ಹನಿಯು ಸಂಪೂರ್ಣವಾಗಿ ಅಥವಾ ಬಹುತೇಕ ಸಂಪೂರ್ಣವಾಗಿ ಮುಕ್ತ ಮೇಲ್ಮೈಗಳಿಂದ ಬಂಧಿತವಾದ ದ್ರವದ ಚಿಕ್ಕ ತುಣುಕು. ದ್ರವವು ಒಂದು ನಳಿಕೆ ಅಥವಾ ಇತರ ಮೇಲ್ಮೈ ಗಡಿರೇಖೆಯ ಕೆಳತುದಿಯಲ್ಲಿ ಸಂಗ್ರಹವಾದಾಗ ಹನಿಯು ರೂಪಗೊಳ್ಳಬಹುದು, ಮತ್ತು ತೂಗುಹನಿ ಎಂದು ಕರೆಯಲ್ಪಡುವ ತೂಗಾಡುವ ಹನಿಯ ಸೃಷ್ಟಿಯಾಗುತ್ತದೆ. ಹನಿಗಳು ಬಾಷ್ಪದ ಘನೀಕರಣ ಅಥವಾ ದ್ರವದ ಹೆಚ್ಚು ದೊಡ್ಡ ರಾಶಿಯ ಪರಮಾಣೀಕರಣದಿಂದ ಕೂಡ ರೂಪಗೊಳ್ಳಬಹುದು.

ನಲ್ಲಿಯಿಂದ ಕೆಳಬೀಳುತ್ತಿರುವ ನೀರಿನ ಹನಿಗಳು

ದ್ರವವು ಮೇಲ್ಮೈ ಎಳೆತವನ್ನು ಪ್ರಕಟಪಡಿಸುವ ಕಾರಣ ದ್ರವದಿಂದ ಹನಿಗಳ ರಚನೆಯಾಗುತ್ತದೆ.[]

ಹನಿಯನ್ನು ರಚಿಸುವ ಒಂದು ಸರಳ ಬಗೆಯೆಂದರೆ ಸಣ್ಣ ವ್ಯಾಸದ ಲಂಬ ನಳಿಕೆಯ ಕೆಳತುದಿಯಿಂದ ದ್ರವವು ನಿಧಾನವಾಗಿ ಹರಿಯುವುದಕ್ಕೆ ಅವಕಾಶ ಕೊಡುವುದು. ದ್ರವದ ಮೇಲ್ಮೈ ಎಳೆತದ ಕಾರಣ ದ್ರವವು ನಳಿಕೆಯಿಂದ ತೂಗಾಡುತ್ತದೆ, ಮತ್ತು ತೂಗುಹನಿಯು ರೂಪಗೊಳ್ಳುತ್ತದೆ. ಹನಿಯು ಒಂದು ನಿರ್ದಿಷ್ಟ ಗಾತ್ರವನ್ನು ಮೀರಿದಾಗ ಅದು ಮುಂದಕ್ಕೆ ಸ್ಥಿರವಾಗಿರದೆ ಬೇರ್ಪಡುತ್ತದೆ. ಕೆಳಬೀಳುವ ದ್ರವ ಕೂಡ ಮೇಲ್ಮೈ ಎಳೆತದಿಂದ ಒಟ್ಟು ಹಿಡಿಯಲ್ಪಟ್ಟ ಹನಿಯಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Luck, Steve (1998). The American Desk Encyclopedia. Oxford University Press, USA. p. 196. ISBN 978-0-19-521465-9.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಹನಿ&oldid=1062406" ಇಂದ ಪಡೆಯಲ್ಪಟ್ಟಿದೆ