ಸೇಂಟ್ ಥಾಮಸ್ ಕಥೀಡ್ರಲ್ ಬಸಿಲಿಕಾ
ಸ್ಯಾನ್ ಥೋಮ್ ಚರ್ಚ್ ಅಥವಾ ಸೇಂಟ್ ಥಾಮಸ್ ಕಥೀಡ್ರಲ್ ಬಸಿಲಿಕಾ ಭಾರತದ ತಮಿಳುನಾಡು ರಾಜ್ಯದ ಮದ್ರಾಸ್ (ಚೆನ್ನೈ) ನ ಸ್ಯಾನ್‍ಥೋಮ್ ಪ್ರದೇಶದಲ್ಲಿರುವ ಒಂದು ಸಣ್ಣ ಬಸಿಲಿಕಾ. ಪ್ರಸ್ತುತ ರಚನೆಯು ಕ್ರಿ.ಪೂ. 1523 ರ ಕಾಲದ್ದು. ಇದನ್ನು ಪೋರ್ಚುಗೀಸರು ಹನ್ನೆರಡು ಯೇಸುದೂತರಲ್ಲಿ ಒಬ್ಬನಾದ ಥಾಮಸ್‍ನ ಸಮಾಧಿಯ ಮೇಲೆ ಪುನರ್ನಿರ್ಮಿಸಿದರು.[೧] 1896 ರಲ್ಲಿ, ಇದನ್ನು ಮದ್ರಾಸ್ ಪ್ರಾಂತ್ಯದಲ್ಲಿ ನವ-ಗಾಥಿಕ್ ವಿನ್ಯಾಸಗಳ ಪ್ರಕಾರ ನವೀಕರಿಸಲಾಯಿತು. ಪುರಾತನ ಕ್ರಿಶ್ಚಿಯನ್ ಧರ್ಮದ ಏಸುದೂತರ ಯುಗದ ಮೂರು ಚರ್ಚುಗಳಲ್ಲಿ ಇದು ಒಂದಾಗಿದೆ ಮತ್ತು ಒಬ್ಬ ಏಸುದೂತನ ಸಮಾಧಿಗೆ ನೆಲೆಯಾಗಿರುವುದಕ್ಕೆ ಹೆಸರುವಾಸಿಯಾಗಿದೆ ಮತ್ತು ಇಂದಿಗೂ ಜಗತ್ತಿನಲ್ಲಿ ನಿಂತಿದೆ.
ವಾಸ್ತುಕಲೆ
ಬದಲಾಯಿಸಿಸ್ಯಾನ್ಥೋಮ್ ಚರ್ಚನ್ನು ಗಾಥಿಕ್ ಪುನರುಜ್ಜೀವನದ ವಾಸ್ತುಕಲಾ ಶೈಲಿಯಲ್ಲಿ ನಿರ್ಮಿಸಲಾಗಿದೆ. ಚರ್ಚ್ ತೇಗದ ಮರದಿಂದ ನಿರ್ಮಿಸಿದ ರಿಬ್ ವಾಲ್ಟ್ ಛಾವಣಿಯನ್ನು ಹೊಂದಿದೆ. ಇದನ್ನು 16 ಕಿಟಕಿಗಳು ಮತ್ತು 34 ಬಣ್ಣದ ಗಾಜಿನಿಂದ ನಿರ್ಮಿಸಲಾಗಿದೆ. ಕಥೀಡ್ರಲ್ಲನ್ನು ತೇಗದ ಮರ, ಅಮೃತಶಿಲೆ ಮತ್ತು ಗ್ರಾನೈಟ್‌ನಿಂದ ನಿರ್ಮಿಸಲಾಗಿದೆ.
ಈ ಚರ್ಚ್‌ನಲ್ಲಿ ಎರಡು ಮಿನಾರುಗಳಿವೆ:
- ಮೊದಲ ಮಿನಾರು: ಇದು ಚರ್ಚ್‌ನ ಎಡಭಾಗದಲ್ಲಿ ಗಂಟೆ ಗೋಪುರವಾಗಿ ಕಾರ್ಯನಿರ್ವಹಿಸುತ್ತದೆ. ಇದು 147 ಅಡಿ ಎತ್ತರವಾಗಿದೆ ಮತ್ತು ಇದನ್ನು ದೂರದಿಂದಲೂ ನೋಡಬಹುದು.
- ಎರಡನೇ ಮಿನಾರು: ಏಸುದೂತ ಸೇಂಟ್ ಥಾಮಸ್‍ನ ಸಮಾಧಿಯನ್ನು ಸೂಚಿಸಲು ಕಥೀಡ್ರಲ್‌ನ ಮಧ್ಯದಲ್ಲಿ ನಿರ್ಮಿಸಲಾಗಿದೆ.
200 ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಪೈಪ್ ಆರ್ಗನ್ನನ್ನು ಚರ್ಚ್‌ನ ಮಹಡಿಯಲ್ಲಿ ಇರಿಸಲಾಗಿದೆ. ಸಂದರ್ಶಕರು ಚರ್ಚ್‌ನ ನಾರ್ತೆಕ್ಸ್‌ನಲ್ಲಿರುವ ಮೆಟ್ಟಿಲುಗಳನ್ನು ಏರುವ ಮೂಲಕ ಪೈಪ್ ಆರ್ಗನ್ನನ್ನು ನೋಡಬಹುದು.
ಅವರ್ ಲೇಡಿ ಆಫ್ ಮೈಲಾಪುರ್
ಬದಲಾಯಿಸಿಮೇರಿ ಮಾತೆಯ ಪೋರ್ಚುಗೀಸ್ ಪ್ರತಿಮೆಯನ್ನು 1523 ರಲ್ಲಿ ಲಿಸ್ಬನ್‌ನಿಂದ ಸ್ಯಾನ್‍ಥೋಮ್ ಚರ್ಚ್‌ಗೆ ತರಲಾಯಿತು ಮತ್ತು ಈಗ ಅದನ್ನು ಚರ್ಚ್‌ನ ಬಲಿಪೀಠದ ಎಡಭಾಗದಲ್ಲಿ ಇರಿಸಲಾಗಿದೆ.
ಸಂತ ಮೇರಿಯ ಮರದ ಪ್ರತಿಮೆಯನ್ನು ಚಿನ್ನದ ಬಣ್ಣದಿಂದ ಲೇಪಿಸಲಾಗಿದೆ ಮತ್ತು ಒಂದು ವಿಶೇಷ ಬಲಿಪೀಠದ ಮೇಲೆ ಇರಿಸಲಾಗಿದೆ.
ಸೇಂಟ್ ಥಾಮಸ್‍ನ ಕಂಬ
ಬದಲಾಯಿಸಿದಡಕ್ಕೆ ತೇಲಿಕೊಂಡು ಬಂದ ಕಟ್ಟಿಗೆಯಿಂದ ನಿರ್ಮಿಸಲಾದ ಈ ಕಂಬವನ್ನು ಏಸುದೂತ ಸೇಂಟ್ ಥಾಮಸ್ ಸ್ಥಾಪಿಸಿದನೆಂದು ನಂಬಲಾಗಿದೆ.
ಸ್ಯಾನ್‍ಥೋಮ್ ವಸ್ತುಸಂಗ್ರಹಾಲಯ
ಬದಲಾಯಿಸಿಚರ್ಚ್ಗೆ ಹೊಂದಿಕೊಂಡ ಒಂದು ವಸ್ತುಸಂಗ್ರಹಾಲಯವಿದ್ದು ಇದು ಏಸುದೂತ ಸೇಂಟ್ ಥಾಮಸ್ ಮತ್ತು ಸ್ಯಾನ್‍ಥೋಮ್ ಚರ್ಚ್ ಮತ್ತು ಸಮಾಧಿಗೆ ಸೇರಿದ ಐತಿಹಾಸಿಕ ವಸ್ತುಗಳನ್ನು ಹೊಂದಿದೆ. ಇದು 7-8 ನೇ ಶತಮಾನದ ಅತ್ಯಂತ ಹಳೆಯ ಶಿಲುಬೆ ಮತ್ತು ಶಾಸನವನ್ನು ಹೊಂದಿದೆ. ಇದು ಸ್ಯಾನ್‍ಥೋಮ್ ಚರ್ಚ್‌ನ ಹಿಂಭಾಗದಲ್ಲಿದೆ. ಮ್ಯೂಸಿಯಮ್‍ನಲ್ಲಿ ಏಸುದೂತ ಸೇಂಟ್ ಥಾಮಸ್, ಸೇಂಟ್ ಥಾಮಸ್‍ನ ಸಮಾಧಿ ಮತ್ತು ಸ್ಯಾನ್‍ಥೋಮ್ ಚರ್ಚ್ ಮತ್ತು ಹೆಚ್ಚಿನವುಗಳ ಬಗ್ಗೆ ಮಾಹಿತಿ ಕೇಂದ್ರವಿದೆ.
ಛಾಯಾಂಕಣ
ಬದಲಾಯಿಸಿವರ್ಣರಂಜಿತ ಗಾಜು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Santhome Basilica in Chennai — A historical pilgrimage indiastudychannel.com.
ಹೊರಗಿನ ಕೊಂಡಿಗಳು
ಬದಲಾಯಿಸಿ- Official website of San Thome Church Archived 2022-05-28 ವೇಬ್ಯಾಕ್ ಮೆಷಿನ್ ನಲ್ಲಿ.
- San Thome Church Youth Group Archived 2023-04-18 ವೇಬ್ಯಾಕ್ ಮೆಷಿನ್ ನಲ್ಲಿ.