ಹಿಂದೂ ಕೋಡ್ ಬಿಲ್

ಬ್ರಿಟೀಷರಿಂದ ಆರಂಭಿಸಲ್ಪಪಟ್ಟ ಹಿಂದೂ 'ವೈಯಕ್ತಿಕ ಕಾನೂನಿನ ಸುಧಾರಣೆ ಮತ್ತು ಕ್ರೂಢೀಕರಣ' ಪ್ರಕ್ರಿಯೆಯು,೧೯೪೭ರಲ್ಲಿ ಭಾರತ ಸ್ವಾತಂತ್ರವಾದ ಮೇಲೆ ವಸಾಹತುಶಾಹಿನಂತರದ ಸರ್ಕಾರದ ಪ್ರಧಾನ ಮಂತ್ರಿಯಾದ ಜವಹರಲಾಲ್ ನೆಹರು ನೇತ್ರುತ್ವದಲ್ಲಿ ಸಂಪೂರ್ಣಗೊಂಡಿತು.ಹಸ್ತಕ್ಷೇಪ ಮಾಡದಿರುವ ಬ್ರಿಟಿಷ್ ನೀತಿಯ ಪ್ರಕಾರ, ವೈಯಕ್ತಿಕ ಕಾನೂನಿನ ಸುಧಾರಣೆಯು ಹಿಂದೂ ಸಮುದಾಯದಲ್ಲಿ ಹುಟ್ಟಿದಂತಹ ಬೇಡಿಕೆಯಾಗಿತ್ತು.ಇದು ಆಗಿನ ಸಂಗತಿಯಾಗಿರಲಿಲ್ಲ,ಆ ವೇಳೆಗೆ ಮಹತ್ವವಾದ ವಿರೋಧವು ವಿವಿಧ ಹಿಂದೂ ರಾಜಕಾರಣಿಗಳು,ಸಂಘಟನೆಗಳು ಮತ್ತು ಧಮ೯ಭಕ್ತರುಗಳಿಂದ ವ್ಯಕ್ತವಾಗಿ,ಅನ್ಯಾಯಯುತವಾದದ್ದೆಂದು ಅವರು ಹಿಂದೂ ಸಮುದಾಯದಿಂದ ತಮ್ಮನ್ನು ತಾವು ಬೇಪ೯ಡಿಸಿಕೊಂಡರು ಆದ ಕಾರಣ ಕಾನೂನುಗಳ ಸುಧಾರಣೆಯಾಗಬೇಕಿತ್ತು.ಹೇಗಾದರೂ,ಏಕರೂಪತೆ ಎಂಬುದು ಆದಶ೯ಪ್ರಾಯ ರಾಷ್ಟ್ರದ ಮೊದಲ ಹೆಜ್ಜೆ,ಹೀಗಾಗಿ 'ಕ್ರೂಢಿಕರಣವು' ಹಿಂದೂ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಅಗತ್ಯವಾದದ್ದು ಎಂದು ನೆಹರು ಆಡಳಿತವು ಕಂಡುಕೊಂಡಿತು.೧೯೫೫-೫೬ರಲ್ಲಿ ಅವರು ನಾಲ್ಕು ಹಿಂದೂ ಕೋಡ್ ಬಿಲ್ಸ್ ಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.ಅವುಗಳೆಂದರೆ- (೧)ಹಿಂದೂ ವಿವಾಹ ಕಾಯ್ದೆ (೨)ಹಿಂದೂ ಅನುಪೂವಿ೯ ಅಥವಾ ಅನುಕ್ರಮ ಕಾಯ್ದೆ (೩)ಹಿಂದೂ ಅಲ್ಪಸಂಖ್ಯಾತ ಮತ್ತು ಗಾಡ್೯ನ್ ಶಿಫ್ ಕಾಯ್ದೆ (೪)ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶಕಾಯ್ದೆ ಈ ಕಾಯ್ದೆಗಳು ಸ್ತ್ರೀಯರ,ಧಾಮಿ೯ಕ ಮತ್ತು ರಾಷ್ಟ್ರೀಯವಾದಿ ಗುಂಪುಗಳಿಗೆ ಸಂಬಂಧಿಸಿದಂತೆ ಇಂದಿಗೂ ಸಹ ವಿವಾದಾತ್ಮಕವಾಗಿವೆ.

ಹಿನ್ನೆಲೆ

ಹಿಂದೂಧಮ೯ದ ಜೀವನಸ್ವರೂಪದ ಬಗ್ಗೆ ಬಹಳ ವ್ಯಾಪಕವಾದ ಕೆಲವು ಶಾಶ್ವತವಾದ ನಿಧಿ೯ಷ್ಟ ಮೂಲಭೂತ ನಂಬಿಕೆಗಳು ಇರಬಹುದು.ಹೀಗಾಗಿ ಹಿಂದೂ ಕಾನೂನುಗಳು ಹೆಚ್ಚು ಏಕರೂಪವಾಗಿಲ್ಲದ್ದು.ವಿದ್ವಾಂಸರಾದ ಡೆರೆಟ್ ರವರ ಗ್ರಂಥವಾದ "ಹಿಂದೂ ಕಾನೂನು"ನಲ್ಲಿ ಉಲ್ಲೇಖಿತವಾಗಿದ್ದು-"ನಾವು ಹಿಂದೂಗಳನ್ನು ಗುರುತಿಸುವುದಾದರೆ,ಭೂಮಿಯ ಅಂತ್ಯಭಾಗದಿಂದ ಸಂಗ್ರಹಿಸಲ್ಪಟ್ಟಿರಬಹುದಾದ ಮನುಷ್ಯ ಜೀವಿಗಳ ವೈವಿಧ್ಯಮಯವಾದ ಜೀವನ ಕ್ರಮ,ಮನೋವಿಜ್ಞಾನ,ಹವ್ಯಾಸ,ಮತ್ತು ಕಸುಬು ಮುಂತಾದ ಮಾನವ ಸಮುದಾಯದ ವಿಭಿನ್ನ ಸ್ವರೂಪದ ಆಧಾರದ ಮೇಲೆ ಹಿಂದೂಗಳೆಂದು ವಿವರಿಸಿದ್ದಾರೆ.ಹಾಗೆಯೇ ಧಮ೯ಶಾಸ್ತ್ರವು ಕೆಲೊವೊಂದು ಗ್ರಾಂಥಿಕ ವಿಷಯಗಳ ಮೇಲೆ ಹಿಡಿತವನ್ನು ಹೊಂದಿದೆ ಅವುಗಳಂದರೆ ವಿವಾಹ,ದತ್ತುಸ್ವೀಕಾರ,ಅಲ್ಪಸಂಖ್ಯಾತರು,ಅನುಕ್ರಮ ಹಕ್ಕುದಾರಿಕೆ,ಧಾಮಿ೯ಕ ದತ್ತಿಗಳು ಮತ್ತು ಜಾತಿ ಸವಲತ್ತುಗಳು ಮುಂತಾದ ಖಾಸಗಿ ಕಾನೂನುಗಳಲ್ಲಿ ಹಿಂದೂ ಧಮ೯ ವಿಚಾರಗಳನ್ನು ಕಾಣಬಹುದು.ಹೇಗಾದರೂ,ಹಿಂದೂ ಕಾನೂಗಳ ಅಸಮಂಜಸ ನಿಯಮಗಳನ್ನು ಹೆಸರಿಸುವುದು ಮತ್ತು ವಣಿ೯ಸುವುದು ಕಷ್ಟಸಾಧ್ಯವಾಗಿದ್ದು,ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ಹಿಂದೂ ಕಾನೂನುಗಳು ಕಲಬೆರಕೆಗಳಿಂದಾದ ನಿಯಮಗಳು,ಸಾಮರಸ್ಯವಿಲ್ಲದೆ ಅಪೈಪೋಟಿಯುತವಾಗಿವೆ.ಹೀಗಾಗಿ ಹಿಂದೂ ಕಾನೂಗಳ ಏಕಪ್ರಕಾರತೆಯಲ್ಲಿ ಕೊರತೆಯನ್ನು ಕಾಣಬಹುದು.

ಹಿಂದೂ ಕಾನೂನುಗಳ ವಿಷಯ ಮತ್ತು ರಚನೆಯು ಅಂತಿಮವಾಗಿ ಬ್ರಿಟೀಷರ ಆಡಳಿತ ಕಾಲದಲ್ಲಿ ರಕ್ಷಣೆಗೆ ಬಂದು,ಅವರ ಬಹಳಷ್ಟು ಗಮನ ಹಿಂದೂ ಧಾಮಿ೯ಕ ಕಾನೂನು ಗ್ರಂಥಗಳ ಮೇಲಾಗಿ ಏಕಕಾಲದಲ್ಲಿ ಇಂಗ್ಲಿಷ್ ಕಾಯ೯ವಿಧಾನವನ್ನು ಉರಿದುಂಬಿಸಿದರು ಮತ್ತು ಇದ್ದ ಅಂತರವನ್ನು ಆಂಗ್ಲ ಕಾನೂನಿನಿಂದ ಪೂಣ೯ ಮಾಡಿದರು.ನಂತರದ ಅಭಿಪ್ರಾಯಗಳು ಒಂದಕ್ಕೊಂದು ಭಿನ್ನವಾಗಿದ್ದು ವಿಸ್ತಾರವಾದ ವ್ಯತ್ಯಾಸವನ್ನು ಪ್ರಚಲಿತ ಕಾನೂನು ಮತ್ತು ಸಾವ೯ಜನಿಕ ಅವಶ್ಯಕತೆ ಮಧ್ಯೆ ಕಂಡುಕೊಂಡರು,ಹಾಗೂ ಇದನ್ನು ಹೆಚ್ಚು ಜನರು ಒಪ್ಪಿ ಗಣನೀಯವಾದ ಅಸಂಗತೆ ಮತ್ತು ಅಸಾಮರಸ್ಯ ಹುಟ್ಟಿಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬ್ರಿಟೀಷರ ವಸಾಹತುಶಾಹಿ ಸಕಾ೯ರ ಆಡಳಿತ ವ್ಯವಸ್ಥೆಯಲ್ಲಿ ಪಸರಿಸಿದ್ದ ವ್ಯಾಪಕವಾದ ಹಸ್ತಕ್ಷೇಪರಹಿತ ನೀತಿಯಲ್ಲಿ ,ನಾಗರೀಕ ವಿಷಯಗಳನ್ನು ಆಯಾ ಧಾಮಿ೯ಕ ಸಮುದಾಯಗಳ ಮೂಲಕ ವ್ಯವಹರಿಸಬೇಕು.ಹೀಗಾಗಿ ಈ ಸಮುದಾಯಗಳ ವ್ಯಾಪ್ತಿಗೆ ಬಿದ್ದಿದ್ದ ವಿಷಯಗಳನ್ನು ವೈಯಕ್ತಿಕ ಕಾನೂನುಗಳೆಂದು ಕರೆಯಲಾಯಿತು.ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಸಂಘಟಿಸುವಲ್ಲಿ,೧೯೪೦ರ ವೇಳೆಯ ಮೊದಲೇ ಬ್ರಿಟೀಷರಿಂದ ಆರಂಭವಾದ ವೈಯಕ್ತಿಕ ಹಿಂದೂ ಕಾನೂನುಗಳ ಕ್ರೂಢೀಕರಣ ಪ್ರಕ್ರಿಯೆಯು ಬಹಳ ಪ್ರಮುಖವಾದದ್ದು ಆಗಿದೆ.

೧೯೨೧ರ ನಂತರ ಬ್ರಿಟೀಷ್ ಸಕಾ೯ರವು ಈಗಾಗಲೇ ಆರಂಭಿತವಾದ ತುಂಡು-ತುಂಡಾಗಿದ್ದ ಕ್ರೂಢೀಕರಣಕ್ಕೆ,' ವೈಯಕ್ತಿಕ ಸದಸ್ಯರ ಶ್ರಮಕ್ಕೆ' ಆಹ್ವಾನವಿತ್ತರು ಈ ನಿಣ೯ಯವು ಮಹತ್ವದ್ದಾಗಿದ್ದು ನೀತಿಯು ವಗಾ೯ವಣೆಯಲ್ಲಿ ಸಹಕಾರಿಯಾಯಿತು ಆದರೆ ನಿಯಮಿತವಾಗಿತ್ತು.ಲೆವಿಯವರ ಪ್ರಕಾರ ಆ ವಷ೯ದಲ್ಲಿ,"ಎರಡು ಹಿಂದೂ ಶಾಸಕರು,ಒಬ್ಬರು ಕೇಂದ್ರ ಶಾಸನ ಸಭೆಯ ವಕೀಲ (ಕೆಳಮನೆ),ಸಂಸ್ಕ್ರುತದ ಒಬ್ಬ ಸವ್ರೋ೯ತ್ಕೃಷ್ಟ ವಿದ್ವಾಂಸ(ಮೇಲ್ಮನೆ)ಸೇರಿ, ಸಕಾ೯ರವು ಹಿಂದೂ ಕೋಡ್ ಬಿಲ್ ನ ಕುಟುಂಬ ಕಾನೂನುಗಳ ನಿಣ೯ಯಗಳಿಗೆ ಚಾಲನೆ ತೋರಿತು. ಇನ್ನು ಮುಂದಿನ ೨೦ ವಷ೯ಗಳಲ್ಲಿ ಕೆಲವು ಛಿದ್ರವಾಗಿರುವ ಹಿಂದೂ ವಿವಾಹ ಕಾಯ್ದೆ,ಉತ್ತರಾಧಿಕಾರ ಮತ್ತು ಆವಿಭಕ್ತ ಕುಟುಂಬ ಆಸ್ತಿ ವಿಚಾರಗಳಿಗೆ ಸಂಬಧಿಸಿದಂತೆ ಕ್ರಮಗಳನ್ನು ಮಾಪ೯ಡಿಸಿ ಜಾರಿಗೆ ತಂದರು.ಇಡೀ ಜಾರಿಗೊಳಿಸಿದ ಸಂಹಿತೆಗಳಲ್ಲಿ,ಆಸ್ತಿಯ ಪರಭಾರೆ ಹೆಚ್ಚುತ್ತಿರುವ ಕಡೆಗೆ ಮತ್ತಷ್ಟು ಪ್ರಮಾಣದಲ್ಲಿ ಗಮನ ನೀಡಿ ಜಾತಿಯ ಕಾನೂನು ಪ್ರಮುಖ್ಯತೆಯನ್ನು ಕಡಿಮೆಗೊಳಿಸಿ ಧಾಮಿ೯ಕ ಅಸಂಪ್ರದಾಯಕತೆ ಮತ್ತು ಪರಿವ೯ತನೆಯನ್ನು ಅನುಮೋದಿಸಿ,ಮಹಿಳೆಯ ಸ್ಥಾನವನ್ನು ಸುಧಾರಿಸುವುದಕ್ಕೆ ಹೆಚ್ಚು ಮಹತ್ವ ನೀಡಲಾಯಿತು.೧೯೩೭ರಲ್ಲಿ ಹೇಗಾದರೂ ಇದು ಹಿಂದೂ ಮಹಿಳೆಯರ ಆಸ್ತಿ ಹಕ್ಕನ್ನು ಜಾರಿಗೊಳಿಸಿ ಮತ್ತು ವಿಧವೆಗೆ ಮಗನ ಸಮವಾಗಿ ಆಸ್ತಿಯ ಪಾಲನ್ನು ನೀಡುವಲ್ಲಿ ಸಹಕಾರಿಯಾಯಿತು ಇದು ಹಿಂದೂ ಕೋಡ್ ಬಿಲ್ ನ್ ಮಹತ್ವದ ಹಂತವಾಗಿತ್ತು.

ಏಕರೂಪ ನಾಗರಿಕ ನೀತಿ ಸಂಹಿತೆ: ೧೯೪೬ರ ಡಿಸೆಂಬರಂದು ಘಟಕ ಸಭೆಯು ಸ್ವತಂತ್ರ ಭಾರತಕ್ಕಾಗಿ ಸಂವಿಧಾನ ರೂಪಿಸಲು ಸಭೆ ಸೇರಿಸಿತು. ಈ ಹಿನ್ನೆಲೆಯಲ್ಲಿ ಹೊಸ ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಹಲವು ವ್ಯಾಪಕ ಚಚೆ೯ಗಳು ನೆಡೆದವು. ಅಲ್ಲಿ ಕೆಲವರು ಹಲವು ಭಾರತೀಯ ವೈಯಕ್ತಿಕ ಕಾನೂನುಗಳಲ್ಲಿ ಒಡಕುಂಟೆಂದು ಮತ್ತು ಇದರ ಜಾಗದಲ್ಲಿ ಏಕರೂಪ ನಾಗರಿಕ ನೀತಿ ಸಂಹಿತೆಯನ್ನು ಸ್ಥಾಪಿಸಬೇಕೆಂದು ವಾದಿಸಿದರು. ಹೀಗೆ ಒಮ್ಮೆ ಈ ಅಭಿಪ್ರಾಯವನು ಮುಂದಿಟ್ಟಾಗ ಹಲವು ವಿಭಿನ ಧಮ೯ಗಳ, ಜಾತಿಗಳ ಹಾಗು ಜಾನಾಂಗೀಯತೆ ಮೇಲೆ ಇದು ಭಾರತೀಯ ರಾಷ್ಟ್ರೀಯ ಗುರುತನ್ನು ರಚಿಸಲು ಬಹುಮುಖ್ಯವಾದ ಶ್ರಮವೆಂದು ಒಪ್ಪಿಕೊಂಡರು. ಈ ಸಂಹಿತೆಯನ್ನು ಹಲವರು ಕೆಲವು ಅಧಾರಗಳ ಮೇಲೆ ವಿರೋಧಿಸಿದರು ಹೇಗೆಂದರೆ ಈ ಸಂಹಿತೆಯನ್ನು ಹೇರುವುದರ ಮೂಲಕ ಅಲ್ಪಸಂಖ್ಯಾತರ ಸಂಸ್ಕೃತಿಯ ಗುರುತನ್ನು ನಾಶಮಾಡುವಂತಾಗುವುದು ಆದರೆ ಪ್ರಜಾಪ್ರಭುತ್ವದಲ್ಲಿ ಇದರ ರಕ್ಷಣೆ ನಿಣಾ೯ಯಕವಾದದ್ದು, ಇದರ ಸಲ್ಲಿಕೆ ಸ್ತ್ರೀಸ್ವಾತಂತ್ರ್ಯಕ್ಕಾಧಾರಿತ ತಿರುವುಗಳನ್ನು ಅದೃಶ್ಯಗೊಳಿಸುತ್ತದೆ.

ಮೊದಲ ಕರಡು ಕಟ್ಟಲೆಯಲ್ಲಿ,"ಏಕರೂಪ ನಾಗರಿಕ ನೀತಿ ಸಂಹಿತೆಯನ್ನು ನಾಗರೀಕರ ಭದ್ರತೆಗಾಗಿ ಭಾರತೀಯ ಸೀಮೆಯ ಉದ್ದಕ್ಕೊ ಪ್ರಯತ್ನಿಸಬೇಕು" ಏಂಬ ಷರತ್ತನ್ನು ಒಳಗೊಂಡಿದ್ದು ಇದನ್ನು ಹಕ್ಕನಲ್ಲದೆ ಗುರಿಯಾಗಿ ಸಮವೆಂದು ಪರಿಗಣಿಸಿ ಸಂವಿಧಾನದ ೪೪ನೇ ಕಟ್ಟಲೆಯಲ್ಲಿ ಉಲ್ಲೇಖಿಸಲಾಯಿತು. ಇದನ್ನು ಏಕರೂಪ ನೀತಿ ಸಂಹಿತೆಯ ಪ್ರತಿಪಾದಿಗಳು ವ್ಯಾಪಕವಾಗಿ ಟೀಕಿಸಿದರು ಏಕೆಂದರೆ ಇದು ಯಾವುದೇ ಸೂಕ್ತ ವೇಳಾಪಟ್ಟಿಯ ಜಾರಿಯನ್ನು ಒದಗಿಸುವುದಿಲ್ಲವೆಂದು.ಹೀಗಿದ್ದರೂ,ಪ್ರಧಾನ ಮಂತ್ರಿ ನೆಹರು ಮತ್ತು ಇತರರು ಇದು ಕೇವಲ ಸಾಂಕೇತಿಕವಾದದ್ದು, ರಾಷ್ಟ್ರೀಯ ಏಕತೆಗೆ ಪ್ರಮುಖ ಹೆಜ್ಜೆಯೆಂದು ವಾದಿಸಿ ಒಳಗೂಡಿಸಲು ಒತ್ತಾಯಿಸಿದರು. ನೆಹರುರವರೆ ಬಯಸಿ ಏಕರೂಪ ನೀತಿಯನ್ನು ಅನುಗ್ರಹಿಸಿದರು, ಅವರಿಗೆ ಭಾರತದ ವೈಯಕ್ತಿಕ ಕಾನೂನುಗಳು ಧಮ೯ಗಳಿಗೆ ಬೆಸೆದುಕೊಂಡಿದೆ ಎಂಬುದನ್ನು ಅರಿತಿದ್ದರು ಅದರಿಂದಾಗಿ ಇದನ್ನು ಸುಲಭವಾಗಿ ರದ್ದುಪಡಿಸಲಾಗಲಿಲ್ಲ. ಇದರಿಂದ ಗುರುತಿಸಬಹುದೇನೆಂದರೇ ಅವರಿಗೆ ಬೇಕಾದದ್ದು ರಾಜಕೀಯ ವಾಸ್ತವಿಕತೆ(ಸತ್ಯತೆ) ಅಲ್ಲ, ಅವರು ಸ್ಥಾಪಿಸಿದು ನಿರ್ಬಂಧಿಸಲಾಗದ ಷರತ್ತು.


ಕ್ರೂಢೀಕರಣದ ಪ್ರಾರಂಭ:

ಆರಂಭಿಕ ಕರಡು

೧೯೪೧ರಂದು, ನಾಲ್ವರು ಸದಸ್ಯರ ಹಿಂದೂ ಕಾನೂನು ಸಮಿತಿಯನ್ನು ವಸಾಹತಶಾಹಿ ಸಕಾ೯ರವು ನೇಮಕಮಾಡಲಾಯಿತು, ಇದನ್ನು ಅಧ್ಯಕ್ಷ ಬಿ.ಎನ್.ರಾವ್ ರನಂತರ ರಾವ್ ಸಮಿತಿ ಎಂದು ನೇಮಿಸಿದರು. ಸಮಿತಿಯ ಮುಖ್ಯ ಉದೇಶ ದೆಶ್ ಮುಖ ಕಾಯ್ದೆಯ ನಿಮಾ೯ಣದ ಅನುಮಾನಗಳನ್ನು ತಿದ್ದುಪಡಿಸುವುದಾಗಿತ್ತು ಹಾಗೂ ಈ ಮಸೂದೆಗಳು ಮಹಿಳೆಯರ ಕ್ಷೇತ್ರದ ಮಿತಿಯನ್ನು ರದ್ದುಪಡಿಸಲು ಹಾಗೂ ಬಹುಪತ್ನಿತ್ವವನ್ನು ಒಂದು ಪ್ರತ್ಯೇಕ ಮತ್ತು ಸಂರಕ್ಷಾಣಾ ನೆಲೆಯನಾಗಿ ಮಾಡಲಾಯಿತು. ನಂತರ ೧೯೪೧ರಲ್ಲಿ ಈ ಮಂಡಳಿಸಮಿತಿ ಹಿಂದೂ ಸಂಹಿತೆಗೆ ಸಮಯಬಂತೆಂಬ ವರದಿ ಸಲಿಸಿತ್ತು. ಸಮಾಜದ ಏಳಿಗೆಯನ್ನು ಮತ್ತು ಅಧುನಿಕತೆಯನ್ನು ಮೂಲಭೂತ ಸುಧಾರಣೆಗಳಿಂದ ಮಾತ್ರವೆ ಸಾದಿಸಬಹುದು,ಹಾಗು ಲಿಂಗ ಸಮಾನತೆಗೆ ಮಾನ್ಯತೆ ನೀಡಿತು. ಈ ಸಂಹಿತೆಯ ಸಂಪ್ರಾಧಾಯ,ಸಾಂಪ್ರದಾಯಿಕ ಹಾಗೂ ಹಿಂದೂ ಸುಧಾರಣವಾದಿಗಳ ಮತ್ತು ಪ್ರಚಲಿತದಲ್ಲಿರುವ ಹಿಂದೂ ಕಾನೂನು ಸಂಸ್ಥೆಗಳ, ಪುರಾಣ ಗ್ರಂಥಗಳ ಬೆಸೆಯುವೇಕೆಯ ವ್ಯಾಪಕ ತಿದ್ದುಪಡಿಯಾಗಬೇಕು.

೧೯೪೧ರಂದು, ಎರಡು ಕರಡು ಮಸೂದೆಗಳು ಜೊತೆಗೂಡಿದ ವರದಿ ಸಿದ್ದಪಡಿಸಿದವು, ಪ್ರತಿಯೊ೦ದನ್ನು ಆಯ್ದ ಎರಡು ಶಾಸಕಾಂಗ ಸಭೆಯ ಸಮಿತಿಯ ಮುಂದಿಡಲಾಯಿತು. ಈ ಯೋಜನೆಗೆ ಹೆಚ್ಚು ಪ್ರಚಾರ ನೀಡಲಾಯಿತು ಮತ್ತು ಈ ಸಮಿತಿಗಳ ವರದಿಯ ಫಲಿತಾಂಶವಾಗಿ ೧೯೪೪ರಂದು ಹಿಂದೂ ಕಾನೂನು ಸಮಿತಿಯನ್ನು ಪುನಶಚೀತನ ಮಾಡಲಾಯಿತು, ಇದರ ಅಧ್ಯಕ್ಷರಾದ ಬಿ.ಎನ್. ರಾವ್ ರವರು ಅನುಪೂವಿ೯, ಜೀವನಾಂಶ, ವಿವಾಹ ಮತ್ತು ವಿಚ್ಚೇದನ, ವಯಸ್ಕರಲ್ಲದ ಮತ್ತು ರಕ್ಷಕರ ಹಾಗೂ ದತ್ತು ಪಡೆಯುವ ವಿಷಯಗಳ ಮೇಲೆ ಒಂದು ಕರಡು ಸಂಹಿತೆಯನ್ನು ರಚಿಸಿದರು. ಈ ಸಂಹಿತೆಯ ವ್ಯಾಪಕ ಪ್ರಚಾರ ಚಚೀಗಳ ನಂತರ "ಹಿಂದೂ ಕೋಡ್ ಬಿಲ್" ಎಂಬ ಹೆಸರನು ನೀಡಲಾಯಿತು. ೧೨ ಪ್ರಾದೇಶಿಕ ಭಾಷೆಗಳ ಪತ್ರಿಕೆಗಳ ಪ್ರಕಟಣೆಯ ಮತ್ತು ದಂಡಯಾತ್ರೆಯ ಪ್ರಚಾರದ ಒಳಿಕ, ರಾವ್ ಮಂಡಳಿಯು ದೇಶದ ಪ್ರವಾಸವನು ಕೈಗೊಂಡು ಸಾಕ್ಷಿಗಳನು ವಿಮಶಿ೯ಸಿದರು. ಇದರ ಫಲಿತಾಂಶ ೧೯೪೭ರ ಸಮಿತಿಯ ವರದಿಯು ೧೯೪೧ರ ಪ್ರಸ್ತಾಪಗಳನ್ನು ಮೀರಿತು, ಅಭಿಭಕ್ತ ಕುಟುಂಬದ ಅಸ್ತಿ ವ್ಯವಸ್ತೆ, ತಂದೆಯ ಆಸ್ತಿಯಲ್ಲಿ ಮಗನ ಸಮವಾಗಿ ಹೆಣ್ಣು ಮಕ್ಕಳ ಏಕಕಾಲಿಕ ಅನುಕ್ರಮ ಪಧತಿಯ ಪರಿಚಯ, ಅಂತ೯ಜಾತಿ ವಿವಾಹಕ ತಡೆಗಳನ್ನು ರದ್ದುಪಡಿಸಿ, ನಾಗರಿಕ ಮತ್ತು ಸಾಂಪ್ರಧಾಯಕ ವಿವಾಹಗಳ ಸಮೀಕರಣ ಹಾಗೂ ಮೇಲಜಾತಿಯಲ್ಲಿ ವಿಚ್ಚೇಧನ ಪದ್ಧತಿಯ ಪರಿಚಯ, ೧೯೪೮ರ ಜನವರಿ ೧ ರಂದು ಈ ಮೂದಲ ಕಟ್ಟ್ಟಲೆ ಕಾನೂನಾಗಬೇಕೆಂಬುದು ಸಕಾ೯ರದ ಅಭಿಪ್ರಾಯವಾಗಿತು,ಆದರೆ ಸ್ವತಂತ್ರದ ಮಾಗ೯ವು ಹೊಸ ಪ್ರಭುತ್ವವನ್ನು ನಿಮಿ೯ಸುವ ಕಾಯ೯ವನು ಶಾಸಕಾಂಗ ತೆಗೆದುಕೊಳಲು ಅಧ್ಯತೆ ನೀಡಿದರಿಂದ ತಾತಕಾಲಿಕವಾಗಿ ಪೊಣ೯ ಯೋಜನೆಯನು ತೆಗೆದುಹಾಕಲಾಯಿತು.


ಮಸೊದೆಗಳಿಗೆ ಸಂಭಂದಿಸಿದಂತೆ ೧೯೪೩ರೊಳಗೆ ಶಾಸಕಾಂಗದ ಒಳಗು ಮತ್ತು ಹೊರಗು ಸಂಹಿತೆಯ ವಿರುದ್ಧ ಅಥ೯ಪೊಣ೯ ವಿರೊಧ ಪ್ರರಂಭವಾದವು ಅದರೆ ೧೯೪೩-೪೪ರೊಳಗೆ ಶಾಸಕಾಂಗದ ಚಚೆ೯ಗಳಲ್ಲಿ ವಿರೋಧಿಗಳು ಮತ್ತು ಬೆಂಬಲಿಗರು ಒಮ್ಮತದಿಂದ ಕಾನೂನಿನ ವೃತ್ತಿ ಸಂಹಿತೆಯನ್ನು ಬೆಂಬಲಿಸವುದನ್ನು ಮುಂದುವರೆಸುವುದು ಎಂಬ ಸತ್ಯವನು ಒಂದಾಗಿ ಒಪ್ಪಿಕೊಂಡರು ಕೆಲವು ವಿರೋದ್ಧಿಗಳು ಗ್ರಹಿಸಿದ ಬೆಂಬಲವನ್ನು ತಪ್ಪಿಸಲಿ ವಕೀಲರು ಪಾಶಚಾತ್ಯರಾಗಿದಾರೆಂದು ಅಥವ ಮಸೊದೆಗಳ ಸಾಮತ್ಯ೯ವನ್ನು ತೀಮಾ೯ನಿಸುವ್ವವರು ನಾಗರಿಕರೆ ಹೊರೆತು ವಕೀಲರಲ್ಲಾ ಎಂದು ವಾದಿಸಿದರು.ನೆಹರುರವರು ಆಗಲೆ ನೈಜ ಸ್ಥಿತಿಯನ್ನು ಹಿಮ್ಮೆಟ್ಟಿ ಮಸೂದೆಗಳನ್ನು ಶಿಫಾರಸ್ಸು ಮಾಡಬೇಕೆಂಬ ಒತ್ತಡವುಂಟುಮಾಡಿದರು.ಪುರುಷೋತ್ತಮ್ಮ ದಾಸ್ ತಂಡನ್ ರವರನ್ನು ರಾಷ್ಟ್ರಪತಿಯೆಂದು ಅನುಮೋದಿಸಿದ ನಂತರ ನೆಹರುರವರ ಸ್ಥಾನಮಾನ ಹೆಚ್ಚಾಯಿತು. ಅವರು ತಂಡನ್ ರವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ಅವರ ಒಟ್ಟು ಶಕ್ತಿಯನ್ನು ಪರೀಕ್ಷಿಸುವುದಕ್ಕಾಗಿ ಅಲ್ಲ ಆದರೆ ಮಸೂದೆಯನ್ನು ರದ್ದುಗೊಳಿಸುವ ಕಾರಣಕ್ಕಾಗಿತ್ತು. ಹಾಗಿದ್ದರೂ, ಮಸೊದೆಗಳ ನಿಸ್ವಾಥ೯ ವಾದಗಳ ಯೊಗ್ಯತೆಗಳ ಮೇಲೆ ದಂಡಯಾತ್ರೆ ಮಾಡುವುದಾಗಿ ತಮ್ಮ ಸಹ ಬೆಂಬಲಿಗರಿಗೆ ಪ್ರಮಾಣ ಮಾಡಿದರು.ಅಂಬೇಡ್ಕರವರ ಕರಡುಪತ್ರ

ಮಂತ್ರಿಮಂಡಲದ ಕಾನೂನು ೧೯೪೮ ರಲ್ಲಿ ಮೊದಲನೆ ಕರಡುಪತ್ರವನ್ನು ಪರಿಶೋಧಿಸುವ ಮೂಲಕ ಸಂವಿಧಾನ ಸಭೆಯ ಚರ್ಚೆಗಳಿಗೆ ಹೆಚ್ಚು ಹೊಂದಾಣಿಕೆಯಾಗುವಂತೆ ಕೆಲವು ತಿದ್ದುಪಡಿಗಳನ್ನು ಮಾಡಿತು.ಇದು ಮಂತ್ರಿಮಂಡಲದ ಸಭಾದ್ಯಕ್ಷರಾದ ಬಿ.ಆರ್.ಅಂಬೇಡ್ಕರ್ ರವರ ಆಯ್ಕೆ ಸಮಿತಿಯನ್ನು ಉಲ್ಲೇಖಿಸುತ್ತದೆ ಮತ್ತು ಈ ಸಮಿತಿ ಸಂಖ್ಯಾತ್ಮಕ ಮುಖ್ಯ ಬದಲಾವಣೆಗಳನ್ನು ಈ ಬಿಲ್ ನಲ್ಲಿ ಮಾಡಿತು. ಈ ಮುದ್ರಣ ೮ ಪರಿಚ್ಚೇದಗಳನ್ನು ಹೊಂದಿತ್ತು.ಮೊದಲನೆ ಪರಿಚ್ಚೇದವು ಈ ಬಿಲ್ ಜಾತಿ ಪದ್ದತಿಯನ್ನು ಪರಿಗಣಿಸದೆ ಹಿಂದುತ್ವವನ್ನು ಪರಿಗಣಿಸುತ್ತದೆ ಎಂಬುದನ್ನು ಚಿತ್ರಿಸುತ್ತದೆ. ಮುಖ್ಯವಾಗಿ, ಮುಸ್ಲಿಂ, ಪಾರ್ಸಿ,ಕ್ರಿಶ್ಚಿಯನ್, ಅಥವಾ ಯಹೂದಿ, ಮುಂತಾದ ಬೇರೆ ಧರ್ಮಗಳಿಗೆ ಸೇರಿದವರನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿದವರಿಗೆ ಮಾತ್ರ ಈ ಹಿಂದೂ ಕೋಡ್ ಬಿಲ್ ಅನ್ವಹಿಸುತ್ತದೆ ಎಂಬುದನ್ನು ಕರಾರು ಮಾಡುತ್ತದೆ. ಮತ್ತು ಹಿಂದೂಗಳೆಲ್ಲರೂ ಏಕರೂಪದ ಕಾನೂನಿನ ಆಡಳಿತಕ್ಕೆ ಒಳಪಡುತ್ತಾರೆಂದು ಪ್ರತಿಪಾದಿಸುತ್ತದೆ. ಬಿಲ್ ನ ೨ ನೇ ಪರಿಚ್ಚೇದ ಮದುವೆ, ೩ ನೇ ಪರಿಚ್ಚೇದ ದತ್ತುಸ್ವೀಕಾರ, ೪ ನೇ ಪರಿಚ್ಚೇದ ಪೋಷಕತ್ವ, ೫ ನೇ ಪರಿಚ್ಚೇದ ಅವಿಭಕ್ತ ಕುಟುಂಬದ ಆಸ್ತಿಯ ನೀತಿ ಬಗ್ಗೆ ಕಾಳಜಿವಹಿಸುತ್ತದೆ. ೬ ನೇ ಪರಿಚ್ಚೇದ ಆಸ್ತಿ ನೀತಿಯನ್ನು ಪ್ರೋತ್ಸಾಹಿಸುತ್ತದೆ. ಪರಿಚ್ಚೇದ ೭ ಮತ್ತು ೮ ಪೋಷಣೆ ಮತ್ತು ಉತ್ತರಾಧಿಕಾರದ ನೀತಿಯನ್ನು ಪ್ರೋತ್ಸಾಹಿಸುತ್ತದೆ.ಅಂಬೇಡ್ಕರ್ ರವರ ಹಿಂದೂ ಕೋಡ್ ಬಿಲ್ ನ ವರಧಿಯು ವಿಚ್ಚೇದನ ಕಾನೂನನ್ನು ಅಳವಡಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ವೈಯಕ್ತಿಕ ಕಾನೂನಿನ ಜೊತೆ ಘರ್ಷಣೆಗಿಳಿಯಿತು, ಸಾಂಪ್ರದಾಯಿಕ ಕಾನೂನು ವಿವಾಹ ವಿಚ್ಚೇದನಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಇದು ಪ್ರಾದೇಶಿಕ ಕಾನೂನಿಗೆ ಹೊರತಾಗಿ ಅವಿಭಕ್ತ ಕುಟುಂಬದ ಆಸ್ತಿಯ ಒಡೆತನವನ್ನು ಪ್ರಕಟಿಸುತ್ತದೆ. ಕೊನೆಯದಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಮನೆಯ ಹೆಣ್ಣುಮಗಳಿಗೂ ಮತ್ತು ವಿಧವೆಯಾದ ಮಹಿಳೆಗೂ ಸಹ ಪಾಲನ್ನು ಹಂಚಿಕೆ ಮಾಡುವ ಹಕ್ಕನ್ನು ಉಲ್ಲೇಖಿಸುತ್ತದೆ.

ಹಿಂದೂ ಎಂದು ಯಾರನ್ನು ಪರಿಗಣಿಸಲಾಗುತ್ತದೆ ಎಂಬ ವರ್ಗೀಕರಣದಿಂದ ಘರ್ಷಣೆಗಳೂ ಸಹ ಹುಟ್ಟಿಕೊಂಡವು.ಕೋಡ್ ಹಿಂದೂ ಧರ್ಮವನ್ನು ನಕಾರಾತ್ಮಕ ವರ್ಗದಲ್ಲಿ ಸ್ಥಾಪಿಸಿತು, ಅದು ಯಾರು ಮುಸ್ಲಿಂ,ಯಹೂದಿ,ಕ್ರಿಶ್ಚಿಯನ್, ಅಥವಾ ಪಾರ್ಸಿ ಧರ್ಮಗಳಿಗೆ ಸೇರಿಲ್ಲವೊ ಆ ಜನರನ್ನು ಒಳಗೊಳ್ಳುತ್ತದೆ. ಇಂತಹ ವಿಶಾಲ ಪದನಾಮವು ಪ್ರಾದೇಶಿಕ ಪ್ರಚಂಡ ವೈವಿದ್ಯತೆ ಮತ್ತು ಹಿಂದೂ ಧರ್ಮದ ಆಚರಣೆ ಮತ್ತು ಸಂಪ್ರದಾಯಗಳನ್ನು ಕಡೆಗಣಿಸುತ್ತದೆ. ಯಾರು ಸಿಖ್ ಧರ್ಮ, ಜೈನ ಧರ್ಮ, ಮತ್ತು ಬೌದ್ಧ ಧರ್ಮವನ್ನು ಪಾಲಿಸುತ್ತಿದ್ದರೋ ಅವರು ಈ ಕೋಡ್ ಬಿಲ್ ನ ಮಸೂದೆಯ ವ್ಯಾಪ್ತಿಗೆ ಒಳಪಡುತ್ತಿದ್ದರು. ಈ ಸಮಯದಲ್ಲಿ ಇವು ಮೂಲತಃ ಹಿಂದೂ ಧರ್ಮದ ಅಂಶಗಳನ್ನು ಒಳಗೊಂಡಿದ್ದವು, ಅವರು ತಮ್ಮ ಸಂಪ್ರಧಾಯಗಳು, ಪದ್ದತಿಗಳು, ಮತ್ತು ವಿಧಿವಿಧಾನಗಳನ್ನು ಅನನ್ಯ ಧರ್ಮಗಳಿಗೆ ನೈಸರ್ಗಿಕವಾಗಿ ವಿಸ್ತರಿಸಿದರು. ಹಿಂದೂ ವೈಯಕ್ತಿಕ ಕಾನೂನನ್ನು ಸ್ಥಾಪಿಸಿದರ ಬಗ್ಗೆ ಮಹತ್ವದ ವಿವಾದ ಸಹ ಇತ್ತು. ಹಿಂದೂ ಧರ್ಮದಲ್ಲಿ ವಿವಿಧ ಆಚರಣೆಗಳು ಮತ್ತು ದೃಷ್ಟಿಕೋನಗಳು ಮಂಜೂರಾಗಿದ್ದವು.

ಮತ್ತಷ್ಟು ಪರಿಷ್ಕರಣೆಗಳು

ಅಂಬೇಡ್ಕರ್ ರವರು ಸಲ್ಲಿಸಿದ ಕರಡುಪ್ರತಿಗೆ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಕೆಲವು ವಿಭಾಗಗಳ ಶಾಸಕರು ವಿರೋಧ ವ್ಯಕ್ತಪಡಿಸಿದರು. ಈ ಒಂದು ಚಲನೆ ೫೦ ಗಂಟೆಗಳ ಕಾಲ ಹಿಂದೂ ಕೋಡ್ ಬಿಲ್ ನ ಮೇಲೆ ಚರ್ಚೆ ಮತ್ತು ವಿವಾದಗಳು ಪ್ರಾರಂಭವಾಗಲು ಮತ್ತು ಒಂದು ವರ್ಷಗಳ ಕಾಲ ಮುಂದೂಡಲು ಕಾರಣವಾಯಿತು. ಇದನ್ನು ಅರಿತ ಅಂಬೇಡ್ಕರ್ ರವರು ಬಿಲ್ ಅನ್ನು ಜಾರಿಗೆ ತರಲು ಅರ್ಥಪೂರ್ಣವಾದ ರಿಯಾಯ್ತಿಗಳನ್ನು ನೀಡಬೇಕಾಯಿತು. ನೆಹರೂ ರವರು ಈ ವೈಯಕ್ತಿಕ ಕಾನೂನನ್ನು ಕೆಲವು ವಿಭಾಗಗಳಾಗಿ ಮಾಡಬೇಕೆಂದು ಸೂಚಿಸಿದರು. ಅವರು ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ ವಿವಾಹ ಮತ್ತು ವಿಚ್ಚೇದನ ಅಂಶಗಳನ್ನು ಒಳಗೊಂಡಂತೆ ಕೇವಲ ೫೫ ವಿಧಿಗಳನ್ನು ಒತ್ತಿ ಹೇಳುತ್ತದೆ, ಉಳಿದವುಗಳನ್ನು ಸಾರ್ವತ್ರಿಕ ಚುನಾವಣೆಯ ನಂತರ ಭಾರತದ ಸಂಸತ್ತು ಪರಿಗಣಿಸುತ್ತದೆ ಎಂದು ಹೇಳುತ್ತಾರೆ. ಹೇಗಾದರೂ, ಈ ಒಪ್ಪಂದ ಬಿಲ್ ಅನ್ನು ಬೆಂಬಲಿಸುವಲ್ಲಿ ಸಂಪ್ರದಾಯವಾದಿಗಳ ಮನವೊಪ್ಪಿಸುವ ಕಾರ್ಯದಲ್ಲಿ ಅಷ್ಟೊಂದು ಪರಿಣಾಮಕಾರಿಯಗಲಿಲ್ಲ. ಯಾವಾಗ ಹೆಚ್ಚುವರಿ ವಾರಗಳ ಚರ್ಚೆಯ ನಂತರ ೫೫ ವಿಧಿಗಳಲ್ಲಿ ಕೇವಲ ೩ ವಿಧಿಗಳು ಗೆಲುವನ್ನು ಪಡೆದವೋ ಅಗ ನೆಹರೂರವರು ಅಂಬೇಡ್ಕರ್ ರವರ ಸಮಿತಿ ವಿತರಿಸಿದ ನವ ಕರಡು ಪ್ರತಿಯನ್ನು ಹೊಂದಿದ್ದರು. ಅದು ಮಿತಾಕ್ಷರ ಅವಿಭಕ್ತ ಕುಟುಂಬ ಪದ್ದತಿಯ ಮರುಸ್ಥಾಪನೆ ವಿಷಯವನ್ನು ಒಳಗೊಂಡಿತ್ತು. ಹಲವಾರು ವಿಮರ್ಶಕರು ಈ ಒತ್ತಾಯಕ್ಕೆ ಧನಿಗೂಡಿಸಿದ್ದರು. ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳ ಪಾಲನ್ನು ಸಹೋದರರು ಕೊಂಡುಕೊಳ್ಳಲು ಅವಕಾಶ ನೀಡುವಂತೆ ಒಂದು ತಿದ್ದುಪಡಿ ಮತ್ತು ಮದುವೆಯಾದ ೩ ವರ್ಷಗಳ ನಂತರದಲ್ಲಿ ಮಾತ್ರ ವಿಚ್ಚೇದನಕ್ಕೆ ಅವಕಾಶ ನೀಡುವ ಷರತ್ತಿನ ತಿದ್ದುಪಡಿಯನ್ನು ಮಾಡಲಾಯಿತು. ಹಾಗಿದ್ದರೂ ಬಿಲ್ ಅನ್ನು ಅಸೆಂಬ್ಲಿಯಲ್ಲಿ ತಿರಸ್ಕರಿಸಿದ ನಂತರ ಅಂಬೇಡ್ಕರ್ ರವರು ರಾಜೀನಾಮೆ ನೀಡಿದರು. ಪತ್ರಿಕೆಯಲ್ಲಿ ಬಿಡುಗಡೆಗೊಳಿಸಿದ ಅವರ ಪತ್ರದಲ್ಲಿ ಬರೆದಿರುವಂತೆ ಅವರ ನಿರ್ಧಾರ ಹಿಂದೂ ಕೋಡ್ ಬಿಲ್ ನ ಕುರಿತಂತೆ ಹೆಚ್ಚಾಗಿ ಚಿಕಿತ್ಸೆ ಆಧರಿತವಾಗಿತ್ತು. ಹಾಗೂ ಬಿಲ್ ಅನ್ನು ಪಾಸು ಮಾಡುವಲ್ಲಿ ಆಡಳಿತ ಅಸಾಮರ್ಥ್ಯದ ಬಗ್ಗೆ ಬರೆದಿದ್ದರು.

೧೯೫೧-೫೨ ರಲ್ಲಿ ಭಾರತದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ನೆಹರೂರವರು ಹಿಂದೂ ಕೋಡ್ ಬಿಲ್ ಅನ್ನು ತನ್ನ ಪ್ರಚಾರದ ಉಪಕ್ರಮಗಳಲ್ಲಿ ಒಂದನ್ನಾಗಿ ಮಾಡಿದ್ದರು.ಅದು ಭಾರತೀಯ ಕಾಂಗ್ರೇಸ್ ಗೆಲ್ಲಬೇಕೆಂದು ಘೋಷಿಸಿತ್ತು. ಸಂಸತ್ತಿನ ಮೂಲಕ ಈ ಬಿಲ್ ಅನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.ಭಾರತೀಯ ಕಾಂಗ್ರೇಸ್ ವ್ಯಾಪಕವಾಗಿ ಜಯಗಳಿಸಿತು. ಜೊತೆಗೆ ನೆಹರೂರವರು ಪುನಃ ಪ್ರಧಾನ ಮಂತ್ರಿಯಾಗಿ ನೇಮಕವಾದರು.ಈಗಾಗಲೆ ವಾಸ್ತವವಾಗಿ ಜಾರಿಗೆ ಬಂದಿರುವ ಬಿಲ್ ಅನ್ನು ನಿರೂಪಿಸಲು ಸಮಗ್ರ ಕಾರ್ಯವನ್ನು ಆರಂಭಿಸಿದರು.ನೆಹರೂರವರು ಕೋಡ್ ಬಿಲ್ ಅನ್ನು ೪ ಪ್ರತ್ಯೇಕ ಬಿಲ್ ಗಳನ್ನಾಗಿ ಮಾಡಿದರು. ಅವುಗಳೆಂದರೆ, ಹಿಂದೂ ವಿವಾಹ ಕಾಯ್ದೆ,ಹಿಂದೂ ಉತ್ತರಾಧಿಕಾರ ಕಾಯ್ದೆ,ಹಿಂದೂ ಅಲ್ಪಸಂಖ್ಯಾತ ಕಾಯ್ದೆ ಮತ್ತು ರಕ್ಷಕ ಕಾಯ್ದೆ ಮತ್ತು ಹಿಂದೂ ಅಂಗೀಕಾರ ಕಾಯ್ದೆ ಮತ್ತು ನಿರ್ವಹಣಾ ಕಾಯ್ದೆ. ಇದಕ್ಕೆ ಗಮನಾರ್ಹವಾಗಿ ಕಡಿಮೆ ವಿರೋದ ವ್ಯಕ್ತವಾಯಿತು.೧೯೫೨ ಮತ್ತು ೧೯೫೬ ರ ನಡುವಿನ ವರ್ಷಗಳಲ್ಲಿ ಸಂಸತ್ತಿನ ಮೂಲಕ ಪರಿಣಾಮಕಾರಿಯಾಗಿ ಜಾರಿಗೆ ಬಂದವು.

ಉದ್ದೇಶಗಳು

ಭಾರತಲ್ಲಿ ವೈಯಕ್ತಿಕ ಕಾನೂನಿನ ಅಗತ್ಯದ ಬಗ್ಗೆ ಮ್ಯಾನ್ಸ್ಫೀಲ್ಡ್ ಈ ರೀತಿ ಬರೆಯುತ್ತದೆ.'ಪ್ರಪಂಚದ ವಿವಿದ ಭಾಗಗಳಲ್ಲಿ ದೊಡ್ದ ರಾಜಕೀಯ ಘಟಕಗಳ ಚಮತ್ಕಾರವು ನಶಿಸಿ ಹೋಗುತ್ತಿವೆ ಮತ್ತು ಜನಾಂಗೀಯ,ಧರ್ಮ, ಅಥವಾ ಭಾಷೆ ಅಥವಾ ಇವುಗಳ ಸಂಯೋಜನೆಯ ಆಧಾರದ ಮೇಲೆ ಸ್ಥಾನವನ್ನು ನೀಡುತ್ತಿವೆ. ಇದು ಆದರ್ಶವನ್ನು ಹೆಚ್ಚು ಬಲಗೊಳಿಸಿ ಕೇಂದ್ರೀಕರಣಗೊಳಿಸುತ್ತದೆ. ಸಾಂಸ್ಕೃತಿಕವಾಗಿ ಒಂದೇ ರೀತಿಯ ರಾಷ್ಟ್ರವು ಅಭ್ಯುದಯಕ್ಕೆ ಅವಶ್ಯಕವಾಗಿದೆ. ಇದು ಕೆಲವು ದೃಡಪಟ್ಟಿರಬಹುದು ಅದೇನೆಂದರೆ ಭಾರತಕ್ಕೆ ವಿಧಿಸಿರುವ ಕೆಲಸವು ಸಾಂಸ್ಕೃತಿಕ ಜನಾಂಗೀಯಕ್ಕಾಗಲೀ ಮತ್ತು ಕೇಂದ್ರದ ಅಧಿಕಾರವನ್ನು ಹೆಚ್ಚುಗೊಳಿಸುವುದಕ್ಕಾಗಲಿ ಅಲ್ಲ ಆದರೆ 'ರಾಷ್ಟ್ರ-ರಾಜ್ಯ' ದ ಮಾದರಿಗೆ ಬದಲೀ ವ್ಯವಸ್ಥೆಯನ್ನು ತರುವುದು ಇದು ಬಹುತ್ವ ಪದ್ಧತಿಯ ಮೂಲಕ ಏಕತೆಯನ್ನು ತರುತ್ತದೆ.'

ಹಿಂದೂ ಕೋಡ್ ಬಿಲ್ ಅನ್ನು ಸ್ಥಾಪಿಸುವುದರಲ್ಲಿ ನೆಹರೂರವರ ಮೊದಲ ಉದ್ದೇಶ ಹಿಂದೂ ಸಮುದಾಯವನ್ನು ಏಕರೂಪಗೊಳಿಸುವುದಾಗಿತ್ತು. ಆದ್ದರಿಂದ ಇದು ವ್ಯಾಪಕವಾದ ಸಾಧ್ಯತೆಗಳನ್ನು ಹೊಂದಿತ್ತು. ಸಮಾನತೆಯ ಕಾನೂನಿನ ಮೂಲಕ ನೆಹರೂ ರವರು "ಹಿಂದೂ ಸಮುದಾಯದ ಒಳಗಿನ ಅಂತರಗಳನ್ನು ಹೋಗಲಾಡಿಸುವ ಮತ್ತು ಸಾಮಾಜಿಕ ಹಿಂದೂ ಏಕತೆಯನ್ನು ತರುವ ಉದ್ದೇಶವನ್ನು ಹೊಂದಿದ್ದರು.ಹಿಂದೂಗಳನ್ನು ಜನಾಂಗೀಯ ಸಮಾಜದಲ್ಲಿ ಒಟ್ಟುಗೂಡಿಸುವ ಮೂಲಕ ಪ್ರತಿಯೊಂದು ಪಂಥ, ಜಾತಿ, ಮತ್ತು ವರ್ಗವನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.ಸಂವಿಧಾನದಲ್ಲಿನ ೪೪ ನೇ ಅನುಚ್ಚೇದದ ಮೇಲಿನ ಚರ್ಚೆಯು ಪ್ರಕಟಿಸುವಂತೆ ವಿವಿಧ ಕಾನೂನುಗಳು ಮತ್ತು ಕಾನೂನು ವಿಭಾಗಗಳು ಅನುಚ್ಚೇದ ರಚಿಸಲು ಸಹಾಯಕವಾಗುತ್ತವೆ.ಇಲ್ಲವಾದಲ್ಲಿ ಕನಿಷ್ಟ ಸಾಮಾಜಿಕ ವಿಭಾಗಗಳನ್ನು ಬಿಂಬಿಸುತ್ತವೆ ಎಂದು ನಂಬಲಾಗಿದೆ.ನೆಹರೂ ಮತ್ತು ಅವರ ಬೆಂಬಲಿಗರು ಹೇಳುವಂತೆ ಹಿಂದೂ ಸಮುದಾಯವು ಭಾರತದ ಉಳಿದ ಜನಾಂಗವನ್ನು ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಹೇಳುತ್ತಾರೆ. ಆದ್ದರಿಂದ, ಹಿಂದೂ ವೈಯಕ್ತಿಕ ಕಾನೂನಿನ ಕ್ರೂಡೀಕರಣವು ಭಾರತೀಯ ರಾಷ್ಟ್ರೀಯತೆಯನ್ನು ಸ್ಥಾಪಿಸಲು ರಸ್ತೆಯ ಒಂದು ಸಾಂಕೇತಿಕ ಆರಂಭದಲ್ಲಿ ಆಯಿತು.

ನೆಹರೂ ರವರು ಸಹ ಇದಕ್ಕೆ ಒಪ್ಪಿಗೆ ನೀಡಿದರು ಏಕೆಂದರೆ ಅವರೂ ಸಹ ಹಿಂದೂ ಆಗಿದ್ದರು. ಹಿಂದೂ ಅಥವಾ ಯಹೂದಿ ಕಾನೂನಿಗೆ ವಿರುದ್ದವಾಗಿ ಅವರು ನಿರ್ಧಿಷ್ಟವಾಗಿ ಹಿಂದೂ ಕಾನೂನನ್ನು ಕ್ರೂಡೀಕರಿಸುವ ವಿಶೇಷ ಅಧಿಕಾರವನ್ನು ಹೊಂದಿದ್ದರು. ಸಂಸತ್ತಿನಲ್ಲಿ ಬಿಲ್ ಗೆ ಉತ್ತೇಜನ ನೀಡುತ್ತಿದ್ದವರೂ ಕೂಡ ಅವರನ್ನು ಹಿಂದೂ ಸಮಾಜದ ಆಧುನೀಕರಣದ ಕಡೆಗೆ ಆಡಳಿತವನ್ನು ನಡೆಸಿಕೊಂಡು ಹೋಗುವವರಂತೆ ನೋಡಿದರು.ಧಾರ್ಮಿಕ ಕಾನೂನಿನಿಂದ ಜಾತ್ಯಾತೀತ ಕಾನೂನನ್ನು ಸ್ಪಷ್ಟವಾಗಿ ಚಿತ್ರಿಸಿದರು.ವೈದಿಕ ಕಾಲದಲ್ಲಿ ಭಾರತದ ಅಭಿವೃದ್ಧಿಗೆ ಅಗತ್ಯ ಎಂದು ಸ್ಥಾಪಿಸಲಾಗಿದ್ದ ಮಸೂದೆಗಳನ್ನು ಬದಲಿಸಿ ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ಜಾರಿಗೊಳಿಸುವ ಅವಕಾಶವನ್ನು ಉಪಯೋಗಿಸಿಕೊಂಡರು.


ಬೆಂಬಲ ಮತ್ತು ವಿರೋಧ

ಹಿಂದೂ ಕೋಡ್ ಬಿಲ್ ನ ಚಚಾ೯ ವಿಷಯಗಳು ಸಾಮಾನ್ಯಸಭೆಯಲ್ಲಿ ಮುಗಿದ ನಂತರ,ಹಿಂದೂ ಜನಸಮುದಾಯದ ಬಹು ದೊಡ್ಡ ಭಾಗಗಳು ಇದನ್ನು ಪ್ರತಿಭಟಿಸಿದರು ಮತ್ತು ಬಿಲ್ಲುಗಳ ವಿರುದ್ಧ ಮೆರವಣಿಗೆಯನ್ನು ಸಹ ಏಪ೯ಡಿಸಿದರು.ವಿವದಾತ್ಮಕವಾಗಿದ್ದ ಮಸೊದೆಯ ಮೇಲೆ ಅನೇಕ ಸಂಘಟನೆಗಳು ರೂಪುಗೊಂಡು ಇದರ ಮೇಲೆ ಪ್ರಭಾವ ಬೀರಿದವು ಹಾಗು ಬೃಹತ್ ಪ್ರಮಾಣದ ಸಾಹಿತ್ಯವನ್ನು ಹಿಂದೂ ಜನಸಮುದಾಯದ ಉದ್ದಕ್ಕೂ ವಿತರಿಸಲಾಯಿತು.ಇಂತಹ ಗಾಯನ ವಿರೋಧಕ್ಕೆ ನೆಹರು,ಸಮಥಿ೯ಸಿಕ್ಕೊಳ್ಳಲು ಹಿಂದೂ ಕ್ರೂಢೀಕರಣ ಮಸೂದೆಯ ಅನುಮೋದನೆಯನ್ನು ಹೊಂದಿದ್ದರು.ಅವರು ಹೆಳೀದಂತೆ ಹಸ್ತಕ್ಷೇಪರಹಿತ ನೀತಿಗೆ ಅನುಗುಣವಾಗಿ ಹಿಂದೂ ಸಮುದಾಯದ ಕ್ರೂಢೀಕರಣ ಬೇಡಿಕೆಯು ಒಂದು ಅನುಸರಣೆಯ ಕಾಯ೯ವಾಗಿತ್ತು.ಆ ಸಮಯದಲ್ಲಿ ಹೆಚ್ಚು ಪ್ರಮಾಣದ ಹಿಂದೂ ಜನರು ಈ ಹಿಂದೂ ಕ್ರೂಢೀಕರಣ ಮಸೂದೆಗೆ ಸಹಕಾರ ನೀಡಲಿಲ್ಲ,ಹಾಗೆಯೇ ಅಲ್ಪಸಂಖ್ಯಾತರಾದರು ಹಿಂದೂ ಸಮುದಾಯವು ಆಧುನಿಕ ಹಾಗು ಅಭಿವೃದ್ಧಿಯ ನಂತರದ ತರುವಾಯವು ತನ್ನ ತನವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.ಮಸೂದೆಗಳನ್ನು ಬೆಂಬಲಿಸುವವರು ಪ್ರಗತಿಪರರು ಎಂಬುದರ ಬಗ್ಗೆ ಅಸಮ್ಮತಿಯನ್ನು ಸೂಚಿಸಿದರು,ಆಧುನಿಕತೆಯ ಸತ್ಯಗಳು ಮುಖಾಮುಖಿಯಾದಗ ಯಾರು ಅಂತಿಮವಾಗಿ ತಮ್ಮ ಸ್ಥಾನವನ್ನು ಬದಲಾಯಿಸುವವರ ಪರವಾಗಿ ವಾದಿಸಿದರು.

ಪ್ರಸ್ತುತದಲ್ಲಿ ಯಾರು ಹಿಂದು ಕಾನೂನುಗಳ ಕೆಲವು ವಿನಾಯಿತಿಗಳ ಅಹ೯ತೆ ಪದೆದಿದ್ದರೊ ಮತ್ತು ಹಿಂದು ಎಂದು ಯಾರನ್ನು ಕರೆಯಬೇಕು ಎಂಬ ವಿವಾದವು ಹಿಂದು ಕೋಡ್ ಬಿಲ್ ಅಜಿ೯ಗಳಲ್ಲಿ ಕಂಡುಬರುತ್ತದೆ.ಈಗಲೂ ಹಲವು ಸಮುದಾಯಗಳಲ್ಲಿ ಮಹಿಳೆಯರನ್ನು ಒಳಗೊಂಡಂತೆ,ರಾಷ್ತ್ರೀಯವಾದಿಗಳು ಮತ್ತು ಧಾಮಿ೯ಕ ಸಂಘಗಳಲ್ಲಿ ವಿವಾದ ಕಂಡು ಬರುತ್ತದೆ .