ಒತ್ತಿನೆಣೆ ಸಮುದ್ರ

ಒತ್ತಿನೆಣೆ ಕಡಲತೀರವು ಕರ್ನಾಟಕ ಕರಾವಳಿ ಬಾಗದಲ್ಲಿ ಇದೆ. ಈ ಸಮುದ್ರ ಬೈಂದೂರ ತಾಲೂಕಿನಲ್ಲಿ ಇದೆ. ಒತ್ತಿನೆಣೆ ಸಮುದ್ರವನ್ನು ಸೋಮೆಶ್ವರ ಸಮುದ್ರವೆಂದು ಕರೆಯುತ್ತಾರೆ. ಈ ಪ್ರದೇಶದ ವಿಶೇಷಯೇನೆಂದರೆ ಪಶ್ಛಿಮ ದಿಕ್ಕಿನಲ್ಲಿ ಅರಬ್ಬಿ ಸಮುದ್ರ ಪೂರ್ವಾ ದಿಕ್ಕಿನಲ್ಲಿ ಸುಮನ ನದಿ ಹರಿಯುತ್ತದೆ ಮತ್ತೆ ಇವೇರೆಡರ ಮಿಲನದ ಸ್ಥಳದಲ್ಲಿ ಸುಂದರವಾದ ದ್ವೀಪ ನಿರ್ಮಾಣವಾಗಿದೆ. ಆ ದ್ವೀಪವನ್ನು ಒತ್ತಿನೆಣೆ ದ್ವೀಪ ಎಂದು ಕರೆಯುತ್ತಾರೆ. ಸೋಮೆಶ್ವರ ದೇವಸ್ಥಾನವು ಸಮುದ್ರದ ಪಕ್ಕದಲ್ಲೆ ಇದೆ. ಸಮುದ್ರದಿಂದ ಸ್ವಲ್ಪ ದೂರದಲ್ಲಿ ಅತಿಥಿ ಗೃಹವಿದ್ದು ಆ ಗೃಹವು ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಆ ಬೆಟ್ಟದ ಮೇಲಿನಿಂದ ಕಡಲತೀರವನ್ನು ನೋಡಿದರೆ ಅವರೆಡರ ಮಿಲನವು ಸಂಪೂರ್ಣವಾಗಿ ನೋಡಬಹುದು.

'ಹತ್ತಿರದ ಪ್ರವಾಸಿ ತಾಣಗಳು'

  1. ಸೋಮೇಶ್ವರ ದೇವಸ್ಥಾನ
  2. ಮುರ್ಡೇಶ್ವರ ಸಮುದ್ರ
  3. ಮುರ್ಡೇಶ್ವರ ದೇವಸ್ಥಾನ
  4. ಮರವಂತೆ ಸಮುದ್ರ
  5. ಕ್ಷಿತಿಜ ನೇಸರ ಧಾಮ