ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ

ಸಂಸ್ಥೆಯ ಬಗ್ಗೆ

ಬದಲಾಯಿಸಿ

ಸ್ನೇಹ[] ಶಿಕ್ಷಣ ಸಂಸ್ಥೆಯು[] ಸುಳ್ಯ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಸುಮಾರು 1.25 ಕಿ. ಮೀ.ಗಳಷ್ಟು ದೂರವಿದ್ದು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಬಲಬದಿಯಲ್ಲಿ ಸ್ನೇಹಶಿಲಾ ಎಂಬಲ್ಲಿ ಸ್ಥಾಪನೆಯಾಗಿದೆ. ಇದು ತನ್ನ ಮೊದಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು 1996ರಲ್ಲಿ ಪ್ರಾರಂಭಿಸಿ, ಬಳಿಕ 2000ದಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನು ಸ್ಥಾಪಿಸಿದೆ.

ಸ್ನೇಹ ಶಿಬಿರ ೨೦೧೫ ಸಮಾರೋಪ ಸಮಾರಂಭ

ಬದಲಾಯಿಸಿ

ಶಿಬಿರಗೀತೆ ಹಾಡುತ್ತಿರುವ ಶಿಬಿರಾರ್ಥಿಗಳು

ಏಪ್ರಿಲ್ 9, 2015 | ಚಿತ್ರಾಂಗಣ | ನಿಮ್ಮ ಟಿಪ್ಪಣಿ ಬರೆಯಿರಿ[]

ಶಿಬಿರದ ನೆನಪುಗಳು/Memories from Camp

ಬದಲಾಯಿಸಿ

ಕಥೆ ರಚನೆ-ವಾಚನ ಕಾರ್ಯಾಗರದಲ್ಲಿ

ಏಪ್ರಿಲ್ 6, 2015 | ಚಿತ್ರಾಂಗಣ | ನಿಮ್ಮ ಟಿಪ್ಪಣಿ ಬರೆಯಿರಿ

ಸ್ನೇಹ ಮಕ್ಕಳ Sneha Makkala Shibira

ಬದಲಾಯಿಸಿ

ಮಾರ್ಚ್ 26, 2015 | ಚಿತ್ರ | ನಿಮ್ಮ ಟಿಪ್ಪಣಿ ಬರೆಯಿರಿ

ಮಾರ್ಚ್ 9, 2015

ಕನ್ನಡ ಮಾಧ್ಯಮವೆಂಬ ಕೀಳರಿಮೆ ಬೇಡ- ಡಾ| ಎಲ್ ಹನುಮಂತಯ್ಯ

ಬದಲಾಯಿಸಿ

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಪಡೆದು, ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯಿರಿ. ಮಕ್ಕಳು ಮಾತೃಭಾಷೆಯಲ್ಲಿಯೇ ಬೇಗನೆ ಗ್ರಹಿಸಬಲ್ಲರು. ಇದರಿಂದ ಅವರ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಸಾಮಾನ್ಯವಾಗಿ ಜಾಗತೀಕರಣದ ಭರಾಟೆಯಲ್ಲಿ ಇಂಗ್ಲೀಷ್ ಮಾಧ್ಯಮದ ಕುರಿತು ಆಸಕ್ತಿ ಹೆಚ್ಚಾಗಿರುತ್ತದೆ. ಆದರೆ ಈ ಶಾಲೆಯ ಪೋಷಕರು ಕನ್ನಡ ಮಾಧ್ಯಮದ ಮೇಲೆ ಭರವಸೆ ಇಟ್ಟುಕೊಂಡು ಕಳುಹಿಸುತ್ತಿದ್ದಾರೆ. ನಿಜವಾಗಿ ಅವರು ಅಭಿನಂದನಾರ್ಹರು. ಮುಂದುವರಿದ ರಾಷ್ಟ್ರಗಳಲ್ಲಿ ಮಾತೃಭಾಷೆಯ ಶಿಕ್ಷಣದ ಮೂಲಕ ಅಭಿವೃದ್ಧಿಯಾಗಿದೆ. ಹಾಗಾಗಿ ಕನ್ನಡ ಮಾಧ್ಯಮವೆಂಬ ಕೀಳರಿಮೆ ಯಾರಿಗೂ ಬೇಡ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಎಲ್ ಹನುಮಂತಯ್ಯ ಅವರು ಹೇಳಿದರು. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡದ ಹಿರಿಯ ಸಾಹಿತಿಗಳ ಗೋಡೆ ಚಿತ್ರಗಳನ್ನು ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳ ಚಿತ್ರಗಳನ್ನು ರಚಿಸಿದ ಶಾಲಾ ಶಿಕ್ಷಕ ಶ್ರೀ ಪ್ರಸನ್ನ ಐವರ್ನಾಡು ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅವರು ಶಾಲೆಯ ಹೊಸ ಧ್ವನಿವರ್ಧಕ ವ್ಯವಸ್ಥೆಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸುಳ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಗೌಡ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಡಾ| ಚಂದ್ರಶೇಖರ ದಾಮ್ಲೆ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಶಿಕ್ಷಕಿ ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿದರು.


ಮಾರ್ಚ್ 9, 2015

ಸ್ನೇಹ ಶಾಲೆಗೆ ಜಿಲ್ಲಾ ಮಟ್ಟದ ಹಸಿರು ಶಾಲೆ ಪ್ರಶಸ್ತಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೊಡಲ್ಪಡುವ ಪರಿಸರ ಮಿತ್ರ ಶಾಲಾ ಪ್ರಶಸ್ತಿಗಳಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯು ‘ಹಸಿರು ಶಾಲೆ’ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸುಳ್ಯ ತಾಲೂಕಿನಿಂದ ಆಯ್ಕೆಯಾದ ಏಕಮಾತ್ರ ಶಾಲೆಯಾಗಿದೆ. ಜಿಲ್ಲಾ ಮಟ್ಟದಲ್ಲಿ ಹಸಿರು ಶಾಲೆಗಳಲ್ಲಿ ಮೊದಲ ಸ್ಥಾನಿಯಾಗಿರುವ ಸ್ನೇಹ ಶಾಲೆಯೊಂದೇ ಅನುದಾನರಹಿತ ಖಾಸಗಿ ಶಾಲೆಗಳ ಪೈಕಿ ಬಹುಮಾನ ಗಳಿಸಿತ್ತು. ಮಾರ್ಚ್ ೩ರಂದು ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಯು ರೂ. ೨೦೦೦ ನಗದು, ಪ್ರಶಸ್ತಿ ಪತ್ರ ಮತ್ತು ಫಲಕವನ್ನು ಒಳಗೊಂಡಿದೆ.

ಇಲ್ಲಿ ಬಾಲವಾಡಿಯಿಂದ[] 10ನೆಯ ತರಗತಿಯವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಶಿಕ್ಷಣ ಸಂಸ್ಥೆಯ ಆಡಳಿತದಲ್ಲಿ ಒಟ್ಟು ಎರಡು ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಹೆಸರೇ ತಿಳಿಸುವಂತೆ ‘ಸ್ನೇಹ’ ಅಂದರೆ ಗೆಳೆತನ. ವಿಭಿನ್ನ ವೃತ್ತಿಯಲ್ಲಿನ ಸಮಾನ ಮನಸ್ಕ ಗೆಳೆಯರ ಸೃಷ್ಟಿಯೇ ಈ ವಿದ್ಯಾಸಂಸ್ಥೆ. ಇದರಲ್ಲಿ ವೈದ್ಯರು, ಶಿಕ್ಷಕರು, ಇಂಜಿನಿಯರರು ಹಾಗೂ ಉದ್ಯಮಿಗಳಿದ್ದಾರೆ. ಪ್ರಸ್ತುತ ನಿವೃತ್ತ ಶಿಕ್ಷಕ ಡಾ| ಚಂದ್ರಶೇಖರ ದಾಮ್ಲೆಯವರು ಇದರ ಅಧ್ಯಕ್ಷರಾಗಿದ್ದು ವೈದ್ಯ ಡಾ|ವಿದ್ಯಾಶಾಂಭವ ಪಾರೆಯವರು ಇದರ ಸಂಚಾಲಕರಾಗಿದ್ದಾರೆ. ನಿರ್ದೇಶಕರಾಗಿ ಭಾರತದ ಸೇತು ಬ್ರಹ್ಮ, ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್, ಕಾಂಕೂಡ್ ಎಂಬ ಮರಕ್ಕೆ ಸಂವಾದಿಯಾಗಿರುವ ಕೃತಕ ವಸ್ತುವಿನ ಸೃಷ್ಟಿಕರ್ತ ಎಸ್ ಕೆ ಆನಂದ ಕುಮಾರ್, ಉದ್ಯಮಿ ಶ್ರೀಕರ ದಾಮ್ಲೆ ಮೊದಲಾದವರಿದ್ದಾರೆ. ಸಂಸ್ಥೆಯು ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಸತತ 7 ಬಾರಿ ಶೇಕಡಾ 100 ಫಲಿತಾಂಶ ಗಳಿಸುತ್ತಿದೆ.


ಉಲ್ಲೇಖ

ಬದಲಾಯಿಸಿ