ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಹೋಮೋ ನಲೇದಿ
ಕಾಲಮಾನದ ವ್ಯಾಪ್ತಿ:
ಕಾಲಮಾನ ನಿಗಧಿಯಾಗಿಲ್ಲ
lll
ದೊರೆತ ೧೫೫೦ ಎಲುಬು ತುಂಡುಗಳಲ್ಲಿ
ಕೆಲವು
ಸಂರಕ್ಷಣೆಯ ಸ್ಥಿತಿ
ಅಳಿದ ಪ್ರಭೇದ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಕಾರ್ಡೇಟ
ಕ್ಲಾಡ್: ಸಿನಾಪ್ಸಿಡ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಉಪಗಣ: ಹ್ಯಾಪ್ಲೋರ್ಹಿನಿ
ಕುಟುಂಬ: ಹೋಮಿನಿಡೇ
ಕುಲ: ಹೋಮೋ
ಪ್ರಭೇದ: †ಹೋ. ನಲೇದಿ
ದ್ವಿಪದ ಹೆಸರು
ಹೋಮೋ ನಲೇದಿ
(ಲೀ ಆರ್ ಬರ್ಗರ್ ಮತ್ತು ಇತರರು, ೨೦೧೫)
lll
ದೊರಕಿದ ಸ್ಥಳ: ಸ್ಟಾರ್‌ ಕೇವ್ ಗ್ವಾಟೆಂಗ್,
ದಕ್ಷಿಣ ಆಫ್ರಿಕಾ

ಹೋಮೋ ನಲೇದಿಯ ಪತ್ತೆಹಚ್ಚುವಿಕೆಯು:ಮನುಷ್ಯ ತನ್ನ ಮೂಲದ ಹುಡುಕಾಟವನ್ನು ನಿಲ್ಲಿಸಿಲ್ಲ ಎಂದು ಸೂಚಿಸುತ್ತದೆ. ಭೂಮಿಯ ಮೇಲೆ ಜೀವಿ ಹುಟ್ಟಿ ಕೋಟ್ಯಂತರ ವರ್ಷಗಳಾಗಿವೆ. ಮನುಷ್ಯ ಹೇಗೆ ರೂಪ ತಳೆದ ಎಂಬುದು ಕೊನೆ ಇಲ್ಲದ ಕುತೂಹಲ. ಈ ಕುತೂಹಲಕ್ಕೆ ಹೊಸ ತಿರುವು ಸಿಕ್ಕಿದೆ. ವಿಸ್ಮಯಕಾರಿ ಸಂಶೋಧನೆಯೊಂದರಲ್ಲಿ, ಸುಮಾರು 15 ದೇಹಗಳ ಮೂಳೆಯ ಪಳೆಯುಳಿಕೆಗಳು ವಿಜ್ಞಾನಿಗಳಿಗೆ ಲಭ್ಯವಾಗಿದೆ. ಈವರೆಗೂ ಅಧ್ಯಯನ ನಡೆಸಿದ್ದ ವಿಕಸನ ತತ್ವಕ್ಕೆ ಇದರಿಂದಾಗಿ ಹೊಸ ತಿರುವು ಸಿಕ್ಕಂತಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ದಕ್ಷಿಣ ಆಫ್ರಿಕದ ಜೋಹಾನ್ಸ್ ಬರ್ಗ್ ಬಳಿಯ ಗುಹೆಗಳಲ್ಲಿ ಸಿಕ್ಕಿರುವ ಸಾವಿರಾರು ಮೂಳೆಗಳು ಆದಿಮಾನವನ ಪೂರ್ವಜರದ್ದೆನ್ನಲಾಗಿದ್ದು, ಇದನ್ನು 'ಹೋಮೋ ನಲೇದಿ' ಎಂದು ಕರೆದಿದ್ದಾರೆ. ವಿಟ್ ವಾಟರ್ಸ್ ರಂಡ್ ಯೂನಿವರ್ಸಿಟಿಯ ಪ್ರೋಫೆಸರ್ ಲೀ ಬರ್ಗರ್ ಈ ಅಚ್ಚರಿಯನ್ನು ಗುರುವಾರ ಬಹಿರಂಗಪಡಿಸಿದ್ದಾರೆ. ಜೋಹಾನ್ಸ್ ಬರ್ಗ್‍ನಿಂದ ಸುಮಾರು 50 ಕಿಮೀ ದೂರದಲ್ಲಿರುವ ಸ್ಟೆಕರ್ ಫೋಂಟೀನ್ ಮತ್ತು ಸ್ವಟರ್ ಕ್ರನ್ಸ್ ನ ಗುಹೆಗಳ ಆಳದೊಳಗೆ ಸಾವಿರಾರು ಮೂಳೆ ತುಂಡುಗಳು ಹೆಕ್ಕಿರುವ ಲೀ ಬರ್ಗರ್, ಅವು ಮಹಿಳೆಯರು, ಪುರುಷರು ಹಾಗೂ ಚಿಕ್ಕ ಮಕ್ಕಳ ತಲೆಬುರುಡೆ ಹಾಗೂ ಎಲುಬುಗಳ ಅವಶೇಷಗಳೆಂದು ವಿಂಗಡಿಸಿದ್ದಾರೆ. ಇಷ್ಟು ರಾಶಿ ಅವಶೇಷಗಳು ಒಂದೇ ಸ್ಥಳದಲ್ಲಿ ದೊರಕಿದ್ದು ಇದೇ ಮೊದಲು ಎನ್ನಲಾಗಿದೆ. 1500 ಮೂಳೆಗಳಲ್ಲಿ ಕನಿಷ್ಠ 15 ಮನುಷ್ಯರ ದೇಹರಚನೆ ಆಗಬಹುದಾಗಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಅಲ್ಲಿ ಇನ್ಯಾವುದೇ ಪ್ರಾಣಿಗಳ ಅಥವಾ ಬೇರೆ ಜೀವಿಗಳ ಪಳೆಯುಳಿಕೆ ಸಿಕ್ಕಿಲ್ಲ ಎಂದೂ ಸ್ಪಷ್ಟಪಡಿಸುವ ಅವರು ಇವು ಇನ್ಯಾವುದೋ ಪ್ರಾಣಿಯಿಂದ ಕೊಲ್ಲಲ್ಪಟ್ಟ ಜೀವಗಳಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಆ ಮೂಳೆಗಳು ಅಷ್ಟೊಂದು ಆಳದಲ್ಲಿ ಹುದುಗಿದ್ದಕ್ಕೆ ಇನ್ನೊಂದು ಕಾರಣವನ್ನೂ ವಿಜ್ಞಾನಿಗಳು ಊಹಿಸಿದ್ದಾರೆ. ನರಭಕ್ಷಕ ಮೃಗಗಳಿಂದ ಹಾಗೂ ಹೈನಾಗಳಿಂದ ತಪ್ಪಿಸಿಕೊಳ್ಳಲು ನೆಲದಾಳದಲ್ಲಿ ಅಡಗಿ ಸತ್ತಿರುವ ಸಾಧ್ಯತೆ ಯೋಚಿಸಿದ್ದಾರೆ. ಚಿಂಪಾಂಜಿಗಿಂತ ಹೆಚ್ಚು ಹೋಲಿಕೆ 1960ರಲ್ಲಿ ಜೇನ್ ಗುಡಾಲ್ ನಡೆಸಿದ ಅಧ್ಯಯನದಲ್ಲಿ ಚಿಂಪಾಂಜಿಗಳೇ ಮಾನವನ ಅತ್ಯಂತ ನಿಕಟ ಪ್ರಭೇದಗಳು ಎಂದು ತಿಳಿಸಲಾಗಿತ್ತು. ಆದರೆ ಹೋಮೋ ನಲೇದಿ ಚಿಂಪಾಂಜಿಗಿಂತಲೂ ಹೆಚ್ಚು ಮನುಷ್ಯನ ಹೋಲಿಕೆಗಳನ್ನು ಹೊಂದಿದೆ ಎನ್ನಲಾಗಿದೆ. ಇದರ ಮೆದುಳು ಚಿಂಪಾಂಜಿಗಿಂತಲೂ ಕೊಂಚ ದೊಡ್ಡದಿದೆ ಎಂದು ಕಂಡುಹಿಡಿದಿರುವ ವಿಜ್ಞಾನಿಗಳು ಅವುಗಳ ವಯಸ್ಸು ಕಂಡುಹಿಡಿಯುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ. ಆದರೆ ಇದು ಕನಿಷ್ಠ 25 ಲಕ್ಷ ವರ್ಷಗಳಷ್ಟು ಹಳೆಯದು ಎಂದು ಊಹಿಸಿದ್ದಾರೆ. ಹೋಮೋ ನಲೇದಿ ಎಂಬ ಹೆಸರಿಗೆ ಕಾರಣ ಈ ಹೊಸ ಪ್ರಭೇದ ಮನುಷ್ಯನ ಪೂರ್ವಜರರೆಂಬ ಕಾರಣಕ್ಕೆ ಹೆಸರಿನ ಮೊದಲ ಭಾಗದಲ್ಲಿ ಹೋಮೋ ಎಂಬ ಪದ ಉಳಿಸಿಕೊಳ್ಳಲಾಗಿದೆ. ರೈಸಿಂಗ್ ಸ್ಟಾರ್ ಎಂಬ ಗುಹೆಯಲ್ಲಿ ಇವುಗಳು ದೊರಕಿರುವುದರಿಂದ ನಲೇದಿ ಎಂದು ಕರೆಯಲಾಗಿದೆ. ನಲೇದಿ ಅಂದರೆ ಆಫ್ರಿಕಾದ ಸೆಸೊಥೊ ಭಾಷೆಯಲ್ಲಿ ಸ್ಟಾರ್ ಎಂದರ್ಥ. ಹಾಗಾಗಿ ಹೋಮೋ ನಲೇದಿ ಎಂದು ಕರೆಯಲಾಗಿದೆ. ಇದು ಲೀ ಬರ್ಗರ್ ವಿವರಣೆ.

ಕಂಡುಹಿಡಿಯುವಿಕೆ[]

ಬದಲಾಯಿಸಿ
 
ಹೋ. ನಲೇದಿ ಪತ್ತೆಯಾದ ರೈಸಿಂಗ್ ಸ್ಟಾರ್ ಗವಿಯ ದಿನಲೇದಿ ಕೋಣೆಯ ಚಿತ್ರಣ

೨೦೧೩ರ ಸೆಪ್ಟಂಬರ್‌ನಲ್ಲಿ ದಕ್ಷಿಣ ಆಫ್ರಿಕಾದ ರೈಸಿಂಗ್ ಸ್ಟಾರ್ ಗವಿ ವ್ಯವಸ್ಥೆಯ ನೆಲಮಾಳಿಗೆಯ ವ್ಯವಸ್ಥೆಯೊಂದನ್ನು ಪತ್ತೆ ಹಚ್ಚಿದರು. ದಿನಲೇದಿ ಕೋಣೆಯ ಯುಡಬ್ಲು ೧೦೧ ನಿವೇಶನ ಎಂದು ಕರೆಯಲಾದ ಇಲ್ಲಿ ಹಲವು ಪಳಿಯುಳಿಕೆಗಳನ್ನು ಆಸಕ್ತರು ಪತ್ತೆ ಹಚ್ಚಿದರು. ಇವುಗಳ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಇವುಗಳ ಬಗೆಗೆ ಆಕ್ಟೋಬರ್ ೨೦೧೩ರಲ್ಲಿ ಅಮೆರಿಕ ಮೂಲದ ದಕ್ಷಿಣ ಆಫ್ರಿಕಾದ ಪ್ರಾಚೀನಮಾನವಶಾಸ್ತ್ರಜ್ಞ ಲೀ ರೋಗರ್ಸ್ ಬರ್ಗರ್‌ ಗಮನ ಸೆಳೆಯಲಾಯಿತು.[][] ನಂವೆಬರ್ ೨೦೧೩ರಲ್ಲಿ ಮತ್ತೆ ಮಾರ್ಚ್ ೨೦೧೪ರಲ್ಲಿ ಉತ್ಖನನ ಮಾಡಲಾಯಿತು. ಪರಿಣಾಮವಾಗಿ ಸುಮಾರು ೧೫೫೦ ಮೂಳೆಗಳ ಪಳಿಯುಳಿಕೆ ತುಂಡುಗಳು ಪತ್ತೆಯಾದವು.[][] ದಿನಲೇದಿ ಕೋಣೆಯ ಮೇಲ್ಮೈಯಲ್ಲಿ ಸುಮಾರು ೩೦೦ ಮತ್ತು ಕೇವಲ ಒಂದು ಚದರ ಮೀಟರ್‌ನ ಉತ್ಖನದಲ್ಲಿ ಸುಮಾರು ೧೨೫೦ ಮೂಳೆಗಳ ತುಂಡುಗಳು ದೊರೆತವು.[] ಇನ್ನುಳಿದ ಭಾಗದ ಉತ್ಖನನ ಹೆಚ್ಚಿನ ಪಳಿಯುಳಿಕೆಗಳು ನೀಡುವ ಸಾಧ್ಯತೆ ಇದೆ.[][][] ಮಾನವನ ಹೊಸ ಪ್ರಭೇದ ಪತ್ತೆಯಾದುದರ ಬಗೆಗೆ ದಕ್ಷಿಣ ಆಫ್ರಿಕಾದ ಜೊಹೆನ್ಸ್‌ಬರ್ಗನಲ್ಲಿ ಸೆಪ್ಟಂಬರ್, ೧೦ ೩೦೧೫ರ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಲಾಯಿತು.[][೧೦][೧೧]

ಪಳಿಯುಳಿಕೆಗಳು

ಬದಲಾಯಿಸಿ

ರೂಪವಿಜ್ಞಾನ

ಬದಲಾಯಿಸಿ

ಭೌತಿಕ ಗುಣಗಳು ಇದುವರೆಗೂ ಹೋಮಿನಿನ್‌ ಪ್ರಭೇದಗಳಲ್ಲಿ ಕಂಡುಬರದ ಅಸ್ಟ್ರಲೋಪಿಥೆಕಸ್ ಪ್ರಭೇದ ಮತ್ತು ಹೋಮೋ ಪ್ರಭೇದದ ಗುಣಗಳ ಮಿಶ್ರಣ ಕಂಡುಬಂತು. ಅಸ್ತಿಪಂಜರಗಳ ಪರಿಶೀಲನೆ ಇದು ಅಸ್ಟ್ರಲೋಪಿಥಿಸಿನ್‌ನ (ಹೊಮಿನಿನ್ ಬುಡಕಟ್ಟಿನ ಉಪಬುಡಕಟ್ಟು. ಅಸ್ಟ್ರಲೋಪಿಥಿಕಸ್ ಕುಲವಲ್ಲದೆ ಕೇನ್ಯಾಂತ್ರೋಪಸ್, ಆರ್ಡಿಪಿಥಿಕಸ್ ಮತ್ತು ಪ್ರಯಂತ್ರೋಪಸ್‌ಗಳನ್ನು ಒಳಗೊಂಡಿದೆ) ಪೂರ್ವಜ ಲಕ್ಷಣಗಳನ್ನು ಮತ್ತು ಮುಂದೆ ಹೊಮಿನಿನ್‌ಗಳಲ್ಲಿ ಕಂಡುಬಂದ ಪಡೆದ ಲಕ್ಷಣಗಳನ್ನೂ ಹೊಂದಿತ್ತು ಎಂದು ಸೂಚಿಸುತ್ತದೆ.[][೧೨]

ವಯಸ್ಕ ಗಂಡಿನ ಎತ್ತರ ಸುಮಾರು ೧೫೦ ಸೆಂಮೀ (೫ ಅಡಿ) ಮತ್ತು ತೂಕ ಸುಮಾರು ೪೫ ಕಿಲೊಗ್ರಾಂ (೧೦೦ ಪೌಂಡ್) ಎಂದು ಅಂದಾಜಿಸಲಾಗಿದ್ದು ಹೆಣ್ಣಿನ ತೂಕ ಮತ್ತು ಎತ್ತರ ತುಸು ಕಡಿಮೆ ಎಂದು ಅಂದಾಜಿಸಲಾಗಿದೆ. ಗಾತ್ರದಲ್ಲಿನ ಈ ವ್ಯತ್ಯಾಸವು ಆಧುನಿಕ ಸಣ್ಣ ಗಾತ್ರದವರ ಹೆಣ್ಣುಗಂಡಿನ ವ್ಯತ್ಯಾಸದ ವ್ಯಾಪ್ತಿಯೊಳಗೆಯೇ ಬರುತ್ತದೆ. ಅದರ ಅಸ್ತಿಪಂಜರದ ವಿಶ್ಲೇಷಣೆ ಅದು ನೆಟ್ಟಗೆ ನಿಲ್ಲುತ್ತಿತ್ತು ಮತ್ತು ಎರಡು ಕಾಲಮೇಲೆ ನಡೆಯುತ್ತಿದ್ದ ದ್ವಿಪಾದಿಯಾಗಿತ್ತು ಎಂದು ಹೇಳುತ್ತದೆ[೧೨][೧೩][೧೪]. ಸೊಂಟದ ಮೆಕಾನಿಸಂ ಮತ್ತು ವಸ್ತಿಕುಹರದ ಅಗಲವಾಗುವ ಭಾಗವು ಅಸ್ಟ್ರಲೋಪಿಥಿಸಿನ್‌ನ್ನು ಹೋಲುತ್ತಿದ್ದರೆ, ಕೈ, ಕಾಲು ಮತ್ತು ಕಣಕಾಲು (ಆಂಕಲ್) ಹೆಚ್ಚು ಹೋಮೋ ಪ್ರಭೇದವನ್ನು ಹೋಲುತ್ತವೆ.[][೧೨][೧೫]

 
ಹೋ ನಲೇದಿಯ ಅಂಗೈ ಮತ್ತು ಹಿಂಗೈ ಪಳಿಯುಳಿಕೆಗಳು
 
ಹೋ. ನಲೇದಿಯ ಪಾದದ ಪಳಿಯುಳಿಕೆ

ಹೋಮೋ ನಲೇದಿಯ ಕೈಗಳು ವಸ್ತುಗಳನ್ನು ಬಳಕೆಯ ಬಗೆಗೆ ಆಸ್ಟ್ರಲೋಪಿಥಿಸಿನ್‌ಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರ ಬಲ್ಲವಂತೆ ಕಾಣುತ್ತವೆ.[][೧೬] ಕೆಲವು ಮೂಳೆಗಳು ಮಾನವನ ಮೂಳೆಗಳನ್ನು ಹೋಲುತ್ತಿದ್ದರೆ ಇನ್ನೂ ಕೆಲವು ಆಸ್ಟ್ರಲೋಪಿಥಿಕಸ್‌ಗಿಂತ ಹೆಚ್ಚು ಪ್ರಾಚೀನವಾಗಿರುವಂತೆ ಭಾಸವಾಗುತ್ತವೆ. ಹೆಬ್ಬೆರಳು, ಮಣಿಕಟ್ಟು ಮತ್ತು ಅಂಗೈನ ಮೂಳೆಗಳು ಹೆಚ್ಚು ಮಾನವನವಂತಿದ್ದರೆ ಬೆರಳುಗಳು ಅಸ್ಟ್ರಲೋಪಿಥಿಸಿನ್‌ಗಳಲ್ಲಿಂದತೆ ಹತ್ತಲು ಸುಲಭವಾಗುವಂತೆ ಬಾಗಿವೆ.[೧೦] ಭುಜಗಳ ಆಕಾರ ಆಸ್ಟ್ರಲೋಪಿಥಿಸಿನ್‌ನಲ್ಲಿದಂತೆ ಇದೆ. ಬೆನ್ನೆಲುಬು ವಿಷಯದಲ್ಲಿ ಇದು ಹೋಮೋ ಕುಲದ ಪ್ಲಿಸ್ಟೋಸಿನ್ ಸದಸ್ಯರನ್ನು ಹೋಲಿದರೆ, ಪಕ್ಕೆಲುಬಗಳ ಗೂಡು ಆಸ್ಟ್ರಲೋಪಿಥಿಕಸ್ ಆಫರೇನ್ಸಿಸ್‌ನ್ನು ಹೋಲುತ್ತದೆ.[] ಕೈ ಆಸ್ಟ್ರಲೋಪಿಥಿಕಸ್‌ನ್ನು ಹೋಲುವ ಭುಜ ಮತ್ತು ಬೆರಳುಗಳು ಇದ್ದರೆ ಅಂಗೈ ಮತ್ತು ಮಣಿಕಟ್ಟು ಮಾನವರದನ್ನು ಹೋಲುತ್ತದೆ.[೧೫] ದೇಹದ ಮೇಲಿನ ಭಾಗವು ಇತರ ಹೋಮೋ ಪ್ರಭೇದದ ಸದಸ್ಯದರಕ್ಕಿಂತ ಹೆಚ್ಚು ಪ್ರಾಚೀನ ಅಥವಾ ಹೆಚ್ಚು ವಾನರ ರೀತಿಯದು ಎಂದು ಭಾಸವಾಗುತ್ತದೆ.[೧೦]

 
ಹೋ. ನಲೇದಿ ಮತ್ತು ಇತರ ಆರಂಭಿಕ ಮಾನವರ ತಲೆಬುರುಡೆಗಳ ಲಕ್ಷಣಗಳ ಹೋಲಿಕೆ

ನಾಲ್ಕು ತಲೆಬುರಡೆಗಳು ಪತ್ತೆಯಾಗಿದ್ದು ಎರಡು ಗಂಡಿನವು ಮತ್ತು ಎರಡು ಹೆಣ್ಣಿನವು ಎಂದು ಭಾವಿಸಲಾಗಿದೆ. ಗಂಡಿನ ತಲೆಬುರುಡೆಯ ಒಳ ಅಳತೆ ೫೬೦ ಘನ ಸೆಂಮೀಗಳಾಗಿದ್ದು ಹೆಣ್ಣಿನ ತಲೆಬುರುಡೆಯ ಒಳ ಅಳತೆ ೪೬೫ ಘನ ಸೆಂಮೀ ಇದೆ. ಇದು ಮಾನವನ ತಲೆಬುರುಡೆಯ ಅಳತೆಗಿಂತ ಸುಮಾರು ಅರ್ಧದಷ್ಟು. ಹೋಮೋ ಎರಕ್ಟಸ್ ತಲೆಬುರುಡೆಯ ಅಳತೆ ಸುಮಾರು ೯೦೦ ಘನ ಸೆಂಮೀ. ಹೋ. ನಲೇದಿಯ ತಲೆಬುರುಡೆಯ ಘನ ಅಳತೆಯು ಅಸ್ಟ್ರಲೋಪಿಥಿಸಿನ್‌ಗೆ ಹೆಚ್ಚು ಹೋಲುತ್ತದೆ.[೧೦] ಆದಾಗ್ಯೂ ಅದರ ತೆಳು ಲಕ್ಷಣ, ಗಂಡಸ್ಥಳದ ಮತ್ತು ಹಿಂದಲೆಯ ಕಪಾಲ ಉಬ್ಬುವಿಕೆಗಳು ಹಾಗೂ ಬುರುಡೆಯ ಕಣ್ಣಿನ ಕುಳಿಗಳು ಕಣ್ಣಿನ ಹಿಂದೆ ಸಣ್ಣವಾಗದಿರುವ ಲಕ್ಷಣಗಳ ಕಾರಣಕ್ಕೆ ಇದನ್ನು ಹೋಮೋಗೆ ಹೆಚ್ಚು ಹತ್ತಿರ ಎನ್ನಲಾಗಿದೆ.[] ದವಡೆಯ ಮೂಳೆಯ ಸ್ನಾಯುಗಳು ಅಸ್ಟ್ರಲೋಪಿಥಿಸಿನ್‌ ಗಳಿಗಿಂತ ಬಹಳ ಸಣ್ಣವು ಮತ್ತು ಆಹಾರವು ಹೆಚ್ಚು ಅಗಿಯುವ ಅಗತ್ಯವಿಲ್ಲದ್ದು ಎಂದು ಸೂಚಿಸುತ್ತದೆ.[] ಹಲ್ಲುಗಳು ಸಣ್ಣವು ಮತ್ತು ಮಾನವನ ಹಲ್ಲುಗಳನ್ನು ಹೋಲುತ್ತವೆ ಆದರೆ ಮೂರನೆಯ ದವಡೆಯ (ಅರೆಯುವ) ಹಲ್ಲು ಮೋಲಾರ್, ಆಸ್ಟ್ರಲೋಪಿಥಿಸಿನ್‌ ಗಳಲ್ಲಿದಂತೆ, ಉಳಿದವಕ್ಕಿಂತ ತುಸು ದೊಡ್ಡದು.[೧೫]

 
ತಲೆಬುರುಡೆಯ ಪಳಿಯುಳಿಕೆ, ಹೋ. ನಲೇದಿಯದು

ಹೋ. ನಲೇದಿಯ ಒಟ್ಟಾರೆ ಆಸ್ತಿಪಂಜರದ ರಚನೆ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳು ಅದನ್ನು ಅಸ್ಟ್ರಲೋಪಿಥಿಕಸ್‌ ಪ್ರಭೇದದ ಬದಲು ಹೋಮೋ ಪ್ರಭೇದದಲ್ಲಿ ಸೇರಿಸುವಂತೆ ಪ್ರೇರೇಪಿಸಿದೆ. ಹೋ. ನಲೇದಿ ಅಸ್ತಿಪಂಜರವು ಹೋಮೋ ಪ್ರಭೇದದ ಹುಟ್ಟು ಹೆಚ್ಚು ಸಂಕೀರ್ಣವಾಗಿದ್ದು, ಬಹುಶ ಸಂಕರಗಳನ್ನು ಸಹ ಒಳಗೊಂಡಿದ್ದು, ಪ್ರಭೇದವು ಆಫ್ರಿಕಾದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆಯಾಗಿ ವಿಕಾಸವಾಗಿರ ಬಹುದು ಎಂದು ಸೂಚಿಸುತ್ತದೆ.[೧೭][೧೮]

ಕಾಲನಿರ್ಣಯ

ಬದಲಾಯಿಸಿ

ಪಳಿಯುಳಿಕೆಗಳ ಕಾಲಮಾನ ನಿರ್ಣಯವಾಗಿಲ್ಲ. ಮೂರು ಕಾಲಮಾನ ನಿರ್ಣಯ ಪದ್ಧತಿಗಳು ನಿರ್ಣಾಯಕ ಕಾಲಮಾನ ಕೊಡದ ಕಾರಣಕ್ಕೆ ಸ್ಥಳೀಯ ವಿಜ್ಞಾನಿಗಳು ಇನ್ನೊಂದು ಕಾಲನಿರ್ಣಯದ ತಂತ್ರಕ್ಕೆ ಮೊರೆಹೋಗಲು ನಿರ್ದರಿಸಿದ್ದು, ಇದನ್ನು ೨೦೧೭ರಲ್ಲಿ ಮಾಡಬಹುದೆಂದು ಭಾವಿಸಿದ್ದಾರೆ.[೧೯] ಈ ಕಾಲಮಾನ ನಿರ್ಣಯದಲ್ಲಿ ಪಳಿಯುಳಿಕೆಯ ಒಂದು ಭಾಗ ನಾಶವಾಗುವ ಕಾರಣಕ್ಕೆ ಪಳಿಯುಳಿಕೆ ಪತ್ತೆಹಚ್ಚಿದ ತಂಡವು ಸಂಶೋಧನೆ ಪ್ರಕಟವಾದ ನಂತರ ರೇಡಿಯೋ ಕಾರ್ಬನ್ ಕಾಲಮಾನ ನಿರ್ಣಯಕ್ಕೆ ಪ್ರಯತ್ನಿಸ ಬೇಕು ಎಂದು ನಿರ್ಣಯಿಸಿತು.[೨೦][೨೧][೨೨] ರೇಡಿಯೋ ಕಾರ್ಬನ್ ಕಾಲಮಾನ ನಿರ್ಣಯವು ೫೦೦೦೦ ವರುಷಗಳಿಗೂ ಕಡಿಮೆ ಇರುವ ಪಳಿಯುಳಿಕೆಗಳ ಕಾಲಮಾನ ಮಾತ್ರ ನಿರ್ಣಯ ಮಾಡಬಲ್ಲದು.[೨೨] ಭೂಶಾಸ್ತ್ರಜ್ಞರು ಪಳಿಯುಳಿಕೆ ಪತ್ತೆಯಾದ ಗವಿಯು ಮೂರು ದಶಲಕ್ಷಕ್ಕೂ ಪುರಾತನವಾದುದಲ್ಲ ಎಂದು ಅಂದಾಜಿಸಿದ್ದಾರೆ.[೨೩] ಏಪ್ರಿಲ್ ೨೦೧೬ರಂತೆ ಐದು ಭಿನ್ನ ತಂತ್ರಗಳ ಕಾಲಮಾನ ನಿರ್ಣಯಕ್ಕೆ ಏಳು ಪ್ರಯೋಗಾಲಯಗಳಲ್ಲಿ ಪ್ರಯತ್ನಿಸಲಾಗುತ್ತಿದೆ.[೨೪]

ಮೂಳೆಗಳು ಗವಿಯ ಮೇಲ್ಮೈಯಲ್ಲಿ ಹರಡಿದ್ದವು ಅಥವಾ ಆಳವಲ್ಲದ ಪ್ಲೊಸ್ಟೋನ್ ಎಂದು ಕರೆಯಲಾದ ಗಷ್ಟಿನಲ್ಲಿ ಹೂಳಲ್ಪಟ್ಟಿದ್ದವು. ೨೦೧೬ರಂತೆ ತಂಡವು ಪ್ಲೊಸ್ಟೋನ್‌ಗಳ ನಿವೇಶನಗಳಿಗೆ ಅನ್ವಯಿಸುವ ಕಾಲಮಾನ ನಿರ್ಣಯ ತಂತ್ರಗಳ ಮೂಲಕ ಪಳಿಯುಳಿಕೆ ಇರುವ ಸಂಚಯದ ಭೂಗೋಳಿಕ ಕಾಲಮಾನ ನಿರ್ಣಯಿಸಲು ಪ್ರಯತ್ನಿಸುತ್ತಿದೆ.[೨೫] ಬರ್ಗರ್ ಹೋ. ನಲೇದಿಯ ಅಂಗರಚನೆಯು ಹೋಮೋ ಪ್ರಭೇದ ಆರಂಭಕ್ಕೆ ಹತ್ತಿರದಲ್ಲಿ ಹುಟ್ಟಿತು ಎಂದು ಸೂಚಿಸುತ್ತದೆ ಮತ್ತು ಇದು ೨.೫ ರಿಂದ ೨.೮ ದಶಲಕ್ಷ ವರುಷಗಳ ಹಿಂದೆ, ಆದರೆ ವಾಸ್ತವದ ಮೂಳೆಗಳ ಕಾಲಮಾನ ಇದಕ್ಕೂ ಕಡಿಮೆ ಇದ್ದಿರ ಬಹುದು ಎಂದಿದ್ದಾರೆ.[೨೬]

ವಿಟ್‌ವಾಟರ್‌ಸ್ರಾಂಡ್ ವಿಶ್ವವಿದ್ಯಾನಿಲಯದ ಫ್ರಾಂಸಿಸ್ ಥಾಕೆರೆ ಹೋ. ರುಡಾಲ್ಫೆನ್ಸಿಸ್, ಹೋ. ಎರಕ್ಟಸ್ ಮತ್ತು ಹೋ. ಹೆಬಿಲಿಸ್ ಪ್ರಭೇದಗಳ ಸುಮಾರು ಕಾಲಮಾನ ಕ್ರಮವಾಗಿ ೧.೫, ೨.೮ ಮತ್ತು ೧.೮ ದಶಲಕ್ಷ ವರುಷಗಳ ಹಿಂದೆ ಎಂಬುದರ ಹಿನ್ನೆಲೆಯಲ್ಲಿ ಹೋ. ನಲೇದಿ ೨ ದಶಲಕ್ಷ ವರುಷಗಳ ಹಿಂದೆ (±೦.೫ ದವ) ಜೀವಿಸುತ್ತಿದ್ದ ಎಂದು ಸೂಚಿಸುತ್ತದೆ ಎಂದಿದ್ದಾರೆ.[೨೭][೨೮]

ಅಭಿಪ್ರಾಯಗಳು

ಬದಲಾಯಿಸಿ

ಸಂಶೋಧನಾ ತಂಡವು ಕುಲ ಹೋಮೋನಲ್ಲಿ ಹೊಸ ಪ್ರಭೇದ ನಲೇದಿಯನ್ನು ಸೂಚಿಸಿದೆ. ಆದರೆ ಇತರ ತಜ್ಞರು ಈ ವರ್ಗೀಕರಣಕ್ಕೆ ಇನ್ನೂ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿದೆ ಎಂದು ಸೂಚಿಸಿದ್ದಾರೆ.[][೨೦] ಪ್ರಾಚೀನ ಮಾನವಶಾಸ್ತ್ರಜ್ಞ ಟಿಮ್ ಡಿ. ವೈಟ್ ಕಾಲಮಾನ ನಿರ್ಣಯವಾಗದೆ ಮತ್ತು ಹೆಚ್ಚವರಿಯಾಗಿ ಈಗಾಗಲೇ ತಿಳಿದ ಪಳಿಯುಳಿಕೆಗಳೊಂದಿಗೆ ಹೆಚ್ಚುವರಿಯಾಗಿ ಅಂಗರಚನೆಯನ್ನು ಹೋಲಿಸದೆ ಇದರ ಮಹತ್ವವು ಅರ್ಥವಾಗುವುದಿಲ್ಲ ಎಂದು ಟಿಪ್ಪಣಿ ಮಾಡಿದ್ದಾರೆ.[೨೧] ರಿಕ್‌ ಪಾಟ್ಸ್ ಈ ಪಳಿಯುಳಿಯ ವಯಸ್ಸು ತಿಳಿಯದೆ ವಿಕಾಸದಲ್ಲಿ ಇದರ ಮಹತ್ವ ಅರ್ಥವಾಗುವುದಿಲ್ಲ ಎಂದಿದ್ದಾರೆ.[೨೬]

ನ್ಯೂಯಾರ್ಕ್ ವಿಶ್ವಿವಿದ್ಯಾನಿಲಯದ ಮಾನವಶಾಸ್ತ್ರಜ್ಞ ಸುಸಾನ್ ಆಂಟನ್ ಕಾಲಮಾನ ನಿರ್ಣಯವಾದ ಮೇಲೂ ವಿದ್ವಾಂಸರು ಈ ಪಳಿಯುಳಿಕೆಗಳನ್ನು ಸರಿಯಾದ ಸಂದರ್ಭದಲ್ಲಿಟ್ಟು ನೋಡಲು ಹಲವು ವರುಷಗಳೇ ತೆಗೆದುಕೊಳ್ಳುತ್ತಾರೆ ಏಕೆಂದರೆ ಪ್ರಾಚೀನಮಾನವಶಾಸ್ತ್ರದಲ್ಲಿ ಈ ಹೋಲಿಕೆಗಳನ್ನು ಹೋಮೋ ವ್ಯಾಖ್ಯಾನ ಮಾಡಲು ಹೇಗೆ ಬಳಸ ಬೇಕು ಎಂಬುದರ ಬಗೆಗೆ ಏಕಾಭಿಪ್ರಾಯವಿಲ್ಲ ಎನ್ನುತ್ತಾರೆ. “ಕೆಲವರು ದ್ವಿಪಾದಿತ್ವವು ಮುಖ್ಯವಾಗಿ ವ್ಯಾಖ್ಯಾನಿಸ ಬೇಕಾದ ಹೆಜ್ಜೆ, ಏಕೆಂದರೆ ಹೋಮೋ ಎಂದರೆ ಅರ್ಥ ಪರಿಸರದಲ್ಲಿ ನಿರ್ದಿಷ್ಟ ರೀತಿಯಲ್ಲಿ ಚಲಿಸುವುದು ಎಂದು ವಾದಿಸುತ್ತಾರೆ. ಇತರ ಕೆಲವು ವಿದ್ವಾಂಸರು ಹೋಮೋ ಕುಟುಂಬದ ಲಕ್ಷಣವಾಗಿ ತಲೆಬುರುಡೆಯ ಲಕ್ಷಣಗಳ ಬಗೆಗೆ ಹೆಚ್ಚು ಗಮನಹರಿಸ ಬಹುದು.”[೨೧]

ಜಾರ್ಜ್ ವಾಶಿಂಗ್‌ಟನ್ ವಿಶ್ವವಿದ್ಯಾನಿಲಯದ ಪ್ರಾಚೀನಮಾನವಶಾಸ್ತ್ರಜ್ಞ ಬರ್ನಾಡ್ ವುಡ್ ಹೋ. ನಲೇದಿ ಹೊಸ ಪ್ರಭೇದ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಇದು ಹೋಮೋ ರೆಲಿಕ್ಟ್ (ಮೂಲರೂಪದಲ್ಲಿಯೇ ಬಂದು ಬದಲಾಗದ ಜೀವಿ) ಜನಸಂಖ್ಯೆಯಾದ ಇಂಡೋನೇಶಿಯದ ಪ್ಲೋರ್ಸ್ ದ್ವೀಪದ ಸಣ್ಣ ಮೆದುಳಿನ ಹೋಮೋ ಪ್ಲೋರೆಸಿಯೆನ್ಸಿಸ್ ರೀತಿಯಲ್ಲಿ ಇದೂ ಇನ್ನೊಂದು ಪ್ರತ್ಯೇಕವಾಗಿ ಉಳಿದ ರೆಲಿಕ್ಟ್ ಜನಸಂಖ್ಯೆಯಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಅವರು.[೧೫] ಒಟ್ಟಾರೆ ವ್ಯಕ್ತಿಗಳ ಸಂಖ್ಯೆ ಮತ್ತು ಲಿಂಗ ಮತ್ತು ವಯೋಮಾನಗಳ ಪ್ರತಿನಿಧಿಸುವಿಕೆಯಲ್ಲಿ ಆಫ್ರಿಕಾದಲ್ಲಿ ಇದುವರೆಗೂ ಕಂಡುಹಿಡಿದ ಎಲ್ಲಾ ಹೋಮಿನಿನ್ ಪಳಿಯುಳಿಕೆಗಳಲ್ಲೂ ಸಿರಿವಂತ ಸಂಗ್ರಹವಿದು.[೧೫] ಸೀಮ ಡೆ ಲಾಸ್ ಹ್ಯೂಸಾಸ್ (ಸ್ಪೇನ್‌ನ), ನಂತರದ ನಿಯಾಂಡ್ರತಲ್ ಮತ್ತು ಆಧುನಿಕ ಮಾನವನ ಮಾದರಿಗಳನ್ನು ಹೊರತು ಪಡಿಸಿದರೆ ಅಸ್ತಿಪಂಜರದ ಅಂಶಗಳು ಬೇರೆ ಬೇರೆ ವಯೋಮಾನದ ಮತ್ತು ಬೇರೆ ಬೇರೆ ವ್ಯಕ್ತಿಗಳನ್ನು ಗಣೆನೆಗೆ ತೆಗೆದುಕೊಂಡಲ್ಲಿ ಇಲ್ಲಿಯ ಉತ್ಖನನಗಳು ಬಹಳ ವ್ಯಾಪಕವಾಗಿವೆ.[][]

ಪೆನ್ನ್‌ಸಿಲ್ವಾನಿಯದ ಪಿಟ್ಸಬರ್ಗ್ ವಿಶ್ವವಿದ್ಯಾನಿಲಯದ ವಿಕಾಸ ಜೀವಶಾಸ್ತ್ರಜ್ಞ ಜಾಪ್ರೆಯೆ ಹೆಚ್. ಸ್ಕ್‌ವರ್ಟಜ್ ಒಂದೇ ಪ್ರಭೇದದು ಎಂದು ಹೇಳಲು ಆಗದಷ್ಟು ವೈವಿಧ್ಯಮಯವಾಗಿದೆ ಎಂದು ವಾದಿಸುತ್ತಾರೆ.[೨೯] ಡೊನಾಲ್ಡ್ ಜಾನ್‌ಸನ್ ವ್ಯಕ್ತಿಗಳು ಮತಾಚರಣೆಯ (ರಿಚುಯಲ್) ಹೂಳುವಿಕೆ ಮಿದುಳಿನ ಸಣ್ಣ ಗಾತ್ರದ (೪೫೦ ಘನ ಸೆಂಮೀ) ಮತ್ತು ಸೀಮಿತ ರಿಚುಯಲ್‌ಗಳ ಇರುವಿಕೆಯ ಹಿನ್ನೆಲೆಯಲ್ಲಿ ಅನುಮಾನಿಸುತ್ತಾರೆ.[೩೦]ಉಲ್ಲೇಖದ ಅಗತ್ಯವಿದೆ

ಹೋ. ಎರಕ್ಟಸ್‌ನೊಂದಿಗೆ ಹೋಲಿಕೆ

ಬದಲಾಯಿಸಿ

ಪ್ರಾಚೀನಮಾನವಶಾಸ್ತ್ರಜ್ಞ ಟಿಮ್ ಡಿ. ವೈಟ್ ಪ್ರಕಟಿಸಿದ ವಿವರಣೆಗಳ ಆಧಾರದ ಮೇಲೆ ಪಳಿಯುಳಿಕೆಗಳು ಪ್ರಾಚೀನ ಹೋಮೋ ಎರಕ್ಟಸ್‌ಗೆ ಸೇರಿದವು ಎಂದು ಅಭಿಪ್ರಾಯ ಪಡುತ್ತಾರೆ.[೨೧] ಮಾನವಶಾಸ್ತ್ರಜ್ಞ ಕ್ರಿಸ್ ಸ್ಟ್ರಿಂಗರ್ ಸಹ ಜಾರ್ಜಿಯಾದ ಡ್ಮನಿಸಿಯದ ಸುಮಾರು ೧.೮ ದಶಲಕ್ಷ ವರುಷ ಹಿಂದಿನ ಸಣ್ಣ ದೇಹದ ಹೋಮೋ ಎರಕ್ಟಸ್‌ನ್ನು ಹೋಲುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.[೧೭] ಪಳಿಯುಳಿಕೆಯು ಹೋಮೋ ಎರಕ್ಟಸ್ ಆಗಿರುವ ಸಾಧ್ಯತೆಯನ್ನು ಸುದ್ಧಿಗೋಷ್ಠಿಯಲ್ಲಿ ಬರ್ಗರ್ ತಿರಸ್ಕರಿಸಿದರು.[೨೬]

ದೇಹದ ಇರುಸುವಿಕೆಯ ಬಗೆಗಿನ ಊಹನ

ಬದಲಾಯಿಸಿ

ಸಾವಿನ ಸಮಯದ ಹತ್ತಿರ ವ್ಯಕ್ತಿಗಳನ್ನು ಗವಿಯ ಹತ್ತಿರ ಇರಿಸಿದ ಸೂಚನೆಗಳಿವೆ ಮತ್ತು ಈ ಊಹನವನ್ನು (ಹೈಪೋತೀಸಿಸ್) ಬೆಂಬಲಿಸಲು ಹೆಚ್ಚಿನ ಸಾಕ್ಷಿಗಳ ಅಗತ್ಯವಿದೆ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ತಂಡದ ಸದಸ್ಯನಾದ ವಿಸ್‌ಕೊನ್‌ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಮಾನವಶಾಸ್ತ್ರಜ್ಞ ಜಾನ್ ಡಿ. ಹಾಕ್ಸ್ ವೈಜ್ಞಾನಿಕ ಅಂಶವೆಂದರೆ ಅಲ್ಲಿ ದೊರೆತ ಎಲ್ಲಾ ಮೂಳೆಗಳೂ ಒಂದು ಗೂಬೆಯ ಹೊರತಾಗಿ, ಹೋಮಿನಿಡ್‌ನವು. ಅಲ್ಲಿ ಯಾವುದೇ ಬೇಟೆಯಾಡಿದ ಕುರುಹುಗಳಿಲ್ಲ ಮತ್ತು ಕೇವಲ ಹೋಮೋ ಪ್ರಬೇದವನ್ನು ಈ ರೀತಿ ಪೇರಿಸುವ ಯಾವ ಪರಭಕ್ಷಕವೂ ಇಲ್ಲ. ಮೂಳೆಗಳು ಎಲ್ಲಾ ಒಮ್ಮೆಲೇ ಪೇರಿಸಲಾಗಿಲ್ಲ. ಯಾವುದೇ ಕಲ್ಲು ಅಥವಾ ಗಷ್ಟು ಮೇಲ್ಮೈನಿಂದ ಗವಿಯೊಳಗೆ ಬಿದ್ದ ಪುರಾವೆಗಳಿಲ್ಲ ಮತ್ತು ನೀರು ಹರಿದು ಮೂಳೆಗಳನ್ನು ಸಾಗಿಸಿದ ಯಾವುದೇ ಪುರಾವೆ ಇಲ್ಲ.[೩೧] ಹೀಗಾಗಿ ಒಳ್ಳೆಯ ಊಹನವೆಂದರೆ ಈ ದೇಹಗಳನ್ನು ಆ ಪ್ರಭೇದದ ಇತರ ಜೀವಿಗಳು ಉದ್ಧೇಶ ಪೂರ್ವಕವಾಗಿ ಇಲ್ಲಿ ಇರಿಸಿದವು ಎನ್ನುತ್ತಾರೆ ಹಾಕ್ಸ್.[೩೨]

ಡಿರ್ಕ್ಸ್ ಮತ್ತು ಇತರರ ಪ್ರಕಾರ "ಟರ್ಶಿಯರಿ ಮತ್ತು ಮೀಸೊಜೋಯಿಕ್‌ನ ಕಶೇರುಕ ಪಳಿಯುಳಿಕೆ ನಿವೇಶನಗಳಲ್ಲಿ (…) ಒಂದೇ ರೀತಿಯ ಸಂಗ್ರಹವು ಮಹಾವಿನಾಶದ ಘಟನೆಯೊಂದಿಗೆ ಹೊಂದಿಕೊಂಡಿದೆ (…) ಮತ್ತು ಹೋಮೋ ಸೆಪಿಯನ್ಸ್ಗಳಲ್ಲದ ಹೋಮಿನಿನ್‌ಗಳ ಸಂಗ್ರಹದಲ್ಲಿ, ಮಹಾನಾಶದ ಬಗೆಗಿನ ಸಾಕ್ಷಿಗಳು ಕಂಡುಬರದಿದ್ದಲ್ಲಿ, ಒಂದೇ ರೀತಿಯ ಸಂಗ್ರಹವು ಉದ್ದೇಶ ಪೂರ್ವಕ ಸಾಂಸ್ಕೃತಿಕವಾಗಿ ಇರುಸುವಿಕೆ ಅಥವಾ ಹೂಳುವಿಕೆಗೆ ಸಂಬಂಧಿಸಿದೆ." ದೇಹಗಳನ್ನು ಗವಿಯಲ್ಲಿ ಸಂಗ್ರಹವಾಗಲು ಯಾವುದೇ ಮಹಾನಾಶ ಕಾರಣವಲ್ಲ ಎನ್ನಲಾಗಿದ್ದು ಮತ್ತು ದೇಹಗಳನ್ನು ಉದ್ಧೇಶ ಪೂರ್ವಕವಾಗಿ ಇರಿಸಲಾಗಿದೆ ಎನ್ನಲಾಗಿದೆ.[೩೩]

ಸ್ಟೋನಿ ಬ್ರೂಕ್‌ ವಿಶ್ವವಿದ್ಯಾನಿಲಯದ ಅಂಗರಚನಾಶಾಸ್ತ್ರ ವಿಜ್ಞಾನಿ ವಿಲಿಯಂ ಜಂಗರ್ಸ್ ಹೋ. ನಲೇದಿ ಹೋಮೋ ಪ್ರಭೇದಕ್ಕೆ ಸೇರಿದ್ದು ಎಂದು ಮತ್ತು ದೇಹಗಳನ್ನು ಉದ್ಧೇಶ ಪೂರ್ವಕವಾಗಿ ಇರಿಸಿದ್ದು ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಇದನ್ನು “ಸಂಕೀರ್ಣ ಸಾಮಾಜಿಕ ಸಂಘಟನೆ ಮತ್ತು ಸಾಂಕೇತಿಕ ವರ್ತನೆ” ಎಂದು ವಾದಿಸುವ ಬಗೆಗೆ ಎಚ್ಚರಿಸುತ್ತಾರೆ. “ತಮ್ಮದೇ ಪ್ರಭೇದಕ್ಕೆ ಸೇರಿದ ಜೀವಿಯು ತಮ್ಮ ಸುತ್ತ ಕೊಳೆಯುವದಕ್ಕಿಂತ ರಂದ್ರ ಹಾಕುವುದು ಲೇಸು” ಎಂದು ಅವರು ಸೂಚಿಸುತ್ತಾರೆ. ಹಿಂದೆ ಮೂಳೆಗಳಿರುವ ಕೋಣೆಗೆ ಹಿಂದೆ ಸರಳ ದಾರಿಯೊಂದಿತ್ತು ಎಂದು ಊಹೆಯೊಂದುನ್ನು ಅವರು ಮುಂದಿಡುತ್ತಾರೆ.[೩೪]

ಮಿಸೂರಿ ವಿಶ್ವವಿದ್ಯಾನಿಲಯದ ರೋಗಶಾಸ್ತ್ರ ಮತ್ತು ಅಂಗರಚನಾಶಾಸ್ತ್ರಗಳ ಪ್ರೊಪೆಸರ್ ಕರೋಲ್ ವಾರ್ಡ್ ಉದ್ಧೇಶ ಪೂರ್ವಕ ಹೂಳುವಿಕೆಯ ಬಗೆಗೆ ಅನಾಸಕ್ತರಾಗಿದ್ದರು ಮತ್ತು ಅವರು ಕೇಳುತ್ತಾರೆ “ಗವಿಯೊಳಗೆ ಹೋಗುವುದು ಅಷ್ಟು ಕಷ್ಟವೇ ಆಗಿದ್ದಲ್ಲಿ ನಿಮ್ಮ ಅಜ್ಜಿಯನ್ನು ತೆಗೆದುಕೊಂಡು ಉದ್ದನೆಯ ಕತ್ತಲೆಯ ಗವಿಗೆ ಹೇಗೆ ಹೋಗುತ್ತೀರ?”[೩೫]

ಬರ್ಗರ್ ಪ್ರಕಾರ ತೊಡಕಾದ ಗವಿ ವ್ಯವಸ್ಥೆಯಲ್ಲಿ ದೇಹಗಳನ್ನು ಇರಿಸಬೇಕಾದರೆ ಪೂರ್ಣ ಕತ್ತಲೆಯಲ್ಲಿ ಪ್ರಭೇದದ ಸದಸ್ಯರು ಒಳಹೋಗಲು ಮತ್ತು ಹೊರಬರಲು ದಾರಿಕಂಡು ಕೊಳ್ಳಬೇಕಿತ್ತು. ಇದಕ್ಕೆ ಪಂಜು ಅಥವಾ ಬೆಂಕಿಯನ್ನು ನಡುನಡುವೆ ಬಳಸ ಬೇಕಾಗುತ್ತದೆ ಎಂಬ ಊಹೆಯನ್ನು ಬರ್ಗರ್ ಮಾಡುತ್ತಾರೆ.[೧೦][೩೬] ಆರೋರೆ ವಾಲ್‌ ತಂಡವು ಉದ್ಧೇಶ ಪೂರ್ವಕವಾಗಿ ಇರಿಸುವಿಕೆಯ ಬಗೆಗೆ ಒಪ್ಪಿಕೊಳ್ಳ ಬಹುದಾದ ಊಹನವನ್ನು ಇನ್ನೂ ಇರಿಸಬೇಕಿದೆ ಎನ್ನುತ್ತಾರೆ.[೨೪][೩೭] ಮಿನ್ನೆಸೊಟ ವಿಶ್ವವಿದ್ಯಾನಿಲಯದ ಮಾರ್ಥ ಟಪ್ಪೆನ್ ಪರಭಕ್ಷಗಳಿಂದ ಬಚ್ಚಿಟ್ಟುಕೊಳ್ಳುವುದು ಒಂದು ಸಾಧ್ಯತೆ ಎನ್ನುತ್ತಾರೆ.[೨೪]

ಆಚರಣೆ ಊಹನ

ಬದಲಾಯಿಸಿ

ಬರ್ಗರ್ ಮತ್ತು ಇತರರು “ಈ ವ್ಯಕ್ತಿಗಳು ಆಚರಣೆ (ರಿಚುಯಲ್) ವರ್ತನೆ ಮಾಡಬಲ್ಲವರಾಗಿದ್ದರು” ಎನ್ನುತ್ತಾರೆ ಮತ್ತು ದೇಹಗಳನ್ನು ಗವಿಯಲ್ಲಿರಿಸುವುದು ರಿಚುಯಲ್ ವರ್ತನೆ ಎಂತಲೂ ಹಾಗೂ ಸಂಕೇತದಲ್ಲಿ ಚಿಂತಿಸುವುದು ತಿಳಿದಿತ್ತೆಂತಲೂ ಊಹಿಸುತ್ತಾರೆ.[೩೮] “ರಿಚುಯಲ್” ಎಂದರ ಇಲ್ಲಿ ಉದ್ಧೇಶ ಪೂರ್ವಕ ಹಾಗೂ ಮತ್ತೆ ಮತ್ತೆ ಮಾಡುವ ಆಚರಣೆ (ದೇಹಗಳನ್ನು ಗವಿಯಲ್ಲಿ ಇರಿಸುವುದು) ಮತ್ತು ಇದು ಯಾವುದೇ ರೀತಿಯ ಮತಾಚರಣೆ ಸೂಚಿಸುವುದಿಲ್ಲ.[೨೩] ರಿಚುಯಲ್ ವರ್ತನೆ ಹೋಮೋ ಸೆಪೆಯನ್ಸ್ ಮತ್ತು ಹೋಮೋ ನಿಯಾಂಡರ್ತಲೆನ್ಸಿಸ್‌ಗಳಲ್ಲಿ ಮಾತ್ರ ಸಾಮಾನ್ಯವಾಗಿ ಕಂಡುಬರುತ್ತದೆ ಎಂದು ಭಾವಿಸಲಾಗಿದೆ.[೧೦] ತೀರ ಪ್ರಾಚೀನ ಖಚಿತವಾದ ನಿಯಾಂಡರ್ತಲ್ ಹೂಳುವಿಕೆ ೧,೦೦,೦೦೦ ವರುಷಗಳಷ್ಟು ಪ್ರಾಚೀನ.[೩೧]

ರಿಕ್ ಪಾಟ್ಸ್ ಹೀಗೆ ಗುರುತಿಸುತ್ತಾರೆ:

ಪರಿಕರಗಳಂತಹ ಪದಾರ್ಥ ಸಂಸ್ಕೃತಿಯ ಯಾವುದೇ ಪುರಾವೆಗಳಿಲ್ಲ ಅಥವಾ ಹೂಳುವಿಕೆಯೊಂದಿಗೆ ಯಾವುದೇ ರೀತಿಯ ಸಾಂಕೇತಿಕ ಆಚರಣೆ ಇಲ್ಲ. … ಈ ದೇಹಗಳನ್ನು ಸುಮ್ಮನೇ ರಂಧ್ರದ ಮೂಲಕ ಬಿಸುಟಲಾಗಿದೆ.[೨೧]

ಸಂಶೋಧನಾ ಲೇಖನದಲ್ಲಿ ಡಿರ್ಕ್ಸ್ ಮತ್ತು ಇತರರು (೨೦೧೫) ಹೇಳುತ್ತಾರೆ:

ಇಂದು ತಿಳಿದ ಪ್ರತಿ ಸಾಂಸ್ಕೃತಿಕ ಸಂಗ್ರಹವನ್ನೂ, ಹೋಮೋ ನಲೇದಿಯಲ್ಲಂತಲ್ಲದೆ, ಆಧುನಿಕ ಮಾನವನ ಮೆದುಳಿನ ಗಾತ್ರದ ವ್ಯಾಪ್ತಿಯೊಳಗಿನ ಹೋಮೋ ಪ್ರಭೇದ ಕಾರಣವೆಂದು ಹೇಳಲಾಗಿದ್ದು ಪ್ರತಿ ಹೋಮಿನಿನ್‌ಗಳ ಈ ಘಟನೆಯು ಮಧ್ಯಮ ಅಥವಾ ದೊಡ್ಡ ಗಾತ್ರದ ಹೋಮಿನಿನ್‌ ಅಲ್ಲದ ಪ್ರಾಣಿಗಳನ್ನೂ ಸಹ ಇದರೊಂದಿಗೆ ನೋಡಬಹುದು.[೩೩]

ವಿಲಿಯಂ ಜಂಗರ್ಸ್ ಈ ಊಹನದ ಬಗೆಗೆ ಇಂತಹುದೇ ಕಾಳಜಿಯನ್ನು ತೋರಿಸಿದ್ದಾರೆ.[೩೪] ವಿಜ್ಞಾನ ಬರಹಗಾರ ಮೈಕಲ್ ಶೆರ್ಮರ್ ಜನಾಂಗನಾಶ, ಯುದ್ಧ ಮತ್ತು ಬಲಿಯನ್ನು ಸಹ ಸಾವಿಗೆ ಕಾರಣವೆಂದಿದ್ದಾರೆ.[೩೯] ಆದರೆ ಪಳಿಯುಳಿಕೆಗಳನ್ನು ವರ್ಗೀಕರಿಸಿದ ಮತ್ತು ವಿಶ್ಲೇಷಿಸಿದ ವಿಜ್ಞಾನಿಗಳಲ್ಲಿ ಒಬ್ಬರಾದ ಜಾನ್ ಡಿ. ಹಾಕ್ಸ್ ಈ ದೇಹಗಳಲ್ಲಿ ಹಿಂಸೆಯ ಸಾವಿನ ಗುರುತುಗಳಿಲ್ಲ ಎಂದು ಟಿಪ್ಪಣಿ ಮಾಡಿದ್ದಾರೆ.[೪೦]

ಪದ್ಧತಿಗಳು

ಬದಲಾಯಿಸಿ

ಪ್ರಾಗ್ಜೀವಶಾಸ್ತ್ರಜ್ಞರಾದ ಟಿಮ್ ವೈಟ್ ಮತ್ತು ಕ್ರಿಸ್ಟೋಫ್ ಜೊಲ್ಲಿಕೊಫರ್ ಪಳಿಯುಳಿಕೆಗಳನ್ನು ಹಾಳಗುವುದನ್ನು ತಡೆಯಲು ಮತ್ತು ಪ್ರಚಾರ ಪಡೆಯಲೋಸುಗ ಬಹಳ ವೇಗವಾಗಿ ಉತ್ಖನನ ಮಾಡಲಾಯಿತು ಮತ್ತು ಕಂಡುಹಿಡಿದುದನ್ನು ಸಂಶೋಧನೆಯ ಪ್ರಕಟಣೆಯ ಮುಂಚೆ ವಿವರವಾದ ಪರಿಶೀಲನೆ ಮತ್ತು ಹಿರಿಯರಿಂದ ಪುನರ್ವಿಮರ್ಶೆ ಸರಿಯಾಗಿ ಆಗಿಲ್ಲ ಎನ್ನುತ್ತಾರೆ.[೪೧] ಲೀ ಬರ್ಗರ್ ಈ ಅಪಾಧನೆಯನ್ನು ನಿರಾಕರಿಸುತ್ತಾರೆ ಮತ್ತು ಉತ್ಖನನದ ಮುಕ್ತತೆ, ವಿಶ್ಲೇಷಣೆ, ಪ್ರಕಟನೆ ಹಾಗೂ ಪಳಿಯುಳಿಕೆಗಳ ಲಭ್ಯತೆಯ ಬಗೆಗೆ ಗಮನಸೆಳೆಯುತ್ತಾ ಯುಕ್ತ ಪದ್ಧತಿಗಳನ್ನು ಬಳಸಲಾಯಿತು ಎನ್ನುತ್ತಾರೆ.[೪೧][೪೨]

ಉಲ್ಲೇಖಗಳು

ಬದಲಾಯಿಸಿ
  1. ಇಂಗ್ಲೀಶ್ ವಿಕಿಪೀಡಿಯದ “Homo naledi” ಪುಟದ ಭಾಗಶ ಅನುವಾದ
  2. Tucker, Steven (13 November 2013). "Rising Star Expedition". Speleological Exploration Club. Retrieved 8 September 2015.
  3. ೩.೦ ೩.೧ Yong, Ed (10 September 2015). "6 Tiny Cavers, 15 Odd Skeletons, and 1 Amazing New Species of Ancient Human". The Atlantic. Retrieved 13 September 2015.
  4. ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ ೪.೮ Berger, Lee R.; et al. (10 September 2015). "Homo naledi, a new species of the genus Homo from the Dinaledi Chamber, South Africa". eLife. 4. doi:10.7554/eLife.09560. Retrieved 10 September 2015. Lay summary.
  5. Howley, Andrew (6 November 2013). "Rising Star Expedition: Prehistory in the Making". National Geographic Society. Retrieved 8 September 2015.
  6. Dirks, Paul HGM; Berger, Lee R.; Roberts, Eric M.; Kramers, Jan D.; Hawks, John; Randolph-Quinney, Patrick S.; Elliott, Marina; Musiba, Charles M.; Churchill, Steven E. (2015-09-10). "Geological and taphonomic context for the new hominin species Homo naledi from the Dinaledi Chamber, South Africa". eLife. 4: e09561. doi:10.7554/eLife.09561. ISSN 2050-084X. PMC 4559842. PMID 26354289.
  7. ೭.೦ ೭.೧ Greenfieldboyce, Nell (10 September 2015). "South African Cave Yields Strange Bones Of Early Human-Like Species". NPR. Retrieved 10 September 2015.
  8. Alford, Justine (10 September 2015). "New Species Of Human Discovered In South Africa". iflscience.com.
  9. Shreeve, Jamie (10 September 2015). "New Human Ancestor Elicits Awe—and Many Questions". National Geographic Society. Retrieved 17 September 2015
  10. ೧೦.೦ ೧೦.೧ ೧೦.೨ ೧೦.೩ ೧೦.೪ ೧೦.೫ Shreeve, Jamie (10 September 2015). "This Face Changes the Human Story. But How?". National Geographic News. Retrieved 10 September 2015.
  11. Feltman, Rachel (10 September 2015). "Meet the six female 'underground astronauts' who recovered our newest relative". Washington Post. Retrieved 10 September 2015.
  12. ೧೨.೦ ೧೨.೧ ೧೨.೨ Berger et al. (2015): "If the fossils prove to be substantially older than 2 million years, H. naledi would be the earliest example of our genus that is more than a single isolated fragment. [...] A date younger than 1 million years ago would demonstrate the coexistence of multiple Homo morphs in Africa, including this small-brained form, into the later periods of human evolution."
  13. Hooper, Rowan (10 September 2015). "Homo naledi: Unanswered questions about the newest human species". New Scientist. Retrieved 2015-10-08.
  14. Harcourt-Smith, W. E. H.; Throckmorton, Z.; Congdon, K. A.; Zipfel, B.; Deane, A. S.; Drapeau, M. S. M.; Churchill, S. E.; Berger, L. R.; DeSilva, J. M. (2015). "The foot of Homo naledi". Nature Communications. 6: 8432. doi:10.1038/ncomms9432.
  15. ೧೫.೦ ೧೫.೧ ೧೫.೨ ೧೫.೩ ೧೫.೪ Wong, Kate (10 September 2015). "Mysterious New Human Species Emerges from Heap of Fossils". Scientific American. Retrieved 10 September 2015.
  16. Kivell, Tracy L.; Deane, Andrew S.; Tocheri, Matthew W.; Orr, Caley M.; Schmid, Peter; Hawks, John; Berger, Lee R.; Churchill, Steven E. (2015). "The hand of Homo naledi". Nature Communications. 6: 8431. doi:10.1038/ncomms9431
  17. ೧೭.೦ ೧೭.೧ Stringer, Chris (10 September 2015). "The many mysteries of Homo naledi". eLife. 4: e10627. doi:10.7554/eLife.10627. ISSN 2050-084X. PMC 4559885. PMID 26354290. Retrieved 15 September 2015.
  18. Hogenboom, Melissa (13 October 2015). "Human Evolution Was Shaped By Interbreeding". BBC News. Retrieved 2015-10-13.
  19. Farber, Tanya (27 September 2015). "It'll take ages to date Homo naledi, say scientists". The Times. South Africa. Retrieved 2015-10-21.
  20. ೨೦.೦ ೨೦.೧ Sample, Ian (10 September 2015). "Homo naledi: New species of ancient human discovered, claim scientists". The Guardian. Retrieved 10 September 2015.
  21. ೨೧.೦ ೨೧.೧ ೨೧.೨ ೨೧.೩ ೨೧.೪ Handwerk, Brian (11 September 2015). "What Makes a Fossil a Member of the Human Family Tree?". Smithsonian (magazine). Retrieved 14 September 2015.
  22. ೨೨.೦ ೨೨.೧ Yong, Ed (14 September 2015). "Why Don't We Know The Age of the New Ancient Human?". The Atlantic. Retrieved 14 September 2015.
  23. ೨೩.೦ ೨೩.೧ Wilford, John Noble (10 September 2015). "New Species in Human Lineage Is Found in a South African Cave". New York Times. ISSN 0362-4331. Retrieved 10 September 2015.
  24. ೨೪.೦ ೨೪.೧ ೨೪.೨ Wong, Kate. "Debate Erupts over Strange New Human Species". Scientific American. Retrieved 2016-04-09.
  25. "The Latest on Homo naledi." John Hawks. American Scientist. July–August 2016, Volume 104, Number 4, Page: 198; DOI: 10.1511/2016.121.198
  26. ೨೬.೦ ೨೬.೧ ೨೬.೨ AP News (10 September 2015). "Bones of Homo naledi, new human relative, found in South African cave". CBC News. Retrieved 17 September 2015.
  27. "Homo naledi may be two million years old (give or take)". The Conversation. Retrieved 2015-11-30.
  28. Thackeray, J. Francis (2015). "Estimating the age and affinities of Homo naledi". South African Journal of Science. 111 (11/12). doi:10.17159/sajs.2015/a0124
  29. Callaway, Ewen (17 September 2015). "Crowdsourcing digs up an early human species". Nature. 525 (7569): 297–298. doi:10.1038/nature.2015.18305. Retrieved 22 September 2015.
  30. https://courses.edx.org/courses/course-v1:ASUx+ASM246+1T2016/courseware/a2647ad0bf864c959b1f1b133c77c7e8/8def47e608bf4c8dabf83f664a069b33/[dead link]
  31. ೩೧.೦ ೩೧.೧ Drake, Nadia (15 September 2015). "Mystery Lingers Over Ritual Behavior of New Human Ancestor". National Geographic News. Retrieved 16 September 2015.
  32. Staff (10 September 2015). "Dawn of Humanity". PBS. Retrieved 14 September 2015. Documentary time mark: 1h 40 min
  33. ೩೩.೦ ೩೩.೧ Dirks, Paul H. G. M.; et al. (10 September 2015). "Geological and taphonomic context for the new hominin species Homo naledi from the Dinaledi Chamber, South Africa". eLife. 4: e09561. doi:10.7554/eLife.09561. ISSN 2050-084X. PMC 4559842. PMID 26354289. Retrieved 12 September 2015.
  34. ೩೪.೦ ೩೪.೧ Bascomb, Bobby (10 September 2015). "Archaeology's Disputed Genius". PBS. Retrieved 22 September 2015.
  35. Bascomb, Bobby (10 September 2015). "New Homo Species Found". The Scientist. Retrieved 22 September 2015.
  36. McKensie, David (10 September 2015). "Homo naledi: Scientists find ancient human relative" (Video (02:43)). CNN News. Retrieved 13 September 2015.
  37. Val, Aurore (31 March 2016). "Deliberate body disposal by hominins in the Dinaledi Chamber, Cradle of Humankind, South Africa?". Journal of Human Evolution. doi:10.1016/j.jhevol.2016.02.004. Retrieved 2016-04-15.
  38. Ghosh, Pallab (10 September 2015). "New human-like species discovered in S Africa". BBC News. Retrieved 2015-09-10.
  39. "Did This Extinct Human Species Commit Homicide?". Scientific American. Retrieved 2016-01-01.
  40. Hawks, John. "Michael Shermer: Murdering the facts about Homo Naledi?". john hawks weblog. Retrieved 2016-01-02.
  41. ೪೧.೦ ೪೧.೧ editor, Robin McKie Observer science. "Scientist who found new human species accused of playing fast and loose with the truth". the Guardian. Retrieved 2015-10-25.
  42. "Archaeology's Disputed Genius — NOVA Next | PBS". NOVA Next. Retrieved 2015-10-25.


|