Donkey
Conservation status
Domesticated
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
Subgenus:
ಪ್ರಜಾತಿ:
Subspecies:
E. a. asinus
Trinomial name
Equus africanus asinus

ಕತ್ತೆ ಅಥವಾ ಗಾರ್ದಭ (ಎಕೂಸ್ ಆಫ಼್ರಿಕಾನಸ್ ಆಸಿನೂಸ್) ಎಕ್ವಿಡೈ ಅಥವಾ ಕುದುರೆ ಕುಟುಂಬದ ಒಂದು ಪಳಗಿಸಿದ ಸದಸ್ಯ. ಆಫ಼್ರಿಕಾದ ಕಾಡು ಕತ್ತೆ, ಎಕೂಸ್ ಆಫ಼್ರಿಕಾನಸ್ ಕತ್ತೆಯ ಕಾಡು ಪೂರ್ವಜವಾಗಿದೆ. ಕತ್ತೆಯನ್ನು ಕನಿಷ್ಠ ೫೦೦೦ ವರ್ಷಗಳಿಂದ ಒಂದು ಕೆಲಸದ ಪ್ರಾಣಿಯಾಗಿ ಬಳಸಲಾಗಿದೆ.

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ

ಸ್ತನಿಗಳ ಗುಂಪಿನ ಪಸೆರಿಸ್ಸೊಡಾಕ್ಟೈಲ ಗಣದ ಕುದುರೆ ಮತ್ತು ಜೀಬ್ರ ಪ್ರಾಣಿಗಳನ್ನೊಳಗೊಂಡ ಎಕ್ವಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ. ಕತ್ತೆ, ಕುದುರೆ ಮತ್ತು ಜೀಬ್ರಗಳಂತೆಯೇ ಈಕ್ವಸ್ ಎನ್ನುವ ಜಾತಿಗೆ ಸೇರಿದೆ.

ಪ್ರಭೇದಗಳು

ಬದಲಾಯಿಸಿ

ಕತ್ತೆಯಲ್ಲಿ ಮುಖ್ಯವಾದ ಎರಡು ಪ್ರಭೇದಗಳಿವೆ: ಈಕ್ವಸ್ ಅಸಿನಸ್ ಮತ್ತು ಈಕ್ವಸ್ ಹೆಮಿಯೋನಸ್. ಮೊದಲನೆಯದು ಈಶಾನ್ಯ ಆಫ್ರಿಕದಲ್ಲಿ (ಇಥಿಯೋಪಿಯ, ಸೋಮಾಲಿ ಲ್ಯಾಂಡ್) ಕಂಡುಬರುವ ಕಾಡುಕತ್ತೆ. ಸಾಕಿದ ಕತ್ತೆ ಈ ಕತ್ತೆಯಿಂದಲೇ ಬಂದುದೆಂದು ನಂಬಲಾಗಿದೆ. ಎರಡನೆಯ ಪ್ರಭೇದ ಏಷ್ಯದ ನಿವಾಸಿಯಾದ ಕಾಡುಕತ್ತೆ. ಇದನ್ನು ಐದು ಉಪಪ್ರಭೇದಗಳಾಗಿ ವಿಂಗಡಿಸುತ್ತಾರೆ. ಇವು: ಸಿರಿಯದ ಕಾಡುಕತ್ತೆ (ಈ. ಹೆ. ಹೆಮಿಪ್ಪಸ್). ತುರ್ಕಿ ಮತ್ತು ವಾಯವ್ಯ ಇರಾನಿನಲ್ಲಿರುವ ಆನಜರ್ ಎಂಬ ಕತ್ತೆ (ಈ.ಹೆ. ಆನಜರ್), ಭಾರತದ ಕಚ್ ಮತ್ತು ಲಡಖಿನಲ್ಲಿರುವ ಕಾಡುಕತ್ತೆ (ಈ.ಹೆ.ಖುರ್). ಟಿಬೆಟ್ಟಿನಲ್ಲಿ 4572 ಮೀ ಗೂ ಎತ್ತರದ ಪ್ರದೇಶದಲ್ಲಿ ಕಾಣಬರುವ ಕಿಯಾಂಗ್ ಎಂಬ ಕತ್ತೆ (ಈ.ಹೆ.ಕಿಯಂಗ್) ಮತ್ತು ಮಧ್ಯ ಮಂಗೋಲಿಯದ ನಿವಾಸಿಯಾದ ಕುಲಾನ್ ಎನ್ನಲಾಗುವ ಕಾಡುಕತ್ತೆ (ಈ.ಹೆ.ಹೆಮಿಯೋನಸ್).

ಲಕ್ಷಣಗಳು

ಬದಲಾಯಿಸಿ

ಕತ್ತೆಗಳ ದೇಹರಚನೆ ಕುದುರೆಯಂತೆಯೇ; ಆದರೆ ಗಾತ್ರ ಮತ್ತು ಎತ್ತರ ಕಡಿಮೆ, ಕಿವಿಗಳು ಉದ್ದ, ಗೊರಸು ಕುದುರೆಗಳವಕ್ಕಿಂತ ಚಿಕ್ಕವು, ಬಾಲದ ತುದಿ ಕುಚ್ಚಿನಂತಿದೆ. ಕತ್ತಿನ ಮೇಲೆ ಇಳಿಬಿದ್ದಿರುವ ಅಥವಾ ನೆಟ್ಟಗಿರುವ ಕೂದಲಿನ ಅಯಾಲಿದೆ. ಬೆನ್ನಿನ ಮಧ್ಯೆ ಬಾಲದವರೆಗೂ ಹಬ್ಬಿರುವ ಪಟ್ಟೆಯಿದೆ. ಒಂದು ಭುಜದಿಂದ ಮತ್ತೊಂದು ಭುಜಕ್ಕೆ ಅಡ್ಡವಾಗಿ ಹರಡುವ ಇನ್ನೊಂದು ಪಟ್ಟೆ ಇದೆ. ಕೆಲವೊಮ್ಮೆ ಕಾಲುಗಳ ಮೇಲೆ ಅಡ್ಡಡ್ಡನಾದ ಮಸಕಾದ ಪಟ್ಟೆಗಳಿರುವುದೂ ಉಂಟು. ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳುವಾಗ ಮತ್ತು ಬಿಡುವಾಗ ಉಂಟಾಗುವ ಹೀ-ಹಾ ಎಂಬ ಇದರ ಕೂಗು ಕತ್ತೆಜಾತಿಗೇ ವಿಶಿಷ್ಟವಾದುದು ಮತ್ತು ಪ್ರಾಣಿ ಪ್ರಪಂಚದಲ್ಲೇ ಅತ್ಯಂತ ವಿಚಿತ್ರವಾದುದು.

ಸಂತಾನಾಭಿವೃದ್ಧಿ

ಬದಲಾಯಿಸಿ
 
Donkeys bring supplies through the jungle to a camp outpost in Tayrona National Natural Park in northern Colombia
 
On the island of Hydra, because cars are outlawed, donkeys and mules form virtually the sole method of heavy goods transport.

ಕಾಡುಕತ್ತೆಗಳು ಒಂಟಿಯಾಗಿಯೊ ಮಂದೆಗಳಲ್ಲಿಯೋ ಇರುತ್ತವೆ. ಮರಿ ಹಾಕುವ ಕಾಲದಲ್ಲಿ ಮಾತ್ರ ಮಂದೆಯಿಂದ ಬೇರೆಯಾಗುತ್ತವೆ. ಗಂಡು ಹೆಣ್ಣುಗಳ ಕೂಡುವಿಕೆ ಸಾಮಾನ್ಯವಾಗಿ ಆಗಸ್ಟ್‌-ಅಕ್ಟೋಬರ್ ತಿಂಗಳುಗಳಲ್ಲಿ. ಗರ್ಭಧಾರಣೆಯ ಅವಧಿ ಸು. 11-12 ತಿಂಗಳು. ಹೆಣ್ಣು ಸಾಮಾನ್ಯವಾಗಿ ಒಂದು ಸಲಕ್ಕೆ ಒಂದು ಮರಿಯನ್ನು ಈಯುತ್ತದೆ.

ಜಾನಪದದಲ್ಲಿ

ಬದಲಾಯಿಸಿ

ಕತ್ತೆಯ ಬಗ್ಗೆ ಒಂದು ಸ್ವಾರಸ್ಯವಾದ ಕಥೆ ಇದೆ. ಒಂದು ಕಥೆಯಲ್ಲಾದರೂ ತನ್ನ ಜಾಣತನವನ್ನು ಕುರಿತು ಎರಡು ಒಳ್ಳೆಯ ಮಾತನ್ನು ಬರೆಯಬೇಕೆಂದು ಕತ್ತೆ ಈಸೋಪನನ್ನು ಕೇಳಿತಂತೆ. ಹಾಗೆ ಮಾಡಿದರೆ ಜನ ತನ್ನನ್ನೇ ಕತ್ತೆಯೆಂದು ಹೀಗಳೆಯುತ್ತಾರೆಂದು ಈಸೋಪ ಕತ್ತೆಗೆ ಹೇಳಿದನಂತೆ.

ಬುದ್ಧಿಮತ್ತೆ

ಬದಲಾಯಿಸಿ

ಕತ್ತೆ ಸಾಮಾನ್ಯವಾಗಿ ಎಲ್ಲರೂ ಭಾವಿಸಿರುವಷ್ಟು ಮೊಂಡು ಮತ್ತು ದಡ್ಡ ಪ್ರಾಣಿಯಲ್ಲ. ತನಗೆ ಇಷ್ಟಬಂದಾಗ ಮಾತ್ರ ಕೆಲಸ ಮಾಡುವುದರಿಂದ ಮತ್ತು ಉದ್ದೇಶ ಪುರ್ವಕವಾಗಿಯೊ ಎಂಬಂತೆ ಮೊಂಡಾಟ ಹೂಡುವುದರಿಂದ ಕತ್ತೆಗೆ ಬುದ್ಧಿಶಕ್ತಿ ಮತ್ತು ವಿವೇಚನಾಶಕ್ತಿ ಇದೆ ಎನಿಸುತ್ತದೆ. ಜಗಳವಾಡುವಾಗ ಅಥವಾ ಆತ್ಮರಕ್ಷಣೆಯ ಅವಶ್ಯಕತೆ ಉಂಟಾದಾಗ ಕತ್ತೆ ತನ್ನ ಹಿಂಗಾಲುಗಳನ್ನು ಮೇಲಕ್ಕೆತ್ತಿ ಜಾಡಿಸಿ ಒದೆಯುತ್ತದೆ; ತನ್ನ ಬಾಚಿಹಲ್ಲುಗಳಿಂದ ಕಚ್ಚುವುದೂ ಉಂಟು, ಕತ್ತೆ ವೇಗವಾಗಿ (ಕುದುರೆಯಷ್ಟಲ್ಲದಿದ್ದರೂ) ಓಡಬಲ್ಲುದು; ಗಂಟೆಗೆ 57 ಕಿಮೀ ವೇಗವಾಗಿ ಓಡಿದ ದಾಖಲೆಗಳುಂಟು. ತೋಳ, ಕತ್ತೆಕಿರುಬಗಳು ಕತ್ತೆಯ ಸ್ವಾಭಾವಿಕ ಶತ್ರುಗಳು.

ಉಪಯೋಗಗಳು

ಬದಲಾಯಿಸಿ
 
Donkey in an ಈಜಿಪ್ಟ್ian painting c. 1298–1235 BC
 
Lt. Richard Alexander "Dick" Henderson using a donkey to carry a wounded soldier at the Battle of Gallipoli.

ಸು. 4,000 ವರ್ಷಗಳ ಹಿಂದೆ ಈಜಿಪ್ಟಿನವರು ಕಾಡುಕತ್ತೆಗಳನ್ನು ಹಿಡಿದು ಪಳಗಿಸಿದರೆಂದು ನಂಬಲಾಗಿದೆ. ಸಾಕಿದ ಕತ್ತೆಗಳೆಂಬ ಒಂದು ನಿರ್ದಿಷ್ಟ ಬಗೆಯ ತಳಿ ಅಂದಿನಿಂದ ಅಸ್ತಿತ್ವಕ್ಕೆ ಬಂದಿದೆ. ಸಾಕಿದ ಕತ್ತೆಗಳು ಕಾಡುಕತ್ತೆಗಳಿಗಿಂತ ಗಾತ್ರದಲ್ಲಿ ಚಿಕ್ಕವು ಮತ್ತು ಸ್ವಲ್ಪ ಮಾಸಲು ಬಣ್ಣದವು. ಕತ್ತೆಗಳನ್ನು ಸಾಕುವುದು ಬಹು ಸುಲಭ: ಏಕೆಂದರೆ ಅವುಗಳ ಆಹಾರ ಬಹಳ ಸರಳರೀತಿಯದು. ಎಂಥ ಆಹಾರವನ್ನಾದರೂ ತಿಂದು, ಹೆಚ್ಚುಕಾಲ ನೀರು ಕುಡಿಯದೇ ಇರಬಲ್ಲವು. ಆದರೆ ದುಡಿಮೆಯಲ್ಲಿ ಮಾತ್ರ ಬೇರಾವ ಪ್ರಾಣಿಗೂ ಕಡಿಮೆಯಿಲ್ಲ. ಬಿಸಿಲಿನ ತಾಪದಲ್ಲಿ, ಬಹಳ ಕಷ್ಟಕರವಾದ ಸ್ಥಿತಿಯಲ್ಲಿ, ಅತಿ ಕಡಿದಾದ ಪರ್ವತ ಪ್ರದೇಶದಲ್ಲಿ ಹೆಜ್ಜೆ ತಪ್ಪದೆ ಬಹಳ ಜಾಗರೂಕತೆಯಿಂದ ನಡೆಯುವ ಸಾಮಥರ್ಯ್‌ವನ್ನು ಹೊಂದಿರುವುದರಿಂದ ಇವನ್ನು ಬೆಟ್ಟಗುಡ್ಡಗಳಲ್ಲಿ ಭಾರವಾದ ಸಾಮಾನು ಸಾಗಿಸಲು ಬಳಸುತ್ತಾರೆ. ಭಾರತದಲ್ಲಿ ಗುಜರಾತ್ ರಾಜ್ಯದ ಕಚ್ ಪ್ರದೇಶ ಮತ್ತು ಲಡಾಖಿನಲ್ಲಿರುವ ಕಾಡುಕತ್ತೆಗಳನ್ನು ಬಿಟ್ಟರೆ ಉಳಿದವೆಲ್ಲ ಕತ್ತೆಗಳೇ. ಕಾಡುಕತ್ತೆ ಕತ್ತೆಗಿಂತ ಗಾತ್ರದಲ್ಲಿ ದೊಡ್ಡದು (ಎತ್ತರ 0.93-1.21 ಮೀ) ಹಾಗೂ ಹೆಚ್ಚು ಮಾಟವಾದುದು. ಮೈಬಣ್ಣ ಹಳದಿ ಮರಳಿನಂತೆ. ಕಿವಿಗಳೂ ಕೊಂಚ ಚಿಕ್ಕವು. ಕೂಗು ಹೆಚ್ಚು ತೀವ್ರವಾದುದು. ಕಾಡುಕತ್ತೆ ಇತರ ಕತ್ತೆಗಳೊಂದಿಗಾಗಲಿ ಬೇರಾವ ಸಾಕು ಪ್ರಾಣಿಗಳಿಗೊಂದಿಗಾಗಲಿ ಸೇರುವುದೇ ಇಲ್ಲ. ಭಾರತದ ಕತ್ತೆಗಳಲ್ಲೂ ಎರಡು ಬಗೆಗಳಿವೆ. ಒಂದು ಬಗೆಯದು ಕೊಂಚ ಕುಳ್ಳು (ಎತ್ತರ 0.81 ಮೀ) ಮತ್ತು ಬೂದು ಬಣ್ಣದ್ದು. ಇದು ದೇಶದ ಎಲ್ಲ ಭಾಗಗಳಲ್ಲಿಯೂ ಸಾಮಾನ್ಯ. ಎರಡನೆಯ ಬಗೆಯದು ಎತ್ತರ (0.93 ಮೀ) ಮತ್ತು ಅದರ ಬಣ್ಣ ಬಿಳಿ ಅಥವಾ ತಿಳಿಬೂದಿ. ಇದು ಕಚ್ ಪ್ರದೇಶದಲ್ಲಿ ಕಾಣಬರುತ್ತದೆ. ಭಾರತದಲ್ಲಿ (1967) ಸು. 1,09,63,000 ಸಾಕಿದ ಕತ್ತೆಗಳಿದ್ದುವೆಂದು ಅಂದಾಜಿದೆ.

ಮಿಶ್ರತಳಿಗಳು

ಬದಲಾಯಿಸಿ

ಕಷ್ಟಸಹಿಷ್ಣುವೂ ಹೆಚ್ಚು ಭಾರವನ್ನು ಹೊರುವ ಸಾಮಥರ್ಯ್‌ವುಳ್ಳದ್ದೂ ಆದ ಕತ್ತೆಯ ಉಪಯುಕ್ತತೆಯನ್ನು ಕಂಡುಕೊಂಡು, ಇನ್ನೂ ಉತ್ತಮವಾದ ತಳಿಗಳನ್ನು ಪಡೆಯಲು ಭಾರತದಲ್ಲಿ ತಳೀಕರಣ ಪ್ರಯೋಗಗಳನ್ನು ನಡೆಸಿದ್ದಾರೆ, ಬೇರೆ ಬೇರೆ ದೇಶಗಳಿಂದ ಉತ್ತಮ ಬಗೆಯ ಗಂಡುಕತ್ತೆಗಳನ್ನು ತರಿಸಿ ಅಡ್ಡತಳಿಯೆಬ್ಬಿಕೆಯಲ್ಲಿ ಬಳಸುತ್ತಿದ್ದಾರೆ. ಅಲ್ಲದೆ ಗಂಡುಕತ್ತೆ ಮತ್ತು ಹೆಣ್ಣು ಕುದುರೆಗಳನ್ನು ಅಡ್ಡಹಾಯಿಸಿ ಪಡೆವ ಮಿಶ್ರತಳಿಯಾದ ಹೇಸರಗತ್ತೆ (ಮ್ಯೂಲ್) ಬಗ್ಗೆಯೂ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಹೇಸರಗತ್ತೆಗಳು ಗಾತ್ರ, ವೇಗ ಮತ್ತು ಶಕ್ತಿಸಾಮಥರ್ಯ್‌ಗಳಲ್ಲಿ ಕುದುರೆಯನ್ನೂ ನೋಟ, ಕಷ್ಟಸಹಿಷ್ಣುತೆ, ಸಹನೆ, ಒರಟುತನ ಮುಂತಾದವುಗಳಲ್ಲಿ ಕತ್ತೆಯನ್ನೂ ಹೋಲುತ್ತವೆ. ಹೀಗಾಗಿ ಇವನ್ನು ಹಲವಾರು ಬಗೆಯ ಕಷ್ಟತರವಾದ ಕೆಲಸಗಳಿಗೆ ಬಳಸಲಾಗುತ್ತಿದೆ. ಸೈನ್ಯದಲ್ಲೂ ಪರ್ವತ ಪ್ರದೇಶಗಳಲ್ಲೂ ಇವುಗಳ ಬಳಕೆ ಹೆಚ್ಚು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕತ್ತೆ&oldid=1016576" ಇಂದ ಪಡೆಯಲ್ಪಟ್ಟಿದೆ