ಹುರುಗಲು
Chloroxylon swietenia | |
---|---|
Ragihalli Forest, Bengaluru district, India. | |
Conservation status | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ರೋಸಿಡ್ಸ್ |
ಗಣ: | ಸ್ಯಾಪಿಂಡೇಲ್ಸ್ |
ಕುಟುಂಬ: | ರೂಟೇಸಿಯೇ |
ಕುಲ: | ಕ್ಲೋರೊಕ್ಸೈಲಾನ್ |
ಪ್ರಜಾತಿ: | C. swietenia
|
Binomial name | |
Chloroxylon swietenia | |
Synonyms[೨] | |
|
ಹುರುಗಲು (ವ್ಯವಹಾರ ನಾಮ : ಸಾಟಿನ್ ವುಡ್) ಮೀಲಿಯೇಸೀ ಕುಟುಂಬದ ಕ್ಲೊರೊಕ್ಸೈಲಾನ್ ಸ್ವಿಟೀನಿಯ ಪ್ರಭೇದದ ಕುಳ್ಳ ಕಾಂಡದ, ಹರಡಿದ ತೆಳುವಾದ ಹರವಿನ ಪರ್ಣಪಾತಿ ಮರ.[೩]
ವಿವರ
ಬದಲಾಯಿಸಿತೊಗಟೆ ಮಂದವಾಗಿಯೂ ಬೆಂಡಾಗಿಯೂ ಹಳದಿಬಣ್ಣದಿಂದ ಕೂಡಿರುತ್ತದೆ. ಎಲೆಗಳಿಗೂ ತೊಗಟೆಗೂ ಒಂದು ವಿಶಿಷ್ಟ ವಾಸನೆ ಇದೆ. ಶುಷ್ಕತೆ ಇರುವ ಪರ್ಣಪಾತಿ ಕಾಡುಗಳಲ್ಲಿ ಇದು ಕಾಣದೊರೆಯುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಎಲೆಗಳು ಉದುರುತ್ತವೆ. ಕೆನೆಬಣ್ಣದ ಸಣ್ಣ ಹೂಗಳು ಏಪ್ರಿಲ್ ತಿಂಗಳಲ್ಲಿ ಮೂಡಿ, ಮೇ ಆಗಸ್ಟ್ ತಿಂಗಳಲ್ಲಿ ಕಾಯಿಬಲಿಯುತ್ತದೆ. ರೆಕ್ಕೆಯುಳ್ಳ ಬೀಜಗಳಿವೆ. ಇವು ಗಾಳಿಯಲ್ಲಿ ತೂರಾಡಿ ಪ್ರಸಾರವಾಗಿ ಸ್ವಾಭಾವಿಕ ಪುನರುತ್ಪತ್ತಿಗೆ ಅವಕಾಶವಾಗುವುದು. ಮರ ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಬೆಂಕಿಯಿಂದ ಹಾನಿ ಹೆಚ್ಚು. ಮೇಕೆ ಜಾನುವಾರುಗಳು ಈ ಮರದ ಎಲೆಗಳನ್ನು ತಿನ್ನುವುದಿಲ್ಲ.
ಉಪಯೋಗಗಳು
ಬದಲಾಯಿಸಿಚೌಬೀನೆಯು ಸ್ಲೇಟುಗಳ ಹಾಗೂ ಪರದೆ ಚೌಕಟ್ಟುಗಳಿಗೂ, ಬ್ರಷ್ ಹಿಡಿಗಳಿಗೂ, ಕಡತದ ಕೆಲಸಗಳಿಗೂ ಅಲಂಕಾರದ ಉಪಕರಣಗಳು, ಅಲಮಾರು ತಯಾರಿಕೆಗೂ ಉಪಯುಕ್ತವಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಉಲ್ಲೇಖ ದೋಷ: Invalid
<ref>
tag; no text was provided for refs namediucn
- ↑ ೨.೦ ೨.೧ "Chloroxylon swietenia". Plants of the World Online. Royal Botanic Gardens, Kew. Retrieved 22 May 2019.
- ↑ "Chloroxylon swietenia". Ecocrop. Food and Agriculture Organization (FAO). Retrieved 22 May 2019.[permanent dead link]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: