ಸುವಾರ್ತೆ
ಮೂಲತಃ ಸುವಾರ್ತೆ ಪದದ ಅರ್ಥ ಸ್ವತಃ ಏಸು ಕ್ರಿಸ್ತನ ಸಂದೇಶವೆಂದಾಗಿತ್ತು, ಆದರೆ ೨ನೇ ಶತಮಾನದಲ್ಲಿ ಈ ಪದವನ್ನು ಸಂದೇಶವನ್ನು ವಿವರಿಸಲಾದ ಪುಸ್ತಕಗಳಿಗೆ ಬಳಸುವುದು ಆರಂಭವಾಯಿತು.[೧] ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಹಾಗೂ ಜಾನ್‍ರ ನಾಲ್ಕು ಶಾಸನರೂಪದ ಸುವಾರ್ತೆಗಳು ಬೈಬಲ್‍ನ ಹೊಸ ಒಡಂಬಡಿಕೆಯ ಮೊದಲ ನಾಲ್ಕು ಪುಸ್ತಕಗಳನ್ನು ರಚಿಸುತ್ತವೆ ಮತ್ತು ಇವನ್ನು ಬಹುಶಃ ಕ್ರಿ.ಶ ೬೬ ಮತ್ತು ೧೧೦ರ ನಡುವೆ ಬರೆಯಲಾಗಿತ್ತು. ಎಲ್ಲ ನಾಲ್ಕು ಪುಸ್ತಕಗಳು ಅನಾಮಧೇಯವಾಗಿದ್ದವು (ಆಧುನಿಕ ಹೆಸರುಗಳನ್ನು ೨ನೇ ಶತಮಾನದಲ್ಲಿ ಸೇರಿಸಲಾಯಿತು), ಬಹುತೇಕ ಖಚಿತವಾಗಿ ಯಾವುದೂ ಪ್ರತ್ಯಕ್ಷ್ಯಸಾಕ್ಷಿಗಳಿಂದ ರಚಿತವಾಗಿರಲಿಲ್ಲ, ಮತ್ತು ಎಲ್ಲವೂ ದೀರ್ಘ ಮೌಖಿಕ ಮತ್ತು ಲಿಖಿತ ಪ್ರಸರಣದ ಅಂತಿಮ ಉತ್ಪನ್ನಗಳಾಗಿವೆ. ಇವು ಪ್ರಾಚೀನ ಜೀವನಚರಿತ್ರೆಯ ಸಾಹಿತ್ಯ ಪ್ರಕಾರದ ಉಪವರ್ಗವಾಗಿವೆ. ಆದರೆ ಪ್ರಾಚೀನ ಜೀವನಚರಿತ್ರೆಗಳನ್ನು ಆಧುನಿಕ ಜೀವನಚರಿತ್ರೆಗಳಂತೆ ಪರಿಗಣಿಸಬಾರದು ಮತ್ತು ಹಲವುವೇಳೆ ಪ್ರಚಾರ ಮತ್ತು ಕೆರಿಗ್ಮಾವನ್ನು (ಉಪದೇಶ) ಒಳಗೊಂಡಿದ್ದವು; ಅವು ವರ್ಣಿಸುವ ಘಟನೆಗಳು ಐತಿಹಾಸಿಕವಾಗಿ ನಿಖರವೆಂದು ಯಾವುದೇ ಖಾತರಿ ಇಲ್ಲವಾದರೂ, ಐತಿಹಾಸಿಕ ಜೀಸಸ್‍ನ ಅನ್ವೇಷಣೆಯಲ್ಲಿ ಜೀಸಸ್‍ನ ಸ್ವಂತ ದೃಷ್ಟಿಕೋನಗಳನ್ನು ಅವನ ನಂತರದ ಅನುಯಾಯಿಗಳ ದೃಷ್ಟಿಕೋನಗಳಿಂದ ವ್ಯತ್ಯಾಸಮಾಡುವುದು ಸಾಧ್ಯವಿದೆ ಎಂದು ವಿದ್ವಾಂಸರು ನಂಬುತ್ತಾರೆ.
ಉಲ್ಲೇಖಗಳು
ಬದಲಾಯಿಸಿ
ಬಾಹ್ಯ ಸಂಪರ್ಕಗಳು
ಬದಲಾಯಿಸಿ- A detailed discussion of the textual variants in the gospels – covering about 1200 variants on 2000 pages.
- Greek New Testament – the Greek text of the New Testament: specifically the Westcott-Hort text from 1881, combined with the NA26/27 variants.
- Synoptic Parallels Archived 2023-04-06 ವೇಬ್ಯಾಕ್ ಮೆಷಿನ್ ನಲ್ಲಿ. A web tool for finding corresponding passages in the Gospels