ಸ್ಪ್ರೆಡ್‌ಷೀಟ್ ‌ ಎಂಬುದು ಅಗಲವಾದ ಕಾಗದದ ಹಾಳೆ, ವಿಶಿಷ್ಟವಾಗಿ ಲೆಕ್ಕಪತ್ರ ಹಾಳೆವನ್ನು ಅನುಕರಿಸುವ ಕಂಪ್ಯೂಟರ್‌ ಅನ್ವಯಿಕೆಯಾಗಿದೆ. ಹಲವು ಅಡ್ಡಸಾಲು (row) ಹಾಗೂ ನೀಟಸಾಲುಗಳನ್ನು (column) ಹೊಂದಿರುವ ಗೆರೆಜಾಲದಲ್ಲಿ ಹಲವು ಕೋಶಗಳನ್ನು (cell) ಈ ಸ್ಪ್ರೆಡ್‌ಷೀಟ್‌ ತೋರಿಸುತ್ತದೆ. ಪ್ರತಿಯೊಂದು ಕೋಶವೂ ಅಕ್ಷರ ಮತ್ತು ಸಂಖ್ಯೆ ಮಿಶ್ರಿತ ಪಠ್ಯ, ಸಂಖ್ಯಾ ಮೌಲ್ಯ ಅಥವಾ ಗಣಿತ ಸೂತ್ರಗಳನ್ನೂ ಹೊಂದಿರುತ್ತದೆ. ಕೋಶವೊಂದರಲ್ಲಿ ಮಾಹಿತಿಯು ಪರಿಷ್ಕರಿಸಲಾದಾಗ, ಆ ಕೋಶದಲ್ಲಿರುವ ಮಾಹಿತಿಯನ್ನು ಇತರೆ ಯಾವುದೇ ಒಂದು ಕೋಶ (ಅಥವಾ ಹಲವು ಕೋಶಗಳ ಸಂಯುಕ್ತ)ದ ಮಾಹಿತಿಯಿಂದ ಲೆಕ್ಕಿಸುವುದು ಹೇಗೆ ಎಂಬುದನ್ನು ಈ ಸೂತ್ರವು ನಿರ್ಣಯಿಸುತ್ತದೆ. ಒಂದೇ ಒಂದು ಕೋಶದಲ್ಲಿ ಮಾಹಿತಿಯನ್ನು ಬದಲಾಯಿಸುವುದರ ಮೂಲಕ ಇಡೀ ಹಾಳೆಯನ್ನು ಸ್ವಯಂಚಾಲಿತವಾಗಿ ಪುನಃ ಲೆಕ್ಕಿಸುವ ಕ್ಷಮತೆ ಹೊಂದಿರುವ ಕಾರಣ, ಇಂತಹ ಸ್ಪ್ರೆಡ್‌ಷೀಟ್‌ಗಳನ್ನು ಆಗಾಗ್ಗೆ ಹಣಕಾಸಿನ ಮಾಹಿತಿಯನ್ನು ಸಂಸ್ಕರಿಸಲು ಬಳಸಲಾಗುತ್ತದೆ.

ಸಾಮಾನ್ಯವಾಗಿ ವಿಸಿಕ್ಯಾಲ್ಕ್ (Visicalc)ನ್ನು ಮೊಟ್ಟಮೊದಲ ವಿದ್ಯುನ್ಮಾನ ಸ್ಪ್ರೆಡ್‌ಷೀಟ್‌ ಎನ್ನಲಾಗಿದೆ. ಆದರೆ ಈ ಹೇಳಿಕೆಯನ್ನು ಅಲ್ಲಗಳೆಯುವವರೂ ಇದ್ದಾರೆ. ಇದು ಆಪಲ್ II ಕಂಪ್ಯೂಟರ್‌ನ ಜನಪ್ರಿಯತೆಗೆ ಕಾರಣವಾಗಿ, ಹಲವೆಡೆ ಸ್ಥಾಪನೆಯಾಗಿಸುವುದರ ಮೂಲಕ, ಮಾರುಕಟ್ಟೆ ಯಶಸ್ಸಿಗೆ ಕಾರಣವಾಯಿತು. DOS(ಡಾಸ್) ಪ್ರಮುಖ ಕಾರ್ಯಾಚರಣಾ ವ್ಯವಸ್ಥೆ ಆಗಿದ್ದಾಗ ಲೋಟಸ್ 1-2-3 ಪ್ರಧಾನ ಸ್ಪ್ರೆಡ್‌ಷೀಟ್‌ ಆಗಿತ್ತು.

ಈಗ ಮೈಕ್ರೊಸಾಫ್ಟ್‌ ಎಕ್ಸೆಲ್‌ ವಿಂಡೋಸ್‌ (Windows) ಮತ್ತು ಮ್ಯಾಕಿಂಟೋಷ್ (MacIntosh) ವೇದಿಕೆಗಳ ಮೇಲೆ ಮಾರುಕಟ್ಟೆಯ ಅತಿದೊಡ್ಡ ಪಾಲು ಹೊಂದಿದೆ.[೧][೨][೩]
OpenOffice.org ಕ್ಯಾಲ್ಕ್ ಸ್ಪ್ರೆಡ್‌ಷೀಟ್‌

ಇತಿಹಾಸ ಬದಲಾಯಿಸಿ

ಕಾಗದದ ಹಾಳೆಯ ಸ್ಪ್ರೆಡ್‌ಷೀಟ್‌ಗಳು ಬದಲಾಯಿಸಿ

'ಸ್ಪ್ರೆಡ್‌ಷೀಟ್' ಎಂಬ ಪದದ 'ಸ್ಪ್ರೆಡ್‌' ಎಂಬುದನ್ನು ರೂಪಕವಾಗಿ ವಿವರಿಸಲಾಗಿದೆ.‌ ಯಾವುದೇ ಪತ್ರಿಕೆ/ನಿಯತಕಾಲಿಕೆಯಲ್ಲಿ ಮಧ್ಯಪುಟವನ್ನು ತೆರೆದಾಗ, ಅ ಮುಖಾಮುಖಿ ಪುಟಗಳುದ್ದಕ್ಕೂ ಮಾಹಿತಿ ಮತ್ತು/ಅಥವಾ ಚಿತ್ರಗಳು ಮುದ್ರಿತವಾಗಿರುತ್ತದೆ. ಹಾಗಾಗಿ ಈ ಎರಡೂ ಮುಖಾಮುಖಿ ಪುಟಗಳನ್ನು ಒಂದು ದೊಡ್ಡ ಪುಟ ಎಂದು ಪರಿಗಣಿಸಲಾಗುತ್ತದೆ.

ಖರ್ಚುಗಳನ್ನು ತೋರಿಸುವ ಕಾಲಮ್‌ಗಳನ್ನು ಮೇಲ್ಪಂಕ್ತಿಯಲ್ಲಿ, ಖರ್ಚುಪಟ್ಟಿಗಳನ್ನು ಎಡ ಅಂಚಿನಲ್ಲಿ; ಪ್ರತಿಯೊಂದು ಖರ್ಚಿನ ಮೊತ್ತವನ್ನು ಆಯಾ ಸಂಬಂಧಪಟ್ಟ ಕೋಶದಲ್ಲಿ (ಆ ಪಂಕ್ತಿ ಮತ್ತು ಕಾಲಂ ಅಡ್ಡಹಾಯುವ ಸ್ಥಳ) ನಮೂದಿಸಲಾಗಿದೆ; ಇವೆಲ್ಲವನ್ನೂ ಸಾಂಪ್ರದಾಯಿಕವಾಗಿ ಲೆಡ್ಜರ್‌ ಪುಸ್ತಕದ ಮುಖಾಮುಖಿ ಪುಟಗಳಲ್ಲಿ ಅಥವಾ ದೊಡ್ಡ ಗಾತ್ರದ ಕಾಗದದ ಹಾಳೆಗಳಲ್ಲಿ ಪಂಕ್ತಿಗಳು ಮತ್ತು ಕಾಲಮ್‌ಗಳಲ್ಲಿ ನಮೂದಿಸಲಾಗಿದೆ. ಈ ಕಾದದ ಹಾಳೆಗಳು ಸಾದಾರಣ ಹಾಳೆಗಳ ಎರಡರಷ್ಟಿರಬಹುದು.

ಆರಂಭಿಕ ಅಳವಡಿಕೆಗಳು (ಬಳಕೆಗಳು) ಬದಲಾಯಿಸಿ

ಬ್ಯಾಚ್ ಸ್ಪ್ರೆಡ್‌ಷೀಟ್‌ ರಿಪೋರ್ಟ್ ಜನರೇಟರ್ಸ್ ಬದಲಾಯಿಸಿ

ಬ್ಯಾಚ್‌ ಸ್ಪ್ರೆಡ್‌ಷೀಟ್‌ ಎಂಬುದು ಬ್ಯಾಚ್‌ ಸಂಯೋಜಕ (ಬ್ಯಾಚ್ ಕಂಪೈಲರ್) ಗಿಂತಲೂ ಭಿನ್ನವಾಗಿಲ್ಲ. ಬ್ಯಾಚ್‌ ಸಂಯೋಜಕದಂತೆ ಬ್ಯಾಚ್‌ ಸ್ಪ್ರೆಡ್‌ಷೀಟ್‌ ಸಹ ದತ್ತಾಂಶ ಸಂಗ್ರಹವನ್ನು ಒಳಸೇರಿಸಿ, ಸಂಸ್ಕರಿಸಲಾದ ಮಾಹಿತಿಯನ್ನು ಉತ್ಪಾದಿಸುತ್ತದೆ (ಉದಾಹರಣೆಗೆ, 4GL ಅಥವಾ ಸಾಂಪ್ರದಾಯಿಕ, ಪರಸ್ಪರ-ಕಾರ್ಯ ನಿರ್ವಹಿಸದ, ಬ್ಯಾಚ್‌ ಕಂಪ್ಯೂಟರ್‌ ಪ್ರೋಗ್ರಾಮ್‌). ಅದೇನೇ ಆದರೂ, ಈ ವಿದ್ಯುನ್ಮಾನ ಸ್ಪ್ರೆಡ್‌ಷೀಟ್‌ನ ಪರಿಕಲ್ಪನೆಯ ರೂಪುರೇಖೆಗಳನ್ನು ರಿಚರ್ಡ್ ಮ್ಯಾಟೆಸಿಕ್‌ 1961ರಲ್ಲಿ ಮಂಡಿಸಿದ 'ಬಜೆಟಿಂಗ್ ಮಾಡೆಲ್ಸ್ ಅಂಡ್ ಸಿಸ್ಟಮ್ ಸಿಮ್ಯೂಲೇಷನ್' ಎಂಬ ಪತ್ರಿಕೆಯಲ್ಲಿ ತಿಳಿಸಲಾಗಿತ್ತು.[೪]

ಮ್ಯಾಟಸಿಕ್‌ ಆನಂತರ ರಚಿಸಿದ ಕೃತಿಗಳಾದ ಮ್ಯಾಟೆಸಿಕ್‌ (1964a, , Chpt. 9, ಅಕೌಂಟಿಂಗ್‌ ಅಂಡ್‌ ಅನಲಿಟಿಕಲ್‌ ಮೆಥಡ್ಸ್‌ ) ಹಾಗೂ ಇದರೊಂದಿಗಿನ ಸಂಪುಟ ಮ್ಯಾಟೆಸಿಕ್‌ (1964b, ಸಿಮ್ಯುಲೇಷನ್‌ ಆಫ್‌ ದಿ ಫರ್ಮ್‌ ಥ್ರೂ ಎ ಬಜೆಟ್‌ ಕಂಪ್ಯೂಟರ್‌ ಪ್ರೋಗ್ರಾಮ್ ‌) , ಫೊರ್ಟ್ರಾನ್‌ ಫೋರ್‌ (FORTRAN IV)  ಅಳವಡಿಸಲಾದ ಮೇಯ್ನ್‌ಫ್ರೇಮ್‌ ಕಂಪ್ಯೂಟರ್‌ಗಳಲ್ಲಿ ಗಣಕೀಕೃತ ಸ್ಪ್ರೆಡ್‌ಷೀಟ್‌ಗಳನ್ನು ಅಳವಡಿಸುವಲ್ಲಿ ನೆರವಾದವು.  ಒಂದೊಂದು ಕೋಶದಲ್ಲಿನ ಮಾಹಿತಿಯನ್ನು ಮಾತ್ರ ಲೆಕ್ಕಿಸುವುದಕ್ಕಿಂತಲೂ ಹೆಚ್ಚಾಗಿ, 

ಈ ಬ್ಯಾಚ್ ಸ್ಪ್ರೆಡ್‌ಷೀಟ್‌ಗಳು ಇಡೀ ನೀಟಸಾಲು ಅಥವಾ ಅಡ್ಡಸಾಲಿನಲ್ಲಿರುವ ಒಳಸೇರಿಸಲಾದ (ಸಾಂಖ್ಯಿಕ) ಮಾಹಿತಿಯನ್ನು ಲೆಕ್ಕಿಸುತ್ತಿದ್ದವು (ಕೂಡುವುದು ಕಳೆಯುವುದು ಮಾಡುತ್ತಿದ್ದವು).

ಅಂದು ಬಿಸಿನೆಸ್‌ ಕಂಪ್ಯೂಟರ್‌ ಲ್ಯಾಂಗ್ವೇಜ್‌ (BCL) ಎನ್ನಲಾದ ಸ್ಪ್ರೆಡ್‌ಷೀಟ್‌ನ ಈ ಪರಿಕಲ್ಪನೆಯನ್ನು 1962ರಲ್ಲಿ IBM 1130 ಕಂಪ್ಯೂಟರ್‌ನಲ್ಲಿ, ಹಾಗೂ 1963ರಲ್ಲಿ IBM 7040 ಕಂಪ್ಯೂಟರ್‌ನಲ್ಲಿ ಅಳವಡಿಸಲಾಯಿತು. ವಿಸ್ಕಾನ್ಸಿನ್‌ನ ಮಾರ್ಕ್ವೆಟ್‌ ವಿಶ್ವವಿದ್ಯಾನಿಲಯದ ಆರ್‌. ಬ್ರಯಾನ್‌ ವಾಲ್ಷ್‌ ಈ ಕಾರ್ಯವನ್ನು ನಡೆಸಿದರು. ಈ ಪ್ರೋಗ್ರಾಮ್‌ನ್ನು ಫೊರ್ಟ್ರಾನ್‌ನಲ್ಲಿ ರಚಿಸಲಾಯಿತು. ಈ ಕಂಪ್ಯೂಟರ್‌ಗಳಲ್ಲಿ ಓಬೀರಾಯನ ಕಾಲದ ಕಾಲಪಾಲುದಾರಿಕೆ ವ್ಯವಸ್ಥೆಗಳಿದ್ದವು.

ಇಸವಿ 1968ರಲ್ಲಿ ವಾಲ್ಷ್‌ ವಾಷಿಂಗ್ಟನ್‌ ಸ್ಟೇಟ್‌ ವಿಶ್ವವಿದ್ಯಾನಿಲಯದಲ್ಲಿ BCLನ್ನು IBM 360/67 ಕಾಲಪಾಲುದಾರಿಕೆಯ ಕಂಪ್ಯೂಟರ್‌ಗೆ ಅಳವಡಿಸಿದರು.  ವಾಣಿಜ್ಯ ವಿದ್ಯಾರ್ಥಿಗಳಿಗೆ ಹಣಕಾಸು ವಿಷಯವನ್ನು ಬೋಧಿಸುವಲ್ಲಿ ನೆರವವಾಗಲು ಇದನ್ನು ಬಳಸಲಾಯಿತು.  ಪ್ರಾಧ್ಯಾಪಕರು ಕಲೆಹಾಕಿದ ಮಾಹಿತಿಯನ್ನು ಬಳಸಿ, ವಿದ್ಯಾರ್ಥಿಗಳು ಅದನ್ನು ಸೂಕ್ತ ರೀತಿಯಲ್ಲಿ ನಿರೂಪಿಸಿ ನಿಷ್ಪತ್ತಿ ತೋರಿಸಿದರು. ಇಸವಿ 1964ರಲ್ಲಿ ಕಿಮ್ ಬಾಲ್ , ಸ್ಟಾಫೆಲ್ಸ್ ಮತ್ತು ವಾಲ್ಷ್ ಎಂಬುವವರು ಒಗ್ಗೂಡಿ ಬಿಸಿನೆಸ್‌ ಕಂಪ್ಯೂಟರ್ ಲ್ಯಾಂಗ್ವೇಜ್  ಎಂಬ ಪುಸ್ತಕ ಬರೆದರು. ಇಸವಿ 1966ರಲ್ಲಿ ಈ ಪುಸ್ತಕ ಮತ್ತು ಪ್ರೊಗ್ರಾಮ್‌ ಎರಡಕ್ಕೂ ಹಕ್ಕುಸ್ವಾಮ್ಯ ಪಡೆದು, ವರ್ಷಗಳ ನಂತರ ಹಕ್ಕುಸ್ವಾಮ್ಯವನ್ನು ನವೀಕರಿಸಲಾಯಿತು.[೫]


1960ರ ಅಪರಾರ್ಧದಲ್ಲಿ ಜೆರಾಕ್ಸ್‌ ಸಂಸ್ಥೆಯು ತನ್ನ ಕಾಲಪಾಲುದಾರಿಕೆಯ ಕಂಪ್ಯೂಟರ್‌ ವ್ಯವಸ್ಥೆಯ ಇನ್ನಷ್ಟು ಆಧುನಿಕ ಆವೃತ್ತಿಯನ್ನು ರಚಿಸಲು BCLನ್ನು ಬಳಸಿತು.

LANPAR ಸ್ಪ್ರೆಡ್‌ಷೀಟ್‌ ಕಂಪೈಲರ್ ಬದಲಾಯಿಸಿ

ರೆನೆ ಕೆ. ಪಾರ್ಡೊ ಮತ್ತು ರೆಮಿ ಲ್ಯಾಂಡಾವ್ 1970ರಲ್ಲಿ‌ ವಿದ್ಯುನ್ಮಾನ ಸ್ಪ್ರೆಡ್‌ಷೀಟ್‌ಗಳ ಅಭಿವೃದ್ಧಿಯಲ್ಲಿ ಸ್ಪ್ರೆಡ್ ಷೀಟ್‌ ಅಟೋಮ್ಯಾಟಿಕ್ ನ್ಯಾಚ್ಯುರಲ್ ಆರ್ಡರ್ ರಿಕ್ಯಾಲ್ ಕ್ಯುಲೇಷನ್ ಅಲ್ಗರಿದಮ್ ಎಂಬ ಪ್ರಮುಖ ಆವಿಷ್ಕಾರ ಮಾಡಿದರು. ಇವರಿಬ್ಬರು ಈ ಆವಿಷ್ಕಾರಕ್ಕೆ 1971ರಲ್ಲಿ ಹಕ್ಕುಸ್ವಾಮ್ಯ ಅರ್ಜಿ ಸಲ್ಲಿಸಿದರು. ಆರಂಭದಲ್ಲಿ, ಇದು ಇದು ಸಂಪೂರ್ಣವಾಗಿ ಗಣಿತಶಾಸ್ತ್ರೀಯ ಆವಿಷ್ಕಾರ ಎಂದು ಹಕ್ಕುಸ್ವಾಮ್ಯ ಅರ್ಜಿಯನ್ನು ತಿರಸ್ಕರಿಸಲಾಯಿತು. ಪಾರ್ಡೊ ಮತ್ತು ಲ್ಯಾಂಡಾವ್‌ ಸತತ 12 ವರ್ಷಗಳ ಕಾಲ ಮೇಲರ್ಜಿ ಹಾಕಿ, ಅಂತಿಮವಾಗಿ 1983ರಲ್ಲಿ CCPA (ಪ್ರಿಡಿಸೆಸರ್ ಕೋರ್ಟ್ ಆಫ್ ದಿ ಫೆಡರಲ್ ಸರ್ಕ್ಯೂಟ್) ಮಹತ್ತರವಾದ ತೀರ್ಪನ್ನು ತಮ್ಮ ಪರವಾಗಿಸಿಕೊಂಡರು. 'ನವೀನತೆಯೆಂಬುದು ಗಣನೆಯ ಪದ್ಧತಿಯಲ್ಲಿರುವ ಕಾರಣಕ್ಕೆ, ಇದು ಹಕ್ಕುಸ್ವಾಮ್ಯಕ್ಕೆ ಅರ್ಹವಲ್ಲ ಎಂಬ ವಾದವು ನಿಲ್ಲುವುದಿಲ್ಲ' ಎಂದ ತೀರ್ಪು, ಹಕ್ಕುಸ್ವಾಮ್ಯ ಕಾರ್ಯಾಲಯದ ತೀರ್ಪನ್ನು ಅನೂರ್ಜಿತಗೊಳಿಸಿತು. ಆದರೂ, 1995ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂಯುಕ್ತತಾ ವಲಯದ ಮೇಲರ್ಜಿ ನ್ಯಾಯಾಲಯವು, 'ಹಕ್ಕುಸ್ವಾಮ್ಯವನ್ನು ಜಾರಿಗೊಳಿಸಲಾಗದು' ಎಂಬ ತೀರ್ಪು ನೀಡಿತು.[೬].

ವಾಸ್ತವಿಕ ತಂತ್ರಾಂಶವನ್ನು LANPAR ಎಂದು ಕರೆಯಲಾಗುತ್ತದೆ-ಲ್ಯಾಂಗ್ವೇಜ್ ಫಾರ್ ಪ್ರೋಗ್ರಾಮಿಂಗ್ ಅರೇಸ್ ಅಟ್ ರಾಂಡಮ್

ಪಾರ್ಡೊ ಮತ್ತು ಲ್ಯಾಂಡೌ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, 1969ರ ಬೇಸಿಗೆಯುದ್ದಕ್ಕೂ LANPARನ್ನು ಪರಿಕಲ್ಪಿಸಿ ಅಭಿವೃದ್ಧಿಗೊಳಿಸಲಾಯಿತು.  ಸಹ-ಆವಿಷ್ಕಾರಕ ರೆನೆ ಪಾರ್ಡೊ ವಿವರಿಸಿದಂತೆ, ಬೆಲ್‌ ಕೆನಡಾ ಸಂಸ್ಥೆಯ ಕಾರ್ಯನಿರ್ವಾಹಕ (ಮ್ಯಾನೇಜರ್) ಒಬ್ಬರು, 'ಬಜೆಟಿಂಗ್‌ ಪತ್ರಗಳನ್ನು ಪ್ರೊಗ್ರಾಮ್‌ ಮಾಡಿ ಪರಿವರ್ತಿಸಲು ಪ್ರೊಗ್ರಾಮರ್‌ಗಳನ್ನು ಅವಲಂಬಿಸುವುದು ಬೇಡ. ಬಳಕೆದಾರರು ಈ ಪತ್ರಗಳನ್ನು ಯಾವ ಕ್ರಮದಲ್ಲಾದರೂ ಟೈಪ್‌ ಮಾಡಿ, ಕಂಪ್ಯೂಟರ್‌ ಸರಿಯಾದ ಕ್ರಮದಲ್ಲಿ ಇದರ ಫಲಿತಾಂಶಗಳನ್ನು ಗಣಿಸಬೇಕು' ಎಂದರು.  ಈ ತಂತ್ರಾಂಶವನ್ನು 1969 ರಲ್ಲಿ ಅಭಿವೃದ್ಧಿಗೊಳಿಸಲಾಯಿತು.[೭]

ಬೆಲ್ ಕೆನಡಾ, AT&T ಮತ್ತು ದೇಶದುದ್ದಗಲಕ್ಕೂ ಚಾಲ್ತಿಯಲ್ಲಿದ್ದ 18 ಇತರೆ ದೂರಸಂವಹನ ಉದ್ದಿಮೆಗಳು ಅವುಗಳ ಸ್ಥಳೀಯ ಮತ್ತು ರಾಷ್ಟ್ರೀಯ ಬಜೆಟ್ ಕಾರ್ಯಗಳಿಗೆ LANPAR ತಂತ್ರಾಂಶವನ್ನು ಬಳಸಿದವು. ಮೋಟಾರ್‌ ವಾಹನ ತಯಾರಕ ಜನರಲ್ ಮೋಟರ್ಸ್ ಕೂಡ LANPARನ್ನು ಬಳಸಿತು. ವಿಸಿಕ್ಯಾಲ್ಕ್, ಸೂಪರ್ಕ್ಯಾಲ್ಕ್ ಮತ್ತು ಮಲ್ಟಿಪ್ಲ್ಯಾನ್ ತಂತ್ರಾಂಶಗಳ ಮೊದಲ ಆವೃತ್ತಿಗಳು ಬಳಸಿದ ಪ್ರತಿ ಕೋಶದ ಫಲಿತಾಂಶವನ್ನು ಎಡದಿಂದ ಬಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಮಾಡುವ ಗಣನೆಗೆ ತದ್ದವಿರುದ್ಧವಾಗಿ, ಸಹಜ ಕ್ರಮದಲ್ಲಿ ಮಾಡಲಾಗುವ ಮರುಗಣನೆಯು [೮] LANPARನ ವಿಶೇಷಗುಣವಾಗಿದೆ. ಸಹಜ ಕ್ರಮದ ಮರುಗಣನೆ ಇಲ್ಲದಿದ್ದಲ್ಲಿ, ಬಳಕೆದಾರರು ಎಲ್ಲ ಕೋಶಗಳಲ್ಲೂ ಫಲಿತಾಂಶ ಸಮನಾಗುವವರೆಗು ಎಷ್ಟು ಸಲ ಬೇಕೋ ಅಷ್ಟು ಸಲ ತಮ್ಮ ಕೈಯಿಂದಲೇ ಸ್ಪ್ರೆಡ್‌ಷೀಟ್‌ನಲ್ಲಿ ಮರುಗಣನೆ ಮಾಡಬೇಕಾಗಿತ್ತು.

LANPAR ವ್ಯವಸ್ಥೆಯನ್ನು GE400 ಹಾಗೂ ಹನೀವೆಲ್‌ 6000 ಆನ್‌ಲೈನ್‌ ಕಾಲಪಾಲುದಾರಿಕೆಯ ಕಂಪ್ಯೂಟರ್‌ ವ್ಯವಸ್ಥೆಯಲ್ಲಿ ಅಳವಡಿಸಲಾಯಿತು. ಇದರಿಂದಾಗಿ ದೂರದ ಕಂಪ್ಯೂಟರ್‌ ವ್ಯವಸ್ಥೆಗಳು ಹಾಗೂ ಮೊಡೆಮ್‌ಗಳ ಮೂಲಕ ಪ್ರೊಗ್ರಾಮ್‌ ಮಾಡಬಹುದಾಗಿದೆ.‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಪೇಪರ್ ಟೇಪ್, ನಿರ್ದಿಷ್ಟ ಕಡತದ ಪ್ರವೇಶಾನುಮತಿ, ಆನ್‌ಲೈನ್‌ ಅಥವಾ ಬಾಹ್ಯ ದತ್ತಾಂಶ ಸಂಗ್ರಹದ ಮೂಲಕವೂ ದತ್ತಾಂಶವನ್ನು ಸಕ್ರಿಯವಾಗಿ ಸೇರಿಸಬಹುದು. ತಾರ್ಕಿಕ ಹೋಲಿಕೆಗಳು ಮತ್ತು 'if/then' ತಾರ್ಕಿಕ ಸಾಲುಗಳು ಸೇರಿದಂತೆ ಹಲವು ಉನ್ನತ ಮಟ್ಟದ ಗಣಿತೀಯ ಉಕ್ತಿಗಳನ್ನು ಯಾವುದೇ ಕೋಶದಲ್ಲಿ ಬಳಸಬಹುದು; ಇಂತಹ ಕೋಶಗಳಲ್ಲಿನ ಮಾಹಿತಿಯನ್ನು ಯಾವುದೇ ಕ್ರಮಾಂಕದಲ್ಲಿ ಜೋಡಿಸಬಹುದು.

ಆಟೋಪ್ಲ್ಯಾನ್/ಆಟೋಟ್ಯಾಬ್ ಸ್ಪ್ರೆಡ್‌ಷೀಟ್‌ ಪ್ರೊಗ್ರಾಮಿಂಗ್‌ ಭಾಷೆ ಬದಲಾಯಿಸಿ

ಇಸವಿ 1968ರಲ್ಲಿ, ಅರಿಜೋನಾದ ಫೀನಿಕ್ಸ್‌ನಲ್ಲಿ ಜನರಲ್ ವಿದ್ಯುನ್ಮಾನ ಕಂಪ್ಯೂಟರ್ ಕಂಪನಿಯ ಪ್ರಧಾನಕಾರ್ಯಾಲಯದ ಮೂವರು ಮಾಜಿ ಉದ್ಯೋಗಿಗಳು ತಮ್ಮದೇ ಸ್ವಂತ ತಂತ್ರಾಂಶ ಅಭಿವೃದ್ಧಿ ಉದ್ದಿಮೆ ಸ್ಥಾಪಿಸಹೊರಟರು. ಎ. ಲೆರಾಯ್ ಎಲ್ಲಿಸನ್, ಹ್ಯಾರಿ ಎನ್‌. ಕ್ಯಾನ್ಟ್ರೆಲ್ ಮತ್ತು ರಕೋಶ ಇ. ಎಡ್ವರ್ಡ್ಸ್, ತಾವು ಹೊಸ ಉದ್ದಿಮೆ ಬಂಡವಾಳದಾರರ ವಾಣಿಜ್ಯ ಯೋಜನೆಗಳಿಗಾಗಿ ಕೆಲವು ಅಂಕಿ-ಅಂಶ ಮಾಹಿತಿ ಪಟ್ಟಿಗಳನ್ನು ರಚಿಸುತ್ತಿದ್ದಾಗ, ಬಹಳಷ್ಟು ವ್ಯಾಪಕ ಗಣನೆ ಮಾಡಬೇಕಾಯಿತು. ಇಷ್ಟೆಲ್ಲ ಶ್ರಮವನ್ನು ಉಳಿಸಿಕೊಳ್ಳಬೇಕೆಂದು ನಿರ್ಣಯಿಸಿದ ಈ ಮೂವರೂ ತಮಗಾಗಿ ಅಂಕಿ-ಅಂಶ ಪಟ್ಟಿಗಳನ್ನು ಉತ್ಪಾದಿಸುವಂತಹ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಿದರು. ಮೊದಲಿಗೆ, ಅವರ ವೈಯಕ್ತಿಕ ಬಳಕೆಗೆ ಎಂದು ರೂಪಿಸಲಾಗಿದ್ದ ಈ ಪ್ರೊಗ್ರಾಮ್‌, ಕ್ಯಾಪೆಕ್ಸ್ ಕಾರ್ಪೋರೇಷನ್ ಎಂದು ಹೆಸರಿಸಲಾದ ಉದ್ದಿಮೆಯಿಂದ ಹೊರಬಂದ ತಂತ್ರಾಂಶವಾಯಿತು. 'ಆಟೋಪ್ಲ್ಯಾನ್' GEಯ ಕಾಲ-ಪಾಲುದಾರಿಕೆ ಸೇವೆಯಲ್ಲಿ ಚಾಲಿತವಾಗಿತ್ತು; ನಂತರ, IBM ಮೇಯ್ನ್‌ಫ್ರೇಮ್ಸ್ನಲ್ಲಿ ಬಳಸಲಾದ ಆವೃತ್ತಿಯನ್ನು "ಆಟೋಟ್ಯಾಬ್" ಎಂಬ ಹೆಸರಿನಲ್ಲಿ ಪರಿಚಯಿಸಲಾಯಿತು. ಇದೇ ರೀತಿ (ನ್ಯಾಷನಲ್ CSS, CSSTAB ಎಂಬ ಉತ್ಪನ್ನವನ್ನು ಹೊರತಂದಿತು. 1970ರ ದಶಕದ ಪೂರ್ವಾರ್ಧದಲ್ಲಿ ಮಧ್ಯಮಮಟ್ಟದ ಕಾಲಪಾಲುದಾರಿಕೆ ಬಳಕೆ ಹೊಂದಿತ್ತು. ಸಂಶೋಧನ ಅಭಿಪ್ರಾಯ ಸಂಶೋಧನಾ ಮಾಹಿತಿಯನ್ನು ಪಟ್ಟಿ ಮಾಡುವುದು ಇದರ ಪ್ರಧಾನ ಆನ್ವಯಿಕೆಯಾಗಿತ್ತು.) ಆಟೋಪ್ಲ್ಯಾನ್/ಆಟೋಟ್ಯಾಬ್ ಎಂಬುಂದು WYSIWYG (ಅರ್ಥಾತ್‌, ನೀವೇನು ನೋಡುವಿರೋ ಬಹುಶಃ ಅದೇ) ಪರಸ್ಪರ-ಕಾರ್ಯದ ಸ್ಪ್ರೆಡ್‌ಷೀಟ್‌ ಪ್ರೊಗ್ರಾಂ ಆಗಿರಲಿಲ್ಲ; ಬದಲಿಗೆ ಇದು ಸ್ಪ್ರೆಡ್‌ಷೀಟ್‌ಗಳಿಗಾಗಿ ಸರಳ ಆದೇಶಸಾಲುಗಳುಳ್ಳ ಸಂಕೇತಸಮೂಹವಾಗಿತ್ತು. ಬಳಕೆದಾರರು ಅಡ್ಡ ಮತ್ತು ನೀಟಸಾಲುಗಳಿಗೆ ಹೆಸರುಗಳನ್ನು ಸೂಚಿಸಿ, ಪ್ರತಿಯೊಂದು ಅಡ್ಡ ಅಥವಾ ನೀಟಸಾಲಿನಲ್ಲಿ ಸೂತ್ರಗಳನ್ನು ಸೂಚಿಸುವರು.

APLDOT ಮಾಡೆಲಿಂಗ್ ಲ್ಯಾಂಗ್ವೇಜ್ ಬದಲಾಯಿಸಿ

APLDOT ಎಂಬುದು ಆರಂಭದ "ಇಂಡಸ್ಟ್ರೀಯಲ್ ವೇಟ್" ಸ್ಪ್ರೆಡ್‌ಷೀಟ್‌ ಗೆ ಉದಾಹರಣೆಯಾಗಿದೆ. ಇದನ್ನು 1976ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ ರೈಲ್ವೇ ಸಂಘಕ್ಕಾಗಿ, ಮೇರಿಲೆಂಡ್‌ನ ಲಾರೆಲ್ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಆನ್ವಯಿಕ ಭೊತಶಾಸ್ತ್ರದ ಪ್ರಯೋಗಾಲಯದಲ್ಲಿ ಬಳಸುತ್ತಿದ್ದ IBM 360/91 ಕಂಪ್ಯೂಟರ್‌ನಲ್ಲಿ ಅಭಿವೃದ್ಧಿಗೊಳಿಸಲಾಗಿತ್ತು.[೯]

ಹಲವು ವರ್ಷಗಳ ಕಾಲ, US ಕಾಂಗ್ರೆಸ್ ಮತ್ತು ಕಾನ್ರೇಲ್ಗಾಗಿ ಹಣಕಾಸಿನ ಹಾಗು ಬೆಲೆಯ ಅಂದಾಜಿನ ಮಾದರಿಗಳಂತಹ ಅನ್ವಯಿಕೆಯನ್ನು ಅಭಿವೃದ್ಧಿಗೊಳಿಸಲು APLDOTನ್ನು ಸಫಲವಾಗಿ ಬಳಸಲಾಯಿತು.  ಹಣಕಾಸು ವಿಶ್ಲೇಷಕರು ಮತ್ತು ತಂತ್ರ ಯೋಜಕರು ಸಮಸ್ಯೆಗಳನ್ನು ಬಗೆಹರಿಸಲು ಬಳಸಿದ ಕಾಗದದ ಸ್ಪ್ರೆಡ್‌ಷೀಟ್‌ನಂತೆಯೇ, APLDOTನ್ನೂ ಬಳಸುತ್ತಿದ್ದ ಕಾರಣ, ಸ್ಪ್ರೆಡ್‌ಷೀಟ್‌ ಎನ್ನಲಾಯಿತು.‌

ವಿಸಿಕ್ಯಾಲ್ಕ್ ಬದಲಾಯಿಸಿ

ಡ್ಯಾನ್ ಬ್ರಿಕ್ಲಿನ್ ಮತ್ತು ಬಾಬ್ ಫ್ರಾಂಕ್ಸ್ ಟನ್ ವಿಸಿಕ್ಯಾಲ್ಕ್‌ನ್ನು ಅಳವಡಿಸಿದ್ದಕ್ಕಾಗಿ ಸ್ಪ್ರೆಡ್‌ಷೀಟ್‌‌ನ ಪರಿಲಕಲ್ಪನೆ 1970ರ ಉತ್ತರಾರ್ಧ ಹಾಗೂ 1980ರ ಪೂರ್ವಾರ್ಧದಲ್ಲಿ ಪ್ರಸಿದ್ಧವಾಯಿತು. ವಿಸಿಕ್ಯಾಲ್ಕ್ ಆಧುನಿಕ ಸ್ಪ್ರೆಡ್‌ಷೀಟ್‌ ಆನ್ವಯಿಕೆಗಳಲ್ಲಿನ ಎಲ್ಲಾ ಪ್ರಮುಖ ಲಕ್ಷಣಗಳನ್ನು ಹೊಂದಿರುವ ಮೊದಲನೆಯ ಸ್ಪ್ರೆಡ್‌ಷೀಟ್‌ ಆಗಿದೆ. ಉದಾಹರಣೆಗೆ WYSIWYG ಪರಸ್ಪರಕಾರ್ಯ ನಡೆಸುವ ಬಳಕೆದಾರ ಅಂತರಮುಖ, ಸ್ವಯಂಚಾಲಿತ ಮರುಗಣನೆ, ಸ್ಟೇಟಸ್ ಮತ್ತು ಸೂತ್ರ ಲೈನ್ಸ್, ಸಮೀಪದ ಹಾಗೂ ಸರಿಯಾದ ಸೂಚನೆಗಳ ಜೊತೆಯಲ್ಲಿ ಹಲವು ಕೋಶಗಳ ಶ್ರೇಣಿಯನ್ನು ನಕಲು ಮಾಡುವುದು, ಸೂಚಿಸಲ್ಪಟ ಕೋಶವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಸೂತ್ರ ರಚಿಸುವುದು. PC ವರ್ಲ್ಡ್‌ ಮ್ಯಾಗಜೀನ್ ವಿಸಿಕ್ಯಾಲ್ಕ್‌ನ್ನು ಮೊದಲನೆಯ ವಿದ್ಯುನ್ಮಾನ ಸ್ಪ್ರೆಡ್‌ಷೀಟ್‌ ಎನ್ನಲಾಗಿದೆ.[೧೦]

ಬ್ರಿಕ್ಲಿನ್ ಅವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕಪ್ಪು ಹಲಗೆಯಲ್ಲಿ ರಚಿಸಿರುವಂತಹ ಎಣಿಕೆಯ ಫಲಿತಾಂಶದ ಬಗ್ಗೆ ಮಾತನಾಡಿದರು. ಪ್ರಾಧ್ಯಾಪಕರು ದೋಷವೊಂದನ್ನು ಕಂಡಾಗ ಅದನ್ನೆಲ್ಲಾ ಅಳಿಸಿ ಮತ್ತೆ ಕೋಷ್ಟಕದಲ್ಲಿ ಅನುಕ್ರಮವಾಗಿ ಅಂಕೆಗಳನ್ನು ಬರೆಯಬೇಕಾಯಿತು. ಇದರ ಪರಿಣಾಮವಾಗಿ, ಕಪ್ಪು ಹಲಗೆಯನ್ನು ಮಾದರಿಯಾಗಿರಿಸಿಕೊಂಡು, ಪ್ರಾಧ್ಯಾಪಕರು ಮಾಡಿದ ಗಣನೆಯ ಪ್ರಕ್ರಿಯೆಯನ್ನು ಕಂಪ್ಯೂಟರ್‌ನಲ್ಲಿ ಅನುಕರಿಸಿ ತೋರಿಸಬ ಬ್ರಿಕ್ಲಿನ್‌ ಯೋಚಿಸಿದರು. ಇವರ ಯೋಚನೆಯ ಫಲವಾಗಿ ವಿಸಿಕ್ಯಾಲ್ಕ್ ರೂಪುಗೊಂಡಿತು. ಮೊದಲನೆಯ ವಾಣಿಜ್ಯ ಅನ್ವಯಿಕೆಯಾಗಿದ್ದ ವಿಸಿಕ್ಯಾಲ್ಕ್, ಪರ್ಸನಲ್‌ ಕಂಪ್ಯೂಟರ್‌ ಎಂಬುದು ಕಂಪ್ಯೂಟರ್‌ ಹವ್ಯಾಸಿಗಳ ನೆಚ್ಚಿನ ಯಂತ್ರವಾಗಿದ್ದದ್ದು ವಾಣಿಜ್ಯ ಉಪಕರಣವಾಯಿತು.

ಚಿತ್ರ:VisiCalc (IBM PC's Killer Application).PNG
ಸ್ಕ್ರೀನ್ ಶಾಟ್ ಆಫ್ ವಿಸಿಕ್ಯಾಲ್ಕ್, ಮೊದಲನೆಯ PC ಸ್ಪ್ರೆಡ್‌ಷೀಟ್‌.

ವಿಸಿಕ್ಯಾಲ್ಕ್ ಬಹಳಷ್ಟು ವ್ಯಾಪಕ ಜನಪ್ರಿಯತೆ ಗಳಿಸಿ, ರೂಪಕವಾಗಿ 'killer app' ಆಯಿತು. ಇದು ಅದೆಷ್ಟು ಆಸಕ್ತಿ ಕೆರಳಿಸಿತೆಂದರೆ, ಜನರು ಇದನ್ನು ಇಟ್ಟುಕೊಳ್ಳಲೆಂದೆ ಪ್ರತ್ಯೇಕ ಕಂಪ್ಯೂಟರ್‌ನ್ನು ಅನ್ನು ಕೊಂಡುಕೊಳ್ಳುತ್ತಿದ್ದರು.

ಈ ವಿಚಾರದಲ್ಲಿ ವಿಸಿಕ್ಯಾಲ್ಕ್‌ ‌ಆಪಲ್ II ಕಂಪ್ಯೂಟರ್‌ ವ್ಯಾಪಕ ಜನಪ್ರಿಯತೆ ಗಳಿಸುವಲ್ಲಿ ಪ್ರಮುಖ ಕಾರಣವಾಗಿತ್ತು.  ನಂತರ, ಈ ತಂತ್ರಾಂಶವನ್ನು ಅನೇಕ ಕಂಪ್ಯೂಟರ್‌ಗಳಲ್ಲಿ, ಅದರಲ್ಲೂ ವಿಶೇಷವಾಗಿ CP/M ಯಂತ್ರಗಳಲ್ಲಿ, ಅಟಾರಿ 8-ಬಿಟ್ ಫ್ಯಾಮಿಲಿ ಮತ್ತು ಅನೇಕ ಪ್ರಧಾನ ವೇದಿಕೆಗಳಲ್ಲಿ ಅಳವಡಿಸಿಕೊಳ್ಳಲಾಯಿತು.  ಆದಾಗ್ಯೂ ವಿಸಿಕ್ಯಾಲ್ಕ್ 'ಆಪಲ್ II ತಂತ್ರಾಂಶ' ಎಂಬ ಹೆಸರಿನಲ್ಲೇ ಉಳಿಯಿತು.

ಲೋಟಸ್ 1-2-3 ಮತ್ತು ಇತರ MS-DOS ಸ್ಪ್ರೆಡ್‌ಷೀಟ್‌ಗಳು ಬದಲಾಯಿಸಿ

ಆಗಸ್ಟ್‌ 1981ರಲ್ಲಿ ಪರಿಚಯಿಸಲಾದ IBM PC ಹಂತ-ಹಂತವಾಗಿ ಹೆಚ್ಚು ಬಳಕೆಯಾಯಿತು, ಏಕೆಂದರೆ, ಇದಕ್ಕಾಗಿ ಲಭ್ಯವಾಗಿದ್ದ ಬಹುಪಾಲು ತಂತ್ರಾಂಶಗಳು ಇತರೆ 8-ಬಿಟ್‌ ವೇದಿಕೆಯಿಂದ ಪೋರ್ಟ್ ಮಾಡಿಕೊಳ್ಳಲಾಗಿದೆ. ನವೆಂಬರ್‌ 1982ರಲ್ಲಿ ಲೋಟಸ್ 1-2-3ಯನ್ನು ಪರಿಚಯಿಸಿದಾಗ ಅನೇಕ ಬದಲಾವಣೆಗಳು ಉಂಟಾದವು. ಜನವರಿ 1983ರಲ್ಲಿ ಇದನ್ನು ಮಾರುಕಟ್ಟೆಗೆ ಮಾರಾಟಕ್ಕಾಗಿ ಬಿಡುಗಡೆಗೊಳಿಸಲಾಯಿತು. ಇದು ಈ ವೇದಿಕೆಯ killer app (ಅತಿ ಪ್ರಬಲ ತಂತ್ರಾಂಶ)ವಾಯಿತು. ವಿಸಿಕ್ಯಾಲ್ಕ್‌ಗಿಂತಲೂ ಹೆಚ್ಚು ವೇಗ ಹಾಗೂ ಉತ್ತಮವಾಗಿದ್ದರಿಂದ ಈ PC ಹೆಚ್ಚು ಮಾರಾಟವಾಗಲು ನೆರವಾಯಿತು.

ಲೋಟಸ್ 1-2-3 ಹಾಗೂ ಅದರ ಪ್ರತಿಸ್ಪರ್ಧಿ ಬೋರ್ಲೆಂಡ್‌ ಕ್ವಾಟ್ರೊ ವಿಸಿಕ್ಯಾಲ್ಕ್‌ನ್ನು ಮಾರುಕಟ್ಟೆಯಿಂದ 'ಎತ್ತಂಗಡಿ' ಮಾಡಿತು.

ಲೋಟಸ್ 1-2-3 ಯನ್ನು  26 ಜನವರಿ 1983ರಂದು ಬಿಡುಗಡೆಗೊಳಿಸಲಾಯಿತು. ಇದು ಬಿಡುಗಡೆಯಾದ ವರ್ಷದಲ್ಲೇ ಅತ್ಯಂತ ಜನಪ್ರಿಯವಾಗಿದ್ದ ವಿಸಿಕ್ಯಾಲ್ಕ್ಗಿಂತ ಹೆಚ್ಚು ಮಾರಾಟವಾಯಿತು. ಅನೇಕ ವರ್ಷಗಳ ಕಾಲ ಡಾಸ್‌ ಕಾರ್ಯಾಚರಣಾ ವ್ಯವಸ್ಥೆಯ ಪ್ರಧಾನ ಸ್ಪ್ರೆಡ್‌ಷೀಟ್‌ ಆಗಿ ಮುಂದುವರೆಯಿತು.

ಮೈಕ್ರೊಸಾಫ್ಟ್‌ ಎಕ್ಸೆಲ್‌ ಬದಲಾಯಿಸಿ

ಮೈಕ್ರೊಸಾಫ್ಟ್‌ ಉದ್ದಿಮೆಯು ಮೆಕಿಂಟೊಷ್‌ ಕಾರ್ಯಾಚರಣಾ ವ್ಯವಸ್ಥೆಗಾಗಿ ಮೈಕ್ರೊಸಾಫ್ಟ್‌ ಎಕ್ಸೆಲ್‌ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲು ಬಹಳ ವರ್ಷಗಳಿಂದ ಯತ್ನಿಸುತ್ತಿತ್ತು. ಮೆಕಿಂಟೋಷ್‌ ಸೂಕ್ತಮಟ್ಟಿಗೆ ಪ್ರಬಲ ಕಾರ್ಯಾಚರಣಾ ವ್ಯವಸ್ಥೆಯಾಗಿತ್ತು. ಎಕ್ಸೆಲ್‌ನ್ನು ವಿಂಡೋಸ್‌ 2.0ಗೆ ಹೊಂದಿಸುವುದರೊಂದಿಗೆ ವಿಂಡೋಸ್‌ ಸ್ಪ್ರೆಡ್‌ಷೀಟ್‌ ಸಂಪೂರ್ಣ ಸಕ್ರಿಯ ಎನ್ನಲಾಯಿತು. 1990ರ ದಶಕದ ಪೂರ್ವಾರ್ಧದಲ್ಲಿ ಬಿಡುಗಡೆಯಾದ, ಇನ್ನಷ್ಟು ಸದೃಢವಾಗಿದ್ದ ವಿಂಡೋಸ್‌ 3.X ವೇದಿಕೆಯು, ಮೈಕ್ರೊಸಾಫ್ಟ್‌ ಎಕ್ಸೆಲ್‌ ಲೋಟಸ್‌ನಿಂದ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳಲು ನೆರವಾಯಿತು. ಬಳಸಬಹುದಾದ ವಿಂಡೋಸ್‌ ಉತ್ಪನ್ನಗಳೊಂದಿಗೆ ಲೋಟಸ್‌ ಪ್ರತಿಕ್ರಿಯಿಸುವಷ್ಟರಲ್ಲಿ ಮೈಕ್ರೊಸಾಫ್ಟ್‌ ಆಗಲೇ ತನ್ನ ಆಫೀಸ್‌ ತಂತ್ರಾಂಶಸಮೂಹನ್ನು ಸಿದ್ಧಪಡಿಸುತ್ತಿತ್ತು. 1990ರ ದಶಕದ ಮಧ್ಯದಿಂದ ಇಂದಿನ ವರೆಗೂ ಮೈಕ್ರೊಸಾಫ್ಟ್‌ ಎಕ್ಸೆಲ್‌ ವಾಣಿಜ್ಯ ಮಟ್ಟದ ವಿದ್ಯುನ್ಮಾನ ಸ್ಪ್ರೆಡ್‌ಷೀಟ್‌ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಪಾಲು ಹೊಂದಿದೆ.

ಆಪಲ್ ನಂಬರ್ಸ್ ಬದಲಾಯಿಸಿ

ನಂಬರ್ಸ್‌ ಎಂಬುದು ಆಪೆಲ್‌ ಇಂಕಾರ್ಪೊರೆಟೆಡ್‌ನ ಸ್ಪ್ರೆಡ್‌ಷೀಟ್‌ ತಂತ್ರಾಂಶವಾಗಿದ್ದು ,ಐವರ್ಕ್‌(iWork)ನ ಭಾಗವಾಗಿದೆ. ಇದು ಉಪಯುಕ್ತತೆ ಹಾಗೂ ಚಾರ್ಟ್ ನಿರೂಪಣೆಯ ಶ್ರೇಷ್ಠತೆಯತ್ತ ಗಮನಹರಿಸಿತು. ಆಪಲ್‌ನ ತಂತ್ರಾಂಶಸಮೂಹಕ್ಕೆ ನಂಬರ್ಸ್‌ ಎಂಬ ತಂತ್ರಾಂಶ ಸೇರಿಸುವುದರೊಂದಿಗೆ, ಮೈಕ್ರೊಸಾಫ್ಟ್‌ ಆಫೀಸ್‌ಗೆ ತಕ್ಕಮಟ್ಟದ ಪ್ರತಿಸ್ಪರ್ಧಿ ಎನ್ನುವಂತಾಗಿತ್ತು. ಆದರೆ, ಪಿವೊಟ್‌ ಟೇಬಲ್‌ ಮತ್ತು ಚಾರ್ಟ್‌ಗಳ ವ್ಯವಸ್ಥೆ ಇದರಲ್ಲಿಲ್ಲ.

OpenOffice.org Calc ಬದಲಾಯಿಸಿ

OpenOffice.org Calc ಎಂಬುದು ಮೈಕ್ರೊಸಾಫ್ಟ್‌ ಎಕ್ಸೆಲ್‌ನಂತೆಯೇ ರೂಪಿಸಲಾದ, ಉಚಿತವಾಗಿ ದೊರೆಯುವ ಮುಕ್ತ-ಮೂಲದ (ಓಪನ್-ಸೋರ್ಸ್) ತಂತ್ರಾಂಶವಾಗಿದೆ. ಕ್ಯಾಲ್ಕ್‌, ಎಕ್ಸೆಲ್‌ (XLS) ಕಡತಗಳನ್ನು ತೆರೆಯಬಹುದು ಹಾಗೂ ಉಳಿಸಬಹುದು.[೧೧]. ಕ್ಯಾಲ್ಕ್‌ ತಂತ್ರಾಂಶವನ್ನು ಸ್ಥಾಪನಾ ಕಡತ ಹಾಗೂ ಒಂದೆಡೆಯಿಂದ ಇನ್ನೊಂದೆಡೆ ವರ್ಗಾಯಿಸಬಹುದಾದ ತಂತ್ರಾಂಶವಾಗಿದೆ. ಇದನ್ನು ಯುಎಸ್‌ಬಿ ಡ್ರೈವ್‌ನಂತಹ ಸಾಧನದಿಂದಲೂ ಚಾಲಿತಗೊಳಿಸಬಹುದು. ಇದನ್ನು OpenOffice.org ವೆಬ್ ಸೈನ್ ನಿಂದ ಡೌನ್ ಲೋಡ್ ಮಾಡಿಕೊಳ್ಳ ಬಹುದು.

ಜಿನ್ಯೂಮರಿಕ್ ಬದಲಾಯಿಸಿ

ಜಿನ್ಯೂಮರಿಕ್ ಎಂಬುದು GNOME ಉಚಿತ ತಂತ್ರಾಂಶ ಡೆಸ್ಕ್‌ಟಾಪ್‌ ಪ್ರಾಜೆಕ್ಟ್‌‌ನ ಹಾಗೂ ಲಭ್ಯ ವಿಂಡೋಸ್‌ ಇಂಸ್ಟಾಲರ್‌ಗಳನ್ನು ಹೊಂದಿದೆ. ವಿಂಡೋಸ್‌ ಇಂಸ್ಟಾಲರ್ಸ್‌ನ ಭಾಗವಾಗಿರುವ ಉಚಿತ ಸ್ಪ್ರೆಡ್‌ಷೀಟ್‌ ತಂತ್ರಾಂಶವಾಗಿದೆ. ತಾನು ಸಮಗ್ರವಾಗಿ ಹೋಲುವ ಮೈಕ್ರೊಸಾಫ್ಟ್‌ ಎಕ್ಸೆಲ್‌ನಂತಹ ಏಕಸ್ವಾಮ್ಯದ ತಂತ್ರಾಂಶದ ಸ್ಥಾನದಲ್ಲಿ ಬಳಸಬಹುದಾದ ಉಚಿತ ತಂತ್ರಾಂಶವಾಗಿದೆ. ಜಿನ್ಯೂಮರಿಕ್‌ನ್ನು ಮಿಗ್ವೆಲ್‌ ಡಿ ಐಕಾಜಾ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿದರು. ಸದ್ಯಕ್ಕೆ ಇದನ್ನು ಜೋಡಿ ಗೋಲ್ಡ್‌ಬರ್ಗ್‌ ಎಂಬವರು ನಿರ್ವಹಿಸುತ್ತಿದ್ದಾರೆ.

ಜಿನ್ಯೂಮರಿಕ್ CSV, ಮೈಕ್ರೊಸಾಫ್ಟ್‌ ಎಕ್ಸೆಲ್‌, HTML, ಲ್ಯಾಟೆಕ್ಸ್‌ (LaTeX), ಲೋಟಸ್ 1-2-3, ಓಪನ್‌ಡಾಕ್ಯುಮೆಂಟ್‌ (OpenDocument) ಮತ್ತು ಕ್ವಾಟ್ರೊ ಪ್ರೊ (Quattro Pro)ಗಳನ್ನು ಒಳಗೊಂಡಂತೆ ಅನೇಕ ಫೈಲ್ ಮಾದರಿಗಳಲ್ಲಿ ದತ್ತಾಂಶವನ್ನು ಪಡೆದುಕೊಳ್ಳುವ ಹಾಗೂ ಕಳುಹಿಸುವ ಸಾಮರ್ಥ್ಯ ಹೊಂಡಿದೆ; ಇದರ ನಿಜವಾದ ಮಾದರಿ ಜಿನ್ಯೂಮರಿಕ್ ಕಡತ ಮಾದರಿ (.gnm ಅಥವಾ .gnumeric), XML ಕಡತವಾಗಿದ್ದು gzipನ ಜೊತೆಯಲ್ಲಿ ಸಂಕುಚಿಸಲ್ಪಟ್ಟಿರುತ್ತದೆ.[೧೨] ಇದು ಮೈಕ್ರೊಸಾಫ್ಟ್‌ ಎಕ್ಸೆಲ್‌ನ ಉತ್ತರ ಅಮೆರಿಕಾ ಆವೃತ್ತಿಯ ಸ್ಪ್ರೆಡ್‌ಷೀಟ್‌ನ ಎಲ್ಲಾ ಕಾರ್ಯಗಳನ್ನು ಹಾಗೂ ಜಿನ್ಯೂಮರಿಕ್‌ಗೆ ವಿಶೇಷವಾಗಿರುವ ಅನೇಕ ಕಾರ್ಯಗಳನ್ನು ಒಳಗೊಂಡಿದೆ. ಇದು ಪಿವೋಟ್ ಕೋಷ್ಟಕಗಳು ಮತ್ತು ಸೋಪಾಧಿಕ ವ್ಯವಸ್ಥೆಗೆ ಬೆಂಬಲ ನೀಡಿಲ್ಲ, ಆದರೆ ಮುಂದಿನ ಆವೃತ್ತಿಗಳಲ್ಲಿ ಇವುಗಳಿಗೆ ಬೆಂಬಲ ನೀಡುವಂತೆ ಯೋಜಿಸಲಾಗಿದೆ. ಜಿನ್ಯೂಮರಿಕ್‌ನ ನಿಖರತೆ [೧೩][೧೪], ಅಂಕಿ ಅಂಶದ ವಿಶ್ಲೇಷಣೆಗೆ ಮತ್ತು ಇತರ ವೈಜ್ಞಾನಿಕ ಕ್ರಿಯೆಗಳಿಗೆ ಇದನ್ನು ಬಳಸುವವರಲ್ಲಿ ನೆಚ್ಚಿನ ಸ್ಥಾನ ಕಲ್ಪಸಿಕೊಳ್ಳಲು ಸಹಾಯ ಮಾಡಿತು.[ಸೂಕ್ತ ಉಲ್ಲೇಖನ ಬೇಕು] ಜಿನ್ಯೂಮರಿಕ್‌ನ ನಿಖರತೆಯನ್ನು ಹೆಚ್ಚಿಸಲು, ಇದರ ಅಭಿವೃದ್ಧಿಕಾರರು, R ಪ್ರಾಜೆಕ್ಟ್ನಲ್ಲಿ ತಮ್ಮ ಸಹಯೋಗ ನೀಡುತ್ತಿದ್ದಾರೆ.

ಅಂತರಜಾಲ-ಆಧಾರಿತ ಸ್ಪ್ರೆಡ್‌ಷೀಟ್‌ಗಳು ಬದಲಾಯಿಸಿ

ಸುಮಾರು 2005ರಲ್ಲಿ ಉದಯೋನ್ಮುಖವಾದ ಅಜ್ಯಾಕ್ಸ್‌ (Ajax)ನಂತಹ ಅತ್ಯಾಧುನಿಕ ಅಂತರಜಾಲ-ಆದಾರಿತ ತಂತ್ರಜ್ಞಾನಗಳೊಂದಿಗೆ, ಆನ್‌ಲೈನ್ ಸ್ಪ್ರೆಡ್‌ಷೀಟ್‌ಗಳ ನವ ಯುಗವೇ ಆರಂಭವಾಯಿತು. ಬಳಕೆದಾರರ ಅನುಭವಗಳ ಪ್ರಕಾರ, ಅತ್ಯುತ್ತಮ ಅಂತರಜಾಲ ಅನ್ವಯಿಕೆಗಳು, ಸ್ಥಳೀಯ ಕಂಪ್ಯೂಟರ್‌ ಸ್ಪ್ರೆಡ್‌ಷೀಟ್‌ ಅನ್ವಯಿಕೆಗಳು ಹೊಂದಿರುವ ಸೌಕರ್ಯಗಳಲ್ಲಿ ಬಹುಶಃ ಎಲ್ಲವನ್ನೂ ಹೊಂದಿವೆ. ಇವುಗಳಲ್ಲಿ ಕೆಲವು ಬಹು-ಬಳಕೆದಾರ ಸಹಯೋಗದಂತಹ ಪ್ರಬಲ ಲಕ್ಷಣಗಳನ್ನು ಹೊಂದಿವೆ. ಷೇರು ಬೆಲೆಗಳು ಮತ್ತು (ಹಣಕಾಸು) ವಿನಿಮಯ ದರಗಳಂತಹ ಉಪಯುಕ್ತ ನಿಜಾವಧಿಯ ಮಾಹಿತಿಯನ್ನು ದೂರದ ಮೂಲಗಳಿಂದ ಒಯ್ದು ನೀಡುತ್ತದೆ.

ಇತರೆ ಸ್ಪ್ರೆಡ್‌ಷೀಟ್‌ಗಳು ಬದಲಾಯಿಸಿ

ಇತರೆ ಉತ್ಪನ್ನಗಳು ಬದಲಾಯಿಸಿ

ವಿವಿಧ ಮಾದರಿಗಳನ್ನು ಆಧರಿಸಿದ ತಂತ್ರಾಂಶ‌ಗಳ ಮೂಲಕ ಅನೇಕ ಉದ್ದಿಮೆಗಳು ಸ್ಪ್ರೆಡ್‌ಷೀಟ್‌ ಮಾರುಕಟ್ಟೆಯನ್ನು ಪ್ರವೇಶಿಸಲು ಯತ್ನಿಸಿದವು. ಲೋಟಸ್ ಉದ್ದಿಮೆಯ ಪರಿಚಯಿಸಿದ ಲೋಟಸ್ ಇಂಪ್ರೂ ವಾಣಿಜ್ಯವಾಗಿ ಯಶಸ್ವಿ ತಂತ್ರಾಂಶವಾಯಿತು. ವಿಶೇಷವಾಗಿ ಆರ್ಥಿಕ ಜಗತ್ತಿನಲ್ಲಿ, ಇದರ ದತ್ತಾಂಶ ಸ್ವೀಕಾರ ಮತ್ತು ಸಂಸ್ಕರಣಾ ಸಾಮರ್ಥ್ಯದಿಂದಾಗಿ, ಮಾರುಕಟ್ಟೆಯಲ್ಲಿ ಇಂದಿಗೂ ಪ್ರತಿಷ್ಠಿತ ಸ್ಥಾನ ಪಡೆದುಕೊಂಡಿದೆ. ಸ್ಪ್ರೆಡ್‌ಷೀಟ್‌ 2000 ತಂತ್ರಾಂಶದಲ್ಲಿ ಸೂತ್ರ ರಚನಾ ಕ್ರಿಯೆಯನ್ನು ಸುಗಮಗೊಳಿಸುವ ಯತ್ನ ನಡೆದಿತ್ತು. ಆದರೆ ಬಹುಮಟ್ಟಿಗೆ ಸಫಲವಾಗಲಿಲ್ಲ.

ಪರಿಕಲ್ಪನೆಗಳು ಬದಲಾಯಿಸಿ

ಕೋಶಗಳು ಬದಲಾಯಿಸಿ

'ಕೋಶ ' ಎಂಬುದನ್ನು ದತ್ತಾಂಶವೊಂದನ್ನು ಶೇಖರಿಸಿ ನಮೂದಿಸುವ ಒಂದು ಆಯತಾಕಾರದ ಸ್ಥಾನ ಎನ್ನಬಹುದು. ಒಂದು ಕೋಶ ಸಾಮಾನ್ಯವಾಗಿ ಅದರ ಅಡ್ಡಸಾಲು ಮತ್ತು ನೀಟಸಾಲಿನ ಸಂಖ್ಯೆಯಿಂದ ಉಲ್ಲೇಖಿಸಲಾಗುತ್ತದೆ. (ಈ ಉದಾಹರಣೆಗೆಯಲ್ಲಿ, 30ರ ಸಾಂಖ್ಯಿಕ ಮೌಲ್ಯವನ್ನು ಸೂಚಿಸುವ ಕೋಶವನ್ನು 'A2' ಎನ್ನಲಾಗಿದೆ). ಕೋಶದಲ್ಲಿರುವ ಮಾಹಿತಿಯು ಸಂಪೂರ್ಣವಾಗಿ ಕಾಣುವಂತೆ ಮಾಡಲು, ಕೋಶದ ಸುತ್ತಲೂ ಆವರಿಸಿರುವ ಅಡ್ಡಸಾಲು ಮತ್ತು ನೀಟಸಾಲಿನ ಗೆರೆಗಳನ್ನು ಎಳೆಯುವುದರ ಮೂಲಕ, ಕ್ರಮವಾಗಿ ಕೋಶದ ಭೌತಿಕ ಎತ್ತರ ಮತ್ತು ಅಗಲವನ್ನು ಸರಿಹೊಂದಿಸಬಹುದು.

ನನ್ನ ಸ್ಪ್ರೆಡ್‌ಷೀಟ್‌
A ಬಿ C D
01 ಮೌಲ್ಯ1 ಮೌಲ್ಯ2 ಕೂಡಿಸಲಾದ ಗುಣಿಸಲಾದ
02 20 30 200

ಕೋಶಗಳ ಉದ್ದಗಲದ ಸರಣಿಯನ್ನು 'ಷೀಟ್' ಅಥವಾ 'ವರ್ಕ್‌ಷೀಟ್'(ಕಾರ್ಯ ದಾಖಲೆ) ಎನ್ನಲಾಗುತ್ತದೆ. ರೂಢಿಯಲ್ಲಿರುವ ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿನ ಸರಣಿಯಲ್ಲಿನ ಬದಲಾಗಬಲ್ಲ ಮೌಲ್ಯಗಳಿಗೆ ಸಾದೃಶವಾಗಿದೆ (ಆದರೂ, ಇದೇ ಸಾದೃಶದ ಪ್ರಕಾರ, ನಮೂದಿಸಲಾದ ಮೌಲ್ಯಗಳು ಬದಲಾಗದಿದ್ದಲ್ಲಿ, ಸ್ಥಿರ ಮೌಲ್ಯ ಎಂದು ಪರಿಗಣಿಸಬಹುದು). ಬಹುಪಾಲು ಅಳವಸಿಕೊಳ್ಳುವಿಕೆಯಲ್ಲಿ, ಅನೇಕ ವರ್ಕ್‌ಷೀಟ್‌ ಗಳು ಒಂದೇ ಸ್ಪ್ರೆಡ್‌ಷೀಟ್‌ನಲ್ಲಿ ಇರಬಹುದು. ಸ್ಪಷ್ಟತೆಗಾಗಿ, ವರ್ಕ್‌ಷೀಟ್‌ ಎಂಬುದು ಸ್ಪ್ರೆಡ್‌ಷೀಟ್‌ನ ಭಾಗವಾದ ಉಪಗಣ ಎಂದು ಸರಳವಾಗಿ ಹೇಳಬಹುದು. ಕಾರ್ಯತಃ, ಸ್ಪ್ರೆಡ್‌ಷೀಟ್‌ ಇಡಿಯಾಗಿ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ ಕೋಶಗಳೂ ಸ್ಪ್ರೆಡ್‌ಷೀಟ್‌ನೊಳಗಿನ ಸಾರ್ವತ್ರಿಕ 'ಬದಲಾಗಬಲ್ಲ ಮೌಲ್ಯ'ಗಳಂತೆ ಕಾರ್ಯನಿರ್ವಹಿಸುತ್ತದೆ (ತನ್ನದೇ ಕೋಶವಾದಲ್ಲಿ ಮಾತ್ರ ಅದು 'ಓದಲು ಮಾತ್ರ' ರೀತಿಯಲ್ಲಿ ವರ್ತಿಸುವುದು).

ಕೋಶವೊಂದು ಸಾಂಖ್ಯಿಕ/ಪಠ್ಯ ಮೌಲ್ಯ ಅಥವಾ ಸೂತ್ರವೊಂದನ್ನು ಹೊಂದಬಹುದು, ಅಥವಾ ಖಾಲಿ ಬಿಡಬಹುದು. ರೂಢಿಯಂತೆ, ಸೂತ್ರಗಳು ಸಾಮಾನ್ಯವಾಗಿ = ಚಿಹ್ನೆಯಿಂದ ಆರಂಭವಾಗುತ್ತವೆ.

ಮೌಲ್ಯಗಳು ಬದಲಾಯಿಸಿ

ಕಂಪ್ಯೂಟರ್‌ನ ಕೀಲಿಮಣೆಯಿಂದಾಗಲಿ ಅಥವಾ ಕೋಶದೊಳಗೆ ನೇರವಾಗಿ ನಮೂದಿಸುವ ಮೂಲಕ ಕೋಶವೊಂದರಲ್ಲಿ ಮಾಹಿತಿ ಅಥವಾ ಮೌಲ್ಯವನ್ನು ಸೇರಿಸಬಹುದು. ಪರ್ಯಾಯವಾಗಿ, ಮೌಲ್ಯವೊಂದು ಸೂತ್ರವನ್ನು ಆಧರಿಸಬಹುದು (ಕಳಗೆ ನೋಡಿ). ಸೂತ್ರವು ಗಣನೆ ಮಾಡಬಹುದು, ಸದ್ಯದ ದಿನಾಂಕ ಮತ್ತು ಸಮಯವನ್ನು ಪ್ರದರ್ಶಿಸಬಹುದು, ಅಥವಾ ಷೇರು ಮಾಹಿತಿ ಅಥವಾ ದತ್ತಾಂಶ ಸಂಗ್ರಹದಂತ ಬಾಹ್ಯ ಮಾಹಿತಿಯನ್ನು ಇತರೆಡೆಯಿಂದ ಆಮದು ಮಾಡಿಕೊಳ್ಳಬಹುದು.

The Spreadsheet‌ Value Rule

ಆಲನ್ ಕೇ ಎಂಬ ಕಂಪ್ಯೂಟರ್ ವಿಜ್ಞಾನಿಯು, ಸ್ಪ್ರೆಡ್‌ಷೀಟ್‌ನ ಕಾರ್ಯಾಚರಣೆಯನ್ನು ಸಂಕ್ಷಿಪ್ತವಾಗಿಸಲು Value Rule (ಮೌಲ್ಯ ನಿಯಮ) ಎಂಬ ಪದವನ್ನು ಬಳಸಿದರು. ಇದರಂತೆ, ಕೋಶದಲ್ಲಿನ ಮೌಲ್ಯವು, ಬಳಕೆದಾರರು ಕೋಶದಲ್ಲಿ ನಮೂದಿಸಲಾದ ಸೂತ್ರವನ್ನು ಇಡಿಯಾಗಿ ಅವಲಂಬಿಸುತ್ತದೆ.[೧೮] ಸೂತ್ರವು ಇತರೆ ಕೋಶಗಳಲ್ಲಿನ ಮೌಲ್ಯಗಳಿಗೆ ಉತ್ತರ/ಫಲಿತಾಂಶ ನೀಡಬಲ್ಲದು. ಆದರೆ ಹಾಗೇ ಫಲಿತಾಂಶ ನೀಡುವ ಕೋಶಗಳಲ್ಲಿ, ಬಳಕೆದಾರರು ದತ್ತಾಂಶವನ್ನಾಗಲೀ ಸೂತ್ರವನ್ನಾಗಲೀ ದಾಖಲಿಸುವಂತಿಲ್ಲ. ಸೂತ್ರವನ್ನು ಗಣಿಸಲು ಯಾವುದೇ 'ಉಪ-ಪರಿಣಾಮಗಳಿಲ್ಲ': ಸೂತ್ರವು ತಾನಿರುವ ಕೋಶದಲ್ಲಿ ಗಣಿಸಲಾದ ಫಲಿತಾಂಶವನ್ನು ಪ್ರದರ್ಶಿಸುವುದೇ ಏಕೈಕ ಉತ್ಪಾದನೆ. ಕೋಶದಲ್ಲಿನ ಮಾಹಿತಿಯನ್ನು ಬಳಕೆದಾರ ಬದಲಾಯಿಸುವುದರ ಹೊರತು, ಕೋಶದಲ್ಲಿನ ಮೌಲ್ಯಗಳು ಸ್ವಯಂಚಾಲಿತವಾಗಿ ಬದಲಿಸಲು ಯಾವುದೇ ವ್ಯವಧಾನ ಅಥವಾ ವ್ಯವಸ್ಥೆ ಇಲ್ಲ. ಪ್ರೋಗ್ರಾಂಮಿಂಗ್ ಸಂಕೇತಭಾಷೆಗಳ ಸಂದರ್ಭದಲ್ಲಿ, ಇದು ಮೊದಲ ಸ್ತರದ ಕ್ರಿಯಾತ್ಮಕ ಪ್ರೋಗ್ರಾಮಿಂಗ್‌ನ್ನು ಸೀಮತವಾಗಿ ನೀಡುತ್ತದೆ.[೧೯]

ಸ್ವಯಂಚಾಲಿತ (ಯಾಂತ್ರಿಕ) ಮರುಗಣನೆ ಬದಲಾಯಿಸಿ

1980ರ ದಶಕದ ಮಧ್ಯದಿಂದಲೂ,[ಸೂಕ್ತ ಉಲ್ಲೇಖನ ಬೇಕು] ಸ್ವಯಂಚಾಲಿತ ಮರುಗಣನೆಯು ಸ್ಪ್ರೆಡ್‌ಷೀಟ್‌ಗಳ ಅವಿಭಾಜ್ಯ ಲಕ್ಷಣವಾಗಿದೆ. ಈ ಐಚ್ಛಿಕ ಸೌಲಭ್ಯದಿಂದಾಗಿ, ಬಳಕೆದಾರರು ಸ್ಪ್ರೆಡ್‌ಷೀಟ್‌ ತಂತ್ರಾಂಶವನ್ನು ಮೌಲ್ಯಗಳ ಮರುಗಣನೆ ಮಾಡೆಂದು ಕೋರುವ ಅಗತ್ಯವನ್ನು ತಪ್ಪಿಸುತ್ತದೆ (ಈ ದಿನಗಳಲ್ಲಿ ಸ್ಯಯಂಚಾಲಿತ ಮರುಗಣನೆಯ ಸೌಲಭ್ಯವು ಯಥಾಸ್ಥಿತಿಯಲ್ಲಿ ಸಕ್ರಿಯವಾಗಿರುತ್ತದೆ; ದೊಡ್ಡ ಗಾತ್ರದ ಸ್ಪ್ರೆಡ್‌ಷೀಟ್‌ಗಳಲ್ಲಿ ಕ್ರಿಯಾಶೀಲತೆಯನ್ನು ಉತ್ತಮಗೊಳಿಸಲೆಂದು ಇದನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ). ದೊಡ್ಡ ಅಥವಾ ಸಂಕೀರ್ಣವಾದ ಸ್ಪ್ರೆಡ್‌ಷೀಟ್‌ಗಳಲ್ಲಿ ದತ್ತಾಂಶ ದಾಖಲು ಮಾಡುವ ವೇಗ ಕಡಿಮೆಗೊಳಿಸುತ್ತಿದ್ದ ಕಾರಣ, ಆರಂಭದಲ್ಲಿನ ಕೆಲವು ಸ್ಪ್ರೆಡ್‌ಷೀಟ್‌ಗಳಲ್ಲಿ ಮರುಗಣನೆಯನ್ನು ಕೈಯಿಂದಲೇ ಮಾಡಬೇಕಿದ್ದಿತ್ತು.

ಅನೇಕ ಆಧುನಿಕ ಸ್ಪ್ರೆಡ್‌ಷೀಟ್‌ಗಳು ಈ ಆಯ್ಕೆಯನ್ನು ಇಂದಿಗೂ ಹೊಂದಿವೆ.

ನಿಜಾವಧಿಯ ಪರಿಷ್ಕರಣೆ (Real-time update) ಬದಲಾಯಿಸಿ

ಬಾಹ್ಯ ಮೂಲದಿಂದ - ಉದಾಹರಣೆಗೆ, ಇನ್ಯಾವುದೋ ಸ್ಪ್ರೆಡ್‌ಷೀಟ್‌ನಿಂದ ಮೌಲ್ಯ ಪಡೆದಲ್ಲಿ, ಈ ಸೌಲಭ್ಯದಡಿ ಕೋಶದಲ್ಲಿರುವ ಮಾಹಿತಿ/ಮೌಲ್ಯವು ನಿಯತಕಾಲಿಕವಾಗಿ ಪರಿಷ್ಕೃತವಾಗುವುದು. ಹಂಚಲಾದ, ಅಂತರಜಾಲ-ಆಧಾರಿತ ಸ್ಪ್ರೆಡ್‌ಷೀಟ್‌ಗಳಲ್ಲಿ, ಇತರೆ ಬಳಕೆದಾರರು ಬದಲಿಸಿದ ಕೋಶಗಳ ಮಾಹಿತಿಯನ್ನು ಕೂಡಲೇ ಪರಿಷ್ಕರಿಸುವುದು ಎನ್ನಲಾಗುತ್ತದೆ. ಅವಲಂಬಿಸುವ ಎಲ್ಲಾ ಕೋಶ ಗಳೂ ಕೂಡ ದಾಖಲಿಸಲ್ಪಡಬೇಕು(ಅಪ್ ಡೇಟ್ ಆಗಬೇಕು).

ಭದ್ರಪಡಿಸಲಾದ ಕೋಶ ಬದಲಾಯಿಸಿ

ಕೋಶಗಳಲ್ಲಿ ಮೌಲ್ಯವನ್ನು ನಮೂದಿಸಿದ ನಂತರ, ಇದೇ ಕೋಶಗಳ ಮಾಹಿತಿಯನ್ನು ಅಪ್ಪಿತಪ್ಪಿ ತಿದ್ದುವುದನ್ನು ತಡೆಗಟ್ಟಲು, ಆಯ್ಕೆಯಾದ ಕೋಶಗಳು ಅಥವಾ ಇಡೀ ಸ್ಪ್ರೆಡ್‌ಷೀಟ್‌ನ್ನು ಲಾಕ್‌ ಮಾಡಬಹುದಾದಿದೆ. ಸೂತ್ರಗಳು ಅಥವಾ ಸಮೀಕರಣಗಳನ್ನು ಹೊಂದಿರುವ ಕೋಶಗಳೊಂದಿಗೆ ವಿಶಿಷ್ಟವಾಗಿ ಈ ಮುಂಜಾಗರೂಕತಾ ಕ್ರಮವನ್ನು ಬಲಸಲಾಗುತ್ತದೆ. ಕಿಲೊಗ್ರಾಮ್‌/ಪೌಂಡ್‌ ಪರಿವರ್ತನಾ ಕಾರಕ (2.20462262 ಎಂಟು ದಶಮಾಂಶದ ಸ್ಥಳಗಳಲ್ಲಿ) ವಿಪರ್ಯಾಯ ಆವರ್ತನ ಅಂಕ (ಸ್ಥಿರಾಂಕ) ಹೊಂದಿರುವ ಕೋಶಗಳಿಗೂ ಈ ಲಾಕ್‌ ವ್ಯವಸ್ಥೆ ಮಾಡಬಹುದು. ಪ್ರತಿಯೊಂದು ಕೋಶವನ್ನೂ ಲಾಕ್‌ ಎಂದು ಗುರುತಿಸಲಾದರೂ, ಕಡತದ ಆಯ್ಕೆಗಳಲ್ಲಿ ಈ ಸೌಲಭ್ಯವನ್ನು ಸಕ್ರಿಯಗೊಳಿಸದಿದ್ದಲ್ಲಿ, ಸ್ಪ್ರೆಡ್‌ಷೀಟ್‌ನಲ್ಲಿರುವ ದತ್ತಾಂಶವು ರಕ್ಷಿತವಾಗಿರುವುದಿಲ್ಲ.

ದತ್ತಾಂಶದ ಕ್ರಮವ್ಯವಸ್ಥೆ ಬದಲಾಯಿಸಿ

ಪರಿಮಾಣ/ಮೌಲ್ಯವನ್ನು ಹೇಗೆ ಪ್ರದರ್ಶಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಕೋಶ ಅಥವಾ ಶ್ರೇಣಿ(ವ್ಯಾಪ್ತಿ)ಯನ್ನು ಐಚ್ಛಿಕವಾಗಿ ನಿರೂಪಿಸಲ್ಪಡಬಹುದು.

ನಿರ್ದಿಷ್ಟವಾಗಿ ಮುಂಚೆ ಜೋಡಿಸಿರದಿದ್ದಲ್ಲಿ, ಯಥಾಸ್ಥಿತಿ ಪ್ರದರ್ಶನಾ (ನಿಗದಿತ ಪ್ರದರ್ಶಿಸುವ) ಕ್ರಮವ್ಯವಸ್ಥೆಯು ಸಾಮಾನ್ಯವಾಗಿ ಅದರ ಆರಂಭಿಕ ವಿಷಯಗಳಿಂದ ಜೋಡಿಸಲಾಗುತ್ತದೆ. ಇದರಿಂದಾಗಿ ಉದಾಹರಣೆಗೆ '31/01/2007' ಅಥವಾ '31 ಜನವರಿ 2007' 'ದಿನಾಂಕದ' ಕೋಶದ ಕ್ರಮವ್ಯವಸ್ಥೆಯಲ್ಲಿ ನಿಗದಿ ಪಡಿಸಲಾಗಿದೆ. 

ಇದೇ ರೀತಿ, ಸಂಖ್ಯಾ ಮೌಲ್ಯದ ನಂತರ % ಚಿಹ್ನೆಯನ್ನು ಸೇರಿಸುವುದರಿಂದ ಅದು ಶೇಕಡಾವಾರು ಕೋಶ ಕ್ರಮವ್ಯವಸ್ಥೆಯ ರೀತಿಯಲ್ಲಿ ಕೋಶವನ್ನು ಉಲ್ಲೇಖಿಸುತ್ತದೆ. ಈ ಕ್ರಮವ್ಯವಸ್ಥೆಯಿಂದ ಕೋಶದಲ್ಲಿನ ಮಾಹಿತಿಗಳು ಬದಲಾಗುವುದಿಲ್ಲ. ಕೇವಲ ತೋರಿಸಲ್ಪಟ್ಟ ಪರಿಮಾಣ ಮಾತ್ರ ಬದಲಾಗುತ್ತದೆ.

'ಸಂಖ್ಯಾತ್ಮಕ' ಅಥವಾ 'ಹಣಕಾಸು ಮೌಲ್ಯ'ದಂತಹ ಕೆಲವು ಕೋಶ ಕ್ರಮವ್ಯವಸ್ಥೆಗಳು ದಶಮಾಂಶದ ಸ್ಥಳಗಳ ಸಂಖ್ಯೆಗಳನ್ನೂ ಕೂಡ ಖಚಿತಪಡಿಸಬಲ್ಲವು.

ಯಾವುದೇ ಸೂಕ್ತ ಎಚ್ಚರಿಕೆ ನೀಡದೆ ತರ್ಕಬದ್ಧವಾಗಿಲ್ಲದ ಫಲಿತಾಂಶ ನೀಡುವ ಮೂಲಕ ಅಸಿಂಧು ಕ್ರಿಯೆ (ಅಸಮರ್ಥ ಕ್ರಿಯೆ) (ಉದಾಹರಣೆಗೆ, ದಿನಾಂಕರೂಪೀ ದತ್ತಾಂಶ ಹೊಂದಿರುವ ಕೋಶವನ್ನೂ ಗುಣಾಕಾರ ಮಾಡುವ ದೋಷ) ಸಾಧ್ಯತೆಯಿದೆ.

==== ಕೋಶ ಫಾರ್ಮೆಟ್ಟಿಂಗ್ (ದತ್ತಾಂಶ ಸ್ವೀಕರಿಸಲು ಕೋಶದ ಸಿದ್ಧಗೊಳಿಸುವಿಕೆ)

====

ಸ್ಪ್ರೆಡ್‌ಷೀಟ್‌ ಆನ್ವಯಿಕೆಗಳ ಸಾಮರ್ಥ್ಯದ ಮೇಲೆ, ತನ್ನ ಸಮಕಾಲೀನ ತಂತ್ರಾಂಶ ವರ್ಡ್‌ ಪ್ರೊಸೆಸರ್‌ನಲ್ಲಿನ 'ಸ್ಟೈಲ್‌'ನಂತೆ, ಕೋಶವನ್ನು ಪ್ರತ್ಯೇಕವಾಗಿ ಸಿದ್ಧಪಡಿಸಬಹುದು (ಕೋಶದಲ್ಲಿನ ಮಾಹಿತಿಗೆ ಅನುಗುಣವಾಗಿ (ಗಾತ್ರ, ಬಣ್ಣ, ಎದ್ದುಕಾಣುವ ಪಠ್ಯ ಅಥವಾ ವಾಲಿರುವ ಪಠ್ಯ) ಅಥವಾ ಕೋಶದ ವಿನ್ಯಾಸವನ್ನೂ ಸಿದ್ಧಪಡಿಸಬಹುದು (ಕೋಶ ಚೌಕಟ್ಟಿನ ದಪ್ಪ, ಹಿನ್ನೆಲೆ ಬಣ್ಣ, ಬಣ್ಣ ಇತ್ಯಾದಿ) ಲಕ್ಷಣಗಳನ್ನು ಸಿದ್ಧಪಡಿಸಬಹುದು. ಸ್ಪ್ರೆಡ್‌ಷೀಟ್‌ನ ಪಠನೀಯತೆಯ ಬೆಂಬಲದಿಂದ, ಕೋಶ ಸಿದ್ಧಪಡಿಸುವಿಕೆಯನ್ನು ದತ್ತಾಂಶಗಳ ಮೇಲೆ ಸೋಪಾಧಿಕವಾಗಿ ಅನ್ವಯಿಸಬಹುದು, ಉದಾಹರಣೆಗೆ ಸೊನ್ನೆಗಿಂತಲೂ ಕಡಿಮೆಯ ಸಂಖ್ಯೆಯನ್ನು ಕೆಂಪು ಬಣ್ಣದಲ್ಲಿ ಪ್ರದರ್ಶಿಸುವಂತೆ ಮಾಡಬಹುದು.

ಕೋಶದ ಸಿದ್ಧಪಡಿಸುವಿಕೆಯು ಅದರಲ್ಲಿರುವ ಮಾಹಿತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಕೋಶಗಳನ್ನು ಇತರ ವರ್ಕ್‌ಷೀಟ್‌ಗಳಿಗೆ ಹಾಗು ಆನ್ವಯಿಕೆಗಳಿಗೆ ಹೇಗೆ ನಕಲು ಮಾಡಲಾಗುತ್ತದೆ ಅಥವಾ ಸೂಚಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಫಾರ್ಮೆಟ್ಟಿಂಗ್ ಅನ್ನು ವಿಷಯದ ಜೊತೆಯಲ್ಲಿ ಹೋಗಬಹುದು ಅಥವಾ ಹೋಗದೆ ಇರಬಹುದು.

ಹೆಸರಿಡಲ್ಪಟ್ಟ ಕೋಶ ಗಳು ಬದಲಾಯಿಸಿ

 
ಮೈಕ್ರೊಸಾಫ್ಟ್‌ ಎಕ್ಸೆಲ್‌ ನಲ್ಲಿ ಹೆಸರಿಸಲ್ಪಟ್ಟ ನೀಟಸಾಲು x & y ಚರಗಳ ಬಳಕೆ ಫೋರ್ಟ್ರ್ಯಾನ್ ನಂತಿರುವ y=x2 ಗಾಗಿ ಸೂತ್ರ, ಹಾಗು ನೇಮ್ ಮ್ಯಾನೇಜರ್ x & y ನ ವ್ಯಾಖ್ಯಾನವನ್ನು ತೋರಿಸುತ್ತದೆ.

ಬಹುಪಾಲು ಅಳವಡಿಸುವಿಕೆಗಳಲ್ಲಿ, ಅಡ್ಡಸಾಲು ಅಥವಾ ನೀಟಸಾಲುಗಳಲ್ಲಿನ ಕೋಶಗಳನ್ನು ಜಾಲಗಳ ಮೂಲಕ ಉಲ್ಲೇಖಿಸುವ ಬದಲು, ಹೆಸರಿನ ಮೂಲಕ ಸೂಚಿಸಲು ಬಳಕೆದಾರನಿಗೆ ಸಹಾಯವಾಗುವಂತೆ, ಅಡ್ಡಸಾಲು ಅಥವಾ ನೀಟಸಾಲುಗಳಲ್ಲಿರುವ ಕೋಶ ಅಥವಾ ಕೋಶಗಳ ಗುಂಪುಗಳಿಗೆ 'ಹೆಸರುಕೊಡಬಹುದು'. ಸ್ಪ್ರೆಡ್‌ಷೀಟ್‌ನೊಳಗಿನ ಹೆಸರುಗಳು ಏಕಮಾತ್ರವಾಗಿರಬೇಕು. ಆದರೆ ಸ್ಪ್ರೆಡ್‌ಷೀಟ್‌ ಕಡತದಲ್ಲಿ ಒಂದಕ್ಕಿಂತಲೂ ಹೆಚ್ಚು ವರ್ಕ್‌ಷೀಟ್‌ಗಳನ್ನು ಬಳಸುತ್ತಿದ್ದಲ್ಲಿ, ಎರಡು ಷೀಟ್‌ಗಳಲ್ಲಿ ಕೋಶದ ಹಸರು ಒಂದೇ ಆಗಿದ್ದಲ್ಲಿ, ಆ ಕೋಶಗಳ ಹೆಸರಿನೊಡನೆ ಷೀಟ್‌ನ ಹಸರನ್ನೂ ನಮೂದಿಸಿಕೊಳ್ಳಬಹುದು (ಉದಾಹರಣೆಗೆ, =Sheet1!$C$1:Sheet2!$C$1). ಅನೇಕ ಷೀಟ್‌ಗಳುದ್ದಕ್ಕೂ ಆದೇಶಗಳನ್ನು ಮತ್ತೆ ಮತ್ತೆ ನೀಡುವಂತಹ ಮ್ಯಾಕ್ರೊಗಳನ್ನು ಸೃಷ್ಟಿಸುವುದು ಅಥವಾ ಚಾಲಿಸುವುದು ಈ ಬಳಕೆಯ ಒಂದು ಕಾರಣವಾಗಿದೆ. ಹೆಸರು ಸೂಚಿಸಲಾದ ಬದಲಾಗಬಲ್ಲ ಮೌಲ್ಯಗಳುಳ್ಳ ಸೂತ್ರಗಳು ಸಂಬಂಧಿತ ಬೀಜಗಣಿತದೊಂದಿಗೆ ಮೊದಲೇ ಗುರುತಿಸಲಾಗುತ್ತದೆ (ಇದು ಫೊರ್ಟ್ರಾನ್‌ ಸಮೀಕರಣಗಳನ್ನು ಹೋಲುತ್ತವೆ).

ಹೆಸರಿಸಲ್ಪಟ್ಟ ಅನಿರ್ದಿಷ್ಟ ಮೌಲ್ಯಗಳು ಮತ್ತು ಹೆಸರಿಸಲ್ಪಟ್ಟ ಕ್ರಿಯೆಗಳ ಬಳಕೆಯು ಸ್ಪ್ರೆಡ್‌ಷೀಟ್‌ ವಿನ್ಯಾಸವನ್ನು ಮತ್ತಷ್ಟು ಸ್ಪಷ್ಟಗೊಳಿಸುತ್ತದೆ.
ಕೋಶ ಸೂಚಕ ಬದಲಾಯಿಸಿ

ಹೆಸರಿಸಲಾದ ಕೋಶದ ಸ್ಥಳದಲ್ಲಿ, ಕೋಶದ (ಅಥವಾ ಗೆರೆ) ಉಲ್ಲೇಖಕವನ್ನು ಬಳಸಬಹುದಾಗಿದೆ. ಬಹುಪಾಲು ಕೋಶ ಸೂಚಕಗಳು ಒಂದೇ ಸ್ಪ್ರೆಡ್‌ಷೀಟ್‌ನ ಇತರೆ ಕೋಶವನ್ನು/ಕೋಶಗಳನ್ನು ಸೂಚಿಸುತ್ತದೆ. ಆದರೆ ಕೋಶ ಉಲ್ಲೇಖಕವು ಒಂದೇ ಸ್ಪ್ರೆಡ್‌ಷೀಟ್‌ನಲ್ಲಿ ಬೇರೆ (ವರ್ಕ್‌)ಷೀಟ್‌ನಲ್ಲಿರುವ ಕೋಶವನ್ನು ಅಥವಾ (ಕಾರ್ಯಗತಗೊಳಿಸುವುದರ ಮೇಲೆ ಆಧರಿಸಿರುತ್ತದೆ) ಸಂಪೂರ್ಣವಾಗಿ ಮತ್ತೊಂದು ಸ್ಪ್ರೆಡ್‌ಷೀಟ್‌ನಲ್ಲಿರುವ ಕೋಶ ಅಥವಾ ಹೊರಗಿನ ಆನ್ವಯಿಕೆಯಿಂದ ಮೌಲ್ಯವನ್ನು ಉಲ್ಲೇಖಿಸಬಹುದಾಗಿದೆ.

"A1" ಶೈಲಿಯಲ್ಲಿರುವ ಕೋಶ ಉಲ್ಲೇಖಕ ಒಂದೋ ಅಥವಾ ಎರಡು case-insensitive ಇಂಗ್ಲಿಷ್‌ ಅಕ್ಷರಗಳನ್ನು ಹೊಂದಿರುತ್ತವೆ. 256 ನೀಟಸಾಲುಗಳಲ್ಲಿ 1-256ರ ಶ್ರೇಣಿ (A ಇಂದ Z, ನಂತರ AA ಇಂದ IVತನಕ), ಹಾಗೂ 65536 ಅಡ್ಡಸಾಲುಗಳಲ್ಲಿ 1-65536ರ ಶ್ರೇಣಿಯತನಕ ಇರುತ್ತದೆ. ಹಾಗಾಗಿ, ಕೋಶ ಉಲ್ಲೇಖಕ 'A1' ಎಂದರೆ ನೀಟಸಾಲು A ಹಾಗೂ ಅಡ್ಡಸಾಲು 1 ಅಡ್ಡಹಾಯುವ ಸ್ಥಳದಲ್ಲಿರುವ ಕೋಶವಾಗಿದೆ. ಒಂದು ಭಾಗ (ಸೂತ್ರವನ್ನು ಬದಲಿಸಿದಾಗ ಅಥವಾ ನಕಲು ಮಾಡಿದಾಗ ಇದು ಬದಲಾಗುತ್ತದೆ), ಅಥವಾ ಪೂರ್ತಿಯಾಗಿ (ಕೋಶವನ್ನು ಸೂಚಿಸಲು ಅದರ ಮುಂದೆ $ ಗುರುತಿನಿಂದ ಸೂಚಿಸಲಾಗಿರುತ್ತದೆ) ಸಂಬಂಧ ಸೂಚಕವಾಗಿರಬಹುದು. ಪರ್ಯಾಯ "R1C1" ಉಲ್ಲೇಖಕ ಶೈಲಿಯಲ್ಲಿ ಅಡ್ಡಸಾಲಿನ ಸಂಕೇತವನ್ನು ಸೂಚಿಸಲು R ಅಕ್ಷರ ಹಾಗೂ ನೀಟಸಾಲಿನ ಸಂಕೇತವನ್ನು ಸೂಚಿಸಲು C ಅಕ್ಷರವನ್ನು ಬಳಸಲಾಗಿದೆ; ಸಂಬಂಧಸೂಚಕ ಅಡ್ಡಸಾಲು ಅಥವಾ ನೀಟಸಾಲುವಿನ ಸಂಕೇತಗಳನ್ನು ಚೌಕಾಕಾರದ ಆವರಣಗಳೊಳಗೆ ಸೇರಿಸುವು ಮೂಲಕ ಸೂಚಿಸಲ್ಪಡುತ್ತವೆ. A1 ಶೈಲಿಯನ್ನು ಬಳಸುವ ಅತ್ಯಂತ ಇತ್ತೀಚಿನ ಸ್ಪ್ರೆಡ್‌ಷೀಟ್‌ಗಳು ಹೊಂದಾಣಿಕೆಯ ರೂಪದಲ್ಲಿ R1C1 ಶೈಲಿಯನ್ನು ಒದಗಿಸುತ್ತವೆ.

ಕೋಶವೊಂದರ ಪ್ರದರ್ಶಿತ ಮೌಲ್ಯವನ್ನು ಪರಿಷ್ಕರಿಸಲು ಕಂಪ್ಯೂಟರ್‌ ಅದೇ ಕೋಶದಲ್ಲಿನ ಸೂತ್ರವನ್ನು ಗಣಿಸಿದಲ್ಲಿ, ಆ ಕೋಶದ ಉಲ್ಲೇಖ, ಇನ್ಯಾವುದೋ ಕೋಶವನ್ನು ಹೆಸರಿಸುವ ಕಾರಣದಿಂದಾಗಿ, ಹೆಸರಿಸಲಾದ ಆ ಸೆಲ್‌ನ ಮೌಲ್ಯವನ್ನು ಒಯ್ಯಲಾಗುತ್ತದೆ.

ಒಂದೇ 'ಷೀಟ್'ನಲ್ಲಿರುವ ಕೋಶವನ್ನು ಸಾಮಾನ್ಯವಾಗಿ ಈ ರೀತಿ ಕರೆಯಲಾಗುತ್ತದೆ:-

=A1

ಒಂದೇ ಸ್ಪ್ರೆಡ್‌ಷೀಟ್‌ನ ಬೇರೆ ಷೀಟ್‌ನಲ್ಲಿರುವ ಕೋಶವನ್ನು ಸಾಮಾನ್ಯವಾಗಿ ಹೀಗೆಂದು ಕರೆಯಲಾಗುತ್ತದೆ:-

=SHEET2!A1 (ಅರ್ಥಾತ್‌, ಅದೇ ಸ್ಪ್ರೆಡ್‌ಷೀಟ್‌ನಲ್ಲಿರುವ ಎರಡನೆಯ ಷೀಟ್‌ನ ಮೊದಲನೆಯ ಕೋಶ).

ಕೆಲವು ಸ್ಪ್ರೆಡ್‌ಷೀಟ್‌ ಬಳಕೆಗಳು ಬೇರೊಂದು ಸ್ಪ್ರೆಡ್‌ಷೀಟ್‌ (ಪ್ರಸ್ತುತದಲ್ಲಿ ತೆರೆದಿರುವ ಹಾಗು ಸಕ್ರಿಯವಾಗಿರುವ ಫೈಲ್) ನ ಕೋಶ ಉಲ್ಲೇಖಕಗಳಿಗೆ ಅದೇ ಕಂಪ್ಯೂಟರ್‌ನಲ್ಲಿ ಅಥವಾ ಸ್ಥಳಿಯ ಸಂಪರ್ಕಗಳಲ್ಲಿ ಅವಕಾಶ ನೀಡುತ್ತವೆ. ಹಂಚಕೆಮಾಡಬಹುದಾದ ಸಂಪರ್ಕದಲ್ಲಿ ಅಥವಾ ಒಂದೇ ಕಂಪ್ಯೂಟರ್ ನಲ್ಲಿ ಸಕ್ರಿಯವಾಗಿರುವ ಹಾಗು ತೆರೆದಿರುವ ಬೇರೊಂದು ಸ್ಪ್ರೆಡ್‌ಷೀಟ್‌ನ ಕೋಶವನ್ನು ಕೂಡ ಸೂಚಿಸಬಲ್ಲದು. ಈ ಸೂಚಕಗಳು ಸಂಪೂರ್ಣವಾಗಿ ಕಡತದ ಹೆಸರನ್ನು ಒಳಗೊಂಡಿರುತ್ತವೆ ಉದಾಹರಣೆಗೆ:-

='C:\Documents and Settings\Username\Myspreadsheets\[main sheet]Sheet1!A1

ಸ್ಪ್ರೆಡ್‌ಷೀಟ್‌ನಲ್ಲಿ ಹೊಸ ಅಡ್ಡಸಾಲು ಅಥವಾ ನೀಟಸಾಲು ಸೇರಿಸಿದಾಗ ಅಥವಾ ತೆಗೆದುಹಾಕಿದಾಗ ಕೋಶಗಳಿಗೆ ಉಲ್ಲೇಖಕಗಳು ಸ್ವಯಂಚಾಲಿತವಾಗಿ ದಾಖಲಿಸಲಾಗುತ್ತವೆ (ಪರಿಷ್ಕೃತವಾಗುತ್ತವೆ). ಅದೇನೇ ಆದರೂ, ನೀಟಸಾಲುಗಳ ಒಟ್ಟು ಮೊತ್ತ ಸೂತ್ರ ಹೊಂದಿರುವ ಕೋಶಕ್ಕೆ ಮುಂಚೆ ಒಂದು ಅಡ್ಡಸಾಲು ಸೇರಿಸುವಾಗ, ಹೊಸದಾಗಿ ಸೇರಿಸಲಾದ ಅಡ್ಡಸಾಲಿನ ಮೌಲ್ಯವನ್ನೂ ಸೇರಿಸುವಂತೆ ಬಹಳ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ (ಹಣಕಾಸು ಮಾಹಿತಿಯ ಸ್ಪ್ರಡ್‌ಷೀಟ್‌ನಲ್ಲಿ) ಎಡವಟ್ಟಾಗುವುದು ಖಂಡಿತ.

ಒಂದು ಕೋಶದಲ್ಲಿನ ಸೂತ್ರವು ಉಲ್ಲೇಖಕಗಳ ಸರಣಿಯ ಮೂಲಕ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸೂಚಿಸಲಾದಾಗ ವರ್ತುಲ ಉಲ್ಲೇಖಕ ಎನ್ನಲಾಗುತ್ತದೆ. ಉಲ್ಲೇಖಕಗಳ ಸರಣಿಯಲ್ಲಿ ಪ್ರತಿಯೊಂದು ಕೋಶವೂ ಮತ್ತೊಂದು ಕೋಶವನ್ನು ಉಲ್ಲೇಖಿಸುತ್ತದೆ. ಒಂದು ಕೋಶವನ್ನು ಉಲ್ಲೇಖಿಸುವ ಮೂಲಕ ಇದು ಸರಣಿಯ ಮುಂದಿನ ಕೋಶದ ಬೇರೊಂದು ಉಲ್ಲೇಖಕವನ್ನು ಹೊಂದಿರುತ್ತದೆ. ಅನೇಕ ಸಾಮಾನ್ಯ ರೀತಿಯ ದೋಷಗಳು ವರ್ತುಲಾಕಾರದ ಉಲ್ಲೇಖಕಗಳಿಗೆ ಕಾರಣವಾಗುತ್ತವೆ. ಆದರೂ, ಈ ವರ್ತುಲಾಕಾರದ ಸೂಚಕಗಳನ್ನು ಬಳಸಲು ಕೆಲವು ಸರಿಯಾದ ವಿಧಾನಗಳಿವೆ. ಅಂತಹ ವಿಧಾನಗಳು ಸ್ಪ್ರೆಡ್‌ಷೀಟ್‌ನ್ನು ಅನೇಕ ಬಾರಿ ಮರುಗಣನೆ ಮಾಡಿದ ನಂತರ (ಸಾಮಾನ್ಯವಾಗಿ) ಆ ಕೋಶಗಳಿಗೆ ಸರಿಯಾದ ಪರಿಮಾಣಗಳು ಹೋಗಿ ಸೇರುವಂತೆ ಮಾಡುತ್ತವೆ.

ಕೋಶ ವ್ಯಾಪ್ತಿಗಳು ಬದಲಾಯಿಸಿ

ಇದೇ ರೀತಿಯಾಗಿ, ಹೆಸರಿಸಲಾದ ಕೋಶದ ಶ್ರೇಣಿಗಳನ್ನು ಬಳಸುವ ಬದಲಿಗೆ ಶ್ರೇಣಿ ಉಲ್ಲೇಖಕವನ್ನು ಬಳಸಬಹುದು. ಕೋಶದ ಶ್ರೇಣಿ ಉಲ್ಲೇಖಕವು ವಿಶಿಷ್ಟವಾಗಿ, ಉದಾಹರಣೆಗೆ, A1 ಇಂದ A6 ವ್ಯಾಪ್ತಿಯಲ್ಲಿರುವ ಎಲ್ಲಾ ಕೋಶಗಳನ್ನು ಉಲ್ಲೇಖಿಸುತ್ತದೆ (A1:A6). ಸೂತ್ರವು ಉದಾಹರಣೆಗೆ, A1 ಇಂದ A6 ವ್ಯಾಪ್ತಿಯಲ್ಲಿರುವ ಎಲ್ಲಾ ಕೋಶಗಳ ಮೌಲ್ಯವನ್ನು ಕೂಡಲು ಬಳಸಲಾದ "=SUM(A1:A6)" ಸೂತ್ರವು, ಅ ಕೋಶಗಳಲ್ಲಿನ ಮೌಲ್ಯಗಳನ್ನು ಕೂಡಿ, ಕೂಡುವ ಸೂತ್ರ ಹೊಂದಿರು ಕೋಶದಲ್ಲಿ ಫಲಿತಾಂಶವನ್ನು ಪ್ರದರ್ಶಿಸುತ್ತದೆ.

ಷೀಟ್‌ಗಳು ಬದಲಾಯಿಸಿ

ಆರಂಭಕಾಲದ ಸ್ಪ್ರೆಡ್‌ಷೀಟ್‌ ಆನ್ವಯಿಕೆಗಳಲ್ಲಿ ಕೋಶಗಳು ಸರಳವಾದ ದ್ವಿವಿಮಿತೀಯ ಗೆರೆಗಳ ರೂಪದಲ್ಲಿದ್ದವು. ಅನೇಕ ವರ್ಷಗಳ ನಂತರ ಮೂರನೆಯ ವಿಮಿತಿಯನ್ನು ಸೇರಿಸಿಕೊಂಡು ವಿಸ್ತರಿತವಾಯಿತು. ಜೊತೆಗೆ, ಕೆಲವು ಸಂದರ್ಭಗಳಲ್ಲಿ ಷೀಟ್ಸ್ ಎನ್ನಲಾದ, ಹೆಸರಿಸಲಾದ ಜಾಲಗಳ ಸರಣಿಯನ್ನು ಸಹ ಒಳಗೊಳ್ಳಲು ಮಾದರಿಯನ್ನು ವೃದ್ಧಿಗೊಳಿಸಲಾಯಿತು. ಅತ್ಯಂತ ಮುಂದುವರೆದ ಸ್ಪ್ರೆಡ್‌ಷೀಟ್‌ ಆನ್ವಯಿಕೆಗಳಲ್ಲಿ ಅನೇಕ ರೀತಿಯಲ್ಲಿ ದತ್ತಾಂಶವನ್ನು ರೂಪಿಸುವ ಹಾಗು ವಿಭಾಗಿಸುವ ವಿಲೋಮಕ್ರಿಯೆ ಮತ್ತು ಆವರ್ತವಾಗುವ ಕ್ರಿಯೆಗಳಿಗೆ ಅವಕಾಶ ನೀಡುತ್ತವೆ.

ಸೂತ್ರಗಳು (ಸಮೀಕರಣಗಳು) ಬದಲಾಯಿಸಿ

 
ಸರಳವಾದ ಸ್ಪ್ರೆಡ್‌ಷೀಟ್‌ನ ಅನಿಮೇಷನ್ಸ್ ಎಡಗಡೆಯ ನೀಟಸಾಲಿನಲ್ಲಿ ಪರಿಮಾಣವನ್ನು 2 ರಿಂದ ಗುಣಿಸುತ್ತದೆ, ನಂತರ ಕೆಳಗಿನ ಕೋಶದ ಬಲಗಡೆಯ ನೀಟಸಾಲಿನಿಂದ ಎಣಿಸಿದಂತಹ ಪರಿಮಾಣವನ್ನು ಕೂಡುತ್ತದೆ.ಈ ಉದಾಹರಣೆಯಲ್ಲಿ ಕೇವಲ A ನೀಟಸಾಲಿನಲ್ಲಿರುವ ಪರಿಮಾಣಗಳನ್ನು ಮಾತ್ರ ದಾಖಲಿಸಲಾಗಿದೆ(10, 20, 30), ಹಾಗು ಕೋಶದಲ್ಲಿ ಉಳಿದಿಕೊಂಡವುಗಳು ಸೂತ್ರಗಳಾಗಿವೆ. ಸಂಬಂಧ ಸೂಚಕಗಳನ್ನು ಬಳಸಿಕೊಂಡು B ನೀಟಸಾಲಿನಲ್ಲಿರುವ ಸೂತ್ರ A ನೀಟಸಾಲಿನ ಪರಿಮಾಣವನ್ನು ಗುಣಿಸುತ್ತದೆ. ಅಲ್ಲದೇ B4 ನಲ್ಲಿರುವ ಸೂತ್ರ B1:B3 ಶ್ರೇಣಿಯಲ್ಲಿರುವ ಪರಿಮಾಣದ ಮೊತ್ತವನ್ನು ಕಂಡುಹಿಡಿಯಲು SUM() ಕಾರ್ಯವನ್ನು ಬಳಸುತ್ತದೆ.

ಸೂತ್ರವು ತಾನಿರುವ ಕೋಶದಲ್ಲಿ ಫಲಿತಾಂಶವನ್ನು ನಮೂದಿಸಲು, ಬೇಕಾದ ಅಗತ್ಯ ಗಣನೆಯನ್ನು ಗುರುತಿಸುತ್ತದೆ. ಆದ್ದರಿಂದ, ಸೂತ್ರವನ್ನು ಹೊಂದಿರುವ ಕೋಶವು ಎರಡು ಪ್ರದರ್ಶನಾ ಅಂಶಗಳನ್ನು ಹೊಂದಿರುತ್ತದೆ - ಒಂದು ಸೂತ್ರ, ಹಾಗೂ ಎರಡನೆಯದು, ಫಲಿತಾಂಶ ಪ್ರಾಪ್ತ ಮೌಲ್ಯ. ವಿಶಿಷ್ಟ ಕೋಶದ ಮೇಲೆ ಮೌಸ್‌ನ್ನು ಕ್ಲಿಕ್‌ ಮಾಡಿದಾಗ ಮಾತ್ರ ಸೂತ್ರವು ಪ್ರದರ್ಶಿತವಾಗುತ್ತದೆ. ಇಲ್ಲದಿದ್ದಲ್ಲಿ, ಇದು ಸೂತ್ರ ನಡೆಸಿದ ಗಣನೆಯ ಫಲಿತಾಂಶವನ್ನು ಪ್ರದರ್ಶಿಸುತ್ತದೆ.

ಸೂತ್ರವು ಕೋಶಕ್ಕೆ ಅಥವಾ ಕೋಶಗಳ ಶ್ರೇಣಿಗೆ ಮೌಲ್ಯವನ್ನು ನಮೂದಿಸುತ್ತದೆ. ಇದು ಮಾದರಿಯಾಗಿ ಈ ರೀತಿಯಿರುತ್ತದೆ.

=expression
ಮೇಲಿನ ಗಣಿತೀಯ ಉಕ್ತಿ ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತದೆ:

ಕೋಶ ಸೂತ್ರವನ್ನು ಒಳಗೊಂಡಾಗ ಇದು ಯಾವಾಗಲೂ ಇತರೆ ಕೋಶಗಳ ಉಲ್ಲೇಖಕಗಳನ್ನು ಒಳಗೊಂಡಿರುತ್ತದೆ. ಇಂತಹ ಕೋಶ ಉಲ್ಲೇಖಕ ಒಂದು ವಿಧದ ಚರ (ಬದಲಾಗಬಲ್ಲ) ಮೌಲ್ಯವಾಗಿದೆ. ಇದರ ಮೌಲ್ಯವು, ಉಲ್ಲೇಖಿಸಲಾದ ಕೋಶದ ಮೌಲ್ಯವಾಗಿದೆ ಅಥವಾ ಇದರಿಂದ ಪಡೆದುಕೊಂಡಿರುವುದಾಗಿದೆ. ಆ ಕೋಶವು ಸರದಿಯಲ್ಲಿ ಇತರ ಕೋಶಗಳ ಉಲ್ಲೇಖಕವಾದಲ್ಲಿ, ಇದರ ಮೌಲ್ಯವು ಅವುಗಳ ಮೌಲ್ಯವನ್ನು ಅವಲಂಬಿಸಿರುತ್ತದೆ. ಉಲ್ಲೇಖಕಗಳು ಸಂಬಂಧ-ಸೂಚಕವಾಗಿಬಹುದು (ಉದಾಹರಣೆಗೆ, A1 ಅಥವಾ B1:B3); ಸ್ವತಂತ್ರವಾಗಿರಬಹುದು (ಉದಾಹರಣೆಗೆ, $A$1 ಅಥವಾ $B$1:$B$3); ಅಥವಾ ಸಂಕೀರ್ಣ ಅಡ್ಡಸಾಲಿನಂತಹ ಅಥವಾ ನೀಟಸಾಲಿನಂತಹ ಸ್ವತಂತ್ರ/ಸಂಬಂಧ ಉಲ್ಲೇಖಕವಾಗಿರಬಹುದು (ಉದಾಹರಣೆಗೆ, $A1 ನೀಟಸಾಲಿನಂತೆ ಸ್ವತಂತ್ರವಾಗಿದೆ ಮತ್ತು A$1 ಅಡ್ಡಸಾಲಿನಂತೆ ಸ್ವತಂತ್ರವಾಗಿದೆ).

ಸಿಂಧುವಾದ ಸೂತ್ರಗಳಿಗೆ ಲಭ್ಯ ಆಯ್ಕೆಗಳು ಸ್ಪ್ರೆಡ್‌ಷೀಟ್‌ನ ನಿರ್ದಿಷ್ಟ ಅಳವಡಿಸುವಿಕೆಯನ್ನು ಅವಲಂಬಿಸಿರುತ್ತವೆ. ಆದರೆ, ಸಾಮಾನ್ಯವಾಗಿ ಬಹುಪಾಲು ಅಂಕಗಣಿತ ಕ್ರಿಯೆಗಳು (ಅರಿತ್ಮೆಟಿಕ್ ಆಪರೇಷನ್ಸ್) ಹಾಗೂ ಸಂಕೀರ್ಣವಾದ ಸ್ವತಂತ್ರವಲ್ಲದ ಕ್ರಿಯೆಗಳು ಇಂದಿನ ವಾಣಿಜ್ಯ ಸ್ಪ್ರೆಡ್‌ಷೀಟ್‌ ಗಳಿಂದ ನಡೆಯಲ್ಪಡುತ್ತವೆ. ಆಧುನಿಕ ಬಳಕೆಗಳು ಕೂಡ ಸಾಂಪ್ರದಾಯಿಕ ರೂಡಿಯಲ್ಲಿರುವ ಕಾರ್ಯಗಳ, ಹೊರಗಿನ ದತ್ತಾಂಶದ ಮತ್ತು ಆನ್ವಯಿಕೆಗಳನ್ನು ಪಡೆಯುವ ಕಾರ್ಯನಿರ್ವಹಣೆಯ ಅವಕಾಶ ನೀಡಬಹುದು.

ಸೂತ್ರವು ನೈಜ ಗಣನೆಯಿಲ್ಲದೇ, ಒಂದ ಸೋಪಾಧಿಕತೆ ಅಥವಾ ಒಂದರೊಳಗೆ ಇನ್ನೊಂದು ಸೋಪಾಧಿಕತೆ ಹೊಂದಿರುತ್ತದೆ. ಇದನ್ನು ಕೆಲವೊಮ್ಮೆ ದೋಷಗಳನ್ನು ಗುರುತಿಸಿ ತಿಳಿಸಲು ಬಳಸಲಾಗಿದೆ. ಕೆಳಗಿನ ಉದಾಹರಣೆಯಲ್ಲಿ, ನೀಟಸಾಲಿನ ಕೋಶಗಳಲ್ಲಿನ (A1 ನಿಂದ A6) ಮೌಲ್ಯಗಳ ಮೊತ್ತದ ಸಿಂಧುತ್ವವನ್ನು ಪರಿಶೀಲಿಸಿ, ಬಲಭಾಗ ಪಕ್ಕದ ಕೋಶದಲ್ಲಿ ಸುಸ್ಪಷ್ಟ, ಸೂಕ್ತ ನಿರ್ಣಯವನ್ನು ನಮೂದಿಸಲಾಗುತ್ತದೆ.

=IF(SUM(A1:A6) > 100, "More than 100%", SUM(A1:A6))

ಸ್ಪ್ರೆಡ್‌ಷೀಟ್‌ನಲ್ಲಿ ಯಾವಾಗಲೂ ಸೂತ್ರಗಳೇ ಇರಬೇಕೆಂಬ ನಿಯಮವಿಲ್ಲ. ದಿನಚರಿ, ವೇಳಾಪಟ್ಟಿ ಅಥವಾ ಸರಳ ಪಟ್ಟಿಯಂತಹ ಮಾಹಿತಿಯನ್ನು ಅಡ್ಡಸಾಲು ಮತ್ತು ನೀಟಸಾಲುಗಳಲ್ಲಿ ಜೋಡಿಸಲಾದ ದತ್ತಾಂಶಸಂಗ್ರಹವೂ ಆಗಿರಬಹುದು. ಇದರ ಸುಲಭ ಬಳಕೆ, ದತ್ತಾಂಶ ಸಿದ್ಧಗೊಳಿಸಿರುವಿಕೆ ಮತ್ತು ಅಂತರಜಾಲ ಕೊಂಡಿ ಸಂಪರ್ಕ ಸಾಮರ್ಥ್ಯ - ಈ ಸೌಲಭ್ಯಗಳನ್ನು ಹೊಂದಿರುವ ಕಾರಣ ಹಲವು ಸ್ಪ್ರೆಡ್‌ಷೀಟ್‌ಗಳನ್ನು ದತ್ತಾಂಶ ಸಂಗ್ರಹ ಮಾಹಿತಿಗಾಗಿ ಬಳಸಲಾಗುತ್ತವೆ.

ಕಾರ್ಯಚಟುವಟಿಕೆಗಳು ಬದಲಾಯಿಸಿ

ಸ್ಪ್ರೆಡ್‌ಷೀಟ್‌ ಸಾಮಾನ್ಯವಾಗಿ ಕೂಡುವಿಕೆ, ಸರಾಸರಿ ಗಣನೆ ಇತ್ಯಾದಿಯಂತಹ ಅಂಕಗಣಿತದ ಕಾರ್ಯಗಳು; ತ್ರಿಕೋನಮೀತಿಯ ಕಾರ್ಯಗಳು, ಇತ್ಯಾದಿ ಅನೇಕ ಕಾರ್ಯನಿರ್ವಹಣೆಗಳನ್ನು ಒಳಗೊಂಡಿದೆ. ಇದರ ಜೊತೆಯಲ್ಲಿ ಬಳಕೆದಾರರು ಸೂಚಿಸುವ ಕಾರ್ಯಗಳಿ ಗೂ ಅವಕಾಶವಿದೆ. ಮೈಕ್ರೊಸಾಫ್ಟ್‌ ಎಕ್ಸೆಲ್ ಸ್ಪ್ರೆಡ್‌ಷೀಟ್‌ ಅನ್ವಯಿಕೆಯಲ್ಲಿ, ವಿಷುಯಲ್‌ ಬೇಸಿಕ್‌ ಎಡಿಟರ್‌ನಲ್ಲಿ ಒದಗಿಸಲಾದ ವಿಷುಯಲ್‌ ಬೇಸಿಕ್‌ ಫಾರ್‌ ಅಪ್ಲಿಕೇಷನ್ಸ್‌ (Visual Basic for Applications) ಬಳಸಿ ವ್ಯಾಖ್ಯಾನಿಸಲಾಗಿದೆ. ‌ಇಂತಹ ವರ್ಕ್‌ಷೀಟ್‌ನಲ್ಲಿ ಅಪ್ರಯತ್ನವಾಗಿ ನೇರವೇರಲ್ಪಡುತ್ತವೆ. ಇದರ ಜೊತೆಯಲ್ಲಿ, ವರ್ಕ್‌ಷೀಟ್‌ನಲ್ಲಿರುವ ಮಾಹಿತಿಯನ್ನು ತೆಗೆದುಕೊಂಡು, ಗಣಿಸಿ, ಅದರ ಫಲಿತಾಂಶವನ್ನು ಮತ್ತೆ ವರ್ಕ್‌ಷೀಟ್‌ಗೆ ಹಿಂದಿರುಗಿಸುವಂತಹ ಆದೇಶಸರಣಿಯನ್ನು ಕೂಡ ಬರೆಯಬಹುದು. ಮೇಲಿನ ಚಿತ್ರದಲ್ಲಿ sq ಎಂಬುದು ಬಳಕೆದಾರ ನಮೂದಿಸಿರುವ ಹೆಸರಾಗಿದೆ; ಹಾಗೂ sq ಕಾರ್ಯವನ್ನು ಎಕ್ಸೆಲ್‌ ಜೊತೆಯಲ್ಲಿ ಒದಗಿಸಲಾಗಿರುವವಿಶ್ಯುಅಲ್ ಬೇಸಿಕ್ ಎಡಿಟರ್‌ನ್ನು ಬಳಸಿಕೊಂಡು ಪರಿಚಯಿಸಲಾಗಿದೆ. ನೇಮ್ ಮ್ಯಾನೇಜರ್ (Name Manager) ಸ್ಪ್ರೆಡ್‌ಷೀಟ್‌ನ ಹೆಸರಿಸಲ್ಪಟ್ಟ ಬದಲಾಯಿಸಬಲ್ಲ ಮೌಲ್ಯಗಳ x & y ವ್ಯಾಕ್ಯಾನವನ್ನು ತೋರಿಸುತ್ತದೆ.

ಉಪನಿಯತ ಕಾರ್ಯಗಳು ಬದಲಾಯಿಸಿ

 
x ಅನ್ನು y ಆಗಿಸಿ ಲೆಕ್ಕ ಮಾಡುವ ಮೂಲಕ ಮೈಕ್ರೊಸಾಫ್ಟ್‌ ಎಕ್ಸೆಲ್‌ ನಲ್ಲಿ ಸಬ್ ರೂಟೀನ್ ಪರಿಮಾಣವನ್ನು ಬರೆಯುತ್ತದೆ.

ಕಾರ್ಯಗಳು ಸ್ವತಃ ವರ್ಕ್‌ಷೀಟ್‌ನಲ್ಲಿ ನಮೂದಿಸುವುದಿಲ್ಲ. ಆದರೆ ಗಣನೆಯ ಕ್ರಿಯೆಗಳ ಮೊತ್ತವನ್ನು ಸ್ಪ್ರೆಡ್‌ಷೀಟ್‌ಗೆ ಹಿಂದಿರುಗಿಸುತ್ತವೆ. ಆದರೂ ಮೈಕ್ರೊಸಾಫ್ಟ್‌ ಎಕ್ಸೆಲ್‌ನಲ್ಲಿ, ಸಬ್‌ರೂಟೀನ್‌ಗಳು (ಉಪ-ನಿಯತಕಾರ್ಯಗಳು) ಸ್ಪ್ರೆಡ್‌ಷೀಟ್‌ಗೆ ನೇರವಾಗಿ ಸಬ್‌ರೂಟೀನ್‌ನೊಳಗೆ ಕಂಡುಬರುವ ಪಠ್ಯ ಮತ್ತು ಮೌಲ್ಯವನ್ನು ಸೇರಿಸಯಬಹುದು. ಮೇಲ್ಕಂಡ ಚಿತ್ರದಲ್ಲಿ ಒಂದು ವಿಷುಯಲ್‌ ಬೇಸಿಕ್‌ ಸಂಕೇತಸಂಗ್ರಹವಿದೆ. ಇದರ ಉಪ-ನಿಯತಕಾರ್ಯವು ನೀಟಸಾಲಿನಲ್ಲಿರುವ ಬದಲಾಗಬಲ್ಲ ಮೌಲ್ಯ x ನ ಪ್ರತಿಯೊಂದು ಕೋಶದ ಮೌಲ್ಯವನ್ನು ಗುರುತಿಸಿ, ಅದರ ವರ್ಗವನ್ನು ಗಣಿಸಿ, ಇದರ ಮೌಲ್ಯವನ್ನು ಸೂಚಿಸಲಾದ ನೀಟಸಾಲಿನಲ್ಲಿನ ಬದಲಾಗಬಲ್ಲ ಮೌಲ್ಯ y ಕೋಶದಲ್ಲಿ ಪ್ರದರ್ಶಿಸುತ್ತದೆ. y -ನೀಟಸಾಲು ಯಾವುದೇ ಸೂತ್ರವನ್ನು ಒಳಗೊಂಡಿರುವುದಿಲ್ಲ ಏಕೆಂದರೆ ಇದರ ಮೌಲ್ಯವು ಉಪ-ನಿಯತಕಾರ್ಯದಲ್ಲಿ ಎಣಿಸಲ್ಪಡುತ್ತದೆಯೇ ಹೊರತು ಸ್ಪ್ರೆಡ್‌ಷೀಟ್‌ನಲ್ಲಿ ಅಲ್ಲ. ಇದರಲ್ಲಿ ಆ ಮೌಲ್ಯವನ್ನು ಕೇವಲ ಪ್ರದರ್ಶಿಸಲಾಗುತ್ತದೆ.

ರಿಮೋಟ್ (ದೂರದ/ಪರೋಕ್ಷ) ಸ್ಪ್ರೆಡ್‌ಷೀಟ್‌ ಬದಲಾಯಿಸಿ

ಪ್ರಸ್ತುತದ ಸ್ಪ್ರೆಡ್‌ಷೀಟ್‌ ಕಡತದಲ್ಲಿ ಇಲ್ಲದಂತಹ ಕೋಶಗಳಿಗೆ ಅಥವಾ ಕೋಶಗಳ ಗುಂಪನ್ನು ಯಾವಾಗ ಉಲ್ಲೇಖಿಸಲಾಗುತ್ತದೋ ಆಗ ಅದನ್ನು "ರಿಮೋಟ್ (ಪರೋಕ್ಷ)" ಸ್ಪ್ರೆಡ್‌ಷೀಟ್‌ ಎನ್ನಲಾಗುತ್ತದೆ. ಉಲ್ಲೇಖಿಸಲಾದ ಕೋಶದ ವಿಷಯಗಳನ್ನು ಕೈಯಿಂದ ದಾಖಲಿಸಲ್ಪಟ್ಟ ಮೊದಲನೆಯ ಉಲ್ಲೇಖಕದ ಮೂಲಕ ಪ್ರವೇಶಿಸಬಹುದು ಅಥವಾ ನಿರ್ದಿಷ್ಟ ಆಟೋಮೆಟಿಕ್ ರಿಫ್ರೆಶ್ ಇಂಟರ್ವಲ್‌ನ ಜೊತೆಯಲ್ಲಿ ನಿಜಾವಧಿಗೆ ಸನಿಹದ ಮೂಲಕ ಅತ್ಯಂತ ಇತ್ತೀಚೆಗೆ ಅಂತರಜಾಲ-ಆಧಾರಿತ ಸ್ಪ್ರೆಡ್‌ಷೀಟ್‌ಗಳ ಮೂಲಕ ಪ್ರವೇಶಿಸಬಹುದು.

ಚಾರ್ಟ್ಸ್ (ಪಟ್ಟಿಗಳು) ಬದಲಾಯಿಸಿ

 
ಮೈಕ್ರೊಸಾಫ್ಟ್‌ ಎಕ್ಸೆಲ್‌ ಅನ್ನು ಬಳಸಿಕೊಂಡು ಗ್ರಾಫ್ ಮಾಡಲಾಗಿದೆ

ಅನೇಕ ಸ್ಪ್ರೆಡ್‌ಷೀಟ್‌ ಆನ್ವಯಿಕೆಗಳು ನಿರ್ದಿಷ್ಟ ಕೋಶಗಳ ಗುಂಪಿನಿಂದ ರಚಿಸಲ್ಪಟ್ಟ ಕೋಷ್ಟಕಗಳು, ಗ್ರಾಫ್ಅಥವಾ ಹಿಸ್ಟೊಗ್ರಾಮ್(ಊತಕ ಲೇಖ) ರಚಿಸುವ ಸೌಲಭ್ಯ ಒದಗಿಸಿದೆ. ಇವುಗಳು ಕೋಶದ ಒಳಗಿರುವ ಮೌಲ್ಯಗಳು ಬದಲಾದಂತೆ ಸಕ್ರಿಯವಾಗಿ ಪುನರ್ನಿರ್ಮಿಸುತ್ತವೆ. ರಚಿಸಲ್ಪಟ್ಟ ಗ್ರಾಫಿಕ್ ಘಟಕಗಳು ಪ್ರಸ್ತುದದಲ್ಲಿರುವ ಷೀಟ್‌ನೊಳಗೆ ಸೇರಿಸಿಕೊಳ್ಳಲಾಗುತ್ತದೆ ಅಥವಾ ಪ್ರತ್ಯೇಕ ವಸ್ತುವಿನಂತೆ ಸೇರಿಸಲಾಗುತ್ತದೆ.

ಬಹುವಿಮಿತೀಯ ಸ್ಪ್ರೆಡ್‌ಷೀಟ್‌ಗಳು ಬದಲಾಯಿಸಿ

1980ರ ದಶಕದ ಉತ್ತರಾರ್ಧದಲ್ಲಿ ಹಾಗೂ 1990ರ ದಶಕದ ಪೂರ್ವಾರ್ಧದಲ್ಲಿ, ಸಾಂಪ್ರದಾಯಿಕ ಸ್ಪ್ರೆಡ್‌ಷೀಟ್‌ ಮಾದರಿಗಳಲ್ಲಿ ಮೊದಲು ಜಾವಲೀನ್ ಸಾಫ್ಟ್‌ವೇರ್, ನಂತರ ಲೋಟಸ್ ಇಂಪ್ರೂವ್‌ ಕಾಣಿಸಿಕೊಂಡವು. ಇವುಗಳನ್ನು 'ಬದಲಾಗಬಲ್ಲ ಮೌಲ್ಯಗಳು' ಎನ್ನಲಾದ ವಸ್ತುಗಳ ಮೇಲೆ ರಚಿಸಲಾದ ಮಾದರಿಗಳನ್ನು ಬಳಸಿದವು. ಈ ಬಹುವಿಮೀತಿಯ ಸ್ಪ್ರೆಡ್‌ಷೀಟ್‌ಗಳು ಏಕಕಾಲದ ಬಹುಘಟಕಗಳುಗಳನ್ನು ಏಕಕಾಲದಲ್ಲೇ ನೋಡುವುದನ್ನು ಒಳಗೊಂಡಂತೆ ಅವುಗಳೇ ದಾಖಲಿಸಬಹುದಾದ ಅನೇಕ ರೀತಿಗಳಲ್ಲಿ ದತ್ತಾಂಶವನ್ನು ಮತ್ತು ಗಣನೆಗಳನ್ನು ನೋಡುತ್ತಿರಲು ಸಾಧ್ಯವಾಗಿಸುತ್ತದೆ. ಉದಾಹರಣೆಗೆ, ಪ್ರತಿಯೊಂದು ಬದಲಾಗಬಲ್ಲ ಮೌಲ್ಯಗಳ ತಾರ್ಕಿಕ ಆಧಾರ ಮತ್ತು ಶಾಖೆಗಳನ್ನು ಗಮನಿಸುತ್ತ, ಜಾವಲಿನ್‌ ತಂತ್ರಾಂಶದ ಬಳಕೆದಾರರು ರೇಖಾಚಿತ್ರದಲ್ಲಿ ಪ್ರತಿಯೊಂದು ಬದಲಾಗಬಲ್ಲ ಮೌಲ್ಯಗಳ ನಡುವಣ ಸಂಬಂಧಗಳನ್ನು ಚಾಲಿಸಬಹುದು. ಬಹುಶಃ ಇದು ಮುಂಚೆ ಇದ್ದ ಜಾವಲಿನ್ ತಂತ್ರಾಂಶದ ಪ್ರಾಥಮಿಕ ಕೊಡುಗೆಗೆ ಉದಾಹರಣೆಯಾಗಿದೆ. ಬಳಕೆದಾರರ ತರ್ಕವನ್ನು ಕಂಡುಹಿಡಿಯುವ ಪರಿಕಲ್ಪನೆ ಅಥವಾ ಅದರ ಹನ್ನೆರಡು ದೃಶ್ಯಗಳ ಮೂಲಕ ಮಾದರಿ ವಿನ್ಯಾಸದ ಉದಾಹರಣೆಯಾಗಿದೆ. ಸಂಕೀರ್ಣ ಮಾದರಿಯ ರಚನಾಕಾರ್ಯದಲ್ಲಿ ತೊಡಗಿಲ್ಲದವರು ಅದನ್ನು ಬಿಡಿಸಿ ಅರ್ಥಮಾಡಿಕೊಳ್ಳಬಹುದಾಗಿದೆ. ಇದು ಇಂದಿಗೂ ಸಹ ಅಪೂರ್ವ ಲಕ್ಷಣವಾಗಿದೆ. ಪ್ರಾಥಮಿಕವಾಗಿ, ಜಾವಲಿನ್ ತಂತ್ರಾಂಶವ‌ನ್ನು ಆರ್ಥಿಕ ಮಾದರಿಗಳನ್ನು ರೂಪಿಸಲು ಬಳಸಲಾಗುತ್ತಿತ್ತು. ಅಲ್ಲದೇ ಕಾಲೇಜ್‌ಗಳಲ್ಲಿ ರಸಾಯಸಶಾಸ್ತ್ರ ವಿಷಯಗಳಲ್ಲಿ ನಿರ್ದೇಶನ ಮಾದರಿ, ಹಾಗೂ ಪ್ರಪಂಚದ ಆರ್ಥಿಕ ನಿರ್ವಹಣೆಯ ಮಾದರಿಗಳು ಮತ್ತು ಸೇನೆಯಲ್ಲಿ 'ಸ್ಟಾರ್ ವಾರ್ಸ್'‌ ಯುದ್ಧ ಯೋಜನೆಗಳ ಮಾದರಿಯ ಅರಂಭಹಂತದಲ್ಲಿ ರೂಪಿಸಲೂ ಕೂಡ ಬಳಸಲಾಗಿತ್ತು.

ಇದನ್ನು ಮಾದರಿ ಭದ್ರತೆಯೇ ಮುಖ್ಯ ಧ್ಯೇಯವಾಗಿರುವಂತಹ ಸಂಸ್ಥೆಗಳಲ್ಲಿ ಇದನ್ನು ಇಂದಿಗೂ ಬಳಸಲಾಗುತ್ತಿದೆ.

ಈ ಪ್ರೋಗ್ರಾಮ್‌ನಲ್ಲಿ ಕಾಲಸರಣಿ ಅಥವಾ ಯಾವುದೇ ಬದಲಾಗಬಲ್ಲ ಮೌಲ್ಯಗಳು ನಿರ್ವಹಣೆಯ ವಿವರವಾಗಿರುತ್ತವೆ ಹೊರತು ಅಡ್ಡಸಾಲು ಅಥವಾ ನೀಟಸಾಲಿನಲ್ಲಿ ಬರುವಂತಹ ಕೋಶಗಳ ಸಂಗ್ರಹವಾಗಿರುವುದಿಲ್ಲ. ಬದಲಾಗಬಲ್ಲ ಮೌಲ್ಯಗಳು ದತ್ತಾಂಶ ಸೂಚಕಗಳು, ವಿಷಯ ಮತ್ತು ಚಿತ್ರದ ಪಟ್ಟಿ, ಇತರ ಎಲ್ಲಾ ಚರಗಳ ಜೊತೆಗಿನ ಅವುಗಳ ಸಂಬಂಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಅನೇಕ ಗುಣಲಕ್ಷಣಗಳನ್ನು ಹೊಂದಿರಬಹುದು. ನಿರ್ವಹಣೆಯ ವಿವರಣೆಯ ಮೇಲೆ ಮಾಡುವಂತಹ ಲೆಕ್ಕ, ಕೋಶದ ಶ್ರೇಣಿಗಳಿಗೆ ತದ್ವಿರುದ್ಧವಾಗಿರುತ್ತದೆ, ಆದ್ದರಿಂದ ಎರಡು ಕಾಲ ಸರಣಿಯನ್ನು ಅಪ್ರಯತ್ನವಾಗಿ ಸೇರಿಸಿ ಅವುಗಳನ್ನು ಪಂಚಾಂಗದ ಸಮಯದಲ್ಲಿ ಸೇರಿಸುತ್ತದೆ ಅಥವಾ ಬಳಕೆದಾರರು ನಿರೂಪಿಸಿದ ಸಮಯ ಕ್ರಮ. ದತ್ತಾಂಶ ವರ್ಕ್‌ಷೀಟ್‌ಗಳಲ್ಲಿ ಹಾಗು ಬದಲಾಗುವ ಮೌಲ್ಯಗಳಲ್ಲಿ ಸ್ವತಂತ್ರವಾಗಿದೆ, ಆದ್ದರಿಂದ ಅಡ್ಡಸಾಲು, ನೀಟಸಾಲು ಅಥವಾ ಇಡೀ ವರ್ಕ್‌ಷೀಟ್‌ನ್ನು ತೆಗೆದುಹಾಕುವ ಮೂಲಕ ದತ್ತಾಂಶವನ್ನು ತೆಗೆದುಹಾಕಲಾಗುವುದಿಲ್ಲ. ಉದಾಹರಣೆಗೆ, ವರ್ಕ್‌ಷೀಟ್‌ನಲ್ಲಿ ಎಲ್ಲಿ ತೋರಿಸುತ್ತದೆ ಅಥವಾ ತೋರಿಸುತ್ತದೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಜನವರಿಯ ವೆಚ್ಚವನ್ನು ಜನವರಿಯ ತೆರಿಗೆಗಳಿಂದ ಕಳೆಯಲಾಗಿದೆ. ವರದಿ ಕೋಷ್ಟಕವನ್ನು ಹೊರತು ಪಡಿಸಿ ಬದಲಾಗಬಲ್ಲ ಮೌಲ್ಯಗಳಿಂದ ಬೆಂಬಲಿಸಲ್ಪಟ್ಟ ಅನೇಕ ಸಾಮರ್ಥ್ಯತೆಗಳಲ್ಲಿ ಒಂದನ್ನು ಪಿವಟ್ ಕೋಷ್ಟಕಗಳಲ್ಲಿ ಬಳಸಿದ ನಂತರ ಕ್ರಿಯೆಗೆ ಸಮ್ಮತ್ತಿಸುತ್ತದೆ. ಅಲ್ಲದೇ ವೆಚ್ಚಗಳನ್ನು ವಾರದ ಲೆಕ್ಕದಲ್ಲಿ ತೋರಿಸಿ ತೆರಿಗೆಯನ್ನು ತಿಂಗಳಿನ ಲೆಕ್ಕದಲ್ಲಿ ತೋರಿಸಿದರೆ ಜಾವಲಿನ್‌ ಪ್ರೋಗ್ರಾಮ್‌ ಸರಿಯಾದ ಮೊತ್ತವನ್ನು ನಿಗದಿಪದಿಸಬೇಕು ಅಥವಾ ಪ್ರಕ್ಷೇಪಿಸಬೇಕು. ಈ ನಿರ್ವಹಣೆಯ ವಿವರಣೆಯ ರಚನೆ, ಬದಲಾಗಬಲ್ಲ ಮೌಲ್ಯಗಳನ್ನು ಮತ್ತು ಇಡೀ ಮಾದರಿಗಳನ್ನು ಬಳಕೆದಾರರು ಹೆಸರು ನೀಡಿರುವ ಚರಗಳ ಜೊತೆಯಲ್ಲಿ ಪರಸ್ಪರ ಸೂಚಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಅಲ್ಲದೇ ಬಹುವಿಮಿತಿಯ ವಿಶ್ಲೇಷಣೆಯನ್ನು ಮತ್ತು ಅತ್ಯಂತ ಹೆಚ್ಚಿನ ಪ್ರಮಾಣವಾದರೂ ಸುಲಭವಾಗಿ ಸಂಪಾದಿಸಬಹುದಾದ ಸಂಘಟಕವನ್ನು ಮಾಡುತ್ತದೆ.

ತಾರ್ಕಿಕ ಸ್ಪ್ರೆಡ್‌ಷೀಟ್‌ಗಳು ಬದಲಾಯಿಸಿ

ಲೆಕ್ಕದ ನಿರೂಪಣೆಯ ಬದಲಿಗೆ ತಾರ್ಕಿಕ ನಿರೂಪಣೆಯ ಮೇಲೆ ಭಾಷೆಯಾಧಾರಿತ ಸೂತ್ರವನ್ನು ಹೊಂದಿರುವ ಸ್ಪ್ರೆಡ್‌ಷೀಟ್‌ಗಳನ್ನು ಲಾಜಿಕಲ್ ಸ್ಪ್ರೆಡ್‌ಷೀಟ್‌ಗಳೆಂದು ಕರೆಯಲಾಗುವುದು. ಇಂತಹ ಸ್ಪ್ರೆಡ್‌ಷೀಟ್‌ಗಳನ್ನು ಅವುಗಳ ಕೋಶ ಮೌಲ್ಯದ ಬಗ್ಗೆ ಅನುಮಾನಾತ್ಮಕವಾಗಿರಲು ಬಳಸಲಾಗುತ್ತದೆ.

ಪ್ರೊಗ್ರಾಮ್‌ ರಚಿಸುವ ಸಮಸ್ಯೆಗಳು ಬದಲಾಯಿಸಿ

ಮುಂಚಿನ ಪ್ರೋಗ್ರಾಮ್‌ಮಿಂಗ್ ಸಂಕೇತಭಾಷೆಗಳನ್ನು ಸ್ಪ್ರೆಡ್‌ಷೀಟ್‌ ಮುದ್ರಿತಪ್ರತಿಯನ್ನು ನಿರ್ಮಿಸಲು ಬರೆಯಲಾಂದತೇಯೇ ಕಂಪ್ಯೂಟರ್‌‌ನಲ್ಲೇ ದತ್ತಾಂಶದ ಕೋಷ್ಟಕಗಳು (ಸ್ಪ್ರೆಡ್‌ಷೀಟ್‌ ಅಥವಾ ವ್ಯೂಹ (ಮಾತೃಕೆಗಳು) ಎಂದು ಕೂಡ ಕರೆಯಲಾಗುತ್ತದೆ) ರಚಿಸಲ್ಪಡುವಂತೆ ಪ್ರೋಗ್ರಾಮ್‌ಮಿಂಗ್‌‌ನ ವಿಧಾನಗಳನ್ನು ಅಭಿವೃದ್ಧಿಗೊಳಿಸಲಾಗಿತ್ತು.

ಸ್ಪ್ರೆಡ್‌ಷೀಟ್‌ಗಳನ್ನು VBAಯಂತಹ ಪ್ರಬಲ ಪ್ರೋಗ್ರಾಮ್‌ಮಿಂಗ್ ಸಂಕೇತಭಾಷೆಗಳನ್ನು ಬಳಸಲು ವೃದ್ಧಿಸಲಾಯಿತು; ವಿರ್ದಿಷ್ಟವಾಗಿ ಅವುಗಳು ಕಾರ್ಯಾತ್ಮಕ, ವಿಷುಯಲ್‌ ಮತ್ತು ಬಹುಮಾದರಿಯ ಸಂಕೇತಭಾಷೆಗಳಾಗಿವೆ.

ಸಮನಾದ ಶ್ರೇಣಿಯ ಪ್ರೋಗ್ರಾಮ್‌ ನ್ನು ಬರೆಯುವ ಬದಲು ಸ್ಪ್ರೆಡ್‌ಷೀಟ್‌ನಲ್ಲಿ ಲೆಕ್ಕ ಮಾಡುವುದು ಸುಲಭವಾಗಿದೆ ಎಂಬುದನ್ನು ಅನೇಕ ಜನರು ಕಂಡುಕೊಂಡಿದ್ದಾರೆ. ಇದು ಸ್ಪ್ರೆಡ್‌ಷೀಟ್‌ಗಳ ಎರಡು ವಿಶಿಷ್ಟ ಲಕ್ಷಣಗಳಿಂದ ಸಾಧ್ಯವಾಗಿದೆ.

  • ಪ್ರೋಗ್ರಾಮ್‌ನ ಸಂಬಂಧಗಳನ್ನು ಅರ್ಥೆಸಲು ಅವರು ದೈಶಿಕ ಸಂಬಂಧಗಳನ್ನು ಬಳಸಿದ್ದಾರೆ. ಎಲ್ಲಾ ಪ್ರಾಣಿಗಳಂತೆ, ಮಾನವರು ಅಂತರದ ಬಗ್ಗೆ ಅತ್ಯಂತ ಮುಂದುವರೆದಿರುವ ಅಪರೋಕ್ಷಜ್ಞಾನಗಳನ್ನು ಮತ್ತು ವಸ್ತುಗಳ ನಡುವಿನ ಅವಲಂಬನೆಯನ್ನು ಹೊಂದಿದ್ದಾರೆ. ಅನುಕ್ರಮ ಪ್ರೋಗ್ರಾಮ್‌ಮಿಂಗ್ ಸಾಮಾನ್ಯವಾಗಿ ವಿಷಯವನ್ನು ಬರೆದಿರುವ ಸಾಲಿನ ನಂತರ ಮತ್ತೊಂದು ಸಾಲನ್ನು ಹೊಂದಿರುತ್ತದೆ. ಆದ್ದರಿಂದ ಇದನ್ನು ಅರ್ಥಮಾಡಿಕೊಳ್ಳಲು ಹಾಗೂ ಬದಲಾಯಿಸಬೇಕೆಂದರೆ ಹುಷಾರಾಗಿ ಮತ್ತು ನಿಧಾನವಾಗಿ ಓದಬೇಕು.
  • ಕೆಲಸವನ್ನು ಮಾಡಲು ಕಾರ್ಯನಿರ್ವಹಣೆಯನ್ನು ಮತ್ತು ಅಪೂರ್ಣ ಫಲಿತಾಂಶಕ್ಕೆ ಎಡೆಮಾಡಿಕೊಟ್ಟರು ಈ ದೋಷಗಳನ್ನು ಅಷ್ಟಾಗಿ ಪರಿಗಣಿಸುವುದಿಲ್ಲ. ಪ್ರೋಗ್ರಾಮ್‌ನ ಇತರ ಭಾಗಗಳು ಮುಗಿಯದಿದ್ದರೂ ಅಥವಾ ಅಪೂರ್ಣವಾಗಿದ್ದರೂ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸಬಲ್ಲವು. ಇದು ಪ್ರೋಗ್ರಾಮ್‌ಅನ್ನು ಸುಲಭವಾಗಿ ಮತ್ತು ವೇಗವಾಗಿ ಬರೆಯಲು ಮತ್ತು ಅದರಲ್ಲಿರುವ ದೋಷಗಳನ್ನು ಸರಿಪಡಿಸಲು ಸಾಧ್ಯವಾಗುವಂತೆ ಮಾಡಿದೆ.[ಸೂಕ್ತ ಉಲ್ಲೇಖನ ಬೇಕು] ಅನುಕ್ರಮ ಪ್ರೋಗ್ರಾಮ್‌ಮಿಂಗ್ ಸಾಮಾನ್ಯವಾಗಿ ಪ್ರೋಗ್ರಾಮ್‌ ಸರಿಯಾಗಿ ಚಾಲಿತವಾಗಬೇಕೆಂದರೆ ಪ್ರತಿಯೊಂದು ಪ್ರೋಗ್ರಾಮ್‌ ಸಾಲು ಮತ್ತು ಪಠ್ಯಾಂಶಗಳು ಸರಿಯಾಗಿರಬೇಕೆಂದು ಆಪೇಕ್ಷಿಸುತ್ತದೆ. ಒಂದೇ ಒಂದು ದೋಷ ಇಡೀ ಪ್ರೋಗ್ರಾಮ್‌ನ್ನು ಸ್ಥಗಿತಗೊಳಿಸಬಲ್ಲದು ಹಾಗೂ ಯಾವುದೇ ಫಲಿತಾಂಶವನ್ನು ತಡೆಹಿಡಿಯಬಹುದು.

'ಸ್ಪ್ರೆಡ್‌ಷೀಟ್‌ ಪ್ರೋಗ್ರಾಮ್‌'ನ್ನು ಸಾಮಾನ್ಯವಾಗಿ, ಕಾಲದ ಬದಲಿಗೆ ದೈಶಿಕ ಸಂಬಂಧವನ್ನು ಪ್ರಾಥಮಿಕ ನಿಯಮಗಳ ಸಂಘಟಕದಂತೆ ಬಳಸಿಕೊಂಡು ಲೆಕ್ಕ ಹಾಕುವ ಕ್ರಿಯೆಯನ್ನು ನಡೆಸಲು ರಚಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು].

ಸ್ಪ್ರೆಡ್‌ಷೀಟ್‌ನ್ನು ಗಣಿತೀಯ ಗ್ರಾಫ್ ಎಂದು ಭಾವಿಸುವುದು ಉಚಿತವಾಗಿದೆ. ಇಲ್ಲಿ ಶೃಂಗಗಳು ಸ್ಪ್ರೆಡ್‌ಷೀಟ್‌ನ ಕೋಶಗಳಾಗಿರುತ್ತವೆ. ಅಂಚುಗಳು ಸೂತ್ರದಿಂದ ನಿರ್ದಿಷ್ಟವಾಗಿಸಲ್ಪಟ್ಟ ಇತರ ಕೋಶಗಳ ಉಲ್ಲೇಖಕಗಳಾಗಿರುತ್ತವೆ. ಇದನ್ನು ಯಾವಾಗಲೂ ಸ್ಪ್ರೆಡ್‌ಷೀಟ್‌ನ ಅವಲಂಬಿತ ಗ್ರಾಫ್ ಎಂದು ಕರೆಯಲಾಗುತ್ತದೆ. ಕೋಶಗಳ ನಡುವಿನ ಉಲ್ಲೇಖಕಗಳು ಉದಾಹರಣೆಗೆ, ಸ್ಪ್ರೆಡ್‌ಷೀಟ್‌ ಸೂತ್ರವನ್ನು ಅರ್ಥಮಾಡಿಕೊಳ್ಳಲು ಮತ್ತು ಅದನ್ನು ನಿಭಾಯಿಸಲು ಸುಲಭವಾಗುವಂತೆ ಮಾಡುವ ಸಂಬಂಧಿತ ಸ್ಥಾನ, ಸ್ವತಂತ್ರ ಸ್ಥಾನ ಮತ್ತು ಹೆಸರಿಡಲ್ಪಟ್ಟ ಸ್ಟಳಗಳಂತಹ ದೈಶಿಕ ಪರಿಕಲ್ಪನೆಯ ಲಾಭವನ್ನು ಪಡೆಯಬಲ್ಲವು.

ಅವು ಅವಲಂಬಿಸಿರುವಂತಹ ಕೋಶಗಳನ್ನು ಬದಲಾಯಿಸಬೇಕಾದಾಗ ಸ್ಪ್ರೆಡ್‌ಷೀಟ್‌ಗಳು ಸ್ಯಯಂಚಾಲಿತವಾಗಿ ಕೋಶಗಳನ್ನು ಪರಿಷ್ಕರಿಸುತ್ತವೆ. ಮುಂಚಿನ ಸ್ಪ್ರೆಡ್‌ಷೀಟ್‌ಗಳು ನಿರ್ದಿಷ್ಟವಾದ ರೀತಿಯಲ್ಲಿ ಕೋಶಗಳನ್ನು ಲೆಕ್ಕಮಾಡುವ ಸರಳ ತಂತ್ರವನ್ನು ಬಳಸುತ್ತಿದ್ದವು, ಆದರೆ, ಆಧುನಿಕ ಸ್ಪ್ರೆಡ್‌ಷೀಟ್‌ಗಳು ಅವಲಂಬಿತ ಗ್ರಾಫ್‌‌ಗಳಿಂದ ಕನಿಷ್ಠ ಮರುಗಣನೆಯ ಪ್ರಕಾರ ಎಣಿಸುತ್ತದೆ. ಆನಂತರದ ಸ್ಪ್ರೆಡ್‌ಷೀಟ್‌ಗಳು ಬದಲಿಗೆ ಮೌಲ್ಯವನ್ನು ನೀಡುವ ಸೀಮಿತ ಸಾಮರ್ಥ್ಯವನ್ನು ಒಳಗೊಂಡಿದ್ದವು, ಮೂಲ ಮೌಲ್ಯವನ್ನು ಬದಲಿಸುವ ಮೂಲಕ ನಿರ್ದಿಷ್ಟ ಉತ್ತರ ನಿರ್ದಿಷ್ಟ ಕೋಶವನ್ನು ಸೇರುವಂತೆ ಮಾಡುತ್ತದೆ. ಸ್ಪ್ರೆಡ್‌ಷೀಟ್‌ ಕೋಶದ ಸೂತ್ರಗಳನ್ನು ಬಹುಮಟ್ಟಿಗೆ ತಿರುಗು-ಮುರುಗು ಮಾಡಲು ಸಾಧ್ಯವಿಲ್ಲದ ಕಾರಣ ಈ ವಿಧಾನವು ಸೀಮಿತ ಮೌಲ್ಯವನ್ನು ಹೊಂದಿದೆ.

ಅನುಕ್ರಮ ಪ್ರೋಗ್ರಾಮ್‌ಮಿಂಗ್ ಮಾದರಿಗಳಿಗೆ ಸಾಮಾನ್ಯವಾಗಿರುವ ಅನೇಕ ಪರಿಕಲ್ಪನೆಗಳು ಸ್ಪ್ರೆಡ್‌ಷೀಟ್‌ನ ಪ್ರಪಂಚದಲ್ಲಿ ಸದೃಶ್ಯಗಳಾಗಿವೆ. ಉದಾಹರಣೆಗೆ, ರಚಿಸಲ್ಪಟ್ಟ ಆದೇಶಗಳ ಸರಣಿಯಲ್ಲಿನ ಅನುಕ್ರಮ ಮಾದರಿಗಳು ಸಾಮಾನ್ಯವಾಗಿ ಕೆಲವೊಂದು ಸದೃಶ್ಯದ ಸೂತ್ರಗಳ (ಯಾವ ಕೋಶಗಳನ್ನು ಅವು ಉಲ್ಲೇಖಿಸುತ್ತವೋ ಆ ಕೋಶಗಳಲ್ಲಿ ಮಾತ್ರ ವ್ಯತ್ಯಾಸಹೊಂದುತ್ತದೆ) ಜೊತೆಯಲ್ಲಿ ಕೋಶಗಳ ಕೋಷ್ಟಕವೆಂದು ಕರೆಯಲ್ಪಡುತ್ತವೆ.

ನ್ಯೂನತೆಗಳು ಬದಲಾಯಿಸಿ

ಸ್ಪ್ರೆಡ್‌ಷೀಟ್‌ಗಳು ಪರಿಮಾಣಾತ್ಮಕ ಮಾದರಿಯಲ್ಲಿ ಮುಂದುವರೆದಿದ್ದರೂ ಕೂಡ ಅವುಗಳು ಕೆಲವೊಂದು ಕೊರತೆಯನ್ನು ಹೊಂದಿವೆ. ಒಟ್ಟು ಲಾಭದ ಮಟ್ಟದಲ್ಲಿ ಸ್ಪ್ರೆಡ್‌ಷೀಟ್‌ ಅನೇಕ ಪ್ರಮುಖ ನ್ಯೂನತೆಗಳನ್ನು ಹೊಂದಿವೆ. ವಿಶೇಷವಾಗಿ ಪಠ್ಯ-ಸಂಖ್ಯೆ ಮಿಶ್ರಿತ ಮಾಹಿತಿ ಹೊಂದಿರುವ ಕೋಶಗಳನ್ನು ಪರಿಚಯಿಸುವಾಗ ಪ್ರತಿಕೂಲತೆಯನ್ನು ತೋರಿಸುವುದು.

  • ಸ್ಪ್ರೆಡ್‌ಷೀಟ್‌ಗಳು ಪ್ರಮುಖ ಖಾತರಿ ಸಮಸ್ಯೆಯನ್ನು ಹೊಂದಿವೆ. ಸ್ಪ್ರೆಡ್‌ಷೀಟ್‌ ಬಳಕೆಯಾಗುವ ಕ್ಷೇತ್ರಗಳಲ್ಲಿ ಸರಿಸುಮಾರು 94%ರಷ್ಟು ಸ್ಪ್ರೆಡ್‌ಷೀಟ್‌ಗಳು ದೋಷಗಳನ್ನು ಹೊಂದಿರುತ್ತವೆ. ಅಲ್ಲದೇ, ಪರಿಶೋಧಿಸಲಾಗಿಲ್ಲದ ಸ್ಪ್ರೆಡ್‌ಷೀಟ್‌ಗಳಲ್ಲಿ 5.2%ರಷ್ಟು ಕೋಶಗಳು ದೋಷಪೂರಿತರುತ್ತವೆ ಎಂದು ಸಂಶೋಧನ ಅಧ್ಯಯನವು ಅಂದಾಜುಮಾಡಿದೆ.[೨೦]
ಸ್ಪ್ರೆಡ್‌ಷೀಟ್‌ನ ಬಳಕೆಗೆ ಮತ್ತು ಬರಹಗಾರಿಕೆಗೆ ಸಂಬಂಧಿಸಿರುವ ಯಾವಾಗಲೂ ನಡೆಯುವಂತಹ ದೊಡ್ಡ ದೋಷಗಳ ಹೊರತಾಗಿಯೂ, ಅವರ ಮೂಲದಲ್ಲಿ ದೋಷಗಳು ಸಂಭವಿಸುವುದನ್ನು ರಾಚನಿಕವಾಗಿ ಕಡಿಮೆಮಾಡಲು ಮತ್ತು ನಿಯಂತ್ರಣವನ್ನು ಹೆಚ್ಚಿಸಲು ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿದೆ.[೨೧]
  • ಸ್ಪ್ರೆಡ್‌ಷೀಟ್‌ಗಳ ಪ್ರಾಯೋಗಿಕ ಅರ್ಥವತ್ತಾಗಿರುವಿಕೆಯನ್ನು ಅವುಗಳ ಆಧುನಿಕ ಲಕ್ಷಣಗಳು ಬಳಕೆಯಾಗುವವರೆಗು ಸೀಮಿತಗೊಳಿಸಬಹುದು. ಅನೇಕ ಅಂಶಗಳು ಈ ಪ್ರತಿಬಂಧಕ್ಕೆ ಕಾರಣವಾಗಿವೆ. ಕೋಶದ ಮೇಲೆ ಒಂದು ಹೊತ್ತಿಗೆ ಒಂದೇ ಕೋಶ ರೀತ್ಯಾ ಸಂಕೀರ್ಣ ಮಾದರಿಯನ್ನು ಅಳವಡಿಸಿದಲ್ಲಿ, ಸಣ್ಣ-ಪುಟ್ಟ ವಿಚಾರಕ್ಕೂ ಕೂಲಂಕಷ ಗಮನ ಕೊಡಬೇಕಾದಿತು. ಸೂತ್ರದಲ್ಲಿ ಕಂಡುಬರುವ ನೂರಾರು ಅಥವಾ ಸಾವಿರಾರು ಕೋಶಗಳ ಸ್ಥಾನದ ಉಲ್ಲೇಖಗಳನ್ನು ಅರ್ಥಮಾಡಿಕೊಂಡು ನೆನಪಿನಲ್ಲಿ ಇಟ್ಟುಕೊಳ್ಳಲು ಸ್ಪ್ರೆಡ್‌ಷೀಟ್ ರಚನಾಕಾರರಿಗೆ ಕಷ್ಟವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಕೋಶ ಸೂಚಕಗಳಿಗಾಗಿ ಹೆಸರಿಸಲಾದ ಬದಲಾಗಬಲ್ಲ ಮೌಲ್ಯಗಳ ಬಳಕೆ, ಹಾಗೂ ಕೋಶದ ಸ್ಥಳಗಳು ಮತ್ತು ಪ್ರತಿಯೊಂದು ಕೋಶದ ಕುಶಲಬಳಕೆಯ ಬದಲಿಗೆ ಸೂತ್ರಗಳಲ್ಲಿ ಬದಲಾಗಬಲ್ಲ ಮೌಲ್ಯಗಳನ್ನು ಬಳಸುವುದರ ಮೂಲಕ ಈ ಕೊರತೆಗಳನ್ನು ನೀಗಿಸಬಹುದಾಗಿದೆ. ಪ್ರಮಿತಿಯಲ್ಲಿ ಮೌಲ್ಯಗಳ ಬದಲಾವಣೆಯಾದ ತಕ್ಷಣವೇ ಹೇಗೆ ಫಲಿತಾಂಶಗಳು ಬದಲಾಗುತ್ತವೆ ಎಂಬುದನ್ನು ತೋರಿಸಲು ಗ್ರಾಫ್ ಗಳನ್ನು ಬಳಸಬಹುದು. ಬಳಕೆದಾರರಿಂದ ಸೂಕ್ತವಾದ ದತ್ತಮಾಹಿತಿಯನ್ನು ಅಪೇಕ್ಷಿಸುವ ಪಾರದರ್ಶಕ ಬಳಕೆದಾರ ಅಂತರವರ್ತನವನ್ನು ಹೊರತುಪಡಿಸಿ ಉಳಿದೆಲ್ಲ ಸ್ಪ್ರೆಡ್‌ಷೀಟ್‌ಗಳನ್ನು ಅತಿಸೂಕ್ಷ್ಮವಾಗಿ ಮಾಡಲಾಗುತ್ತದೆ. ಬಳಕೆದಾರರ ಅಪೇಕ್ಷೆಯ ಮೇರೆಗೆ ಫಲಿತಾಂಶವನ್ನು ನೀಡುವಂತೆ, ವರದಿಯನ್ನು ರಚಿಸುವಂತೆ ಮತ್ತು ಸರಿಯಾದ ದತ್ತಮಾಹಿತಿಯನ್ನು ಒದಗಿಸುವಂತೆ ಮಾಡಲು ದೋಷ ನಿಗ್ರಹ ಸಾಧನವನ್ನು ನಿರ್ಮಿಸುತ್ತದೆ.[೨೨]
  • ಕೋಶದ ಸ್ಥಳಗಳನ್ನು ಆಧರಿಸಿದ ಸೂತ್ರಗಳನ್ನು ನೇರವಾಗಿಡಲು ಹಾಗು ಪರಿಶೋಧಿಸಲು ಬಹಳ ಕಷ್ಟ. ಸಂಶೋಧನೆಯ ಪ್ರಕಾರ, ಕೇವಲ ಸಾಂಖ್ಯಿಕ ಫಲಿತಾಂಶಗಳು ಮತ್ತು ಕೋಶದಲ್ಲಿನ ಸೂತ್ರಗನ್ನು ಪರಿಶೀಲಿಸುವ ಪರಿಶೀಲಿಸುವ ಪರಿಶೋಧಕರು, ಕೇವಲ ಸಾಂಖ್ಯಿಕ ಫಲಿತಾಂಶಗಳನ್ನು ಪರಿಶೀಲಿಸುವ ಪರಿಶೋಧಕರಿಗಿಂತಲೂ ಹೆಚ್ಚು ದೋಷಗಳು ಪತ್ತೆ ಮಾಡಲಾರರು.[೨೦] ಹೆಸರಿಸಲಾದ ಬದಲಾಗಬಲ್ಲ ಮೌಲ್ಯಗಳು ಮತ್ತು ಅವನ್ನು ಬಳಸುವ ಸೂತ್ರಗಳನ್ನು ಬಳಸಲು ಇನ್ನೊಂದು ಕಾರಣವಿರಬಹುದು.
  • ಕೋಶ ಮತ್ತು ಕೋಶ ವಿಳಾಸಗಳ ಮಟ್ಟದಲ್ಲಿ ಸಹಯೋಗ ನಡೆದಾಗ ಸ್ಪ್ರೆಡ್‌ಷೀಟ್‌ನಲ್ಲಿ ಸೂತ್ರಗಳನ್ನು ಸೇರಿಸಿ ಬರೆಯುವುದು ಕಷ್ಟವಾಗುತ್ತದೆ.
ಆದರೂ ಪ್ರೋಗ್ರಾಮ್‌ಮಿಂಗ್ ಸಂಕೇತಭಾಷೆಗಳಂತೆ, ಸ್ಪ್ರೆಡ್‌ಷೀಟ್‌ಗಳು ಕೂಡ ಸಮೀಪದ ಅರ್ಥದ ಜೊತೆಯಲ್ಲಿ ಒಟ್ಟು ಕೋಶಗಳನ್ನು ಹಾಗೂ ಅರ್ಥವನ್ನು ಸೂಚಿಸುವ ಹೆಸರುಗಳ ಜೊತೆಯಲ್ಲಿ ಸೂಚಿಸಲ್ಪಟ್ಟ ಬದಲಾಗಬಲ್ಲ ಮೌಲ್ಯಗಳನ್ನು ಬಳಸಲು ಸಮರ್ಥವಾಗಿರುತ್ತವೆ. ಕೆಲವು ಸ್ಪ್ರೆಡ್‌ಷೀಟ್‌ಗಳು ಒಳ್ಳೆಯ ಸಹಯೋಗ ಲಕ್ಷಣಗಳನ್ನು ಹೊಂದಿರುತ್ತವೆ. ಅನೇಕ ಜನರು ಒಂದೇ ಸ್ಪ್ರೆಡ್‌ಷೀಟ್‌ನ್ನು ಬಳಸುತ್ತಿರುವಾಗ ಮತ್ತು ಅನೇಕ ಜನರು ದತ್ತಾಂಶವನ್ನು ದಾಖಲಿಸಲು ಸಹಕರಿಸುತ್ತಿರುವಾಗ ಕೋಶ ಮತ್ತು ಕೋಶ ಸೂತ್ರಗಳ ಮಟ್ಟದಲ್ಲಿ ಸಹಯೋಗಕ್ಕೆ ತೊಂದರೆ ಮಾಡುವ ಅಡೆತಡೆಗಳನ್ನು ತಡೆಯಬೇಕೆಂದು ಸ್ಪ್ರೆಡ್‌ಷೀತ್‌ ರಚನಾಕಾರರಿಗೆ ಹೇಳುವುದು ಸೂಕ್ತವಲ್ಲ.
  • ಇಂದು ವಿರಳವಾಗಿ ಬಳಸಲಾಗುತ್ತಿರುವ ಕೋಶ-ಮಟ್ಟದ ಪ್ರಾಮುಖ್ಯತೆಯನ್ನು ನೀಡಿರುವ ಸ್ಪ್ರೆಡ್‌ಷೀಟ್‌ಗಳು ಬಳಕೆಯಲ್ಲಿಲ್ಲದ ಕಾರಣ, ಇಂತಹ ಸ್ಪ್ರೆಡ್‌ಷೀಟ್‌ ಮಾದರಿಗಳ ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ. ಹಳೆಯದಾದ ಮತ್ತು ನ್ಯೂನತೆಯುಳ್ಳ ಬಳಕೆ ಎಂದರೆ ಸ್ಪ್ರೆಡ್‌ಷೀಟ್‌ಗಳಲ್ಲಿ ಪರಿಕಲ್ಪನಾತ್ಮಕ ಸಣ್ಣ ಬದಲಾವಣೆಯು (ಉದಾಹರಣೆಗೆ, ಪ್ರಾರಂಭವನ್ನು ಅಥವಾ ಮುಕ್ತಾಯದ ಸಮಯವನ್ನು ಅಥವಾ ಸಮಯ ಪರಿಮಾಣವನ್ನು ಬದಲಾಯಿಸುವುದು, ಹೊಸ ಸದಸ್ಯರನ್ನು ಸೇರಿಸುವುದು ಅಥವಾ ವಿಮಿತಿಗೆ ಶ್ರೇಣಿ ವ್ಯವಸ್ಥೆಯನ್ನು ಮಾಡುವುದು ನೂರಾರು ಕೋಶ ಸೂತ್ರಗಳನ್ನು ಪ್ರತಿನಿಧಿಸುವ ಒಂದು ಕಲ್ಪನಾತ್ಮಕ ಸೂತ್ರವನ್ನು ಬದಲಾಯಿಸುವುದು) ಯಾವಾಗಲು ಕೋಶ ಮಟ್ಟದಲ್ಲಿ ಕೈಯಿಂದ ಮಾಡಲಾಗುವ ಕ್ರಿಯೆಯನ್ನು ಅಪೇಕ್ಷಿಸುತ್ತದೆ (ಉದಾಹರಣೆಗೆ ಕೋಶ ಗಳನ್ನು/ಅಡ್ಡಸಾಲುಗಳನ್ನು/ನೀಟಸಾಲುಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವುದು, ಸೂತ್ರಗಳನ್ನು ಸಂಪಾದಿಸುವುದು ಮತ್ತು ನಕಲು ಮಾಡುವುದು). ಇವುಗಳನ್ನು ಕೈಯಿಂದ ತಿದ್ದುವುದು ಮುಂದೆ ದೋಷಗಳುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಬದಲಾಗಬಲ್ಲ ಮೌಲ್ಯಗಳ ಹೆಸರನ್ನು ಬಳಸುವ ಹೆಸರಿಸಲ್ಪಟ್ಟ ಬದಲಾಗಬಲ್ಲ ಮೌಲ್ಯಗಳು ಮತ್ತು ಸೂತ್ರಗಳ ಬಳಕೆಯು ಈಗಿನ ಸಂಪ್ರದಾಯವಾಗಿದೆ.

ಸ್ಪ್ರೆಡ್‌ಷೀಟ್‌ಗಳಿಗೆ ಸಂಬಂಧಿಸಿರುವ ಇತರ ಸಮಸ್ಯೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ:[೨೩][೨೪]

  • ಕೆಲವು ಆನ್ವಯಿಕೆಗಳಿಗೆ ಸ್ಪ್ರೆಡ್‌ಷೀಟ್‌ಗಳ ಬದಲು ವಿಶೇಷೀಕರಿಸಿದ ತಂತ್ರಾಂಶಗಳನ್ನು ಬಳಸುವಂತೆ ಕೆಲವರು ಹೇಳುತ್ತಾರೆ (ಬಜೆಟ್ ಮಾಡಲು, ಅಂಕಿಅಂಶಗಳು) [೨೫][೨೬][೨೭]
  • ಅನೇಕ ಸ್ಪ್ರೆಡ್‌ಷೀಟ್‌ ತಂತ್ರಾಂಶ ಉತ್ಪನ್ನಗಳು, ಉದಾಹರಣೆಗೆ ಮೈಕ್ರೊಸಾಫ್ಟ್‌ ಎಕ್ಸೆಲ್‌[೨೮] (2007ಕ್ಕಿಂತ ಹಿಂದಿನ ಆವೃತ್ತಿ) ಮತ್ತು OpenOffice.org Calc[೨೯] (2008ರ ಹಿಂದಿನ ಆವೃತ್ತಿ), 256 ನೀಟಸಾಲುಗಳಿಗೆ 65,536 ಅಡ್ಡಸಾಲು ವನ್ನು ಹೊಂದುವಷ್ಟು ಸಾಮರ್ಥ್ಯವನ್ನು ಮಾತ್ರ ಹೊಂದಿದ್ದವು. ಇದು ಹೆಚ್ಚು ದತ್ತಾಂಶವನ್ನು ಬಳಸುವಂತಹ ಜನರಿಗೆ ತೊಂದರೆಯನ್ನುಂತು ಮಾಡಬಹುದು ಹಾಗೂ ದತ್ತಾಂಶವನ್ನು ಕಳೆಯಬಹುದು.
  • ಲೆಕ್ಕಪರಿಶೋಧನೆಯ ಮತ್ತು ಪುನಃ ಪರಿಶೀಲನೆಯ ನಿಯಂತ್ರಣದ ಕೊರತೆ. ಇದರಿಂದಾಗಿ ಯಾರು ಏನನ್ನು ಯಾವಾಗ ಬದಲಾಯಿಸಿದರು ಎಂಬುದನ್ನು ನಿರ್ಧರಿಸುವುದು ಕಷ್ಟವಾಗಬಹುದು. ಇದು ನಿಯಂತ್ರಕ ಅನುಸರಣೆಗೆ ತೊಂದರೆಯುನ್ನುಂಟು ಮಾಡಬಹುದು. ಪುನರ್ಪರೀಶೀಲನ ನಿಯಂತ್ರಣದ ಕೊರತೆಯಿಂದಾಗಿ ದಾಖಲೆಯಲ್ಲಿ ಮಾಡಲಾದ ಪ್ರತ್ಯೇಕಿಸಿರುವಿಕೆ ಮತ್ತು ಬದಲಾವಣೆಯನ್ನು ಕಂಡುಹಿಡಿಯಲು ಅಸಮರ್ಥವಾಗಿರುವುದು ದೋಷಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ.
  • ರಕ್ಷಣೆಯ ಕೊರತೆ. ಸಾಮಾನ್ಯವಾಗಿ ಒಬ್ಬನಿಗೆ ಸ್ಪ್ರೆಡ್‌ಷೀಟ್‌ನ್ನು ತೆರೆಯುವ ಅನುಮತಿ ಇದ್ದರೆ, ಅವರಿಗೆ ಅದರ ಯಾವುದೇ ಭಾಗವನ್ನಾದರೂ ಬದಲಾಯಿಸಲು ಅನುಮತಿ ಇರುತ್ತದೆ. ಮೇಲಿನವುಗಳನ್ನು ಸರಿಯಾಗಿ ಎಣಿಸದ ಕೊರತೆಯಿಂದಾಗಿ ಯಾರು ಬೇಕಾದರೂ ಮೋಸ ಮಾಡಲು ಸುಲಭವಾಗುತ್ತದೆ.
  • ನಿರ್ಬಂಧವಿಲ್ಲದೇ ನಿರ್ಮಿಸಿರುವುದರಿಂದ ಆಕಸ್ಮಿಕವಾಗಿ ಅಥವಾ ಬೇಕೆಂದೇ ಮಾಹಿತಿಯನ್ನು ತಪ್ಪು ಸ್ಥಳದಲ್ಲಿ ದಾಖಲು ಮಾಡುವ ಮೂಲಕ ಅಥವಾ ತಪ್ಪಾಗಿ ಕೋಶಗಳೊಳಗೆ ಅವಲಂಬನೆಯನ್ನು ತೋರಿಸುವ ಮೂಲಕ ಇದರಲ್ಲಿ ದೋಷವನ್ನು ಉಂಟುಮಾಡಲು(ಉದಾಹರಣೆಗೆ ಸೂತ್ರ)ಯಾರಿಗೆ ಬೇಕಾದರು ಸುಲಭವಾಗುತ್ತದೆ.[೩೦][೩೧]
  • ಸೂತ್ರದ ಫಲಿತಾಂಶ (ಉದಾಹರಣೆಗೆ "=A1*B1"), ದತ್ತಾಂಶವನ್ನು ಅನೇಕ ಇತರ ಕೋಶಗಳಿಂದ 'ತೆಗೆದುಕೊಂಡಿದ್ದರೂ' ಹಾಗೂ ನಿಜಾವಧಿಯ ದಿನಾಂಕವನ್ನು ಮತ್ತು ನಿಜವಾದ ಕಾಲವನ್ನು ತೆಗೆದುಕೊಂಡಿದ್ದರೂ ಕೂಡ ಕೇವಲ ಒಂದು ಕೋಶಕ್ಕೆ ಮಾತ್ರ ಅನ್ವಯಿಸಲ್ಪಡುತ್ತದೆ (ಅದು, ಕೋಶ ಮತ್ತು ಸೂತ್ರ ಇರುವಂತಹ ಸ್ಥಾನ - ಇಂತಹ ಸಂದರ್ಭಗಳಲ್ಲಿ C1ನ್ನು ನೋಡಬಹುದು). ಇದರ ಅರ್ಥ, ಬಹುಪಾಲು ಒಂದೇ ವಿಧದ ಸೂತ್ರ (ಅದರದೇ ಆದ 'ಔಟ್ಪುಟ್' ಕೋಶದಲ್ಲಿರುವ) ದತ್ತಾಂಶವನ್ನು 'ದಾಖಲಿಸಲ್ಪಟ್ಟ' ಸರಣಿಯ ಪ್ರತಿಯೊಂದು ಅಡ್ಡಸಾಲಿನಲ್ಲಿ ಪುನರಾವರ್ತಿಸುವ ಮೂಲಕ ಕೋಶಗಳ ಸರಣಿಯಲ್ಲಿ ಸಮೀಪದ ಎಣಿಕೆ ಸಾಧ್ಯವಾಗುಂತೆ ಮಾಡುತ್ತದೆ. ವಿಶೇಷವಾಗಿ ಒಂದು ಲೆಕ್ಕವನ್ನು ಹೊಂದಿದ್ದು ಅದನ್ನು ಎಲ್ಲಾ ಇನ್ಪುಟ್‌‌ಗಳಿಗೂ ಅನ್ವಯಿಸುವಂತಹ ಸಾಂಪ್ರದಾಯಿಕ ಕಂಪ್ಯೂಟರ್ ಪ್ರೋಗ್ರಾಮ್‌ನಲ್ಲಿರುವ ಸೂತ್ರಕಿಂತ ಇದು ಭಿನ್ನವಾಗಿದೆ. ಪ್ರಸ್ತುತದಲ್ಲಿರುವ ಸ್ಪ್ರೆಡ್‌ಷೀಟ್‌ಗಳು, ಸಮೀಪದ ಒಂದೇ ವಿಧದ ಸೂತ್ರಗಳ ಪುನರಾವರ್ತನೆಯಿಂದಾಗಿ ಉತ್ತಮ ಗುಣಮಟ್ಟದ ಭರವಸೆ ಕೊಡುವ ದೃಷ್ಟಿಕೋನದಿಂದ ಹಾನಿಕಾರಕ ಪರಿಣಾಮವನ್ನು ಉಂಟುಮಾಡಬಹುದು. ಅಲ್ಲದೇ ಅನೇಕ ಸ್ಪ್ರೆಡ್‌ಷೀಟ್‌ ದೋಷಗಳಿಗೂ ಕಾರಣವಾಗಬಹುದು. ಕೆಲವು ಸ್ಪ್ರೆಡ್‌ಷೀಟ್‌ಗಳು ಈ ಸಮಸ್ಯೆಯನ್ನು ತಿಳಿಸಲು ಸೂತ್ರಗಳ ಸರಣಿಯನ್ನು ಹೊಂದಿರುತ್ತವೆ.
  • ಸಂಸ್ಥೆಯೊಳಗೆ, ಸರಿಯಾದ ರಕ್ಷಣೆ, ಲೆಕ್ಕದ ಹಾದಿ ಇಲ್ಲದ ಸ್ಪ್ರೆಡ್‌ಷೀಟ್‌ಗಳ ಗಾತ್ರವನ್ನು ನೋಡಿಕೊಳ್ಳುವ ಪ್ರಯತ್ನದಿಂದಾಗಿ ಕೆಲವೊಮ್ಮೆ ಅಪ್ಪಿತಪ್ಪಿ ದೋಷಗಳಿಗೆ ಕಾರಣವಾಗಬಹುದು. ಇವು ಭಾರೀ ಪ್ರಮಾಣದ ಪರಿಣಾಮ ಬೀರಬಹುದು.

ಡೈಸ್ಕ್ ಟಾಪ್ ಸ್ಪ್ರೆಡ್‌ಷೀಟ್‌ ಆನ್ವಯಿಕೆಗಳಿಗೆ ನಿರ್ಮಿಸಲಾಗಿರುವ ಮತ್ತು ಹೊರಗಿನ ಸಾಧನಗಳು ಇವೆ. ಇವು ಈ ಸಮಸ್ಯೆಗಳಲ್ಲಿ ಕೆಲವೊಂದನ್ನು ತಿಳಿಸುತ್ತವೆ. ಆದರೆ ಇವುಗಳ ಬಗ್ಗೆ ತಿಳುವಳಿಗೆ ಮತ್ತು ಇವಿಗಳ ಬಳಕೆ ಸಾಮಾನ್ಯವಾಗಿ ಕಡಿಮೆ. ಇದಕ್ಕೊಂದು ಉತ್ತಮ ನಿದರ್ಶನವೆಂದರೆ 55% ನಷ್ಟು ಪ್ರಧಾನ ಮಾರುಕಟ್ಟೆಯ ವೃತ್ತಿನಿರತರು ಹೇಗೆ ಅವರ ಸ್ಪ್ರೆಡ್‌ಷೀಟ್ ಗಳು ಲೆಕ್ಕ ಪರಿಶೋಧಿಸಲ್ಪಡುತ್ತವೆ ಎಂಬುದನ್ನು "ತಿಳಿದಿಲ್ಲ"; ಹೊರಗಿನ ವಿಶ್ಲೇಷಣೆಯಲ್ಲಿ ಕೇವಲ 6% ನಷ್ಟನ್ನು ಮಾತ್ರ ವಿನಿಯೋಗಿಸಲಾಗಿದೆ.[೩೨]

ಇವನ್ನೂ ನೋಡಿ ಬದಲಾಯಿಸಿ

ಆಕರಗಳು ಬದಲಾಯಿಸಿ

  1. http://knowledge.wharton.upenn.edu/article.cfm?articleid=1795
  2. "ಆರ್ಕೈವ್ ನಕಲು". Archived from the original on 2010-07-23. Retrieved 2010-08-01.
  3. "ಆರ್ಕೈವ್ ನಕಲು". Archived from the original on 2010-08-05. Retrieved 2010-08-01.
  4. Mattessich, Richard (1961). "Budgeting Models and System Simulation". The Accounting Review. 36 (3): 384–397. Retrieved 2009-02-09.
  5. Kimball, Wm. L., John, Stoffels, and R. Brian Walsh (1996). "Business Computer Language". IT-Directors.com. {{cite web}}: Missing or empty |url= (help)CS1 maint: multiple names: authors list (link)
  6. http://www.ll.georgetown.edu/Federal/judicial/fed/opinions/95opinions/95-1350.html
  7. ರೇನೇ ಪ್ಯಾರಡೋ - ಪರ್ಸನಲ್ ವೆಬ್ ಪೇಜ್
  8. "ಆರ್ಕೈವ್ ನಕಲು" (PDF). Archived from the original (PDF) on 2010-08-21. Retrieved 2010-08-01.
  9. portal.acm.org – APLDOT
  10. "PC ವಲ್ಡ್ - ತ್ರೀ ಮಿನಿಟ್ಸ್: ಗಾಡ್ ಫಾದರ್ಸ್ ಆಫ್ ದಿ ಸ್ಪ್ರೆಡ್‌ಷೀಟ್‌". Archived from the original on 2008-07-26. Retrieved 2010-08-01.
  11. OpenOffice.org Calc product
  12. ಜಿನ್ಯೂಮರಿಕ್ XML ಫೈಲ್ ಫಾರ್ಮೆಟ್ ಫ್ರಮ್ ದಿ ಜಿನ್ಯೂಮರಿಕ್ ಮ್ಯಾನ್ಯೂವಲ್.
  13. “ಫಿಕ್ಸಿಂಗ್ ಸ್ಟ್ಯಾಟಿಸ್ಟಿಕಲ್ ಎರರ್ಸ್ ಇನ್ ಸ್ಪ್ರೆಡ್‌ಷೀಟ್‌ ತಂತ್ರಾಂಶ: ದಿ ಕೇಸಸ್ ಆಫ್ ಜಿನ್ಯೂಮರಿಕ್ ಅಂಡ್ ಎಕ್ಸೆಲ್‌”, B. D. McCullough, 2004 (http://www.csdassn.org/software_reports/gnumeric.pdf Archived 2009-04-23 ವೇಬ್ಯಾಕ್ ಮೆಷಿನ್ ನಲ್ಲಿ.). (The most recent versions given a full analysis in this freely available report are ಮೈಕ್ರೊಸಾಫ್ಟ್‌ ಎಕ್ಸೆಲ್‌ XP and ಜಿನ್ಯೂಮರಿಕ್ 1.1.2., and the author has more-limited data on then-new ಎಕ್ಸೆಲ್‌ 2003). ಮೈಕ್ಅಡ್ಡಸಾಲು ಸಾಫ್ಟ್ ಎಕ್ಸೆಲ್‌ ಮತ್ತು ಜಿನ್ಯೂಮರಿಕ್ 1.1.2., ನಲ್ಲಿರುವ ಉಚಿತ ವರದಿಯಲ್ಲಿ ಕೊಟ್ಟಿರುವ ಇತ್ತೀಚಿನ ಆವೃತ್ತಿ
  14. “ಆನ್ ದಿ ಅಕ್ಯೂರೆಸಿ ಆಫ್ ಸ್ಟ್ಯಾಟಿಸ್ಟಿಕಲ್ ಪ್ಅಡ್ಡಸಾಲು ಸೀಜರ್ ಇನ್ ಮೈಕ್ಅಡ್ಡಸಾಲು ಸಾಫ್ಟ್ ಎಕ್ಸೆಲ್‌ 2003”, B. D. McCullough, 2005 ಕಂಪ್ಯೂಟೇಷನಲ್ ಸ್ಟ್ಯಾಟಿಸ್ಟಿಕ್ಸ್ & ಡಾಟಾ ಅನಾಲಿಸಸ್ ವಾಲ್ಯೂಮ್ 49, ಇಷ್ಯೂ 4,2005 ಜೂನ್ 15, ಪುಟಗಳು 1244-1252. ಈ ದಿನಪತ್ರಿಕೆಯ ಲೇಖನದಲ್ಲಿ ಎಕ್ಸೆಲ್‌ 2003 ರ ಮೇಲೆ ಸಮಗ್ರವಾಗಿ ಮಾಡಿದಂತಹ ವಿಶ್ಲೇಷಣೆಯ ನಂತರ McCullough "ಎಕ್ಸೆಲ್‌ 2003 ಹಳೆಯ ಆವೃತ್ತಿಯ ಮೇಲೆ ಮಾಡಲಾಗಿರುವ ಸುಧಾರಿಕೆಯಾಗಿದೆ ಆದರೆ ಅಂಕಿಅಂಶಗಳ ಉದ್ದೇಶಗಳಿಗೆ ಬಳಸಬಹುದು ಎಂದು ಹೇಳಲು ಸಾಕಗುವಷ್ಟು ಮಾಡಿಲ್ಲ" ಎಂದು ನಿರ್ಣಯಿಸಿದೆ.
  15. http://ವೆಬ್.archive.org/ವೆಬ್/20020606140158/simson.net/clips/91.MIPS.ImprovPowerStep.html[ಶಾಶ್ವತವಾಗಿ ಮಡಿದ ಕೊಂಡಿ]
  16. http://query.nytimes.com/gst/fullpage.html?res=940DE4DF1138F930A25750C0A96E948260 THE EXECUTIVE COMPUTER; Lotus 1-2-3 Faces Up to the Upstarts By Peter H. Lewis Published: March 13, 1988
  17. "Linux ಸ್ಪ್ರೆಡ್‌ಷೀಟ್‌s". Archived from the original on 2002-08-06. Retrieved 2002-08-06.
  18. Kay, Alan (1984). "Computer Software". Scientific American. 251 (3): 52–59. doi:10.1038/scientificamerican0984-52. {{cite journal}}: Unknown parameter |doi_brokendate= ignored (help); Unknown parameter |month= ignored (help) – ಮೌಲ್ಯ ರೂಲ್
  19. Burnett, Margaret (2001). "Forms/3: A first-order visual language to explore the boundaries of the spreadsheet paradigm". Journal of Functional Programming. 11 (2): 155–206. Retrieved 2008-06-22. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help) – ಸ್ಪ್ರೆಡ್‌ಷೀಟ್‌ಸ್ ಆಸ್ ಫಂಗ್ಷನಲ್ ಪ್ರೋಗ್ರಾಮ್‌ಮಿಂಗ್
  20. ೨೦.೦ ೨೦.೧ Stephen G. Powell, Kenneth R. Baker, Barry Lawson (2007-12-01). "A Critical Review of the Literature on Spreadsheet Errors". Retrieved 2008-04-18.{{cite web}}: CS1 maint: multiple names: authors list (link)
  21. Richard E. Blaustein (November 2009). "Eliminating Spreadsheet Risks". Internal Auditor Magazine. Institute of Internal Auditors (IIA). Archived from the original on 2010-09-05. Retrieved 2010-05-10. ಅನ್ಡರ್ ಬ್ರಿಡ್ಜ್ ವರ್ಷನ್ Archived 2011-01-18 ವೇಬ್ಯಾಕ್ ಮೆಷಿನ್ ನಲ್ಲಿ.
  22. Stephen Bullen, Rob Bovey & John Green (2009). Professional Excel Development (2nd ed.). Addison-Wesley. ISBN 0321508793.
  23. Philip Howard (2005-04-22). "Managing spreadsheets". IT-Directors.com. Archived from the original on 2006-03-16. Retrieved 2006-06-29.
  24. Raymond R. Panko (2005-01). "What We Know About Spreadsheet Errors". Archived from the original on 2010-06-15. Retrieved 2006-09-22. {{cite web}}: Check date values in: |date= (help)
  25. ಈಸ್ ಎಕ್ಸೆಲ್‌ ಬಡ್ಜೆಟ್ಟಿಂಗ್ ಅ ಮಿಸ್ಟೇಕ್? Archived 2010-08-03 ವೇಬ್ಯಾಕ್ ಮೆಷಿನ್ ನಲ್ಲಿ.
    ಎಕ್ಸೆಲ್‌ದ ಟೀಕಾಕರರು ಎಕ್ಸೆಲ್‌ ಮೂಲತಹ ಬಡ್ಜೆಟ್ ಮಾಡಲು , ಮೊದಲೇ ಅಂದಾಜುಮಾಡಲು ಹಾಗು ಸಹೋದ್ಯಮ ಅಥವಾ ಬಲವರ್ಧಿಸುವಿಕೆಯನ್ನು ಒಳಗೊಂಡ ಇತರ ಚಟುವಟಿಕೆಗಳಿಗೆ ಸರಿಹೊಂದುವುದಿಲ್ಲವೆಂದು ಹೇಳಿದ್ದಾರೆ. ಅವರು ಸರಿಯಾ?
  26. http://www.cs.uiowa.edu/~jcryer/JSMTalk2001.pdf Archived 2009-01-26 ವೇಬ್ಯಾಕ್ ಮೆಷಿನ್ ನಲ್ಲಿ. Problems With Using ಮೈಕ್ರೊಸಾಫ್ಟ್ ಎಕ್ಸೆಲ್‌ ಫಾರ್ ಸ್ಟ್ಯಾಟಿಸ್ಟಿಕ್ಸ್
  27. ಸ್ಪ್ರೆಡ್‌ಷೀಟ್‌ ಅಡಿಕ್ಷನ್
  28. http://office.microsoft.com/en-us/excel/HP051992911033.aspx
  29. "ಆರ್ಕೈವ್ ನಕಲು". Archived from the original on 2009-05-04. Retrieved 2010-08-01.
  30. "ಪಬ್ಲಿಕ್ ರಿಪೋರ್ಟ್ಸ್ ಆಫ್ ಸ್ಪ್ರೆಡ್‌ಷೀಟ್‌ ಎರರ್ಸ್ ಕೊಲೇಟೆಡ್ ಬೈ ದಿ ಯುಅಡ್ಡಸಾಲು ಪಿಯನ್ ಸ್ಪ್ರೆಡ್‌ಷೀಟ್‌ ರಿಸ್ಕ್ಸ್ ಇಂಟ್ರೆಸ್ಟ್ ಗ್ರೂಪ್ (EuSpRIG)". Archived from the original on 2010-04-13. Retrieved 2010-08-01.
  31. "ಎಕ್ಸೆಲ್‌ ಸ್ಪ್ರೆಡ್‌ಷೀಟ್‌ಸ್ ಇನ್ ಸ್ಕೂಲ್ ಬಡ್ಜೆಟ್ಟಿಂಗ್ - ಅ ಕಾಷನರಿ ಟೇಲ್ (2001)". Archived from the original on 2007-10-07. Retrieved 2010-08-01.
  32. "Spreadsheets and Capital Markets" (PDF). June 2009. Archived from the original (PDF) on 2011-06-04. Retrieved 2010-08-01.

ಹೊರಗಿನ ಕೊಂಡಿಗಳು ಬದಲಾಯಿಸಿ

ಸ್ಪ್ರೆಡ್‌ಷೀಟ್‌ ಗಳ ಇತಿಹಾಸ ಬದಲಾಯಿಸಿ

  • ಸ್ಪ್ರೆಡ್‌ಷೀಟ್‌ ಗಳ ಸಂಕ್ಷಿಪ್ತ ಇತಿಹಾಸ D.J. ಪವರ್ ನಿಂದ
  • ದಿ ಹಿಸ್ಟ್ರಿ ಆಫ್ ಮ್ಯಾಥಮ್ಯಾಟಿಕಲ್ ಕೋಷ್ಟಕ : ಫ್ರಮ್ ಸಮರ್ ಟು ಸ್ಪ್ರೆಡ್‌ಷೀಟ್‌ಸ್ ಮಾರ್ಟೀನ್ ಕ್ಯಾಂಪೆಬೆಲ್-ಕೆಲ್ಲಿ, ಮೇರಿ ಕ್ರೊಆರ್ಕೆನ್, ರೇಮಂಡ್ ಫ್ಲೂಡ್, ಇಲೆಯನರ್ ರಾಬ್ಸನ್ (ಸಂಪಾದಕರು). (notice amazon.com)

ಸಾಮಾನ್ಯ ಮಾಹಿತಿ ಬದಲಾಯಿಸಿ