ಹಾಸು ಮತ್ತು ಹೊಕ್ಕು
ಹಾಸು ಮತ್ತು ಹೊಕ್ಕು ನೆಯ್ಗೆಯಲ್ಲಿ ದಾರ ಅಥವಾ ನೂಲನ್ನು ಬಟ್ಟೆಯಾಗಿ ಬದಲಿಸಲು ಬಳಸಲಾದ ಎರಡು ಮೂಲಭೂತ ಅಂಶಗಳಾಗಿವೆ. ಉದ್ದವಾಗಿ ಚಲಿಸುವ ಹಾಸು ನೂಲುಗಳನ್ನು ಚೌಕಟ್ಟು ಅಥವಾ ಮಗ್ಗದಲ್ಲಿ ಬಿಗಿತದೊಂದಿಗೆ ಸ್ಥಿರವಾಗಿ ಹಿಡಿದಿಟ್ಟು, ಅಡ್ಡಡ್ಡವಾಗಿ ಸಾಗುವ ಹೊಕ್ಕು ನೂಲುಗಳನ್ನು ಹಾಸುಗಳ ಮೇಲೆ ಮತ್ತು ಕೆಳಗೆ ಎಳೆದು ಅದರ ಮುಖಾಂತರ ತೂರಿಸಲಾಗುತ್ತದೆ.[೧] ಹಾಸಿನ ಮೂಲಕ ಸಾಗುವ ಹೊಕ್ಕಿನ ಒಂದು ಒಂಟಿ ದಾರವನ್ನು ಪಿಕ್ ಎಂದು ಕರೆಯಲಾಗುತ್ತದೆ. ಬಟ್ಟೆಯಲ್ಲಿನ ಪ್ರತಿ ಪ್ರತ್ಯೇಕ ಹಾಸು ದಾರವನ್ನು ಹಾಸು ಚೂರು ಎಂದು ಕರೆಯಲಾಗುತ್ತದೆ.
ನೆಯ್ಗೆ ಪ್ರಕ್ರಿಯೆಯ ಅವಧಿಯಲ್ಲಿ ಹೆಚ್ಚಿನ ಬಿಗಿತದಲ್ಲಿ ಹಿಡಿದಿಡಲು ಹಾಸು ಗಟ್ಟಿಮುಟ್ಟಾಗಿರಬೇಕು, ಆದರೆ ಹೊಕ್ಕು ಬಹುತೇಕ ಯಾವುದೇ ಬಿಗಿತವನ್ನು ಹೊಂದಿರುವುದಿಲ್ಲ. ಇದಕ್ಕಾಗಿ ಹಾಸು ತುಂಡುಗಳಿಗಾಗಿ ಬಳಸಲಾಗುವ ನೂಲನ್ನು ನೂತ ಹಾಗೂ ಸುತ್ತಿದ ನಾರಿನಿಂದ ತಯಾರಿಸಿರಿಬೇಕಾಗುತ್ತದೆ. ಸಾಂಪ್ರದಾಯಿಕವಾಗಿ ಉಣ್ಣೆ, ನಾರುಬಟ್ಟೆ, ಅಲ್ಪಾಕ, ಮತ್ತು ರೇಷ್ಮೆಯನ್ನು ಬಳಸಲಾಗುತ್ತಿತ್ತು. ಆದರೆ ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ನೂಲುವಿಕೆ ತಂತ್ರಜ್ಞಾನದಲ್ಲಿನ ಸುಧಾರಣೆಗಳು ಯಾಂತ್ರೀಕೃತ ನೆಯ್ಗೆಯಲ್ಲಿ ಬಳಸುವಷ್ಟು ಬಲದ ಹತ್ತಿ ನೂಲುಗಳನ್ನು ಸೃಷ್ಟಿಸಿದವು.
ಟಿಪ್ಪಣಿಗಳು
ಬದಲಾಯಿಸಿ- ↑ "Weft". The George Washington University Museum and The Textile Museum (in ಇಂಗ್ಲಿಷ್). Washington, DC: George Washington University. Archived from the original on 2017-08-10. Retrieved 2017-08-10.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಉಲ್ಲೇಖಗಳು
ಬದಲಾಯಿಸಿ