ಸೋಮೇಶ್ವರ ದೇವಸ್ಥಾನ, ಬೈಂದೂರು
ಸೋಮೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರಿನಲ್ಲಿದೆ. ಇದು ಸೋಮೇಶ್ವರ ಕಡಲತೀರಕ್ಕೆ ಸಮೀಪದಲ್ಲಿರುವ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.[೧] ಇದು ಬೈಂದೂರು ನದಿ ಮತ್ತು ಅರಬ್ಬೀ ಸಮುದ್ರದ ಪಕ್ಕದಲ್ಲಿದೆ.
ವಿಶೇಷತೆ
ಬದಲಾಯಿಸಿಈ ದೇವಾಲಯವು ಹಿಂದೂ ದೇವರಾದ ಶಿವನಿಗೆ ಸಮರ್ಪಿತವಾಗಿದೆ.[೨] ಇಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ ಮತ್ತು ಅನೇಕ ಅದ್ಭುತ ಶಿಲ್ಪಗಳಿವೆ. ಈ ದೇವಸ್ಥಾನವನ್ನು ಬಂಡೆಯ ಮೇಲೆ ನಿರ್ಮಿಸಲಾಗಿದೆ. ದೇವಸ್ಥಾನದ ಹೊರಗಡೆ ಕೆಲವು ಕಲ್ಲಿನ ಶಾಸನಗಳಿವೆ.[೩] ಇವು ಪ್ರಾಚೀನ ದೇವಾಲಯದ ಕಥೆಗಳನ್ನು ಹೇಳುತ್ತವೆ. ದೇವಸ್ಥಾನದ ಆವರಣದಲ್ಲಿ ನಾಗತೀರ್ಥ ಎಂಬ ಸಿಹಿನೀರಿನ ದೀರ್ಘಕಾಲಿಕ ಭೂಗತ ಮೂಲವನ್ನು ಹೊಂದಿರುವ ಕೊಳವಿದೆ.
ದೇವಾಲಯದ ಪಕ್ಕದಲ್ಲಿರುವ ಬಂಡೆಯ ಮೇಲೆ ಸಿಹಿ ನೀರಿನ ಹೊಳೆ ನಿರಂತರವಾಗಿ ಹರಿಯುತ್ತದೆ.[೩] ಈ ಹೊಳೆ ಬಂಡೆಗಳೊಳಗೆ ಕಣ್ಮರೆಯಾಗುತ್ತದೆ ಮತ್ತು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಸಮುದ್ರದ ಅಲೆಗಳು ಭಗವಂತನ ಪಾದಗಳನ್ನು ತೊಳೆಯುತ್ತಿರುವಂತೆ ತೋರುತ್ತದೆ. ಸೋಮೇಶ್ವರ ದೇವಸ್ಥಾನವು ತೀರ್ಥಕ್ಷೇತ್ರವಾಗಿರುವುದರ ಜೊತೆಗೆ ಅಪೂರ್ವ ಪ್ರವಾಸಿ ತಾಣವು ಆಗಿದೆ.
ಮಾರ್ಗಸೂಚಿ
ಬದಲಾಯಿಸಿಈ ದೇವಸ್ಥಾನವು ಉಡುಪಿಯಿಂದ ಸುಮಾರು ೭೪.೬ ಕಿ.ಮೀ ಹಾಗೂ ಕುಂದಾಪುರದಿಂದ ೩೯.೩ ಕಿ.ಮೀ ದೂರದಲ್ಲಿದೆ.
ಹತ್ತಿರದ ಸ್ಥಳಗಳು
ಬದಲಾಯಿಸಿ- ಕ್ಷಿತಿಜ ನೇಸರ ಧಾಮ - ೧.೨ ಕಿ.ಮೀ
- ಒತ್ತಿನೆಣೆ ಕಡಲತೀರ - ೧.೫ ಕಿ.ಮೀ
- ಮರವಂತೆ ಕಡಲತೀರ - ೨೨.೬ ಕಿ.ಮೀ
- ತ್ರಾಸಿ ಕಡಲತೀರ - ೨೩.೧ ಕಿ.ಮೀ