ಸೋಮಯಾಗವು ಹಿಂದೂ ಧರ್ಮದಲ್ಲಿ ಆಕಾಶಜೀವಿಗಳನ್ನು ಸಮಾಧಾನಪಡಿಸಲು ಮಾಡಲಾದ ಒಂದು ಯಜ್ಞ. ಇದನ್ನು ಮುಖ್ಯವಾಗಿ ಇಡೀ ಮಾನವಕುಲದ ಯೋಗಕ್ಷೇಮವನ್ನು ಪ್ರೋತ್ಸಾಹಿಸಲು ಮಾಡಲಾಗುತ್ತದೆ. ಈ ಕ್ರಿಯಾವಿಧಿಯು ವೇದಗಳಲ್ಲಿ ಸೂಚಿಸಲಾದ ವಿಧಾನಗಳ ಮೇಲೆ ಆಧಾರಿತವಾಗಿದೆ. ಈ ಯಜ್ಞದಲ್ಲಿ ಸೋಮವನ್ನು ಮುಖ್ಯ ಆಹುತಿಯಾಗಿ ಬಳಸಲಾಗುತ್ತದೆ, ಹಾಗಾಗಿ ಇದರ ಹೆಸರು ಸೋಮಯಜ್ಞ ಎಂದಾಗಿದೆ. ಔಷಧೀಯ ಮೂಲಿಕೆಗಳ ರಾಜನಾದ ಸೋಮ ಸಸ್ಯವನ್ನು ಆಕಾಶಜೀವಿಗಳು ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ.

ಪ್ರಕಾರಗಳು

ಬದಲಾಯಿಸಿ

ಸೋಮಯಾಗದಲ್ಲಿ, ಪುರೋಹಿತರ ದೊಡ್ಡ ಸಮೂಹವಿರುತ್ತದೆ, ಮತ್ತು ಪ್ರತಿಯೊಬ್ಬ ಪುರೋಹಿತನಿಗೆ ಇತರ ಮೂರು ಜನ ನೆರವಾಗುತ್ತಾರೆ. ಒಟ್ಟಾರೆಯಾಗಿ ಸೋಮಯಾಗದಲ್ಲಿ ಹದಿನಾರು ಪುರೋಹಿತರು ಭಾಗವಹಿಸುತ್ತಾರೆ. ಒಟ್ಟು ಏಳು ಪ್ರಕಾರಗಳ ಸೋಮಯಾಗಗಳಿವೆ:: ಅಗ್ನಿಷ್ಟೋಮ, ಉಕ್ತ್ಯ, ಷೋಡಶಿ, ಅತಿರಾತ್ರ, ಆತ್ಯ ಅಗ್ನಿಷ್ಟೋಮ, ವಾಜಪೇಯ ಮತ್ತು ಆಪ್ತೋರ್ಯಂ.

ಪ್ರಯೋಜನಗಳು

ಬದಲಾಯಿಸಿ

ಸೋಮಯಾಗವು ಯಜ್ಞ ಸಂಸ್ಕೃತಿಯಲ್ಲಿ ಸಾಟಿಯಿಲ್ಲದ ಮಹತ್ವವನ್ನು ಹೊಂದಿದೆ. ಈ ವಿಶೇಷ ಯಜ್ಞವು ಭಾಗವಹಿಸುವವರಿಗೆ ಮತ್ತು ಇಡೀ ಜಗತ್ತಿಗೂ, ಗುಣಪಡಿಸುವ ಶಕ್ತಿಯ ಹೆಚ್ಚುವರಿ ಪ್ರಬಲ ವೃದ್ಧಿಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

"https://kn.wikipedia.org/w/index.php?title=ಸೋಮಯಾಗ&oldid=913087" ಇಂದ ಪಡೆಯಲ್ಪಟ್ಟಿದೆ