ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು (ಪುಸ್ತಕ)

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು ಎನ್.ಪಿ.ಶಂಕರನಾರಾಯಣ ರಾವ್ Archived 2014-09-03 ವೇಬ್ಯಾಕ್ ಮೆಷಿನ್ ನಲ್ಲಿ. ಅವರು ಬರೆದ ಪುಸ್ತಕ. .

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು
ಲೇಖಕರುಎನ್.ಪಿ. ಶಂಕರನಾರಾಯಣ ರಾವ್
ದೇಶಭಾರತ
ಭಾಷೆಕನ್ನಡ
ವಿಷಯಇತಿಹಾಸ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೩, ೯ನೇ ಮುದ್ರಣ
ಪುಟಗಳು೪೦೦
ಐಎಸ್‍ಬಿಎನ್978-81-7302-243-2

ಭಾರತೀಯವೆನಿಸುವ ರಾಷ್ಟ್ರೀಯ ಅಸ್ಮಿತೆಗೆ ಗಂಗೆ ಒಂದು ಸಂಕೇತ. ಭಾರತದ ಸ್ವಾತಂತ್ರ್ಯ ಗಂಗೆಯ ವೈಶಾಲ್ಯ, ಜಲಾಧಿಕ್ಯ, ಸ್ವಚ್ಛತೆಗೆ ಕೂಡು/ಸಂಗಮ ನದಿಗಳ ಕೊಡುಗೆ, ಇವುಗಳ ಸಮೀಕ್ಷಣೆ ಇವೇ ಈ ಗ್ರಂಥದ ವಸ್ತು. ಪೂರ್ವರಂಗವಾಗಿ ಸ್ವಾತಂತ್ರ್ಯವನ್ನು ಹೇಗೆ ಕಳೆದು ಕೊಂಡೆವು ಎಂಬುದೂ ವಿಮರ್ಶೆಗೆ ಒಳಗಾಗಿದೆ. ವಸಾಹತುಶಾಹಿ ಆಕ್ರಮಣದ ಪರಿಣಾಮವಾಗಿ ಭಾರತದ ಆರ್ಥಿಕ ಬೆನ್ನೆಲುಬು ಹೇಗೆ ಜರ್ಝರಿತಗೊಂಡಿತೆಂದು ತಿಳಿಯದೆ ಇಲ್ಲಿಯ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸುವುದು ಅಸಮರ್ಪಕವಾದ ವಿಧಾನ. ಹುಟ್ಟಿಕೊಂಡ ಚಳುವಳಿಗಳ ವಿಶ್ಲೇಷಣೆಯನ್ನು ಪದರ ಪದರವಾಗಿ ಲೇಖಕರು ಬಿಡಿಸಿದ್ದಾರೆ. ನಮ್ಮ ದೇಶದ ಮಹಾರೋಗವಾದ ಜಾತೀಯತೆ, ಎಂತೆಂತಹ ಸಮಸ್ಯೆಗಳನ್ನು ಹುಟ್ಟು ಹಾಕಿದವು. ಸ್ವಾತಂತ್ರ್ಯ ಪಡೆಯಬೇಕೆಂಬ ಉತ್ಕಟ ಆಸೆ, ಛಲಗಳು ಮಾತ್ರ ಚೂರು ಚೂರು ಭಾರತದಲ್ಲೂ ಪ್ರಜ್ವಲಿಸಿದುವು. ತೊರೆಗಳು ಸೇರಿ ಮಹಾನದಿಯಾಯಿತು. ಈ ತರಹ ವಿಮರ್ಶೆ ಮತ್ತು ವ್ಯಾಖ್ಯಾನಗಳಿಂದ ಈ ಪುಸ್ತಕ ಬರೀ ಚರಿತ್ರೆಯಾಗದೆ, ಅದರ ಹಿಂದಿರುವ ಅಂಶಗಳನ್ನೂ ಅಳವಡಿಸಿಕೊಂಡಿರುವುದು ಸ್ವಾಗತಾರ್ಹ. ಎಲ್ಲೂ ಪೂರ್ವಗ್ರಹವಿಲ್ಲ, ಉದ್ವೇಗದ ಸೋಂಕಿಲ್ಲ. ಹಾಗಿದ್ದರೂ ತಣ್ಣಗೆ ತಟಸ್ಥವೆನಿಸದೆ ಬೆಚ್ಚಗೆ ಬಿಂಬಿಸುತ್ತದೆ. ಈ ಪುಸ್ತಕ ಇಂಥ ಬರವಣಿಗೆಗೆ ಒಂದು ಒಳ್ಳೆಯ ಮಾದರಿ. ಓದುತ್ತ ಹೋದಂತೆ ಲೇಖಕರ ಸಮಗ್ರ ಭಾರತೀಯ ದೃಷ್ಟಿ ಮೆಚ್ಚಿಗೆಯಾಗುತ್ತದೆ. ಈ ಕೃತಿ ಕಳೆದ ಐನೂರು ವರ್ಷಗಳ ಭಾರತದ ಇತಿಹಾಸದ ಅಧ್ಯಯನದ ಆಕರ ಗ್ರಂಥವಾಗಿ ಉಳಿಯುತ್ತದೆ.

ಬಾಹ್ಯ ಸಂಪರ್ಕ

ಬದಲಾಯಿಸಿ