ಸೋಮೇಶ್ವರ ದೇವಾಲಯದ ಐತಿಹಾಸಿಕ ಹಿನ್ನೆಲೆ

ಬದಲಾಯಿಸಿ

ಬೈಂದೂರು ಪೇಟೆಯಿಂದ ಸುಮಾರು ೪ ಕಿ. ಮೀ. ಪಶ್ಚಿಮಾಭಿಮುಖವಾಗಿ ಸಾಗಿದರೆ, ವಿಶಾಲವಾದ ಕಡಲತೀರ ನಮ್ಮನ್ನು ಆಹ್ವಾನಿಸುತ್ತದೆ. ಬಿಂದುಪುರದ ರಕ್ಷಣಾ ಗೋಡೆಯಂತಿರುವ ’ಒತ್ತಿನೆಣೆ ಗುಡ್ಡ’ದ ಪಡುವಣದಂಚಿನಲ್ಲಿ ಆಕರ್ಷಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ತಾಣವೇ ’ಸೋಮೇಶ್ವರ’. ಇಂತಹ ನೈಸರ್ಗಿಕ ಸೌಂದರ್ಯವನ್ನು ಮೂಲ-ಬಂಡವಾಳವನ್ನಗಿಟ್ಟುಕೊಂಡು ಹಿಂದೊಮ್ಮೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ’ಬೈಂದೂರಿನ ಸೋಮೇಶ್ವರ ಸಮುದ್ರ ತೀರ’, ಹೆಚ್ಚಿನ ಅಭಿವೃದ್ಧಿಯನ್ನೇನೂ ಕಾಣದೆ, ಪ್ರವಾಸೋದ್ಯಮ ಇಲಾಖ್ಯೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿ ಪರ್ಯಟಕರ ದಿನಚರಿಯಿಂದ ದೂರಸರಿದಿರುವುದು ಕಾಣಬರುತ್ತಿದೆ.

’ರಾಜ್ಯಸರ್ಕಾರದ ಪ್ರವಾಸೋದ್ಯಮ ಇಲಾಖೆ,’ ಕಣ್ಣುತೆರೆಯಲಿ

ಬದಲಾಯಿಸಿ

ಇಲ್ಲಿನ ಸಮುದ್ರತೀರದ ಬಳಿ, ’ಸೋಮೇಶ್ವರ ದೇವಾಲಯ’ವಿದ್ದು, ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ’ಕರ್ಕಾಟಕ ಅಮಾವಾಸ್ಯೆ’ಯ ಸಮಯದಲ್ಲಿ ಇಲ್ಲಿನ ’ನಾಗತೀರ್ಥ’ದಲ್ಲಿ ತೀರ್ಥ ಸಿಂಚನವಾಗುತ್ತದೆ ಎನ್ನುವ ಪ್ರತೀತಿಯಿದೆ. ಈ ತರಹ ಧಾರ್ಮಿಕವಾಗಿ ತನ್ನ ಸ್ಥಾನವನ್ನು ಕಂಡುಕೊಂಡಿರುವ ಈ ಪವಿತ್ರ ಸ್ಥಾನ, ಸೃಷ್ಟಿಯ ವಿಚಿತ್ರ ಸೊಬಗು, ಧಾರ್ಮಿಕ ಹಿನ್ನೆಲೆ, ಹಾಗೂ ಕಣ್ಣಿಗೆ ಹಬ್ಬದ ವಾತಾವರಣವನ್ನು ಕಾಣಿಸುವ ಕರಾವಳಿ ಪ್ರವಾಸಿಗರನ್ನು ತನ್ನೆಡೆಗೆ ಸೂಜಿಗಲ್ಲಿನ ತರಹ ಆಕರ್ಷಿಸುತ್ತಿದೆ.

’ಸುಮನಾ ನದಿ’, ಮತ್ತು ’ಅರಬ್ಬೀ ಸಮುದ್ರದ’ ಸಂಗಮ ಸ್ಥಾನ

ಬದಲಾಯಿಸಿ

ಹಿಂದೆ ಪೋರ್ಚುಗೀಸ್ ನಾವಿಕರು, ಹಡಗಿನ ಮೂಲಕ ಇಲ್ಲಿಗೆ ಧಾವಿಸಿ, ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಈ ಸುಂದರ ನೆಲೆವೀಡಿನಲ್ಲಿ ಹಲವಾರು ಚಲನ ಚಿತ್ರಗಳು ಚಿತ್ರ‍ೀಕೃತವಾಗಿವೆ. ವಿಶ್ವ ವಿಖ್ಯಾತ, ಹಾಲಿವುಡ್ ನಟ, ಹಾಗೂ ಚಿತ್ರನಿರ್ದೇಶಕ, ದಿವಂಗತ, ’ಚಾರ್ಲಿ ಚಾಪ್ಲಿನ್ ರ ಪ್ರತಿಮೆ’ ಯನ್ನು ಇಲ್ಲಿಯೇ ನಿರ್ಮಾಣಕ್ಕೆ ತೊಡಗಿದ್ದು, ರಾಜ್ಯಮಟ್ಟದ ಸುದ್ದಿ ಯಾಗಿಸಿತ್ತು. ಆದರೆ ಪ್ರವಾಸೋದ್ಯ ಇಲಾಖೆಯ ಬೇಜವಾಬ್ದಾರಿ ಹಾಗೂ ಅಲಕ್ಷ್ಯದಿಂದಾಗಿ ಪ್ರವಾಸಿಗಳಿಗೆ ಬೇಸರವನ್ನು ತಂದಿದೆ. ಅವರುಗಳಿಗೆ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸದ ಹೊರತು, ಸಮಸ್ಯೆ ಬಗೆಹರಿಯುವುದಿಲ್ಲ. ಬೇಗ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇದನ್ನು ಗಮನಿಸಿ, ಸಮಸ್ಯೆಗಳಿಗೆ ಸೂಕ್ತ ಸಮಾಧಾನವನ್ನು ಕಾಣಬೇಕಿದೆ. ಪ್ರವಾಸಿಗಳಿಗೆ ಸೂಕ್ತ ಆಸನದ ವ್ಯವಸ್ಥೆ, ಕಡಲತೀರದ ನೈರ್ಮಲ್ಯೀಕರಣ, ಬಿಸಿಲಿನ ಝಳಕ್ಕೆ ಸೂಕ್ತ ಪರಿಹಾರ, ಸಂಗಮ ಪ್ರದೇಶದಲ್ಲಿ ವೀಕ್ಷಿಸಲು ಸರಿಯಾದ ಸಮಾಧಾನಕರ, ಅಪಾಯರಹಿತ ಜಾಗಗಳ ನಿರ್ಮಾಣ, ಹಾಗೂ ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಸ್ಥಾಪಿಸಿ ಎಚ್ಚರಿಕೆಯ ಕರೆಯನ್ನು ನೀಡುವ ಒಂದು ಕೆಲಸ ನಡೆಯಬೇಕಾಗಿದೆ.

ಸಮುದ್ರ ದಂಡೆಯಿಂದ, ಅಕ್ರಮ ಮರಳುಗಳ್ಳರ ನಿರಂತರ ಮರಳು ಸಾಗಾಟ ನಿಲ್ಲಲಿ

ಬದಲಾಯಿಸಿ

ಮರಳುಗಳ್ಳರು ಅಟ್ಟಹಾಸಪೂರ್ವಕವಾಗಿ ಸಾಗಣೆಮಾಡುತ್ತಿರುವ ಮರಳನ್ನು ನಿಲ್ಲಿಸಿ, ಪಕ್ಕದಲ್ಲಿರುವ, ’ಮುರ್ಡೇಶ್ವರ’, ’ಗೋಕರ್ಣ’ಗಳಂತೆ, ’ಸೋಮೇಶ್ವರ ಸಮುದ್ರ ತೀರ’ವನ್ನು ಅಭಿವೃದ್ಧಿ ಪಡಿಸಿದಲ್ಲಿ ’ಬೈಂದೂರಿನ’ ಪ್ರವಾಸೋದ್ಯಮಕ್ಕೊಂದು, ’ಹೊಸಭಾಷ್ಯ’ದೊರೆಯುತ್ತದೆ, ಎನ್ನುವ ಮಾತು ಇಲ್ಲಿನ ಸ್ಥಾನೀಯಜನರಲ್ಲಿ ಕಂಡುಬರುತ್ತಿದೆ. ಸುಪ್ರಸಿದ್ಧ ’ಕೊಲ್ಲೂರು’ ಹತ್ತಿರದಲ್ಲೇ ಇರುವುದರಿಂದ, ’ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ’ ಈ ಸ್ಥಳವನ್ನೂ ಅಭಿವೃದ್ಧಿ ಪಡಿಸುವುದು ಸೂಕ್ತವಾಗಿದೆ.