ಸೆಸಿಲ್ ರೋಡ್ಸ್

ಬ್ರಿಟಿಷ್ ಉದ್ಯಮಿ, ದಕ್ಷಿಣ ಆಫ಼್ರಿಕದ ರಾಜಕಾರಣಿ

ಸೆಸಿಲ್ ಜಾನ್ ರೋಡ್ಸ್ ದಕ್ಷಿಣ ಆಫ್ರಿಕಾಬ್ರಿಟಿಷ್ ಉದ್ಯಮಿ,ಗಣಿಗಾರಿಕೆಯ ಉದ್ಯಮಿ ಹಾಗೂ ರಾಜಕರಣಿಯಾಗಿದ್ದರು. ಅವರು ೧೮೯೦ ರಿಂದ ೧೮೯೬ ತನಕ ಕೇಪ್ ಕಾಲೋನಿಯ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು.ಅವರಿಗೆ ಬ್ರಿಟೀಷ್ ಸಾಮ್ರಾಜ್ಯಶಾಹಿಯಲ್ಲಿ ಉತ್ಕಟ ನಂಬಿಕೆಯಿತ್ತು.ರೋಡ್ಸ್ ದಕ್ಷಿಣ ಆಫ್ರಿಕಾದಲ್ಲಿ ರೋಡೇಷಿಯಾ ಎಂಬ ಪ್ರಾಂತ್ಯವನ್ನು ಸ್ಥಾಪಿಸಿದರು.ರೋಡ್ಸ್ ರವರ ಇಚ್ಚೆಯಂತೆ ರೋಡ್ಸ್ ವಿದ್ಯಾರ್ಥಿವೇತನವನ್ನು ಅವರ ಎಸ್ಟೇಟ್ ನೀಡುತ್ತದೆ.

ಸೆಸಿಲ್ ರೋಡ್ಸ್
ರೋಡ್ಸ್ ೧೯೦೦

ಕೇಪ್ ಕಾಲೋನಿಯ ೭ನೇ ಪ್ರಧಾನ ಮಂತ್ರಿ
ಅಧಿಕಾರ ಅವಧಿ
೧೭ ಜುಲೈ ೧೮೯೦ – ೧೨ ಜನವರಿ ೧೮೯೬
ವೈಯಕ್ತಿಕ ಮಾಹಿತಿ
ಜನನ ಸೆಸಿಲ್ ಜಾನ್ ರೋಡ್ಸ್
(೧೮೫೩-೦೭-೦೫)೫ ಜುಲೈ ೧೮೫೩
ಇಂಗ್ಲೆಂಡಿನ ಸ್ಟೋಡ್ಫೊಡ್ ,ಹರ್ಟ್ಫೋರ್ಡ್ಶೈರ್
ಮರಣ 26 March 1902(1902-03-26) (aged 48)
ಸಮಾಧಿ ಸ್ಥಳ ವಲ್ಡ್ಸ್ ವ್ಯು,
ದಕ್ಷಿಣ ರೋಡೇಷಿಯಾ ಜಿಂಬಾಬ್ಬೆ
20°25′S 28°28′E / 20.417°S 28.467°E / -20.417; 28.467
ರಾಷ್ಟ್ರೀಯತೆ ಬ್ರಿಟಿಷ್
ಸಂಬಂಧಿಕರು ರೆವರೆಂಡ್ ಪ್ರಾನ್ಸಿಸ್ ವಿಲಿಯಂ ರೋಡ್ಸ್ ಮತ್ತು ತನ್ನ ಪತ್ನಿ ಲುಯಿಸ ಪೀಕಾಕ್ ರೋಡ್ಸಿ
ವೃತ್ತಿ ಗಣಿಗಾರಿಕೆ ಉದ್ಯಮಿ ಹಾಗೂ ರಾಜಾಕರಣಿ

ಜನನ ಮತ್ತು ಕುಟುಂಬ

ಬದಲಾಯಿಸಿ

ರೋಡ್ಸ್ ೧೮೫೩ರಲ್ಲಿ ಇಂಗ್ಲೆಂಡ್ಸ್ಟೋಡ್ಫೊಡ್ ,ಹರ್ಟ್ಫೋರ್ಡ್ಶೈರ್ ನಲ್ಲಿ ಜನಿಸಿದರು.ಅವರು ರೆವರೆಂಡ್ ಪ್ರಾನ್ಸಿಸ್ ವಿಲಿಯಂ ರೋಡ್ಸ್ ಮತ್ತು ತನ್ನ ಪತ್ನಿ ಲೂಯಿಸ ಪೀಕಾಕ್ ರೋಡ್ಸಿನ ಐದನೇ ಮಗ .ಅವರ ತಂದೆ ಇಂಗ್ಲೆಂಡಿನ ಒಂದು ಚರ್ಚಿನ ಪಾದ್ರಿಯಾಗಿದ್ದರು.ಅವರು ಧರ್ಮೋಪದೇಶವನ್ನು ೧೦ ನಿಮಿಷಕ್ಕಿಂತ ಹೆಚ್ಚು ಕಾಲ ಭೋದಿಸುತ್ತಿರಲಿಲ್ಲ,ಅದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು.

ಶಿಕ್ಷಣ

ಬದಲಾಯಿಸಿ

ರೋಡ್ಸ್ ಒಂಬತ್ತನೆಯ ವಯಸ್ಸಿನ ತನಕ ಬಿಷಪ್ ಸ್ಟೋಡ್ಫೊಡ್ ವ್ಯಕರಣ್ ಶಾಲೆಯಲ್ಲಿ ಅಧ್ಯಾಯನವನ್ನು ಮಾಡಿದರು.ಒಂದು ರೋಗಿಷ್ಟ,ಆಸ್ತಮಾದ ಹುಡುಗನಗಿದ್ದರಿಂದ ೧೮೬೯ರಲ್ಲಿ ಅವರನ್ನು ಶಾಲೆಯಿಂದ ಹೋರಗೆ ಹಾಕಲಾಗಿತ್ತು.ಅವರು ತಮ್ಮ ಮುಂದಿನ ಅಧ್ಯಯನವನ್ನುತನ್ನ ತಂದೆಯ ಅಡಿಯಲ್ಲಿಯೇ ಮುಂದುವರಸಿದರು.೧೮೭೩ ರಲ್ಲಿ , ಅವರು ಆಕ್ಸ್ಫರ್ಡ್ನಲ್ಲಿ ಅಧ್ಯಯನ ಮಾಡುವ ಸಳುವಗಿ ಬ್ರಿಟನ್ನಿಗೆ ಹಿಂದಿರುಗಿದ್ದರು. ಅವರು ಆಕ್ಸ್ಫರ್ಡಿನ ಓರಿಯೆಲ್ ಕಾಲೆಜಿನಲ್ಲಿ ದಾಖಲಿಸಿಕೊಂಡರು.

ವಜ್ರದ ಗಣಿಗಾರಿಕೆಯ ಪ್ರರಂಭ

ಬದಲಾಯಿಸಿ

ಈಗಾಗಲೇ ಹರ್ಬರ್ಟ್ (ಸೆಸಿಲ್ ರೋಡ್ಸಿನ ಸಹೋದರ )ದಕ್ಷಿಣ ಆಫ್ರಿಕಾದ ನಾಟಾಲ್ ರಲ್ಲಿ ನಿವಾಸವಗಿದ್ದರಿಂದ ರೋಡ್ಸ್ ರವರನ್ನು ದಕ್ಷಿಣ ಆಫ್ರಿಕಕೆ ಕಲುಹಿಸಲಾಗಿತ್ತು.ರೋಡ್ಸ್ ಮತ್ತು ಅವರ ತಂದೆ ಇಬ್ಬರು ದಕ್ಷಿಣ ಆಫ್ರಿಕಾದ ವ್ಯಪಾರದ ಅವಕಾಶಗಳು ರೋಡ್ಸಿಗೆ ಉತ್ತಮ ಭವಿಷ್ಯವನ್ನು ನೀಡುತ್ತದೆಯೆಂದು ನಂಬಿದ್ದರು.ಅವರು ತನ್ನ ಚಿಕ್ಕಮ್ಮ ಕೊಟ್ಟಿದ್ದ ಮೂರು ಸಾವಿರ ಪೌಂಡನ್ನು ತನ್ನ ಜೊತೆ ತಂದಿದ್ದರು. ಅ ಹಣವನ್ನು ಕಿಂಬರ್ಲಿಯ ವಜ್ರದ ಗಣಿಗಾರಿಕೆಯಲ್ಲಿ ಬಳಸಿದ್ದರು.ಅಕ್ಟೋಬರ್ ೧೮೭೧ ರಲ್ಲಿ, ೧೮ ವರ್ಷದ ರೋಡ್ಸ್ ಮತ್ತು ಅವರ ಸಹೋದರ ಹರ್ಬರ್ಟ್ ನಾಟಾಲನು ಬಿಟ್ಟು ಕಿಂಬರ್ಲಿಗೆ ಹೋದರು.ಅವರಿಗೆ ವಜ್ರದ ಗಣಿಗಾರಿಕೆಯಲ್ಲಿ ತುಂಬಾ ಆಸಕ್ತಿ ಇದಿದ್ದ ಕಾರಣ ಅವರು ತಮ್ಮ ಎಲ್ಲಾ ಹಣವನ್ನು ವಜ್ರದ ಗಣಿಗಾರಿಕೆಯಲ್ಲಿ ಸಿದ್ದರು. ಮುಂದಿನ ೧೭ ವರ್ಷಗಳಲ್ಲಿ ಕಿಂಬರ್ಲಿ ಎಲ್ಲಾ ಸಣ್ಣ ವಜ್ರದ ಗಣಿಗಾರಿಕೆಗಳನ್ನು ಖರೀದಿಸುವಲ್ಲಿ ಯಶಸ್ವಿಯಾದರು.

ಡಿ ಬೀರ್ಸ್ ಕಂಪನಿಯ ಸ್ಥಾಪನೆ

ಬದಲಾಯಿಸಿ

೧೮೭೩ ರಲ್ಲಿ , ಅವರು ಆಕ್ಸ್ಫರ್ಡ್ನಲ್ಲಿ ಅಧ್ಯಾಯನ ಮಾಡುವ ಸಳುವಾಗಿ ಬ್ರಿಟನ್ನೆಗೆ ಹಿಂದಿರುಗಿದರು. ಅವರು ಆಕ್ಸ್ಫರ್ಡಿನ ಓರಿಯೆಲ್ ಕಾಲೇಜಿನಲ್ಲಿ ದಾಖಲಿಸಿಕೊಂಡರು.ಆದರೆ ಸ್ವಲ್ಪಕಾಲದ ನಂತರವೆ ದಕ್ಷಿಣ ಆಫ್ರಿಕಾಕ್ಕೆ ತೆರೆಳಿದರು.ಡಿ ಬೀರ್ಸ್ ಎಂಬ ಕಂಪನಿಯನ್ನು ಕರೀದಿಸಿದರು.೧೩ ಮಾರ್ಚ್ ೧೮೮೮ ರಂದು ರೋಡ್ಸ್ ಮತ್ತು ಅವರ ಸ್ನೇಹಿತ ರೆಡ್ "ಡಿ ಬೀರ್ಸ್ ಕನ್ಸೋಲಿಡೆಟಡ್ ಮೈನ್ಸ್"ಎಂಬ ಕಂಪನಿಯನ್ನು ಸ್ಥಾಪಿಸಿದರು.೧೮೮೮ ರಲ್ಲಿ ರೋಡ್ಶ್ ಡಿ ಬೀರ್ಸ್ ಕಂಪನಿಯ ಅಧ್ಯಕ್ಷತೆಗೆ ನೇಮಕಗೊಂಡರು.ಅವರ ಅಧ್ಯಕ್ಷತೆಯಿಂದ ಕಂಪನಿ ಹೆಚ್ಚು ಲಾಭ ಗಳಿಸಿತು.

ದಕ್ಷಿಣ ಆಫ್ರಿಕದ ರಾಜಕಿಯ ಜಿವನ

ಬದಲಾಯಿಸಿ

೧೮೯೦ ರಲಿ ರೋಡ್ಸ್ ಕೇಪ್ ಕಾಲೋನಿಯ ಪ್ರಧಾನ ಮಂತ್ರಿಯಾದರು.ಅವರು ಕಪ್ಪು ಜನರ ವಿರುದ್ದ ಗ್ಲೆನ್ ಗ್ರೇ ಅಕ್ಟ್ ಪರಚಯಿಸಿದ್ದರು.ರೋಡ್ಶ್ ಕಪ್ಪು ಜನರನ್ನು ತಮ್ಮ ಭೋಮಿಯಿಂದ ಹೊರತೆಗೆಯುವ ಮೂಲಕ ಕೈಗರಿಕಾ ಅಭಿವೃದ್ದಿ ಸಧಿಸಲಾಗುತದೆಯೆಂದು ನಂಬಿದ್ದರು. ಇದರಿಂದ ಜನರು ಅವರ ವಿರುದ್ದ ಪ್ರತಿಭಟನೆ ಮಾಡಿದರು.೧೮೯೬ ರಲ್ಲಿ ಜೇಮ್ಸನ್ ದಾಳಿಯ ದುರಂತ ವೈಫಲ್ಯದ ಕಾರಣ,ರೋಡ್ಸ್ ಪ್ರಧಾನ ಮಂತ್ರಿಯ ಹುದ್ದೆಗೆ ರಾಜೇನಮೆನೀಡಿದ್ದರು.[]

ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆ

ಬದಲಾಯಿಸಿ

ರೋಡ್ಶ್ ಇಂಗ್ಲೀಷ್ ಸಾಮ್ರಾಜ್ಯಶಾಹಿಯಲ್ಲಿ ತುಂಬ ನಂಬಿಕೆಯುಳ್ಳವ.ರೋಡ್ಶ್ ಇಂಗ್ಲೀಷರ ಆಡಳಿತ ಎಲ್ಲಾರಿಗೂ ಲಾಭ ಎಂದು ನಂಬಿದ್ದರು.ಅವರು ತನ್ನ ಮತ್ತು ತನ್ನ ಉದ್ಯಮದ ಪಾಲುದಾರ ಆಲ್ಫ್ರೆಡ್ ಬ್ರೆಟ್ ಮತ್ತು ಇವರ ಹೊಡಿಕೆದಾರರ ಸಂಪತ್ತನು , ಆಫ್ರಿಕದಲ್ಲಿ ಬ್ರಿಟೀಷ್ ಸಾಮ್ರಾಜ್ಯವನ್ನು ರೂಪಿಸುವುದಲ್ಲಿ ಉಪಯೋಗಿಸಿದರು.ಅವರು ಬ್ರಿಟಿಷ್ ಸರ್ಕಾರದ ಜೊತೆ ಸೇರುವುದರ ಮೂಲಕ ತಮ್ಮ ಆಸೆಯನ್ನು ಸಾಧಿಸುವುದರಲ್ಲಿ ಯಶಸ್ವಿಯಾದರು.೧೮೮೯ರಲ್ಲಿ ರೋಡ್ಶ್,ಬ್ರಿಟಿಷ್ ಸರ್ಕಾರದಿಂದ 'ಬ್ರಿಟಿಷ್ ಸೌತ್ ಆಫ್ರಿಕನ್ ಕಂಪನಿ'ಯನ್ನು ಸ್ಥಪಿಸುವ ಹಕ್ಕುಪತ್ರವನ್ನು ಪಡೆದುಕೊಂಡರು.[]

ರೋಡೇಷಿಯಾದ ಸ್ಥಾಪನೆ

ಬದಲಾಯಿಸಿ

ಬ್ರಿಟಿಷ್ ಸೌತ್ ಆಫ್ರಿಕನ್ ಕಂಪನಿಯ ಮೂಲಕ ಅವರು ಆಫ್ರಿಕಾದ ಕೆಲವು ಪ್ರದೇಶಗಲನ್ನು ಆಳುವ ಹಕ್ಕನು ಪಡೆದರು.ಮೇ ೧೮೯೫ ರಲ್ಲಿ ರೋಡ್ಸನ್ನು ಗೌರವಿಸುವ ಸಲುವಗಿ ಸಮ್ಬೆಸಿಯಾ ಪ್ರದೇಶವನ್ನು ರೋಡೇಷಿಯಾವೆಂದು ಹೆಸರಿಸಲಾಯಿತು.ರೋಡೇಷಿಯಾ ಪ್ರಸ್ತುತ ಜಿಂಬಾಬ್ಬೆ ಮತ್ತು ಝಾಂಬಿಯವಗಿದೆ.

ರೋಡ್ಸ್ ಸುಮಾರು ವಿಶ್ವದ ಎಲ್ಲಾ ವಜ್ರಗಳು ನಿಯಂತ್ರಿಸುವ ದಕ್ಷಿಣ ಆಫ್ರಿಕಾದ ಪ್ರಶ್ನಾತೀತ ನಾಯಕರಾಗಿದ್ದರು. ರೋಡ್ಸ್ ದಕ್ಷಿಣ ಆಫ್ರಿಕಾದ ರಾಜಕೀಯದಲ್ಲಿ,ವಿಶೇಷವಾಗಿ ಎರಡನೆಯ ಬೋಯರ್ ಯುದ್ದದಲ್ಲಿ ಪ್ರಮುಖರಾಗಿದ್ದರೂ,ಅವರು ಅನಾರೋಗ್ಯದಿಂದ ಪೀಡಿತರಾಗಿದ್ದರು.ಅವರ ೪೦ನೇಯ ವಯಸ್ಸಿನಿಂದ ಅವರ ಹೃದಯದ ಸ್ಥಿತಿ ಹದಗೆಟ್ಟಿತು.ಅವರು ೧೯೦೨ ರಲ್ಲಿ ತಮ್ಮ ೪೮ ನೇಯ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.ಸರ್ಕಾರ ಅವರ ಅಂತ್ಯಕ್ರಿಯೆಗಗಿ ಕೇಪ್ ನಿಂದ ರೋಡೇಷಿಯಾ ತನಕ ರೈಲಿನಲ್ಲಿ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಟ್ಟಿತು.ಅಂತ್ಯಕ್ರಿಯೆಯ ರೈಲು ಪ್ರತಿ ನಿಲ್ದಾಣ್ದಲ್ಲಿಯು ಶೋಕತಪ್ಪರು ತಮ್ಮ ಗೌರವ ಪಾವತಿಸಲು ಅವಕಾಶ ನೀಡುವ ಸಳುವಾಗಿ ನಿಲ್ಲಿಸಲಾಗಿತ್ತು.೨೦೦೪ರಲ್ಲಿ ರೋಡ್ಸ್ ಅವರನ್ನು ಎಸ್.ಎ.ಬಿ.ಸಿ ದೂರದರ್ಶನ ಸರಣಿ ಅತ್ಯುತ್ತಮ ದಕ್ಷಿಣ ಆಫ್ರಿಕಾದ ಜನರಲ್ಲಿ ೫೬ ನೇ ಸ್ಥನದಲ್ಲಿ ಪಟಿಮಡಿತ್ತು.ರೋಡ್ಸ್ ತಮ್ಮ ಸಾವಿನ ತನಕ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಪರಿಗಣಿಸಲಾಗಿದರು.

ಅಂತಿಮವಾಗಿ ಅವರನ್ನು'ವಲ್ಡ್ಸ್ ವ್ಯು'ನಲ್ಲಿ ಹೂಳಲಾಯಿತು.ಅದು ಬುಲಯಾಯೂನಿಂದ ಸುಮಾರು ೩೫ ಕಿಲೋಮೀಟರ್ ದೂರದಲ್ಲಿರುವ ಒಂದು ಬೆಟ್ಟ.ಇಂದು ಆತನ ಸಮಾಧಿ ಮಟೊಬೊ ರಾಷ್ರಿಯ ಉದ್ಯಾನವನ , ಜಿಂಬಾಬ್ಬೆಯ ಭಾಗವಾಗಿದೆ.ರೋಡ್ಸ್ ಯಾವಾಗಲೂ ವಿವಾದಾತ್ಮಕ ವ್ಯಕ್ತಿಯಾಗಿದ್ದರೆ.ಮಟೊಬೋ ಬೆಟ್ಟದಲ್ಲಿ ರೋಡ್ಸ್ ಸಮಾಧಿ ಆಸ್ತಿತ್ವದಲ್ಲಿರುವುದ ಜಿಂಬಾಬ್ಬೆಯಲ್ಲಿ ಒಂದು ವಿವಾದವನ್ನು ಸೃಷ್ಟಿಸಿತು.ಡಿಸೆಂಬರ್ ೨೦೧೦ರಲ್ಲಿ ಬೂಲಾವಾಯೊ ರಾಜ್ಯಪಾಲರಗಿದ್ದ ಕೇನ್ ಮಾಥೆಮಾರವರು ರೋಡ್ಸ್ ರವರ ಸಮಾಧಿ ತಮ್ಮ ಆಫ್ರಿಕನ್ ಪೂರ್ವಜರಿಗೆ ಒಂದು ಅವಮಾನದ ಚಿಹ್ನೆಯಿದಂತೆ ಎಂದು ಹೇಳಿದರು.ಫೆಬ್ರವರಿ ೨೦೧೨ ರಲ್ಲಿ, ಮುಗಾಬೆ ಒಕ್ಕೂಟದ ಬೆಂಬಲಿಗರು ಮತ್ತು ಕಾರ್ಯಕರ್ತರು, ರೋಡ್ಸ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ,ರೋಡ್ಸಿನ ಅಸ್ಥಿಪಂಜರವನ್ನು ಅವರ ಸಮಾಧಿಯನ್ನು ಅಗೆದುಹೊರತೆಗೆದು ಬ್ರಿಟೆನ್ಗೆ ಅದನು ನೀಡಲು ಅನುಮತಿ ಬೇಡಿದ್ದರು.ಅದರೆ ಅವರ ಈ ಇಚ್ಚೆಯನ್ನು ಸ್ಥಳೀಯ ಮುಖ್ಯಸ್ತ ಮತ್ತು ಅದ್ಯಕ್ಷ ಮುಗಬೆ ವಿರೊದಿಸಿದ್ದರು.ರೋಡ್ಸ್ ಸಮಾಧಿಯು ಜಿಂಬಾಬ್ವೆಯ ಐತಿಹಾಸಿಕ ಚಿಹ್ನೆಯನ್ನು ಸೂಚಿಸುವುದು ಎಂದು ಅವರು ಬಲವಾಗಿ ನಂಬಿದ್ದರು.

ರೋಡ್ಸ್ ವಿದ್ಯಾರ್ಥಿವೇತನ

ಬದಲಾಯಿಸಿ

ತಮ್ಮ ಕೊನೆಯ ಉಯಿಲು ಮತ್ತು ಮರಣಶಾಸನದಲ್ಲಿ,ಅವರು ಪ್ರಸಿದ್ದವಗಿರುವ ರೋಡ್ಸ್ ವಿದ್ಯಾರ್ಥಿವೇತನಕಾಗಿ ನೀಡುವುದಕ್ಕೆ ಅನುಕೂಲ ಮಾಡಿದರು.ರೋಡ್ಸ್ ವಿದ್ಯಾರ್ಥಿವೇತನ ಪ್ರಪಂಚದ ಮೊದಲ ಅಂತರಷ್ರಿಯ ಅದ್ಯಯನ ಕಾರ್ಯಕ್ರಮವಾಗಿದೆ.ಈ ವಿದ್ಯಾರ್ಥಿವೇತನ ಪ್ರಕಾರ ಬ್ರಿಟಿಷ್ ಅಳ್ವಿಕೆಯಲ್ಲಿರುವ ಅಥಾವ ಹಿಂದೆ ಬ್ರಿಟಿಷ್ ಅಳ್ವಿಕೆಯಲ್ಲಿದ್ದ ಪ್ರಾಂತ್ಯಗಳು ಮತ್ತು ಜರ್ಮನಿ ದೇಶದ ವಿದ್ಯರ್ಥಿಗಳಿಗೆ , ಆಕ್ಸ್ಫರ್ಡಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವ ಅವಕಾಶ ನೀಡುತ್ತದೆ.

ರೋಡ್ಸ್ ಸ್ಮಾರಕ

ಬದಲಾಯಿಸಿ

ರೋಡ್ಸ್ ಸ್ಮಾರಕ ಆತನ ನೆಚ್ಚಿನ ಸ್ಥಳವಾದ ಕೇಪ್ ಟೌನ್ನ ಡೆವಿಲ್ಸ್ ಪಾರ್ಕಿನಲ್ಲಿ ಸ್ಥಪಿಸಳಾಗಿದೆ. ಅವರ ಜನ್ಮಸ್ಥಳವನು ರೋಡ್ಸ್ ಮೆಮರಿಯಲ್ ಮ್ಯೂಸಿಯಂ ಎಂದು ೧೯೩೮ ರಲ್ಲಿ ಸ್ಥಾಪಿಸಲಾಯಿತು. ಈಗ ಅದನು ಬಿಶಪ್ಸ್ ಸ್ಟೋಡ್ಫೊಡ್ ಮ್ಯೂಸಿಯಂ ಹೆಸರಿನಲ್ಲಿ ಕರೆಯುವರು.ರೋಡ್ಸ್ ಯೂನಿವರ್ಸಿಟಿ ಕಾಲೇಜ್, ಈಗ ರೋಡ್ಸ್ ವಿಶ್ವವಿದ್ಯಾಲಯ, ಗ್ರಹಾಮ್ಸ್ಟೌನಲಿ, ೩೧ ಮೇ ೧೯೦೪ ರಂದು ಅವರ ನೆನಪ್ಪಿನಲಿ ಅವರ ಟ್ರಸ್ಟ್ ಸ್ಥಾಪಿಸಿತ್ತು. ಅವರು ಮರಣಿಸಿದ ಮೌನ್ಸ್ಬರ್ಗ್ ಕಾಟೇಜ್ ,ದಕ್ಷಿಣ ಆಫ್ರಿಕಾದ ಐತಿಹಾಸಿಕ ತಾಣವಾಗಿದೆ.

'೨೦೧೫ರಲ್ಲಿ ಕೇಪ್ ಟೌನ್ ವಿಶ್ವವಿದ್ಯಾಲಯದ ಕ್ಯಾಂಪಸ್ನಿಂದ ರೋಡ್ಸ್ ಪ್ರತಿಮೆ ತೆಗೆದುಹಾಕಲು ವಿಶ್ವವಿದ್ಯಾಲಯ ವಿದ್ಯಾರ್ಥಿಗಲು ಪ್ರತಿಭಟನೆ ಮಾಡಲು ಪ್ರಾರಂಭಿಸಿದ್ದರು. ಅದರಿಂದ ರೋಡ್ಸ್ ಪ್ರತಿಮೆಯನು ಕೇಪ್ ಟೌನ್ ವಿಶ್ವವಿದ್ಯಾಲಯದಿಂದ ತೆಗೆಯಲಗಿತ್ತು. .ಓರಿಯಲ್ ಕಾಲೇಜ್, ಆಕ್ಸ್ಫರ್ಡ್ ನಿಂದ ರೋಡ್ಸ್ ಪ್ರತಿಮೆ ತೆಗೆದುಹಾಕಲು ಮತ್ತು ರೋಡ್ಸ್ ಯೂನಿವರ್ಸಿಟಿಯ ಹೆಸರನು ಬದಲಾಯಿಸಲು ಪ್ರತಿಬಟ್ಟನೆ ಶುರುವಯಿತ್ತು.[]

ಉಲ್ಲೇಖಗಳು

ಬದಲಾಯಿಸಿ