ಹಲಸಿನ ಕಡುಬು
ಹಲಸಿನ ಹಣ್ಣಿನಹಲಸಿನ ಹಣ್ಣು ಕಡುಬು ಅಥವಾ ಗಟ್ಟಿಯನ್ನು ಕರ್ನಾಟಕದಕರ್ನಾಟಕ ಮಲೆನಾಡುಮಲೆನಾಡು ಮತ್ತು ಕರಾವಳಿಕರಾವಳಿ ಭಾಗಗಳಲ್ಲಿ ತಯಾರಿಸುತ್ತಾರೆ.ಇದನ್ನು ಬೆಳಗಿನ ತಿಂಡಿಯಾಗಿಯೂ ಸವಿಯುತ್ತಾರೆ.ಹಲಸಿನ ಕಡುಬಿ[೧] ನೊಂದಿಗೆ ತುಪ್ಪತುಪ್ಪ ಮತ್ತು ಜೇನುತುಪ್ಪವನ್ನುಜೇನು ಹಾಕಿಕೊಂಡು ತಿಂದರೆ ತುಂಬಾ ರುಚಿಯಾಗಿರುತ್ತದೆ.ಇನ್ನೂ ತುಳುನಾಡಿನಲ್ಲಿತುಳುನಾಡಿನ ಗಟ್ಟಿ ಈ ಕಡುಬು ಜೊತೆಗೆ ಕೋಳಿ ಸಾರುಕೋಳಿ ಮಾಡುತ್ತಾರೆ.
ಹಲಸಿನ ಕಡುಬು ತಯಾರಿಸಲು ಬೇಕಾಗುವ ಸಾಮಗ್ರಿಗಳು
ಬದಲಾಯಿಸಿ- ಅಕ್ಕಿಅಕ್ಕಿ 1 & 1/2 ಕಪ್
- ಬೆಲ್ಲದಬೆಲ್ಲ ಪುಡಿ 3/4 ಕಪ್
- ಹಲಸಿನ ಹಣ್ಣಿನ ತೊಳೆ 20
- ತೆಂಗಿನತುರಿ 1/2 ಕಪ್
- ಏಲಕ್ಕಿಏಲಕ್ಕಿ ಪುಡಿ 1/2 ಟೀ ಚಮಚ
- ಬಾಳೆಎಲೆಬಾಳೆ ಎಲೆ ಅಥವಾ ಇಡ್ಲಿ ತಟ್ಟೆ
- ಉಪ್ಪುಉಪ್ಪು (ಖಾದ್ಯ) ರುಚಿಗೆ ತಕ್ಕಷ್ಟು.
ಹಲಸಿನ ಕಡುಬು ತಯಾರಿಸುವ ವಿಧಾನ
ಬದಲಾಯಿಸಿಅಕ್ಕಿಯನ್ನು ಒಂದು ಗಂಟೆಗಳ ಕಾಲ ನೆನೆಸಿಡಬೇಕು.ಹಲಸಿನ ಹಣ್ಣಿನ ತೊಳೆಗಳನ್ನು ಚಿಕ್ಕದಾಗಿ ಹೆಚ್ಚಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ನೆನೆಸಿಟ್ಟ ಅಕ್ಕಿಯ ನೀರನ್ನು ತೆಗೆದು ಕಾಲು ಕಪ್ ನೀರನ್ನು ಮತ್ತು ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.ತೆಂಗಿನತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.ಒಂದು ಬೌಲಿನಲ್ಲಿ ರುಬ್ಬಿಕೊಂಡ ಹಣ್ಣು,ಅಕ್ಕಿಹಿಟ್ಟು ಮತ್ತು ತೆಂಗಿನತುರಿಯನ್ನು ಸೇರಿಸಿ.ಜೊತೆಗೆ ಬೆಲ್ಲದ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.ಬಾಳೆಎಲೆಯನ್ನು ಕಾಯಿಸಿಕೊಳ್ಳಿ. ಬಾಳೆಎಲೆಯಲ್ಲಿ ಎರಡು ಸೌಟ್ ಹಿಟ್ಟನ್ನು ಹಾಕಿ.ನಂತರ ನಾಲ್ಕು ಬದಿಯನ್ನು ಮಡಚಿ. ಹಬೆ ಮಡಿಕೆಯಲ್ಲಿಟ್ಟುಮಡಿಕೆ ಅರ್ಧ ಗಂಟೆಗಳ ಕಾಲ ಬೇಯಿಸಿ. ನಂತರ ಬಾಳೆಎಲೆಯಿಂದ ಬಿಡಿಸಿ. ಇಡ್ಲಿಇಡ್ಲಿ ತಟ್ಟೆಯಲ್ಲಿ ಮಾಡುವುದಾದರೆ ತಟ್ಟೆಗೆ ತುಪ್ಪವನ್ನು ಸವರಿ.ನಂತರ ಹಿಟ್ಟನ್ನು ಮೂರು ಸೌಟಿನಷ್ಟು ಹಾಕಿ.ಹಬೆ ಮಡಿಕೆಯಲ್ಲಿಡಿ.ಅರ್ಧ ಗಂಟೆಗಳ ಕಾಲ ಬೇಯಿಸಿ.ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ. ಹಲಸಿನ ಹಣ್ಣಿನ ಕಡುಬನ್ನು ತುಪ್ಪ ಅಥವಾ ಜೇನುತುಪ್ಪದೊಂದಿಗೆ ಸವಿಯಬೇಕು.