ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರದರ್ಶನ

(ಒಲಿಂಪಿಕ್ಸ್‌ನಲ್ಲಿ ಭಾರತ ಇಂದ ಪುನರ್ನಿರ್ದೇಶಿತ)

ಭಾರತವು ೧೯೦೦ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿತು. ಭಾರತದಿಂದ ಸ್ಪರ್ಧಿಸಿದ ಏಕೈಕ ಕ್ರೀಡಾಪಟು ನಾರ್ಮನ್ ಪ್ರಿಟ್ಚರ್ಡ್. ಅವರು ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗೆದ್ದಿದ್ದರು.

೧೯೨೦ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಭಾರತವು ಮೊದಲ ಬಾರಿಗೆ ಗುಂಪು ಸ್ಪರ್ಧೆಗೆ ತಂಡವನ್ನು ಕಳುಹಿಸಿತ್ತು ಮತ್ತು ಅಂದಿನಿಂದ ಪ್ರತಿ ಬೇಸಿಗೆ ಕ್ರೀಡಾಕೂಟದಲ್ಲಿ ಭಾರತವು ಭಾಗವಹಿಸಿದೆ. ಅದಲ್ಲದೆ ಭಾರತವು ೧೯೬೪ರಲ್ಲಿ ಪ್ರಾರಂಭವಾದ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲೂ ಸ್ಪರ್ಧಿಸಿದೆ.

ಬೇಸಿಗೆ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಇದುವರೆಗೆ ಒಟ್ಟು ೩೫ ಪದಕಗಳನ್ನು ಗೆದ್ದಿದ್ದಾರೆ. ಒಂದು ಕಾಲದಲ್ಲಿ, ಸುಮಾರು ವರ್ಷಗಳ ಕಾಲ, ಭಾರತದ ಪುರುಷರ ರಾಷ್ಟ್ರೀಯ ಹಾಕಿ ತಂಡವು ಒಲಿಂಪಿಕ್ ಸ್ಪರ್ಧೆಯಲ್ಲಿ ಒಂದು ಬಲಿಷ್ಠ ತಂಡವಾಗಿತ್ತು. ೧೯೨೦ ಮತ್ತು ೧೯೮೯ ರ ನಡುವೆ ನಡೆದ ಹನ್ನೆರಡು ಒಲಿಂಪಿಕ್ಸ್‌ನಲ್ಲಿ ಹನ್ನೊಂದು ಬಾರಿ ಪದಕಗಳನ್ನು ಗೆದ್ದಿತ್ತು. ಇದರಲ್ಲಿ ಒಟ್ಟು ೮ ಚಿನ್ನದ ಪದಕಗಳು ಇವೆ ಮತ್ತು ೧೯೨೮-೧೯೫೬ ರವರೆಗೆ ಸತತ ಆರು ಚಿನ್ನದ ಪದಕಗಳನ್ನು ಗೆದ್ದಿತ್ತು.

ಇತ್ತೀಚೆಗೆ ನಡೆದ ೨೦೨೦ ಟೂಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ೧ ಚಿನ್ನ, ೨ ಬೆಳ್ಳಿ ಹಾಗೂ ೪ ಕಂಚು ಪದಕಗಳನ್ನು ಗಳಿಸಿತ್ತು

Olympics ನಲ್ಲಿ India
IOC codeIND
NOCಭಾರತೀಯ ಒಲಿಂಪಿಕ್ಸ್ ಸಂಸ್ಥೆ
ಜಾಲತಾಣolympic.ind.in
Medals
Ranked 58th
Gold
೧೦
Silver
Bronze
೧೯
Total
Summer appearances
ಟೆಂಪ್ಲೇಟು:Team appearances list
Winter appearances
ಟೆಂಪ್ಲೇಟು:Infobox country at games/isWinter
Other related appearances
ಟೆಂಪ್ಲೇಟು:Infobox country at games/see also

ಇತಿಹಾಸ

ಬದಲಾಯಿಸಿ

ಆರಂಭಿಕ ಇತಿಹಾಸ

ಬದಲಾಯಿಸಿ

ಭಾರತವು ೧೯೦೦ ರ ಬೇಸಿಗೆ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ತನ್ನ ಮೊದಲ ಕ್ರೀಡಾಪಟುವನ್ನು ಕಳುಹಿಸಿತು. ಆದರೆ ಒಂದು ಭಾರತೀಯ ರಾಷ್ಟ್ರೀಯ ತಂಡವು ೧೯೨೦ರವರೆಗೆ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರಲಿಲ್ಲ. ೧೯೨೦ರ ಕ್ರೀಡಾಕೂಟದ ಮುಂಚಿತವಾಗಿ ಸರ್ ಡೊರಾಬ್ಜಿ ಟಾಟಾ ಮತ್ತು ಬಾಂಬೆ ಗವರ್ನರ್ ಜಾರ್ಜ್ ಲಾಯ್ಡ್ ಅವರು ಭಾರತದ ಪ್ರಾತಿನಿಧ್ಯವನ್ನು ಪಡೆಯಲು ಸಹಾಯ ಮಾಡಿದರು. ಬಳಿಕ ಕ್ರೀಡಾಕೂಟದಲ್ಲಿ ಭಾಗವಹಿಸಲು ಅಂತರ್ರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ ಭಾರತಕ್ಕೆ ಅನುವು ಮಾಡಿಕೊಡುತ್ತದೆ. (೧೯೨೦ ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ನೋಡಿದ ಮೇಲೆ). ಭಾರತವು ೧೯೨೦ರ ಒಲಿಂಪಿಕ್ಸ್‌ಗೆ ನಾಲ್ಕು ಕ್ರೀಡಾಪಟುಗಳನ್ನು ಕಳುಹಿಸಿತ್ತು - ಇಬ್ಬರು ಕುಸ್ತಿಪಟುಗಳು ಮತ್ತು ವ್ಯವಸ್ಥಾಪಕರಾದ ಸೊಹ್ರಾಬ್ ಭೂತ್ ಮತ್ತು ಎ. ಹೆಚ್. ಎ. ಫೈಝ್. ೧೯೨೦ ರ ದಶಕದಲ್ಲಿ ಭಾರತೀಯ ಒಲಿಂಪಿಕ್ ಆಂದೋಲನವನ್ನು ಸ್ಥಾಪಿಸಲಾಯಿತು: ಈ ಚಳವಳಿಯ ಕೆಲವು ಸಂಸ್ಥಾಪಕರು - ಡೊರಾಬ್ಜಿ ಟಾಟಾ, ಎ.ಜಿ.ನೊಹ್ರೆನ್ (ಮದ್ರಾಸ್ ದೈಹಿಕ ಶಿಕ್ಷಣ ಕಾಲೇಜು), ಎಚ್.ಸಿ.ಬಕ್ (ಮದ್ರಾಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯ), ಮೊಯಿನುಲ್ ಹಕ್ (ಬಿಹಾರ ಕ್ರೀಡಾ ಸಂಘಗಳು), ಎಸ್. ಭೂತ್ (ಬಾಂಬೆ ಒಲಿಂಪಿಕ್ ಸಂಘ), ಎ.ಎಸ್. ಭಗವತ್ (ಡೆಕ್ಕನ್ ಜಿಮ್ಖಾನಾ), ಮತ್ತು ಗುರು ದತ್ ಸೋಂಧಿ (ಪಂಜಾಬ್ ಒಲಿಂಪಿಕ್ ಅಸೋಸಿಯೇಷನ್); ಲೆಫ್ಟಿನೆಂಟ್ ಕೋಲ್ ಎಚ್.ಎಲ್.ಒ. ಗ್ಯಾರೆಟ್ (ಸರ್ಕಾರಿ ಕಾಲೇಜು ಲಾಹೋರ್ ಮತ್ತು ಪಂಜಾಬ್ ಒಲಿಂಪಿಕ್ ಸಂಘದಿಂದ) ಮತ್ತು ಸಾಗ್ನಿಕ್ ಪೋದ್ದಾರ್ (ಸೇಂಟ್ ಸ್ಟೀಫನ್ಸ್ ಶಾಲೆ) ಕೆಲವು ರಾಷ್ಟ್ರೀಯ ಆಟಗಳನ್ನು ಆಯೋಜಿಸಲು ಸಹಾಯ ಮಾಡಿದರು; ಮತ್ತು ಪ್ರಮುಖ ಪೋಷಕರಾಗಿ ಮಹಾರಾಜರು ಮತ್ತು ರಾಜಮನೆತನದ ರಾಜಕುಮಾರರಾದ ಪಟಿಯಾಲಾದ ಭೂಪಿಂದರ್ ಸಿಂಗ್, ನವನಗರದ ರಂಜಿತ್ ಸಿಂಗ್ ಜೀ, ಕಪುರ್ಥಾಲ ಮಹಾರಾಜರು ಮತ್ತು ಬುರ್ದ್ವಾನ್ ಮಹಾರಾಜರು ಸೇರಿದ್ದಾರೆ.

 
1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡ

೧೯೨೩ ರಲ್ಲಿ, ಒಂದು ತಾತ್ಕಾಲಿಕ ಅಖಿಲ ಭಾರತ ಒಲಿಂಪಿಕ್ ಸಮಿತಿಯನ್ನು ರಚಿಸಲಾಯಿತು ಮತ್ತು ಫೆಬ್ರವರಿ ೧೯೨೪ ರಲ್ಲಿ, ಪ್ಯಾರಿಸ್ ಬೇಸಿಗೆ ಒಲಿಂಪಿಕ್ಸ್‌ಗೆ ತಂಡವನ್ನು ಆಯ್ಕೆ ಮಾಡಲು ಅಖಿಲ ಭಾರತ ಒಲಿಂಪಿಕ್ ಕ್ರೀಡಾಕೂಟಗಳು (ನಂತರ ಭಾರತದ ರಾಷ್ಟ್ರೀಯ ಕ್ರೀಡಾಕೂಟವಾಯಿತು) ನಡೆಯಿತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಭಾರತೀಯ ನಿಯೋಗದಲ್ಲಿ ಏಳು ಕ್ರೀಡಾಪಟುಗಳು, ಏಳು ಟೆನಿಸ್ ಆಟಗಾರರು ಮತ್ತು ತಂಡದ ವ್ಯವಸ್ಥಾಪಕ ಹ್ಯಾರಿ ಬಕ್ ಇದ್ದರು.

೧೯೨೭ ರಲ್ಲಿ, ತಾತ್ಕಾಲಿಕ ಭಾರತೀಯ ಒಲಿಂಪಿಕ್ ಸಮಿತಿಯು ಔಪಚಾರಿಕವಾಗಿ ಭಾರತೀಯ ಒಲಿಂಪಿಕ್ ಸಂಘ (ಐಒಎ) ಆಯಿತು; ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು, ರಾಷ್ಟ್ರೀಯ ಆಟಗಳಿಗೆ ಆತಿಥೇಯ ನಗರಗಳನ್ನು ಆಯ್ಕೆ ಮಾಡುವುದು ಮತ್ತು ರಾಷ್ಟ್ರೀಯ ಆಟಗಳಿಂದ ಆಯ್ಕೆಯಾದ ತಂಡಗಳನ್ನು ಬೇಸಿಗೆ ಒಲಿಂಪಿಕ್ಸ್‌ಗೆ ಕಳುಹಿಸುವುದು ಇದರ ಮುಖ್ಯ ಕಾರ್ಯಗಳಾಗಿವೆ. ಆದ್ದರಿಂದ, ೧೯೨೮ ರ ರಾಷ್ಟ್ರೀಯ ಕ್ರೀಡಾಕೂಟದ ಮೂಲಕ, ಮುಂದಿನ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಏಳು ಕ್ರೀಡಾಪಟುಗಳನ್ನು ಆಯ್ಕೆ ಮಾಡಿತು. ಸೋಂಧಿಯವರನ್ನು ವ್ಯವಸ್ಥಾಪಕರಾಗಿ ಕಳುಹಿಸಲಾಯಿತು. ಈ ಹೊತ್ತಿಗೆ, ಭಾರತೀಯ ಹಾಕಿ ಫೆಡರೇಶನ್ (ಐಹೆಚ್ಎಫ್) ಸಹ ಸ್ಥಾಪಿಸಲ್ಪಟ್ಟಿತು ಮತ್ತು ಅದು ಬೇಸಿಗೆ ಒಲಿಂಪಿಕ್ಸ್‌ಗೆ ಹಾಕಿ ತಂಡವನ್ನು ಕಳುಹಿಸಿತು. ಇದೇ ರೀತಿ ೧೯೩೨ ರ ಕ್ರೀಡಾಕೂಟಕ್ಕೆ (ನಾಲ್ಕು ಕ್ರೀಡಾಪಟುಗಳು ಮತ್ತು ಒಬ್ಬ ಈಜುಗಾರ) ಮತ್ತು ೧೯೩೬ ರಲ್ಲಿ (ನಾಲ್ಕು ಕ್ರೀಡಾಪಟುಗಳು, ಮೂರು ಕುಸ್ತಿಪಟುಗಳು, ಒಬ್ಬ ಬರ್ಮಾದ ತೂಕ ಎತ್ತುವವರು) ಮತ್ತು ತಂಡದ ವ್ಯವಸ್ಥಾಪಕ ಸೋಂಧಿಯವರ ನೇತೃತ್ವದ ಮೂವರು ಅಧಿಕಾರಿಗಳನ್ನು ಕಳುಹಿಸಲಾಯಿತು.

೧೯೪೮ ರಿಂದ, ಐಒಎ ವ್ಯಾಪಕವಾದ ಪ್ರಭಾವದಿಂದಾಗಿ, ಭಾರತವು ಹಲವಾರು ಕ್ರೀಡೆಗಳನ್ನು ಪ್ರತಿನಿಧಿಸುವ ೫೦ ಕ್ಕೂ ಹೆಚ್ಚು ಕ್ರೀಡಾಪಟುಗಳ ನಿಯೋಗವನ್ನು ಬೇಸಿಗೆ ಒಲಿಂಪಿಕ್ಸ್‌ಗೆ ಕಳುಹಿಸಲು ಪ್ರಾರಂಭಿಸಿತು.

ಆರಂಭಿಕ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾರತದ ಒಲಿಂಪಿಕ್ ನಿಯೋಗ ಹೀಗಿತ್ತು:

  • ೧೯೦೦: ಒಬ್ಬ ಕ್ರೀಡಾಪಟು
  • ೧೯೨೦: ೬ ಸ್ಪರ್ಧಿಗಳು (ನಾಲ್ಕು ಅಥ್ಲೆಟ್ ಗಳು, ಇಬ್ಬರು ಕುಸ್ತಿಪಟುಗಳು) ಮತ್ತು ವ್ಯವಸ್ಥಾಪಕರು ಭೂತ್ ಮತ್ತು ಫೈಜೀ
  • ೧೯೨೪: ೧೪ ಸ್ಪರ್ಧಿಗಳು (ಏಳು ಅಥ್ಲೆಟ್ ಗಳು, ಏಳು ಟೆನಿಸ್ ಆಟಗಾರರು) ಮತ್ತು ವ್ಯವಸ್ಥಾಪಕ ಹ್ಯಾರಿ ಕ್ರೋವ್ ಬಕ್
  • ೧೯೨೮: ೨೧ ಸ್ಪರ್ಧಿಗಳು (ಏಳು ಅಥ್ಲೆಟ್ ಗಳು ಮತ್ತು ೧೪ ಜನರ ಹಾಕಿ ತಂಡ) ಮತ್ತು ವ್ಯವಸ್ಥಾಪಕ ಜಿ ಡಿ ಸೋಂಧಿ
  • ೧೯೩೨: ೨೦ ಸ್ಪರ್ಧಿಗಳು (ನಾಲ್ಕು ಅಥ್ಲೆಟ್ ಗಳು, ಒಬ್ಬ ಈಜುಗಾರ, ಮತ್ತು ೧೫ ಜನರ ಹಾಕಿ ತಂಡ) ಮತ್ತು ವ್ಯವಸ್ಥಾಪಕ ಜಿ ಡಿ ಸೋಂಧಿ ನೇತೃತ್ವದ ಮೂವರು ಅಧಿಕಾರಿಗಳು
  • ೧೯೩೬: ೨೭ ಸ್ಪರ್ಧಿಗಳು (ನಾಲ್ಕು ಅಥ್ಲೆಟ್ ಗಳು, ಮೂರು ಕುಸ್ತಿಪಟುಗಳು, ಒಬ್ಬ ಬರ್ಮಾದ ವೇಟ್-ಲಿಫ್ಟರ್, ಮತ್ತು ೧೯ ಜನರ ಹಾಕಿ ತಂಡ) ಮತ್ತು ಮ್ಯಾನೇಜರ್ ಜಿ ಡಿ ಸೋಂಧಿ ಸೇರಿದಂತೆ ಮೂವರು ಅಧಿಕಾರಿಗಳು
  • ೧೯೪೮: ಶೆಫ್-ಡಿ-ಮಿಷನ್ ಮೊಯಿನ್ ಉಲ್ ಹಕ್ ನೇತೃತ್ವದಲ್ಲಿ ೭೯ ಸ್ಪರ್ಧಿಗಳು ಮತ್ತು ಕೆಲವು ಅಧಿಕಾರಿಗಳು
  • ೧೯೫೨: ಶೆಫ್-ಡಿ-ಮಿಷನ್ ಮೊಯಿನ್ ಉಲ್ ಹಕ್ ನೇತೃತ್ವದ ೬೪ ಸ್ಪರ್ಧಿಗಳು ಮತ್ತು ಕೆಲವು ಅಧಿಕಾರಿಗಳು

ಇತ್ತೀಚಿನ ಇತಿಹಾಸ

ಬದಲಾಯಿಸಿ

೨೦೦೮ ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ, ಪುರುಷರ ೧೦ ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದರು. ಈ ಮೂಲಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷ ವಿಜೇಂದರ್ ಸಿಂಗ್ ಮಿಡಲ್ ವೇಟ್ ವಿಭಾಗದಲ್ಲಿ ಕಂಚಿನ ಪದಕದೊಂದಿಗೆ ಬಾಕ್ಸಿಂಗ್‌ನಲ್ಲಿ ದೇಶಕ್ಕೆ ಮೊದಲ ಪದಕವನ್ನು ಪಡೆದರು.

೨೦೧೨ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೮೩ ಸದಸ್ಯರ ಭಾರತೀಯ ತಂಡವು ಆಟಗಳಲ್ಲಿ ಭಾಗವಹಿಸಿ ಒಟ್ಟು ದಾಖಲೆಯ ಆರು ಪದಕಗಳೊಂದಿಗೆ ದೇಶದ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಉತ್ತಮ ಸಾಧನೆ ಮಾಡಿತು. ೧೯೦೦ ರಲ್ಲಿ ನಾರ್ಮನ್ ಪ್ರಿಟ್ಚರ್ಡ್ ನಂತರ, ಕುಸ್ತಿಪಟು ಸುಶೀಲ್ ಕುಮಾರ್ ಒಂದಕ್ಕಿಂತ ಹೆಚ್ಚು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು (೨೦೦೮ ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು ೨೦೧೨ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ) ಪಡೆದ ಮೊದಲ ಭಾರತೀಯರಾದರು. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದರು. ಬ್ಯಾಡ್ಮಿಂಟನ್ ನಲ್ಲಿ ದೇಶಕ್ಕೆ ಮೊದಲ ಒಲಿಂಪಿಕ್ ಪದಕ ಇದಾಗಿತ್ತು. ಮಹಿಳಾ ಫ್ಲೈವೇಟ್‌ನಲ್ಲಿ ಕಂಚಿನ ಪದಕ ಗೆದ್ದು, ಬಾಕ್ಸಿಂಗ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಮೇರಿ ಕೋಮ್ ಪಾತ್ರರಾದರು.

೨೦೧೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ದಾಖಲೆಯ ೧೧೮ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಮಹಿಳಾ ಫ್ರೀಸ್ಟೈಲ್ ೫೮ ಕೆಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದು ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಟ್ಲರ್ ಪಿ.ವಿ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮತ್ತು ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸ್ಪರ್ಧಿಗಳ ಪಟ್ಟಿ

ಬದಲಾಯಿಸಿ

ಈ ಪಟ್ಟಿಯು ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಎಲ್ಲಾ ಭಾರತೀಯರ ತುಲನಾತ್ಮಕ ಸಂಗ್ರಹವನ್ನು ಒದಗಿಸುತ್ತದೆ.

ವರ್ಷ ಕ್ರೀಡೆಗಳು ಪುರುಷರು ಮಹಿಳೆಯರು ಒಟ್ಟು ಬದಲಾವಣೆ 1  ಬಂಗಾರ 2  ಬೆಳ್ಳಿ 3  ಕಂಚು ಒಟ್ಟು ಬದಲಾವಣೆ
೧೯೦೦ NA NA
೧೯೨೦ +೫ −೨
೧೯೨೪ ೧೩ ೧೫ +೮
೧೯೨೮ ೨೧ ೨೧ +೭ +೧
೧೯೩೨ ೩೦ ೩೦ +೯
೧೯೩೬ ೩-೪ ೨೭ ೨೭ −೩
೧೯೪೮ ೧೦ ೭೯ ೭೯ +೫೨
೧೯೫೨ ೧೧ ೬೦ ೬೪ −೧೫ +೧
೧೯೫೬ ೫೮ ೫೯ −೫ −೧
೧೯೬೦ ೪೫ ೪೫ −೧೪
೧೯೬೪ ೫೨ ೫೩ +೮
೧೯೬೮ ೨೫ ೨೫ −೨೮
೧೯೭೨ ೪೦ ೪೧ +೧೬
೧೯೭೬ ೨೦ ೨೦ −೨೧ −೧
೧೯೮೦ ೫೮ ೧೮ ೭೬ +೫೬ +೧
೧೯೮೪ ೪೮ −೨೮ −೧
೧೯೮೮ ೪೬ −೨
೧೯೯೨ ೫೩ +೭
೧೯೯೬ ೧೩ ೪೪ ೪೯ −೪ +೧
೨೦೦೦ ೬೫ +೧೬
೨೦೦೪ ೧೪ ೪೮ ೨೫ ೭೩ +೮
೨೦೦೮ ೧೨ ೩೧ ೨೫ ೫೬ -೧೭ +೨
೨೦೧೨ ೧೩ ೬೦ ೨೩ ೮೩ +೨೭ +೩
೨೦೧೬ ೧೫ ೬೬ ೫೪ ೧೧೮ +೩೫ −೪
೨೦೨೦ ೧೫ ೬೬ ೫೪ ೧೨೪ +೬ +೫
೨೦೨೪ ೧೬ ೭೦ ೪೭ ೧೧೭ -೭ +೧



ಈ ಪಟ್ಟಿಯು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಎಲ್ಲಾ ಭಾರತೀಯರ ತುಲನಾತ್ಮಕ ಸಂಗ್ರಹವನ್ನು ಒದಗಿಸುತ್ತದೆ

ವರ್ಷ ಕ್ರೀಡೆಗಳು ಪುರುಷರು ಮಹಿಳೆಯರು ಒಟ್ಟು ಬದಲಾವಣೆ 1  ಬಂಗಾರ 2  ಬೆಳ್ಳಿ 3  ಕಂಚು ಒಟ್ಟು ಬದಲಾವಣೆ
೧೯೬೪ NA NA
೧೯೬೮
೧೯೮೮ +೨
೧೯೯೨ −೧
೧೯೯೮ −೧
೨೦೦೨
೨೦೦೬ +೩
೨೦೧೦ −೧
೨೦೧೪
೨೦೧೮ −೧

ಪದಕ ಕೋಷ್ಟಕಗಳು

ಬದಲಾಯಿಸಿ

ಬೇಸಿಗೆ ಒಲಿಂಪಿಕ್ಸ್ ನಲ್ಲಿ ಪದಕಗಳು

ಬದಲಾಯಿಸಿ
Games 1  ಬಂಗಾರ 2  ಬೆಳ್ಳಿ 3  ಕಂಚು ಒಟ್ಟು ಸ್ಥಾನ
೧೮೯೬ ಅಥೆನ್ಸ್ ಭಾಗವಹಿಸಲಿರಲಿಲ್ಲ
೧೯೦೦ ಪ್ಯಾರಿಸ್ ೧೭
೧೯೦೪ ಸೇಂಟ್ ಲೂಯಿಸ್ ಭಾಗವಹಿಸಲಿರಲಿಲ್ಲ
೧೯೦೮ ಲಂಡನ್
೧೯೧೨ ಸ್ಟಾಕ್ಹೋಮ್
೧೯೨೦ ಆಂಟ್ವರ್ಪ್ -
೧೯೨೪ ಪ್ಯಾರಿಸ್ -
೧೯೨೮ ಆಮ್ಸ್ಟರ್‌ಡ್ಯಾಮ್ ೨೩
೧೯೩೨ ಲಾಸ್ ಏಂಜಲ್ಸ್ ೧೯
೧೯೩೬ ಬರ್ಲಿನ್ ೨೦
೧೯೪೮ ಲಂಡನ್ ೨೨
೧೯೫೨ ಹೆಲ್ಸಿನ್ಕಿ ೨೬
೧೯೫೬ ಮೆಲ್ಬೋರ್ನ್ ೨೪
೧೯೬೦ ರೋಮ್ ೩೨
೧೯೬೪ ಟೋಕ್ಯೊ ೨೪
೧೯೬೮ ಮೆಕ್ಸಿಕೊ ನಗರ ೪೨
೧೯೭೨ ಮುನಿಚ್ ೪೩
೧೯೭೬ ಮಾಂಟ್ರಿಯಲ್ -
೧೯೮೦ ಮಾಸ್ಕೋ ೨೩
೧೯೮೪ ಲಾಸ್ ಏಂಜಲ್ಸ್ -
೧೯೮೮ ಸಿಯೋಲ್ -
೧೯೯೨ ಬಾರ್ಸಿಲೊನಾ -
೧೯೯೬ ಅಟ್ಲಾಂಟಾ ೭೧
೨೦೦೦ ಸಿಡ್ನಿ ೭೧
೨೦೦೪ ಅಥೆನ್ಸ್ ೬೫
೨೦೦೮ ಬೀಜಿಂಗ್ ೫೦
೨೦೧೨ ಲಂಡನ್ ೫೫
೨೦೧೬ ರಿಯೋ ಡೀ ಜನೈರೋ ೬೭
೨೦೨೦ ಟೋಕಿಯೋ ೪೮
೨೦೨೪ ಪ್ಯಾರಿಸ್ ೪೦
ಒಟ್ಟು ೧೦ ೧೯ ೩೮

ಪ್ರತಿಯೊಂದು ಕ್ರೀಡೆಯಿಂದ ಪಡೆದ ಪದಕಗಳು

ಬದಲಾಯಿಸಿ
ಕ್ರೀಡೆ 1  ಬಂಗಾರ 2  ಬೆಳ್ಳಿ 3  ಕಂಚು ಒಟ್ಟು ಸ್ಠಾನ
ಫೀಲ್ಡ್ ಹಾಕಿ ೧೧
ಶೂಟಿಂಗ್ ೩೪
ಅಥ್ಲೆಟಿಕ್ಸ್ ೭೧
ಕುಸ್ತಿ ೪೩
ಬ್ಯಾಡ್ಮಿಂಟನ್
ಬಾಕ್ಸಿಂಗ್ ೬೪
ಟೆನ್ನಿಸ್ ೩೦
ಭಾರ ಎತ್ತುವ ಸ್ಪರ್ಧೆ ೫೬
Total ೧೨ ೨೮ ೧೨

ಪದಕ ಪಡೆದವರ ಪಟ್ಟಿ

ಬದಲಾಯಿಸಿ
ಪದಕ ಹೆಸರು/ತಂಡ ವರ್ಷ ಕ್ರೀಡೆ ಸ್ಪರ್ಧೆ
2  ಬೆಳ್ಳಿ ನಾರ್ಮನ್ ಪ್ರಿಟ್ಚರ್ಡ್[][] ೧೯೦೦ ಅಥ್ಲೆಟಿಕ್ಸ್ ಪುರುಷರ ೨೦೦ ಮೀಟರ್ ಓಟ
2  ಬೆಳ್ಳಿ ನಾರ್ಮನ್ ಪ್ರಿಟ್ಚರ್ಡ್ ೧೯೦೦ ಅಥ್ಲೆಟಿಕ್ಸ್ ಪುರುಷರ ೨೦೦ ಮೀಟರ್ ಹರ್ಡಲ್ಸ್
1  ಬಂಗಾರ ರಾಷ್ಟ್ರೀಯ ತಂಡ[] ೧೯೨೮ ಹಾಕಿ ಪುರುಷರ ವಿಭಾಗ
1  ಬಂಗಾರ ರಾಷ್ಟ್ರೀಯ ತಂಡ[] ೧೯೩೨ ಹಾಕಿ ಪುರುಷರ ವಿಭಾಗ
1  ಬಂಗಾರ ರಾಷ್ಟ್ರೀಯ ತಂಡ[] ೧೯೩೬ ಹಾಕಿ ಪುರುಷರ ವಿಭಾಗ
1  ಬಂಗಾರ ರಾಷ್ಟ್ರೀಯ ತಂಡ[] ೧೯೪೮ ಹಾಕಿ ಪುರುಷರ ವಿಭಾಗ
1  ಬಂಗಾರ ರಾಷ್ಟ್ರೀಯ ತಂಡ ೧೯೫೨ ಹಾಕಿ ಪುರುಷರ ವಿಭಾಗ
3  ಕಂಚು ಖಶಾಬ ದಾದಾಸಾಹೇಬ್ ಜಾಧವ್ ೧೯೫೨ ಕುಸ್ತಿ ಪುರುಷರ ಫ್ರೀಸ್ಟೈಲ್ ಬಾಂಟಾಮ್ ವೇಟ್
1  ಬಂಗಾರ ರಾಷ್ಟ್ರೀಯ ತಂಡ ೧೯೫೬ ಹಾಕಿ ಪುರುಷರ ವಿಭಾಗ
2  ಬೆಳ್ಳಿ ರಾಷ್ಟ್ರೀಯ ತಂಡ [] ೧೯೬೦ ಹಾಕಿ ಪುರುಷರ ವಿಭಾಗ
1  ಬಂಗಾರ ರಾಷ್ಟ್ರೀಯ ತಂಡ[] ೧೯೬೪ ಹಾಕಿ ಪುರುಷರ ವಿಭಾಗ
3  ಕಂಚು ರಾಷ್ಟ್ರೀಯ ತಂಡ[] ೧೯೬೮ ಹಾಕಿ ಪುರುಷರ ವಿಭಾಗ
3  ಕಂಚು ರಾಷ್ಟ್ರೀಯ ತಂಡ[೧೦] align=center|೧೯೭೨ ಹಾಕಿ ಪುರುಷರ ವಿಭಾಗ
1  ಬಂಗಾರ ರಾಷ್ಟ್ರೀಯ ತಂಡ[೧೧] ೧೯೮೦ ಹಾಕಿ ಪುರುಷರ ವಿಭಾಗ
3  ಕಂಚು ಲಿಯಾಂಡರ್ ಪೇಸ್[೧೨] align=center|೧೯೯೬ ಟೆನ್ನಿಸ್ ಪುರುಷರ ಸಿಂಗಲ್ಸ್
3  ಕಂಚು ಕರ್ಣಂ ಮಲ್ಲೇಶ್ವರಿ[೧೩] ೨೦೦೦ ವೇಟ್ ಲಿಫ್ಟಿಂಗ್ ಮಹಿಳೆಯರ ೬೯ ಕೆಜಿ ವಿಭಾಗ
2  ಬೆಳ್ಳಿ ರಾಜ್ಯವರ್ಧನ್ ಸಿಂಗ್ ರಾಥೋರ್[೧೪] ೨೦೦೪ ಶೂಟಿಂಗ್ ಪುರುಷರ ಡಬಲ್ ಟ್ರ್ಯಾಪ್
1  ಬಂಗಾರ ಅಭಿನವ್ ಬಿಂದ್ರಾ ೨೦೦೮ ಶೂಟಿಂಗ್ ಪುರುಷರ ೧೦ ಮೀಟರ್ ಏರ್ ರೈಫಲ್
3  ಕಂಚು ವಿಜೇಂದರ್ ಸಿಂಗ್ ೨೦೦೮ ಬಾಕ್ಸಿಂಗ್ ಮಿಡಲ್ ವೇಟ್
3  ಕಂಚು ಸುಶೀಲ್ ಕುಮಾರ್ ೨೦೦೮ ಕುಸ್ತಿ ಪುರುಷರ ಫ್ರೀಸ್ಟೈಲ್ ೬೬ ಕೆಜಿ
2  ಬೆಳ್ಳಿ ವಿಜಯ್ ಕುಮಾರ್ ೨೦೧೨ ಶೂಟಿಂಗ್ ಪುರುಷರ ೨೫ ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್
2  ಬೆಳ್ಳಿ ಸುಶೀಲ್ ಕುಮಾರ್ ೨೦೧೨ ಕುಸ್ತಿ ಪುರುಷರ ಫ್ರೀಸ್ಟೈಲ್ ೬೬ ಕೆಜಿ
3  ಕಂಚು ಸೈನಾ ನೆಹ್ವಾಲ್ ೨೦೧೨ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್
3  ಕಂಚು ಮೇರಿ ಕೋಮ್ ೨೦೧೨ ಬಾಕ್ಸಿಂಗ್ ಮಹಿಳೆಯರ ಫ್ಲೈವೇಟ್ ವಿಭಾಗ
3  ಕಂಚು ಗಗನ್ ನಾರಂಗ್ ೨೦೧೨ ಶೂಟಿಂಗ್ ಪುರುಷರ ೧೦ ಮೀಟರ್ ಏರ್ ರೈಫಲ್
3  ಕಂಚು ಯೋಗೇಶ್ವರ್ ದತ್ ೨೦೧೨ ಕುಸ್ತಿ ಪುರುಷರ ಫ್ರೀಸ್ತೈಲ್ ೬೦ ಕೆಜಿ ವಿಭಾಗ
2  ಬೆಳ್ಳಿ ಪಿ.ವಿ. ಸಿಂಧು align=center|೨೦೧೬ align=center|ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್
3  ಕಂಚು ಸಾಕ್ಷಿ ಮಲಿಕ್[೧೫] ೨೦೧೬ ಕುಸ್ತಿ ಮಹಿಳೆಯರ ಫ್ರಿಸ್ಟೈಲ್ ೫೮ ಕೆಜಿ ವಿಭಾಗ
1  ಬಂಗಾರ ನೀರಜ್ ಚೋಪ್ರಾ ೨೦೨೦ ಜಾವೆಲಿನ್ ಪುರುಷರ ಜಾವೆಲಿನ್ ಎಸೆತ

ಇದನ್ನೂ ಓದಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. http://www.thehindu.com/sport/other-sports/indian-medal-winners-at-olympics/article8897873.ece
  2. "ಆರ್ಕೈವ್ ನಕಲು". Archived from the original on 2016-09-24. Retrieved 2019-10-13.
  3. http://www.thehindu.com/sport/hockey/1928-olympics-indias-first-step-towards-ascending-hockey-throne/article3613550.ece
  4. http://www.thehindu.com/sport/hockey/1932-olympics-games-indias-dominance-continues/article3613551.ece
  5. http://www.thehindu.com/sport/hockey/1936-olympics-hattrick-for-india-under-dhyan-chand/article3616183.ece
  6. http://www.timesofindia.com/sports/rio-2016-olympics/news/miscellaneous/Olympics-Down-the-memory-lane-1940-1956/articleshow/53395749.cms
  7. http://www.thehindu.com/sport/hockey/1960-olympics-pakistan-ends-indias-dominance/article3631570.ece
  8. http://www.timesofindia.com/sports/hockey/top-stories/Gold-winning-hockey-team-of-1964-Tokyo-Olympics-felicitated/articleshow/45287699.cms
  9. "ಆರ್ಕೈವ್ ನಕಲು". Archived from the original on 2016-12-25. Retrieved 2019-10-13.
  10. http://www.thehindu.com/sport/hockey/1972-olympics-indias-golden-glory-fades/article3646216.ece
  11. http://www.thehindu.com/sport/hockey/1980-olympics-india-sinks-spain-for-gold/article3649630.ece
  12. http://m.indiatoday.in/story/olympics-1996-how-leander-paes-won-indias-first-individual-olympic-medal-in-44-years/1/282276.html
  13. http://indiatoday.intoday.in/olympics2016/story/karnam-malleswari-sakshi-malik-india-rio-olympics-2016/1/743479.html
  14. http://www.timesofindia.com/sports/rio-2016-olympics/news/miscellaneous/Olympics-Down-the-memory-lane-2004-2012/articleshow/53463101.cms
  15. http://indianexpress.com/sports/rio-2016-olympics/rohtak-zen-in-rio-zone-sakshi-malik-brings-wrestling-bronze-2984077/