ಹರಿ ಓಂ (ಸಂಸ್ಕೃತ:हरि ॐ) ಎಂಬುವುದು ಹಿಂದೂ ಮಂತ್ರವಾಗಿದೆ. ಓಂ ಮಂತ್ರದಂತೆಯೇ ಹರಿ ಓಂ ಕೂಡ ಪವಿತ್ರ ಚಟುವಟಿಕೆಗಳ ಆರಂಭದ ಅಥವಾ ಧ್ಯಾನದ ಸಮಯದಲ್ಲಿ ಪಠಿಸುವ ಮಂತ್ರವಾಗಿದೆ. ಇದನ್ನು ಶುಭಾಶಯವಾಗಿಯೂ ಬಳಸಲಾಗುತ್ತದೆ.[]

ದೇವನಾಗರಿ ಲಿಪಿಯಲ್ಲಿ ಬರೆಯಲಾದ ಹರಿ ಓಂ.
ಎಂ ವಿ ಧುರಂಧರರವರು ಚಿತ್ರಿಸಿರುವ ಶ್ರೀದೇವಿ ಮತ್ತು ಭೂದೇವಿಯರಿಂದ ಸುತ್ತುವರೆದ ವಿಷ್ಣುವಿನ ಚಿತ್ರಕಲೆ ಇದಾಗಿದೆ.

ವಿವರಣೆ

ಬದಲಾಯಿಸಿ

ಹರಿ ಎಂಬುದು ಹಿಂದೂ ದೇವತೆಯಾದ ವಿಷ್ಣುವಿನ ವಿಶೇಷಣವಾಗಿದೆ, ವಿಷ್ಣುವನ್ನು ಉದ್ಧೇಶಿಸಿ ಹೇಳುವ ಮಂತ್ರ ಇದಾಗಿದೆ.[][]

ಅಗ್ನಿ ಪುರಾಣದ ಪ್ರಕಾರ, ಹರಿಯ ಹೆಸರನ್ನು ಸ್ಮರಿಸುವುದರಿಂದ ಪಾಪ ಮಾಡಿದ ವ್ಯಕ್ತಿಯು ಪ್ರಾಯಶ್ಚಿತ್ತವನ್ನು ಕಂಡುಕೊಳ್ಳಬಹುದೆಂದು ವಿವರಿಸಲಾಗಿದೆ ಮತ್ತು ಓಂ ಮಂತ್ರದ ಪುನರಾವರ್ತನೆಯು ಅದೇ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಲಾಗಿದೆ.[]

ಇದು ಜಪ ಮಾಡುವವರಿಗೆ ಮೋಕ್ಷವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದು ಪರಿಗಣಿಸಲಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. Knapp, Stephen (2006-06-05). The Power of the Dharma: An Introduction to Hinduism and Vedic Culture (in ಇಂಗ್ಲಿಷ್). iUniverse. p. 75. ISBN 978-0-595-83748-9.
  2. Feuerstein, Georg (2011-03-22). The Path of Yoga: An Essential Guide to Its Principles and Practices (in ಇಂಗ್ಲಿಷ್). Shambhala Publications. p. 128. ISBN 978-0-8348-2292-4.
  3. Kumar, Tumuluru Kamal (2015-04-21). Hindu Prayers, Gods and Festivals (in ಇಂಗ್ಲಿಷ್). Partridge Publishing. p. 48. ISBN 978-1-4828-4708-6.
  4. Shastri, J. L.; Gangadharan, N. (2013-01-01). The Agni-Purana Part 2: Ancient Indian Tradition and Mythology Volume 28 (in ಇಂಗ್ಲಿಷ್). Motilal Banarsidass. p. 491. ISBN 978-81-208-3895-6.
  5. Altman, Nathaniel (2000). The Little Giant Encyclopedia of Meditations & Blessings (in ಇಂಗ್ಲಿಷ್). Sterling Publishing Company, Inc. p. 72. ISBN 978-0-8069-6517-8.
"https://kn.wikipedia.org/w/index.php?title=ಹರಿ_ಓಂ&oldid=1261570" ಇಂದ ಪಡೆಯಲ್ಪಟ್ಟಿದೆ