ಸೌತೆಕಾಯಿ ತಂಬುಳಿ ಸೌತೆಕಾಯಿಯನ್ನು ಉಪಯೊಗಿಸಿ ಮಾಡುವ ಪಾನಿಯ.[]

ಸೌತೆಕಾಯಿ ತಂಬುಳಿ
ಇತರ ಹೆಸರುತಂಬ್ಳಿ
ಮೂಲಭಾರತ
ಪ್ರದೇಶ ಅಥವಾ ರಾಜ್ಯಮಂಗಳೂರು,ಉಡುಪಿ
ಮುಖ್ಯ ಸಲಕರಣೆಸೌತೆ ಕಾಯಿ
ಸಮಾನ ಭಕ್ಷ್ಯಗಳುಮಾವಿನಕಾಯಿ ತಂಬುಳಿ

ಬೇಕಾಗುವ ಸಾಮಾಗ್ರಿಗಳು

ಬದಲಾಯಿಸಿ
  • ಸೌತೆಕಾಯಿ - 1/2 ಕಪ್
  • ತೆಂಗಿನಕಾಯಿ - 1/2 ಕಪ್
  • ಸಾಸಿವೆ - 1 ಚಮಚ
  • ಮೆಣಸು - 3 ರಿಂದ 4
  • ಮೊಸರು - 1 ಕಪ್
  • ಅರಸಿಣ ಹುಡಿ - 2 ಸಣ್ಣ ಚಮಚ
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಬದಲಾಯಿಸಿ

ಮೊದಲಿಗೆ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿಕೊಳ್ಳಬೇಕು, ಹಣಿ ಮೆಣಸನ್ನು ಬೀಜ ತೆಗೆದು ಎಣ್ಣೆಯಲ್ಲಿ ಹುರಿದುಕೊಂಡು ಇಟ್ಟುಕೊಳ್ಳಬೇಕು, ಸ್ವಲ್ಪ ಕಾಯಿತುರಿಯನ್ನು ತೆಗೆದುಕೊಳ್ಳಬೇಕು. ಮೊದಲಿಗೆ ಸೌತೆಕಾಯಿ, ಕಾಯಿತುರಿ, ಮೆಣಸು ಹಾಕಿ ಮಿಕ್ಸಿ ಮಾಡಿಕೊಳ್ಳಬೇಕು. ತೀರ ಪೇಸ್ಟ್ ಅಂತೆ ಮಾಡದೇ ಚೂರು ತೆಳುವಾಗಿ ನೀರು ಬೆರಿಸಿಕೊಂಡು ರುಬ್ಬಿದ ಸೌತೆಕಾಯಿ ಮಿಶ್ರಣ ತೆಗೆದುಕೊಳ್ಳಬೇಕು ನಂತರ ಮಜ್ಜಿಗೆ ಅಥವಾ ಮೊಸರು ಸೇರಿಸಿಕೊಳ್ಳಬೇಕು.[]

ಬೇರೆ ಬಾಷೆಯಲ್ಲಿ ಸೌತೆಕಾಯಿ ತಂಬುಳಿ

ಬದಲಾಯಿಸಿ
  • ತೌತೆ ತಂಬುಲಿ - ತುಳು

ಉಲ್ಲೇಖಗಳು

ಬದಲಾಯಿಸಿ
  1. "Special Recipe: ಈ ಬೇಸಿಗೆಯಲ್ಲಿ ಸೌತೆಕಾಯಿ ತಂಬುಳಿ ತಿಂದ್ರೆ ಒಳ್ಳೆಯದು, ಮಾಡೋದು ಹೇಗೆ ನೋಡಿ!". News18 ಕನ್ನಡ. 22 March 2024. Retrieved 16 July 2024.
  2. "ಬೇಸಿಗೆಯಲ್ಲಿ ದೇಹಕ್ಕೆ ತಂಪು ಬಾಯಿಗೆ ರುಚಿ ಈ ಸೌತೆಕಾಯಿ ತಂಬುಳಿ ಒಮ್ಮೆ ಟ್ರೈ ಮಾಡಿ / Southekayi Tambuli /Tambuli | Juicing recipes, Breakfast recipes indian, Tambuli recipe". Pinterest (in ಇಂಗ್ಲಿಷ್). Retrieved 17 July 2024.