ಹುಚ್ಚೆಳ್ಳು ಎಣ್ಣೆ

ಹುಚ್ಚೆಳ್ಳು
ಹುಚ್ಚೆಳ್ಳು ಹೂವು
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
[[]]
ಕುಟುಂಬ:
ಕುಲ:
ಪ್ರಜಾತಿ:
ಗುಜೊಟಿಯ ಅಬೈಸ್ಸಿನಿಕ
Binomial name
ಗುಜೊಟಿಯ ಅಬೈಸ್ಸಿನಿಕ
Synonyms

Guizotia oleifera DC.

ಹುಚ್ಚೆಳ್ಳು ಬಿತ್ತನ


ಹುಚ್ಚೆಳ್ಳು ಸಸ್ಯ ಆಸ್ಟರೇಸಿ(Astereaceae)ಸಸ್ಯ ಕುಟುಂಬಕ್ಕೆ ಸೇರಿದ ಗಿಡ . ಇದರ ಪ್ರಜಾತಿ ಗುಜೊಟಿಯ. ಈ ಸಸ್ಯದ ವೃಕ್ಷಶಾಸ್ತ್ರದ ಹೆಸರು ಗುಜೊಟಿಯ ಅಬೈಸ್ಸಿನಿಕ (guizotia abyssinica). ಹುಚ್ಚೆಳ್ಳು ಬೀಜದಿಂದ ತೆಗೆಯಲಾಗುವ ಎಣ್ಣೆ ತಿನ್ನುವುದಕ್ಕೆ/ಅಡುಗೆ ಮಾಡುವುದಕ್ಕೆ ಯೋಗ್ಯವಾದದ್ದು. ಈ ಗಿಡದ ಮೂಲ ಸ್ಥಾನ ಆಫ್ರಿಕಾದ ಇಥಿಯೋಪಿಯ.[] ಅಲ್ಲಿಂದ ಇದನ್ನು ಪಾಕಿಸ್ತಾನ್, ಭಾರತ ದೇಶಗಳಿಗೆ ತರಲಾಗಿದೆ .ಇಥೀಯೋಪಿಯದಲ್ಲಿ ಉತ್ಪತ್ತಿಯಾಗುತ್ತಿರುವ ಒಟ್ಟೂ ಎಣ್ಣೆಯಲ್ಲಿ ಹುಚ್ಚೆಳ್ಳು ಎಣ್ಣೆ ೫೦% ಇರುತ್ತದೆ. ಭಾರತದಲ್ಲಿ ಇದರ ಉತ್ಪತ್ತಿ ೨೦%ವರೆಗೆ ಇರುತ್ತದೆ. ಕನ್ನಡದಲ್ಲಿ ಕೆಲವು ಪ್ರಾಂತ್ಯದಲ್ಲಿ ಹುಚ್ಚೆಳ್ಳುಗೆ ಗುರೆಳ್ಳು. ಕರೆಳ್ಳು ಎಂದು ಕರೆಯಲಾಗುತ್ತದೆ.

ಭಾರತೀಯ ಭಾಷೆಗಳಲ್ಲಿ ಹುಚ್ಚೆಳ್ಳಿನ ಹೆಸರು[]

ಬದಲಾಯಿಸಿ

ಭಾರತ ದೇಶದಲ್ಲಿ ಸಾಗುವಳಿ ಮಾಡುವ ರಾಜ್ಯಗಳು

ಬದಲಾಯಿಸಿ

ಭಾರತ ದೇಶದಲ್ಲಿ ದಕ್ಷಿಣ ಪ್ರಾಂತ್ಯದಲ್ಲಿರುವಕರ್ನಾಟಕ, ಆಂಧ್ರ ಪ್ರದೇಶ, ಮತ್ತು ಮಹಾರಾಷ್ಟ್ರಗಳಲ್ಲಿ ಬೆಳಸಲಾಗುತ್ತದೆ. ಭಾರತದಲ್ಲಿ ಹುಚ್ಚೆಳ್ಳಿನ ವಾರ್ಷಿಕ ಉತ್ಪತ್ತಿ ೨ ಲಕ್ಷಟನ್ನುಗಳು. []

ಪ್ರಪಂಚದಲ್ಲಿ ಹುಚ್ಚೆಳ್ಳು ಸಾಗುವಳಿ ಮಾಡುವ ದೇಶಗಳು

ಬದಲಾಯಿಸಿ

ಪ್ರಪಂಚದಲ್ಲಿ ಇಥಿಯೋಪಿಯ, ಜರ್ಮನಿ, ವೆಸ್ಟ್ ಇಂಡೀಸ್, ಬ್ರೆಜಿಲ್, ಮೆಕ್ಸಿಕೊ, ಮಯನ್ಮಾರ್, ಚೈನಾ, ಮತ್ತು ನೇಪಾಲ ದೇಶಗಳಲ್ಲಿ ಈ ಫಸಲು ಸಾಗುವಳಿ ಮಾಡಲಾಗುತ್ತದೆ.[]

ಸಾಗುವಳಿ

ಬದಲಾಯಿಸಿ

ಹುಚ್ಚೆಳ್ಳು ಫಯಿರು ಸಾಗುವಳಿ ಮಾಡುವುದಕ್ಕೆ ತೆಳುವಾದ ಕಪ್ಪುಮಣ್ಣು ಹೊಲ ನೆಲ ಉತ್ತಮ. ಹಾಗೆ ಕಿಬ್ಬಳಿ, ಕಲಸು ಮಣ್ಣು ನೆಲಗಳಲ್ಲಿ ಬೆಳೆಸಲಾಗುತ್ತದೆ. ವರ್ಷಪಾತ ೧೦೦೦-೧೨೫೦ ಮಿ.ಮೀ.ಇರಬೇಕು. ಬಿತ್ತುವ ಕಾಲ ವರ್ಷಕಾಲ ಆದರೆ ಜೂನ್-ಆಗಸ್ಟು ತಿಂಗಳುಗಳು, ಚಳಿಕಾಲ ಆದರೆ ನವಂಬರು-ಡಿಸೆಂಬರು ತಿಂಗಳುಗಳು ಸರಿಯಾದ ಸಮಯ. ಇಳುವರಿ ಸರಾಸರಿ ಒಂದು ಹೆಕ್ಟೇರಿಗೆ ೩೦೦-೪೦೦ ಕಿಲೋ ಬರುತ್ತದೆ . ಪಯಿರು ಕಾಲ 80-145 ದಿನಗಳು. ಕರ್ನಾಟಕದಲ್ಲಿ ಹೆಚ್ಚಾಗಿ ನೆಂ:೧೬(ಫಸಲು ೧೨೦ ದಿನ),ನೆಂ.೨೪(ಫಸಲು೧೨೦-೧೨೫ ದಿನ)ತಳಿಗಳನ್ನು ವ್ಯವಸಾಯ ಮಾಡುತ್ತಾರೆ.

ಬೀಜ/ವಿತ್ತನ

ಬದಲಾಯಿಸಿ

ಹುಚ್ಚೆಳ್ಳು ನೋಡುವುದಕ್ಕೆ ಸೂರ್ಯಕಾಂತಿ ಬೀಜ ತರಹ ಕಪ್ಪಾಗಿ ಕಾಣಿಸುತ್ತದೆ. ಆದರೆ ಸೂರ್ಯಕಾಂತಿ ಬೀಜಕ್ಕಿಂತ ಸಣ್ಣಗೆ ಇರುತ್ತದೆ. ಬೀಜ ೪-೬ಸೆಂ.ಮೀ. ಉದ್ದವಾಗಿರುತ್ತದೆ. ಬೀಜದ ಮೇಲೆ ದಪ್ಪಣಿ ಹೊಟ್ಟು ಇರುತ್ತದೆ. ಬೀಜದಲ್ಲಿ ೩೨.೦% ವರೆಗೆ ಎಣ್ಣೆ ಲಭ್ಯವಾಗುತ್ತದೆ..

ಬೀಜದಲ್ಲಿರುವ ಘಟಕಗಳ ಪಟ್ಟಿ[]

ಘಟಕ ಪದಾರ್ಥ ಮಿತಿ
ತೇವ 10-11%
ಎಣ್ಣೆ 30-40%
ಪ್ರೋಟಿನ್ 10-25%(ಸರಾಸರಿ:20)
ಕರಗುವ ಸಕ್ಕರೆ 12-18(ಸರಾಸರಿ:12)
ಕಚ್ಚನಾರು 10-20

ಎಣ್ಣೆ ಉತ್ಪಾದನೆ

ಬದಲಾಯಿಸಿ

ಬೀಜದಲ್ಲಿ ಎಣ್ಣೆ ಶೇಕಡ ೩೨.೦% ಇರುವುದರಿಂದ ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳಿಂದ ತೆಗೆಯ ಬೇಕಾಗುತ್ತದೆ.[] ಹಿಂಡಿಯಲ್ಲಿ ಉಳಿದಿರುವ(೮-೧೧%)ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ನಡೆಸಿ ತೆಗೆಯುವರು.[]

ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ಮಿರಿಸ್ಟಿಕ್ ,ಪಾಮಿಟಿಕ್ ಮತ್ತು ಸ್ಟಿಯರಿಕ್ ಕೊಬ್ಬಿನ ಆಮ್ಲಗಳು ಒಟ್ಟಿಗೆ ಸುಮಾರು ೨೦% ತನಕ ಇರುತ್ತವೆ. ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ,ಒಲಿಕ್ ಮತ್ತು ಲಿನೊಲಿಕ್ ಕೊಬ್ಬಿನ ಆಮ್ಲಗಳು ೮೦% ಶೇಕಡ ಇರುತ್ತವೆ. ಈ ಎರಡು ಕೊಬ್ಬಿನ ಆಮ್ಲಗಳಲ್ಲಿ ಒಲಿಕ್ ಕೊಬ್ಬಿನ ಆಮ್ಲ ಒಂದು ದ್ವಿಬಂಧವುಳ್ಳ ಕೊಬ್ಬಿನ ಆಮ್ಲ. ಎರಡನೆಯದು ಆಗಿರುವ ಲಿನೊಲಿಕ್ ಕೊಬ್ಬಿನ ಆಮ್ಲದಲ್ಲಿ ಎರಡು ದ್ವಿಬಂಧಗಳಿರುತ್ತವೆ. ಲಿನೊಲಿಕ್ ಆಮ್ಲದಲ್ಲಿ ಎರಡು ದ್ವಿಬಂಧಗಳಿದ್ದ ಕಾರಣ ಅದನ್ನು ಬಹುಳ ದ್ವಿಬಂಧಯುಳ್ಳ ಕೊಬ್ಬಿನ ಆಮ್ಲ(poly unsaturated fatty acid=PUFA)ಎನ್ನುತಾರೆ. ಲಿನೊಲಿಕ್ ಕೊಬ್ಬಿನ ಆಮ್ಲಕ್ಕೆ ಇರುವ ಇನ್ನೊಂದು ಹೆಸರು ೬-ಒಮೇಗಾ ಕೊಬ್ಬಿನ ಆಮ್ಲ. ತಾಜಾ ಬೀಜಗಳಿಂದ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸಿ ತೆಗೆದಿರುವ ಎಣ್ಣೆಯನ್ನು ಕೇವಲ ಫಿಲ್ಟರು ಮಾಡಿ ಅಡುಗೆ ಎಣ್ಣೆಯನ್ನಾಗಿ ಬಳಸಬಹುದು. ಸೂರ್ಯಕಾಂತಿ ಎಣ್ಣೆ ಯಲ್ಲಿ ಮತ್ತು ಹುಚ್ಚೆಳ್ಳು ಎಣ್ಣೆಯಲ್ಲಿ ಒಂದೇ ತರಹ, ಒಂದೇ ಶೇಕಡ ಕೊಬ್ಬಿನ ಆಮ್ಲಗಳಿರುತ್ತವೆ .ಹುಚ್ಚೆಳ್ಳು ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ೮೦% ವರೆಗೆ ಇರುವುದರಿಂದ, ಈ ಎಣ್ಣೆಯನ್ನು ಹೆಚ್ಚಿನ ಕಾಲ ದಾಸ್ತಾನು ಮಾಡಿಡುವುದಕ್ಕೆ ಆಗುವುದಿಲ್ಲ.

ಎಣ್ಣೆಯಲ್ಲಿದ್ದ ಕೊಬ್ಬಿನ ಆಮ್ಲಗಳ ಪ್ರತಿಶತ ಪಟ್ಟಿ(ಭಾರತ ದೇಶದ ಎಣ್ಣೆ)

ಕೊಬ್ಬಿನ ಆಮ್ಲ ಪ್ರತಿಶತ/ಶೇಕಡ
ಮಿರಿಸ್ಟಿಕ್ ಆಮ್ಲ(C14:0) 1.7-3.4)
ಪಾಮಿಟಿಕ್ ಆಮ್ಲ(C16:0) 5-8.4
ಸ್ಟಿಯರಿಕ್ ಆಮ್ಲ(C18:0) 2-5
ಒಲಿಕ್ ಆಮ್ಲ(C18:1) 31-39
ಲಿನೋಲಿಕ್ ಆಮ್ಲ(C18:2) 51-54

ಎಣ್ಣೆಯ ವಿಶಿಷ್ಟ ಲಕ್ಷಣಗಳು []

ಲಕ್ಷಣ ಮಿತಿ
ವಕ್ರಿಭವನ ಸೂಚಿಕೆ400C ಕಡೆ 1.4665-1.4691
ಸಪೋನಿಫಿಕೆಸನ್ ಮೌಲ್ಯ/ಸಂಖ್ಯೆ ೧೯೦-೧೯೬
ಅಯೋಡಿನ್ ಮೌಲ್ಯ ೧೨೧.೦-೧೨೮.೦
ಅನ್ ಸಪೋನಿಫಿಯಬುಲ್ ಪದಾರ್ಥ 1.0-1.5% ಗರಿಷ್ಟ
ತೇವ 0.5-.75%
ವಿಶಿಷ್ಟ ಗುರುತ್ವ ೦.೯೦೩-೦.೯೨೩
ಪೆರಾಕ್ಸೈಡ್ ಸಂಖ್ಯೆ ೫.೩-೮.೧

ಉಪಯೋಗಗಳು

ಬದಲಾಯಿಸಿ
  • ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಉಪಯೋಗಿಸುತ್ತಾರೆ. ಎಣ್ಣೆಯಿಂದ ಸಾಬೂನುಗಳನ್ನು, ಬಣ್ಣ(paint)ಗಳನ್ನು ತಯಾರಿಸುತ್ತಾರೆ.[]
  • ಗಂಟಿನ ಉರಿಯೂತ ನಿವಾರಣೆ ಎಣ್ಣೆ ತಯಾರಿಕೆಯಲ್ಲಿ ವಿನಿಯೋಗಿಸುತ್ತಾರೆ []

ಉಲ್ಲೇಖನಗಳು

ಬದಲಾಯಿಸಿ
  1. ೧.೦ ೧.೧ http://www.hort.purdue.edu/newcrop/ncnu02/v5-174.html/J. Quinn and R.L. Myers
  2. ೨.೦ ೨.೧ SEA Hand Book-2009 by The Solvent Extractors'Association Of India.page No.855-859
  3. http://birding.about.com/od/birdfeeders/a/nyjer.htm
  4. http: //www.oilgae. com/ref/ glos/ expeller_press. html
  5. http://www.oilgae.com/ref/glos/hexane_solvent_oil_extraction.html
  6. http://www.cabdirect.org/abstracts/20133068603.html;jsessionid=581F0417CB38512140A5A76827C8A38F/ಕಾಬ್ ಡೈರೆಕ್ಟ್
  7. http://www.merriam-webster.com/dictionary/niger-seed%20oil
  8. http:// www.hort. purdue. edu/ newcrop /duke_ energy/ Guizotia_ abyssinica. html