ವಾಹನವನ್ನು ಮುಂದೆ ಚಲಿಸುವಂತೆ ಮಾದಲು ಒಂದು ಅಥವಾ ಒಂದಕ್ಕಂತ ಹೆಚ್ಚು ಭಿನ್ನವಾದ ಶಕ್ತಿಯ ಮೂಲಗಳನ್ನು ಬಳಸುವ ವಾಹನಗಳನ್ನು ಹೈಬ್ರಿಡ್‌ ವಾಹನಗಳು ಎಂದು ಕರೆಯುತ್ತಾರೆ.[] ಬಹು ಸಾಮಾನ್ಯವಾಗಿ ಬಳಸಲ್ಪಡುವ ಹೈಬ್ರಿಡ್‌ ಎಲೆಕ್ಟ್ರಿಕ್‌ ವಾಹನಗಳು ಒಂದು ಆಂತರ್ ದಹನ ಯಂತ್ರವನ್ನು ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ಎಲೆಕ್ಟ್ರಿಕ್‌ ಮೋಟರ್‌ಗಳನ್ನು ಒಳಗೊಂಡಿರುತ್ತವೆ.

ಹೊಂಡಾ ಇನ್ಸೈಟ್ ಹೈಬ್ರಿಡ್‌
ಎನ್‌ವೈಪಿಡಿ ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್‌ನಿಂದ ಪ್ರಿಯ್ಸ್‌ ಉಪಯೋಗಿಸಲಾಗಿದೆ
Sustainable energy
Renewable energy
Anaerobic digestion
Hydroelectricity · Geothermal
Microgeneration · Solar
Tidal · Wave · Wind
Energy conservation
Cogeneration · Energy efficiency
Geothermal heat pump
Green building · Passive Solar
Sustainable transport
Plug-in hybrids · Electric vehicles

ಅಧಿಕಾರ

ಬದಲಾಯಿಸಿ

ಹೈಬ್ರಿಡ್‌ ವಾಹನಗಳು ಹೊಂದಿರುವ ಶಕ್ತಿಯ ಮೂಲಗಳು:

ವಾಹನದ ಪ್ರಕಾರಗಳು

ಬದಲಾಯಿಸಿ

ಎರಡು ಚಕ್ರಗಳ ಹಾಗೂ ಸೈಕಲ್ ರೀತಿಯ ವಾಹನಗಳು

ಬದಲಾಯಿಸಿ

ಮೊಪೆಡ್ ಮತ್ತು ವಿದ್ಯುತ್ ಚಾಲಿತ ಸೈಕಲ್ ಹೈಬ್ರಿಡ್ ವಾಹನಕ್ಕೆ ಅತ್ಯುತ್ತಮ ಉದಾಹರಣೆ. ಇವುಗಳಲ್ಲಿ ಆಂತರಿಕ ದಹನಕಾರಿ ಎಂಜಿನ್, ವಿದ್ಯುತ್ ಶಕ್ತಿ ಮೋಟಾರ್ ಮತ್ತು ಮಾನವ ಶಕ್ತಿ ಪ್ರಯೋಗದಿಂದ ಶಕ್ತಿ ಪೂರೈಸಲ್ಪಡುತ್ತದೆ. 1800 ರ ಇಸ್ವಿಯಲ್ಲಿ ಉಪಯೋಗಿಸಲ್ಪಟ್ಟ ಮೂಲ ಮಾದರಿಯ ಮೋಟೊರ್ ಸೈಕಲ್ ಗಳು ಇದೇ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದ್ದವು.

  • 1) ಪ್ಯಾರಲಾಲ್ ಹೈಬ್ರಿಡ್ ಸೈಕಲ್ಲಿ ನಲ್ಲಿ ಮಾನವ ಶಕ್ತಿ ಹಾಗೂ ಮೋಟರ್ ಶಕ್ತಿಗಳು ಯಾಂತ್ರಿಕವಾಗಿ ಮುಂದಿನ ಅಥವಾ ಹಿಂದಿನ ಚಕ್ರದಲ್ಲಿ ಒಂದುಗೂಡಿಸಲ್ಪಟ್ಟಿರುತ್ತವೆ. ಚಕ್ರದ ಮಧ್ಯ ಭಾಗದಲ್ಲಿ ರೋಲರ್ ಅಂತೆಯೇ ಮೋಟರ್ ಅಳವಡಿಸುವುದ ಅಥವಾ ಮತ್ತೊಂದು ಮೂಲದಿಂದ ಮೂಲದಿಂದ ಚಕ್ರಕ್ಕೆ ಶಕ್ತಿ ವಗಾಯಿಸುವುದು. ಮಾನವ ಶಕ್ತಿ ಹಾಗೂ ಮೋಟರ್ ಟಾರ್ಚ್ ಗಳು ಒಂದಕ್ಕೊಂದು ಸೇರಿರುತ್ತವೆ. ಸಾಮಾನ್ಯವಾಗಿ ಎಲ್ಲ ರೀತಿಯ ಮಾದರಿಗಳು ಇದೇ ರೀತಿಯಲ್ಲಿಯೇ ಮಾಡಲ್ಪಟ್ಟಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ಮೋಟರ್ ಅಳವಡಿಸಿದ ಸೈಕಲ್ ಅಥವಾ ಮೊಪೆಡ್ ನ್ನು ನೋಡಬಹುದು.[]
  • ಸೀರೀಸ್ ಹೈಬ್ರಿಡ್ ಸೈಕಲ್ (SH) ನಲ್ಲಿ ಸವಾರ ಜನರೇಟರಿಗೆ ಶಕ್ತಿ ತುಂಬುತ್ತಾನೆ. ಇದು ವಿದ್ಯುತ್ ಆಗಿ ಬದಲಾಗುತ್ತದೆ ಮತ್ತು ಇದನ್ನು ನೇರವಾಗಿ ಚೈನ್ ಇಲ್ಲದ ಸೈಕಲ್ಲಿಗೆ ಕೊಡುವ ಮೊಟರ್ ಗೆ ಕೊಡಬಹುದು ಅಲ್ಲದೆ, ಬ್ಯಾಟರಿಯನ್ನು ಚಾರ್ಜ್ ಮಾಡಲು ಕೂಡ ಉಪಯೋಗಿಸಬಹುದು. ಮೊಟರ್ ಬ್ಯಾಟರಿಯಿಂದ ಶಕ್ತಿ ಪಡೆಯುತ್ತದೆ ಮತ್ತು ನಂತರ ಯಾಂತ್ರಕ್ಕೆ ಸಂಪೂರ್ಣವಾಗಿ ಪೂರೈಸುವಂತಿರಬೇಕು. ಏಕೆಂದರೆ ಇಲ್ಲಿ ಪೆಡಲ್ಲಿನಿಂದ ಯಾವುದೇ ಶಕ್ತಿಯ ಲಭ್ಯತೆ ಇರುವುದಿಲ್ಲ. ಸೀರೀಸ್ ಹೈಬ್ರಿಡ್ ಸೈಕಲ್ ಗಳು ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಏಕೆಂದರೆ ಇವುಗಳ ತಾಂತ್ರಿಕತೆ ಹಾಗೂ ತಯಾರಿಕಾ ವಿಧಾನ ಅತ್ಯಂತ ಸುಲಭವಾಗಿದೆ.[]
ಮೊದಲ ಮಾದರಿಯ ಮತ್ತು ಸೀರೀಸ್ ಸೈಕಲ್ ಗಳನ್ನು ಆಗಸ್ಟಸ್ ಕಿಂಜಲ್ ಎಂಬ ವ್ಯಕ್ತಿ 1975 ರಲ್ಲಿ ತಯಾರಿಸಿದನು(ಅಮೇರಿಕಾ ಪೇಟೆಂಟ್ 3,884,317). 1994 ರಲ್ಲಿ ಬರ್ನಿ ಮೆಕ್ ಡೊನಾಲ್ಡ್ ಎಂಬಾತ ವಿದ್ಯುತ್ ಪೂರೈಸಲು ಸಾಧ್ಯವಿದ್ದು, ಸೈಕಲ್ ನಿಂತಾಗಲೂ ಬ್ರೇಕ್ ಮತ್ತು ಪೆಡಲ್ ಮಾಡುವುದರಿಂದ ಶಕ್ತಿ ಹುಟ್ಟಿಸಲು ಸಾಧ್ಯವಿರುವಂತಹ ಹಗುರವಾದ ಇಲೆಕ್ಟ್ರಲೈಟ್ ಸೀರೀಸ್ ಹೈಬ್ರಿಡ್ ವಾಹನವೊಂದನ್ನು ಕಂಡು ಹಿಡಿಯಲು ಸಂಕಲ್ಪಿಸಿದ. 1995 ರಲ್ಲಿ ಡಿಪ್ಲೋಮಾ ಮಾಡುತ್ತಿದ್ದ ಥೋಮಸ್ ಮುಲ್ಲರ್ ಎಂಬಾತ ತನ್ನ ಡಿಪ್ಲೋಮಾ ಥಿಸೀಸ್ ನಲ್ಲಿ ಫರ್ಹಾಡ್ ಮಿಟ್ ಇಲೆಕ್ಟ್ರೋಮಾಕ್ಟೆಟಿಸ್ಟೆಮ್ ಎಂಟ್ರಿಬ್ (Fahrrad mit elektromagnetischem Antrieb) ಎಂಬ ಡಿಸೈನ್ ತಯಾರಿಸಿ, ಅಂತಹ ವಾಹನವನ್ನು ತಯಾರಿಸಿದ. 1996 ರಲ್ಲಿ ಬರ್ನೆ ವಿಶ್ವ ವಿದ್ಯಾಲಯದ ಜರ್ಗ ಬ್ಲಾಟರ್ ಮತ್ತು ಆಂಡ್ರ್ಯೂಸ್ ಫುಚಸ್ ಎಂಬವರು ಸೀರೀಸ್ ಹೈಬ್ರಿಡ್ ಸೈಕಲನ್ನು ತಯಾರಿಸಿದರು. ಮತ್ತು 1998 ರಲ್ಲಿ ಮೂರು ಗಾಲಿಯ ಸೈಕಲ್ ತಯಾರಿಸಿದರು (ಯೂರೋಪಿಯನ್ ಪೇಟೆಂಟ್ EP 1165188). 1999 ರಲ್ಲಿ ಹರಾಲ್ಡ್ ಕುಚ್ಕೆ ಎಂಬಾತ ಆಕ್ಟಿವ್ ಸೈಕಲನ್ನು ಚಿತ್ರಿಸಿದ. ತುಲನೆ ಮಾಡಾಗದ ಹಾಗೂ ಇಲೆಕ್ಟ್ರೋನಿಕ್ ಹೊಂದಿರದ ಸೈಕಲನ್ನು ತಯಾರಿಸುವುದು ಆತನ ಉದ್ದೇಶವಾಗಿತ್ತು. 2005 ರ ವರೆಗೆ ಫುಚಸ್ ಹಾಗೂ ಆತನ ಸಹೋದ್ಯೋಗಿಗಳು ಸೀರೀಸ್ ಹೈಬ್ರಿಡ್ ಸೈಕಲ್‌ನ ಮೂಲ ಮಾದರಿಯ ಅನೇಕ ಮೂರು ಗಾಲಿಯ ಹಾಗೂ ನಾಲ್ಕು ಗಾಲಿಯ ಸೈಕಲ್ ಗಳನ್ನು ತಯಾರಿಸಿದರು. [೩] Archived 2013-06-02 ವೇಬ್ಯಾಕ್ ಮೆಷಿನ್ ನಲ್ಲಿ.

ಭಾರದ ವಾಹನಗಳು

ಬದಲಾಯಿಸಿ

ಹೈಬ್ರಿಡ್ ಶಕ್ತಿಯ ಬೆಳವಣಿಗೆಗಳು ಡೀಸೆಲ್-ವಿದ್ಯುತ್ ಅಥವಾ ಟರ್ಬೋ-ವಿದ್ಯುತ್ ವಿದ್ಯುತ್ ರೇಲ್ವೆ, ಬಸ್, ಭಾರಿ ಗಾತ್ರದ ಲಾರಿಗಳು, ದೃವ ಚಾಲಿತ ಯಂತ್ರಗಳು ಹಾಗೂ ಹಡಗುಗಳಲ್ಲಿ ಉಪಯೋಗಿಸಲ್ಪಡುತ್ತಿವೆ. ಸಾಮಾನ್ಯವಾಗಿ ಡೀಸೆಲ್ ನಂತಹ ಉಷ್ಣ ಎಂಜಿನ್ ಗಳು ಒಂದಕ್ಕಿಂತ ಹೆಚ್ಚು ವಿದ್ಯುತ್ ಅಥವಾ ದೃವಚಾಲಿತ ಮೋಟರ್ ಗಳಾದ ವಿದ್ಯುತ್ ಜನರೇಟರ್ ಅಥವಾ ದೃವಚಾಲಿತ ಪಂಪ್ ಗಳನ್ನು ಚಲಾಯಿಸುತ್ತವೆ. ಎರಡು ರೀತಿಯ ಚಾಲನೆಗಳು ಅಗತ್ಯವಿದ್ದಲ್ಲಿ (ಉದಾ. ಗಾಲಿಗಳು) ಯಂತ್ರಿಕವಾಗಿ ಶಕ್ತಿ ಪೂರೈಸುವುದಕ್ಕಿಂತ ವೈಯರ್ ಅಥವಾ ಪೈಪ್ ಮೂಲಕ ಶಕ್ತಿ ಪೂರೈಸಿದರೆ ಹೆಚ್ಚಿನ ಲಾಭವಿದೆ. ವಿದ್ಯುತ್ ಅಥವಾ ದೃವ ಚಾಲಿತ ಮೋಟರ್ ಗಳಿಗೆ ಶಕ್ತಿ ಪೂರೈಸಲು ಡೀಸೆಲ್ ಮೂಲಕ ವಿದ್ಯುತ್ ತಯಾರಿಸಲು ಎರಡು ರೀತಿಯ ಪರಿವರ್ತನೆ ಮಾಡುವಾಗ ಶಕ್ತಿಯ ಅಪವ್ಯಯವಾಗುತ್ತದೆ. ಭಾರಿ ವಾಹನಗಳನ್ನು ಉಪಯೋಗಿಸುವಾಗ ಭಾರ ಹೆಚ್ಚಿದಂತೆ ಶಕ್ತಿಯ ಪರಿವರ್ತನೆಯು ಹೆಚ್ಚಿನ ನಷ್ಟ ಅನುಭವಿಸುತ್ತವೆ. ಪರಮಾಣು ಚಾಲಿತವಲ್ಲದ ಸಬ್ ಮೆರೀನ್ ಬಿಟ್ಟು ಪ್ರಸ್ತುತ ಇರುವ ಹೆಚ್ಚಿನ ಭಾರೀ ವಾಹನಗಳಲ್ಲಿ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಉದಾ. ಬ್ಯಾಟರಿಗಳು ಮತ್ತು ದೃವಚಾಲಿತ ಶೇಖರಣೆಗಳು. ಇವು ಬದಲಾಗುತ್ತಿರುತ್ತವೆ.

ರೇಲ್ವೇ ಸಾಗಣೆ

ಬದಲಾಯಿಸಿ

ಯುರೋಪ್‌
ಹೈಬ್ರಿಡ್ ನಮೂನೆಗೆ ಉದಾಹರಣೆ ಎಂದರೆ Autorail à grande capacité (ಎಜಿಸಿ ಅಥವಾ ಭಾರಿ ಸಾಮರ್ಥ್ಯದ ರೈಲುಕಾರುಗಳು). ಇದನ್ನು ಕೆನಡಾದ ಬೊಂಬಾರ್ಡಿಯರ್ ಕಂಪನಿಯು ಫ್ರಾನ್ಸ್ ನಲ್ಲಿ ಸೇವೆ ಸಲ್ಲಿಸಲು ತಯಾರಿಸಿತು. ಇದು ಎರಡು ಪ್ರಕಾರದ (ಡೀಸೆಲ್ ಮತ್ತು ವಿದ್ಯುತ್ ಮೋಟರ್ಸ್) ಮತ್ತು ಎರಡು ವೋಲ್ಟ್ ಸಾಮರ್ಥ್ಯ (1,500 ಮತ್ತು 25,000 v) ಹೊಂದಿದ್ದು, ಇದನ್ನು ಅನೇಕ ವಿಧದ ರೇಲ್ವೆ ಪದ್ಧತಿಯಲ್ಲಿ ಉಪಯೋಗಿಸಲು ಒಪ್ಪಿಗೆ ನೀಡಲಾಗಿದೆ.[]

ಚೀನಾ
ಮೊದಲ ಹೈಬ್ರಿಡ್ ಮೂಲರೂಪದ ರೈಲು ಎಂಜಿನ್ 1999 ರಲ್ಲಿ ಚೀನಾದ ರೇಲ್ವೆ ಸಂಶೋಧನಾ ಕೇಂದ್ರವಾದ ಮಾತ್ರಾಯಿನಲ್ಲಿ ಚಿತ್ರಿಸಲ್ಪಟ್ಟಿತು ಮತ್ತು 2000 ನೇ ಇಸ್ವಿಯಲ್ಲಿ ಇದರ ಮಾದರಿ ತಯಾರಾಯಿತು. ಅದೊಂದು ಜಿ 12 ರೇಲ್ವೆ ಎಂಜಿನ್ ಆಗಿತ್ತು. ಇದನ್ನು 200 ಕಿ.ವ್ಯಾ. ಸಾಮರ್ಥ್ಯದ ಡೀಸೆಲ್ ಜನರೇಟರ್ ಮತ್ತು ಬ್ಯಾಟರಿ ಹಾಗೂ ಮೇಲಕ್ಕೆ ಎಳೆಯಬಲ್ಲಂತಹ 4 ಎಸಿ ಮೋಟರ್ ಸೇರಿಸಿ ಹೈಬ್ರಿಡ್ ಆಗಿ ಪರಿವರ್ತಿಸಲಾಯಿತು. ಮತ್ತು ಇದನ್ನು ಮೇಲ್ಮುಖವಾಗಿ ಎಳೆಯುವ ಸಾಮರ್ಥ್ಯ ಹೊಂದಿರುವ ಡಿಸಿ ಟ್ರಾಕ್ಷನ್ ಮೋಟಾರಿನೊಳಗೆ ಹಿಮ್ಮುಖವಾಗಿ ಚಲಿಸುವಂತೆ ಇಡಲಾಯಿತು.

ಜಪಾನ್‌
ಸಾಕಷ್ಟು ಶಕ್ತಿ ಸಂಗ್ರಹ ಹಾಗೂ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಮೊದಲ ಮೂಲರೂಪದ ಹೈಬ್ರಿಡ್ ರೈಲ್ವೆ ಎಂಜಿನ್ ಜಪಾನ್ ನಲ್ಲಿ ಕಿಹಾ ಇ200 ಎಂಬ ಹೆಸರಿನಲ್ಲಿ ಪರಿಚಯಿಸಲ್ಪಟ್ಟಿತು. ಇದು ಲಿಥಿಯಮ್ ಅಯಾನ್ ಬ್ಯಾಟರಿಗಳನ್ನು ಉಪಯೋಗಿಸಿಕೊಳ್ಳುತ್ತದೆ ಮತ್ತು ವಾಹನದ ಕಮಾನಿನ ಮೇಲೆ ಇಡಲ್ಪಟ್ಟು ಶಕ್ತಿಯನ್ನು ಪಡೆಯುತ್ತದೆ.[]

ಉತ್ತರ ಅಮೇರಿಕಾ
2007 ರಲ್ಲಿ ಅಮೇರಿಕಾದಲ್ಲಿ ಸಾಮಾನ್ಯ ವಿದ್ಯುತ್ ಉಪಯೋಗಿಸಿ ಮೂಲರೂಪದ ರೇಲ್ವೆ ಹಳಿಯ ಎಂಜಿನ್‌ನ್ನು ಜನರಲ್ ಎಲೆಕ್ಟ್ರಿಕ್ ಅವರ ಇಕೋಮಾಜಿನೇಶನ್ (Ecomagination) ತಂತ್ರ ಉಪಯೋಗಿಸಿ ಆರಂಭಿಸಲಾಯಿತು. ರೇಲ್ವೆಗಳು ಗುಡ್ಡದಿಂದ ಕೆಳಗಿಳಿಯುವಾಗ ಅಥವಾಬ್ರೇಕ್ ಹಾಕುವಾಗ ಹಾಳಾಗುವ ಶಕ್ತಿಯನ್ನು ಸೆರೆಹಿಡಿಯಲು ಮತ್ತು ಸಂಗ್ರಹಿಸಲು ದೊಡ್ಡದಾದ ಸೋಡಿಯಮ್ ನಿಕ್ಕೆಲ್ ಕ್ಲೋರೈಡ್ (Na-NiCl2) ಬ್ಯಾಟರಿ ಉಪಯೋಗಿಸುತ್ತಾರೆ. ಅವರು ಈ ಪದ್ಧತಿಯಿಂದ ಕನಿಷ್ಠ ಶೇ. 10 ರಷ್ಟು ಕಡಿಮೆ ಇಂಧನ ಉಪಯೋಗವಾಗುವುದನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಅವರು ಪ್ರತಿವರ್ಷ 2 ಬಿಲಿಯನ್ ಡಾಲರ್ ನಷ್ಟು ಹಣವನ್ನು ಹೈಬ್ರಿಡ್ ಸಂಶೋಧನೆಗಾಗಿಯೇ ವೆಚ್ಛ ಮಾಡುತ್ತಿದ್ದಾರೆ.[]

ಡೀಸೆಲ್ ವಿದ್ಯುತ್ ರೇಲ್ವೆ ಎಂಜಿನ್ ನಮೂನೆಯಲ್ಲಿಯೇ ಸ್ವಲ್ಪ ಬೇರೆ ತೆರನಾದ ಎಂಜಿನ್ ನನ್ನು (ಅಂದರೆ ಹಸಿರು ಆಡು ಹಾಗೂ ಹಸಿರು ಆಡಿನ ಮರಿಗೆ ಇರುವ ವ್ಯತ್ಯಾಸದಷ್ಟು) ಕೆನಡಾದ ರೇಲ್ವೆಪವರ್ ಟೆಕ್ನಾಲೊಜೀಸ್ ತಯಾರಿಸಿತು. ಅವರು ಇದಕ್ಕಾಗಿ ಭಾರಿ ಸಾಮರ್ಥ್ಯದ ದೀರ್ಘ ಬಾಳಿಕೆಯ (10 ವರ್ಷ) ರೀಚಾರ್ಜ್ ಮಾಡಬಲ್ಲ ಎಸಿಡ್ ಸೀಸದ ಬ್ಯಾಟರಿ ಹಾಗೂ 1000 ದಿಂದ 2000 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಮೋಟಾರ್ ಗಳನ್ನು ಪ್ರಾಥಮಿಕ ಪ್ರೇರಕ ಮೂಲವಾಗಿ ಮತ್ತು ಉತ್ತಮವಾಗಿ ದಹನವಾಗುವಂತಹ ಡೀಸೆಲ್ ಜನರೇಟರ್ (160 ಎಚ್.ಪಿ. ಸಾಮರ್ಥ್ಯದ) ನ್ನು ಬ್ಯಾಟರಿ ರೀಚಾರ್ಜ್ ಮಾಡಲು ಉಪಯೋಗಿಸಿದರು. ಈ ರೀತಿಯ ರೇಲ್ವೆ ಎಂಜಿನ್ ಗಳಲ್ಲಿ ಶಕ್ತಿ ಅಥವಾ ಇಂಧನವು ಅನಗತ್ಯ ಸಂದರ್ಭದಲ್ಲಿ ವ್ಯರ್ಥವಾಗುವುದಿಲ್ಲ. ಆದರೆ ಇದು ಬ್ರೇಕ್ ಹಾಕುವ ಸಂದರ್ಭದಲ್ಲಿ ಉಪಯೋಗವಾಗುವ ಶಕ್ತಿಯನ್ನು ಪುನಃ ಬಳಸಿಕೊಳ್ಳಲು ಸಾಧ್ಯವೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಇದರ ಸಿದ್ಧಾಂತದ ಪ್ರಕಾರ ಈ ಪದ್ಧತಿಯನ್ನು ತುಂಬ ಸುಲಭವಾಗಿ ಉಪಯೋಗಿಸಬಹುದು.

ಈ ಎಂಜಿನ್ ನಮೂನೆಗಳು ಮೇಲ್ಮುಖ ಒತ್ತಡ ಹಾಕಬೇಕಾದ ಸಂದರ್ಭದಲ್ಲಿ ಹೆಚ್ಚಿನ ಭಾರವನ್ನು ನಿರೀಕ್ಷಿಸುತ್ತವೆ, ಆದರೂ ಇಲ್ಲಿ ಬ್ಯಾಟರಿಯ ಭಾರ ನಿರ್ಲಕ್ಷಿತವಾಗಿರುತ್ತದೆ. ಇದರ ಜೊತೆಗೆ ಡೀಸೆಲ್ ಜನರೇಟರ್ ಹಾಗೂ ಬ್ಯಾಟರಿಗಳು ಸಾಮಾನ್ಯವಾಗಿ ರೇಲ್ವೆ ಎಂಜಿನ್ ನ ಹೊರಭಾಗದ ಅಂಗಳದಲ್ಲಿ ಹಣದ ಅಪವ್ಯಯ ತಡೆಯುವ ಉದ್ದೇಶದಿಂದ ಅಳವಡಿಸಲಾಗಿರುತ್ತದೆ. ಇದರಲ್ಲಿನ ಶಕ್ತಿ ಇರುವ ಎಂಜಿನ್ ಹಾಗೂ ಗೇರ್ ಗಳನ್ನು ಪುನಃ ತಯಾರು ಮಾಡಿ ಪುನಃ ಉಪಯೋಗಿಸಲಾಗುತ್ತದೆ. ಸ್ವಿಚ್ಛಿಂಗ್ ಯಾರ್ಡ್ ನಮೂನೆಯ ಎಂಜಿನ್ ಗಳಿಂದ ಶೇ. 40 ರಿಂದ 60 ರಷ್ಟು ಡೀಸೆಲ್ ಹಾಗೂ ಶೇ. 80 ರಷ್ಟು ಮಾಲಿನ್ಯವನ್ನು ತಡೆಯಬಹುದಾಗಿದೆ. ಹೈಬ್ರಿಡ್ ಕಾರುಗಳು ಕೂಡ ಇದೇ ರೀತಿಯ ಲಾಭ ಹೊಂದಿದ್ದು, ಪದೇ ಪದೆ ನಡೆಯುವ ಚಾಲನೆ ಹಾಗೂ ನಿಲ್ಲಿಸುವ ಸಮಯದಲ್ಲಾಗುವ ವ್ಯರ್ಥವನ್ನು ತಡೆಯುತ್ತದೆ.[] ಇಂತಹ ಗ್ರೀನ್ ಗೋಟ್ ರೇಲ್ವೆ ಎಂಜಿನ್ ಗಳನ್ನು ಕೆನಡಿಯನ್ ಪೆಸಿಫಿಕ್ ರೇಲ್ವೆ, ಬಿಎನ್ಎಸ್ಎಫ್ ರೇಲ್ವೆ, ಕನ್ಸಾಸ್ ಸಿಟಿ ಸೌಥರ್ನ್ ರೇಲ್ವೆ ಹಾಗೂ ಯೂನಿಯನ್ ಪೆಸಿಫಿಕ್ ರೇಲ್ ರೋಡ್ ಸೇರಿದಂತೆ ಇತರರು ಖರೀಸಿದ್ದಾರೆ.

ಕ್ರೇನ್‌ಗಳು

ಬದಲಾಯಿಸಿ

ರೇಲ್ ಪವರ್ ಟೆಕ್ನೊಲೊಜೀಸ್ ಕಾರ್ಪ್. ಅಭಿಯಂತರರು ಟಿಎಸ್ಐ (Terminal Systems Inc) ಜೊತೆ ಬ್ರಿಟೀಷ್ ಕೊಲಂಬಿಯಾದ ವ್ಯಾನ್ಕೊವರ್ ನಲ್ಲಿ ಕೆಲಸ ಮಾಡುತ್ತಿದ್ದು, ರಬ್ಬರ್ ಟೈರ್ಡ್ ಗ್ಯಾಂಟ್ರಿ ಕ್ರೇನ್‌ಗಳಲ್ಲಿನ ಬಳಕೆಗಾಗಿ ಹೈಬ್ರಿಡ್ ಡೀಸೆಲ್ ವಿದ್ಯುತ್ ಶಕ್ತಿ ಘಟಕದ ಜೊತೆಗೆ ಬ್ಯಾಟರಿ ಸಂಗ್ರಹ ಘಟಕವನ್ನು ಪರೀಕ್ಷಿಸುತ್ತಿದ್ದಾರೆ. ರಬ್ಬರ್ ಟಯರ್ ಗ್ಯಾಂಟ್ರಿ (RTG) ಕ್ರೇನ್ ಗಾಗಿ ಉಪಯೋಗಿಸುವುದು ಅವರ ಉದ್ದೇಶ. ಆರ್.ಟಿ.ಜಿ. ಕ್ರೇನ್ ಗಳನ್ನು ಕಂಟೇನರ್ ಗಳಿಂದ ಹಡಗಿನಿಂದ ಸಾಮಾನು ಇಳಿಸಲು ಹಾಗೂ ತುಂಬಿಸಲು, ರೇಲ್ವೆ ಅಥವಾ ಟ್ರಕ್ ಗಳಿಗೆ ತುಂಬಿಸಿ ಇಳಿಸಲು ಉಪಯೋಗಿಸುತ್ತಾರೆ. ಕಂಟೇನರ್ ಗಳನ್ನು ಎತ್ತಿದಾಗ ಉಪಯೋಗಿಸಲ್ಪಡುವ ಶಕ್ತಿಗಳು ಕಂಟೇನರ್ ಇಳಿಸಿದಾಗ ಪುನಃ ಸಂಪಾದಿಸಿಕೊಳ್ಳಬಹುದು. ಡೀಸೆಲ್ ಇಂಧನ ಮತ್ತು ಹೊರಸೂಸುವಿಕೆಯು ಶೇ. 50 ರಿಂದ 70 ರಷ್ಟು ಕಡಿಮೆಯಾಗಬಹುದು ಎಂದು ರೇಲ್ ಪವರ್ ಅಭಿಯಂತರರು ತಿಳಿಸಿದ್ದಾರೆ.[] ಇದರಂತೆ ಮೊದಲ ಪದ್ಧತಿಯು ನಿರೀಕ್ಷೆಯಂತೆ 2007 ರಲ್ಲಿ ಉಪಯೋಗಿಸಲ್ಪಟ್ಟಿತು.[]

ರಸ್ತೆ ಮೂಲಕ ಸಾಗಣೆ, ವ್ಯಾವಹಾರಿಕ ವಾಹನಗಳು

ಬದಲಾಯಿಸಿ
 
ಜಿಎಮ್ 2008ಕ್ಕೆ ಅದರ ಜಿಎಮ್‍ಸಿ ಯುಕೊನ್ (ಚಿತ್ರ) ಮತ್ತು ಶೆವ್ರೊಲೆಟ್ ತಾಹೊ ಎಸ್‌ಯುವಿಗಳ ಪೂರ್ಣ ಪ್ರಮಾಣದ ಹೈಬ್ರಿಡ್‌ ರೂಪಾಂತರವನ್ನು ಬಿಡುಗಡೆ ಮಾಡಿದವು

ಮೊದಲ ಹೈಬ್ರಿಡ್ ಪದ್ಧತಿಗಳು ಟ್ರಕ್ ಹಾಗೂ ಹೈವೇಯಲ್ಲಿ ಸಂಚರಿಸುವ ಭಾರಿ ವಾಹನಗಳಿಗಾಗಿ ಸಂಶೋಧಿಸಲ್ಪಟ್ಟಿತು. ಕೆಲವು ಕೆಲಸಗಳೊಂದಿಗೆ ಟ್ರಕ್ ಹಾಗೂ ಬಸ್‌ಗಳಿಗೂ ಉಪಯೋಗಿಸಲು ಆರಂಭಿಸಲಾಯಿತು. ಮುಖ್ಯವಾಗಿ ದೊರಕುವ ಚಿಕ್ಕ ಗಾತ್ರದ ವಾಹನಗಳಿಗೆ ಇಂಧನ ಉಳಿತಾಯಕ್ಕಾಗಿ ಹೈಬ್ರಿಡ್ ಪದ್ಧತಿ ಇನ್ನೂ ತಯಾರಾಗಬೇಕಿದೆ. ಆದರೆ, ದೃವೀಕೃತ ಇಂಧನದ ಬೆಲೆಯ ಏರುವಿಕೆ ನಿರಂತರವಾಗಿದ್ದು, 1995 ರಲ್ಲಿ ತುದಿಯ ಸಂದರ್ಭ ಮುಟ್ಟಬಹುದು. Expression error: Unexpected < operator. ತಾಂತ್ರಿಕತೆ ಹಾಗೂ ಸಣ್ಣ ಪ್ರಮಾಣದ ಬ್ಯಾಟರಿಯ ಬೆಲೆ ಹಾಗೂ ಸಾಮರ್ಥ್ಯದಲ್ಲಿ ಉಂಟಾದ ಮುನ್ನಡೆಗಳು ಹೈಬ್ರಿಡ್ ಕಾರ್ ಕೈಗಾರಿಕೆಗಳಲ್ಲಿ ಟ್ರಕ್ ನಲ್ಲಿ ಉಪಯೋಗಿಸುವ ಹೈಬ್ರಿಡ್ ಸಂಸ್ಕಾರಗೊಳಿಸಿ ಚಿಕ್ಕ ಹೈಬ್ರಿಡ್ ಟ್ರಕ್ ಹಾಗೂ ಎಸ್.ಯು.ವಿ. ಗಳಲ್ಲಿ ಉಪಯೋಗಿಸುವಂತೆ ಟೋಯೋಟಾ, ಫೋರ್ಡ್, ಜಿಎಂ ಮತ್ತು ಇತರ ವಾಹನಗಳಲ್ಲಿ ಉಪಯೋಗಿಸಲಾಯಿತು. ಕೆನ್ ವರ್ಥ್ ಟ್ರಕ್ ಕಂಪನಿಯು ಈಚೆಗೆ ಕೆನ್ ವರ್ಥ್ ಟಿ270 ಕ್ಲಾಸ್ 6 ಎಂಬ ಹೈಬ್ರಿಡ್-ವಿದ್ಯುತ್ ಟ್ರಕ್ ನ್ನು ಪರಿಚಯಿಸಿತು. ಇದು ಹೆಚ್ಚಾಗಿ ನಗರ ಪ್ರದೇಶದ ಉಪಯೋಗಕ್ಕೆ ಮಾತ್ರ ಸಹಕಾರಿಯಾಗಿತ್ತು.[೧೦][೧೧] ಫೆಡ್‌ಎಕ್ಸ್ ಮತ್ತು ಇತರರು ಈಗ ಹೈಬ್ರಿಡ್ ಡೆಲಿವರಿ ನಮೂನೆಯ ವಾಹನಗಳಲ್ಲಿ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಹೈಬ್ರಿಡ್ ತಾಂತ್ರಿಕತೆಯ ವೆಚ್ಚ ಕಡಿಮೆ ಇರುವಲ್ಲಿ ಉಪಯೋಗಿಸಲು ಬಂಡವಾಳ ಹೂಡತೊಡಗಿದ್ದಾರೆ.‍[೧೨]

ಸೈನ್ಯದ ರಸ್ತೆ ಬಿಟ್ಟು ಬೇರೆಡೆ ಚಲಿಸುವ ವಾಹನಗಳು

ಬದಲಾಯಿಸಿ

1985 ರ ವರೆಗೆ ಅಮೇರಿಕಾದ ಸೈನ್ಯವು ಸೀರಿಯಲ್ ಹೈಬ್ರಿಡ್ ಹಮ್ವೀಸ್ ಗಳನ್ನು ಉಪಯೋಗಿಸುತ್ತಿತ್ತು. ಮತ್ತು ಅದನ್ನು ಶೀಘ್ರವಾದ ವೇಗದ ಸಾಗಣೆಗಾಗಿ ಉಪಯೋಗಿಸಲಾಗುತ್ತಿತ್ತು. ಇದು ಇಂಧನ ಉಳಿತಾಯದ/ಶಬ್ದರಹಿತ ಕಾರ್ಯದ, ಕಡಿಮೆ ಉಷ್ಣಕ್ಕಾಗಿ ಇದನ್ನು ಉಪಯೋಗಿಸಲಾಗುತ್ತಿತ್ತು.

ಹಡಗುಗಳು

ಬದಲಾಯಿಸಿ

ನೌಕಾಪಡೆಯ ದೊಡ್ಡ ಹಡಗು ಹಾಗೂ ಆವಿ ಎಂಜಿನ್ ಹಡಗುಗಳು ಹಿಂದಿನ ಪದ್ಧತಿಯ ಹೈಬ್ರಿಡ್ ವಾಹನಗಳಾಗಿದ್ದವು. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಡೀಸೆಲ್-ವಿದ್ಯುತ್ ಸಬ್ ಮೆರೀನ್.

ಹೊಸ ಮುಂದೂಡುವ ಪದ್ಧತಿಯ ದೊಡ್ಡ ಟೋವಿಂಗ್ ಕೈಟ್ ಹೊಂದಿರುವ ಹೈಬ್ರಿಡ್ ಹಡಗುಗಳು ಸ್ಕೈಸೇಲ್ಸ್ ನಂತಹ ಕಂಪನಿಗಳಿಂದ ತಯಾರಿಸಲ್ಪಟ್ಟಿವೆ. ಟೋವಿಂಗ್ ಕೈಟ್ ಗಳು ಕೆಲವೊಮ್ಮೆ ಹಡಗಿನ ಘಟಸ್ಥಂಬಕ್ಕಿಂತಲೂ ಎತ್ತರಕ್ಕೆ ಶಕ್ತಿಯುತವಾದ ಗಾಳಿಯನ್ನು ಪಡೆದು ಹಾರಬಲ್ಲವು.

ವಿಮಾನಗಳಲ್ಲಿ

ಬದಲಾಯಿಸಿ

ಡೆಲ್ಟಾ ಏರ್ ಲೈನ್ಸ್ ಕಂಪನಿಯು ತನ್ನ ಬೋಯಿಂಗ್ 737 ಎನ್.ಜಿಎಸ್ ವಿಮಾನವನ್ನು ವ್ಹೀಲ್ ಟಗ್ ಇಟ್ಟು ನೆಲದ ಮೇಲೆ ವೇಗವಾಗಿ ನುಗ್ಗುವಂತೆ ಹೈಬ್ರಿಡ್ ಆಗಿ ಪರಿವರ್ತಿಸಲು 2010 ರಲ್ಲಿ ಪ್ರಯತ್ನಿಸುತ್ತಿದೆ.[೧೩][೧೪]. ಟರ್ಬೈನ್ ಮೂಲಕ ಶಕ್ತಿ ಪಡೆಯುವ ಎಪಿಯು ಉಪಯೋಗಿಸಿ ನೆಲದ ಮೇಲೆ ಇಳಿಯುವ ಖೋರಸ್ ಮೋಟರ್ ಗೆ ಶಕ್ತಿ ತುಂಬುವ ಉದ್ದೇಶದಿಂದ ಎಂಜಿನ್ ನಿಲ್ಲಲು, ಏಳಲು, ಹಾರಲು ಉಪಯೋಗವಾಗುವಂತೆ ಡೆಲ್ಟಾ ಏರ್ ಲೈನ್ಸ್ ಕಂಪನಿಯು ಹೈಬ್ರಿಡ್ ಜೋಡಣೆಯನ್ನು ತಯಾರಿಸುತ್ತಿದೆ.

ಬೋಯಿಂಗ್ 737-800

ಬೋಯಿಂಗ್ ಇಂಧನ ಕೋಶ ಪ್ರತಿಪಾದಿಸುವ ವಿಮಾನವು ಪ್ರೊಟೊನ್ ಎಕ್ಸ್ ಚೇಂಜ್ ಮೆಂಬ್ರಾನ್ (Airplane has a Proton Exchange Membrane (PEM)) ಇಂಧನ ಕೋಶ, ಲಿಥಿಯಂ ಐಯಾನ್ ಬ್ಯಾಟರಿ ಹೈಬ್ರಿಡ್ ಪದ್ಧತಿಯನ್ನು ಹೊಂದಿದ್ದು, ವಿದ್ಯುತ್ ಮೋಟರ್ ಗೆ ಶಕ್ತಿ ತುಂಬುತ್ತದೆ. ಇದು ಸಾಮಾನ್ಯವಾದ ಪ್ರೊಪೆಲ್ಲರ್ ಹೊಂದಿದೆ. ಇಂಧನ ಕೋಶವು ಎಲ್ಲ ಶಕ್ತಿಯನ್ನು ವಿಮಾನದ ಕ್ರ್ಯೂಸ್ ಮಜಲಿಗೆ ಪೂರೈಸುತ್ತದೆ.

 ವಿಮಾನವು ನೆಲದ ಮೇಲೆ ಹೋಗುವಾಗ ಹಾಗೂ ಮೇಲೆ ಹಾರುವಾಗ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಇದನ್ನು ಕಡಿಮೆ ಭಾರದ ಲಿಥಿಯಂ ಅಯಾನ್ ಬ್ಯಾಟರಿಯು ಪೂರೈಸುತ್ತದೆ.

ಪ್ರದರ್ಶಕ ವಿಮಾನವು ಒಂದು ಡಿಮೋನಾ ಮೋಟರ್ ಗ್ಲೈಡರ್ ಆಗಿದೆ. ಇದನ್ನು ಡೈಮಂಡ್ ಏರ್ ಕ್ರಾಫ್ಟ್ ಇಂಡಸ್ಟ್ರೀಸ್ ಆಫ್ ಆಸ್ಟ್ರಿಯಾ ಕಂಪನಿಯು ತಯಾರಿಸಿದ್ದು, ವಿಮಾನದ ಆಕಾರಗಳನ್ನೂ ಬದಲಾಯಿಸಿದೆ. ವಿಮಾನವು ಹೊಂದಿರುವ 16.3 ಮೀಟರ್ ಉದ್ದದ ಒಂದು ಗಾಳಿಯ ಕಮಾನಿನ ಸಹಾಯದಿಂದ ವಿಮಾನವು ಗಂಟೆಗೆ 100 ಕಿಲೋ ಮೀಟರ್ (62 ಮೈಲ್) ದೂರದವರೆಗೆ ಇಂಧನ ಕೋಶದ ಶಕ್ತಿಯ ಸಹಾಯದಿಂದ ಹಾರಬಲ್ಲದು.[೧೫]

ಎಂಜಿನ್ ವಿಧಗಳು

ಬದಲಾಯಿಸಿ

ಹೈಬ್ರಿಡ್ ಎಲೆಕ್ಟ್ರಿಕ್-ಪೆಟ್ರೋಲಿಯಂ ವಾಹನಗಳು

ಬದಲಾಯಿಸಿ
 
ಹೈಬ್ರಿಡ್‌ ನ್ಯೂ ಫೈಯರ್ ಮೆಟ್ರೋ ಬಸ್
 
ಹೈಬ್ರಿಡ್‌ ಆಪ್ಟೆರ್ ಸೊಲೊ

ಸಾಮಾನ್ಯವಾಗಿ ಹೈಬ್ರಿಡ್ ವಾಹನ ಗಳು ಎಂಬ ಶಬ್ದ ಹೈಬ್ರಿಡ್ ವಿದ್ಯುತ್ ಚಾಲಿತ ವಾಹನಗಳಿಗೆ ಉಪಯೋಗಿಸಲ್ಪಡುತ್ತದೆ. ಇವನ್ನು ಎಎಸ್ಎಚ್2 (ಚೆವರ್ಲೆಟ್ ಟಾಹೋ, ಜಿಎಂಸಿ ಯುಕಾನ್, ಚೆವರ್ಲೆಟ್ ಸಿಲ್ವೆರಾಡೋ, ಕ್ಯಾಡಿಲಿಕ್ ಎಸ್ಕೇಲಾಡೆ ಮತ್ತು ಸತರ್ನ್ ವ್ಯೂ) ವಾಹನಗಳಾದ ಟೋಯೋಟಾ ಪ್ರಿಯಸ್, ಟೋಯೋಟಾ ಕ್ಯಾಂಬ್ರಿ ಹೈಬ್ರಿಡ್, ಫೋರ್ಡ್ ಎಸ್ಕೇಪ್ ಹೈಬ್ರಿಡ್, ಟೋಯೋಟಾ ಹೈಲ್ಯಾಂಡರ್ ಹೈಬ್ರಿಡ್, ಹೊಂಡಾ ಇನ್ ಸೈಟ್, ಹೊಂಡಾ ಸಿವಿಕ್ ಹೈಬ್ರಿಡ್ ಲೆಕ್ಸಸ್ ಆರ್.ಎಕ್ಸ್. 400ಎಚ್ ಮತ್ತು 450ಎಚ್ ಮತ್ತು ಇತರ ವಾಹನಗಳಿಗೆ ಉಪಯೋಗಿಸಲಾಗುತ್ತದೆ. ಪೆಟ್ರೋಲಿಯಂ-ವಿದ್ಯುತ್ ಹೈಬ್ರಿಡ್ ಹೆಚ್ಚಾಗಿ ಆಂತರಿಕ ದಹನಕಾರಿ ಎಂಜಿನ್‌‍ಗಳಲ್ಲಿ (ಸಾಮಾನ್ಯವಾಗಿ ಗ್ಯಾಸ್ ಅಥವಾ ಡೀಸೆಲ್ ಎಂಜಿನ್, ವಿವಿಧ ಇಂಧನಗಳಿಂದ ಶಕ್ತಿ ಪಡೆಯುವಂತಹದ್ದು) ಮತ್ತು ವಿದ್ಯುತ್ ಬ್ಯಾಟರಿಗಳು ವಿದ್ಯುತ್ ಮೋಟಾರ್‌‍ಗಳಿಗೆ ಶಕ್ತಿ ಪೂರೈಸಲು ಉಪಯೋಗವಾಗುತ್ತವೆ. ಪೂರ್ಣ ಹೈಬ್ರಿಡ್ ‌ದಿಂದ ಅಲ್ಪ ಹೈಬ್ರಿಡ್‌ವರೆಗಿನ ಅನೇಕ ವಿಧದ ಪೆಟ್ರೋಲಿಯಂ-ವಿದ್ಯುತ್ ಹೈಬ್ರಿಡ್ ವಾಹನಗಳಿದ್ದು ಸಾಧಕ ಮತ್ತು ಬಾಧಕಗಳಿಗೆ ತಕ್ಕಂತೆ ಉಪಯೋಗಿಸಲ್ಪಡುತ್ತವೆ.[೧೬]

ಫರ್ಡಿನಾಂಡ್ ಪೋರ್ಚೆ ಎಂಬವರು 1900 ರಲ್ಲಿ ಜಾಗತಿಕವಾಗಿ ಮೊದಲ ಗ್ಯಾಸ್-ವಿದ್ಯುತ್‌ನ ಸೀರೀಸ್ ಹೈಬ್ರಿಡ್ ಮೋಟಾರುಗಾಡಿಯನ್ನು ಅಭಿವೃದ್ಧಿ ಪಡಿಸಿದರು. ಇವರು ಎರಡು ಮೋಟಾರ್‌ಗಳನ್ನು ವಾಹನದ ಚಕ್ರಗಳ ಮಧ್ಯೆ ವಿದ್ಯುತ್ ಶಕ್ತಿ ತಯಾರಿಕೆಗಾಗಿ ದಹನಕಾರಿ ಜನರೇಟರ್ ಜೋಡಿಸಿದರು. ಕ್ರಿ.ಶ. 1800 ರಲ್ಲಿ ದೃವ ಇಂಧನ-ವಿದ್ಯುತ್ ಹೈಬ್ರಿಡ್‌ಗಳು ಬಂದವು. 1978-79 ರಲ್ಲಿ ಅರ್ಕನ್ಸಾಸ್‌ನ ಸ್ಪ್ರಿಂಗದಲೆಯ ವಿದ್ಯುತ್ ಎಂಜಿನಿಯರ್ ಡೇವಿಡ್ ಅರ್ಥರ್ಸ್ ಎಂಬವನಿಂದ ಬ್ರೇಕಿಂಗ್ ಜನರೇಟಿವ್ ಹೈಬ್ರಿಡ್ ಕಂಡುಹಿಡಿಯಲ್ಪಟ್ಟಿತು.

ಇವನ ಮನೆಯಾಗಿ ಪರಿವರ್ತಿತವಾಗಿದ್ದ ಒಪೆಲ್‌ GTಯು 75MPG ವಿನ್ಯಾಸವನ್ನು ಮೂಲ ವಿನ್ಯಾಸಕ್ಕೆ ಮಾರಲಾಗಿದ್ದು "ಮದರ್‌ ಅರ್ಥ್‌‍ ನ್ಯೂಸ್‌‌"ನ ರೂಪಾಂತರಗೊಂಡ ವಿನ್ಯಾಸವವನ್ನು ಅವರ ಅಂತರ್ಜಾಲದಲ್ಲಿ ಬಿಡುಗಡೆ ಮಾಡಿತು.[೧೭]

ವಿದ್ಯುತ್ ಚಾಲಿತ ವಾಹನದಲ್ಲಿ ಪ್ಲಗ್ ಆಗ ಅತ್ಯಂತ ಸಾಮಾನ್ಯವಾಗುತ್ತಿದೆ. ಇದು ಓಡುವ ಸ್ಥಳಗಳಲ್ಲಿ ಭಾರೀ ದೂರ ಯಾವುದೇ ಸೇವೆ ಇಲ್ಲದೆ ಓಡಬೇಕಾಗುತ್ತದೆ. ಬ್ಯಾಟರಿಗಳನ್ನು ಮನೆಯಲ್ಲಿ ಚಾರ್ಜ್ ಮಾಡಿದಂತೆ ಎಂಜಿನ್ ಓಡುವಾಗ ಕೂಡ ಚಾರ್ಜ್ ಮಾಡಬಹುದು.

ಬೋರ್ಡ್ ಇಲ್ಲದೆ ನಿರಂತರ ರೀಚಾರ್ಜ್ ಆಗುವ ವಿದ್ಯುತ್ ವಾಹನ (COREV)

ಬದಲಾಯಿಸಿ

ಸರಿಯಾದ ಸೌಲಭ್ಯಗಳು, ಅನುಮತಿ ಹಾಗೂ ವಾಹನಗಳನ್ನು ಕೊಟ್ಟರೆ ಬಿಇವಿಗಳು ವಾಹನ ಚಲಾಯಿಸುವಾಗ ಕೂಡ ರೀಚಾರ್ಜ್ ಮಾಡಬಹುದು. ವಿದ್ಯುತ್ ಚಾಲಿತ ರೈಲು, ಲೋಹದ ಬಟ್ಟಲು ಅಥವಾ ಹೈವೇಯಲ್ಲಿ ಮೇಲುಗಡೆ ಹಾದುಹೋಗುವ ವೈಯರ್ ಗಳ ಮೂಲಕವೂ ವಾಹನದ ಚಕ್ರಗಳಿಗೆ ಸಂಪರ್ಕ ನೀಡಿದರೆ ಅಥವಾ ಇತರ ಸಮಾನರೂಪದ ಯಂತ್ರ (ಈಗಿನ ವಿದ್ಯುತ್ ಸಂಗ್ರಹದ ಪೈಪ್‌ಗಳನ್ನು ನೋಡಿ)ಗಳಿಂದಲೂ ಬಿಇವಿಗಳು ಓಡುತ್ತವೆ. ಬಿಇವಿಗಳ ಬ್ಯಾಟರಿಗಳು ಈ ಪದ್ಧತಿಗಳ ಮೂಲಕ ಕೂಡ ಹೈವೇ ಮೇಲೆ ರೀಚಾರ್ಜ್ ಆಗಬಲ್ಲವು ಮತ್ತು ನಂತರ ಇತರ ರಸ್ತೆಗಳಲ್ಲಿ ಬ್ಯಾಟರಿ ಸಂಪರ್ಕ ಇಲ್ಲದೆಯೂ ಉಪಯೋಗಿಸಬಹುದು.

ಬಿಇವಿ ಸೌಲಭ್ಯಕ್ಕೆ ಅನುಮತಿ ಇರುವ ತಾತ್ವಿಕವಾಗಿ ಯಾವುದೇ ಪರಿಮಿತಿ ಇಲ್ಲದ ಹೈವೇಯಲ್ಲಿ ಚಲಿಸುತ್ತಿರುವ ಸಮಯದವರೆಗೂ ಇದು ಉತ್ತಮ ಪ್ರಯೋಜನ ನೀಡುತ್ತದೆ. 100 ಕಿ.ಮೀ. ಒಳಗಿನ ದೂರದವರೆಗೆ ಹೈವೇಯಲ್ಲಿಯೇ ಗಮ್ಯಸ್ಥಾನವಿದ್ದಲ್ಲಿ ಈ ಪದ್ಧತಿಯು ಬ್ಯಾಟರಿಯಂತ ದುಬಾರಿ ಅಗತ್ಯವನ್ನು ಕಡಿಮೆ ಮಾಡುತ್ತದೆ. ಆದರೆ, ದುರದೃಷ್ಟಕರವಾಗಿ ಸಾರ್ವತ್ರಿಕವಾಗಿ ಖಾಸಗಿ ಉಪಯೋಗಕ್ಕೆ ವಿದ್ಯುತ್ ಪದ್ಧತಿಯು ನಿಷೇಧಿಸಲ್ಪಟ್ಟಿದೆ.

ವಿದ್ಯುತ್ ಮೂಲಭೂತ ಸೌಕರ್ಯದಂತಹ ತಾಂತ್ರಿಕತೆಯು ಇಂದು ಹಳತಾಗಿದೆ ಮತ್ತು ನಗರ ಪ್ರದೇಶದ ಹೊರಗೆ ದೂರದವರೆಗೆ ವಿತರಿಸಲ್ಪಟ್ಟಿಲ್ಲ (ಟ್ರಾಮ್ಸ್, ವಿದ್ಯುತ್ ರೈಲು, ಟ್ರಾಲಿ, ಮೂರನೇ ರೈಲುಗಳು ಸೇರಿ ಈಗಿನ ವಿದ್ಯುತ್ ಸಂಗ್ರಹದ ಪೈಪ್‌‍ಗಳನ್ನು ನೋಡಿ). ಅಗತ್ಯವಿರುವ ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ತಾತ್ವಿಕವಾಗಿ ತೀರುವೆ ಕಂದಾಯ, ಗ್ಯಾಸ್ ಅಥವಾ ಇತರ ತೆರಿಗೆಗಳ ಮೂಲಕ ಹಣ ಸಂಗ್ರಹಿಸಬಹುದು.

ಹೈಬ್ರಿಡ್ ಫ್ಯೂಯಲ್ (ಎರಡು ಪ್ರಕಾರ)

ಬದಲಾಯಿಸಿ
 
ಫೋರ್ಡ್ ಎಸ್ಕೇಪ್ ಹೈಬ್ರಿಡ್‌ ಇ 85 (ಎಥೆನಾಲ್) ಇಂಧನ ಸಾಮರ್ಥ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮೊದಲ ಹೈಬ್ರಿಡ್‌ ವಿದ್ಯುತ್‌ಚಾಲಿತ ವಾಹನ.

ಎರಡು ಅಥವಾ ಹೆಚ್ಚಿನ ವಿವಿಧ ಪ್ರಕಾರಗಳ ಪದ್ಧತಿಯನ್ನು ಚಾಲನೆಗಾಗಿ ಉಪಯೋಗಿಸುವ ವಾಹನಗಳಲ್ಲಿ ಭಿನ್ನ ರೀತಿಯ ಇಂಧನಗಳನ್ನು ಮೇಲೆ ಹೇಳಿದಂತಹ ಗೊಂದಲಗಳ ನಿವಾರಣೆಗಾಗಿ ಒಂದೇ ಹೈಬ್ರಿಡ್ ಎಂಜಿನ್‌‍ನಲ್ಲಿ ಉಪಯೋಗಿಸುತ್ತಾರೆ. ಇದನ್ನು ಎರಡು ಪ್ರಕಾರಗಳ ಎಂಜಿನ್‌ ಎಂದು ಕರೆಯುತ್ತಾರೆ.

ದೃವ ಶಕ್ತಿಯ ಹೈಬ್ರಿಡ್

ಬದಲಾಯಿಸಿ

ಜಲೀಕರಣ ಮತ್ತು ವಾಯುವಿನ ಹೈಬ್ರಿಡ್ ವಾಹನದಲ್ಲಿ ಒತ್ತಡದ ಶೇಖರಣೆಗೋಸ್ಕರ ಎಂಜಿನ್ ಉಪಯೋಗಿಸಲಾಗುತ್ತದೆ. ಚಕ್ರಗಳು ಜಲೀಕರಣ ಅಥವಾ ವಾಯುವಿನ (ಅಂದರೆ ಒತ್ತಿಟ್ಟ ಗಾಳಿ) ಮೂಲಕ ಚಲಿಸಲು ಸಹಾಯಕವಾಗುವಂತೆ ಮಾಡುವುದು ಇದರ ಉದ್ದೇಶ. ಶಕ್ತಿಯ ಪುನರ್ ನಿರ್ಮಾಣ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಈ ಪದ್ಧತಿಯು ಬ್ಯಾಟರಿ ಚಾರ್ಜ್ ಮಾಡುವುದಕ್ಕಿಂತಲೂ ಹೆಚ್ಚು ದಕ್ಷವಾಗಿರುತ್ತದೆ. ಇಪಿಎ ಪರೀಕ್ಷೆಯಲ್ಲಿ ಶಕ್ತಿಯ ಮಟ್ಟ ಶೇ. 60 ರಿಂದ 70 ರಷ್ಟು ಹೆಚ್ಚಿತ್ತು. ಇಪಿಎಯಿಂದ ಮಾಡಲ್ಪಟ್ಟ ಪರೀಕ್ಷೆಯಲ್ಲಿ ಜಲೀಕರಣ ಹೈಬ್ರಿಡ್ ಫೋರ್ಡ್ ಪ್ರಯಾಣ ಸಿಟಿ ಮತ್ತು ಹೈವೇ ಪ್ರಯಾಣದಿಂದ ವಾಪಸ್ಸಾಯಿತು32 miles per US gallon (7.4 L/100 km; 38 mpg‑imp). ಯುಪಿಎಸ್22 miles per US gallon (11 L/100 km; 26 mpg‑imp) ಪ್ರಸ್ತುತ ಈ ತಂತ್ರಜ್ಞಾನದ22 miles per US gallon (11 L/100 km; 26 mpg‑imp) ಎರಡು ಟ್ರಕ್‌ಗಳನ್ನು ಹೊಂದಿದೆ. UPS ಪ್ರಸ್ತುತ ಎರಡು ಟ್ರಕ್‌ಗಳನ್ನು ಈ ತಂತ್ರಜ್ಞಾನದ ರೀತಿಯಲ್ಲಿ ಬಿಡುಗಡೆ ಮಾಡಿದೆ.[೧೮]

ಈ ಪದ್ಧತಿ ಹೆಚ್ಚಿನ ವೇಗವಾಗಿ ಮತ್ತು ಸೈಕ್ಲಿಂಗ್ ಚಾರ್ಜ್, ಡಿಸ್ ಚಾರ್ಜ್ ಮಾಡುವಲ್ಲಿ ಹೆಚ್ಚಿನ ದಕ್ಷತೆ ಹೊಂದಿದ್ದು ಗ್ಯಾಸ್-ವಿದ್ಯುತ್ ಹೈಬ್ರಿಡ್ ಗಿಂತಲೂ ಕಡಿಮೆ ವೆಚ್ಚದಾಯಕವಾಗಿದೆ. ಶೇಖರಣೆಯ ಗಾತ್ರ ಒಟ್ಟೂ ಶಕ್ತಿ ಸಂಗ್ರಹ ಸಾಮರ್ಥ್ಯ ತೋರಿಸುತ್ತದೆ ಮತ್ತು ಬ್ಯಾಟರಿಗಿಂತಲೂ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ.

ಹೈಬ್ರಿಡ್ ವಾಹನವಾದ ಪವರ್ ರೈಲಿನ ಜೋಡಣೆ

ಬದಲಾಯಿಸಿ

ಸಮಾನಾಂತರ ಹೈಬ್ರಿಡ್

ಬದಲಾಯಿಸಿ
 
ದ ಹೊಂಡಾ ಇನ್‌ಸೈಟ್ ಒಂದು ಮೈಲ್ಡ್ ಪ್ಯಾರಲಲ್ ಹೈಬ್ರಿಡ್‌.
 
ದ ಟಯೋಟಾ ಪ್ರೈಯ್ಸ್ ಒಂದು ಸೀರಿಸ್-ಪ್ಯಾರಲಲ್ ಹೈಬ್ರಿಡ್‌.
 
ದ ಫೋರ್ಡ್ ಎಸ್ಕೇಪ್ ಹೈಬ್ರಿಡ್‌ ಪ್ಯರಲಲ್ ಡ್ರೈವರ್‌ಟ್ರೇನ್

ಸಮಾನಾಂತರ ಹೈಬ್ರಿಡ್ ನಲ್ಲಿ ವಿದ್ಯುತ್ ಮೋಟರ್ ಮತ್ತು ಆಂತರಿಕ ದಹನಕಾರಿ ಎಂಜಿನ್ ಗಳು ಜೋಡಿಸಲ್ಪಟ್ಟಿರುತ್ತವೆ. ಆದ್ದರಿಂದ ಅವು ಏಕವಾಗಿ ಅಥವಾ ಎರಡೂ ಸೇರಿ ವಾಹನಕ್ಕೆ ಶಕ್ತಿ ನೀಡುತ್ತವೆ. ಪರಸ್ಪರ ಬೇರೆ ಬೇರೆ ರೀತಿಯಲ್ಲಿ ಶಕ್ತಿ ವಿಭಾಗವಾಗುವಂತೆ ಜೋಡಿಣೆಯ ನಮೂನೆಯಲ್ಲಿ ಕೇವಲ ಒಂದು ವಿದ್ಯುತ್ ಮೋಟರ್ ಇಡಲಾಗಿರುತ್ತದೆ. ಹೆಚ್ಚಿನ ಸಮಯದಲ್ಲಿ ಆಂತರಿಕ ದಹನಕಾರಿ ಎಂಜಿನ್, ವಿದ್ಯುತ್ ಮೋಟರ್ ಮತ್ತು ಗೇರ್ ಪೆಟ್ಟಿಗೆಗಳು ಸ್ವಯಂಚಾಲಿತ ಕ್ಲಚ್‌ಗಳ ಸಹಾಯದಿಂದ ಒಂದಕ್ಕೊಂದು ಸೇರಿರುತ್ತವೆ. ವಿದ್ಯುತ್ ಚಾಲಿತದ ಚಾಲನೆಯಲ್ಲಿ ಆಂತರಿಕ ದಹನಕಾರಿ ಎಂಜಿನ್ ಮಧ್ಯೆಯ ಕ್ಲಚ್ ಗೇರ್ ಬಾಕ್ಸ್‌ಗಾಗಿ ಇರುವ ಕಾರಣ ತೆರೆದಿರುತ್ತವೆ. ದಹನಕಾರಿ ರೀತಿಯಲ್ಲಿ ಎಂಜಿನ್ ಮತ್ತು ಮೋಟರ್ ಒಂದೇ ವೇಗದೊಂದಿಗೆ ಓಡುತ್ತದೆ.

ಅಧಿಕ ಸಂಖ್ಯೆಯಲ್ಲಿ ಉತ್ಪನ್ನವಾದ ಮೊದಲ ಸಮಾನಾಂತರ ಹೈಬ್ರಿಡ್ ಎಂದರೆ ಹೊಂಡಾ ಇನ್‌ಸೈಟ್.

ಮೃದು ಸಮಾನಾಂತರ ಹೈಬ್ರಿಡ್

ಬದಲಾಯಿಸಿ

ಈ ರೀತಿಯ ಉಪಯೋಗ ಸಾಮಾನ್ಯವಾಗಿ ಗಾಢವಾದ ವಿದ್ಯುತ್ ಮೋಟರ್ (<20ಕಿ.ವ್ಯಾ) ನಲ್ಲಿ ಇರುತ್ತದೆ. ಇದು ಸ್ವಯಂಚಾಲಿತ ನಿಲುಗಡೆ ಹಾಗೂ ಚಾಲನೆಯ ಗುಣ ನೀಡಲು ಮತ್ತು ವೇಗ ಹೆಚ್ಚಿಸುವಾಗ ಅಧಿಕ ಶಕ್ತಿ ನೀಡಲು ಹಾಗೂ ವೇಗ ತಗ್ಗಿಸುವ ಸಮಯದಲ್ಲಿ ಶಕ್ತಿ ಉತ್ಪತ್ತಿ ಮಾಡಲು ಉಪಯೋಗವಾಗುತ್ತದೆ (ಅಂದರೆ ಶಕ್ತಿ ಉತ್ಪತ್ತಿ ಮಾಡುವ ಬ್ರೇಕ್).

ಈಗಾಗಲೇ ಚಾಲ್ತಿಯಲ್ಲಿರುವ ವಾಹನಗಳಲ್ಲಿ ಹೊಂಡಾ ಸಿವಿಕ್‌ ಹೈಬ್ರಿಡ್‌, ಹೊಂಡಾ ಇನ್‌ಸೈಟ್‌, ಮರ್ಸಿಡೀಸ್‌ ಬೆಂಜ್‌‍, S400 ಬ್ಲ್ಯೂ ಹೈಬ್ರಿಡ್, BMW 7-ಸಿರೀಸ್‌ ಹೈಬ್ರಿಡ್‌, ಜನರಲ್‌ ಮೊಟಾರ್ಸ್‌‍ನ BAS ಹೈಬ್ರಿಡ್‌‍ ಮತ್ತು ಮೈಕ್ರೊ ಹೈಬ್ರಿಡ್‌‍ ಡ್ರೈವ್‌ನ ಸ್ಮಾರ್ಟ್‌‍ ಫಾರ್‌ ಟು ಸೇರಿವೆ.

ಶಕ್ತಿ ವಿಭಾಗಿಸುವ ಕ್ರಮದ ಸಮಾನಾಂತರ ಹೈಬ್ರಿಡ್

ಬದಲಾಯಿಸಿ

ಇದು ಪ್ರಯಾಣಿಕರ ಕಾರಿನ ನಮೂನೆಗಳಲ್ಲಿ ಉಪಯೋಗಿಸಲ್ಪಡುತ್ತದೆ. ಉದಾ. ಟೋಯೋಟಾ ಪ್ರಿಯಸ್, ದಿ ಫೋರ್ಡ್ ಎಸ್ಕೇಪ್, ದಿ ಲೆಕ್ಸಸ್ ಜಿಎಸ್ 450 ಮತ್ತು ಎಲ್.ಎಸ್.600.

ಶಕ್ತಿ ವಿಭಾಗವಾಗುವ ಹೈಬ್ರಿಡ್ ವಿದ್ಯುತ್ ರೈಲಿನಲ್ಲಿ ಎರಡು ಮೋಟರ್ ಗಳು ಇರುತ್ತವೆ. ಒಂದು ವಿದ್ಯುತ್ ಮೋಟರ್ ಮತ್ತು ಒಂದು ಆಂತರಿಕ ದಹನಕಾರಿ ಎಂಜಿನ್. ಈ ಎರಡು ಮೋಟರ್‌ಗಳಿಂದ ಬರುವ ಶಕ್ತಿಯು ಶಕ್ತಿ ವಿಭಾಗಿಸಿ ಚಕ್ರಗಳನ್ನು ಚಲಾಯಿಸಲು ವಿನಿಯೋಗವಾಗುತ್ತದೆ. ಇದೊಂದು ಸಾಮಾನ್ಯವಾದ ಗೇರ್‌ನ ಗುಂಪು. ಶಕ್ತಿ ಹಂಚಿಕೆಯ ಅನುಪಾತವು ದಹನಕಾರಿ ಎಂಜಿನ್ ಅಥವಾ ವಿದ್ಯುತ್ ಮೋಟರ್ ಅಥವಾ ಇವುಗಳ ಮಧ್ಯೆಯಲ್ಲಿನ ಇನ್ಯಾವುದರಲ್ಲಿಯೇ ಆದರೂ ಶೇ. 0 ದಿಂದ 100 ವರೆಗೆ ಇರುತ್ತದೆ. ಇದರಲ್ಲಿ ವಿದ್ಯುತ್ ಮೋಟರ್ ಗೆ ಶೇ. 40 ರಷ್ಟು ಹಾಗೂ ದಹನಕಾರಿ ಎಂಜಿನ್‌ಗೆ ಶೇ. 60ರಷ್ಟು ಶಕ್ತಿ ಉಪಯೋಗವಾಗುತ್ತದೆ. ಬ್ಯಾಟರಿಯನ್ನು ಚಾರ್ಜ್ ಮಾಡುವ ಜನರೇಟರ್‌ನಂತೆ ವಿದ್ಯುತ್ ಮೋಟರ್ ಕೆಲಸ ಮಾಡುತ್ತದೆ.

ಸಾಮಾನ್ಯ ರಸ್ತೆಯಲ್ಲಿ ಅತ್ಯಂತ ಹೆಚ್ಚಿನ ಶಕ್ತಿಯ ಅಗತ್ಯ ಬಿದ್ದಾಗ ಆಂತರಿಕ ದಹನಕಾರಿ ಎಂಜಿನ್ ಪ್ರಾಥಮಿಕ ಶಕ್ತಿಯ ಮೂಲವಾಗಿರುತ್ತದೆ. ಉದಾ. ಮುಂದಿನ ಗಾಡಿಯನ್ನು ಹಿಂದಿಕ್ಕುವ ಸಂದರ್ಭದಲ್ಲಿ ವಿದ್ಯುತ್ ಮೋಟರ್ ಗಳು ಇರುವ ಶಕ್ತಿಯನ್ನು ಚಿಕ್ಕ ಸಮಯದಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಸಲು ಸಹಾಯಕವಾಗುತ್ತದೆ. ವಾಹನ ಹೊಂದಿರುವ ಎಂಜಿನ್ ಗಿಂತಲೂ ದೊಡ್ಡ ಎಂಜಿನ್ ನೀಡುವಂತಹ ಶಕ್ತಿಯಂತೆ ಪರಿಣಾಮ ಬೀರುವಂತೆ ವಿದ್ಯುತ್ ಮೋಟರ್ ನೋಡಿಕೊಳ್ಳುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಕಾರುಗಳು ನಿಂತಿದ್ದಾಗ ಶಕ್ತಿಯು ಹೊರಸೂಸದಂತೆ ಎಂಜಿನ್‌ಗಳು ಕಾರ್ಯ ಸ್ಥಗಿತಗೊಳಿಸಿರುತ್ತವೆ.

ಸೀರೀಸ್ ಹೈಬ್ರಿಡ್

ಬದಲಾಯಿಸಿ
 
ಚೆವ್ರೊಲೆಟ್‌‍ ವೋಲ್ಟ್‌‍ ಇದು ಪ್ಲಗ್‌-ಇನ್‌ ಹೈಬ್ರಿಡ್‌ ಸರಣಿಯಲ್ಲಿ ಬಿಡುಗಡೆಯಾದ ವಾಹನ. 2011ರಿಂದ ಮಾರಾಟಕ್ಕೆ ಲಭ್ಯ.ವಿದ್ಯುತ್ ಚಾಲಿತ ಅಂಗಕರ್ಷಣದಿಂದ ಕಾರು ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆಅಂತರ್ದಹನ ಇಂಜಿನ್ ಕೇವಲ ಜನರೇಟರ್ ಭಾಗವಾಗಿ ವಿದ್ಯುತ್ ಉತ್ಪಾದಿಸಲು ಬಳಕೆಯಾಗುತ್ತದೆ,
 
ಹೊಂಡಾ ಸಿವಿಕ್ ಹೈಬ್ರಿಡ್‌ ಜಿಪ್‌ಕಾರ್‌ನಿಂದ ಬಳಕೆ, a car sharing service at ವಾಷಿಂಗ್ಟನ್,ಡಿ.ಸಿಯಲ್ಲಿ .
 
ಫೋರ್ಡ್ ಎಸ್ಕೇಪ್ plug-in ಹೈಬ್ರಿಡ್‌.

ಸೀರೀಸ್ ಅಥವಾ ಅನುಕ್ರಮದ ಹೈಬ್ರಿಡ್‌ ಗಳು ದೂರ ವಿಸ್ತರಿಸಿದ ವಿದ್ಯುತ್ ವಾಹನ (ಆರ್.ಇ.ಇ.ವಿ.) ಕ್ಕೆ ಹೋಲಿಸಬಹುದು. ದೂರ ವಿಸ್ತರಣೆಯು ಸೀರೀಸ್ ಅಥವಾ ಸಮಾನಾಂತರ ಹೈಬ್ರಿಡ್ ಇಡುವುದರಿಂದ ಯಶಸ್ವಿಯಾಗಬಲ್ಲದು.

ಸೀರೀಸ್ ಹೈಬ್ರಿಡ್ ಈಗ ಒಂದು ಭರವಸೆಯಂತೆ ಕಂಡುಬರುತ್ತಿದೆ ಮತ್ತು ಹತ್ತರದ ಭವಿಷ್ಯದಲ್ಲಿ ಹೈಬ್ರಿಡ್ ವಾಹನದ ಅತ್ಯಂತ ಸಾಮಾನ್ಯ ಗುಣವಾಗುವ ಲಕ್ಷಣಗಳಿವೆ.

ಸೀರೀಸ್ ಹೈಬ್ರಿಡ್ ವಾಹನಗಳು ಕೇವಲ ವಿದ್ಯುತ್ ಮೋಟರ್‌ನಿಂದ ಮಾತ್ರ ಚಲಿಸುತ್ತವೆ. ವಿದ್ಯುತ್ ಮೋಟರ್‌ಗಳು ಪಿಸ್ಟನ್ ಆಂತರಿಕ ಎಂಜಿನ್ ಗಿಂತ ಅನುಪಾತದಲ್ಲಿ ಭಿನ್ನವಾಗಿದ್ದು, ವಾಹನವು ವೇಗವಾಗಿ ಅತ್ಯಂತ ದೂರದವರೆಗೂ ಸಾಗಲು ಬೇಕಾದಷ್ಟು ಗರಿಷ್ಠ ಪ್ರಮಾಣದ ಶಕ್ತಿ, ತೂಕವನ್ನು ವಿಶೇಷ ರೀತಿಯಲ್ಲಿ ದಕ್ಷತೆಯಿಂದ ಪೂರೈಸಬಲ್ಲದು. ದಹನಕಾರಿ ಎಂಜಿನ್ ಹಾಗೂ ವಿದ್ಯುತ್ ಮೋಟರ್ ವಾಹನಕ್ಕೆ ಹೊಂದಿಕೆಯಾದರೆ ಎಂಜಿನ್ ಮತ್ತು ಚಕ್ರ ಬದಲಾಯಿಸುವಾಗಿನ ಶಕ್ತಿಯ ಅನುಪಾತದ ಪ್ರಸಾರವು ಅಗತ್ಯವಿಲ್ಲ. ಪ್ರಸಾರ ಕಾರ್ಯವು ಎಂಜಿನ್‌ನಿಂದ ತೂಕ, ಆಂತರಿಕ ಶಕ್ತಿ ಹಾಗೂ ದೊಡ್ಡ ಗಾತ್ರವನ್ನು ಸೇರಿಸುತ್ತದೆ. ಸ್ವಯಂಚಾಲಿತ ಯಾಂತ್ರಿಕತೆಯ ಪ್ರಸಾರವನ್ನು ಬದಲಾಯಿಸುವುದು ಅತ್ಯಂತ ಜಟಿಲ ಕಾರ್ಯವಾಗಿದೆ. ಸೀರೀಸ್ ಹೈಬ್ರಿಡ್ ಪದ್ಧತಿಯಲ್ಲಿ ದಹನಕಾರಿ ಎಂಜಿನ್ ನೇರವಾಗಿ ಚಕ್ರಗಳನ್ನು ಚಲಾಯಿಸುವ ಬದಲು ವಿದ್ಯುತ್ ಜನರೇಟರನ್ನು ಚಲಾಯಿಸುತ್ತದೆ. ವಿದ್ಯುತ್ ಮೋಟರ್ ಚಲಾಯಿಸಲು ಈ ಜನರೇಟರ್ ಶಕ್ತಿ ಪೂರೈಸುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸೀರೀಸ್ ಹೈಬ್ರಿಡ್ ಪದ್ಧತಿಯು ಸುಲಭವಾಗಿದ್ದು, ವಾಹನವು ವಿದ್ಯುತ್ ಮೋಟರ್‌‍ಗೆ ಜನರೇಟರ್ ಪೂರೈಸುವ ವಿದ್ಯುತ್ ಶಕ್ತಿಯನ್ನು ಉಪಯೋಗಿಸಿಕೊಂಡು ಚಲಾಯಿಸಲ್ಪಡುತ್ತದೆ.

ಈ ಪದ್ಧತಿಯು ಡೀಸೆಲ್-ವಿದ್ಯುತ್ ರೈಲುಗಳು ಮತ್ತು ಹಡಗುಗಳಲ್ಲಿ ಈಗ ಉಪಯೋಗಿಸುತ್ತಿರುವುದೇ ಮೊದಲಲ್ಲ. 20 ನೇ ಶತಮಾನದಲ್ಲಿಯೇ ಫರ್ಡಿನಾಂಡ್ ಪೋರ್ಚೆ ಎಂಬಾತ ಇದನ್ನು ರೇಸ್ ಕಾರ್ ಗಳಲ್ಲಿ ಪರಿಣಾಮಕಾರಿಯಾಗಿ ಸೀರೀಸ್ ಹೈಬ್ರಿಡ್ ಪದ್ಧತಿಯನ್ನು ಉಪಯೋಗಿಸಿದ್ದ. ಈ ಪದ್ಧತಿಗೆ ಪೊರ್ಚೆ ಸಿಸ್ಟಂ ಮಿಕ್ಸ್ಟ್ ಎಂದು ಹೆಸರು ನೀಡಿದ್ದ. ವಾಹನದ ಮುಂದಿನ ಎರಡು ಚಕ್ರಗಳ ಮಧ್ಯೆಯೂ ಅಳವಡಿಸಿದ್ದ ಮೋಟರ್‌ಗಳಿಂದ ಉಂಟಾದ ವೇಗವು ದಾಖಲೆ ನಿರ್ಮಿಸಿತ್ತು. ವಿದ್ಯುತ್ ಜನರೇಟರ್ ಮತ್ತು ಚಾಲನಾ ಮೋಟರ್‌‍ಗಳು ಯಾಂತ್ರಿಕ ಪ್ರಸಾರವನ್ನು ಬದಲಾಯಿಸಿದ ಕಾರಣ ಈ ಜೋಡಣೆಯನ್ನು ಕೆಲವು ಬಾರಿ ವಿದ್ಯುತ್ ಪ್ರಸಾರ ಕ್ಕೆ ಹೋಲಿಸಬಹುದು. ಆಂತರಿಕ ದಹನಕಾರಿ ಎಂಜಿನ್ ಓಡುವವರೆಗೂ ವಾಹನವೂ ಮುಂದುವರಿಯಲಾರದು.

ಕಾರುಗಳಲ್ಲಿ ಗರಿಷ್ಠ ಮಟ್ಟದ ಇಂದನದ ಬಳಕೆಯ ನಂತರವೂ ವಿದ್ಯುತ್ ಚಾಲನಾ ಮೋಟರ್ ಜನರೇಟರ್ ಉತ್ಪಾದಿಸಿದ ಶಕ್ತಿಯೊಂದಿಗೆ ಮೇಳೈಸದ ಕಾರಣ ಈ ಜೋಡಣೆಯು ಉತ್ಪಾದನೆಗೆ ಯೋಗ್ಯವಾಗಿ ಎಂದಿಗೂ ನಿರೂಪಿತವಾಗಿಲ್ಲ. ಆಧುನಿಕ ಕಂಪ್ಯೂಟರ್ ಎಂಜಿನ್ ವ್ಯವಸ್ಥೆಯ ಪದ್ಧತಿಯಿಂದ ಜನರೇಟರ್ ವಿದ್ಯುತ್ ಜೊತೆಗೆ ಹೊಂದಾಣಿಕೆಯಾದ ಕಾರಣ ತಾಂತ್ರಿಕತೆ ಆಶಾದಾಯಕವಾಗಿ ಕಂಡುಬಂದಿತು. ವಿದ್ಯುತ್ ಮೋಟರ್‌ಗಳು ಇನ್ನೂ ಚಿಕ್ಕದಾಗಿ, ಹಗುರವಾಗಿ, ದಕ್ಷವಾಗಿ ದೃಢತೆಯಿಂದ ತಯಾರಿಸಲ್ಪಟ್ಟಿತು. ಈ ಬೆಳವಣಿಗೆಗಳು ವಿದ್ಯುತ್ ಪ್ರಸರಣಕ್ಕೆ ಸಾಮಾನ್ಯ ಸಂದರ್ಭಗಳಲ್ಲಿ ಕಾರ್ಯ ನಡೆಸಲು ರೂಢಿಯಲ್ಲಿನದ್ದ ದಹನಕಾರಿ ಎಂಜಿನ್ ಮತ್ತು ಯಾಂತ್ರಿಕ ಸ್ವಯಂಚಾಲಿತ ಪ್ರಸರಣಕ್ಕಿಂತಲೂ ಅತ್ಯಂತ ಅನುಕೂಲದಾಯಕವಾಗಿಯಿತು. ಗೇರ್‌ನಲ್ಲಿನ ಬದಲಾವಣೆಯಿಂದ ಚಾಲನೆ ಮಾಡುವಲ್ಲಿ ನಿಧಾನಗತಿಯ ಪ್ರಗತಿಯಾಗಿದ್ದು ಇನ್ನೊಂದು ಪ್ರಯೋಜನವಾಯಿತು.

ವಿದ್ಯುತ್ ಪ್ರಸರಣ ವು ಪ್ರಸ್ತುತ ಯಾಂತ್ರಿಕ ಪ್ರಸರಣವನ್ನು ಬಪದಲಾಯಿಸಿದರೆ ಉಪಯೋಗವಾಗಬಲ್ಲದು. ಏನೇ ಆದರೂ ಆಧುನಿಕ ಸೀರೀಸ್ ಹೈಬ್ರಿಡ್ ವಾಹನಗಳು ವಿದ್ಯುತ್ ಪ್ರಸರಣಕ್ಕೆ ಗರಿಷ್ಠ ಮಟ್ಟದ ಬೆಲೆ ಸಿಗುವಲ್ಲಿ ಕಾರಣವಾಯಿತು. ವಿದ್ಯುತ್ ಪ್ರಸರಣದಲ್ಲಿ ಭಿನ್ನವೂ ಹೌದು. ಆಧುನಿಕ ಸೀರಿಸ್-ಹೈಬ್ರಿಡ್ ಒಳಗೊಂಡಿರುವುದು:

  • ವಿದ್ಯುತ್ ಎಳೆತ- ಒಂದು ಅಥವಾ ಹೆಚ್ಚಿನ ವಿದ್ಯುತ್ ಮೋಟರ್ ಗಳನ್ನು ವಾಹನ ಚಾಲನೆಗಾಗಿ ಉಪಯೋಗಿಸಲಾಗುತ್ತಿದೆ.
  • ದಹನಕಾರಿ ಎಂಜಿನ್ - ಇದು ಜನರೇಟರನ್ನು ಮಾತ್ರ ತಿರುಗಿಸುತ್ತದೆ.
  • ಒಂದು ಜನರೇಟರ್- ಇದು ದಹನಕಾರಿ ಎಂಜಿನ್ ಸಹಾಯದಿಂದ ತಿರುಗಿ ಶಕ್ತಿ ಉತ್ಪಾದಿಸುತ್ತದೆ ಮತ್ತು ಎಂಜಿನ್ ಕಾರ್ಯಾರಂಭಕ್ಕೂ ಸಹಕರಿಸುತ್ತದೆ.
  • ಒಂದು ಬ್ಯಾಟರಿ ಸಂಗ್ರಾಹಕ - ಶಕ್ತಿಯ ಬಫರ್ ನಂತೆ ವರ್ತಿಸುತ್ತದೆ.
  • ಪುನಃ ಶಕ್ತಿ ಉತ್ಪಾದಿಸುವ ಬ್ರೇಕ್- ಬ್ರೇಕ್ ಹಾಕುವಾಗ ನಷ್ಟವಾದ ಶಕ್ತಿಯನ್ನು ವಿದ್ಯುತ್ ಬದಲು ಉಷ್ಣ ಬಿಡುಗಡೆ ಮಾಡುವ ಮೂಲಕ ಮತ್ತೆ ಪಡೆಯುತ್ತದೆ.
  • ಬ್ಯಾಟರಿಯನ್ನು ರೀಚಾರ್ಜ್ ಮಾಡಲು ವಿದ್ಯುತ್ ಮೇನ್ ನಲ್ಲಿ ಪ್ಲಗ್ ಹಾಕಿರಲಾಗುತ್ತದೆ.
  • ಬ್ಯಾಟರಿ ಬ್ಯಾಂಕ್ ಗೆ ಸಹಾಯಕವಾಗಿ ಸೂಪರ್ ಕೆಪಾಸಿಟರ್ ಇರಬಹುದು ಮತ್ತು ಬ್ರೇಕ್ ಹಾಕಿದಾಗ ನಷ್ಟವಾಗುವ ಹೆಚ್ಚಿನ ಪ್ರಮಾಣದ ಶಕ್ತಿಗಳನ್ನು ಮತ್ತೆ ಗಳಿಸುತ್ತದೆ. ಪ್ರಸ್ತುತ ನಿರೂಪಿಸಲ್ಪಟ್ಟಿರುವ ಮೂಲರೂಪವನ್ನಷ್ಟೇ ಬಳಸಲಾಗುತ್ತಿದೆ.

ವಿದ್ಯುತ್ ಮೋಟರ್ ಸಂಪೂರ್ಣವಾಗಿ ವಿದ್ಯುತ್ ನಿಂದ ಚಾಲನೆಯಾಗುತ್ತದೆ. ವಿದ್ಯುತ್ತನ್ನು ಬ್ಯಾಟರಿ ಸಂಗ್ರಾಹಕದಿಂದ ಅಥವಾ ದಹನಕಾರಿ ಎಂಜಿನ್ ನಿಂದ ತಿರುಗುವ ಜನರೇಟರನ್ ನಿಂದಲೂ ಅಥವಾ ಎರಡರಿಂದಲೂ ಪಡೆಯಬಹುದು. ವಿದ್ಯುತ್ ಮೋಟರ್‌ನಿಂದ ಮಾತ್ರ ಚಲಿಸುವ ದೂರ ಹೆಚ್ಚಿಸಿ ವೆಚ್ಚ ಕಡಿಮೆ ಮಾಡಲು ಸಾಧ್ಯವಾಗುವ ಕಾರಣ ಬ್ಯಾಟರಿ ಸಂಗ್ರಾಹಕವನ್ನು ವಿದ್ಯುತ್ ಮೇನ್‌ನಿಂದ ರೀಚಾರ್ಜ್ ಮಾಡಬಹುದು. ಆಂತರಿಕ ದಹನಕಾರಿ ಎಂಜಿನ್ ಇಲ್ಲದಿದ್ದರೂ ಕೂಡ ಬ್ಯಾಟರಿ ಸಂಗ್ರಾಹಕವು ವಾಹನಕ್ಕೆ ಶಕ್ತಿ ಪೂರೈಸುವ ಕಾರಣ ಡೀಸೆಲ್-ವಿದ್ಯುತ್ ರೇಲ್ವೆಯಂತಹಹ ವಾಹನವನ್ನು ರೂಪಿಸಲಾಗಿದೆ. ವಾಹನದಲ್ಲಿರುವ ಜನರೇಟರ್ ಒಂದೇ ಬಾರಿಗೆ ಬ್ಯಾಟರಿ ಸಂಗ್ರಾಹಕವನ್ನು ಚಾರ್ಜ್ ಮಾಡುವುದರೊಂದಿಗೆ ವಿದ್ಯುತ್ ಮೋಟರ್ ಚಾಲನೆಗೆ ಶಕ್ತಿ ಪೂರೈಸಿ ವಾಹನ ಕದಲಲು ಸಹಕಾರಿಯಾಗಬಲ್ಲದು. ಬ್ಯಾಟರಿ ಬ್ಯಾಂಕ್ ಇಲ್ಲಿ ಒಂದು ಶಕ್ತಿಯ ಬಫರ್ ನಂತೆಯೂ ವರ್ತಿಸುತ್ತದೆ. ಇದರಿಂದ ಪ್ರಯೋಜನವೆಂದರೆ ವಾಹನ ನಿಂತ ತಕ್ಷಣ ದಹನಕಾರಿ ಎಂಜಿನ್ ಕೂಡ ಸ್ಥಗಿತಗೊಳ್ಳುತ್ತದೆ. ವಾಹನ ಕದಲಲು ಆರಂಭಿಸಿದಾಗ ಬ್ಯಾಟರಿಯಲ್ಲಿನ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತದೆ. ಇದು ನಗರ, ಪಟ್ಟಣಗಳಲ್ಲಿನ ಅಂಚುಗಲ್ಲು ಹೊರಸೂಸುವಿಕೆಯನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸುತ್ತದೆ. ಇದರಿಂದ ವಾಹನಗಳು ಟ್ರಾಫಿಕ್ ಸಿಗ್ನಲ್ ಗಳಲ್ಲಿದ್ದಾಗ ಅಥವಾ ನಿಧಾನವಾಗಿ ಚಲಿಸುತ್ತಿದ್ದಾಗ, ನಿಲ್ಲುವುದು, ಕದಲುವುದು ಮಾಡಬೇಕಾದ ಸಂದರ್ಭದಲ್ಲಿ ಅಥವಾ ನಿಂತಿದ್ದಾಗ ವಾಯುಮಾಲಿನ್ಯವಾಗದಂತೆ ತಡೆಯಬಹುದು. ಅಲ್ಲದೆ, ಇಂತಹ ಸಂದರ್ಭದಲ್ಲಿ ಇಂಧನ ಕೂಡ ಉಳಿತಾಯವಾಗುತ್ತದೆ.

ವೇಗ ಹೆಚ್ಚಿಸುವಂತಹ ಕೆಲವು ಸಂದರ್ಭಗಳಲ್ಲಿ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಈ ಸಮಯದಲ್ಲಿ ವಿದ್ಯುತ್ ಚಾಲಿತ ಮೋಟರ್ ವಿದ್ಯುತನ್ನು ಬ್ಯಾಟರಿಯಿಂದ ಮತ್ತು ಜನರೇಟರ್ ಎರಡರಿಂದಲೂ ಪಡೆಯುತ್ತದೆ. ಒಂದು ವೇಳೆ ಬ್ಯಾಟರಿ ಸಂಗ್ರಾಹಕದಲ್ಲಿ ಹೆಚ್ಚಿನ ವೋಲ್ಟ್ ಖಾಲಿಯಾಗಿದ್ದಲ್ಲಿ ವಾಹನವು ಜನರೇಟರ್ ನೀಡಿದ ವಿದ್ಯುತ್ ನಿಂದ ಮಾತ್ರವೂ ಚಲಿಸಬಲ್ಲದು.

ವೋಲ್ವೋ ರೀಚಾರ್ಜ್ ಮತ್ತು ಫೋರ್ಡ್ ಎಫ್-ಸೀರೀಸ್ ಪಿಕಪ್‌‍ನಂತಹ ಕೆಲವು ಮೂಲರೂಪದ ವಾಹನಗಳ ಚಕ್ರಗಳ ಮಧ್ಯೆಯ ಹಬ್ ನಲ್ಲಿ ವಿದ್ಯುತ್ ಮೋಟರ್ ಅಳವಡಿಸಿರಲಾಗುತ್ತದೆ. ಇದರಿಂದ ವಾಹನದೊಳಗಡೆ ವಿದ್ಯುತ್ ಮೋಟರ್ ನ ಸ್ಥಳಾವಕಾಶ, ಭಾರ, ಶಕ್ತಿಗಳು ಉಳಿತಾಯವಾಗುತ್ತದೆ. ಸೀರೀಸ್ ಹೈಬ್ರಿಡ್ ಅನ್ನು ಸೂಪರ್ ಕೆಪಾಸಿಟರ್ ಅಥವಾ ಫ್ಲೈವ್ಹೀಲ್‌ನಲ್ಲಿಯೂ ಅಳವಡಿಸಬಹುದು. ಇದರಿಂದ ಬ್ರೇಕ್‌ನಿಂದ ಉತ್ಪತ್ತಿಯಾಗುವ ಶಕ್ತಿಯನ್ನು ವಾಪಸ್‌ಗಳಿಸುವ ಮೂಲಕ ದಕ್ಷತೆಯನ್ನು ಹೆಚ್ಚಿಸಬಹುದು. ಇಲ್ಲದಿದ್ದರೆ ಬ್ರೇಕ್ ಹಾಕುವುದರಿಂದ ಶಕ್ತಿಯು ಹಾಳಾಗಿಹೋಗುತ್ತದೆ.

ಸೀರೀಸ್ ಹೈಬ್ರಿಡ್ ದಹನಕಾರಿ ಎಂಜಿನ್ ಮತ್ತು ಚಕ್ರಗಳ ಮಧ್ಯೆಯ ಯಾಂತ್ರಿಕ ಸಂಬಂಧವನ್ನು ವರ್ಜಿಸುತ್ತದೆ. ಆದ್ದರಿಂದ ವಾಹನವು ವೇಗ ಹೆಚ್ಚು ಕಡಿಮೆಯಾಗುತ್ತಿದ್ದರೂ ಕೂಡ ಎಂಜಿನ್ ವ್ಯತ್ಯಾಸ ಹೊಂದದೆ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತದೆ. ಎಂಜಿನ್‌ನ ವೇಗ ಒಂದೇ ಬಾರಿಗೆ ಸಂಭವಿಸಬೇಕಿಲ್ಲ. ಇಂತಹ ಸಂದರ್ಭದಲ್ಲಿಯೂ ಕೂಡ ಎಂಜಿನ್ ತನ್ನ ತಾತ್ವಿಕ ಸಿದ್ಧಾಂತವಾದ ಶೇ. 37 ಕ್ಕೆ ಹತ್ತಿರದಲ್ಲಿಯೇ ಶೇ. 20 ರಷ್ಟು ದಕ್ಷತೆಯನ್ನು ಕಾಪಾಡಿಕೊಳ್ಳಬಲ್ಲದು.[ಸೂಕ್ತ ಉಲ್ಲೇಖನ ಬೇಕು] ವಾಹನದ ನಿಧಾನಗತಿ ಅಥವಾ ಕಡಿಮೆ ಹೆಚ್ಚು ವೇಗ ನಡೆಯುತ್ತಿದ್ದಾಗಲೂ ಕೂಡ ಶೇ. 50 ರಷ್ಟು ಮಾತ್ರ ಹೆಚ್ಚಾಗಬಹುದು (ಶೇ. 19 vs ಶೇ. 29). ಏನೇ ಆದರೂ ಜನರಲ್‌ ಮೋಟರ್ಸ್‌ ಕಂಪೆನಿಯು ಹೆಚ್ಚಿನ ವೋಲ್ಟ್‌ನ ಎಂಜಿನ್ ಮತ್ತು ಜನರೇಟರ್‌ಗೆ ತಕ್ಕಂತೆ ನಿಮಿಷಕ್ಕೆ 1,200 ಮತ್ತು 4,000 ಪರಿಭ್ರಮಣೆ ಹಾಕುವ ಸಾಮರ್ಥ್ಯ ಹೊಂದಿರುವಂತೆ ರೂಪಿಸಲ್ಪಟ್ಟಿರುತ್ತವೆ. ಲೋಟಸ್ ಕಂಪನಿಯು ಎರಡು ವೇಗದಲ್ಲಿ ಓಡಬಲ್ಲಂತಹ ಎಂಜಿನ್-ಜನರೇಟರ್ ನ್ನು ಪರಿಚಯಿಸಿದೆ. ಇದು 15 ಕಿ.ವ್ಯಾ. ಶಕ್ತಿಯನ್ನು 1,500 ಆರ್.ಪಿ.ಎಂ. ನಲ್ಲಿ ಮತ್ತು 35 ಕಿ.ವ್ಯಾ. ಶಕ್ತಿಯನ್ನು 3,500 ಆರ್.ಪಿ.ಎಂ. ನಲ್ಲಿ ಒಟ್ಟು ಸೇರಿಸಿದ ವಿದ್ಯುತ್ ಜನರೇಟರ್ ಮೂಲಕ ನೀಡಬಲ್ಲದು.[೧೯]

ಎಂಜಿನ್‌ನ ಅವಶ್ಯಕತೆ ವಾಹನದ ವೇಗಕ್ಕೆ ನೇರ ಸಂಬಂಧ ಹೊಂದಿಲ್ಲ. ಇದು ಎಂಜಿನ್ ದಕ್ಷತೆಗೆ ಅಥವಾ ಬೇರೆ ಎಂಜಿನ್ ಬಳಕೆಗೆ ಪೂರಕವಾಗಿದೆ. ಮೈಕ್ರೋ ಟರ್ಬೈನ್, ರೋಟರಿ ಎಟ್ಕಿನ್ ಸನ್ ಸೈಕಲ್ ಎಂಜಿನ್ ಅಥವಾ ರೇಖೆಯಂತಹ ದಹನಕಾರಿ ಎಂಜಿನ್ ಬಳಕೆಗೆ ಸಹಕಾರಿಯಾಗಿದೆ.[೨೦][೨೧]

ಇಲ್ಲಿ ಕಾರ್ಯ ಮಾಡಲು ಕೆಲವು ಹಂತಗಳಿವೆ: ದಹನಕಾರಿ ಎಂಜಿನ್‌ನಿಂದ ಹೊರಡುವ ಶಕ್ತಿ ಜನರೇಟರ್ ಗೆ, ನಂತರ ವಿದ್ಯುತ್ ಮೋಟರ್‌‍ಗೆ ವರ್ಗಾಯಿಸಲ್ಪಡುತ್ತದೆ. ಇದರ ನಂತರ ವಾಹನದ ಡಿಸೈನ್‌ಗೆ ತಕ್ಕಂತೆ ಜನರೇಟರ್ ಮೂಲಕ ಚಲಿಸಿ, ಬ್ಯಾಟರಿ ಪ್ಯಾಕ್ ಮೂಲಕ ವಿದ್ಯುತ್ ಮೋಟರ್‌‍ಗೆ ವರ್ಗಾವಣೆಯಾಗುತ್ತದೆ. ಮುಂದಕ್ಕೆ ಸಾಗಿದಂತೆ ಸಾಮರ್ಥ್ಯ ಕಡಿಮೆಯಾಗುತ್ತ ಸಾಗುತ್ತದೆ (ಉದಾಹರಣೆಯನ್ನು ನೋಡಿ). ಪ್ರತಿ ಹಂತದಲ್ಲಿ ಒಂದು ಮೂಲದಿಂದ ಮತ್ತೊಂದು ಮೂಲಕ್ಕೆ ಶಕ್ತಿ ವರ್ಗಾವಣೆಯಾದಾಗ ಶಕ್ತಿ ನಷ್ಟವಾಗುತ್ತದೆ. ಆದರೂ ಸಾಮಾನ್ಯ ವಾಹನದಲ್ಲಿ ಕಾರ್ಯ ನಿರ್ವಹಣೆಯು ಬ್ಯಾಟರಿ ಸಂಗ್ರಾಹಕದಿಂದ ಬ್ರೇಕ್ ಹಾಕಿದಾಗ ಗಳಿಸಿದ ಶಕ್ತಿ ಬಫರ್ ಆಗುತ್ತದೆ. ಮತ್ತು ದಹನಕಾರಿ ಎಂಜಿನ್‌ನ ಅತ್ಯಂತ ಅನುಕೂಲವಾದ ಸ್ಥಿತಿಯು ವರ್ಗಾವಣೆಯ ಹಂತಗಳಲ್ಲಿ ಶಕ್ತಿಯು ನಷ್ಟವಾಗೂತ್ತಿದ್ದರೂ ಕಾರ್ಯನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. 70–80%. ಯಾಂತ್ರಿಕತೆಗೆ ಸ್ವಯಂಚಾಲಿತವಾಗಿ ಶೇ. 70 ರಿಂದ 80 ರಷ್ಟು ದಕ್ಷತೆಯನ್ನು ಪ್ರಸರಿಸಬಲ್ಲದು. 98%.[ಸೂಕ್ತ ಉಲ್ಲೇಖನ ಬೇಕು] ಮಾಮೂಲಿ ಯಾಂತ್ರಿಕ ಕ್ಲಚ್‌ಗೆ ಎಂಜಿನ್‌ನಿಂದ ಶೇ. 98 ರಷ್ಟು ಶಕ್ತಿ ಪ್ರಸರಣ ಮಾಡಬಲ್ಲದು. ಸೀರೀಸ್ ಹೈಬ್ರಿಡ್ ವಾಹನದಲ್ಲಿ ಹೈವೇಯಲ್ಲಿನ ತೀವ್ರ ವೇಗದ ಅತ್ಯಂತ ದೂರದ ಪ್ರಯಾಣದ ಸಂದರ್ಭದಲ್ಲಿ ದಹನಕಾರಿ ಎಂಜಿನ್ ಅತ್ಯಂತ ಗರಿಷ್ಠ ಮಟ್ಟದ ಶಕ್ತಿ ಪೂರೈಸಬೇಕಾಗುತ್ತದೆ. ಸೀರೀಸ್ ಹೈಬ್ರಿಡ್ ನಲ್ಲಿ ಸಮಾನಾಂತರ ಹೈಬ್ರಿಡ್ ಗಿಂತ ಶೇ. 20 ರಿಂದ 30 ರಷ್ಟು ಕಡಿಮೆ ದಕ್ಷತೆ ಇರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಮೋಟರ್ ಚಾಲಿತ ಗಾಲಿಯ ಉಪಯೋಗವು ನೇರವಾಗಿ ಯಾಂತ್ರಿಕ ಪ್ರಸರಣ ಮೂಲಪಾಠವನ್ನು ಕೊನೆಗಾಣಿಸುತ್ತದೆ. ಗೇರ್ ಬಾಕ್ಸ್, ಪ್ರಸರಣ ರೇಖೆ, ಬೇಧಕ ಹಾಗೂ ಕೆಲವು ಬಾರಿ ಸ್ಥಿತಿಸ್ಥಾಪಕತ್ವ ಗುಣ ಹೊಂದಿದ ಎರಡು ವಸ್ತುಗಳನ್ನೂ ಬೇರ್ಪಡಿಸುತ್ತದೆ. ಇದು ವಾಹನಕ್ಕೆ ಅತ್ಯಂತ ಸರಳತೆ ನೀಡುತ್ತದೆ. ಒಂದು ವೇಳೆ ಮೋಟರ್ ಗಳು ಚಕ್ರಗಳಲ್ಲಿ ಒಟ್ಟು ಸೇರಿದ್ದರೆ ಅನ್ ಸ್ಪ್ರಂಗ್ ಸಮೂಹ ಹೆಚ್ಚುತ್ತದೆ ಮತ್ತು ತೂಗುವಿಕೆಯ ಜವಾಬ್ದಾರಿ ಕಡಿಮೆಯಾಗುತ್ತದೆ.ಇದು ಚಾಲನೆಯ ದಕ್ಷತೆ ಹಾಗೂ ಸಂಭವನೀಯ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆ. ಏನೇ ಆದರೂ ಚಕ್ರದ ಮಧ್ಯೆ ಇರುವ ಎಲ್ಲ ಹೈ-ಪಾ ಚಾಲನೆಯಂತ ವಿದ್ಯುತ್ ಮೋಟರ್ ಗಳು ಅತ್ಯಂತ ಸಣ್ಣದಾಗಿ, ಹಗುರವಾಗಿದ್ದು ಅನುಪಾತದಲ್ಲಿ ಹೆಚ್ಚು ಶಕ್ತಿಯುತವಾಗಿ ತೂಕದಲ್ಲಿದ್ದರೂ ಪರಿಣಾಮ ಅತ್ಯಂತ ಸೂಕ್ಷ್ಮವಾಗಿರಬೇಕು. ಚಕ್ರಗಳಲ್ಲಿರುವ ಮೋಟರ್ ಗಳು ಬ್ರೇಕ್ ಹಾಕುವಲ್ಲಿ ಸಹಾಯಕವಾಗಿದ್ದರೆ ಬ್ರೇಕ್ ಯಾಂತ್ರಿಕತೆ ಹಗುರವಾಗಿಯೂ ಇರಬಹುದು. ಚಕ್ರಗಳ ಸಮೂಹದಲ್ಲಿ ಅನ್ ಸ್ಪ್ರಂಗ್ ಸಮೂಹವನ್ನು ಕಡಿಮೆ ಮಾಡಲು ಹಗುರವಾದ ಅಲ್ಯೂಮಿನಿಯಂ ಚಕ್ರಗಳನ್ನು ಉಪಯೋಗಿಸಬಹುದು. ವಾಹನದ ಮೇಲ್ಭಾಗದಲ್ಲಿ ಭಾರವಾದ ಯಾಂತ್ರಿಕತೆ ಮತ್ತು ಬ್ಯಾಟರಿ ಸಂಗ್ರಾಹಕ ಇಡುವುದರಿಂದ ವಾಹನದ ಮಧ್ಯಭಾಗವನ್ನು ಕಡಿಮೆ ಮಾಡಲು ಸಾಧ್ಯ. ಇದರಿಂದ ಹೆಚ್ಚು ಉಪಯೋಗಕಾರಿಯಂತೆ ವಾಹನವನ್ನು ಬದಲಾಯಿಸಬಹುದು. ಒಮ್ಮೆ ಮೋಟರ್ ಗಳು ವಾಹನದ ಭಾಗಗಳಿಗೆ ಅಳವಡಿಸಲ್ಪಟ್ಟಿದ್ದರೆ ಜೊತೆಯಲ್ಲಿಯ ಸ್ಥಿತಿಸ್ಥಾಪಕತ್ವ ಅನಿವಾರ್ಯವಾಗುತ್ತದೆ. ಚಕ್ರಗಳಲ್ಲಿನ ಮೋಟರ್ ಸ್ವತಂತ್ರವಾಗಿದ್ದಾಗ ಉಪಯೋಗವೆಂದರೆ ಚಕ್ರಗಳ ಮೇಲೆ ಸರಳವಾಗಿ ಹಿಡಿತ ಸಾಧಿಸಬಹುದು. ಅಲ್ಲದೆ, ಕೆಳ ಅಂತಸ್ತು ಇಡುವುದರ ಮೂಲಕ ಎಲ್ಲ ಚಕ್ರಗಳನ್ನೂ ಅಗತ್ಯ ಬಿದ್ದಲ್ಲಿ ಚಲಾಯಿಸಬಹುದು. ಇದು ಬಸ್‌ಗಳಲ್ಲಿ ಹೆಚ್ಚು ಉಪಯೋಗಕಾರಿಯಾಗಿದೆ. ಕೆಲವು 8 ಬೈ 8 ಇರುವ ಎಲ್ಲ ಚಕ್ರಗಳನ್ನೂ ಚಲಾಯಿಸಬಹುದಾದ ಸೈನ್ಯದ ವಾಹನಗಳಲ್ಲಿ ಚಕ್ರಗಳಿಗೆ ವೈಯಕ್ತಿಕ ಮೋಟರ್ ಗಳನ್ನು ಬಳಸಲಾಗುತ್ತದೆ. ಡೀಸೆಲ್-ವಿದ್ಯುತ್ ರೇಲ್ವೆಗಳು ಸುಮಾರು 60 ವರ್ಷಗಳವರೆಗೆ ಈ ಪದ್ಧತಿಯನ್ನು ಉಪಯೋಗಿಸಿವೆ.

ಸಾಮಾನ್ಯ ರಸ್ತೆಯ ಮೇಲೆ ಓಡುವ ವಾಹನಗಳಲ್ಲಿ ಸೀರೀಸ್ ಹೈಬ್ರಿಡ್ ಪ್ರಸರಣ ಜೋಡಣೆಯು ಮಾಮೂಲಿ ಯಾಂತ್ರಿಕ ಶಕ್ತಿ ಪ್ರಸರಣಕ್ಕೆ ಸಮಾನವಾದ ಜೋಡಣೆ, ಮೋಚಕ ಜಾಗ ಹಾಗೂ ಕಡಿಮೆ ಭಾರಕ್ಕಿಂತಲೂ ಚಿಕ್ಕದಾಗಿ ಹಾಗೂ ಹಗುರವಾಗಿರುತ್ತದೆ. ದಹನಕಾರಿ ಜನರೇಟರ್ ಕೇವಲ ಅಗತ್ಯ ಕೇಬಲ್ ಗಳನ್ನು ಮಾತ್ರ ಚಾಲನೆಯ ವಿದ್ಯುತ್ ಮೋಟರ್ ಗೆ ಜೋಡಿಸುತ್ತದೆ. ಆದ್ದರಿಂದ ವಾಹನಕ್ಕೆ ಅತ್ಯುಚ್ಛ ಮಟ್ಟದ ಭಾರದ ಹಂಚಿಕೆ ಹಾಗೂ ಅಥವಾ ಕ್ಯಾಬಿನ್ ದೊಡ್ಡದಾಗಿಸಲು ಸಹಾಯಕವಾಗುವಂತೆ ವಾಹನದ ಭಾಗಗಳ ಇಡುವಿಕೆ ಸ್ಥಿತಿ ಸ್ಥಾಪಕತ್ವ ಹೊಂದಿರುತ್ತದೆ.

1997 ರಲ್ಲಿ ಟೋಯೋಟಾ ಕಂಪನಿಯು ಬಿಟ್ಟ ಮೊದಲ ಸೀರೀಸ್ ಹೈಬ್ರಿಡ್ ಬಸ್ ಜಪಾನ್ ನಲ್ಲಿ ಮಾರಾಟವಾಯಿತು.[೨೨] ಅಷ್ಟರಲ್ಲಿಯೇ 2011 ನೇ ವರ್ಷದಲ್ಲಿ ಜಿಎಂ ಕಂಪನಿಯ ಪ್ರಧಾನ ವ್ಯವಸ್ಥಾಕರು ಚೆವಿ ವೋಲ್ಟ್ ಪರಿಚಯಿಸಲು ಅಪೇಕ್ಷೆಪಟ್ಟರು. ವಿದ್ಯುತ್ ನಿಂದ 40 ಮೈಲುಗಳಷ್ಟು[೨೩] ದೂರ ಚಲಿಸಬಲ್ಲ ವಾಹನಕ್ಕೆ 40 ಸಾವಿರ ಡಾಲರ್ ದರ ನಿಗದಿಪಡಿಸಲಾಯಿತು.[೨೪] ಲಿಥಿಯಂ ಅಯಾನ್ ಬ್ಯಾಟರಿ ಸಂಗ್ರಾಹಕದ ಜೊತೆ ಸೂಪರ್ ಕೆಪಾಸಿಟರ್ ಕೂಡಿಸಿ ಬದಲಾಯಿಸಲ್ಪಟ್ಟ ಸಟರ್ನ್ ವ್ಯು ಎಸ್.ಯು.ವಿ. ವಾಹನದಲ್ಲಿ ಎಎಫ್ಎಸ್ ಟ್ರಿನಿಟಿ ವತಿಯಿಂದ ಉಪಯೋಗಿಸಲಾಯಿತು. ಸೂಪರ್‌ಕೆಪಾಸಿಟರ್ ಉಪಯೋಸಿ ಸೀರೀಸ್ ಹೈಬ್ರಿಡ್ ಜೋಡಣೆಯಿಂದ ಅವರು 150 ಎಂಪಿಜಿ ಗಳನ್ನು ಗಳಿಸಿದರು.[೨೫]

ಹೈಬ್ರಿಡ್ ವಿದ್ಯುತ್ ವಾಹನದಲ್ಲಿ ಪ್ಲಗ್ ಉಪಯೋಗ(PHEV)

ಬದಲಾಯಿಸಿ

ಹಬ್ರಿಡ್ ಮಾರುಕಟ್ಟೆಗೆ ಸೇರಿಸಲ್ಪಟ್ಟ ಮತ್ತೊಂದು ಉಪ ಪದ್ಧತಿ ಎಂದರೆ ಪ್ಲಗ್ ಇನ್ ಹೈಬ್ರಿಡ್ ಇಲೆಕ್ಟ್ರಿಕ್ ವೆಹಿಕಲ್ (ಪಿಎಚ್ಇವಿ). ಈ ಪದ್ಧತಿಯು ಸಂಗ್ರಾಹಕ ಶಕ್ತಿ ಹೆಚ್ಚಿಸಲ್ಪಟ್ಟ (ಸಾಮಾನ್ಯವಾಗಿ ಲಿ-ಅಯಾನ್ ಬ್ಯಾಟರಿಗಳು) ಸಾಮಾನ್ಯ ಇಂಧನ-ವಿದ್ಯುತ್ (ಸಮಾನಾಂತರ ಅಥವಾ ಕ್ರಮಾಂಕ) ಹೈಬ್ರಿಡ್ ಆಗಿದೆ. ಇದನ್ನು ಪ್ರಯಾಣದ ನಂತರ ವಿದ್ಯುತ್ ಮೇನ್ ಬೋರ್ಡ್ ಗೆ ಚಾರ್ಜಿಂಗ್ ಗಾಗಿ ಸಂಪರ್ಕಿಸಬಹುದು. ಇದರಿಂದ ವಾಹನದೊಳಗಿನ ದಹನಕಾರಿ ಎಂಜಿನ್ ಮೂಲಕ ಚಾರ್ಜ್ ಮಾಡುವುದನ್ನು ನಿರ್ಲಕ್ಷಿಸಬಹುದು.[೨೬][೨೭]

ಈ ಯೋಚನೆಯು ರಸ್ತೆ ಪ್ರಯಾಣದಲ್ಲಿ ಇಂಧನ ಹೊರಸೂಸುವಿಕೆ ಕಡಿಮೆ ಮಾಡಲು ಅಪೇಕ್ಷಿಸುವವರು ಅಥವಾ ಚಾಲನೆಯ ಸಂದರ್ಭದಲ್ಲಿ ಐಸಿಇ ಯನ್ನು ಕಡಿಮೆ ಮಾಡಲು ಬಯಸುವವರನ್ನು ಆಕರ್ಷಿಸುತ್ತದೆ. ಸಂಪೂರ್ಣ ವಿದ್ಯುತ್ ವಾಹನದಲ್ಲಿ ಇಂಧನದ ಹೊರಸೂಸುವಿಕೆ ಇರುವುದಿಲ್ಲ. ಉದಾ. ಸಿಓ2 ಪದ್ಧತಿಯಲ್ಲಿ ಶಕ್ತಿಯ ಮೂಲವಾದ ವಿದ್ಯುತ್ ಉತ್ಪಾದಿಸುವ ಕಂಪನಿಯ ಮೇಲೆ ಅವಲಂಬಿತವಾಗಿರುತ್ತದೆ.

ಕೆಲವು ಗ್ರಾಹಕರಿಗೆ ವಿದ್ಯುತ್ ವಾಹನವು ಆರ್ಥಿಕವಾಗಿಯೂ ಆಕರ್ಷಿಸುತ್ತದೆ. ಏಕೆಂದರೆ ವಿದ್ಯುತ್ ಶಕ್ತಿಯು ಪೆಟ್ರೋಲ್-ಡೀಸೆಲ್ ಇಂಧನಕ್ಕಿಂತಲೂ ಅಗ್ಗವಾಗಿ ಸಿಗುತ್ತದೆ. ಯುರೋಪ್ ನ ಕೆಲವು ರಾಷ್ಟ್ರಗಳಲ್ಲಿ ಮಿನರಲ್ ಎಣ್ಣೆಯ ಮೇಲಿನ ತೆರಿಗೆಯನ್ನೇ ದೇಶದ ಪ್ರಮುಖ ಆದಾಯ ಮೂಲವಾಗಿದೆ. ಇದು ಸಾಮಾನ್ಯವಾಗಿ ವಿದ್ಯುತ್ ಅವಲಂಬಿಸಿದವರಿಗೆ ಸಂಬಂಧಪಡದೆ ಕೌಟುಂಬಿಕ ಗ್ರಾಹಕರಿಗೆ ಅನ್ವಯಿಸುತ್ತಿದ್ದು, ಆ ಗ್ರಾಹಕ ಏನೇ ಆದರೂ ಉಪಯೋಗಿಸುತ್ತಾನೆ. ಕೆಲವು ವಿದ್ಯುತ್ ಸರಬರಾಜುದಾರರು ಜನಸಂದಣಿ ಇಲ್ಲದ ರಾತ್ರಿ ಸಮಯದಲ್ಲಿ ಪ್ರಯಾಣ ಮಾಡಲು ಇಚ್ಛಿಸುವವರಿಗೆ ಬೆಲೆಯಲ್ಲಿ ಕಡಿತ ಮಾಡುತ್ತಾರೆ. ಇದು ಕೆಲವು ಪ್ರತಿದಿನ ಪ್ರಯಾಣ ಮಾಡುವವರಿಗೆ ಹಾಗೂ ಪಟ್ಟಣ ಪ್ರದೇಶದ ಚಾಲಕರನ್ನು ಪ್ಲಗ್-ಇನ್ ಪದ್ಧತಿಯತ್ತ ಆಕರ್ಷಿಸಬಲ್ಲದು.

ಇಂಧನ ಕೋಶ, ವಿದ್ಯುತ್ ಹೈಬ್ರಿಡ್

ಬದಲಾಯಿಸಿ

ಇಂಧನ ಕೋಶ ಹೈಬ್ರಿಡ್ ಎಂದರೆ ಸಾಮಾನ್ಯವಾಗಿ ವಿದ್ಯುತ್ ವಾಹನವನ್ನು ಇಂಧನ ಕೋಶದ ಜೊತೆಗೆ ಸಜ್ಜುಗೊಳಿಸುವುದು. ಇಂಧನ ಕೋಶ ಹಾಗೂ ವಿದ್ಯುತ್ ಬ್ಯಾಟರಿ ಎರಡೂ ಶಕ್ತಿಯ ಮೂಲಗಳು ಸೇರಿ ವಾಹನವನ್ನು ಹೈಬ್ರಿಡ್ ಅನ್ನಾಗಿ ಮಾಡುತ್ತವೆ. ಇಂಧನ ಕೋಶಗಳು ಜಲಜನಕವನ್ನು ಇಂಧನವನ್ನಾಗಿ ಉಪಯೋಗಿಸುತ್ತದೆ ಮತ್ತು ವಿದ್ಯುತ್ ಬ್ಯಾಟರಿ ಖಾಲಿಯಾದಾಗ ಅದಕ್ಕೆ ಶಕ್ತಿ ಪೂರೈಸುತ್ತದೆ. ಚೆವರ್ಲೇಟ್ ಎಕ್ವಿನಾಕ್ಸ್ ಎಫ್ ಸಿಇವಿ, ಫೋರ್ಡ್ ಎಡ್ಜ್ ಹೈಸೀರೀಸ್ ಡ್ರೈವ್ ಮತ್ತು ಹೊಂಡಾ ಎಫ್ ಸಿಎಕ್ಸ್ ಗಳು ಇಂಧನಕೋಶ-ವಿದ್ಯುತ್ ಹೈಬ್ರಿಡ್ ಗೆ ಉತ್ತಮ ಉದಾಹರಣೆಗಳು.

ಪರಿಸರ ಸಮಸ್ಯೆಗಳು

ಬದಲಾಯಿಸಿ

ಇಂಧನ ಅನುಭೋಗ ಮತ್ತು ಹೊರಸೂಸುವಿಕೆಯಲ್ಲಿ ಕಡಿತ

ಬದಲಾಯಿಸಿ
ಹೈಬ್ರಿಡ್ ವಾಹನ ನಮೂನೆಗಳು ಸಾಮಾನ್ಯ ಆಂತರಿಕ ದಹನಕಾರಿ ಎಂಜಿನ್ ವಾಹನ (ICEVs)ಕ್ಕಿಂತಲೂ ಕಡಿಮೆ ಹೊರಸೂಸುವಿಕೆ ಮತ್ತು ಆರ್ಥಿಕ ಉಳಿತಾಯವನ್ನು ಹೊಂದಿದ್ದು, ಅದರ ಪರಿಣಾಮವಾಗಿ ಕಡಿಮೆ ಹೊರ ಸೂಸುವಿಕೆ ಉಂಟಾಗುತ್ತದೆ. ಈ ಉಳಿತಾಯವು ಹೈಬ್ರಿಡ್ ನಮೂನೆಯ ವಾಹನಗಳಲ್ಲಿ ಪ್ರಾಥಮಿಕವಾಗಿ ಮೂರು ಮೂಲಗಳಿಂದ ಸಾಧ್ಯವಾಗಿದೆ: 
  1. ಹೆಚ್ಚಿನ ಶಕ್ತಿ ಅಗತ್ಯವಾದಾಗ ಎಂಜಿನ್ ಹಾಗೂ ವಿದ್ಯುತ್ ಮೋಟರ್ ಗಳೆರಡರ ಮೇಲೂ ಅವಲಂಬಿಸುವುದು. ಹೆಚ್ಚಿನ ಶಕ್ತಿ ಉಪಯೋಗಿಸುವ ಸಮಯದಲ್ಲಿ ಯಾವಾಗಲೂ ಸಣ್ಣ ಪ್ರಮಾಣದ ಎಂಜಿನ್ ಉಪಯೋಗಿಸಬಹುದು. ಸಣ್ಣ ಪ್ರಮಾಣದ ಎಂಜಿನ್ ಕಡಿಮೆ ಆಂತರಿಕ ಶಕ್ತಿ ಮತ್ತು ಭಾರವನ್ನು ಕಳೆದುಕೊಳ್ಳುತ್ತದೆ.
  2. ನಿಂತು ಹೊರಡುವ ತಾಣಗಳಲ್ಲಿನ ಉಪಯೋಗಕ್ಕಾಗಿ ಸಾಕಷ್ಟು ಸಂಗ್ರಾಹಕ ಶಕ್ತಿಯುಳ್ಳ ಬ್ಯಾಟರಿ ಉಪಯೋಗಿಸುವುದು ಮತ್ತು ಹಿಡಿದಿಟ್ಟುಕೊಂಡ ಶಕ್ತಿಯನ್ನು ಮತ್ತೆ ಉಪಯೋಗಿಸುವುದು.
  3. ಬ್ರೇಕ್ ಹಾಕುವ ಸಮಯದಲ್ಲಿ ಉಷ್ಣದಿಂದ ವ್ಯರ್ಥವಾಗುವ ಸಾಕಷ್ಟು ಪ್ರಮಾಣದ ಶಕ್ತಿಯನ್ನು ಪುನಃ ಸಂಪಾದಿಸುವುದು. ಈ ಶಕ್ತಿ ಉತ್ಪಾದಕ ಬ್ರೇಕಿಂಗ್ ವಾಹನದ ವೇಗವನ್ನು ತಗ್ಗಿಸುವಾಗ ಚಲನೆಯ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ. ಇದು ಮೋಟರ್ ಅಥವಾ ಶಕ್ತಿ ಉತ್ಪಾದಕಗಳ ಮೇಲೆ ಅವಲಂಬಿತವಾಗಿರುತ್ತದೆ.

ಹೈಬ್ರಿಡ್ ಲಕ್ಷಣಗಳಲ್ಲಿ ಇಲ್ಲದಿದ್ದರೂ ಹೈಬ್ರಿಡ್ ವಾಹನಗಳಲ್ಲಿ ಇತ್ತೀಚೆಗೆ ಕಂಡುಬಂದ ಇತರ ತಂತ್ರಗಳು:

  1. ಟ್ರಾಫಿಕ್ ನಿಲ್ದಾಣಗಳಲ್ಲಿ, ಶಕ್ತಿಯ ಅಗತ್ಯವಿಲ್ಲದೆ ಚಲಿಸಬಹುದಾದ ಸಂದರ್ಭಗಳಲ್ಲಿ ಅಥವಾ ಇತರ ಅನಗತ್ಯ ಸಂದರ್ಭಗಳಲ್ಲಿ ಎಂಜಿನ್ ಬಂದ್ ಮಾಡುವುದು;
  2. ಏರೋಡೈನಾಮಿಕ್ ಸುಧಾರಿಸುವುದು: (ಕಾರಣವೆಂದರೆ ಎಸ್.ಯು.ವಿ. ಗಳು ಕಾರಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇಂಧನ ಉಳಿತಾಯ ಗುಣ ಪಡೆದಿದೆ. ಒಂದು ಪೆಟ್ಟಿಗೆ ರೂಪದ ಕಾರು ಅಥವಾ ಟ್ರಕ್ ಗಳು ಚಲಿಸಲು ಹೆಚ್ಚಿನ ಶಕ್ತಿ ಪ್ರಯೋಗಿಸಬೇಕಾಗುತ್ತದೆ. ಇದಕ್ಕಾಗಿ ಎಂಜಿನ್ ಮೇಲೆ ಗಾಳಿಯ ಮೂಲಕ ಹೆಚ್ಚಿನ ಒತ್ತಡ ಹೇರಬೇಕಾಗುತ್ತದೆ). ಕಾರಿನ ಆಕಾರ ಹಾಗೂ ಏರೋಡೈನಾಮಿಕ್ ಬದಲಾಯಿಸುವುದು ಇಂಧನ ಉಳಿತಾಯಕ್ಕೆ ಹಾಗೂ ವಾಹನದ ನಿಯಂತ್ರಣಕ್ಕೆ ಒಂದೇ ಸಮಯದಲ್ಲಿ ಸಹಾಯಕವಾಗಬಲ್ಲ ಉತ್ತಮ ಮಾರ್ಗ.
  3. ಕಡಿಮೆ ಉರುಳುವಿಕೆ ಸಾಮರ್ಥ್ಯ ಇರುವ ಟಯರ್ ಉಪಯೋಗಿಸುವುದು (ಟಯರ್ ಗಳು ಸಾಮಾನ್ಯವಾಗಿ ನೆಮ್ಮದಿ, ಸುಗಮ ಚಾಲನೆ, ಉತ್ತಮ ಹಿಡಿತ ಇತರ ಗುಣಗಳಿಂದ ಮಾಡಲ್ಪಟ್ಟಿರುತ್ತವೆ. ಆದರೆ, ದಕ್ಷತೆ ಇಲ್ಲಿ ಕಡೆಗಣಿಸಲ್ಪಟ್ಟಿರುತ್ತದೆ). ಟಯರ್ ಗಳು ಯಾಂತ್ರಿಕವಾಗಿ ಹೆಚ್ಚು ಒತ್ತಡ ಹಾಕುತ್ತವೆ. ಅಲ್ಲದೇ, ಎಂಜಿನ್ ಮತ್ತೂ ಹೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸಿ ಹೆಚ್ಚು ಇಂಧನ ವೆಚ್ಚಕ್ಕೆ ಕಾರಣವಾಗುತ್ತವೆ. ಹೈಬ್ರಿಡ್ ಕಾರುಗಳು ವಿಶೇಷ ಟಯರ್ ಗಳನ್ನು ಉಪಯೋಗಿಸುತ್ತಿದ್ದು, ಸಾಮಾನ್ಯ ಟಯರ್ ಗಿಂತ ಹೆಚ್ಚು ಗಾಳಿ ತುಂಬಿರಲಾಗುತ್ತದೆ, ಹೆಚ್ಚು ಕಠಿಣವಾಗಿರುತ್ತದೆ, ಕಳೇಬರದ ಆಕಾರ ಹೊಂದಿದ್ದು, ರಬ್ಬರ್ ನ ಸುತ್ತುವರಿಕೆಯ ಕಾರಣ ಹಿಡಿತ ಸಾಧಿಸುವ ಸಂದರ್ಭದಲ್ಲಿ ಕಡಿಮೆ ಉರುಳುವಿಕೆಯ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಯಾವುದೇ ಇಂಧನ ಮೂಲವಾದರೂ ಇಂಧನ ಉಳಿತಾಯ ಸುಧಾರಿಸಿರುತ್ತದೆ.
  4. ಹವಾನಿಯಂತ್ರಿತ ಕ್ಕೆ ಶಕ್ತಿ ಕೊಡುವುದು, ಶಕ್ತಿಯುತ ಸ್ಟಿಯರಿಂಗ್ ಮತ್ತು ಇತರ ಸಹಕಾರಿ ವಿದ್ಯುತ್ ಪಂಪ್ ಗಳಿಗೆ ಮತ್ತು ಅಗತ್ಯ ಬಿದ್ದ ಸಂದರ್ಭದಲ್ಲಿ. ಸಾಂಪ್ರದಾಯಿಕ ಎಂಜಿನ್ ಗೆ ಹೊಲಿಸಿದಲ್ಲಿ ಒಂದೇ ಸಮನೆ ವಾಹನ ಚಲಿಸುವಾಗ ಇದು ಯಾಂತ್ರಿಕ ನಷ್ಟವನ್ನು ಕಡಿಮೆ ಮಾಡುತ್ತದೆ.

ಈ ವೈಶಿಷ್ಠ್ಯಗಳು ಹೈಬ್ರಿಡ್ ವಾಹನಗಳು ನಗರ ಪ್ರದೇಶದ ಟ್ರಾಫಿಕ್ ಪ್ರದೇಶ, ಕರಾವಳಿ ಮತ್ತು ಇತರ ಅನಗತ್ಯ ಸಂದರ್ಭಗಳಲ್ಲಿ ಹೆಚ್ಚು ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿವೆ. ಇಂತಹ ಹೆಚ್ಚುವರಿ ಸಂದರ್ಭಗಳಲ್ಲಿ ವಿಶೇಷವಾಗಿ ಅನಗತ್ಯ ಸಂದರ್ಭದಲ್ಲಿ ಮತ್ತು ಕಡಿಮೆ ವೇಗದ ಚಾಲನೆಯಲ್ಲಿ ಶಬ್ದದ ಹೊರಸೂರುವಿಕೆ ಸಾಮಾನ್ಯ ಎಂಜಿನ್ ವಾಹನಕ್ಕಿಂತ ಕಡಿಮೆಯಾಗುತ್ತದೆ. ಆದರೆ, ಹೈವೇಯಲ್ಲಿನ ತೀವ್ರ ವೇಗದ ಒಂದೇ ಸಮನೆ ಚಾಲನೆಯ ಸಂದರ್ಭದಲ್ಲಿ ಈ ವೈಶಿಷ್ಠ್ಯಗಳು ಇಂಧನ ಹೊರಸೂಸುವಿಕೆ ಕಡಿತಗೊಳಿಸುವಲ್ಲಿ ಉಪಯೋಗಕ್ಕೆ ಬರುವುದಿಲ್ಲ.

ಹೈಬ್ರಿಡ್ ವಾಹನದಲ್ಲಿ ಹೊರಸೂಸುವಿಕೆ

ಬದಲಾಯಿಸಿ

ಇಂದು ಹೈಬ್ರಿಡ್ ವಾಹನದಲ್ಲಿ ಇಂಧನ ಹೊರಸೂಸುವಿಕೆಯು ಇಪಿಎ (ಪರಿಸರ ರಕ್ಷಣಾ ಸಂಸ್ಥೆ) ಸೂಚನೆಗೆ ಹತ್ತಿರವಾಗಿ ಅಥವಾ ಅದಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದೆ. ಇಪಿಎ ನವರು ಸಾರ್ವಜನಿಕ ವಾಹನಗಳು ಸುಮಾರು 5.5 ಮೆಟ್ರಿಕ್ ಟನ್ ಇಂಗಾಲಕ್ಕೆ ಸಮನಾದ ಇಂಧನ ಹೊರಸೂಸಬಹುದು ಎಂದು ತಿಳಿಸಿದೆ. ಅತ್ಯಂತ ಜನಪ್ರಿಯ 3 ಹೈಬ್ರಿಡ್ ವಾಹನಗಳಾದ ಹೊಂಡಾ ಸಿವಿಕ್, ಹೊಂಡಾ ಇನ್‌ಸೈಟ್ ಮತ್ತು ಟೋಯೋಟಾ ಪ್ರಿಯಸ್‌ಗಳು ಕೇವಲ 4.1, 3.5 ಮತ್ತು 3.5 ಟನ್ ಇಂಗಾಲ ಹೊರಸೂಸುತ್ತಿದ್ದು, ಉತ್ತಮ ಸುಧಾರಣೆ ಕಂಡಿವೆ. ಇಂಧನಗಳಿಂದ ಚಲಿಸುವ ಹೊಗೆ ಬಿಡುವ ಹೈಬ್ರಿಡ್ ವಾಹನಗಳು ವಾತಾವರಣಕ್ಕೆ ಪೂರಕವಾಗಿ ಅತ್ಯುತ್ತಮ ಸುಧಾರಣೆ ಹೊಂದಿವೆ. ಇದು ವಾತಾವರಣದ ಪರಿಣಾಮದ ವಿಷಯದಲ್ಲಿ ಈ ವಾಹನಗಳ ದೊಡ್ಡ ಹೆಜ್ಜೆಯಾಗಿದೆ. ವಿದ್ಯುತ್ ಮತ್ತು ಗ್ಯಾಸ್ ಚಾಲಿತ ವಾಹನದಲ್ಲಿ ಗ್ಯಾಸ್ ಈಗಲೂ ಆರೋಪದಿಂದ ಮುಕ್ತವಾಗಿದೆ. ಇವು ಪೆಟ್ರೋಲಿಯಂನಿಂದಲೇ ಹೊರಬಂದ ಒಂದು ಇಂಧನವಾಗಿದ್ದರೂ ಈಗಲೂ ಕೂಡ ಹಸಿರು ಮನೆ ಪರಿಣಾಮಕ್ಕೆ ವಾಹನಗಳಲ್ಲಿ ಉಪಯೋಗಿಸುವ ಗ್ಯಾಸ್ ಅತ್ಯಂತ ಕಡಿಮೆ ಕೊಡುಗೆ ನೀಡುತ್ತಿವೆ. ವಿದ್ಯುತ್ ಹಾಗೂ ಗ್ಯಾಸ್ ಗಳು ಹೊಂದಿರುವ ಅಲ್ಪ ಅಳತೆ ಹಾಗೂ ಕಡಿಮೆ ಭಾರದ ಕಾರಣದಿಂದ ಹೈಬ್ರಿಡ್ ವಾಹನಗಳು ಕಡಿಮೆ ಶಕ್ತಿ ಉಪಯೋಗಿಸಿಕೊಂಡು ಕಡಿಮೆ ಹೊಗೆ ಹೊರಸೂಸುತ್ತಿವೆ.[೨೮] ವಿದ್ಯುತ್ ಮೋಟರ್ ಸಹಾಯದಿಂದ ಗ್ಯಾಸ್ ಎಂಜಿನ್ ಇನ್ನೂ ಕಡಿಮೆ ಹೊಗೆ ಹೊರಸೂಸಬಲ್ಲದು (ಇದರಿಂದ ಕಡಿಮೆ ಮಾಲಿನ್ಯವಾಗುತ್ತದೆ). ಹೈಬ್ರಿಡ್ ವಾಹನಗಳು ಹೊಗೆ ಉಗುಳುವಿಕೆಯ ಪ್ರಮಾಣವನ್ನು ಶೇ. 90 ರಷ್ಟು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಅರ್ಧದಷ್ಟು ಕಡಿಮೆ ಮಾಡಬಲ್ಲದು.[೨೯] ಇವುಗಳಲ್ಲಿ ಹೆಚ್ಚು ವಾಹನಗಳು ನಗರಪ್ರದೇಶದ ಚಾಲನೆಗೆ ಸಹಾಯಕಾರಿಯಾಗಿ ತಯಾರಿಸಲ್ಪಟ್ಟಿವೆ. ಅತ್ಯಂತ ಹೆಚ್ಚು ಟ್ರಾಫಿಕ್ ಪ್ರಮಾಣ ಇರುವಲ್ಲಿ ಅನಿಲ ಹೊರಸೂಸುವಿಕೆ ಕಡಿಮೆಯಾಗುವ ಕಾರಣ ವಾತಾವರಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ವೈಯಕ್ತಿಕ ಚಾಲನೆಯ ಹವ್ಯಾಸ ಅವಲಂಬಿಸಿದಲ್ಲಿ ಪ್ರತಿದಿನವೂ ಉಪಯೋಗಿಸಲ್ಪಡುವ ಅನಿಲ ಶಕ್ತಿಯ ಮೂಲಕ್ಕೆ ಹೋಲಿಸಿದಾಗ ಹೈಬ್ರಿಡ್ ವಾಹನಗಳಿಂದ ಮಾಲಿನ್ಯ ಪ್ರಮಾಣ ಎಂತಹ ಪ್ರದೇಶದಲ್ಲಿಯೂ ಶೇ. 25 ರಿಂದ 90 ರಷ್ಟು ಕಡಿಮೆಯಾಗಿರುತ್ತದೆ.[೩೦] ಗ್ಯಾಸ್ ನಿಂದ ಓಡುವ ವಾಹನವನ್ನು ಹೈಬ್ರಿಡ್ ವಾಹನಕ್ಕೆ ಹೋಲಿಸಿದಾಗ ಇಲ್ಲೊಂದು ಸಿಓ2 ಪ್ರಮಾಣದ ಹೊರಸೂಸುವಿಕೆಯ ಸಂಪರ್ಕ ಕಂಡುಬರುತ್ತದೆ. [೪] Archived 2010-06-03 ವೇಬ್ಯಾಕ್ ಮೆಷಿನ್ ನಲ್ಲಿ.. ಅಲ್ಲದೆ, ವಿವಿಧ ಬ್ರಾಂಡ್ ಗಳ ಹೈಬ್ರಿಡ್ ವಾಹನಗಳಿಗೆ ಹೋಲಿಸಿದಾಗ ವಿಭಿನ್ನ ರೀತಿಯ ಮಾಲಿನ್ಯದ ರೀತಿಗಳು ಕಂಡುಬರುತ್ತವೆ.  ಏಕೆಂದರೆ ಕೆಲವು ಕಂಪನಿಗಳು ಹೈಬ್ರಿಡ್ ವಾಹನ ತಂತ್ರಜ್ಞಾನವನ್ನು ತಮ್ಮ ಮೂಲ ವಾಹನಕ್ಕೆ ಅಳವಡಿಸುತ್ತಾರೆ ಮತ್ತು ಕೆಲವು ಕಂಪನಿಗಳು ಹೈಬ್ರಿಡ್ ತಂತ್ರಜ್ಞಾನದ ಜೊತೆಗೆ ವಾಹನದ ರೀತಿಯನ್ನೇ ಬದಲಾಯಿಸುತ್ತಾರೆ.  [೫] Archived 2009-02-14 ವೇಬ್ಯಾಕ್ ಮೆಷಿನ್ ನಲ್ಲಿ.

ಹೈಬ್ರಿಡ್ ಬ್ಯಾಟರಿಯಿಂದ ಪರಿಸರದ ಮೇಲಾಗುವ ಪರಿಣಾಮಗಳು

ಬದಲಾಯಿಸಿ

ಹೈಬ್ರಿಡ್ ಕಾರುಗಳು ಇತರ ಸಮಾನ್ಯ ಕಾರುಗಳಿಗಿಂತ ಕಡಿಮೆ ಪೆಟ್ರೋಲ್ ವೆಚ್ಚಕ್ಕೆ ಕಾರಣವಾದರೂ ಹೈಬ್ರಿಡ್ ಕಾರ್ ನ ಬ್ಯಾಟರಿಯು ವಾತಾರವಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಕುರಿತು ವಿವಾದ ಇದ್ದೇ ಇದೆ. ಇಂದು ಹೆಚ್ಚಿನ ಹೈಬ್ರಿಡ್ ಕಾರುಗಳ ಬ್ಯಾಟರಿಗಳು ಈ ಎರಡರಲ್ಲಿ ಒಂದು ರೀತಿಯದಾಗಿರುತ್ತವೆ. (1) ನಿಕ್ಕೆಲ್ ಲೋಹದ ಹೈಬ್ರಿಡ್ ಅಥವಾ (2) ಲಿಥಿಯಂ ಅಯಾನ್. ಈ ಎರಡೂ ಕೂಡ ಇಂದು ಕಾರುಗಳಲ್ಲಿ ದೊಡ್ಡದಾಗಿ ಉಪಯೋಗಿಸಲ್ಪಡುತ್ತಿರುವ ಸೀಸದ ಬ್ಯಾಟರಿಗೆ ಹೋಲಿಸಿದಲ್ಲಿ ವಾತಾವರಣಕ್ಕೆ ಸಹಕಾರಿಯಾಗಿವೆ. ಇವುಗಳಲ್ಲಿ ಅನೇಕ ವಿಧದ ಬ್ಯಾಟರಿಗಳಿವೆ. ಕೆಲವು ಉಳಿದೆಲ್ಲವುಗಳಿಗಿಂತ ಹೆಚ್ಚು ವಿಷದಾಯಕವಾಗಿದೆ.[೩೧] ಸೀಸದ ಆಮ್ಲ ಅಥವಾ ನಿಕ್ಕೆಲ್ ಕ್ಯಾಡ್ಮಿಯಂಗಳು ವಾತಾವರಣಕ್ಕೆ ತೀವ್ರ ಹಾನಿ ಉಂಟು ಮಾಡಿದರೆ, ಇಂದು ಹೈಬ್ರಿಡ್ ಪದ್ಧತಿಯಲ್ಲಿ ಉಪಯೋಗಿಸುತ್ತಿರುವ ರೀತಿಯ ನಿಕ್ಕೆಲ್ ಲೋಹದ ಹೈಬ್ರಿಡ್ ಬ್ಯಾಟರಿಯಲ್ಲಿ ವಿಷದಾಯಕ ಪ್ರಮಾಣವು ಭಾರಿ ಕಡಿಮೆಯಾಗಿದೆ.[೩೨]. ನಿಕ್ಕೆಲ್ ನಿಂದ ಮಾಡಿದ ಬ್ಯಾಟರಿಗಳು ಕ್ಯಾನ್ಸರ್ ಗೆ ಪೂರಕವಾಗಿದೆ ಮತ್ತು ರೋಗದ ಆರಂಭದ ಪ್ರಾಥಮಿಕ ಪರಿಣಾಮ ಬೀರಲು ಕಾರಣವಾಗಿದೆ.[೩೩].

ಲಿಥಿಯಂ-ಅಯಾನ್ ಬ್ಯಾಟರಿಯು ಹೈಬ್ರಿಡ್ ವಾಹನದಲ್ಲಿ ಉಪಯೋಗವಾಗುವ ಸಂಭವನೀಯತೆಯ ಕಾರಣ ಗಮನ ಸೆಳೆದಿದೆ. ಅಭಿವೃದ್ಧಿಯಲ್ಲಿ ಹಿಟಾಚಿ ಕಂಪನಿಯು ನಾಯಕತ್ವ ವಹಿಸಿದೆ. ಆದ್ದರಿಂದ ಲಿಥಿಯಂ-ಅಯಾನ್ ಬ್ಯಾಟರಿಗಳಿಗೆ ಇಂದು ಮಾರುಕಟ್ಟೆ ದೊಡ್ಡದಾಗಿದ್ದು, ಹೈಬ್ರಿಡ್ ನಲ್ಲಿ ಉಪಯೋಗವಾಗುವವರೆಗೂ ಇದು ಇರಲಿದೆ. ಇದಲ್ಲದೆ, ಹೆಚ್ಚುವರಿಯಾಗಿ ಸಣ್ಣ ಗಾತ್ರ ಹಾಗೂ ಹಗುರ ತನದಿಂದ ಲಿಥಿಯಂ-ಅಯಾನ್ ಬ್ಯಾಟರಿಗಳು ವಾತಾವರಣದ ರಕ್ಷಣೆಗೆ ಪೂರಕವಾಗಿದ್ದು, ಇರುವ ಶಕ್ತಿಗೆ ತೊಂದರೆಯಿಲ್ಲದೆ ಸುಧಾರಿತ ರೀಚಾರ್ಜ್ ದಕ್ಷತೆ ಹೊಂದಿದೆ. ವಾತಾವರಣದಲ್ಲಿ ಕಡಿಮೆ ಇಂಧನ ಹೊರಸೂಸುವಿಕೆಯ ಅಗತ್ಯ ಹಾಗೂ ಉತ್ತಮ ಇಂಧನ ಉಳಿತಾಯದ ಅಗತ್ಯವಿದ್ದಲ್ಲಿ ಹೈಬ್ರಿಡ್, ವಿದ್ಯುತ್ ಮತ್ತು ಇಂಧನ ಕೋಶದ ವಾಹನಗಳು ಹೆಚ್ಚಾಗುತ್ತಿರುತ್ತವೆ. ಲಿಥಿಯಂ-ಅಯಾನ್ ಬ್ಯಾಟರಿಗಳ ಬೇಡಿಕೆ ಹೆಚ್ಚುತ್ತಿರುವುದಕ್ಕೆ ಕಾರಣವೆಂದರೆ ಅವು ಇತರ ಬ್ಯಾಟರಿಗಳಿಗಿಂತ ಅತ್ಯಂತ ಹೆಚ್ಚು ಶಕ್ತಿ ಸಾಂಧ್ರತೆ ಹೊಂದಿದೆ ಮತ್ತು ಬ್ಯಾಟರಿ ಮೂರಕ್ಕೂ ಹೆಚ್ಚು ಬಾರಿ ವೋಲ್ಟೇಜ್ ಉತ್ಪಾದಿಸಬಲ್ಲದು. ನಿಕ್ಕೆಲ್-ಲೋಹ ಹೈಬ್ರಿಡ್ ಬ್ಯಾಟರಿಯು ಇದರ ಜೊತೆಗೇ ಭಾರಿ ಪ್ರಮಾಣದ ವಿದ್ಯುತ್ ಶಕ್ತಿ ಸಂಗ್ರಹಿಸಬಲ್ಲದು. ಬ್ಯಾಟರಿಗಳು ಹೆಚ್ಚಿನ ಔಟ್ ಪುಟ್ (ವಾಹನದ ಶಕ್ತಿ ಹೆಚ್ಚಿಸುವುದು) ಉತ್ಪಾದನೆ, ಹೆಚ್ಚಿನ ದಕ್ಷತೆ (ವಿದ್ಯುತ್ ಶಕ್ತಿಯ ವ್ಯರ್ಥ ಉಪಯೋಗ ತಡೆಯುವುದು) ಮತ್ತು ವಾಹನದ ಬಾಳಿಕೆಗೆ ಹೋಲಿಸಿದಲ್ಲಿ ಅತ್ಯುತ್ತಮ ಬಾಳಿಕೆಯೂ ಬರಬಲ್ಲದು. ಹೆಚ್ಚುವರಿಯಾಗಿ ಲಿಥಿಯಂ-ಅಯಾನ್ ಬ್ಯಾಟರಿ ಉಪಯೋಗಿಸಿದರೆ ವಾಹನದ ಒಟ್ಟು ತೂಕ ಕಡಿಮೆಯಾಗುವುದಲ್ಲದೆ, ಗ್ಯಾಸೋಲೈನ್ ಶಕ್ತಿಯ ವಾಹನಕ್ಕಿಂತ ಶೇ. 30 ರಷ್ಟು ಇಂಧನ ಉಳಿತಾಯವೂ ಸಾಧ್ಯ. ಇದರ ಜೊತೆಗೆ ಜಾಗತಿಕ ತಾಪಮಾನ ತಡೆಯುವ ನಿಟ್ಟಿನಲ್ಲಿ ಸಿಓ2 ಹೊರಸೂಸುವಿಕೆಯನ್ನು ಕಡಿಮೆಗೊಳಿಸುವಲ್ಲಿಯೂ ಕೂಡ ಸಹಾಯಕಾರಿಯಾಗಿದೆ. ಹಿಟಾಚಿ ಕಂಪನಿಯು ಪೂರೈಸುತ್ತಿರುವ ಕಾರು, ಬಸ್, ವಾಣಿಜ್ಯಿಕ ವಾಹನಗಳು ಹಾಗೂ ರೇಲ್ವೆ ಸೇರಿದಂತೆ ವಿವಿಧ ವಾಹನಗಳಿಗೆ ಉಪಯೋಗಿಲ್ಪಡುವ ಲಿಥಿಯಂ-ಅಯಾನ್ ಬ್ಯಾಟರಿಗಳು ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಗಳಿಸಿಕೊಳ್ಳುತ್ತಿವೆ. ಮಾಲಿಕನ ವಿದ್ಯುತ್ ಮೇನ್ ನಿಂದ ರೀಚಾರ್ಜ್ ಆಗಬಲ್ಲ ವಿದ್ಯುತ್ ವಾಹನಗಳು ಈಗ ಜಾಗತಿಕವಾಗಿ ಅನೇಕ ಪ್ರದೇಶಗಳಲ್ಲಿ ಲಭ್ಯವಿದೆ. ಜಪಾನ್ ನಲ್ಲಿ ಇಂತಹ ವಾಹನಗಳನ್ನು ರಾತ್ರಿ ಪೂರ್ತಿ ಚಾರ್ಜ್ ಮಾಡಿದಾಗಲೂ ಕೂಡ ಗ್ಯಾಸೋಲಿನ್ ವಾಹನಕ್ಕಿಂತ 9 ರಲ್ಲಿ 1 ರಷ್ಟು ಮಾತ್ರ ವೆಚ್ಚ ಬರುತ್ತದೆ.[೩೪]

ಕಚ್ಚಾ ವಸ್ತುಗಳ ಹೆಚ್ಚುತ್ತಿರುವ ಬೆಲೆ

ಬದಲಾಯಿಸಿ

ಹೈಬ್ರಿಡ್ ಕಾರ್ ನಲ್ಲಿ ಉಪಯೋಗಿಸುತ್ತಿರುವ ಅನೇಕ ಅಪರೂಪದ ವಸ್ತುಗಳ ಬೆಲೆ ಒಮ್ಮೆಲೇ ಏರುತ್ತಿದೆ.[೩೫].

ಉದಾ: [[ಭೂಮಿ ಮೂಲದ ಅಪರೂಪದ ಡಿಸ್ಪ್ರೋಸಿಯಂ ಪದಾರ್ಥ|ಭೂಮಿ ಮೂಲದ ಅಪರೂಪದ ಡಿಸ್ಪ್ರೋಸಿಯಂ ಪದಾರ್ಥ]] ಮುಂದುವರಿದ ವಿದ್ಯುತ್ ಮೋಟರ್ ನಿರ್ಮಾಣ ಹಾಗೂ ಹೈಬ್ರಿಡ್ ಚಾಲನೆ ಪದ್ಧತಿಯಲ್ಲಿ ಅಗತ್ಯವಾಗಿದೆ.[೩೬][೩೫]. ನಿಯೋಡಿಮಿಯಂ ಅಪರೂಪದ ಭೂಮಿ ಮೂಲದ ಲೋಹ. ಅತ್ಯಂತ ಶಕ್ತಿಯುತ ಆಯಸ್ಕಾಂತದಲ್ಲಿ ಇದೊಂದು ನಿರ್ಣಾಯಕ ಘಟಕವಾಗಿದ್ದು, ಕಾಂತ ವಿದ್ಯುತ್ ಮೋಟರ್ ನಲ್ಲಿ ಶಾಶ್ವತವಾಗಿ ಕಂಡುಬರುತ್ತದೆ. [೬] Archived 2011-07-08 ವೇಬ್ಯಾಕ್ ಮೆಷಿನ್ ನಲ್ಲಿ.

ಹೆಚ್ಚು ಕಡಿಮೆ ಎಲ್ಲ ಭೂಮಿ ಮೂಲದ ಅಪರೂಪದ ವಸ್ತುಗಳು ಜಗತ್ತಿಗೆ ಚೀನಾದಿಂದ ಬರುತ್ತಿವೆ. ಅನೇಕ ವಿಶ್ಲೇಷಕರ ಪ್ರಕಾರ ಈ ಎಲ್ಲ ಪೂರೈಕೆಗಳು 2012 ರ ಹೊತ್ತಿಗೆ ಚೀನಾ[೩೭] ದಲ್ಲಿ ಹೆಚ್ಚುತ್ತಿರುವ ಇಲೆಕ್ಟ್ರಾನಿಕ್ ತಯಾರಿಕೆಗೆ ಬಳಕೆಯಾಗಲಿದೆ.[೩೫] ಹೆಚ್ಚುವರಿಯಾಗಿ ರಫ್ತು ಕೋಟಾದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಈ ಅಪರೂಪದ ವಸ್ತುಗಳು ಸಿಗಲಿವೆ.[೩೬][೩೮]

ಉತ್ತರ ಕೆನಡಾದಲ್ಲಿನ ಹೋದಾಸ್ ಲೇಕ್ ಪ್ರೋಜೆಕ್ಟ್, ಆಸ್ಟ್ರೇಲಿಯಾದ ಎಂಟಿ ವೆಲ್ಡ್ ಗಳಂತಹ ಚೀನಾದಲ್ಲದ ಮೂಲಗಳು ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿವೆ. ಏನೇ ಆದರೂ ಈ ಮೂಲಗಳು ಕೊರತೆಗೂ ಮುನ್ನ ಅಭಿವೃದ್ಧಿಗೊಳ್ಳುತ್ತವೆ ಎಂದು ಹೇಳಲಾಗದು.[೩೮]

ಪರ್ಯಾಯ ಹಸಿರು ವಾಹನಗಳು

ಬದಲಾಯಿಸಿ

ಉಳಿದ ವಾಹನಗಳು ಸೇರಿದಂತೆ ಇತರ ರೀತಿಯ ಹಸಿರು ವಾಹನಗಳು ಪಳೆಯುಳಿಕೆ ಇಂಧನ ಬಿಟ್ಟು ಸಂಪೂರ್ಣವಾಗಿ ಅಥವಾ ಭಾಗಶಃ ಪರ್ಯಾಯ ಶಕ್ತಿ ಮೂಲಗಳಿಗೆ ಹೋಗುತ್ತವೆ. ಮತ್ತೊಂದು ಆಯ್ಕೆ ಎಂದರೆ ಪರ್ಯಾಯ ಇಂಧನ ರಚನಾಂಶವನ್ನು (ಅಂದರೆ ಜೈವಿಕ ಇಂಧನ) ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಆಧಾರಿತ ವಾಹನಗಳಲ್ಲಿ ಉಪಯೋಗಿಸುವುದು. ಮತ್ತು ನವೀಕರಿಸಬಲ್ಲ ಶಕ್ತಿ ಮೂಲಕ್ಕೆ ತೆರಳುವುದು.

ಇನ್ನುಳಿದಂತೆ ಸಾರ್ವಜನಿಕ ವೇಗದ ಪ್ರಯಾಣ, ಇದು ಸಾರ್ವಜನಿಕ ಸಾರಿಗೆಯ ಒಂದು ಪರಿಕಲ್ಪನೆಯಾಗಿದ್ದು, ಇಲ್ಲಿ ಬೇಡಿಕೆಗೆ ತಕ್ಕಂತೆ ತಡೆರಹಿತ ಸಾರಿಗೆಯನ್ನು ವಿಶೇಷವಾಗಿ ನಿರ್ಮಿಸಲಾದ ಪ್ರಯಾಣ ನಕ್ಷೆಯ ಪ್ರಕಾರ ನೀಡಲಾಗುವುದು.

ಇವನ್ನೂ ಗಮನಿಸಿ

ಬದಲಾಯಿಸಿ

ಅಗಲ =250 ಹೊಂದಿಕೆ=ಎಡ

ಅಗಲ

=250 ಹೊಂದಿಕೆ=ಎಡ

ಆಕರಗಳು

ಬದಲಾಯಿಸಿ
  1. ಹೈಬ್ರಿಡ್‌ ವಾಹನಗಳೆಂದರೇನು? - ವಿಭಿನ್ನ ಹೈಬ್ರಿಡ್ ತಂತ್ರಜ್ಞಾನದ ಉದಾಹರಣೆಗಳೊಂದಿಗೆ ಹೈಬ್ರಿಡ್‌ ಕಾರ್‌ಗಳ ಪರಿಚಯ ಮತ್ತು ಅವುಗಳನ್ನು ಹೇಗೆ ವಿವರಿಸಲಾಗಿತ್ತದೆ‌
  2. "Das Powerbike (German), ISBN 3895951234". Retrieved February 27, 2007. {{cite web}}: Unknown parameter |dateformat= ignored (help)
  3. "Velomobile Seminar 1999, ISBN 3-9520694-1-8". Retrieved January 11, 2006. {{cite web}}: Unknown parameter |dateformat= ignored (help)
  4. [೧]
  5. "Japan to launch first hybrid trains". The Sydney Morning Herald. 2007-07-29.
  6. Shabna, John (2007-10-25). "GE's Hybrid Locomotive: Around The World on Brakes". Ecotality Life. Archived from the original on 2009-02-28. Retrieved 2010-05-14.
  7. RailPower Technologies Corp. (2006-07-12). "GG Series: Hybrid Yard Switcher" (PDF).
  8. "RailPower To SupplyY TSI Terminal Systems Inc. with hybrid power plants for rubber tyred gantry cranes" (PDF) (Press release). 2006-10-10.
  9. "Railpower to supply TSI Terminal Systems Inc. with hybrid power plants for rubber tyred gantry cranes" (Press release). RailPower Technologies Corp. 2006-10-10. Archived from the original on 2008-04-01. Retrieved 2010-05-14.
  10. Thomas, Justin (2007-03-27). "Hybrid Truck Unveiled by Kenworth". TreeHugger.
  11. "Kenworth Unveils T270 Class 6 Hybrid Truck Targeted at Municipal, Utility Applications" (Press release). Kenworth Truck Company. 2007-03-21. Archived from the original on 2009-03-01. Retrieved 2010-05-14.
  12. Hetzner, Christiaan (2007-11-12), Hard sell for hybrid trucks, Reuters, archived from the original on 2009-01-09, retrieved 2010-05-14
  13. "ಆರ್ಕೈವ್ ನಕಲು". Archived from the original on 2010-06-01. Retrieved 2010-05-14.
  14. "ಆರ್ಕೈವ್ ನಕಲು". Archived from the original on 2009-03-22. Retrieved 2010-05-14. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  15. "ಇಂಧನ ಸೆಲ್‌ಗಳನ್ನು ಹೊಂದಿದ ಮಾನವಚಾಲಿತ ವಿಮಾನದ ಪರೀಕ್ಷೆ ನಡೆಸಲಾಯಿತು (ಮೆಟಲ್ಸ್/ಪಾಲಿಮರ್ಸ್/ಸೆರಾಮಿಕ್ಸ್)." ಮುಂದುವರೆದ ವಸ್ತುಗಳು & ಕಾರ್ಯವಿಧಾನಗಳು. 165.6 (ಜೂನ್ 2007): 9(1). ವಿಸ್ತಾರವಾದ ಸೈದ್ಧಾಂತಿಕವಾದ ಎ‌ಎಸ್‌ಎಪಿ. ಗಾಲೆ. ಗಾಲೆ ದಾಖಲೆಯ ಸಂಖ್ಯೆ :A166034681
  16. ಇಂಧನ ಉಳಿತಾಯದ ಗಣಕಯಂತ್ರ
  17. ಆ‍ಯ್‌ನ್ ಅಮೇಜಿಂಗ್ 75 - ಎಮ್‌ಪಿಜಿ ಹೈಬ್ರಿಡ್‌ ವಿದ್ಯುತಚಾಲಿತ ಕಾರ್
  18. ಇಪಿಎ ಅನ್‌ವೇಲ್ಸ್ ಹೈಡ್ರಾಲಿಕ್ ಹೈಬ್ರಿಡ್‌ ಯುಪಿಎಸ್ ಡೆಲಿವರಿ ಟ್ರಕ್ -ಆಟೋಬ್ಲಾಗ್
  19. [೨]
  20. Neuman, William (October 11, 2007). "The turbine on the bus goes purr purr purr". New York Times.
  21. Combustion Engine Project Archived 2010-06-06 ವೇಬ್ಯಾಕ್ ಮೆಷಿನ್ ನಲ್ಲಿ. ಲೀನಿಯರ್ ದಹನ ಇಂಜಿನ್ ಪ್ರೋಜೆಕ್ಟ್
  22. "Toyota debuts power-hybrid bus | The Japan Times Online". Search.japantimes.co.jp. 1997-08-22. Archived from the original on 2012-07-29. Retrieved 2009-10-17.
  23. Stossel, Sage (2008-05-06). "Electro-Shock Therapy - The Atlantic (July/August 2008)". The Atlantic. Retrieved 2009-10-17.
  24. Maynard, Micheline (November 21, 2008). "G.M.'s Latest Great Green Hope Is a Tall Order". New York Times. p. A1.
  25. "ಆರ್ಕೈವ್ ನಕಲು". Archived from the original on 2008-12-29. Retrieved 2010-05-14.
  26. California Cars Initiative. "All About Plug-In Hybrids (PHEVs)". International Humanities Center.
  27. "Prius PHEV". Electric Auto Association - Plug in Hybrid Electric Vehicle.
  28. ಹಾಕಿನ್ಸ್ , ಚಾರ್ಲ್ಸ್ "ಹೈಬ್ರಿಡ್‌ ಕಾರ್‌ನಿಂದ ವೆಚ್ಚ ಮತ್ತು ಮಾಲಿನ್ಯ ಕಡಿಮೆ ಮಾಡುವುದು." ಹೈಬ್ರಿಡ್‌ ಕಾರ್‌ನಿಂದ ವೆಚ್ಚ ಮತ್ತು ಮಾಲಿನ್ಯ ಕಡಿಮೆ ಮಾಡುವುದು. 24 ಆಗಸ್ಟ್. 2006 ಎಜಿನ್‌ಆರ್ಟಿಕಲ್ಸ್.ಕಾಮ್.6 ಡಿಸೆಂಬರ್. 2009 .
  29. ಗರ್ಸಿಯಾ, ಜೆ. (2008). ಇಡಾಹೊ ಡಿಪಾರ್ಟ್‌ಮೆಂಟ್ ಆಫ್ ಎನ್ವಿರಾನ್ಮೆಂಟಂಲ್ ಕ್ವಾಲಿಟಿ. ನವೆಂಬರ್ 22, 2009ರಂದು ಪರಿಷ್ಕರಿಸಲಾಗಿದೆ ವಾಯುವಿನ ಗುಣಮಟ್ಟ: ವಾಹನಗಳ ಹೊರಸೂಸೂವಿಕೆ ಮತ್ತು ವಾಯುವಿನ ಗುಣಮಟ್ಟ: http://www.deq.state.id.us/air/prog_issues/pollutants/vehicles.cfm#low Archived 2009-12-17 ವೇಬ್ಯಾಕ್ ಮೆಷಿನ್ ನಲ್ಲಿ..
  30. ಹಬರ್ ಅಲೆಕ್ಸಾಂಡ್ರಿಯಾ. " ಹೈಬ್ರಿಡ್‌ ಕಾರ್ ಹೊರಸೂಸಿದ ವಾಸ್ತವಾಂಶ ಮತ್ತು ಜಾಗತಿಕ ತಾಪಮಾನ" ಜನವರಿ 1, 2008, http://www.buzzle.com/articles/the-facts-about-ಹೈಬ್ರಿಡ್‌-car-emissions-and-global-warming.html.
  31. ವಾತಾವರಣದ ಮೇಲೆ ಹೈಬ್ರಿಡ್‌ ಕಾರ್ ಬ್ಯಾಟರಿಯ ಪ್ರಭಾವ. (2008). ಹೈಬ್ರಿಡ್‌ ಕಾರ್ಸ್‌ಗಳಿಂದ ಡಿಸೆಂಬರ್ 09, 2009ರಲ್ಲಿ ಪರಿಷ್ಕರಿಸಲಾಗಿದೆ : http://www.ಹೈಬ್ರಿಡ್cars.com/​forums/​environmental-impact-ಹೈಬ್ರಿಡ್‌-car-battery.html.
  32. ಹೈಬ್ರಿಡ್‌ ಕಾರ್ಸ್. (2006). ಹೈಬ್ರಿಡ್‌ ಬ್ಯಾಟರಿ ನಂಜು‌ಗಳಿಂದ ಡಿಸೆಂಬರ್ 09, 2009ರಂದು ಪರಿಷ್ಕರಿಸಲಾಗಿದೆ: http://www.ಹೈಬ್ರಿಡ್cars.com/battery-toxicity.html.
  33. Gelani, S (1980). "Congenital abnormalities in nickel poisoning in chick embryos" (PDF). Archives of Environmental Contamination and Toxicology. Newark, NJ, USA: Springer New York. Retrieved 2008-12-09. {{cite journal}}: Unknown parameter |coauthor= ignored (|author= suggested) (help)/
  34. ಪರಿಸರ ಚಟುವಟಿಕೆಗಳು. (2009). ಡಿಸೆಂಬರ್ 01, 2009ರಂದು ಪರಿಷ್ಕರಿಸಲಾಗಿದೆ, ಹೈಬ್ರಿಡ್ ವಿದ್ಯುತ್ ಚಾಲಿತ ವಾಹನಗಳಿಗೆ ಲೂಥಿಯಮ್- ಅಯಾನ್ ಬ್ಯಾಟರಿ: http://www.hitachi.com/environment/showcase/solution/industrial/lithiumion.html Archived 2009-12-20 ವೇಬ್ಯಾಕ್ ಮೆಷಿನ್ ನಲ್ಲಿ.
  35. ೩೫.೦ ೩೫.೧ ೩೫.೨ Cox, C (2008). "Rare earth innovation: the silent shift to china". Herndon, VA, USA: The Anchor House Inc. Archived from the original on 2008-04-21. Retrieved cited 2008-03-18. {{cite web}}: Check date values in: |accessdate= (help); More than one of |archivedate= and |archive-date= specified (help); More than one of |archiveurl= and |archive-url= specified (help)/
  36. ೩೬.೦ ೩೬.೧ ಜಿ, ನಿಶಿಯಾಮಾ. "ಜಪಾನ್ ಚೀನಾಕ್ಕೆ ಅಪರೂಪದ ಲೋಹಗಳನ್ನು ಅನಿರ್ಬಂಧಿತವಾಗಿ ಪೂರೈಸಲು ಪ್ರೇರೆಪಿಸುತ್ತಿದೆ" 2 ನವೆಂಬರ್ 1992 ರೈಟರ್‌ನ ತಾಜಾ ಸುದ್ದಿಗಳು. 10 ಮಾರ್ಚ್ 2008 <http://www.reuters.com/article/latestCrisis/idUSL08815827>
  37. Haxel, G (2002). "Rare earth elements critical resources for high technology" (PDF). USGS Fact Sheet: 087‐02. Reston, VA, USA: United States Geological Survey. {{cite journal}}: Unknown parameter |coauthor= ignored (|author= suggested) (help)
  38. ೩೮.೦ ೩೮.೧ Lunn, J. (2006-10-03). "Insigner Beaufort Equity Research" (PDF). London. Archived from the original (PDF) on 2008-04-09. Retrieved 2008-03-18. {{cite journal}}: Cite journal requires |journal= (help)


ಬಾಹ್ಯ ಕೊಂಡಿಗಳು

ಬದಲಾಯಿಸಿ

ಹೈಬ್ರಿಡ್‌ ಆಟೋಮೊಬೈಲ್ ಉತ್ಪಾದಕರ' ವೆಬ್‌ಸೈಟ್‌ಗಳು

ಇತರೆ ಹೈಬ್ರಿಡ್‌ ಕೊಂಡಿಗಳು

ಹೈಬ್ರಿಡ್‌ ವಿಮಾನಗಳು

ಬದಲಾಯಿಸಿ