ಹಾಲು ಕರೆಯುವುದು ಎಂದರೆ ದನಗಳು, ಎಮ್ಮೆ, ಮೇಕೆಗಳು, ಕುರಿಗಳು ಮತ್ತು ಹೆಚ್ಚು ಅಪರೂಪವಾಗಿ ಒಂಟೆಗಳು, ಕುದುರೆಗಳು ಮತ್ತು ಕತ್ತೆಗಳ ಸ್ತನಗ್ರಂಥಿಗಳಿಂದ ಹಾಲು ತೆಗೆಯುವ ಕ್ರಿಯೆ. ಹಾಲನ್ನು ಕೈಯಿಂದ ಅಥವಾ ಯಂತ್ರದಿಂದ ಕರೆಯಬಹುದು, ಮತ್ತು ಇದಕ್ಕೆ ಪ್ರಾಣಿಯು ಪ್ರಸಕ್ತವಾಗಿ ಅಥವಾ ಇತ್ತೀಚೆಗೆ ಗರ್ಭಧರಿಸಿರಬೇಕಾಗುತ್ತದೆ.

ಕೆಚ್ಚಲಿನ ಮೊಲೆತೊಟ್ಟುಗಳನ್ನು ತಿಕ್ಕಿ ಅವುಗಳನ್ನು ಮೃದುವಾಗಿ ಕೆಳೆಗೆ ಎಳೆದು ಕೈಯಿಂದ ಹಾಲನು ಕರೆಯಲಾಗುತ್ತದೆ, ಮತ್ತು ಹಾಲನ್ನು ಬಕೆಟ್‍ನಲ್ಲಿ ಚಿಮ್ಮಿಸಲಾಗುತ್ತದೆ. ಎರಡು ಮುಖ್ಯ ವಿಧಾನಗಳನ್ನು ಬಳಸಲಾಗುತ್ತದೆ: ಮೊದಲನೇ ವಿಧಾನದಲ್ಲಿ, ಮೊಲೆತೊಟ್ಟಿನ ಅಗ್ರಭಾಗವನ್ನು ಬೆರಳು ಮತ್ತು ಹೆಬ್ಬೆರಳ ನಡುವೆ ಹಿಸುಕಿ ಮುಚ್ಚಲಾಗುತ್ತದೆ, ಮತ್ತು ಇದರಿಂದ ಹಾಲು ಕೆಳಭಾಗದಲ್ಲಿ ಸಿಕ್ಕಿಬೀಳುತ್ತದೆ, ಮತ್ತು ನಂತರ ಇದನ್ನು ಇತರ ಬೆರಳುಗಳಿಂದ ಹಿಂಡಲಾಗುತ್ತದೆ, ಮತ್ತು ಹಾಲನ್ನು ಮೊಲೆತೊಟ್ಟಿನ ತುದಿಯಲ್ಲಿನ ರಂಧ್ರದ ಮೂಲಕ ಹೊರಚಿಮ್ಮಿಸಲಾಗುತ್ತದೆ. ಎರಡನೇ ವಿಧಾನದಲ್ಲಿ, ಮೊಲೆತೊಟ್ಟಿನ ಅಗ್ರಭಾಗವನ್ನು ಬೆರಳು ಮತ್ತು ಹೆಬ್ಬೆರಳ ನಡುವೆ ಹಿಸುಕಿ ಮುಚ್ಚಲಾಗುತ್ತದೆ, ಮತ್ತು ನಂತರ ಅವುಗಳನ್ನು ಮೊಲೆತೊಟ್ಟಿನ ಕೆಳಕ್ಕೆ ಜಾರಿಸಲಾಗುತ್ತದೆ, ಮತ್ತು ಹಾಲನ್ನು ಕೆಳಗಡೆಗೆ ತಳ್ಳಲಾಗುತ್ತದೆ.

ಅಭಿವೃದ್ಧಿಹೊಂದಿದ ವಿಶ್ವದಲ್ಲಿ ಬಹುತೇಕವಾಗಿ ಹಾಲನ್ನು ಕರೆಯುವ ಯಂತ್ರಗಳನ್ನು ಬಳಸಿ ಕರೆಯಲಾಗುತ್ತದೆ. ಹಸುವಿನ ಮೊಲೆತೊಟ್ಟುಗಳಿಗೆ ಮೊಲೆತೊಟ್ಟು ಬಟ್ಟಲುಗಳನ್ನು ಜೋಡಿಸಲಾಗುತ್ತದೆ, ಮತ್ತು ನಂತರ ಹಾಲನ್ನು ತೆಗೆಯಲು ಈ ಬಟ್ಟಲುಗಳು ಸಾಮಾನ್ಯ ಹಾಗೂ ನಿರ್ವಾತ ಗಾಳಿ ಒತ್ತಡಗಳ ನಡುವೆ ಪರ್ಯಾಯವಾಗುತ್ತವೆ. ಹಾಲನ್ನು ಸಂಗ್ರಹಣೆಗಾಗಿ ದೊಡ್ಡ ಸಗಟು ಟ್ಯಾಂಕ್‍ಗೆ ಸೇರಿಸುವ ಮುಂಚೆ ಅದನ್ನು ಸೋಸಿ ತಣ್ಣಗಾಗಿಸಲಾಗುತ್ತದೆ.

ಇಂದು ಹಸುವಿಗೆ ಯಾವಾಗ ಹಾಲು ಕರೆಸಿಕೊಳ್ಳಬೇಕು ಎಂಬ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಸಂಪೂರ್ಣವಾಗಿ ಸ್ವಯಂಚಾಲಿತ ಹಾಲು ಕರೆಯುವ ಯಂತ್ರಗಳು ಇವೆ. ಇದರಿಂದ ದೊಡ್ಡ ಪ್ರಮಾಣದ ಹಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಪಡೆಯುವುದಕ್ಕೆ ಅವಕಾಶವಾಗುತ್ತದೆ.[]

ಉಲ್ಲೇಖಗಳು

ಬದಲಾಯಿಸಿ
  1. "Robotic Milking Machine". YouTube.