ಗಿರೀಶ್ ಭಾರಧ್ವಾಜ್
ಇವರನ್ನು ತೂಗುಸೇತುವೆಗಳ ಸರದಾರ ಎಂದೇ ಕರ್ನಾಟಕದ ಜನ ಗುರುತಿಸುತ್ತಾರೆ. ಇವರು ಕರ್ನಾಟಕದ ಹಲವಾರು ಪ್ರದೇಶಗಳನ್ನು ಇವರ ತೂಗುಸೇತುವೆಗಳ ಮೂಲಕ ಬೆಸೆದಿದ್ದಾರೆ. ಅದರಲ್ಲೂ ಸುಳ್ಯದ ಪಯಸ್ವಿನಿ ನದಿಗೆ ಕಟ್ಟಿದ ರೋಟರಿ-ಇನ್ಫೋಸಿಸ್ ಸೇತುವೆ ಜನಾಕರ್ಷಣೆಯ ಕೇಂದ್ರವಾಗಿದ್ದು ಪ್ರೇಕ್ಷಣೀಯ ಸ್ಥಳವು ಆಗಿದೆ. ಇದು ಸುಳ್ಯ ನಗರವನ್ನು ದೋಡ್ಡೇರಿ ಎಂಬ ಗ್ರಾಮಕ್ಕೆ ಸಂಪರ್ಕಿಸುತ್ತದೆ. ಇವರು ಇದು ಮಾತ್ರವಲ್ಲದೆ ಇನ್ನೂ ಹಲವಾರು ಸ್ಥಳಗಳಲ್ಲಿ ಸೇತುಬಂಧ ಮಾಡಿದ್ದಾರೆ. ಸುಳ್ಯದಲ್ಲಿ ಇರುವ ಕರಾಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಇವರು ಸಮುದಾಯದ ಹೆಮ್ಮೆಯ ಭಾರದ್ವಾಜ ಕುಟುಂಬಕ್ಕೆ ಸೇರಿದವರು. ಸುಳ್ಯದ ಹಲವಾರು ಸ್ಥಳಗಳಲ್ಲಿ ಇವರ ತೂಗುಸೇತುವೆಗಳಿದ್ದು ಇತ್ತೀಚೆಗೆ ಇವರ ಸಹಪಾಠಿ ಕರ್ನಾಟಕದ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡರ ಊರನ್ನು ಜಾಲ್ಸೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಬೆಸೆದಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿಗಿರೀಶ್ ಭಾರದ್ವಾಜ್ ಇತ್ತೀಚೆಗೆ ಸಿಎನ್ಎನ್-ಐಬಿಎನ್ ಹಿರಿಯ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ೨೦೧೭ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.[೧]
*1975 ರಲ್ಲಿ ಎಂಜಿನಿಯರಿಂಗ್ ಪದವಿದಾರೆ ಗಿರೀಶ್ ಭಾರದ್ವಾಜ್ ಸುಳ್ಯದ ಒಂದು ಚಿಕ್ಕ ಕಾರ್ಯಗಾರವನ್ನು ನಡೆಸಿದರು. ತನ್ನ ಜೀವನದಲ್ಲಿ ಮೊದಲ ಬಾರಿಗೆ, ಗಿರೀಶ್ ಸೇತುವೆಗಳ ಅಧ್ಯಯನ ಆರಂಭಿಸಿದರು.
|