ಹೊನೊಲುಲು
ಹೊನೊಲುಲು (English pronunciation: /hɒnɵˈluːluː/) ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯವಾದ ಹವಾಯಿಯ ರಾಜಧಾನಿ. ಈ ನಗರವು ಅತಿ-ಜನನಿಬಿಡ ಜನಗಣತಿ-ಗೊತ್ತುಪಡಿಸಿದ ಸ್ಥಳ (ಸಿಡಿಪಿ) ಆಗಿದೆ.
Honolulu, Hawaii | |
---|---|
Nickname(s): Crossroads of the Pacific, Sheltered Bay | |
Country | ಅಮೇರಿಕ ಸಂಯುಕ್ತ ಸಂಸ್ಥಾನ |
State | Hawaii |
County | Honolulu |
Area | |
• CDP | ೧೦೫ sq mi (೨೭೨.೧ km2) |
• Land | ೮೫.೭ sq mi (೨೨೨.೦ km2) |
• Water | ೧೯.೩ sq mi (೫೦.೧ km2) |
Elevation | ೦ ft (Sea Level ೦ m) |
Population (2010) | |
• CDP | ೩,೭೪,೭೦೧ (೫೦th) |
• Estimate (July 2006[೧]) | ೩,೭೭,೩೫೭ |
• Metro | ೯,೦೯,೮೬೩ |
Time zone | UTC-10 (Hawaii-Aleutian Standard Time) |
• Summer (DST) | UTC-10 |
Zip Code | 96801-96825 |
Area code | 808 |
FIPS code | 15-17000 |
GNIS feature ID | 0366212 |
ಹೊನೊಲುಲು ಎಂಬುದು ಒವಾಹು ದ್ವೀಪದ ಆಗ್ನೇಯ ಸಾಗರತೀರದಲ್ಲಿರುವ ನಗರವಲಯವನ್ನು ಉಲ್ಲೇಖಿಸಿದರೂ ಸಹ, ನಗರ ಮತ್ತು ಕೌಂಟಿ (ದ್ವೀಪ ಪ್ರದೇಶಕ್ಕೆ ಸಂಬಂಧಿಸಿದ ಸಣ್ಣ ಪ್ರದೇಶ)ಪ್ರದೇಶಗಳನ್ನು ಒಟ್ಟುಗೂಡಿಸಿ, ಹೊನೊಲುಲು ನಗರ ಮತ್ತು ಕೌಂಟಿ ಎನ್ನಲಾಗಿದೆ. ನಗರ ಮತ್ತು ಕೌಂಟಿಯನ್ನು ಇಡೀ ದ್ವೀಪವನ್ನಾಗಿಯೇ ಉಲ್ಲೇಖಿಸಲಾಗಿದೆ. ಹೊನೊಲುಲು ನಗರ ಮತ್ತು ಕೌಂಟಿ ಹವಾಯಿಯ ಏಕೈಕ ಏಕೀಕೃತ ನಗರವಾಗಿದೆ. ಹವಾಯಿಯಲ್ಲಿನ ಉಳಿದ ಎಲ್ಲ ಸ್ಥಳೀಯ ಸರ್ಕಾರ ಘಟಕಗಳ ಆಡಳಿತವನ್ನು ಕೌಂಟಿ ಮಟ್ಟದಲ್ಲಿ ನಡೆಸಲಾಗುತ್ತದೆ. 2000 ಜನಗಣತಿಯ ಪ್ರಕಾರ ಸಿಡಿಪಿಯ ಜನಸಂಖ್ಯೆ 371,657ರಷ್ಟಿತ್ತು. ನಗರ ಮತ್ತು ಕೌಂಟಿಯ ಜನಸಂಖ್ಯೆಯು 909.863ರಷ್ಟಿತ್ತು. ಇದರಿಂದಾಗಿ ನಗರವು ಅಮೆರಿಕಾ ಸಂಯುಕ್ತ ಸಂಸ್ಥಾನದ 57ನೆಯ ಅತಿದೊಡ್ಡ ಮಹಾನಗರ ವಲಯವೆನಿಸಿತು. ರಾಜ್ಯದ ಜನಸಂಖ್ಯೆಗೆ ತುಲನಾತ್ಮಕವಾಗಿ, ಹೊನೊಲುಲು ಅತಿಹೆಚ್ಚು ಜನನಿಬಿಡ ರಾಜ್ಯ ರಾಜಧಾನಿಯಾಗಿದೆ. ಹವಾಯಿಯನ್ ಭಾಷೆಯಲ್ಲಿ, ಹೊನೊಲುಲು ಎಂದರೆ ಕಡಲತೀರ ಆಶ್ರಿತ ಅಥವಾ ಆಶ್ರಯದ ಸ್ಥಳ.
ಇತಿಹಾಸ
ಬದಲಾಯಿಸಿಈ sectionಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (May 2009) |
ಮೂಲ ಇತಿಹಾಸ ಮತ್ತು ಹಸ್ತಕೃತಿಗಳು, ಪಾಲಿನೇಷ್ಯನ್ ಮೂಲದ ವಲಸೆಗಾರರು ಈ ದ್ವೀಪಸಮೂಹಕ್ಕೆ ಬಂದು ವಸಾಹತು ಸ್ಥಾಪಿಸಿದುದರ ಮೊದಲ ಸಾಕ್ಷಿಯಾಗಿವೆ. ಇಂದಿನ ಹೊನೊಲುಲು ಇರುವ ಸ್ಥಳದಲ್ಲಿಯೇ 12ನೆಯ ಶತಮಾನದ ವಸಾಹತು ಇತ್ತು ಎಂಬುದಕ್ಕೆ ಇದು ಸಾಕ್ಷ್ಯ ಒದಗಿಸುತ್ತದೆ. [ಸೂಕ್ತ ಉಲ್ಲೇಖನ ಬೇಕು] ನುವಾನು ಪಾಲಿʻಯಲ್ಲಿ ನಡೆದ ನುವಾನು ಯುದ್ಧʻದಲ್ಲಿ ಮೊದಲ ಕಮೆಹಮೆಹ ದೊರೆಯು ಒವಾಹುʻ ರಾಜ್ಯವನ್ನು ಗೆದ್ದ ನಂತರ, ಅವನು 1894ರಲ್ಲಿ ತನ್ನ ಅರಮನೆಯನ್ನು ಹವಾಯಿ ದ್ವೀಪʻದಿಂದ ವೈಕಿಕೀಗೆ ಸ್ಥಳಾಂತರಿಸಿದ. ʻ 1809ರಲ್ಲಿ ದೊರೆಯ ಅರಮನೆಯು ಇಂದಿನ ಹೊನೊಲುಲು ವಾಣಿಜ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡಿತು. [ಸೂಕ್ತ ಉಲ್ಲೇಖನ ಬೇಕು]ಇಂದಿನ ಹೊನೊಲುಲು ಬಂದರು ಎನ್ನಲಾದ ಸ್ಥಳಕ್ಕೆ 1795ರಲ್ಲಿ ತಲುಪಿದ ಗ್ರೇಟ್ ಬ್ರಿಟನ್‌ನ ಕ್ಯಾಪ್ಟನ್ ವಿಲಿಯಮ್ ಬ್ರೌನ್ ಮೊಟ್ಟಮೊದಲ ವಿದೇಶಿ ವ್ಯಕ್ತಿಯೆನಿಸಿಕೊಂಡ. [ಸೂಕ್ತ ಉಲ್ಲೇಖನ ಬೇಕು] ಇದಾದ ನಂತರ ಹಲವು ವಿದೇಶಿ ಹಡಗುಗಳು ಈ ಬಂದರು ತಲುಪಿದವು. ಉತ್ತರ ಅಮೆರಿಕಾ ಮತ್ತು ಏಷ್ಯಾ ಖಂಡಗಳ ನಡುವೆ ಓಡಾಡುತ್ತಿದ್ದ ಹಲವು ವಾಣಿಜ್ಯೋದ್ದಿಮೆಗಳ ಹಡಗುಗಳಿಗೆ ಹೊನೊಲುಲು ಬಂದರು ಕೇಂದ್ರಬಿಂದುವಾಗಿತ್ತು. [ಸೂಕ್ತ ಉಲ್ಲೇಖನ ಬೇಕು]
1845ರಲ್ಲಿ, ಮೂರನೆಯ ಕಮೆಹಮೆಹ ದೊರೆಯು ಹವಾಯಿಯನ್ ಸಾಮ್ರಾಜ್ಯದ ರಾಜಧಾನಿಯನ್ನು ಮಾವುಯಿ ದ್ವೀಪದಲ್ಲಿನ ಲಹಯಿನಾದಿಂದ ಹೊನೊಲುಲುಗೆ ಸ್ಥಳಾಂತರಿಸಿದ. ಆತ ಹಾಗೂ ಆತನ ನಂತರ ಆಳಿದ ದೊರೆಗಳು ಹೊನೊಲುಲುವನ್ನು ಆಧುನಿಕ ರಾಜಧಾನಿಯನ್ನಾಗಿಸಿದರು. [ಸೂಕ್ತ ಉಲ್ಲೇಖನ ಬೇಕು] ಸೇಂಟ್ ಆಂಡ್ರ್ಯೂ ಕತೀಡ್ರಲ್, ʻಇಯೊಲಾನಿ ಅರಮನೆ ಹಾಗೂ ಅಲಿ ಇಯೊಲನಿ ಹೇಲ್ʻನಂತಹ ಭವ್ಯ ಕಟ್ಟಡಗಳನ್ನು ನಿರ್ಮಿಸಿದರು. ಇದೇ ವೇಳೆ, ಹೊನೊಲುಲು ಈ ದ್ವೀಪಗಳ ವಾಣಿಜ್ಯ ಕೇಂದ್ರವಾಯಿತು. ಅಮೆರಿಕನ್ ಧರ್ಮಪ್ರಚಾರಕರ ವಂಶದದವರು ಹೊನೊಲುಲು ವಾಣಿಜ್ಯ ಪ್ರದೇಶದಲ್ಲಿ ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿದರು. [ಸೂಕ್ತ ಉಲ್ಲೇಖನ ಬೇಕು]
ಹತ್ತೊಂಬತ್ತನೆಯ ಶತಮಾನದ ಅಪರಾರ್ಧ ಹಾಗೂ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿನ ಪ್ರಕ್ಷುಬ್ಧ ಇತಿಹಾಸವಿತ್ತು. 1893ರಲ್ಲಿ ಹವಾಯಿ ರಾಜಪ್ರಭುತ್ವದ ಎತ್ತಂಗಡಿ, 1898ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಿಂದ ಹವಾಯಿ ʻ ದ್ವೀಪಗಳ ಸ್ವಾಧೀನ, 1900ರಲ್ಲಿ ಭಾರೀ ಬೆಂಕಿ ದುರಂತ, 1941ರಲ್ಲಿ ಜಪಾನ್‌ನಿಂದ ಪರ್ಲ್ ಹಾರ್ಬರ್ ಮೇಲೆ ದಾಳಿ - ಇಷ್ಟೆಲ್ಲಾ ನಡೆದರೂ, ಹೊನೊಲುಲು ಹವಾಯಿ ದ್ವೀಪಗಳ ರಾಜಧಾನಿ, ಅತಿದೊಡ್ಡ ನಗರ, ಪ್ರಮುಖ ವಿಮಾನ ನಿಲ್ದಾಣ ಹಾಗೂ ಬಂದರಾಗಿ ದೃಢವಾಗಿ ಉಳಿದುಕೊಂಡಿತು. [ಸೂಕ್ತ ಉಲ್ಲೇಖನ ಬೇಕು] ರಾಜ್ಯ ಎಂಬ ಮನ್ನಣೆ, ನಂತರದ ಆರ್ಥಿಕ ಮತ್ತು ಪ್ರವಾಸೋದ್ಯಮದ ಬೆಳವಣಿಗೆಯಿಂದಾಗಿ ಹೊನೊಲುಲು ಮತ್ತು ಹವಾಯಿಗೆ ತೀವ್ರ ಆರ್ಥಿಕ ಅಭಿವೃದ್ದಿ ದೊರಕಿಸಿತು. ʻ ಆಧುನಿಕ ವಿಮಾನಯಾನವು ಹಲವು ಸಾವಿರ ಜನರನ್ನು ಇಲ್ಲಿಗೆ ಕರೆತಂದದ್ದುಂಟು. 2007ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಹವಾಯಿ ದ್ವೀಪಗಳಿಗೆ ಪ್ರತಿ ವರ್ಷ 7.6 ದಶಲಕ್ಷ ಪ್ರವಾಸಿಗರು ಭೇಟಿ ನೀಡಿದ್ದುಂಟು.[೨] ಇವರಲ್ಲಿ, 2007ರಲ್ಲಿ ಸುಮಾರು9 62.3%ರಷ್ಟು ಪ್ರವಾಸಿಗರು ಹೊನೊಲುಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯವನ್ನು ಪ್ರವೇಶಿಸಿದರು. ಇಂದು ಹೊನೊಲುಲು ಹಲವು ಗಗನಚುಂಬಿ ಕಟ್ಟಡಗಳುಳ್ಳ ಆಧುನಿಕ ನಗರವಾಗಿದೆ. ವೈಕಿಕಿ ಹವಾಯಿʻ ಪ್ರವಾಸೋದ್ಯಮದ ಕೇಂದ್ರಬಿಂದುವಾಗಿದ್ದು, ಸಾವಿರಾರು ಹೋಟೆಲ್ ಕೋಣೆಗಳಿವೆ. 2009ರಲ್ಲಿ, ಯುನೈಟೆಡ್ ಕಿಂಗ್ಡಮ್‌ನ ಸಲಹಾ ಸಂಸ್ಥೆ ಮರ್ಸರ್ 'ನೌಕರರನ್ನು ಅಂತಾರಾಷ್ಟ್ರೀಯ ಮಟ್ಟದ ನಿಗದಿತ ಕಾರ್ಯಗಳಿಗೆ ನೇಮಕ ಮಾಡಲು ಸರ್ಕಾರಗಳಿಗೆ ಮತ್ತು ಪ್ರಮುಖ ಕಂಪೆನಿಗಳಿಗೆ ಸಹಾಯ ಮಾಡಲು ನಿರ್ವಹಿಸಿದ' ಮೌಲ್ಯಮಾಪನವೊಂದರಲ್ಲಿ, ವಿಶ್ವದಾದ್ಯಂತ ಜೀವನ ಗುಣಮಟ್ಟದ ವಿಚಾರದಲ್ಲಿ ಹೊನೊಲುಲುವಿಗೆ 29ನೆಯ ಸ್ಥಾನ ನೀಡಿದೆ. ಈ ಸಮೀಕ್ಷೆಯು ರಾಜಕೀಯ ಸ್ಥಿರತೆ, ವೈಯಕ್ತಿಕ ಸ್ವಾತಂತ್ರ್ಯ, ನೈರ್ಮಲ್ಯ, ಅಪರಾಧ, ಗೃಹನಿರ್ಮಾಣ, ನೈಸರ್ಗಿಕ ಪರಿಸರ, ವಿಹಾರ-ವಿನೋದ, ಬ್ಯಾಂಕಿಂಗ್ ಸೌಕರ್ಯಗಳು, ಗ್ರಾಹಕ ಸರಕುಗಳ ಲಭ್ಯತೆ, ಶಿಕ್ಷಣ ಮತ್ತು ಸಾರಿಗೆ ವ್ಯವಸ್ಥೆ, ಸಾರ್ವಜನಿಕ ಸೇವೆಗಳು ಮೊದಲಾದ ಅಂಶಗಳನ್ನು ಒಳಗೊಂಡಿದೆ.[೩]
ಭೌಗೋಳಿಕತೆ
ಬದಲಾಯಿಸಿಹೊನೊಲುಲು 21°18′32″N 157°49′34″W / 21.30889°N 157.82611°W ಲ್ಲಿ ನೆಲೆಯಾಗಿದೆ. (21.308950, -157.826182).GR1
ಅಮೆರಿಕಾ ಸಂಯುಕ್ತ ಸಂಸ್ಥಾನ ಜನಗಣತಿ ಮಂಡಳಿಯ ಪ್ರಕಾರ, ಸಿಡಿಪಿಯ ಒಟ್ಟು ವಿಸ್ತೀರ್ಣ 105.1 sq mi (272 km2). ಇದರಲ್ಲಿ 85.7 sq mi (222 km2)ರಷ್ಟು ನೆಲ ಹಾಗೂ 19.4 sq mi (50 km2)ರಷ್ಟು (18.42%) ನೀರು.ಹೊನೊಲುಲುವಿನಿಂದ ಉತ್ತರ ಅಮೆರಿಕಾ ಮುಖ್ಯ ನೆಲೆಯಲ್ಲಿರುವ ಅತಿ ಹತ್ತಿರದ ಸ್ಥಳವೆಂದರೆ ಕ್ಯಾಲಿಫೊರ್ನಿಯಾದ ಪಾಯಿಂಟ್ ಅರೆನಾ ದೀಪಗೋಪುರ ಎನ್ನಲಾಗಿದೆ. ಇದು 2,045 ನಾವಿಕ ಮೈಲ್‌ಗಳು (2,353 ಶಾಸನ ಮೈಲ್‌ಗಳು) ಅಥವಾ 3,787 ಕಿಲೋಮೀಟರ್‌ಗಳ ಅಂತರದಲ್ಲಿದೆ.[೪] (ಸಾಗರ-ಚರ ಹಡಗು ವಾಹಕಗಳು ಮಕಾಪೂವೂ ಪಾಯಿಂಟ್ ಸುತ್ತಿಬಳಸಿ ಹೋಗಬೇಕಾದ ಕಾರಣ ಇನ್ನಷ್ಟು ದೂರ ಕ್ರಮಿಸಬೇಕಾಗುವುದು). ಆದರೆ, ಅಲಾಸ್ಕಾದ ಆಲ್ಯೂಟಿಯನ್ ದ್ವೀಪಗಳು ಕ್ಯಾಲಿಫೊರ್ನಿಯಾಗಿಂತಲೂ ಸ್ವಲ್ಪ ಹತ್ತಿರದಲ್ಲಿವೆ.
ಹವಾಗುಣ
ಬದಲಾಯಿಸಿಹೊನೊಲುಲು ಉಷ್ಣವಲಯದ ಒಣ ಹವಾಗುಣ ವಲಯದಲ್ಲಿದ್ದು (ಕೊಪೆನ್ ವಿಂಗಡಣೆ As ) ಬೇಸಿಗೆಯ ಋತುವಿನಲ್ಲಿ ಬಹಳ ಒಣಹವೆಯಿರುತ್ತದೆ. ಅದೇನೇ ಇದ್ದರೂ, ವಾರ್ಷಿಕ ಮಳೆಯ ಪ್ರಮಾಣ ಬಹಳ ಕಡಿಮೆ. ವರದಿ ನೀಡುವ ಹವಾಮಾನ ಇಲಾಖೆಯನ್ನು ಅವಲಂಬಿಸಿ, ಇದರ ಹವಾಗುಣವು ಅರೆ-ಒಣ ಹವಾಗುಣಕ್ಕೆ ಸನಿಹದಲ್ಲಿದೆ (ಕೊಪ್ಪೆನ್ ವಿಂಗಡಣೆ BSh ). ನಗರದಲ್ಲಿ ಇಡೀ ವರ್ಷ ಬಹಳಷ್ಟು ಸೂರ್ಯನ ಬೆಳಕು ಪ್ರಜ್ವಲಿಸುತ್ತದೆ (ಸರಾಸರಿ 3040 ತಾಸುಗಳು).[೫] ನಗರವು ಉಷ್ಣವಲಯದಲ್ಲಿದ್ದರೂ ಉಷ್ಣಾಂಶ, ಮಳೆ ಮತ್ತು ಆರ್ದ್ರತೆಯಂತಹ ಹವಾಮಾನ ಸ್ಥಿತಿಗಳು ಸಾಗರದಿಂದಾಗಿ ಹಿತಕರವಾಗಿರುತ್ತದೆ. ಹಲವು ತಿಂಗಳುಗಳ ಕಾಲ ಉಷ್ಣಾಂಶಗಳಲ್ಲಿ ವ್ಯತ್ಯಾಸ ಕಡಿಮೆಯಿರುತ್ತದೆ. ಸರಾಸರಿ ಗರಿಷ್ಠ ಉಷ್ಣಾಂಶ 80-89 °F (27-32 °C) ಹಾಗೂ ಸರಾಸರಿ ಕನಿಷ್ಠ ಉಷ್ಣಾಂಶ 65-75 °F (19-24 °C) ವ್ಯಾಪ್ತಿಯಲ್ಲಿರುತ್ತದೆ. ಉಷ್ಣಾಂಶಗಳು 90ರ ಅಂಕಿಗಳು °F (32 °C) ಮೀರುವುದು ಬಹಳ ಅಪರೂಪ. ಕನಿಷ್ಠ ಉಷ್ಣಾಂಶವು ವರ್ಷಕ್ಕೊಮ್ಮೆಯೋ ಅಥವಾ ಎರಡು ಬಾರಿಯೊ 50's°F (~15 °C) ವ್ಯಾಪ್ತಿಯಲ್ಲಿ ಇರುವುದುಂಟು. ಹೊನೊಲುಲು ಕಡಲತೀರದ ಆಚೆಗಿನ ನೀರಿನ ಸರಾಸರಿ ಉಷ್ಣಾಂಶವು ಬೇಸಿಗೆಯ ತಿಂಗಳುಗಳಲ್ಲಿ 82 °F (27 °C) ಹಾಗೂ ಚಳಿಗಾಲದ ತಿಂಗಳುಗಳಲ್ಲಿ 77 °F (25 °C) ಇರುತ್ತದೆ.[೬] ವಾರ್ಷಿಕ ಸರಾಸರಿ ಮಳೆಯು 18.3 inches (460 mm)* ರಷ್ಟಿದೆ. ಇದು ಅಕ್ಟೋಬರ್‌ರಿಂದ ಮಾರ್ಚ್ ತಿಂಗಳ ವರೆಗಿನ ಚಳಿಗಾಲದಲ್ಲಿ ಮಳೆಯಾಗುವುದು. ಬೇಸಿಗೆಯಲ್ಲಿ ಮಳೆಯಾಗುವುದು ಬಹಳ ವಿರಳ. ಹೊನೊಲುಲುವಿನಲ್ಲಿ ವರ್ಷದಲ್ಲಿ ಸರಾಸರಿ 270 ದಿನಗಳ ಕಾಲ ಬಿಸಿಲಿದ್ದು, 98 ದಿನಗಳ ಕಾಲ ಆರ್ದ್ರತೆಯಿರುವುದು.[೭]
Honolulu (Honolulu International Airport)ದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °F (°C) | 88 (31) |
88 (31) |
89 (32) |
91 (33) |
93 (34) |
92 (33) |
94 (34) |
93 (34) |
95 (35) |
94 (34) |
93 (34) |
89 (32) |
95 (35) |
ಅಧಿಕ ಸರಾಸರಿ °F (°C) | 80.4 (26.9) |
80.7 (27.1) |
81.7 (27.6) |
83.1 (28.4) |
84.9 (29.4) |
86.9 (30.5) |
87.8 (31) |
88.9 (31.6) |
88.9 (31.6) |
87.2 (30.7) |
84.3 (29.1) |
81.7 (27.6) |
84.7 (29.3) |
Daily mean °F (°C) | 73.0 (22.8) |
73.0 (22.8) |
74.3 (23.5) |
75.6 (24.2) |
77.2 (25.1) |
79.5 (26.4) |
80.8 (27.1) |
81.8 (27.7) |
81.5 (27.5) |
80.2 (26.8) |
77.7 (25.4) |
74.8 (23.8) |
77.5 (25.3) |
ಕಡಮೆ ಸರಾಸರಿ °F (°C) | 65.7 (18.7) |
65.4 (18.6) |
66.9 (19.4) |
68.2 (20.1) |
69.6 (20.9) |
72.1 (22.3) |
73.8 (23.2) |
74.7 (23.7) |
74.2 (23.4) |
73.2 (22.9) |
71.1 (21.7) |
67.8 (19.9) |
70.2 (21.2) |
Record low °F (°C) | 52 (11) |
53 (12) |
55 (13) |
56 (13) |
60 (16) |
65 (18) |
66 (19) |
67 (19) |
66 (19) |
61 (16) |
57 (14) |
54 (12) |
52 (11) |
ಸರಾಸರಿ ಮಳೆ inches (mm) | 2.73 (69.3) |
2.35 (59.7) |
1.89 (48) |
1.11 (28.2) |
0.78 (19.8) |
0.43 (10.9) |
0.50 (12.7) |
0.46 (11.7) |
0.74 (18.8) |
2.18 (55.4) |
2.27 (57.7) |
2.85 (72.4) |
18.29 (464.6) |
Average rainy days (≥ 0.01 in) | 8.8 | 7.9 | 9.0 | 8.6 | 7.3 | 5.8 | 7.2 | 5.4 | 6.9 | 7.3 | 9.1 | 9.7 | 93 |
Mean sunshine hours | 213.9 | 214.7 | 260.4 | 252.0 | 282.1 | 285.0 | 306.9 | 303.8 | 279.0 | 244.9 | 201.0 | 198.4 | ೩,೦೪೨.೧ |
Source #1: NOAA (normals, 1971-2000) [೮] | |||||||||||||
Source #2: HKO (sun, 1961-1990) [೫] |
ಸರ್ಕಾರ
ಬದಲಾಯಿಸಿಹೊನೊಲುಲು ನಗರ ಮತ್ತು ಕೌಂಟಿಯ ನಿಗದಿತ ವಾದ ಹೊನೊಲುಲು ಹೇಲ್ ಸೇರಿದಂತೆ,ಹೊನೊಲುಲು ನಗರ ಮತ್ತು ಕೌಂಟಿಯ ಸ್ಥಳೀಯ ಆಡಳಿತ ಕಾರ್ಯಾಲಯಗಳು ಜನಗಣತಿ-ಗೊತ್ತುಪಡಿಸಿದ ಸ್ಥಳ(ಸಿಡಿಪಿ)ದಲ್ಲಿವೆ.[೯] ಹವಾಯಿ ರಾಜ್ಯ ಸರ್ಕಾರವೂ ಸಹ ಸಿಡಿಪಿಯಲ್ಲಿವೆ.ಹೊನೊಲುಲು ಜಿಲ್ಲೆಯು ಒವಾಹುವಿನ ಅಗ್ನೇಯ ಕಡಲತೀರದಲ್ಲಿ, ಮಕಾಪೂ ಮತ್ತು ಹಲಾವಾ ಸ್ಥಳಗಳ ಮಧ್ಯದಲ್ಲಿದೆ. ಜಿಲ್ಲಾ ಸರಹದ್ದು ಕೂಲಾವ್ ಶ್ರೇಣಿಯ ರೇಖೆಯನ್ನು ಅನುಸರಿಸುತ್ತದೆ. ಆದ್ದರಿಂದ ಮಕಾಪೂ ಕಡಲತೀರವು ಕೂಲಾಪೊಕೊ ಜಿಲ್ಲೆಯಲ್ಲಿದೆ. ಪಶ್ಚಿಮದಲ್ಲಿ, ಜಿಲ್ಲಾ ಸರಹದ್ದು ಹಲಾವಾ ಝರಿಯನ್ನು ಅನುಸರಿಸಿ, ರೆಡ್ ಹಿಲ್ ದಾಟಿ, ಅಲಿಯಾಮಾನು ಕ್ರೇಟರ್‌ನ ಪಶ್ಚಿಮಕ್ಕೆ ಹಾದುಹೋಗುತ್ತದೆ. ಇದರಿಂದಾಗಿ ಅಲೊಹಾ ಕ್ರೀಡಾಂಗಣ, ಪರ್ಲ್ ಹಾರ್ಬರ್ (ಯುಎಸ್‌ಎಸ್ ಅರಿಝೊನಾ ಸ್ಮಾರಕ ಸೇರಿ) ಹಾಗೂ ಹಿಕಾಮ್ ವಾಯುಸೇನಾ ಶಿಬಿರ ಇವೆಲ್ಲವೂ ದ್ವೀಪದ ಇವಾ ಜಿಲ್ಲಾ ವ್ಯಾಪ್ತಿಯೊಳಗಿರುತ್ತವೆ.ಹವಾಯಿ ಸಾರ್ವಜನಿಕ ಸುರಕ್ಷಾ ಇಲಾಖೆಯು ಒವಾಹು ಸಮುದಾಯ ಕಾರಾವಾಸ ಕೇಂದ್ರವನ್ನು ನಿರ್ವಹಿಸುತ್ತದೆ. ಈ ಕೇಂದ್ರವು ಹೊನೊಲುಲು ಸಿಡಿಪಿಯಲ್ಲಿರುವ ಒವಾಹು ದ್ವೀಪದಲ್ಲಿದೆ.[೧೦] ಅಮೆರಿಕಾ ಸಂಯುಕ್ತ ಸಂಸ್ಥಾನ ಅಂಚೆ ಸೇವಾ ಇಲಾಖೆಯು ಹೊನೊಲುಲು ಸಿಡಿಪಿಯಲ್ಲಿರುವ ಅಂಚೆ ಕಾರ್ಯಾಲಯಗಳನ್ನು ನಿರ್ವಹಿಸುತ್ತವೆ. ಹೊನೊಲುಲು ಪ್ರಧಾನ ಅಂಚೆ ಕಾರ್ಯಾಲಯವು 3600 ಅವೊಲೆಲೆ ಸ್ಟ್ರೀಟ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದೆ.[೧೧] (ಫೆಡರಲ್ )ಸಂಯುಕ್ತತಾ ಸ್ಥಾನಬದ್ದತಾ ಕೇಂದ್ರ ದ ನಿರ್ವಹಣೆಯಲ್ಲಿರುವ ಹೊನೊಲುಲು ಸಂಯುಕ್ತತಾ ಬಂಧಿಖಾನೆ ಕೇಂದ್ರವು ಸಿಡಿಪಿಯಲ್ಲಿದೆ.[೧೨]
ರಾಯಭಾರಿ ಕಚೇರಿ, ರಾಜತಾಂತ್ರಿಕ ಮಂಡಲಿಗಳು
ಬದಲಾಯಿಸಿಹೊನೊಲುಲು ನಗರ ಮತ್ತು ಕೌಂಟಿ ಪ್ರದೇಶದಲ್ಲಿರುವ ಹೊನೊಲುಲು ಸಿಡಿಪಿಯಲ್ಲಿ ಹಲವು ದೇಶಗಳ ರಾಯಭಾರಿ ಕಾರ್ಯಾಲಯಗಳಿವೆ. ಇವುಗಳಲ್ಲಿ ಜಪಾನ್,[೧೩] ದಕ್ಷಿಣ ಕೊರಿಯಾ,[೧೪] ಫಿಲಿಪೀನ್ಸ್,[೧೫] ಮೈಕ್ರೊನೇಷ್ಯಾ ಏಕೀಕೃತ ರಾಜ್ಯಗಳು,[೧೬] ಆಸ್ಟ್ರೇಲಿಯಾ[೧೭] ಹಾಗೂ ಮಾರ್ಷಲ್ ಐಲೆಂಡ್ಸ್ ಸಹ ಸೇರಿವೆ.[೧೮]
ಪಟ್ಟಣ/ನಗರವ್ಯಾಪ್ತಿ
ಬದಲಾಯಿಸಿನಗರದಲ್ಲಿನ ಹಲವು ವಾಣಿಜ್ಯ ಮತ್ತು ಕೈಗಾರಿಕಾ ಅಭಿವೃದ್ಧಿಗಳು ಇಕ್ಕಟ್ಟಾದ ಆದರೂ ಹೆಚ್ಚುಕಡಿಮೆ ಸಮತಟ್ಟಾದ ಕಡಲತೀರದ ಬಯಲುಸೀಮೆ ಪ್ರದೇಶದಲ್ಲಿವೆ. ಕಡಲತೀರದ ಬಯಲು ಸೀಮೆ ಪ್ರದೇಶದಿಂದ ಇನ್ನಷ್ಟು ಒಳನಾಡಿಗೆ ಸರಿದರೆ, ಹಲವು ಶಿಖರತುದಿಗಳು ಮತ್ತು ಕಣಿವೆಗಳು ಕಂಡುಬರುತ್ತವೆ. ಇವುಗಳಿಂದಾಗಿ ಹೊನೊಲುಲುವಿನ ಜನವಸತಿ ಪ್ರದೇಶಗಳ ನಡುವಿನ ಅಂತರ ಹೆಚ್ಚಾಗಿರುತ್ತದೆ: (ಕಡಲ ಕಿನಾರೆಯ ಜಲಪಾತಗಳ ಪ್ರದೇಶ)ಮನೊವಾ ಕಣಿವೆಯಲ್ಲಿ ಮನೋವಾ ತರಹ ಕೆಲವು ಕಣಿವೆಯ ತಳದುದ್ದಕ್ಕೂ ಹರಡಿದ್ದರೆ, ಇನ್ನು ಕೆಲವು ಶಿಖರ ತುದಿಗಳ ಬದಿಗಳಲ್ಲೂ ಹಬ್ಬಿವೆ. ಹೊನೊಲುಲು ಕೇಂದ್ರಭಾಗದೊಳಗೆ, ಹಲವು ಜ್ವಾಲಾಮುಖೀಯ ಶಂಕುವಿನಾಕಾರದ ದಿಬ್ಬಗಳಿವೆ. ಇವುಗಳಲ್ಲಿ ಪಂಚ್‌ಬೌಲ್, ಡೈಮೆಂಡ್ ಹೆಡ್, ಕೊಕೊ ಹೆಡ್ ([ಹನೌಮಾ ಕೊಲ್ಲಿ]Hanauma Bay ಸೇರಿ),(ಜ್ವಾಲಿಮುಖಿ ಸಂಭವಿಸಿದ ನಂತರದ ಕಂದಕ) ಕೊಕೊ ಕ್ರೇಟರ್, ಸಾಲ್ಟ್ ಲೇಕ್ ಹಾಗೂ (ಜ್ವಾಲಾಮುಖಿಯಿಂದಾದ ಗವಿಯಂತಹ ಭಾಗ)ಅಲಿಯಾಮಾನು ಜ್ವಾಲಾಮುಖೀಯ ಉದ್ಭವ ಶಂಕುಗಳು ಎದ್ದುಕಾಣುವಂತಿವೆ.
ನೆರೆಹೊರೆಯ ನಗರಗಳು
ಬದಲಾಯಿಸಿ- ಹೊನೊಲುಲು ವಾಣಿಜ್ಯ ಪ್ರದೇಶವು ಹವಾಯಿ ರಾಜ್ಯದ ಹಣಕಾಸು, ವಾಣಿಜ್ಯ ಮತ್ತು ಸರಕಾರಗಳ ಆಡಳಿತ ಕೇಂದ್ರಸ್ಥಾನವಾಗಿದೆ. ಜಲಾಭಿಮುಖದಲ್ಲಿರುವ ಅಲೊಹಾ ಟವರ್ ಹಲವು ವರ್ಷಗಳ ಕಾಲ ಹವಾಯಿಯಲ್ಲೇ ಅತಿ ಎತ್ತರದ ಕಟ್ಟಡವಾಗಿತ್ತು. ಕಿಂಗ್ ಮತ್ತು ಬಿಷಪ್ ನದಿಗಳ ಹರಿಯುವ ಹಾದಿಯಲ್ಲಿರುವ, 438-foot (134 m)-ಎತ್ತರವಿರುವ ಫಸ್ಟ್ ಹವಾಯಿಯನ್ ಸೆಂಟರ್ ಅತಿ ಎತ್ತರದ ಕಟ್ಟಡ ಎನಿಸಿಕೊಂಡಿದೆ. ಹವಾಯಿ ಪೆಸಿಫಿಕ್ ವಿಶ್ವವಿದ್ಯಾನಿಲಯದ ವಾಣಿಜ್ಯ ಕೇಂದ್ರ ಘಟಕವು ಸಹ ಇಲ್ಲಿದೆ.
- ವಾಣಿಜ್ಯ ಪ್ರದೇಶ/ಚೀನಾಟೌನ್‌ನಲ್ಲಿರುವ ಹೊನೊಲುಲು ಕಲಾ ಜಿಲ್ಲೆ ಚೀನಾಟೌನ್‌ನ ಪೂರ್ವಗಡಿಯಲ್ಲಿದೆ. ಇದು ಹನ್ನೆರಡು ವಿಭಾಗಗಳ ಒಂದು ಕ್ಷೇತ್ರ. ಬಿಥೆಲ್ ಮತ್ತು ಸ್ಮಿತ್ ಸ್ಟ್ರೀಟ್(ಬೀದಿ)ಗಳು, ನಿಮಿಟ್ಜ್ ಹೆದ್ದಾರಿ ಮತ್ತು ಬೆರೆಟನಿಯಾ ಸ್ಟ್ರೀಟ್ ಈ ಕ್ಷೇತ್ರನ್ನು ಸುತ್ತುವರೆದಿವೆ. ಈ ಕ್ಷೇತ್ರವು ವಿವಿಧ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ತಾಣವಾಗಿದೆ. ಈ ಕ್ಷೇತ್ರವು ಚೀನಾಟೌನ್ ಐತಿಹಾಸಿಕ ಜಿಲ್ಲೆ (ಹಿಸ್ಟಾರಿಕ್ ಡಿಸ್ಟ್ರಿಕ್ಟ್)ನೊಳಗಿದೆ.[೧೯]
- ಕ್ಯಾಪಿಟಲ್ ಜಿಲ್ಲೆಯು ಹೊನೊಲುಲು ಡೌನ್ಟೌನ್ (ವಾಣಿಜ್ಯ ಪ್ರದೇಶ)ದ ಪೂರ್ವಭಾಗದಲ್ಲಿದೆ. ಇದು ಹವಾಯಿ ರಾಜ್ಯ ಸರ್ಕಾರದ ಐತಿಹಾಸಿಕ ಮತ್ತು ಸದ್ಯದ ಕೇಂದ್ರವಾಗಿದೆ. ಹವಾಯಿ ಸ್ಟೇಟ್ ಕ್ಯಾಪಿಟಲ್, ಇಯೊಲಾನಿ ಅರಮನೆ, ಹೊನೊಲುಲು ಹೇಲ್ (ಸಿಟಿ ಹಾಲ್), ರಾಜ್ಯ ಗ್ರಂಥಾಲಯ ಮತ್ತು ಮೊದಲ ಕಮೆಹಮೆಹಾ ದೊರೆಯ ಪ್ರತಿಮೆ, ಜೊತೆಗೆ ಹಲವು ಸರ್ಕಾರಿ ಕಟ್ಟಡಗಳು ಇಲ್ಲಿವೆ.
- ಕಕಾಕೊʻ ವಾಣಿಜ್ಯ ಪ್ರದೇಶ ಮತ್ತು ವೈಕಿಕೀ ನಡುವಿನ ಒಂದು ಸಣ್ಣ-ಕೈಗಾರಿಕಾ ಜಿಲ್ಲೆ. ಕಳೆದ ದಶಕದಿಂದಲೂ ಇಲ್ಲಿ ಬೃಹತ್ಪ್ರಮಾಣದ ಪುನರಾಭಿವೃದ್ಧಿ ಯತ್ನಗಳು ನಡೆಯುತ್ತಿವೆ. ವಾರ್ಡ್ ವೇರ್ಹೌಸ್ ಮತ್ತು ವಾರ್ಡ್ ಸೆಂಟರ್ ಎಂಬ ಎರಡು ಪ್ರಮುಖ ವ್ಯಾಪಾರ ಮಳಿಗೆಗಳು ಇಲ್ಲಿವೆ. ಮನೊವಾದಲ್ಲಿರುವ ಹವಾಯಿ ವಿಶ್ವವಿದ್ಯಾನಿಲಯದ ಅಂಗವಾಗಿರುವ ಜಾನ್ ಎ. ಬರ್ನ್ಸ್ ಸ್ಕೂಲ್ ಆಫ್ ಮೆಡಿಸಿನ್ ಸಹ ಅಲ್ಲಿದೆ. ʻ ಎಹಿಮ್ ಮಾರೂ ಘಟನೆ ಘಟನೆಯಲ್ಲಿ ಮೃತರಾದವರಿಗಾಗಿ, ಕಕಾಕೊ ಜಲಾಭಿಮುಖಿ ಸ್ಮಾರಕವನ್ನು ನಿರ್ಮಿಸಲಾಗಿದೆ.(ಅಮೆರಿಕಾದ ನೌಕಪಡೆ ಹಡಗು ಮತ್ತು ಜಪಾನೀ ಹಡಗಿನ ನಡುವಿನ ಡಿಕ್ಕಿಯಲ್ಲಿ ಮೃತರಾದವರ ಸ್ಮರಣೆ ಘಟನೆ)
- ವೈಕಿಕಿ ಹೊನೊಲುಲು ಜಿಲ್ಲೆಯ ವಿಶ್ವಪ್ರಸಿದ್ಧ ಪ್ರವಾಸೀ ಜಿಲ್ಲೆಯಾಗಿದೆ. ಇದು ಅಲಾ ವಾಯ್ ಕಾಲುವೆ ಮತ್ತು ಪ್ರಶಾಂತ ಸಾಗರದ ನಡುವೆ, ಡೈಮೆಂಡ್ ಹೆಡ್ ಪಕ್ಕದಲ್ಲಿದೆ. ಕಲಕಾವಾ ಮತ್ತು ಕುಹಿಯೊ ಅವೆನ್ಯೂಸ್ ಮಾರ್ಗಗಳುದ್ದಕ್ಕೂ ಹಲವು ಹೋಟೆಲ್‌ಗಳು, ಅಂಗಡಿಗಳು ಮತ್ತು ರಾತ್ರಿಯ ವೇಳೆಯ ಮನರಂಜನಾ ಕೇಂದ್ರಗಳಿವೆ. ಪ್ರತಿವರ್ಷ ದಶಲಕ್ಷಗಟ್ಟಲೆ ಪ್ರವಾಸಿಗಳು ವೈಕಿಕಿ ಕಡಲತೀರಕ್ಕೆ ಭೇಟಿ ನೀಡುವರು. ವಿಶ್ವದಲ್ಲೇ ಅತಿ ದೊಡ್ಡ ಹೊರಾಂಗಣ ವ್ಯಾಪಾರ ಕೇಂದ್ರ 'ಆಲಾ ಮೊನಾ ಸೆಂಟರ್' ವೈಕಿಕಿಯ ಪಶ್ಚಿಮದಲ್ಲಿದೆ. [ಸೂಕ್ತ ಉಲ್ಲೇಖನ ಬೇಕು] ಒವಾಹುದ ಹೋಟೆಲ್ ಕೋಣೆಗಳಲ್ಲಿ ಬಹಳಷ್ಟು ವೈಕಿಕಿಯಲ್ಲಿವೆ.
- ಮನೊವಾ ಮತ್ತು ಮಾಕಿಕಿ ಗೃಹವಾಸಿ ನೆರೆತಾಣಗಳಾಗಿವೆ. ವಾಣಿಜ್ಯ ಪ್ರದೇಶ ಮತ್ತು ವೈಕಿಕಿಗೆ ಇನ್ನೂ ಒಳನಾಡಿನಲ್ಲಿರುವ ಇವು ಅಕ್ಕಪಕ್ಕದ ಕಣಿವೆಗಳಲ್ಲಿವೆ. ಹವಾಯಿ ವಿಶ್ವವಿದ್ಯಾನಿಲಯದʻ ಪ್ರಧಾನ ಕ್ಯಾಂಪಸ್ ಕೇಂದ್ರ ಮನೊವಾ ವ್ಯಾಲಿಯಲ್ಲಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ ತಮ್ಮ ತಾಯಿ, ಮಲತಂದೆಯೊಡನೆ ಮಕಿಕಿಯಲ್ಲಿ ವಾಸವಾಗಿದ್ದರಲ್ಲದೆ, ಪುನಾಹೌ ಶಾಲೆಯಿಂದ ತೇರ್ಗಡೆ ಹೊಂದುವ ತನಕ, ತಮ್ಮ (ಮಲ)ಅಜ್ಜ-ಅಜ್ಜಿಯವರೊಂದಿಗೆ ವಾಸಿಸುತ್ತಿದ್ದರು.
- ಹೊನೊಲುಲು ವಾಣಿಜ್ಯ ಪ್ರದೇಶಕ್ಕೆ ಇನ್ನೂ ಒಳನಾಡಿನಲ್ಲಿರುವ ನುವಾನುʻ ಮತ್ತು ಪಾವ್ವಾ ಉನ್ನತ-ಮಧ್ಯಮ-ದರ್ಜೆಯ ರಹವಾಸಿಗಳ ಜಿಲ್ಲೆಗಳಾಗಿವೆ. ಪಾವ್ವಾ ಕಣಿವೆಯ ಮುಂದೆ ಪಂಚ್‌ಬೌಲ್ ಕ್ರೇಟರ್‌ನಲ್ಲಿ ಪ್ರಶಾಂತ ಸಾಗರ ರಾಷ್ಟ್ರೀಯ ಸ್ಮಾರಕ ಸಮಾಧಿಯಿದೆ.
- ಡೈಮಂಡ್ ಹೆಡ್‌ನಿಂದ ಇನ್ನೂ ಒಳನಾಡಿನಲ್ಲಿರುವ ಮನೊವಾ ಮತ್ತು ಮಕಿಕಿಯ ಪೂರ್ವದಲ್ಲಿ ಪಲೊಲೊ ಮತ್ತು ಕೈಮುಕಿ ನೆರೆ ಬಡಾವಣೆಗಳಾಗಿವೆ. ಪಲೊಲೊ ಕಣಿವೆಯು ಮನೊವಾಗೆ ಸಮಾನಾಂತರದಲ್ಲಿದ್ದು, ಜನವಸತಿ ಪ್ರದೇಶವಾಗಿದೆ. ಕೈಮುಕಿ ಎಂಬುದು ಪ್ರಾಥಮಿಕವಾಗಿ ನಾಗರಿಕರು ವಾಸಿಸುವ ಪ್ರದೇಶವಾಗಿದೆ. ಅಲ್ಲದೆ, ಡೈಮೆಂಡ್ ಹೆಡ್ ಹಿಂಭಾಗದಲ್ಲಿ ಹಾದುಹೋಗುವ ವೈಯಾಲೆ ಅವೆನ್ಯೂದಲ್ಲಿ ವಾಣಿಜ್ಯ ಕೇಂದ್ರವನ್ನೂ ಹೊಂದಿದೆ. ಚಮಿನೆಡ್ ವಿಶ್ವವಿದ್ಯಾನಿಲಯವು ಕೈಮುಕಿಯಲ್ಲಿದೆ.
- ವೈಯಾಲೆ ಮತ್ತು ಕಹಲಾ ಹೊನೊಲುಲುವಿನ ಉನ್ನತ ಮಧ್ಯಮ ವರ್ಗದ ಜಿಲ್ಲೆಗಳಾಗಿವೆ. ಇವು ಡೈಮೆಂಡ್ ಹೆಡ್‌ನ ನೇರ ಪೂರ್ವ ದಿಕ್ಕಿನಲ್ಲಿವೆ. ಈ ಪ್ರದೇಶದಲ್ಲಿನ ಮನೆಗಳು ದುಬಾರಿ ಬೆಲೆಗಳಲ್ಲಿ ಲಭ್ಯ. ಇದರ ಸುತ್ತಮುತ್ತಲಲ್ಲಿ ವೈಯಾಲೆ ಕಂಟ್ರಿ ಕ್ಲಬ್ ಮತ್ತು ಕಹಲಾ ಹೋಟೆಲ್ & ರೆಸಾರ್ಟ್ ಇವೆ.
- ಪೂರ್ವ ಹೊನೊಲುಲುವಿನಲ್ಲಿ ʻಆಯಿನಾ ಹೈನಾ, ನಿಯು ವ್ಯಾಲಿ ಮತ್ತು ಹವಾಯಿ ಕೈʻ ನಲ್ಲಿ ರಹವಾಸಿ ಸಮುದಾಯಗಳು ಸೇರಿವೆ. ಇವುಗಳನ್ನು ಉನ್ನತ ಮಧ್ಯಮ ವರ್ಗದವರು ವಾಸಿಸುವ ಪ್ರದೇಶಗಳು ಎನ್ನಲಾಗಿದೆ. ಶ್ರೀಮಂತರು ವಾಸಿಸುವಂತಹ ವೈಯಾಲೆʻ ʻಇಕಿ ಮತ್ತು ಹವಾಯಿʻ ಲೊವಾ ರಿಡ್ಜ್ ಗೃಹ ಸಮುದಾಯಗಳೂ ಸಹ ಇಲ್ಲಿವೆ.
- ಕಲಿಹಿ ಮತ್ತು ಪಲಾಮಾ ಕಾರ್ಮಿಕ ಸಮುದಾಯದವರು ವಾಸಿಸುವ ಕ್ಷೇತ್ರವಾಗಿದೆ. ಇಲ್ಲಿ ಹಲವು ಸರಕಾರಿ ಗೃಹನಿರ್ಮಾಣ ಅಭಿವೃದ್ಧಿ ಬಡಾವಣೆಗಳಿವೆ. ಸಮುದ್ರದ ಕಡೆಗಿರುವ ಲೋಯರ್ ಕಲಿಹಿ ಲಘು-ಕೈಗಾರಿಕಾ ಜಿಲ್ಲೆಯಾಗಿದೆ.
- ಹೊನೊಲುಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅನತಿ ದೂರದಲ್ಲಿ, ಹೊನೊಲುಲು ಜಿಲ್ಲೆಯ ಪಶ್ಚಿಮ ತುದಿಯುದ್ದಕ್ಕೂ, ಆರಿಹೋದ ಜ್ವಾಲಾಮುಖಿಗಳಿಂದ ಉಂಟಾದ ಶಿಲೆಗಳೆನ್ನಲಾಗಿದೆ.(ಅಗ್ನಿಶಿಲೆಪರ್ವತ)ಟಫ್ ಶಂಕುಗಳಲ್ಲಿ ಸಾಲ್ಟ್ ಲೇಕ್ ಹಾಗೂ ಅಲಿಯಾಮನು ಎಂಬ ಜನನಿಬಿಡ ಸ್ಥಾನಗಳಿವೆ.
- ಹೊನೊಲುಲುವಿನ ಪಶ್ಚಿಮ ತುದಿಯಲ್ಲಿರುವ ಮೊವನಾಲುವಾದಲ್ಲಿ ಎರಡು ನೆರೆ ಕ್ಷೇತ್ರಗಳು ಹಾಗೂ ಕಣಿವೆಯೊಂದಿದೆ. ಟ್ರಿಪ್ಲರ್ ಭೂಸೇನಾ ವೈದ್ಯಕೀಯ ಕೇಂದ್ರ ವೂ ಇಲ್ಲಿದೆ.
ಜನಸಂಖ್ಯಾ ವಿವರಣೆ
ಬದಲಾಯಿಸಿ2000ರ ಜನಗಣತಿGR2ಯ ಪ್ರಕಾರ, ಸಿಡಿಪಿಯಲ್ಲಿ 371,657 ಜನಸಂಖ್ಯೆ, 140,337 ರಹವಾಸಿಗಳು ಹಾಗೂ 87,429 ಕುಟುಂಬಗಳಿದ್ದವು. ಪ್ರತಿ ಚದರ ಮೈಲ್‌ಗೆ (1,674.4/km2) 4,336.6ರಷ್ಟು ಜನಸಾಂದ್ರತೆಯಿತ್ತು. 1,851.3 ಚದರ ಮೈಲ್‌ಗಳಷ್ಟು (714.8/km2) ಸರಾಸರಿ ಸಾಂದ್ರತೆಯಲ್ಲಿ 158,663 ಮನೆಗಳಿದ್ದವು. ಸಿಡಿಪಿಯ ಜನಾಂಗೀಯತೆ ಹೀಗಿತ್ತು: 19.67% ಶ್ವೇತವರ್ಣೀಯರು, 1.62% ಕರಿಯರು ಅಥವಾ ಆಫ್ರಿಕನ್-ಅಮೆರಿಕನ್ ಮೂಲ, 0.19% ಬುಡಕಟ್ಟು ಅಮೆರಿಕನ್, 55.85% ಏಷ್ಯನ್, 6.85% ಶಾಂತಸಾಗರ ದ್ವೀಪದ ಮೂಲದವರು, 0.89% ಇತರೆ ಜನಾಂಗದವರು; ಹಾಗೂ 14.93% ಎರಡು ಅಥವಾ ಹೆಚ್ಚು ಸಮ್ಮಿಶ್ರ ಜನಾಂಗದವರಿದ್ದರು. ಯಾವುದೇ ಕುಲದ ಹಿಸ್ಪಾನಿಕ್ ಅಥವಾ ಲ್ಯಾಟಿನೋಗಳದ್ದು ಶೇ. 1.32 ರಷ್ಟು ಜನಸಂಖ್ಯೆ ಇತ್ತು.ಅಲ್ಲಿ 257,996 ಗೃಹವಸತಿ ಇದೆ, ಅದರಲ್ಲಿ 25.5% ನಷ್ಟು 18ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿದವರಾಗಿದ್ದಾರೆ, 26.7% ಜನರು ಒಟ್ಟಿಗೆ ವಾಸಿಸುತ್ತಿರುವ ಮದುವೆಯಾದ ಜೋಡಿಗಳು, 25.0% ಪತಿಜೊತೆ ಇರದ ಹೆಂಗಸು ಮನೆವಾರ್ತೆ ನೋಡಿಕೊಳ್ಳುತ್ತಿರುವ ಮನೆಗಳು, ಮತ್ತು 43.0% ಜನರು ಕುಟುಂಬವಿಲ್ಲದೆ ಇರುವವರು. 29.7%ರಷ್ಟು ಮನೆಮಂದಿಗಳಲ್ಲಿ ವ್ಯಕ್ತಿಗಳಿದ್ದರು, ಅಲ್ಲದೇ 10.0%ರಷ್ಟು ಜನರು 65 ಅಥವಾ ಹೆಚ್ಚಿನ ವಯಸ್ಕರಾಗಿದ್ದು ಒಂಟಿಯಾಗಿ ವಾಸಿಸುತ್ತಿದ್ದರು. ಸರಾಸರಿ ಗೃಹವಾಸಿಗಳ ಪ್ರಮಾಣ 2.57ರಷ್ಟಿದ್ದರೆ, ಕುಟುಂಬದ ಪ್ರಮಾಣ 3.23ರಷ್ಟಿತ್ತು.ಸಿಡಿಪಿಯಲ್ಲಿ ಜನಸಂಖ್ಯೆಯು ಹರಡಿತ್ತು. ಇದರಲ್ಲಿ 19.2%ರಷ್ಟು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 8.9%ರಷ್ಟು 18 ರಿಂದ 24 ವರ್ಷ ವಯಸ್ಸಿನವರು, 29.9%ರಷ್ಟು 25 ರಿಂದ 44 ವರ್ಷ ವಯಸ್ಸಿನವರು, 24.1%ರಷ್ಟು 45ರಿಂದ 64 ವರ್ಷ ವಯಸ್ಸಿನವರು, ಹಾಗೂ 17.8%ರಷ್ಟು 65 ಹಾಗೂ ಹೆಚ್ಚಿನ ವಯಸ್ಸಿನವರಾಗಿದ್ದರು. ಸರಾಸರಿ ವಯಸ್ಸು 40 ಆಗಿತ್ತು. ಪ್ರತಿ 100 ಮಂದಿ ಸ್ತ್ರೀಯರಿಗೆ ಅಲ್ಲಿ 96.6 ಪುರುಷರಿದ್ದರು. 18 ಅಥವಾ ಅದಕ್ಕೂ ಮೀರಿದ ವಯಸ್ಸಿನ ಪ್ರತಿ 100 ಸ್ತ್ರೀಯರಿಗೆ 94.5 ಪುರುಷರಿದ್ದರು.ಸಿಡಿಪಿಯಲ್ಲಿ ಮನೆಮಂದಿಯ ಸರಾಸರಿ ಆದಾಯವು $51,482 ಮತ್ತು ಒಂದು ಕುಟುಂಬಕ್ಕೆ ಸರಾಸರಿ ಆದಾಯವು $55,939 ಆಗಿತ್ತು. ಪುರುಷರ ಆದಾಯ $36,631 ಹಾಗೂ ಮಹಿಳೆಯರ ಆದಾಯ $29,930 ಆಗಿದೆ. ಸಿಡಿಪಿಗಾಗಿ ತಲಾವಾರು ಆದಾಯ $24,191 ಆಗಿತ್ತು. ಕುಟುಂಬಗಳಲ್ಲಿ 7.9%ರಷ್ಟು ಹಾಗೂ ಜನಸಂಖ್ಯೆಯಲ್ಲಿ 11.8%ರಷ್ಟು ಬಡತನ ರೇಖೆಯ ಕೆಳಗಿದ್ದವು. ಇವುಗಳಲ್ಲಿ 14.6%ರಷ್ಟು 18 ವರ್ಷಕ್ಕಿಂತಲೂ ಕೆಳಗೆ ಹಾಗೂ 65 ಅಥವಾ ಹೆಚ್ಚಿನ ವಯಸ್ಕರಲ್ಲಿ 8.5%ರಷ್ಟು ಸೇರಿವೆ.
2006-2008 ಅವಧಿಯ ಅಮೆರಿಕನ್ ಸಮುದಾಯ ಸಮೀಕ್ಷೆಯ ಪ್ರಕಾರ, ಷಾರ್ಲೆಟ್‌ನ ಜನಾಂಗೀಯ ಅಂಶವು ಕೆಳಕಂಡಂತಿತ್ತು:
- ಬಿಳಿಯರು: 38.4% (ಹಿಸ್ಪಾನಿಕೇತರ ಬಿಳಿಯರು 36.5%)
- ಕರಿಯರು ಅಥವಾ ಆಫ್ರಿಕನ್ ಅಮೇರಿಕನ್ನರು: 3.0%
- ಬುಡಕಟ್ಟು ಅಮೆರಿಕನ್: 0.2%
- ಏಷ್ಯನ್ನರು: 54.6%
- ಸ್ಥಳೀಯ ಹವಾಯಿಯನ್ ಹಾಗೂ ಇತರೆ ಪ್ರಶಾಂತ ಸಾಗರ ದ್ವೀಪದವರು: 6.2%
- ಇತರೆ ಜನಾಂಗದವರು: 12.8%
- ಎರಡು ಅಥವಾ ಹೆಚ್ಚಿನ ಜನಾಂಗಗಳು: 3.0%
- ಹಿಸ್ಪಾನಿಕ್‌ರು ಅಥವಾ ಲ್ಯಾಟಿನೋ ಜನರು (ಯಾವುದೇ ಜನಾಂಗದವರಾಗಿರಬಹುದು): 3.8%
ಮೂಲ:[೨೦]
ಆರ್ಥಿಕ ಸ್ಥಿತಿ
ಬದಲಾಯಿಸಿ{{Expand}}
is a disambiguation entry; please do not transclude it. Instead, use a more specific template, such as {{Incomplete}}
, {{Expand list}}
, {{Missing}}
, or {{Expand section}}
.(ಅಗ್ಗದರದ ವಿಮಾನ ಸೌಕರ್ಯ ಒದಗಿಸುವ ಅಂತರ್ ದ್ವೀಪದ ವಿಮಾನಯಾನ) ಗೋ! ಮೊಕುಲೆಲೆ,[೨೧] ಹವಾಯಿಯನ್ ಏರ್ಲೈನ್ಸ್,[೨೨] ಐಲೆಂಡ್ ಏರ್,[೨೩] ಮತ್ತು ಅಲೋಹಾ ಏರ್ ಕಾರ್ಗೊ ಪ್ರಧಾನ ಕಾರ್ಯಾಲಯಗಳು ಸಿಡಿಪಿಯಲ್ಲಿವೆ.[೨೪][೨೫] ವಿಭಜನೆಗೆ ಮುಂಚೆ, ಅಲೋಹಾ ಏರ್ಲೈನ್ಸ್‌ನ ಪ್ರಧಾನ ಕಾರ್ಯಾಲಯವು ಸಿಡಿಪಿಯಲ್ಲಿತ್ತು.[೨೬]
ಸಾರಿಗೆ ವ್ಯವಸ್ಥೆ
ಬದಲಾಯಿಸಿವಿಮಾನಯಾನ
ಬದಲಾಯಿಸಿಸಿಡಿಪಿಯ ಪಶ್ಚಿಮ ಗಡಿಯಲ್ಲಿರುವ ಹೊನೊಲುಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಹೆಚ್‌ಎನ್‌ಎಲ್) ಹವಾಯಿ ರಾಜ್ಯಕ್ಕೆ ಪ್ರಮುಖ ವಾಯುಯಾನಕ್ಕೆ ಹೆಬ್ಬಾಗಿಲಾಗಿದೆ. ಕಲೆಲೊವಾ ವಿಮಾನ ನಿಲ್ದಾಣವು ಪ್ರಾಥಮಿಕವಾಗಿ ಪ್ರಯಾಣಿಕ ಘಟಕವಾಗಿದೆ. ಇಲ್ಲಿ ಯಾವುದೇ ಅನಿಗದಿತ ಹವಾಯಿ ಟ್ಯಾಕ್ಸಿಗಳು, ಸಾಮಾನ್ಯ ವಾಯುಯಾನ ಮತ್ತು ಕ್ಷಣಮಾತ್ರದ, ಸ್ಥಳೀಯ ವಾಯುಸೇನಾ ವಿಮಾನಗಳು ಬಂದಿಳಿಯಬಹುದಾಗಿದೆ.
ಹೆದ್ದಾರಿಗಳು
ಬದಲಾಯಿಸಿಲಾಸ್ ಏಂಜಲೀಸ್ ನಂತರ, ಅತಿ ಒತ್ತಡದ ಸಂಚಾರ ಅವಧಿಯಲ್ಲಿ ಎರಡನೆಯ ಅತಿದೊಡ್ಡ ಮಹಾನಗರ ವಿಮಾನಯಾನ ನಾಗರಿಕ ಸಾರಿಗೆ ಹೊನೊಲುಲುವಿನಲ್ಲಿದೆ. ಅಂತರ-ರಾಜ್ಯ ಹೆದ್ದಾರಿ ವ್ಯವಸ್ಥೆಯ ಅಂಗವಾಗಿರುವ ಕೆಳಕಂಡ ಹೆದ್ದಾರಿಗಳು ಹೊನೊಲುಲು ಮೂಲಕ ಹಾದುಹೋಗುತ್ತವೆ:
- ಇಂಟರ್ಸ್ಟೇಟ್ ಹೆಚ್-1 ಪಶ್ಚಿಮ ದಿಕ್ಕಿನಿಂದ ನಗರದೊಳಗೆ ಪ್ರವೇಶಿಸುತ್ತದೆ. ಹಿಕಾಮ್ ವಾಯು ಯಾನ ಶಿಬಿರ ಹಾಗೂ ಹೊನೊಲುಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾದು, ವಾಣಿಜ್ಯ ಕ್ಷೇತ್ರದ ಉತ್ತರ ಬದಿಯಲ್ಲಿ ಸಾಗಿ, ಮಕಿಕಿ, ಕೈಮುಕಿ ಮೂಲಕ ಪೂರ್ವದಿಕ್ಕಿನಲ್ಲಿ ಹೋಗಿ ವೈಯಾಲೆ/ಕಹಲಾದಲ್ಲಿ ಅಂತ್ಯಗೊಳ್ಳುತ್ತದೆ. ಹೆಚ್-1 ವಹಿಯವಾದಿಂದ ಬರುವ ಇಂಟರ್ಸ್ಟೇಟ್ ಹೆಚ್-2 ಹಾಗೂ ಸಿಡಿಪಿಯ ಪಶ್ಚಿಮದಲ್ಲಿರುವ ಕೇನಿಯೊಹೆಯಿಂದ ಬರುವ ಇಂಟರ್ಸ್ಟೇಟ್ ಹೆಚ್-3 ಒಂದಿಗೆ ಸಂಪರ್ಕಿಸುತ್ತದೆ.
- ಇಂಟರ್ಸ್ಟೇಟ್ ಹೆಚ್-201ನ್ನು ಮೊನಾಲುವಾ ಫ್ರೀವೇ ಎಂದೂ ಕರೆಯಲಾಗಿದ್ದು, ಮುಂಚೆ ಹವಾಯಿ ಸ್ಟೇಟ್ ರೂಟ್ 78 ಹೆಚ್-1 ಮಾರ್ಗದಲ್ಲಿ ಎರಡು ಸ್ಥಳಗಳಲ್ಲಿ ಸಂಪರ್ಕಿಸುತ್ತದೆ: ಅಲೋಹಾ ಕ್ರೀಡಾಂಗಣ ಮತ್ತು ಫೋರ್ಟ್ ಷಾಫ್ಟರ್. ಹೆಚ್-1 ಮತ್ತು ಅಲೋಹಾ ಕ್ರೀಡಾಂಗಣಕ್ಕೆ ಸನಿಹದಲ್ಲಿ ಹೆಚ್-201 ಇಂಟರ್ಸ್ಟೇಟ್ ಹೆಚ್-3ರ ಪಶ್ಚಿಮ ಘಟಕದೊಂದಿಗೆ ಅಡ್ಡ ಹಾದು, ಒವಾಹು ಕೇನಿಯೊಹೆಯ ಗಾಳಿಬೀಸುವ ದಿಕ್ಕಿನೆಡೆಯ ಪ್ರದೇಶಕ್ಕೆ ಹೋಗುತ್ತದೆ. ಹೆಚ್-1 ಹಾಗೂ ಹೆಚ್-3 ನಡುವೆ ನೇರವಾಗಿ ಸೇರಿದಂತೆ ಕೆಲವು ಸಂಪರ್ಕಗೊಳಿಸುವ ಇಳಿಜಾರುಗಳ ಸಂಕೀರ್ಣವು ಹಲಾವಾದಲ್ಲಿದೆ.
ಹೊನೊಲುಲು ನಗರವನ್ನು ಒವಾಹು ದ್ವೀಪದ ಇತರೆ ಭಾಗಗಳೊಂದಿಗೆ ಸಂಪರ್ಕಿಸುವ ಇತರೆ ಪ್ರಮುಖ ಹೆದ್ದಾರಿಗಳೆಂದರೆ:
- ಪಾಲಿ ಹೈವೆ, ರಾಜ್ಯ ಮಾರ್ಗ 61, ಕೂಲಾವ್ ಶ್ರೇಣಿ ಮೇಲೆ ದಾಟಿ, ಪಾಲಿ ಸುರಂಗಗಳ ಮೂಲಕ ಹಾದುಹೋಗಿ, ದ್ವೀಪದ ಗಾಳಿಯ ಬದಿಯಲ್ಲಿರುವ ಕೈಲುವಾ ಮತ್ತು ಕೇನಿಯೊಹೆಯೊಂದಿಗೆ ಸಂಪರ್ಕಿಸುತ್ತದೆ.
- ಲೈಕ್‌ಲೈಕ್ ಹೆದ್ದಾರಿ, ರಾಜ್ಯ ಮಾರ್ಗ 63 ಸಹ ಕೂಲಾವ್ ಶ್ರೇಣಿ ದಾಟಿಹೋಗಿ, ವಿಲ್ಸನ್ ಟನೆಲ್ಸ್ ಮಾರ್ಗವಾಗಿ ಕೇನಿಯೊಹೆಯೊಂದಿಗೆ ಸಂಪರ್ಕಿಸುತ್ತದೆ.
- ಕಲನಿಯನವೊಲೆ ಹೆದ್ದಾರಿ, ರಾಜ್ಯ ಮಾರ್ಗ 72, ವೈಯಾಲೆ/ಕಹಲಾದಿಮದ ಪೂರ್ವ ದಿಕ್ಕಿನಲ್ಲಿ ಹರಿದು ಹವಾಯಿ ಕೈ ಹಾಗೂ ದ್ವೀಪದ ಪೂರ್ವ ತುದಿಯಲ್ಲಿರುವ ವೈಮನೊಲೊ ಕಡಲತೀರಕ್ಕೆ ಹೋಗುತ್ತದೆ.
- ಕಮೆಹಮೆಹಾ ಹೆದ್ದಾರಿ, ರಾಜ್ಯ ಮಾರ್ಗ 99, ಹಿಕಾಮ್ ವಾಯು ಸೇನಾ ಶಿಬರದ ಕಡೆಯಿಂದ ಪಶ್ಚಿಮ ದಿಕ್ಕಿನಲ್ಲಿರುವ ಐಯಾ ಹಾಗೂ ಅದರಿಂದಾಚೆಗೆ ಸಾಗಿ, ದ್ವೀಪದ ಮಧ್ಯದ ಮೂಲಕ ಸಾಗಿ ಕೇನಿಯೊಹೆಯಲ್ಲಿ ಅಂತ್ಯಗೊಳ್ಳುತ್ತದೆ.
ಹಲವು ಪ್ರಮುಖ ಅಮೆರಿಕನ್ ನಗರಗಳಂತೆಯೇ ಹೊನೊಲುಲು ಮಹಾನಗರ ಪ್ರದೇಶದಲ್ಲೂ ಸಹ ಭಾರೀ ಸಂಚಾರ ದಟ್ಟನೆಯುಂಟಾಗುತ್ತದೆ, ಅದರಲ್ಲೂ ವಿಶಿಷ್ಟವಾಗಿ ಪಶ್ಚಿಮ ಹೊರವಲಯ ಪ್ರದೇಶಗಳಾದ ಕಪೊಲೆ, ಇವಾ, ಐಯಾ, ಪರ್ಲ್ ಸಿಟಿ, ವೈಪಹು ಮತ್ತು ಮಿಲಿಲನಿ ಕಡೆ ಹೋಗುವ ಹಾಗೂ ಅಲ್ಲಿಂದ ಬರುವ ಸಂಚಾರ ಕೂಡಾ ಸಂಕೀರ್ಣವಾಗುತ್ತದೆ.ಹವಾಯಿ ವಿದ್ಯುತ್ ವಾಹನ ಪ್ರದರ್ಶನಾ ಯೋಜನೆ (ಹೆಚ್‌ಇವಿಡಿಪಿ) ಇದೆ.[೨೭]
ಸಾರ್ವಜನಿಕ ಸಾರಿಗೆ ವ್ಯವಸ್ಥೆ
ಬದಲಾಯಿಸಿಬಸ್
ಬದಲಾಯಿಸಿಹೊನೊಲುಲುವಿನ ಮಾಜಿ ಮಹಾಪೌರ ಫ್ರಾಂಕ್ ಎಫ್. ಫ್ಯಾಸಿ ಸಾರ್ವಜನಿಕ ಬಸ್ ಸಾರಿಗೆ ವ್ಯವಸ್ಥೆಯನ್ನು ಸ್ಥಾಪಿಸಿದರು. ದಿ-ಬಸ್ (TheBus) ಎನ್ನಲಾದ ಈ ವ್ಯವಸ್ಥೆಗೆ ಅಮೆರಿಕನ್ ಸಾರ್ವಜನಿಕ ಸಾರಿಗೆ ಸಂಘದಿಂದ ಎರಡು ಬಾರಿ (1994-1995 ಮತ್ತು 2000-2001 ಅವಧಿಗಳಲ್ಲಿ) 'ಅಮೆರಿಕಾದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ' ಎಂಬ ಪ್ರಶಸ್ತಿ ಪಡೆದುಕೊಂಡಿದೆ. ದಿ-ಬಸ್ ಸೇವೆಯು 531 ಬಸ್‌ಗಳನ್ನು ಹೊಂದಿದ್ದು, ಹೊನೊಲುಲು ಮತ್ತು ಒವಾಹು ಪ್ರದೇಶದ ಹೊರವಲಯ ಪ್ರದೇಶಗಳಲ್ಲಿ 107 ಮಾರ್ಗಗಳಲ್ಲಿ ಬಸ್ ಸೇವೆ ಒದಗಿಸುತ್ತದೆ. ಲಾಭೋದ್ದೇಶವಿಲ್ಲದ ಒವಾಹು ಟ್ರ್ಯಾನ್ಸಿಟ್ ಸರ್ವಿಸಸ್ ಉದ್ದಿಮೆಯು, ನಗರದ ಸಾರಿಗೆ ಸೇವಾ ಇಲಾಖೆಯ ಸಹಯೋಗದೊಂದಿಗೆ ಬಸ್ ಸಾರಿಗೆ ಸೇವೆ ಒದಗಿಸುತ್ತದೆ. ಸಾರ್ವಜನಿಕ ಸಾರಿಗೆ ಸೇವೆಗಳ ಬಳಕೆಯಲ್ಲಿ ಹೊನೊಲುಲು ನಾಲ್ಕನೆಯ ಸ್ಥಾನದಲ್ಲಿದೆ.[೨೮]
ರೈಲ್ವೆ ಸಾರಿಗೆ
ಬದಲಾಯಿಸಿಸದ್ಯಕ್ಕೆ, ಹೊನೊಲುಲುವಿನಲ್ಲಿ ಯಾವುದೇ ನಗರವಲಯ ರೈಲ್ವೆ ಸಾರಿಗೆ ವ್ಯವಸ್ಥೆಯಿಲ್ಲ. ಆದರೂ, ಎರಡನೆಯ ವಿಶ್ವಯುದ್ಧಕ್ಕೆ ಮುಂಚೆ ಹೊನೊಲುಲುವಿನಲ್ಲಿ ವಿದ್ಯುತ್-ಚಾಲಿತ ರೈಲ್ವೆ ಗಾಡಿಗಳನ್ನು ಓಡಿಸಲಾಗುತ್ತಿತ್ತು. ಹೊನೊಲುಲು ನಗರ ಮತ್ತು ಕೌಂಟಿ ಸರ್ಕಾರವು ಸದ್ಯಕ್ಕೆ ಒಂದು 20-mile (32 km) ಸಾರಿಗೆ ಮಾರ್ಗವನ್ನು ಯೋಜಿಸುತ್ತಿದೆ. ಇದರಂತೆ ಹೊನೊಲುಲು ಮತ್ತು ನಗರದ ಪಶ್ಚಿಮದಲ್ಲಿರುವ ಹೊರವಲಯ ಹಾಗೂ ಒವಾಹುವಿನ ದಕ್ಷಿಣ ಭಾಗದಲ್ಲಿರುವ ಪ್ರದೇಶದ ನಡುವೆ ಈ ರೈಲು ಸಾರಿಗೆ ಸೇವೆ ಲಭ್ಯವಾಗಲಿದೆ. ಹೊನೊಲುಲು ಉನ್ನತ-ಕ್ಷಮತಾ ಸಾರಿಗೆ ಮಾರ್ಗದ ಯೋಜನೆಯು ಲೀವರ್ಡ್ ಒವಾಹು ಮೂಲದ ಪ್ರಯಾಣಿಕರು ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಳ ತಲುಪಲು ಬಹಳ ಉಪಯುಕ್ತವಾಗಲಿದೆ. ಆದರೆ, ದುಬಾರಿ ವೆಚ್ಚ ಹಾಗೂ ಸ್ಥಳೀಯ ಹವಾಯಿ ಸಮಾಧಿಗಳು ಸೇರಿದಂತೆ ಪರಿಸರದ ಮೇಲೆ ಉಂಟಾಗುವ ನಕಾರಾತ್ಮಕ ಪ್ರಭಾವಗಳು, ಹಾಗೂ ನಗರದ ಅಂದ ಕೆಡಿಸಬಹುದೆಂದು ಈ ರೈಲ್ವೆ ಮಾರ್ಗವು ವ್ಯಾಪಕ ಟೀಕೆ ಎದುರಿಸುತ್ತಿದೆ.
ಸಾಂಸ್ಕೃತಿಕ ಸಂಸ್ಥೆಗಳು
ಬದಲಾಯಿಸಿಪ್ರದರ್ಶನ ಕಲೆಗಳು
ಬದಲಾಯಿಸಿಪ್ರಸಿದ್ದ ವಾದ್ಯಗೋಷ್ಟಿ, 1900ರಲ್ಲಿ ಸ್ಥಾಪಿಸಿದ ಹೊನೊಲುಲು ಸಿಂಫನಿಯು, ರಾಕಿ ಪರ್ವತಶ್ರೇಣಿಯ ಪಶ್ಚಿಮ ಪ್ರದೇಶಗಳಲ್ಲಿರುವ ಅಮೆರಿಕಾದ ಸಿಂಫನಿ ವಾದ್ಯವೃಂದದಲ್ಲಿ ಅತಿ ಹಳೆಯದು. ಇತರೆ ಶಾಸ್ತ್ರೀಯ ಸಂಗೀತ ಶೈಲಿಗಳಲ್ಲಿ (ಗೀತನಾಟಕ ವೃಂದ)ಹವಾಯಿ ಆಪೆರಾ ಥಿಯೆಟರ್ ಸಹ ಸೇರಿದೆ. ಹವಾಯಿ ಶೈಲಿಯ ಸಂಗೀತಕ್ಕೆ ಹೊನೊಲುಲು ಪ್ರಧಾನ ಕೇಂದ್ರವಾಗಿದೆ. ನೀಲ್ ಬ್ಲೇಯ್ಸ್‌ಡೆಲ್ ಸೆಂಟರ್ ಗಾನಗೋಷ್ಠಿ ಸಭಾಂಗಣ, ವೈಕಿಕಿ ಷೆಲ್ ಹಾಗೂ ಹವಾಯಿ ಥಿಯೆಟರ್‌ನಂತಹ ಪ್ರಮುಖ ಸ್ಥಳಗಳಲ್ಲಿ ಸಂಗೀತ ಕಛೇರಿಗಳು ನಡೆಯುವವು.ಡೈಮೆಂಡ್ ಹೆಡ್ ಥಿಯೆಟರ್ ಸೇರಿದಂತೆ, ನಾಟಕ ಪ್ರದರ್ಶನಗಳು ನಡೆಯುವ ರಂಗಮಂದಿರಗಳು ಹೊನೊಲುಲುವಿನಲ್ಲಿವೆ.
ದೃಶ್ಯ ಕಲೆಗಳು
ಬದಲಾಯಿಸಿಹೊನೊಲುಲುವಿನಲ್ಲಿ ಹಲವು ದೃಶ್ಯಕಲಾ ಸಂಸ್ಥೆಗಳಿವೆ. ಹವಾಯಿಯಲ್ಲೇ ಏಷ್ಯನ್ ಮತ್ತು ಪಾಶ್ಚಾತ್ಯ ಕಲೆಯ ಅತಿ ದೊಡ್ಡ ಸಂಗ್ರಹವು ಹೊನೊಲುಲು ಅಕ್ಯಾಡೆಮಿ ಆಫ್ ಆರ್ಟ್ಸ್‌ನಲ್ಲಿವೆ. ಇಸ್ಲಾಮ್ ಕಲೆಯ ಅತಿದೊಡ್ಡ ಸಂಗ್ರಹವು ಷಾಂಗ್ರಿ ಲಾ ಎಸ್ಟೇಟ್‌ನಲ್ಲಿದೆ. ವಿಶಿಷ್ಟ ಕಲಾಮಂದಿರ ಕುರಿತು ಹಾಗೂ ವಿಶ್ವ ಸಿನೆಮಾ ಬಗ್ಗೆ ಚಲನಚಿತ್ರ ಮತ್ತು ವೀಡಿಯೊ ಕಾರ್ಯಕ್ರಮವನ್ನು ಈ ಅಕಾಡೆಮಿಯು ವಸ್ತು ಪ್ರದರ್ಶನಾಲಯದ ಡೊರಿಸ್ ಡ್ಯೂಕ್ ಥಿಯೆಟರ್‌ನಲ್ಲಿ ಆಯೋಜಿಸುತ್ತದೆ. ಡೊರಿಸ್ ಡ್ಯೂಕ್ ಈ ಅಕಾಡೆಮಿಯ ಐತಿಹಾಸಿಕ ಧಣಿಯಾಗಿದ್ದರು.ದಿ ಕಂಟೆಂಪೊರರಿ ಮ್ಯೂಸಿಯಮ್ ರಾಜ್ಯದಲ್ಲಿರುವ ಏಕೈಕ ಸಮಕಾಲೀನ ಕಲಾ ವಸ್ತುಪ್ರದರ್ಶನಾಲಯವಾಗಿದೆ. ಇದು ಎರಡು ಸ್ಥಳಗಳಲ್ಲಿವೆ: ಮಕಿಕಿಯಲ್ಲಿ ಪ್ರಮುಖ ಕೇಂದ್ರ ಹಾಗೂ ಹೊನೊಲುಲು ವಾಣಿಜ್ಯ ಪ್ರದೇಶದಲ್ಲಿನ ಫಸ್ಟ್ ಹವಾಯಿಯನ್ ಸೆಂಟರ್‌ನಲ್ಲಿ ಬಹು-ಹಂತದ ಪ್ರದರ್ಶನಾ ಸೌಲಭ್ಯಗಳಿವೆ.ಸ್ಥಳೀಯ ಕಲಾವಿದರ ಕಲಾಕೃತಿಗಳು ಹಾಗೂ ಸಾಂಪ್ರದಾಯಿಕ ಹವಾಯಿಯನ್ ಕಲಾಕೃತಿಗಳನ್ನು ಹೊಂದಿರುವ ಹವಾಯಿ ರಾಜ್ಯ ಕಲಾ ವಸ್ತುಪ್ರದರ್ಶನಾಲಯವು ಸಹ ಹವಾಯಿ ವಾಣಿಜ್ಯ ಪ್ರದೇಶದಲ್ಲಿದೆ. ಹವಾಯಿ ರಾಜ್ಯ ಸಂಸ್ಕೃತಿ ಮತ್ತು ಕಲಾ ಸಂಸ್ಥಾನವು ಈ ವಸ್ತುಪ್ರದರ್ಶನಾಲಯವನ್ನು ನಿರ್ವಹಿಸುತ್ತದೆ.
ನೈಸರ್ಗಿಕ ವಸ್ತುಪ್ರದರ್ಶನಾಲಯಗಳು
ಬದಲಾಯಿಸಿಹೊನೊಲುಲುವಿನ ವಸ್ತುಪ್ರದರ್ಶನಾಲಯಗಳ ಪೈಕಿ ಬಿಷಪ್ ಮ್ಯೂಸಿಯಮ್ ಅತಿ ದೊಡ್ಡದು. ನೈಸರ್ಗಿಕ ಐತಿಹಾಸಿಕ ನಮೂನೆಗಳ ಇಡೀ ರಾಜ್ಯದಲ್ಲೇ ಅತಿ ದೊಡ್ಡ ಸಂಗ್ರಾಹಾರ, ಹಾಗೂ ಹವಾಯಿಯನ್ ಮತ್ತು ಪ್ರಶಾಂತ ಸಾಗರ ಸಂಸ್ಕೃತಿಗೆ ಸಂಬಂಧಿಸಿದ, ವಿಶ್ವದಲ್ಲೇ ಅತಿದೊಡ್ಡ ಹಸ್ತಕೃತಿಗಳ ಸಂಗ್ರಹ ಇಲ್ಲಿವೆ. [ಸೂಕ್ತ ಉಲ್ಲೇಖನ ಬೇಕು] ಹೊನೊಲುಲು ಪ್ರಾಣಿಸಂಗ್ರಹಾಲಯವು ಹವಾಯಿಯ ಪ್ರಮುಖ ಪ್ರಾಣಿವೈಜ್ಞಾನಿಕ ಸಂಸ್ಥೆಯಾಗಿದೆ. ವೈಕಿಕಿ ಮತ್ಸ್ಯಾಲಯ ಕಡಲ ಜೀವವಿಜ್ಞಾನ ಪ್ರಯೋಗಾಲಯವಾಗಿದೆ. ವೈಕಿಕಿ ಮತ್ಸ್ಯಾಲಯ ಹವಾಯಿ ವಿಶ್ವವಿದ್ಯಾನಿಲಯ ಮತ್ತು ವಿಶ್ವದಾದ್ಯಂತ ಇತರೆ ವಿಶ್ವವಿದ್ಯಾನಿಲಯಗಳೊಂದಿಗೆ ಸಹಯೋಗ ಹೊಂದಿದೆ. ಅತ್ಯುತ್ತಮ ಸಸ್ಯಕಾಶಿ ಹಾಗೂ ಸಸ್ಯವಿಜ್ಞಾನಕ್ಕಾಗಿ ಪ್ರಶಂಸಿತ ಹೊನೊಲುಲುವಿನಲ್ಲಿ ಹಲವು ತೋಟ-ಉದ್ಯಾನಗಳಿವೆ. ಇವುಗಳಲ್ಲಿ ಫೊಸ್ಟರ್ ಸಸ್ಯವೈಜ್ಞಾನಿಕ ತೋಟ, ಲಿಲಿ-ಉವೊಕಲನಿ ಸಸ್ಯವೈಜ್ಞಾನಿಕ ತೋಟ ಹಾಗೂ ವಾಕರ್ ತೋಟ ಸೇರಿವೆ.
ಕ್ರೀಡೆ
ಬದಲಾಯಿಸಿಹೊನೊಲುಲುವಿನ ಹವಾಗುಣವು ಇಡೀ ವರ್ಷ ಕ್ರೀಡಾ ಚಟುವಟಿಕೆಗಳಿಗೆ ಸೂಕ್ತವೆನಿಸಿದೆ. 2004ರಲ್ಲಿ ಮೆನ್ಸ್ ಫಿಟ್ನೆಸ್ ಪತ್ರಿಕೆಯಲ್ಲಿ, ಹೊನೊಲುಲು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತ್ಯುತ್ತಮ ದೈಹಿಕ ಕ್ಷಮತೆಯ ಜನರನ್ನುಳ್ಳ ನಗರ ಎಂದು ಬರೆದಿತ್ತು.[೨೯] ಮೂರು ದೊಡ್ಡ ರಸ್ತೆ ಸ್ಪರ್ಧೆಗಳು ಹೊನೊಲುಲುವಿನಲ್ಲಿ ನಡೆಯುತ್ತವೆ:
- ರಾಷ್ಟ್ರಾಧ್ಯಕ್ಷರ ದಿನದಂದು ಗ್ರೇಟ್ ಅಲೋಹಾ ರನ್ ವಾರ್ಷಿಕವಾಗಿ ಆಯೋಜಿಸಲಾಗುತ್ತದೆ.
- ಡಿಸೆಂಬರ್ ತಿಂಗಳ ಎರಡನೆಯ ರವಿವಾರದಂದು ನಡೆಯುವ ಹೊನೊಲುಲು ಮ್ಯಾರಥಾನ್‌ನಲ್ಲಿ ಪ್ರತಿ ವರ್ಷ 20,000ಕ್ಕೂ ಹೆಚ್ಚು ಮಂದಿ ಭಾಗವಹಿಸುವರು. ಇವರಲ್ಲಿ ಅರ್ಧದಷ್ಟು ಅಥವಾ ಮೂವರಲ್ಲಿ ಇಬ್ಬರು ಜಪಾನ್‌ನಿಂದ ಬರುವರು.
- ಹೊನೊಲುಲು ತ್ರಿಪಂದ್ಯ ಒಲಿಂಪಿಕ್ ಕ್ರೀಡಾಕೂಟ ಮಟ್ಟದ ಮೂರು ವಿಭಿನ್ನ ತ್ರಿಪಂದ್ಯ ಕ್ರೀಡಾಸ್ಪರ್ಧೆಯಾಗಿದೆ. ಇದನ್ನು ಯುಎಸ್‌ಎ ಟ್ರಯಾತ್ಲಾನ್ ಆಯೋಜಿಸುತ್ತದೆ. 2004ರಿಂದಲೂ ವಾರ್ಷಿಕವಾಗಿ ಆಯೋಜಿತವಾದ ಈ ಸ್ಪರ್ಧೆ ನಡೆಸಲು ಓಟ ಮಾರ್ಗದ ಅಭಾವವಿದೆ.ಐರನ್‌ಮನ್ ಹವಾಯಿ ಸ್ಪರ್ಧೆಯನ್ನು ಮೊದಲ ಬಾರಿ ಹೊನೊಲುಲುವಿನಲ್ಲಿ ಆಯೋಜಿಸಲಾಯಿತು. ಇದು ಅತಿ ದೊಡ್ಡ ಐರನ್‌ಮನ್ ಸ್ಪರ್ಧೆ ಹಾಗೂ ಈ ಸ್ಪರ್ಧೆಯಲ್ಲಿ ಅತಿಥೇಯ ತಂಡವು ವಿಶ್ವ ಚಾಂಪಿಯನ್ ಆಗಿದೆ.ಹೊನೊಲುಲುವಿನಲ್ಲಿ ಬಹಳಷ್ಟು ಪ್ರೇಕ್ಷಕರನ್ನು ಆಕರ್ಷಿಸುವ ಆಟಗಳೆಂದರೆ ಫುಟ್ಬಾಲ್, ವಾಲಿಬಾಲ್, ಬ್ಯಾಸ್ಕೆಟ್ಬಾಲ್ ಹಾಗೂ ಬೇಸ್ಬಾಲ್. ಮನೊವಾದಲ್ಲಿರುವ ಹವಾಯಿ ವಿಶ್ವವಿದ್ಯಾನಿಲಯವು ಈ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ. [ಸೂಕ್ತ ಉಲ್ಲೇಖನ ಬೇಕು] ಫುಟ್ಬಾಲ್‌ನಂತಹ ಕ್ರೀಡೆಗಳನ್ನು ಪ್ರೌಢಶಾಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಬಹಳ ಜನಪ್ರಿಯವಾಗಿವೆ.ಹೊನೊಲುಲುವಿನಲ್ಲಿ ಯಾವುದೇ ವೃತ್ತಿಪರ ಕ್ರಿಡಾ ತಂಡಗಳಿಲ್ಲ. ಹವಾಯಿ ಐಲೆಂಡರ್ಸ್ (ಪೆಸಿಫಿಕ್ ಕೋಸ್ಟ್ ಲೀಗ್, 1961–1987), ದಿ ಹವಾಯಿಯನ್ಸ್ (ವರ್ಲ್ಡ್ ಫುಟ್ಬಾಲ್ ಲೀಗ್, 1974–1975), ಟೀಮ್ ಹವಾಯಿ (ನಾರ್ತ್ ಅಮೆರಿಕನ್ ಸಾಕರ್ ಲೀಗ್, 1977) ಹಾಗೂ ಹವಾಯಿಯನ್ ಐಲೆಂಡರ್ಸ್ (af2, 2002–2004) ತಂಡಗಳಿಗೆ ಹವಾಯಿ ಸ್ವಸ್ಥಳವಾಗಿತ್ತು.ಎನ್‌ಸಿಎಎ ಫುಟ್ಬಾಲ್ ಪಂದ್ಯ ಹವಾಯಿ ಬೌಲ್ ಹೊನೊಲುಲುವಿನಲ್ಲಿ ಆಯೋಜಿಸಲಾಗುತ್ತದೆ. ಎನ್‌ಎಫ್‌ಎಲ್ ವಾರ್ಷಿಕ ಆಯೋಜನೆಯ ಪ್ರೊ ಬೌಲ್ ಪಂದ್ಯಾವಳಿಯನ್ನು ಹೊನೊಲುಲು 1980ರಿಂದ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಆತಿಥೇಯ ವಹಿಸಿತ್ತು. ಆದರೂ 2010ರ ಪ್ರೊ ಬೌಲ್ ಪಂದ್ಯಾವಳಿಯನ್ನು ಮಯಾಮಿಯಲ್ಲಿ ನಡೆಸಲಾಗಿತ್ತು.[೩೦] 1993ರಿಂದ 2008ರ ತನಕ, ಹೊನೊಲುಲು ಹವಾಯಿ ವಿಂಟರ್ ಬೇಸ್ಬಾಲ್ ಪಂದ್ಯಾವಳಿಯ ಆತಿಥೇಯ ವಹಿಸಿತ್ತು. ಮೇಜರ್ ಲೀಗ್ ಬ್ಯಾಸ್ಕೆಟ್ಬಾಲ್, ನಿಪ್ಪಾನ್ ಪ್ರೊಫೆಷನಲ್ ಬೇಸ್ಬಾಲ್, ಕೊರಿಯಾ ಬೇಸ್ಬಾಲ್ ಆರ್ಗನೈಸೇಷನ್ ಹಾಗೂ ಸ್ವತಂತ್ರ ಲೀಗ್ ಪಂದ್ಯಾವಳಿಗಳ ಕಿರಿಯ ಆಟಗಾರರು ಹವಾಯಿ ಬೇಸ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಕ್ರೀಡಾಂಗಣಾ ವೀಕ್ಷಣಾ ವ್ಯವಸ್ಥೆ ಇರುವ ಸ್ಥಳಗಳು
ಬದಲಾಯಿಸಿಹೊನೊಲುಲುವಿನಲ್ಲಿ ಪ್ರೇಕ್ಷಕರು ವೀಕ್ಷಿಸಬಹುದಾದ ಕ್ರೀಡೆಗಳು(ಕ್ರೀಡಾವೀಕ್ಷಣಾ ಸ್ಥಳಾವಕಾಶಗಳು) ಕೆಳಕಂಡವುಗಳನ್ನು ಒಳಗೊಂಡಿವೆ:
- ಯುಹೆಚ್-ಮನೊವಾದಲ್ಲಿರುವ ಲೆಸ್ ಮುರಾಕಾಮಿ ಕ್ರೀಡಾಂಗಣ (ಬೇಸ್ಬಾಲ್)
- ಯುಹೆಚ್ ಮನೊವಾದಲ್ಲಿರುವ ಸ್ಟ್ಯಾನ್ ಷೆರಿಫ್ ಸೆಂಟರ್ (ಬ್ಯಾಸ್ಕೆಟ್ಬಾಲ್ ಮತ್ತು ವಾಲಿಬಾಲ್)
- ನೀಲ್ ಬ್ಲೇಯ್ಸ್‌ಡೆಲ್ ಸೆಂಟರ್ ಅರೆನಾ (ಬ್ಯಾಸ್ಕೆಟ್ಬಾಲ್)
ಅಮೆರಿಕನ್ ಫುಟ್ಬಾಲ್ ಮತ್ತು ಸಾಕ್ಕರ್ (ಫುಟ್ಬಾಲ್) ಕ್ರೀಡೆಗಳ ಆಯೋಜಿಸುವ ಅಲೋಹಾ ಕ್ರೀಡಾಂಗಣವು ಹಲಾವಾ ಸಿಡಿಪಿಯಲ್ಲಿದೆ.[೩೧]
ಮಾಧ್ಯಮಗಳು
ಬದಲಾಯಿಸಿಹೊನೊಲುಲು ಸ್ಟಾರ್-ಅಡ್ವರ್ಟೈಸರ್ ಎಂಬೊಂದು ದೈನಿಕ ಪತ್ರಿಕೆ, ಹೊನೊಲುಲು ಮ್ಯಾಗಝೀನ್ , ಹಲವು ರೇಡಿಯೊ ಪ್ರಸಾರ ಕೇಂದ್ರಗಳು ಮತ್ತು ದೂರದರ್ಶನ ಕೇಂದ್ರಗಳು ಹೊನೊಲುಲುವಿನಲ್ಲಿ ಸಕ್ರಿಯವಾಗಿವೆ.
ಪ್ರವಾಸಿ ಆಕರ್ಷಣೆಯ ಸ್ಥಳಗಳು
ಬದಲಾಯಿಸಿ- ಇದನ್ನೂ ನೋಡಿ: ಒವಾಹು ಪ್ರವಾಸೀ ಅಕರ್ಷಣೆಗಳು
- ಇದನ್ನೂ ನೋಡಿ: ಹೊನೊಲುಲುವಿನಲ್ಲಿ ರಾಷ್ಟ್ರಾಧ್ಯಕ್ಷ ಒಬಾಮಾಗೆ ಸಂಬಂಧಿತ ಸ್ಥಳಗಳು
|
|
ಶಿಕ್ಷಣ
ಬದಲಾಯಿಸಿಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು
ಬದಲಾಯಿಸಿ- ಇದನ್ನು ನೋಡಿ: ಹವಾಯಿಯಲ್ಲಿನ ಕಾಲೇಜ್‌ಗಳು ಮತ್ತು ವಿಶ್ವವಿದ್ಯಾನಿಲಯಗಳ ಪಟ್ಟಿ
ಹೊನೊಲುಲು ಸಿಡಿಪಿಯಲ್ಲಿರುವ ಕಾಲೇಜ್‌ಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಹೊನೊಲುಲು ಕಮ್ಯೂನಿಟಿ ಕಾಲೇಜ್, ಕಪಿಯೊಲಾನಿ ಕಮ್ಯೂನಿಟಿ ಕಾಲೇಜ್, ಮನೊವಾದಲ್ಲಿರುವ ಹವಾಯಿ ವಿಶ್ವವಿದ್ಯಾನಿಲಯ, ಚ್ಯಾಮಿನೇಡ್ ವಿಶ್ವವಿದ್ಯಾನಿಲಯ ಹಾಗೂ ಹವಾಯಿ ಪೆಸಿಫಿಕ್ ವಿಶ್ವವಿದ್ಯಾನಿಲಯವೂ ಸೇರಿವೆ.[೨೫]
ಸಾರ್ವಜನಿಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು
ಬದಲಾಯಿಸಿಹವಾಯಿ ರಾಜ್ಯ ಶಿಕ್ಷಣ ಇಲಾಖೆಯು ಹೊನೊಲುಲುವಿನಲ್ಲಿರುವ ಎಲ್ಲಾ ಸಾರ್ವಜನಿಕ ಶಾಲೆಗಳನ್ನು ನಿರ್ವಹಿಸುತ್ತದೆ. ಸಿಡಿಪಿಯೊಳಗಿನ ಸಾರ್ವಜನಿಕ ಪ್ರೌಢಶಾಲೆಗಳಲ್ಲಿ ವ್ಯಾಲೆಸ್ ರೈಡರ್ ಫ್ಯಾರಿಂಗ್ಟನ್, ಕೈಸರ್, ಕೈಮುಕಿ, ಕಲಾನಿ, ಕಪೊಲೇ, ಮೊನಾಲುವಾ, ವಿಲಿಯಮ್ ಮೆಕಿನ್ಲೇ ಹಾಗೂ ಧಿಯೊಡೊರ್ ರೂಸ್ವೆಲ್ಟ್ ಶಾಲೆಗಳು ಸೇರಿವೆ.[೨೫]
ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು
ಬದಲಾಯಿಸಿಮೇರಿನೋಲ್ ಶಾಲೆ, ಸೇಂಟ್ ಲೂಯಿಸ್ ಶಾಲೆ, ಹವಾಯಿ ಬ್ಯಾಪ್ಟಿಸ್ಟ್ ಅಕ್ಯಾಡೆಮಿ, ಇಯೊಲಾನಿ ಶಾಲೆ, ಕಮೆಹಮೆಹ ಶಾಲೆಗಳು, ಮಿಡ್-ಪೆಸಿಫಿಕ್ ಇಂಸ್ಟಿಟ್ಯೂಟ್ ಹಾಗೂ ಪುನಾಹೌ ಶಾಲೆಗಳು ಸೇರಿವೆ.
ಸಾರ್ವಜನಿಕ ಗ್ರಂಥಾಲಯಗಳು
ಬದಲಾಯಿಸಿಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ವಹಿಸುತ್ತದೆ. ಸಿಡಿಪಿಯಲ್ಲಿರುವ ಹವಾಯಿ ರಾಜ್ಯ ಗ್ರಂಥಾಲಯವು ವ್ಯವಸ್ಥೆಯ ಪ್ರಮುಖ ಗ್ರಂಥಾಲಯವಾಗಿದೆ.[೩೨] ಸಿಡಿಪಿಯಲ್ಲೇ ಇರುವ ದೃಷ್ಟಿಹೀನರು ಮತ್ತು ವಿಕಲಚೇತನರಿಗಾಗಿ ಗ್ರಂಥಾಲಯವು ವಿಕಲಚೇತನರು ಮತ್ತು ದೃಷ್ಟಿಹೀನರಿಗೆ ಗ್ರಂಥಾಲಯ ಸೌಲಭ್ಯ ಒದಗಿಸುತ್ತದೆ.[೩೩] ಸಿಡಿಪಿಯಲ್ಲಿನ ಶಾಖೆಗಳಲ್ಲಿ ಅಯಿನಾ ಹಯಿನಾ,[೩೪] ಹವಾಯಿ ಕೈ,[೩೫] ಕೈಮುಕಿ,[೩೬] ಕಲಿಹಿ-ಪಲಾಮಾ,[೩೭] ಮನೊವಾ,[೩೮] ಮೆಕುಲಿ,[೩೯] ಸಾಲ್ಟ್ ಲೇಕ್-ಮೊನಾಲುವಾ,[೪೦] ಮತ್ತು ವೈಕಿಕಿ ಸೇರಿವೆ.[೪೧]
ಇವನ್ನೂ ನೋಡಿ
ಬದಲಾಯಿಸಿಬಹಳಷ್ಟು ಅತಿ ಎತ್ತರದ ಕಟ್ಟಡಗಳನ್ನು ಹೊಂದಿರುವ ನಗರಗಳ ಪಟ್ಟಿ
ಉಲ್ಲೇಖಗಳು
ಬದಲಾಯಿಸಿ- ↑ "Quickfacts.census.gov". Archived from the original on 2011-01-04. Retrieved 2010-10-04.
- ↑ "2007 Annual Visitor Research Report" (PDF). Department of Business, Economic Development, and Tourism, State of Hawaii. 1 July 2008. Retrieved 2009-05-30.
- ↑ "Quality of Living global city rankings 2009 – Mercer survey". Mercer. 28 April 2009. Retrieved 2009-05-08.
- ↑ ಮೈಕ್ರೊಸಾಫ್ಟ್ ಸ್ಟ್ರೀಟ್ಸ್ ಅಂಡ್ ಟ್ರಿಪ್ಸ್ 2007 ತಂತ್ರಾಂಶ, 2006ರಲ್ಲಿ ಮೈಕ್ರೊಸಾಫ್ಟ್ ಕಾರ್ಪ್ ಮತ್ತು ಇತರೆ ಸಂಸ್ಥೆಗಳ ಹಕ್ಕುಸ್ವಾಮ್ಯ. ದಿ ವರ್ಲ್ಡ್ ಅಲ್ಮನಾಕ್ ಅಂಡ್ ಬುಕ್ ಆಫ್ ಫ್ಯಾಕ್ಟ್ಸ್ 2007ನಲ್ಲಿ ನೀಡಲಾದ ಅಂಕಿಅಂಶಗಳಿಂದ ಕಿಲೋಮೀಟರ್ಸ್‌ಗಳನ್ನು ನಾವಿಕ ಮೈಲ್‌ಗಳು ಮತ್ತು ಶಾಸನಬದ್ಧ ಮೈಲ್‌ಗಳಾಗಿ ಪರಿವರ್ತಿಸಲಾಗಿದೆ, ವರ್ಲ್ಡ್ ಅಲ್ಮನಾಕ್ ಎಜುಕೇಷನ್ ಗ್ರೂಪ್ ಹಕ್ಕುಸ್ವಾಮ್ಯ, ಪಿ.350-353
- ↑ ೫.೦ ೫.೧ "Climatological Normals of Honolulu". Hong Kong Observatory. Archived from the original on 2011-06-22. Retrieved 2010-05-12.
- ↑ Weather.com
- ↑ "Weatherbase.com". Archived from the original on 2022-06-13. Retrieved 2024-07-08.
- ↑ "NCDC: U.S. Climate Normals" (PDF). National Oceanic and Atmospheric Administration. Retrieved 2010-04-29.
- ↑ "honolulu.gov". Archived from the original on 2010-11-25. Retrieved 2010-10-04.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಒವಾಹು ಕಮ್ಯೂನಿಟಿ ಕರೆಕ್ಷನಲ್ ಸೆಂಟರ್." ಹವಾಯಿ ಸಾರ್ವಜನಿಕ ಕಲ್ಯಾಣ ಇಲಾಖೆ. 2010ರ ಮೇ 3ರಂದು ಸಂಗ್ರಹಿಸಲಾಗಿದೆ.
- ↑ "ಅಂಚೆ ಕಾರ್ಯಾಲಯ ಸ್ಥಳ - ಹೊನೊಲುಲು Archived 2012-07-29 at Archive.is." ಅಮೆರಿಕಾ ಸಂಯುಕ್ತ ಸಂಸ್ಥಾನ ಅಂಚೆ ಸೇವೆ. 2009ರ ಮೇ 21ರಂದು ಮರುಸಂಪಾದಿಸಲಾಗಿದೆ.
- ↑ "ಎಫ್‌ಡಿಸಿ ಹೊನೊಲುಲು ಸಂಪರ್ಕ ಮಾಹಿತಿ Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ.." ಒಕ್ಕೂಟ ಕಾರಾಗೃಹ ಮಂಡಳಿ. 2010ರ ಡಿಸೆಂಬರ್ 30ರಂದು ಮರು ಗಳಿಸಲಾಯಿತು.
- ↑ "ವೀಸಾ & ಟ್ರಾವೆಲ್ Archived 2008-11-03 ವೇಬ್ಯಾಕ್ ಮೆಷಿನ್ ನಲ್ಲಿ.." ಹೊನೊಲುಲುವಿನಲ್ಲಿ ಜಪಾನಿನ ಮಹಾ-ದೂತಾವಾಸ. 2008ರ ಆಗಸ್ಟ್ 17ರಂದು ಮರುಸಂಪಾದಿಸಿದೆ.
- ↑ "ಸ್ಥಳ Archived 2008-12-11 ವೇಬ್ಯಾಕ್ ಮೆಷಿನ್ ನಲ್ಲಿ.." ಹೊನೊಲುಲುವಿನಲ್ಲಿರುವ ದಕ್ಷಿಣ ಕೊರಿಯಾದ ಮಹಾ-ದೂತಾವಾಸ. 2009ರ ಜನವರಿ 10ರಂದು ಮರುಸಂಪಾದಿಸಲಾಗಿದೆ.
- ↑ "ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಇತರೆ ಫಿಲಿಪೀನ್ ಮಿಷನ್‌ಗಳು Archived 2009-02-24 ವೇಬ್ಯಾಕ್ ಮೆಷಿನ್ ನಲ್ಲಿ.." ಷಿಕಾಗೊದಲ್ಲಿರುವ ಫಿಲಿಪೀನ್ಸ್‌ನ ಮಹಾ-ದೂತಾವಾಸ. 2009ರ ಜನವರಿ 10ರಂದು ಮರುಸಂಪಾದಿಸಲಾಗಿದೆ.
- ↑ "ಡಿಪಾರ್ಟ್ಮೆಂಟ್ ಆಫ್ ಫಾರೀನ್ ಅಫೇರ್ಸ್, ಒವರ್ಸೀಸ್ ಎಂಬಸೀಸ್, ಕಾನ್ಸಲೇಟ್ಸ್ ಅಂಡ್ ಮಿಷನ್ಸ್." ವಿದೇಶ ವ್ಯವಹಾರ ಇಲಾಖೆ (ಮೈಕ್ರೊನೆಷಿಯಾದ ಸಂಯುಕ್ತ ರಾಜ್ಯಗಳು) 2009ರ ಜನವರಿ 10ರಂದು ಮರುಸಂಪಾದಿಸಲಾಗಿದೆ.
- ↑ "ಅಮೆರಿಕಾ ಸಂಯುಕ್ತ ಸಂಸ್ಥಾನದ ಹೊನೊಲುಲುವಿನಲ್ಲಿ ಆಸ್ಟ್ರೇಲಿಯನ್ ಮಹಾ-ದೂತಾವಾಸ Archived 2008-12-22 ವೇಬ್ಯಾಕ್ ಮೆಷಿನ್ ನಲ್ಲಿ.."
ವಿದೇಶ ವ್ಯವಹಾರ ಮತ್ತು ವಾಣಿಜ್ಯ ಇಲಾಖೆ.
ಬದಲಾಯಿಸಿ2009ರ ಜನವರಿ 10ರಂದು ಮರುಸಂಪಾದಿಸಲಾಗಿದೆ.
- ↑ "ವಿದೇಶ ಮಂಡಳಿ Archived 2011-06-25 ವೇಬ್ಯಾಕ್ ಮೆಷಿನ್ ನಲ್ಲಿ.." ಮಾರ್ಷಲ್ ಐಲೆಂಡ್ಸ್ ಗಣರಾಜ್ಯ. 2007ರ ಜನವರಿ 28ರಂದು ಮರುಸಂಪಾದಿಸಲಾಗಿದೆ.
- ↑ Artsdistricthonolulu.com
- ↑ "factfinder.census.gov". Archived from the original on 2010-12-02. Retrieved 2021-08-09.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ [74] ^ "ನಮ್ಮನ್ನು ಸಂಪರ್ಕಿಸಿ Archived 2015-02-08 ವೇಬ್ಯಾಕ್ ಮೆಷಿನ್ ನಲ್ಲಿ.." ಮೆಸಾ ಏರ್ ಗ್ರೂಪ್. 2010ರ ಫೆಬ್ರುವರಿ 23ರಂದು ಮರುಸಂಪಾದಿಸಲಾಯಿತು.
- ↑ [62] ^ "ಸಾಂಸ್ಥಿಕ ಮುಖ್ಯ ಕಛೇರಿ Archived 2012-08-27 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿಯನ್ ಏರ್ಲೈನ್ಸ್ . 2009ರ ಮೇ 20ರಂದು ಮರುಸಂಪಾದಿಸಲಾಗಿದೆ.
- ↑ "ಸಂಪರ್ಕ ಮಾಹಿತಿ Archived 2009-06-05 ವೇಬ್ಯಾಕ್ ಮೆಷಿನ್ ನಲ್ಲಿ.." ಐಲೆಂಡ್ ಏರ್ . 2009ರ ಮೇ 20ರಂದು ಮರುಸಂಪಾದಿಸಲಾಗಿದೆ.
- ↑ "ಸ್ಥಳಗಳು Archived 2009-05-22 ವೇಬ್ಯಾಕ್ ಮೆಷಿನ್ ನಲ್ಲಿ.." ಅಲೋಹಾ ಏರ್ ಕಾರ್ಗೊ . 2009ರ ಮೇ 21ರಂದು ಮರುಸಂಪಾದಿಸಲಾಗಿದೆ.
- ↑ ೨೫.೦ ೨೫.೧ ೨೫.೨ "ಹೊನೊಲುಲು ಸಿಡಿಪಿ, HI Archived 2008-02-18 ವೇಬ್ಯಾಕ್ ಮೆಷಿನ್ ನಲ್ಲಿ.." ಆಮೆರಿಕಾ ಸಂಯುಕ್ತ ಸಂಸ್ಥಾನದ ಜನಗಣತಿ ಬ್ಯೂರೋ 2009ರ ಮೇ 21ರಂದು ಮರುಸಂಪಾದಿಸಲಾಗಿದೆ.
- ↑ "ಅಲೊಹಾ ಏರ್ಲೈನ್ಸ್ ಇಂಕಾರ್ಪೊರೇಟೆಡ್" ಬ್ಯುಸಿನೆಸ್‌ವೀಕ್ . 2009ರ ಮೇ 21ರಂದು ಮರುಸಂಪಾದಿಸಲಾಗಿದೆ.
- ↑ "Hawaii Center for Advanced Transportation Technologies". High Technology Development Corporation. Archived from the original on 2009-07-12. Retrieved 2009-11-13.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ರಾಷ್ಟ್ರೀಯ ಹಾದುಹೋಗುವ ದತ್ತಾಂಶಸಂಪುಟ Archived 2010-07-20 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಮುಖ ಹಾದುಹೋಗುವ ನಗರಗಳು (2006)
- ↑ Pacific.bizjournals.com
- ↑ Arnett, Paul; Reardon, Dave (December 30, 2008). "Miami tackles Pro Bowl". Honolulu Star-Bulletin. Retrieved 2008-12-30.
- ↑ "ಹಲಾವಾ ಸಿಡಿಪಿ, ಹವಾಯಿ Archived 2010-12-02 ವೇಬ್ಯಾಕ್ ಮೆಷಿನ್ ನಲ್ಲಿ.." ಅಮೆರಿಕಾ ಸಂಯುಕ್ತ ಸಂಸ್ಥಾನದ ಜನಗಣತಿ ಮಂಡಳಿ. 2009ರ ಮೇ 21ರಂದು ಮರುಸಂಪಾದಿಸಲಾಗಿದೆ.
- ↑ "ಹವಾಯಿ ರಾಜ್ಯ ಗ್ರಂಥಾಲಯ Archived 2009-04-13 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 13ರಂದು ಮರುಸಂಪಾದಿಸಲಾಗಿದೆ.
- ↑ "ದೃಷ್ಟಿಹೀನರ ಮತ್ತು ಅಂಗವಿಕಲರಿಗಾಗಿ ಗ್ರಂಥಾಲಯ Archived 2009-05-28 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 13ರಂದು ಮರುಸಂಪಾದಿಸಲಾಗಿದೆ.
- ↑ "ಆಯಿನಾ ಹಯಿನಾ ಸಾರ್ವಜನಿಕ ಗ್ರಂಥಾಲಯ Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 13ರಂದು ಮರುಸಂಪಾದಿಸಲಾಗಿದೆ.
- ↑ "ಹವಾಯಿ ಕಯ್ ಗ್ರಂಥಾಲಯ Archived 2010-09-24 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
- ↑ "ಕಯ್ಮುಕಿ ಸಾರ್ವಜನಿಕ ಗ್ರಂಥಾಲಯ Archived 2010-09-24 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
- ↑ "ಕಲಿಹಿ-ಪಲಾಮಾ ಸಾರ್ವಜನಿಕ ಗ್ರಂಥಾಲಯ Archived 2010-09-24 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
- ↑ "ಮನೊವಾ ಸಾರ್ವಜನಿಕ ಗ್ರಂಥಾಲಯ Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
- ↑ "ಮೆಕುಲಿ ಸಾರ್ವಜನಿಕ ಗ್ರಂಥಾಲಯ Archived 2010-09-25 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
- ↑ "ಸಾಲ್ಟ್ ಲೇಕ್-ಮೊನಾಲುವಾ ಸಾರ್ವಜನಿಕ ಗ್ರಂಥಾಲಯ Archived 2010-09-24 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
- ↑ "ವೈಕಿಕಿ ಸಾರ್ವಜನಿಕ ಗ್ರಂಥಾಲಯ Archived 2009-11-30 ವೇಬ್ಯಾಕ್ ಮೆಷಿನ್ ನಲ್ಲಿ.." ಹವಾಯಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ. 2009ರ ಮೇ 22ರಂದು ಮರುಸಂಪಾದಿಸಲಾಗಿದೆ.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಹೊನೊಲುಲು ನಗರ & ಕೌಂಟಿ ಅಧಿಕೃತ ಜಾಲತಾಣ
- ಹವಾಯಿ ಪ್ರವಾಸಿಗರು ಮತ್ತು ಮಹಾಸಭಾ ಮಂಡಳಿ
- ಹೊನೊಲುಲುವಿನ ಜ್ಯಾಝ್ ಪ್ರದರ್ಶನಾ ಕಲೆಗಳ ಪಟ್ಟಿಗಳು Archived 2009-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ಹೊನೊಲುಲು ಮಾಹಿತಿ ಮತ್ತು ಪ್ರವಾಸ ಕೈಪಿಡಿ Archived 2021-01-21 ವೇಬ್ಯಾಕ್ ಮೆಷಿನ್ ನಲ್ಲಿ.