ಸೋಮಲತೆಯು[] ಅಪೋಸಿನೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯ ಪ್ರಜಾತಿ ಮತ್ತು ಸಾಮಾನ್ಯವಾಗಿ ಕಣಿವೆಗಳು ಮತ್ತು ಹಿಮಾಲಯದಲ್ಲಿನ ಉಪೋಷ್ಣವಲಯದ ಪರ್ವತಗಳಲ್ಲಿ ಕಂಡುಬರುತ್ತದೆ. ಈ ಸಸ್ಯವನ್ನು ಹಿಂದೂ ಧರ್ಮಕ್ಕೆ ಧಾರ್ಮಿಕವಾಗಿ ಸಂಬಂಧಿಸಲಾಗಿದೆ ಮತ್ತು ಪ್ರಾಚೀನ ಭಾರತದಲ್ಲಿ ಸೋಮರಸದ ಪ್ರಧಾನ ಘಟಕಾಂಶವಾಗಿತ್ತು ಎಂದು ನಂಬಲಾಗಿದೆ.

ವಿವರಗಳು

ಬದಲಾಯಿಸಿ

ಈ ಎಲೆಗಳಿಲ್ಲದ ಸಸ್ಯವು ಭಾರತದಾದ್ಯಂತ ಕಲ್ಲಿರುವ, ಬಂಜರು ಸ್ಥಳಗಳಲ್ಲಿ ಬೆಳೆಯುತ್ತದೆ. ಈ ಸಸ್ಯವು ಸೌಮ್ಯವಾಗಿ ಅಲ್ಪಾಮ್ಲೀಯವಾದ ಹಾಲಿನಂಥ ರಸವನ್ನು ಹೇರಳವಾಗಿ ಉತ್ಪತ್ತಿಮಾಡುತ್ತದೆ, ಮತ್ತು ಯಾತ್ರಿಕರು ಬಾಯಾರಿಕೆ ತಗ್ಗಿಸಲು ಇದರ ಎಳೆಯ ಕಾಂಡಗಳನ್ನು ಹೀರುತ್ತಾರೆ. ಇದೇ ಸಸ್ಯವು ವೇದಗಳಲ್ಲಿ ಉಲ್ಲೇಖಿತವಾದ ಸೋಮ ಸಸ್ಯ ಎಂದು ಸಾಂಪ್ರದಾಯಿಕ ಕಥನಗಳು ಅಭಿಪ್ರಾಯಪಡುತ್ತವೆ. ಇದನ್ನು ರಾತ್ರಿಯ ಹೊತ್ತು ಬೆಳದಿಂಗಳಿನಲ್ಲಿ ಸಂಗ್ರಹಿಸುತ್ತಿದ್ದರಿಂದ ಪ್ರಾಚೀನ ಭಾರತೀಯರು ಇದನ್ನು ಸೋಮ ಸಸ್ಯ ಎಂದು ಕರೆದರು. ಇದನ್ನು ಟಗರುಗಳಿಂದ ಎಳೆಯಲ್ಪಟ್ಟ ಬಂಡಿಗಳಲ್ಲಿ ಮನೆಗಳಿಗೆ ಸಾಗಿಸಿ, ಮೇಕೆಯ ಕೂದಲಿನ ಜರಡಿಯ ಮೂಲಕ ಇದರ ರಸವನ್ನು ಸೋಸಿ, ಜವೆ ಹಾಗೂ ತುಪ್ಪದೊಂದಿಗೆ ಸೇರಿಸಿ, ಹುಳಿಬರಿಸಿದ ಮದ್ಯವನ್ನು ತಯಾರಿಸಲಾಗುತ್ತಿತ್ತು.

ಉಲ್ಲೇಖಗಳು

ಬದಲಾಯಿಸಿ
  1. Quattrocchi, Umberto (2016). CRC World Dictionary of Medicinal and Poisonous Plants. CRC Press. p. 3328.


"https://kn.wikipedia.org/w/index.php?title=ಸೋಮಲತೆ&oldid=1253174" ಇಂದ ಪಡೆಯಲ್ಪಟ್ಟಿದೆ