ಸ್ವರಾಜ್ ಶೆಟ್ಟಿ ಭಾರತೀಯ ನಟ, ರಂಗಭೂಮಿ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಳು ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ನಾಟಕದಲ್ಲಿಯೂ ಅಭಿನಯಿಸುತ್ತಾರೆ. ತಮ್ಮ ವೃತ್ತಿ ಜೀವನವನ್ನು ಕಂಠದಾನ ಕಲಾವಿದರಾಗಿ ಹಾಗೂ ರಂಗಭೂಮಿ ಕಲಾವಿದರಾಗಿ ಪ್ರಾರಂಭಿಸಿದರು.

ಸ್ವರಾಜ್ ಶೆಟ್ಟಿ
Born
ಅಶ್ವಿನ್ ಶೆಟ್ಟಿ

ಅಕ್ಟೋಬರ್ ೩೦,೧೯೯೦
Alma materಅಧಿಯಮಾನ್ ಎಂಜಿನಿಯರಿಂಗ್ ಕಾಲೇಜು ಹೊಸುರು
Occupations
  • ನಟ
  • ರಂಗಭೂಮಿ ಕಲಾವಿದ
  • ಕಿರುತೆರೆ ನಟ
Known forಕಾಂತಾರದಲ್ಲಿ ಗುರುವ ಮತ್ತು ಶಿವಧೂತ ಗುಳಿಗ ನಾಟಕದಲ್ಲಿ ಗುಳಿಗ
Spouseಆಶನಿ ಶೆಟ್ಟಿ

ವೆಯಕ್ತಿಕ ಜೀವನ

ಬದಲಾಯಿಸಿ

ಸ್ವರಾಜ್ ಶೆಟ್ಟಿಯವರು ದಕ್ಷಿಣ ಕನ್ನಡ ಜಲ್ಲೆಯ ಮಂಗಳೂರಿನಲ್ಲಿ ಅಕ್ಟೋಬರ್ ೩೦, ೧೯೯೦ ರಲ್ಲಿ ಅಶ್ವಿನ್ ಶೆಟ್ಟಿಯಾಗಿ ತಂದೆ ಅಶೋಕ.ಬಿ.ಶೆಟ್ಟಿ ತಾಯಿ ಪ್ರಮಿಳಾ.ಶೆಟ್ಟಿ ಮಗನಾಗಿ ಜನಿಸಿದರು. ೨೦೧೮,ಡಿಸೆಂಬರ್ ೩೧ ರಂದು ಆಶನಿ ಶೆಟ್ಟಿ ಅವರನ್ನು ಮದುವೆಯಾದರು.

ವಿದ್ಯಾಭ್ಯಾಸ

ಬದಲಾಯಿಸಿ

ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾರಾಯಣ ಗುರು ಶಾಲೆ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು. ಆರ್.ವಿ.ಜಿ ಜನರಲ್ ಮಿಷಿನಿಸ್ಟ್ ಗ್ರೂಪ್ ಹೊಸುರು ತಮಿಳುನಾಡಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದರು. ೨೦೧೨ರಲ್ಲಿ ಪದವಿ ಶಿಕ್ಷಣ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಅಧಿಯಮಾನ್ ಎಂಜಿನಿಯರಿಂಗ್ ಕಾಲೇಜು ಹೊಸುರು( ತಮಿಳುನಾಡು) ಮುಗಿಸಿದರು. ತಮ್ಮ ನಟನೆಯ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದ, ಇವರು ತಮ್ಮ ಕಾಲೇಜು ದಿನಗಳಲ್ಲಿ ಹಲವಾರು ನಾಟಕಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ೨೦೦೯ ರಲ್ಲಿ ಹೈದರಾಬಾದ್ ನಲ್ಲಿ ಮಿಸ್ಟರ್.ವಿಜ್ಞಾನ ಎಂಬ ಬಿರುದನ್ನು ಪಡೆದಿದ್ದಾರೆ. ಮುಂದೆ ಮನರಂಜನಾ ಮಾಧ್ಯಮದಲ್ಲಿ ತಮ್ಮ ಜೀವನವನ್ನು ಮುಂದುವರಿಸಲು ಮಂಗಳೂರಿಗೆ ಮರಳಿದರು.

ವೃತ್ತಿ ಜೀವನ

ಬದಲಾಯಿಸಿ

ಸ್ವರಾಜ್ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು ೨೦೧೨ರಲ್ಲಿ ಮಾಮಿ ಎಂಬ ನಾಟಕದಲ್ಲಿ ಅಭಿನಯಿಸಿದರು. ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದಲ್ಲಿ ನಟಿಸಿದರು. ಸ್ವರಾಜ ಶೆಟ್ಟಿ ೮೫೦ ಕ್ಕಿಂತ ಹೆಚ್ಚಿನ ರಂಗ ಪದರ್ಶನವನ್ನು ನೀಡಿದ್ದಾರೆ. ಅವರು ರಾಜ್ ಬಿ. ಶೆಟ್ಟಿ ನಿರ್ದೇಶನದ ೫ ಲೆಟರ್ಸ್ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಡೈಜಿ ವರ್ಲ್ಡ ವತಿಯಿಂದ ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಟಾರ್ ಸುವರ್ಣ ವತಿಯಿಂದ ರಗಡ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ. ವಿವಿಧ ಸಂಸ್ಥೆಗಳಿಂದ ರಂಗದರಸೆ ಮತ್ತು ಕಲಾರತ್ನ ಎಂಬ ಬಿರುದನ್ನು ಗಳಿಸಿದ್ದಾರೆ.

ಫಿಲ್ಮೋಗ್ರಾಫಿ

ಬದಲಾಯಿಸಿ
ವರ್ಷ ಚಲನಚಿತ್ರಗಳು ಪಾತ್ರ ಭಾಷೆ
೨೦೧೪ ಬರ್ಕೆ ಮುಖ್ಯಪಾತ್ರ ತುಳು ಚೊಚ್ಚಲ ತುಳು ಸಿನಿಮಾ
೨೦೧೬ ೫ ಲೆಟರ್ಸ್ ಮುಖ್ಯಪಾತ್ರ ಕನ್ನಡ ಕಿರುಚಿತ್ರ
೨೦೧೭ ಒಂದು ಮೊಟ್ಟೆಯ ಕಥೆ ಅತಿಥಿ ಪಾತ್ರ ಕನ್ನಡ ಚೊಚ್ಚಲ ಕನ್ನಡ ಸಿನಿಮಾ
೨೦೧೮ ಹುಚ್ಚ೨ ಖಳನಾಯಕ ಕನ್ನಡ
೨೦೨೧ ಟೂ & ಮಿ ಮುಖ್ಯಪಾತ್ರ ತುಳು ನಟ,ನಿರ್ದೇಶಕ,ಬರಹಗಾರ
೨೦೨೨ ಪೋಲಿಸ್ ಫೈಲ್ಸ್ ಖಳನಾಯಕ ಕನ್ನಡ
ಕಾಂತಾರ ಗುರುವ ಪಂಜುರ್ಲಿ ಕನ್ನಡ ಅಂತಾರಾಷ್ಟ್ರೀಯ ಬಿಡುಗಡೆ
೨೦೨೩ ಪಿಲಿ ಖಳನಾಯಕ ತುಳು
ಬೇರ ಪೋಷಕ ಪಾತ್ರ ಕನ್ನಡ
ಬಿರ್ದದ್ ಕಂಬುಲ ಮುಖ್ಯಪಾತ್ರ ಕನ್ನಡ, ತುಳು
ಪುಳಿ ಮುಂಚಿ ಖಳನಾಯಕ ತುಳು

ಧಾರಾವಾಹಿ

ಬದಲಾಯಿಸಿ
ವರ್ಷ ಹೆಸರು ಪಾತ್ರ ಭಾಷೆ
೨೦೧೮ ಕೃಷ್ಣ ತುಳಸಿ ಮುಖ್ಯಪಾತ್ರ ಕನ್ನಡ ಸ್ಟಾರ್ ಸುವರ್ಣ
೨೦೧೯ ರಾಧಾ ಕಲ್ಯಾಣ ಖಳನಾಯಕ ಕನ್ನಡ ಝೀ ಕನ್ನಡ
೨೦೨೧ ಅಣ್ಣ ತಂಗಿ ಖಳನಾಯಕ ಕನ್ನಡ ಉದಯ ಟಿ.ವಿ
೨೦೨೩ ತ್ರಿಪುರ ಸುಂದರಿ ಅತಿಥಿ ಪಾತ್ರ ಕನ್ನಡ ಕಲರ್ಸ್ ಕನ್ನಡ
ಶಿವಧೂತ ಗುಳಿಗ
ಮಾಮಿ
ಒರಿಯಾರ್ದೊರಿ ಅಸಲ್
ಸೀತಾ ಟೀಚರ್
ಅಪ್ಪೆ ಮುಕಾಂಬಿಕಾ
ಮಣಿಕಂಠ ಮಹಿಮೆ
ಅಣ್ಣೆ ಬರ್ಪೆಗೆ

ಡಬ್ಬಿಂಗ್ ಕಲಾವಿದ

ಬದಲಾಯಿಸಿ

ಸ್ವರಾಜ್ ಶೆಟ್ಟಿ ಅವರು ತುಳು ಭಾಷೆಯಲ್ಲಿ ಬೀರಬಲ್, ಬದ್ಮಾಷ್, ಹವಳ, ಅಭಿಸಾರಿಕೆ, ಪಂಚತಂತ್ರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅಯೋಗ್ಯ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದಾರೆ

ಉಲ್ಲೇಖಗಳು

ಬದಲಾಯಿಸಿ


[][][][]

  1. "Swaraj Shetty Wiki, Age, Wife, Family, Biography & More - WikiBio". Retrieved 21 ಮೇ 2023.
  2. "Tuesday Trivia: Did you know Kantara's Guruva aka Swaraj Shetty made his Kannada TV debut with the daily soap 'Krishna Tulasi'?". The Times of India. 24 ಜನವರಿ 2023. Retrieved 21 ಮೇ 2023.
  3. "Swaraj Shetty Age, Wife, Family, Biography & More » StarsUnfolded". starsunfolded.com. Retrieved 21 ಮೇ 2023.
  4. "Actor Prajwal Ravi replaces Swaraj Shetty in 'Anna Thangi'". The Times of India. 29 ಡಿಸೆಂಬರ್ 2021. Retrieved 21 ಮೇ 2023.