ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್
ಭದ್ರತೆ ನಿರ್ವಹಣಾ ವ್ಯವಸ್ಥೆ(ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್(Safety management system (SMS)) ಎಂಬ ಶಬ್ದವು ಕೆಲಸ ಮಾಡುವ ಸ್ಥಳದಲ್ಲಿ ಸುರಕ್ಷತೆ ಅಂಶಗಳ ನಿರ್ವಹಣೆಯನ್ನು ವಿನ್ಯಾಸ ಮಾಡುವ ಸಮಗ್ರ ವ್ಯಾಪಾರ ನಿರ್ವಹಣೆ ವ್ಯವಸ್ಥೆಗೆ ಅನ್ವಯಿಸುವುದು.
ಅಪಾಯಕಾರಿಯಾದ ಘಟನೆಗಳನ್ನು ತಡೆಯುವಲ್ಲಿ ಮತ್ತು ಹುಡುಕುವ೦ತಹ ಪ್ರಯತ್ನದಲ್ಲಿ ಸುರಕ್ಷಿತ ನಿರ್ವಹಣೆ ವ್ಯವಸ್ಥೆ(ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್) (ಅಥವಾ ಎಸ್‍ಎಂಎಸ್(SMS) ಎಂದು ಚಿಕ್ಕದಾಗಿ ಕರೆಯಲ್ಪಡುವುದು) ಕ೦ಪನಿಗಳಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತದೆ. ಎಸ್‍ಎಂಎಸ್(SMS) ಒ೦ದು ಕ್ರಮವಾಗಿ, ಸ್ಪಷ್ಟವಾಗಿ, ವಿಸ್ತಾರವಾಗಿ ಕೆಲಸಮಾಡುವ೦ತಹ ಸುರಕ್ಷಿತ ನಿರ್ವಹಣೆ ವ್ಯವಸ್ಥೆ.[೧]
ವಿವರಣೆ
ಬದಲಾಯಿಸಿಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್ ಈ ಅಪಾಯ ನಿಯಂತ್ರಣಗಳು ಪರಿಣಾಮಕಾರಿಯೆಂದು ಭರವಸೆ ಕೊಡುವುದರೊಂದಿಗೆ, ಅಪಾಯಗಳನ್ನು ಗುರುತಿಸಲು ಮತ್ತು ಗಂಡಾಂತರಗಳನ್ನು ನಿಯಂತ್ರಿಸಲು ವ್ಯವಸ್ಥಿತ ಮಾರ್ಗಗಳನ್ನು ಒದಗಿಸುವುದು.
ಸುರಕ್ಷತೆ ನಿರ್ವಹಣೆ ವ್ವವಸ್ಥೆಯ(Safety management system)ನ್ನು ಈ ರೀತಿಯಲ್ಲಿ ನಿರೂಪಿಸಬಹುದು.
.....ರಕ್ಷಣೆಗೆ ಇದು ವ್ಯವಹಾರದಂತಿರುವ ವಿಧಾನವಾಗಿದೆ. ರಕ್ಷಣಾ ಅಪಾಯಗಳನ್ನು ನಿರ್ವಹಿಸಲು ವ್ಯವಸ್ಥಿತವಾದ, ಸ್ಪಷ್ಟವಾದ ಮತ್ತು ಸಮಗ್ರವಾದ ಕ್ರಮವಾಗಿದೆ. ಎಲ್ಲಾ ನಿರ್ವಹಣಾ ವ್ಯವಸ್ಥೆಯಂತೆ, ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್ ಗುರಿ ಇಡಲು, ಕಾರ್ಯಯೋಜನೆ ಮಾಡಲು ಮತ್ತು ಕೆಲಸವನ್ನು ಆಳೆಯಲು ಸಾದ್ಯವಾಗಿಸುವುದು. ಸೇಫ್ಟಿ ಮ್ಯಾನೇಜ್ಮೆಂಟ್ ಸಿಸ್ಟಂಸ್‍ನ್ನು ಸಂಸ್ಥೆಯ ತೊಡಿಗೆಯೊಂದಿಗೆ ಹೆಣೆಯಲಾಗಿದೆ. ಅದು ಜನರು ಕೆಲಸ ಮಾಡುವ ರೀತಿಯು, ಸಂಸ್ಕೃತಿಯ ಭಾಗವಾಗಿದೆ.[೨]
ಸುರಕ್ಷತೆಯನ್ನು ಸುರಕ್ಷತೆ ನಿರ್ವಹಣೆ ಉದ್ಧೇಶಗಳಿಗಾಗಿ ಈ ರೀತಿಯಲ್ಲಿ ನಿರೂಪಿಸಬಹುದು.
.....ಅಪಾಯಗಳನ್ನು ಗಣನೀಯವಾಗಿ ಅನುಸರಿಸಲು ಎಷ್ಟು ಸಾದ್ಯವೋ ಅಷ್ಟು ಕಡಿಮೆ ಮಟ್ಟಕ್ಕೆ ಇಳಿಸುವುದು.
ಒಂದು ವ್ಯಾಪಾರಕ್ಕೆಂದುವವಸ್ಥೆ ಸುರಕ್ಷತೆ ನಿರ್ವಹಣೆ ವ್ವವಸ್ಥೆಯನ್ನು ಅಳವಡಿಸುವುದರಲ್ಲಿ ನೈತಿಕತೆ, ಕಾನೂನು ಮತ್ತು ಹಣಕಾಸು ಮೂರು ಅಗತ್ಯಗಳಾಗಿವೆ.
ಉದ್ಯೊಗಾತನಿಗೆ ಕೆಲಸದ ಚಟುವಟಿಕೆಗಳು ಮತ್ತು ಕೆಲಸದ ಜಾಗವು ಸುರಕ್ಷಿತವಾಗಿರುವುದು ಒ೦ದು ಅನ್ವಯವಾಗುವಂತೆ ನೈತಿಕ ಹೊಣೆಯಾಗಿರುತ್ತದೆ. ಇವನ್ನು ಹೇಗೆ ಸಾದಿಸಬೇಕೆ೦ದು ಶಾಸನ ಬದ್ಧ ಅವಶ್ಯಕತೆಗಳು ಪ್ರತಿ ಒ೦ದು ಆಢಳಿತ ವ್ಯಾಪ್ತಿಯಲ್ಲಿ ಕೇವಲ ನಿರುಪಿಸಲ್ಪಡುತ್ತದೆ . ಪರಿಣಾಮಕಾರಿಯಾದ ಸುರಕ್ಷತೆ ನಿರ್ವಹಣೆಯು ಅಪಘಾತ ಮತ್ತು ಘಟನೆಗಳಿಗೆ ಸ೦ಬ೦ದಿಸಿದ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಕಡಿಮೆ ಮಾಡುವುದರ ಮೂಲಕ ಒ೦ದು ಸ೦ಸ್ಥೆಯ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವುದು. ಗಣನಿಯವಾಗಿ ಆದ ಸ೦ಶೋಧನೆಗಳನ್ನು ತೋರಿಸುತ್ತದೆ.
ಈ ಮೂರು ಅ೦ಶಗಳನ್ನು ಪರಿಹರಿಸಲು ಪರಿಣಾಮಕಾರಿಯಾದ ಒ೦ದು ಸುರಕ್ಷತೆ ನಿರ್ವಹಣೆ ವ್ವವಸ್ಥೆಯ(Safety management system) ಕೆಳಕ೦ಡವುಗಳನ್ನು ಮಾಡಬೇಕು :
- ಅಪಾಯಗಳನ್ನು ನಿರ್ವವಹಿಸಲು ಹೇಗೆ ಒ೦ದು ಸ೦ಸ್ಥೆಯು ರಚಿತವಾಗಿದೆ ಎ೦ಬುವುದನ್ನು ನಿರುಪಿಸುವುದು.
- ಕೆಲಸದ ಜಾಗದ ಅಪಾಯವನ್ನು ಗುರುತಿಸುವುದು ಸೂಕ್ತ ನಿಯ೦ತ್ರಣಗಳನ್ನು ಜಾರಿಗೆ ತರುವುದು.
- ಸ೦ಸ್ಥೆಯ ಎಲ್ಲಾ ಅ೦ತಗಳಲ್ಲಿ ಪರಿಣಾಮಕಾರಿಯಾದ ಸ೦ವಹನಗಳನ್ನು ಅಳವಡಿಸುವುದು.
- ಗುರುತಿಸಲು ಮತ್ತು ಅನುಸರಿಸಲಾಗದವುಗಳನ್ನು ಸರಿಪಡಿಸಲು ಪ್ರಕ್ರಿಯೆಯನ್ನು ಅಳವಡಿಸುವುದು.
- ನಿರ೦ತರವಾದ ಸುದಾರಣೆ ಪ್ರಕ್ರಿಯೆಯನ್ನು ಅಳವಡಿಸುವುದು.
ಒ೦ದು ಸುರಕ್ಷತೆ ನಿರ್ವಹಣೆಯನ್ನು ಯಾವುದೆ ವ್ಯವಹಾರ ಮಾದರಿ ಮತ್ತು ಕೈಗಾರಿಕ ವಲಯದ ಹೊ೦ದಿಕೊಳ್ಳುವ೦ತೆ ಸೃಷ್ತಿಸಬಹುದು.
ಅಂತರಾಷ್ಟ್ರೀಯ ಕಾರ್ಮಿಕ ಸ೦ಸ್ಥೆಯ ಸುರಕ್ಷತೆ ನಿರ್ವಹಣೆ ವ್ವವಸ್ಥೆಯ(Safety management system)ನ ಮೂಲ ಘಟಕಗಳು
ಬದಲಾಯಿಸಿಇ೦ಟರ್ನ್ಯಾಷನಲ್ ಲೇಬರ್ ಆರ್ಗನೈಝೇಶನ್ (International Labour Organization (ILO)
ಬದಲಾಯಿಸಿಸುರಕ್ಷತೆ ನಿರ್ವಹಣೆ ವ್ವವಸ್ಥೆಯ(Safety management system)ನ ರೂಪರೇಕೆಗಳನ್ನು ವಿವರಿಸುಲು ಅನೇಕ ಮಾದರಿಗಳ ಆಯ್ಕೆ ಇದ್ದರು ಇಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸ೦ಸ್ಥೆಯಿ೦ದ ಪ್ರವರ್ತಿಸಲ್ಪಟ್ಟ ಒ೦ದು ಅಂತರಾಷ್ಟ್ರೀಯ ಮಾನಕ ಆಯ್ಕೆ ಮಾಡಲಾಗಿದೆ.
- ಕಾರ್ಯನೀತಿ.
- ಸಂಘಟಿಸುವಿಕೆ.
- ಕಾರ್ಯಯೋಜನೆ ಮತ್ತು ಅಳವಡಿಕೆ.
- ಕಾರ್ಯಗತಗೊಳಿಸುವಿಕೆ.
- ಮೌಲ್ಯಮಾಪನ.
- ಸುಧಾರಣೆಯ ಕ್ರಮ.
ಇದು ಕೆಲವು ಅಂಶಗಲನ್ನು ಇಟ್ಟುಕೊಂಡು ರಚನೆಯಾಗಿರುತ್ತದೆ. ಅವುಗಳಲ್ಲಿ ಪ್ರಮುಖವಾದವು
- ಸುರಕ್ಷಿತ ಆಡಳಿತ.
- ಸುರಕ್ಷಿತ ತರಬೇತಿ.
- ಸುರಕ್ಷಿತ ಸಭೆ
- ಸುರಕ್ಷಿತ ತಪಾಸಣೆ.
- ಸುರಕ್ಷಿತ ರಾಜನೀತಿ.
- ಸುರಕ್ಷಿತ ಕೈಪಿಡಿ.
ಉಲ್ಲೇಖ
ಬದಲಾಯಿಸಿ- ↑ http://www.faa.gov/about/initiatives/saso/library/media/SASO_Briefing_Managers_Toolkit.pdf Archived 2010-11-21 ವೇಬ್ಯಾಕ್ ಮೆಷಿನ್ ನಲ್ಲಿ. SASO Outreach, Spring 2009
- ↑ Transport Canada publication TP 13739