ಹವ್ಯಕರ ಮದುವೆ ಪದ್ಧತಿ
ಸಮಾಜದಲ್ಲಿ ಬುದ್ದಿವಂತ ಜನಾಂಗವೆಂದೇ ಗುರುತಿಸಿಕೊಂಡಿರುವ ಹವ್ಯಕ ಜನಾಂಗವು ಭಾಷೆ, ಆಚಾರ ವಿಚಾರಗಳು, ಹಬ್ಬ ಹರಿದಿನಗಳು, ಆಹಾರ ಪದ್ದತಿಗಳನ್ನೊಳಗೊಂಡು ತಮ್ಮದೇ ಸಂಪ್ರದಾಯದಲ್ಲಿ ಮದುವೆಯನ್ನು ಕೂಡ ಒಂದು ಹಬ್ಬವೆಂಬಂತೆ ಆಚರಿಸಿಕೊಂಡು ಬಂದಿದೆ..ಇತ್ತೀಚಿನ ದಿನಗಳಲ್ಲಿ ಹವ್ಯಕ ಹೆಣ್ಣು ಮಕ್ಕಳಿಗೆ ತುಂಬಾ ಡಿಮ್ಯಾಂಡ್. ಹಳ್ಳಿಯಲ್ಲಿರುವ ಹುಡುಗ ಎಷ್ಟೇ ಶ್ರೀಮಂತನಾಗಿರಲಿ ಹುಡುಗಿ ಸಿಗೋದು ಒಂದು ತರದಲ್ಲಿ ಕಷ್ಟವೇ ಸರಿ.. ಬಹಳ ಹಿಂದಿನಿಂದಲೂ ಇತಿಹಾಸವಿರುವ ಹವ್ಯಕ ಸಮಾಜದಲ್ಲಿ ಸಂಬಧಗಳಿಗೆ ಮಹತ್ವ ಹೆಚ್ಚೆಂದೇ ಹೇಳಬಹುದು. ಶಾಸ್ತ್ರ, ಸಂಪ್ರದಾಯಗಳು, ಮಡಿ ಮೈಲಿಗೆಗಳಿಗೆಲ್ಲಾ ಹೆಚ್ಚಿನ ಸ್ಥಾನ ಈ ಸಮಾಜದಲ್ಲಿ ಎಂದೇ ಹೇಳಬಹುದು..ಹೆಣ್ಣು ಕಡಿಮೆ ಇದ್ದುದ್ದರಿಂದ ಕೆಲವು ಕಡೆ ಬೇರೆ ಪಂಗಡದ ಹೆಣ್ಣನ್ನು ಮದುವೆ ಮಾಡಿಕೊಳ್ಳುವುದು ಹವ್ಯಕ ಸಮಾಜದ ಒಂದು ಬೇಸರದ ಸಂಗತಿಯೇ ಸರಿ.ಮದುವೆ ಎಂದರೆ ಎರಡು ಮನಸ್ಸಿನ ಜೊತೆಗೆ ಎರಡು ಕುಟುಂಬಗಳೂ ಒಂದಾಗಬೇಕು. ಕಾಯಾ, ವಾಚಾ, ಮನಸಾ ಬದುಕಿನಾದ್ಯಂತ ಭರವಸೆಯನ್ನು ಒಬ್ಬರಿಗೊಬ್ಬರು ನೀಡಬೇಕು.
ಜಾತಕ ನೋಡುವುದು
ಬದಲಾಯಿಸಿಹವ್ಯಕ ಸಮುದಾಯವು ಬ್ರಾಹ್ಮಣಪಂಗಡದವರಾಗಿದ್ದರಿಂದ ಇಲ್ಲಿ ಜಾತಕಕ್ಕೆ ತುಂಬಾ ಮಹತ್ವ. ಗುರು ಬಲ ಕೂಡಿ ಬರಬೇಕು.ಗೋತ್ರ ಹುಡುಗಿ ಮತ್ತು ಹುಡುಗನ ಮನೆಯದ್ದು ವಿಭಿನ್ನವಾಗಿರಬೇಕು..ಜಾತಕವೂ ಒಬ್ಬರ ರಾಶಿ ಮತ್ತುನಕ್ಷತ್ರಗಳು ಚನ್ನಾಗಿ ಕೂಡಿ ಬರಬೇಕು.. ಜಾತಕದಲ್ಲಿ ಗುಣವನ್ನು, ಯೋಗಾವಳಿಯನ್ನು ನೋಡುತ್ತಾರೆ.. ಗುಣ ಎಂದರೆ ಹುಡುಗ ಮತ್ತು ಹುಡುಗಿಯ ಜಾತಕವು ಪರಸ್ಪರ ಎಷ್ಟು ಹೊಂದಾಣಿಕೆಯಾಗುತ್ತದೆಯೆಂಬುದನ್ನು ಹೇಳುವ ಜಾತಕದ ಒಂದು ಭಾಗ. ಜಾತಕ ನೋಡಿ ಮದುವೆಯಾದರೆ, ಹೆfಚ್ಉ ವರುಷಗಳ ಕಾಲ ಹೊಂದಾಣಿಕೆಯಿಂದ ಬಾಳುತ್ತಾರೆ ಎಂಬುದು ಹವ್ಯಕ ಸಮಾಜದಲ್ಲಿ ನಂಬಿಕೆ ಇಂದಿಗೂ ಮುಂದುವರೆದುಕೊಂಡು ಬಂದಿರುವುದು ವಿಶೇಷ.ಜಾತಕದಲ್ಲಿ ಏನಾದರೂ ದೋಷವಿದ್ದರೆ ಅದಕ್ಕೆ ಪರಿಹಾರವಾಗಿ ಶಾಂತಿಯನ್ನು, ಹೋಮ ಹವನಗಳನ್ನು ಮಾಡುತ್ತಾರೆ.
ನಿಶ್ಚಿತಾರ್ತ
ಬದಲಾಯಿಸಿಹುಡುಗನ ಮನೆಯವರು ಹುಡುಗಿಯ ಮನೆಗೆ ಹೂವು ಹಣ್ಣು ಕಾಯಿಯೊಂದಿಗೆ ಬಂದು ತಾಂಬೂಲ ಬದಲಾಯಿಸಿಕೊಳ್ಳುವುದು.. ಹುಡುಗಿಯು ಹೊರಗಡೆ ಬಂದು ಬಾಳೆ ಹಣ್ಣಿನ ತಟ್ಟೆಯನ್ನು ಇಟ್ಟು ಎಲ್ಲರಿಗೂ ನಮಸ್ಕಾರ ಮಾಡಿ ಒಳಗಡೆ ಹೋಗಬೇಕು. ದೇವರ ಮುಂದೆ ಕುಳಿತು, ಸೀರೆ ಮತ್ತು ಬಳೆಯೊಂದಿಗೆ ಹುಡುಗನು ಹುಡುಗಿಯ ಉಂಗುರದ ಬೆರಳಿಗೆ ಉಂಗುರ ತೊಡಿಸುವುದರ ಮೂಲಕ ನಿಶ್ಚಿತಾರ್ತವು ನಡೆಯುತ್ತದೆ. ಎಲ್ಲಾ ಹೆಂಗಸರೂ ಬಂದು ಹುಡುಗಯ ತಲೆಗೆ ಹೂವನ್ನು ಮುಡಿಸುತ್ತಾರೆ. ನಂತರದಲ್ಲಿ ಹುಡುಗ ಮತ್ತು ಹುಡುಗಿ ಒಬ್ಬರಿಗೊಬ್ಬರು ಬಾಳೆಯ ಹಣ್ಣ ಜೊತೆಗೆ ಸಕ್ಕರೆಯನ್ನು ತಿನ್ನಿಸಬೇಕು. ನಿಶ್ಚಿತಾರ್ತದ ದಿನವೇ ಪುರೋಹಿತರ ಜೊತೆಗೂಡಿ ಮದುವೆಯ ದಿನಾಂಕ, ವಾರ ಮತ್ತು ಯಾವ ಲಗ್ನದಲ್ಲಿ ನಡೆಯಬೇಕೆಂದು ನಿರ್ಧರಿಸುತ್ತಾರೆ.ಲಗ್ನ ಪತ್ರಿಕೆಯ ನೀಲನಕ್ಷೆಯು ನಿಶ್ಚಿತಾರ್ತದ ಸಂದರ್ಭದಲ್ಲಿಯೇ ರೂಪುಗೊಳ್ಳುತ್ತದೆ.
ನಾಂದಿ
ಬದಲಾಯಿಸಿಮದುವೆಯ ಹಿಂದಿನ ದಿನ ಅಥವಾ ಮದುವೆಗೆ ಎರಡು ದಿನ ಇರುವಾಗ, ಯಾವ ತೊಂದರೆಯೂ ಇಲ್ಲದೆಯೇ ಮದುವೆಯು, ಸುಸೂತ್ರವಾಗಿ ನಡೆಯಲಿ ಎಂದು ನಾಂದಿಯನ್ನು ಇಡುತ್ತಾರೆ. ಅಂದರೆ ದೇವರ ಮುಂದೆ ಕಾಯಿ ಮತ್ತು ಹಣ್ಣುಗಳನ್ನು ಇಟ್ಟು, ಅರಿಶಿನ ಕುಂಕುಮದ ಜೊತೆಗೆ ಮಂತ್ರದಿಂದ ನಾಂದಿಯನ್ನು ಇಡುವುದು.. ಹಾಗೆಯೇ ಮದುವೆಯ ವಧು ಅಥವಾ ವರರಿಂದ ಪೂಜೆಯನ್ನು ಮಾಡಿಸುವುದು..ಇಲ್ಲಿ ಹುಡುಗನು ಕಾಶಿಗೆ ಹೋಗುತ್ತೇನೆ ಎಂದು ಹಳೆಯ ಛತ್ರಿ, ಗಂಟನ್ನು ಹೊತ್ತು ನಿಲ್ಲುತ್ತಾನೆ ಆಗ ಹುಡುಗಿಯ ಸಹೋದರ ಬಂಧು ಕಾಶಿಗೆ ಹೋಗಬೇಡ, ಗ್ರಹಸ್ಥನಾಗಿ ನನ್ನ ಸಹೋದರಿಯ ಜೊತೆಗೆ ಹೋಗು ಎಂದು ತಡೆಯುತ್ತಾನೆ..
ಮದುವೆಯ ದಿನ
ಬದಲಾಯಿಸಿ- ದಿಬ್ಬಣ ಹೋಗುವುದು:-
ಬೆಳಿಗ್ಗೆಯ ದಿನ ಎಲ್ಲರೂ ಸೇರಿ ದಿಬ್ಬಣಕ್ಕೆ ಆರತಿಯೊಂದಿಗೆ ಹೊರಡುತ್ತಾರೆ..ದಿಬ್ಬಣದಲ್ಲಿ ಎಲ್ಲ ನೆಂಟರಿಷ್ಟರ ಜೊತೆಗೆ ಹರಟುತ್ತಾ ಹುಡುಗಿಯ ಮನೆಯ ಕಡೆಗೆ ಹೋಗುವುದು..
- ವರನನ್ನು ಬರಮಾಡಿಕೊಳ್ಳುವುದು:-
ಹುಡುಗಿಯ ತಾಯಿಯು ವರನನ್ನು ಮಾವಿನ ತೋರಣದಿಂದ ಸಿಂಗಾರ ಮಾಡಿದ ಬಾಗಿಲಲ್ಲಿ ಪಾದವನ್ನು ತೊಳೆದು,ಆರತಿಯನ್ನು ಮಾಡಿ ಬರಮಾಡಿಕೊಳ್ಳುತ್ತಾಳೆ. ನಂತರ ಅದಕ್ಕೆ ಸರಿಯಾಗಿ ಮಂಟಪದಲ್ಲಿ ಕರೆದುಕೊಂಡು ಹೋಗಿ ಕೂರಿಸುತ್ತಾರೆ..
- ವಧುವಿನ ಆಗಮನ:-
ವಧುವಿನ ಮಾವನು ಅವಳನ್ನು ಎತ್ತಿಕೊಂಢು ಮಾಲೆಯ ಜೊತೆಗೆ ಹೊರಗೆ ಬರುವುದು..ನಂತರ ವಧು ಮತ್ತು ವರನ ನಡುವೆ ಬಿಳಿಯ ಪರದೆಯೊಂದಿಗೆ ಮಂತ್ರವನ್ನು ಹೇಳುತ್ತಾರೆ.. ಪರದೆ ಸರಿಸಿದಾಗ ಒಬ್ಬರಿಗೊಬ್ಬರು ಮಾಲೆಯನ್ನು ಹಾಕುವ ಪದ್ದತಿ..
- ತಾಳಿ ಕಟ್ಟುವುದು: ಮಾಂಗಲ್ಯಂತಂತು ನಾನೇನ ಮಮ ಜೀಔನ ಹೇತುನ ಎಂಬ ಮಂತ್ರದೊಂಧಿಗೆ ಹುಡುಗಿಯ ಕೊರಳಲ್ಲಿ ತಾಳಿಯನ್ನು ಕಟ್ಟುತ್ತಾರೆ.. ನಂತರ ಏಳು ಹೆಜ್ಜೆಗಳು ಸಪ್ತಪದಿ ಎಂಬ ಹೆಸರಿನಲ್ಲಿ ಒಬ್ಬರ ಬಟ್ಟೆಯ ತುದಿಯನ್ನು ಇನ್ನೊಬ್ಬರಿಗೆ ಕಟ್ಟಿ ಬದುಕಿನ ಎಲ್ಲಾ ಮಜಲಿನಲ್ಲಿಯೂ ಜೊತೆಗೆ ಇರೋಣವೆಂದು ಬಂಧನವನ್ನು ಏರ್ಪಡಿಸುತ್ತಾರೆ.
- ಕನ್ಯಾದಾನ:- ಹುಡುಗಿಯ ತಂದೆ ತಾಯಿ ಹುಡುಗನ ತಂದೆ ತಾಯಿಯ ಕೈಯಲ್ಲಿ ನನ್ನ ಮಗಳಿವಳು, ನಿಮ್ಮ ಮಗಳಂತೆಯೇ ನೋಡಿಕೊಳ್ಳಿರಿ ಎಂಬ ಮಾತಿನೊಂದಿಗೆ ಕನ್ಯಾ ಸಮರ್ಪಣೆಯ ಕಾರ್ಯಕ್ರಮವೂ ನೆರವೇರುತ್ತದೆ.
- ಓಕುಳಿಯಾಡುವುದು:- ವಧು ಮತ್ತು ವರರಿಗೆ ಅರಿಶಿಣದ ನೀರನ್ನು ತಲೆಯಿಂದ ಸುರಿಯುವುದು..ನಂತರ ಅರಿಶಿಣದ ನೀರಿನಲ್ಲಿ ಉಂಗುರವನ್ನು ಹಾಕಿ ಯಾರು ಮೊದಲು ಹುಡುಕುತ್ತಾರೋ, ಅವರು ಇನ್ನೊಬ್ಬರನ್ನು ಜೀವನ ಪರ್ಯಂತ ಹಿಡಿತದಲ್ಲಿರಿಸಿಕೊಳ್ಳುತ್ತಾರೆ ಎಂಬ ಮಾತಿನೊಂದಿಗೆ ಓಕುಳಿಯಾಡಿ, ಒಗಟುಗಳನ್ನು ಅರಿಶಿಣ ಹಚ್ಚುವಾಗ ಎಲ್ಲರೂ ಹೇಳಲೇಬೇಕು..
- ಮದುವೆಯ ಊಟ:- ವಿಭಿನ್ನ ಶೈಲಿಯ ಹವ್ಯಕರ ಊಟದಲ್ಲಿ ಮಜ್ಜಿಗೆಯ ತಂಬಳಿ, ಗೊಜ್ಜು, ಅಪ್ಪೇಹುಳಿ ಇದ್ದೇ ಇರುತ್ತದೆ.. ಮತ್ತಿನ್ನಿತರ ಸಿಹಿಯೊಂದಿಗೆ ಮದುವೆಯೂಟವೂ ವಿಭಿನ್ನ ರೀತಿಯಲ್ಲಿಯೇ ಇರುತ್ತದೆ..
ಹವ್ಯಕ ಮದುವೆ ಪದ್ದತಿಯು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ರೂಪದಲ್ಲಿ ನಡೆಯುತ್ತ ಬಂದಿದೆ. ಇಂದಿನ ಆಧುನಿಕ ಶೈಲಿಯತ್ತ ಮುಖ ಮಾಡಿ ಸ್ವಲ್ಪ ಬದಲಾದರೂ ಮೂಲ ಸ್ವರೂಪವನ್ನು ಕಾಯ್ದುಕೊಂಡಿದ್ದು ವಿಶೇಷ.