ಹ್ಯಾಮ್
ಹ್ಯಾಮ್ ಎಂದರೆ ರೇಡಿಯೊ ಸಂಪರ್ಕ ಜ್ಞಾನವಿರುವ, ರೇಡಿಯೊ ಸ್ಟೇಷನ್ ಇಟ್ಟುಕೊಳ್ಳಲು ಬೇಕಾದ ಲೈಸನ್ಸ್ ಪಡೆದ ಹವ್ಯಾಸಿ. ಹ್ಯಾಮ್ ಹೆಸರು ಹರ್ಟ್ಸ್ (ಎಚ್) ಅಲೆಕ್ಸಾಂಡರ್ ಗ್ರಹಾಮ್ ಬೆಲ್ (ಎ) ಮತ್ತು ಮಾರ್ಕೊನಿ (ಎಂ) ಇವರ ಹೆಸರುಗಳ ಪ್ರಥಮಾಕ್ಷರ ಸಂಕಲನಪದ ಎಂಬ ಒಂದು ಅಭಿಪ್ರಾಯವಿದೆ. ಭಾರತ ಸರ್ಕಾರ ನಡೆಸುವ ಅಮೆಚೂರ್ ಸ್ಟೇಷನ್ ಆಪರೇಟರ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರು ಹ್ಯಾಮ್ ಲೈಸನ್ಸ್ ಪಡೆದು ಮುಂದೆ ಪ್ರೇಷಕ (ಟ್ರಾನ್ಸ್‌ಮಿಟರ್), ಅಭಿಗ್ರಾಹಕ (ರಿಸೀವರ್) ಮತ್ತು ಆಂಟೆನಗಳನ್ನು ಒಳಗೊಂಡ ಹವ್ಯಾಸಿ ರೇಡಿಯೊ ಸ್ಟೇಷನನ್ನು ಕಟ್ಟಬಹುದು. ಈ ಸ್ಟೇಷನ್ನುಗಳಿಗೆ ಆಯಾ ದೇಶ ಮತ್ತು ಹವ್ಯಾಸಿಯ ಹೆಸರುಗಳಿಗೆ ಅನುಗುಣವಾದ ಕರೆ ಚಿಹ್ನೆಗಳು (ಕಾಲ್ ಸೈನ್ಸ್) ಇರುತ್ತವೆ. ಇವರು ಪರಸ್ಪರ ಸಂಪರ್ಕ ಸಾಧಿಸಿದ ಅನಂತರ ಕಾರ್ಡು ವಿನಿಮಯ ಮಾಡಿಕೊಳ್ಳುತ್ತಾರೆ.
ಪ್ರಾಕೃತಿಕ ಮತ್ತು ಮಾನವಕೃತ ವಿಕೋಪಗಳು ಉಂಟಾದಾಗ ಹ್ಯಾಮ್‌ಗಳು ಕ್ಷಿಪ್ರ ಸಂಪರ್ಕವನ್ನು ಸಾಧಿಸಿದ್ದರಿಂದ ಪರಿಹಾರ ಕಾರ್ಯಗಳೂ ಕ್ಷಿಪ್ರವಾಗಿ ನಡೆದ ಉದಾಹರಣೆಗಳು ಅನೇಕ. ವೈಜ್ಞಾನಿಕ ಪ್ರಯೋಗಗಳಲ್ಲೂ ಹ್ಯಾಮ್ ಹವ್ಯಾಸಿಗಳು ಪಾಲುಗೊಂಡಿದ್ದಾರೆ.
ಛಾಯಂಕಣ
ಬದಲಾಯಿಸಿಹೊರಗಿನ ಕೊಂಡಿಗಳು
ಬದಲಾಯಿಸಿ- Amateur radio reference guide - Technical specifications and manuals