ಹೇಮಾವತಿ ಜಲಾಶಯ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹೇಮಾವತಿ ಜಲಾಶಯ | |
---|---|
ದೇಶ | ಭಾರತ |
ಸ್ಥಳ | ಹಾಸನ ಜಿಲ್ಲೆ |
ಉದ್ದೇಶ | ನೀರಾವರಿ, ಕುಡಿಯುವ / ನೀರು ಸರಬರಾಜು |
Dam and spillways | |
Type of dam | ಮಣ್ಣಿನ / ಗ್ರಾವಿಟಿ ಅಣೆಕಟ್ಟು |
ಉದ್ದ | 4,692 meters |
Width (crest) | 2,810 sq km |
ಸ್ಪಿಲ್ವೇಸ್ | 6 |
Spillway type | ರೇಡಿಯಲ್ |
Spillway capacity | 10.67 m x 15.24 m |
ಒಟ್ಟು ಸಾಮರ್ಥ್ಯ | 1013 mcm |
Active capacity | 1050.63 mcm |
ಆಣೆಕಟ್ಟು
ಬದಲಾಯಿಸಿ[೧] ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಮೇಲ್ಮುಖ ಭಾಗವಾಗಿ ಹೇಮಾವತಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.[೨] [೩]
ಕಾವೇರಿಯ ನದಿಯ ಪ್ರಮುಖ ಉಪನದಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ನಿರ್ಮಾಣ
ಬದಲಾಯಿಸಿಹೇಮಾವತಿ ಅಣೆಕಟ್ಟನ್ನು ೧೯೭೯ ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲು ಕಾರ್ಯ ಆರಂಭವಾಯಿತು.
ಉಪಯೋಗ
ಬದಲಾಯಿಸಿಹೇಮಾವತಿ ಅಣೆಕಟ್ಟನ್ನು ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ವಿಂಗಡಿಸಲಾಗಿದೆ. ಇದರ ಜೊತೆ ಏತ ನೀರಾವರಿಗಾಗಿ ಅರಕಲಗೂಡು, ಬಾಗೂರು-ನವಿಲೆ ಮುಂತಾದೆಡೆ ಕಾಲುವೆ ನಿರ್ಮಿಸಲಾಗಿದೆ.
ವಿಸ್ತೀರ್ಣ
ಬದಲಾಯಿಸಿಉದ್ದ: ೪೬೯೨ ಮೀಟರ್ (೧೫೩೯೩.೭ ಅಡಿ)
ಎತ್ತರ: ೫೮.೫ ಮೀಟರ್ (೧೯೧.೯೩ ಅಡಿ)
ಸಂಗ್ರಹ ಸಾಮರ್ಥ್ಯ: ೧೦೫.೬೩ ಕೋಟಿ ಸಿಎಂ೩ (೩೭ ಟಿ ಎಂಸಿ)
ಗೇಟುಗಳು: ೬
ಅಚ್ಚುಕಟ್ಟು ಪ್ರದೇಶ: ೨೮೧೦ ಚದರ ಕಿಮೀ. (೧೬೦೦೦ ಎಕರೆ)[೪]
ಮುಳುಗಡೆ ಪ್ರದೇಶ: ೪೬ ಹಳ್ಳಿಗಳು
ಉದ್ದೇಶಗಳು
ಬದಲಾಯಿಸಿಹೇಮಾವತಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ - ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ.
ಸ್ವಾರಸ್ಯ
ಬದಲಾಯಿಸಿಶೆಟ್ಟಿಹಳ್ಳಿಯ ರೋಸರಿ ಚರ್ಚ್, ಅಣೆಕಟ್ಟಿನ್ನು ನಿರ್ಮಿಸುವ ಸಂಧರ್ಭದಲ್ಲಿ ಮುಳುಗಡೆಯಾಗಿತ್ತು. ಬೇಸಿಗೆಯ ಸಂಧರ್ಭದಲ್ಲಿ, ಆಣೆಕಟ್ಟಿನಲ್ಲಿ ನೀರು ಕಡಿಮೆಯಾದಾಗ ಚರ್ಚ್ ಅನ್ನು ಕಾಣಬಹುದು