಟ್‌ 12-09-16
3  ಕಂಚು ವರುಣ್ ಸಿಂಗ್ ಭಾಟೀ ಅಥ್ಲೆಟಿಕ್ಸ್ ಪುರುಷರ ಹೈ ಜಂಪ್ T42 09-09-16

[] []

ಒಟ್ಟು ಪದಕ

ಬದಲಾಯಿಸಿ
ಕ್ರೀಡೆ 1  ಬಂಗಾರ 2  ಬೆಳ್ಳಿ 3  ಕಂಚು Total
ಅಥ್ಲೆಟಿಕ್ಸ್ 2 1 1 4

ಪ್ಯಾರಾಲಿಂಪಿಕ್ಸ್‌ ಮುಕ್ತಾಯ

ಬದಲಾಯಿಸಿ
  • ಜೀವನ ಒಡ್ಡಿದ ಸವಾಲುಗಳನ್ನು ಬದಿಗಿಟ್ಟು ಅಮೋಘವಾದ ಸಾಮರ್ಥ್ಯವನ್ನು ಪ್ರದರ್ಶಿಸಿದ ದೈಹಿಕವಾಗಿ ವಿಶೇಷ ಸಾಮರ್ಥ್ಯವುಳ್ಳ ಅಥ್ಲೀಟ್‌ಗಳ ಪ್ಯಾರಾಲಿಂಪಿಕ್ಸ್‌ಗೆ 18-9-2016 ಭಾನುವಾರ ರಾತ್ರಿ ತೆರೆ ಬಿತ್ತು. ಸೆಪ್ಟೆಂಬರ್ 7ರಿಂದ ಆರಂಭವಾಗಿದ್ದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಎರಡು ಚಿನ್ನದ ಪದಕಗಳು ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದರು.
  • ಜಾವೆಲಿನ್ ಥ್ರೋನಲ್ಲಿ ದೇವೇಂದ್ರ ಜಜಾರಿಯಾ (ಚಿನ್ನ), ಹೈಜಂಪ್‌ನಲ್ಲಿ ಮಾರಿಯಪ್ಪನ್ ತಂಗವೇಲು (ಚಿನ್ನ), ಹಾಗೂ ವರುಣ್ ಸಿಂಗ್ ಭಾಟಿ ಮತ್ತು ಶಾಟ್‌ಪಟ್‌ನಲ್ಲಿ ದೀಪಾ ಮಲಿಕ್ (ಬೆಳ್ಳಿ) ಅವರು ರಿಯೊದ ಅಂಗಳದಲ್ಲಿ ಕೀರ್ತಿ ಪತಾಕೆ ಹಾರಿಸಿದ್ದರು.[]
  1. ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತ
  2. ೨೦೦೮ ಒಲಂಪಿಕ್ ಕ್ರೀಡಾಕೂಟ
  3. ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಭಾರತ
  4. ರಿಯೊ ಒಲಿಂಪಿಕ್ಸ್ 2016
  5. ಲಂಡನ್ ಬೇಸಿಗೆ ಒಲಂಪಿಕ್ಸ್ 2012
  6. ಒಲಿಂಪಿಕ್ಸ್‌ನಲ್ಲಿ ಭಾರತ=ಒಲಿಂಪಿಕ್ಸ್‌ನಲ್ಲಿ ಭಾರತ (ಪದಕಗಳ ಪಟ್ಟಿ)
  7. ಪ್ಯಾರಾಲಿಂಪಿಕ್ಸ್‍ನಲ್ಲಿ ಭಾರತ/

ಉಲ್ಲೇಖಗಳು

ಬದಲಾಯಿಸಿ
  1. India’s Thangavelu wins gold, Bhati bronze in high jump
  2. "OF PLAYERS SELECTED TO REPRESENT INDIA AT THE RIO PARALYMPIC GAMES 2016"". Archived from the original on 2016-10-12. Retrieved 2016-09-10. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  3. http://kannada.oneindia.com/sports/paralympics-2016-powerlifter-farman-finishes-fourth-107145.html
  4. [https://web.archive.org/web/20160913153156/http://www.prajavani.net/news/article/2016/09/13/437578.html Archived] 2016-09-13 ವೇಬ್ಯಾಕ್ ಮೆಷಿನ್ ನಲ್ಲಿ. ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾ ಪಟು
  5. ರಿಯೋ ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ಮತ್ತೊಂದು ಚಿನ್ನ
  6. ಸಾಂಬಾ ನಾಡಿನಲ್ಲಿ ಮತ್ತೆ ಕ್ರೀಡಾ ರಂಗು
  7. ತಂಗವೇಲುಗೆ ಚಿನ್ನ, ವರುಣ್‍ಗೆ ಕಂಚು
  8. "ಆರ್ಕೈವ್ ನಕಲು". Archived from the original on 2016-09-21. Retrieved 2016-09-22.


ಉಲ್ಲೇಖ

ಬದಲಾಯಿಸಿ