ಸೆರುಂಡೆಂಗ್ ಇಂಡೋನೇಷ್ಯಾದಲ್ಲಿ ಹುಟ್ಟಿದ ಖಾರದ ತುರಿದ ತೆಂಗಿನಕಾಯಿಯ ಭಕ್ಷ್ಯ ಅಥವಾ ವ್ಯಂಜನ. ಇದನ್ನು ಅನ್ನದ ಜೊತೆಗೆ ಬಳಸಲಾಗುತ್ತದೆ. ಪಾಕವಿಧಾನದ ರೂಪಾಂತರಗಳ ಪ್ರಕಾರ, ಸೆರುಂಡೆಂಗ್ ಸಿಹಿ ಅಥವಾ ಖಾರವಾದ ರುಚಿ ಹೊಂದಿರಬಹುದು.[೧]: 34, 37 

ತೆಂಗಿನಹಾಲಿನಲ್ಲಿ ಬೇಯಿಸಲಾದ, ಬಾಳೆ ಎಲೆಯಲ್ಲಿ ಸುತ್ತಲಾದ, ಅಕ್ಕಿಯ ಡಂಪ್ಲಿಂಗ್ ಆಗಿರುವ ಬುರಾಸಾದ ಜೊತೆಗೆ ಕಂದು ಬಣ್ಣದ ಸೆರುಂಡೆಂಗ್ ಅನ್ನು ಬಡಿಸಲಾಗುತ್ತದೆ.

ಇದರ ಸುಪ್ರಸಿದ್ಧ ರೂಪಾಂತರವೆಂದರೆ ಇಂಡೋನೇಷಿಯನ್ ತಯಾರಿಯಾದ ಕೊಬ್ಬರಿ ತುರಿಗೆ ಸಂಬಾರ ಪದಾರ್ಥಗಳು ಮತ್ತು ಇತರ ಪದಾರ್ಥಗಳನ್ನು ಬೆರೆಸುವುದು.[೨]: 17 ಖಾರವಾದ ತುರಿದ, ಬಾಡಿಸಿದ ಕಾಯಿತುರಿಯನ್ನು ಕಡಲೆಕಾಯಿಯೊಂದಿಗೆ ಬೆರೆಸಬಹುದು.[೨] ಇದನ್ನು ಪರಿಮಳ ಸೇರಿಸಲು ವ್ಯಂಜನವಾಗಿ ಬಳಸಲಾಗುತ್ತದೆ, ಅಥವಾ ಅನ್ನ ಆಧಾರಿತ ಭಕ್ಷ್ಯಗಳ ಮೇಲೆ ಸಿಂಪಡಿಸಲಾದ ಖಾದ್ಯಾಲಂಕಾರವಾಗಿ ಬಳಸಲಾಗುತ್ತದೆ, ಉದಾಹರಣೆಗೆ ಆವಿಯಲ್ಲಿ ಬೇಯಿಸಿದ ಅನ್ನ, ಲಾಂಟಾಂಗ್, ಕೆಟಾನ್ ಅಂಟಂಟಾದ ಅನ್ನ ಮತ್ತು ಬುರಾಸಾ ; ಅಥವಾ ಸಾಂಪ್ರದಾಯಿಕ ಸೋಟೊ ಸೂಪ್‌ಗಳ ಮೇಲೆ.

ಉಲ್ಲೇಖಗಳು ಬದಲಾಯಿಸಿ

  1. Soewitomo, Sisca (2015-09-10). Popular Indonesia Cuisine: Over 100 Recipes (Edisi Bahasa Inggris) (in ಇಂಡೋನೇಶಿಯನ್). Gramedia Pustaka Utama. ISBN 978-602-03-1541-6.
  2. ೨.೦ ೨.೧ Weerdt-Schieffelers, Esly Van de (1998). Indonesian Cuisine: "Selamat Makan". Pulido Publications. ISBN 978-0-9663787-0-2.Weerdt-Schieffelers, Esly Van de (1998). Indonesian Cuisine: "Selamat Makan". Pulido Publications. ISBN 978-0-9663787-0-2.